Tag: ಪ್ರಾಧ್ಯಾಪಕಿ

  • ಕ್ಲಾಸ್‌ ರೂಂನಲ್ಲೇ ವಿದ್ಯಾರ್ಥಿ ಜೊತೆ ಪ್ರೊಫೆಸರ್‌ ವಿವಾಹ – ವೀಡಿಯೋ ವೈರಲ್‌

    ಕ್ಲಾಸ್‌ ರೂಂನಲ್ಲೇ ವಿದ್ಯಾರ್ಥಿ ಜೊತೆ ಪ್ರೊಫೆಸರ್‌ ವಿವಾಹ – ವೀಡಿಯೋ ವೈರಲ್‌

    ಕೋಲ್ಕತ್ತಾ: ಪ್ರಾಧ್ಯಾಪಕರೊಬ್ಬರು ಕಾಲೇಜು ವಿದ್ಯಾರ್ಥಿಯನ್ನು ತರಗತಿಯಲ್ಲೇ ವಿವಾಹ ಆಗುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ.

    ಕೋಲ್ಕತ್ತಾದಿಂದ ಸುಮಾರು 150 ಕಿಮೀ ದೂರದಲ್ಲಿರುವ ನಾಡಿಯಾದಲ್ಲಿರುವ ಹರಿಂಗಟಾ ಟೆಕ್ನಾಲಜಿ ಕಾಲೇಜಿನ ಸೈಕಾಲಜಿ ವಿಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (MAKAUT) ಅಡಿಯಲ್ಲಿ ಕಾಲೇಜು ಕಾರ್ಯನಿರ್ವಹಿಸುತ್ತದೆ.

    ಪ್ರೊಫೆಸರ್‌ ಪಾಯಲ್ ಬ್ಯಾನರ್ಜಿ ವಧುವಿನ ಉಡುಗೆ ತೊಟ್ಟು ಹೂಮಾಲೆ ಧರಿಸಿರುವುದು ವೀಡಿಯೋದಲ್ಲಿದೆ. ಆದರೆ, ಇದು ನಿಜವಾದ ಮದುವೆಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕಾಗಿ ಈ ರೀತಿಯ ಮಾದರಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.

    ಆಕೆಯನ್ನು ತನಿಖೆಗಾಗಿ ರಜೆಯ ಮೇಲೆ ಕಳುಹಿಸಲಾಗಿದೆ. ಇದಕ್ಕಾಗಿ ಅಧಿಕಾರಿಗಳು ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಸೂಕ್ತ ತನಿಖೆ ಇಲ್ಲದೆ ನಾವು ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ, ಹಿಂದೂ ವಿವಾಹ ಪದ್ಧತಿಯಂತೆ ವಿದ್ಯಾರ್ಥಿಯ ಮೇಲೆ ‘ಹಲ್ದಿ’ ಬಳಿದಿರುವುದನ್ನು ತೋರಿಸಲಾಗಿದೆ. ಇನ್ನೊಂದರಲ್ಲಿ, ಇಬ್ಬರು ಹೂಮಾಲೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಪವಿತ್ರ ಅಗ್ನಿಯನ್ನು ಸೂಚಿಸುವ ಮೇಣದಬತ್ತಿಯ ಸುತ್ತಲೂ ಏಳು ಹೆಜ್ಜೆ ಹಾಕುತ್ತಿದ್ದಾರೆ.

    ಒಬ್ಬರನ್ನೊಬ್ಬರು ತಮ್ಮ ಸಂಗಾತಿಯಾಗಿ ಸ್ವೀಕರಿಸುವ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಯ ಸಹಿಯೊಂದಿಗೆ ವಿಶ್ವವಿದ್ಯಾಲಯದ ಲೆಟರ್‌ಹೆಡ್ ಕೂಡ ವೈರಲ್ ಆಗಿದೆ. ಪತ್ರ ಮೂರು ಸಾಕ್ಷಿಗಳ ಸಹಿಯನ್ನು ಹೊಂದಿದೆ.

  • ಬಿಕಿನಿ ಧರಿಸಿದ ಫೋಟೋ ಹಾಕಿದ್ದಕ್ಕೆ ಕೆಲಸ ಕಳೆದುಕೊಂಡ ಪ್ರಾಧ್ಯಾಪಕಿ

    ಬಿಕಿನಿ ಧರಿಸಿದ ಫೋಟೋ ಹಾಕಿದ್ದಕ್ಕೆ ಕೆಲಸ ಕಳೆದುಕೊಂಡ ಪ್ರಾಧ್ಯಾಪಕಿ

    ಕೋಲ್ಕತ್ತಾ: ಬಿಕಿನಿ ಧರಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಪೋಸ್ಟ್ ಮಾಡಿದ್ದರಿಂದ ಪ್ರಾಧ್ಯಾಪಕಿಯು ಕೆಲಸ ಕಳೆದುಕೊಂಡ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಕೋಲ್ಕತ್ತಾದ ಸೇಂಟ್‍ಕ್ಸೇವಿಯರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಹಾಕಿದ್ದರು. ಇದನ್ನು ನೋಡುತ್ತಿದ್ದ ಆಕೆಯ ವಿದ್ಯಾರ್ಥಿಯನ್ನು ಕಂಡ ತಂದೆಗೆ ಗಾಬರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ತಂದೆ ಶಿಕ್ಷಕಿಯನ್ನು ಅಮಾನತು ಮಾಡಬೇಕೆಂದು ವಿವಿಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯ ಆಡಳಿತ ಮಂಡಳಿಯು ಪ್ರಾಧ್ಯಾಪಕಿಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಧ್ಯಾಪಕಿ ಬಲವಂತವಾಗಿ ರಾಜೀನಾಮೆ ನೀಡಿದರು. ಅಷ್ಟೇ ಅಲ್ಲದೇ ವಿವಿಯ ಆಡಳಿತ ಮಂಡಳಿಯು ತಮ್ಮ ಕಾಲೇಜಿನ ಖ್ಯಾತಿಗೆ ಹಾನಿ ಉಂಟಾಗಿದ್ದರಿಂದ 99 ಕೋಟಿ ರೂ.ವನ್ನು ಪಾವತಿಸುವಂತೆ ಪ್ರಾಧ್ಯಾಪಕಿಗೆ ಕೇಳಿದೆ.

    ಪತ್ರದಲ್ಲಿ ಏನಿದೆ?: ಇತ್ತೀಚಿಗೆ ನನ್ನ ಮಗ ಪ್ರಾಧ್ಯಾಪಕಿಯ ಕೆಲವು ಫೋಟೋಗಳನ್ನು ನೋಡುತ್ತಿರುವುದನ್ನು ಕಂಡು ನಾನು ದಿಗ್ಭ್ರಮೆಗೊಂಡಿದ್ದೇನೆ. ಅಷ್ಟೇ ಅಲ್ಲದೇ ಆ ಫೋಟೋದಲ್ಲಿ ಪ್ರಾಧ್ಯಾಪಕಿಯು ಅಶ್ಲೀಲ ರೀತಿಯಲ್ಲಿ ಪೋಸ್‍ನ್ನು ನೀಡಿದ್ದಾರೆ. ಜೊತೆಗೆ ಈ ಫೋಟೋವನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕವಾಗಿಯೇ ಫೋಟೋವನ್ನು ಹಾಕಿಕೊಂಡಿದ್ದಾಳೆ. ಇದನ್ನೂ ಓದಿ: ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಮುಗಿಸಲು ಪ್ರಯತ್ನಿಸುತ್ತಿದೆ, ನಿತೀಶ್‍ರದ್ದು ಒಳ್ಳೆಯ ನಿರ್ಧಾರ: ಶರದ್ ಪವಾರ್

    ಶಿಕ್ಷಕಿಯೊಬ್ಬಳು ಬಿಕಿನಿ ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಅಪ್‍ಲೋಡ್ ಮಾಡುತ್ತಿರುವುದನ್ನು ನೋಡುವುದು ಪೋಷಕರಾಗಿ ನನಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಏಕೆಂದರೆ ನನ್ನ ಮಗನನ್ನು ಈ ರೀತಿಯ ಅಸಭ್ಯತೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಈ ರೀತಿಯ ಫೋಟೋವನ್ನು ಹಾಕುವುದರಿಂದ ವಿದ್ಯಾರ್ಥಿಗಳ ದಾರಿ ತಪ್ಪಿಸಿದಂತಾಗುತ್ತದೆ ಎಂದು ಪತ್ರದಲ್ಲಿ ವಿದ್ಯಾರ್ಥಿಯ ತಂದೆ ತಿಳಿಸಿದ್ದಾರೆ.

    POLICE JEEP

    ಪ್ರಾಧ್ಯಾಪಕಿ ದೂರು: ಘಟನೆ ಸಂಬಂಧಿಸಿ ಪ್ರಾಧ್ಯಾಪಕಿಯು ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಇನ್‍ಸ್ಟಾಗ್ರಾಂ ಖಾತೆಯು ಸಾರ್ವಜನಿಕವಾದದ್ದಲ್ಲ, ಬದಲಿಗೆ ಖಾಸಗಿಯಾದ್ದದಾಗಿದೆ. ಅಷ್ಟೇ ಅಲ್ಲದೇ ಬಿಕಿನಿ ಧರಿಸಿರುವ ಫೋಟೋವನ್ನು ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲೇ ತೆಗೆದುಕೊಂಡಿದ್ದೆ. ವಿದ್ಯಾರ್ಥಿಯ ತಂದೆ ಈ ರೀತಿ ಹೇಳಿರುವುದು ಆಕ್ಷೇಪಾರ್ಹವಾಗಿದೆ. ಇದರಿಂದಾಗಿ ನನ್ನ ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ‘ಗಾಂಧೀಜಿಯನ್ನು ಕೊಂದಿದ್ದು ನಾವೇ’ ಎಂದ ಹಿಂದೂ ಮಹಾಸಭಾದ ಅಧ್ಯಕ್ಷನ ವಿರುದ್ಧ ಕಾಂಗ್ರೆಸ್ ದೂರು

    Live Tv
    [brid partner=56869869 player=32851 video=960834 autoplay=true]

  • ಫಿಟ್‍ನೆಸ್ ಟ್ರೈನರ್‌ನಿಂದ ಪ್ರೊಫೆಸರ್‌ ಮರ್ಡರ್

    ಫಿಟ್‍ನೆಸ್ ಟ್ರೈನರ್‌ನಿಂದ ಪ್ರೊಫೆಸರ್‌ ಮರ್ಡರ್

    ಪಣಜಿ: ಫಿಟ್‍ನೆಸ್ ಟ್ರೈನರ್ ಒಬ್ಬ ಪ್ರಾಧ್ಯಾಪಕಿಯನ್ನು ಅಪಹರಿಸಿ ಕತ್ತು ಹಿಸುಕಿ ಕೊಂದಿದ್ದು, ನಂತರ ಶವವನ್ನು ನಿರ್ಜನ ಪ್ರದೇಶವೊಂದರಲ್ಲಿ ಎಸೆದಿರುವ ಘಟನೆ ಗೋವಾದಲ್ಲಿ ನಡೆದಿದೆ.

    crime

    ಗೌರಿ ಆಚಾರಿ (35) ಮೃತ ಯುವತಿಯಾಗಿದ್ದು, ಆರೋಪಿಯನ್ನು 36 ವರ್ಷದ ಗೌರವ್ ಬಿದ್ರೆ ಎಂದು ಗುರುತಿಸಲಾಗಿದೆ. ಗೌರಿ ಆಚಾರಿ ಮತ್ತು ಗೌರವ್ ಬಿದ್ರೆ ಇಬ್ಬರು ಸರ್ಕಾರಿ ಕಾಲೇಜೊಂದರಲ್ಲಿ ಕಾರ್ಯರ್ನಿಹಿಸುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿದ್ದು, ನಂತರ ಸ್ನೇಹ ಬೆಳೆದಿದೆ. ಆದರೆ ಕಳೆದ ತಿಂಗಳು ಗೌರಿ ಆಚಾರಿ ಇನ್ಮುಂದೆ ಸಂಪರ್ಕದಲ್ಲಿರುವುದು ಬೇಡ ಎಂದು ಗೌರವ್ ಬಿದ್ರೆಗೆ ಹೇಳಿದ್ದಾರೆ. ಇದನ್ನೂ ಓದಿ:  ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

    ಜೂನ್ 23 ರಂದು ನಿವಾಸದ ಬಳಿ ಕಾರನ್ನು ಪಾರ್ಕ್ ಮಾಡುತ್ತಿದ್ದ ವೇಳೆ ಗೌರಿ ಆಚಾರಿ ಕಾರಿನೊಳಗೆ ನುಗ್ಗಿ ಗೌರವ್ ಬಿದ್ರೆ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ನಂತರ ಶವವನ್ನು ತನ್ನ ಕಾರಿನೊಳಗೆ ಸಾಗಿಸಿ, ಮನೆಯಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಕದಂಬ ಬೈಪಾಸ್‍ನ ಸಮೀಪದ ಕಾಡಿನಲ್ಲಿ ಶವವನ್ನು ಎಸೆದಿದ್ದಾನೆ. ಮಗಳು ಮನೆಗೆ ಬರದೇ ಇರುವುದನ್ನು ಕಂಡು ಮೃತಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ವಿಚಾರಣೆ ವೇಳೆ ಗೌರಿ ಆಚಾರಿಯನ್ನು ಗೌರವ್ ಬಿದ್ರೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇದು ಮಂಗಗಳ ನೃತ್ಯ – ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿನ ಬಗ್ಗೆ ಓವೈಸಿ ವ್ಯಂಗ್ಯ

    Live Tv

  • ಶ್ರೀರಾಮನನ್ನು ಅವಹೇಳನ ಮಾಡಿದ್ದ ಪ್ರಾಧ್ಯಾಪಕಿ ವಜಾ

    ಶ್ರೀರಾಮನನ್ನು ಅವಹೇಳನ ಮಾಡಿದ್ದ ಪ್ರಾಧ್ಯಾಪಕಿ ವಜಾ

    ಚಂಡೀಗಢ: ಶ್ರೀರಾಮನನ್ನು ಅವಹೇಳನ ಮಾಡಿದ ಆರೋಪದ ಮೇಲೆ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಸಹಾಯಕ ಪ್ರಾಧ್ಯಾಪಕಿಯನ್ನು ವಜಾಗೊಳಿಸಲಾಗಿದೆ.

    ಪಂಜಾಬ್‍ನ ಜಂದರ್‌ನಲ್ಲಿ ಈ ಘಟನೆ ನಡೆದಿದೆ. ಗುಸಾರ್ಂಗ್ ಪ್ರೀತ್ ಕೌರ್ ವಜಾಗೊಂಡ ಸಹಾಯಕ ಪ್ರಾಧ್ಯಾಪಕಿ. ಶ್ರೀರಾಮನಿಗೆ ಅವಹೇಳನ ಮಾಡುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಆಕೆಯನ್ನು ವಜಾಗೊಳಿಸುವಂತೆ ಒತ್ತಾಯಿಸಲಾಗಿತ್ತು.

    ವೀಡಿಯೋದಲ್ಲಿ ಏನಿದೆ?: ಶ್ರೀರಾಮ ಒಳ್ಳೆಯ ವ್ಯಕ್ತಿಯಲ್ಲ. ರಾವಣ ಒಳ್ಳೆಯ ವ್ಯಕ್ತಿ. ರಾಮ ಒಬ್ಬ ಕುತಂತ್ರದ ವ್ಯಕ್ತಿ ಎಂದು ನಾನು ಕಂಡುಕೊಂಡಿದ್ದೇನೆ. ಸೀತೆಯನ್ನು ಬಲೆಗೆ ಬೀಳಿಸಲು ಎಲ್ಲಾ ಉಪಾಯ ಮಾಡಿದನು. ಅವನು ಸೀತೆಯನ್ನು ತೊಂದರೆಗೆ ಸಿಲುಕಿಸಿದನು ಮತ್ತು ರಾವಣನ ಮೇಲೆ ಎಲ್ಲಾ ದೋಷಗಳನ್ನು ಹಾಕಿದನು. ಇಡೀ ಜಗತ್ತು ರಾಮನನ್ನು ಪೂಜಿಸುತ್ತಿದೆ ಮತ್ತು ರಾವಣ ಕೆಟ್ಟ ವ್ಯಕ್ತಿ ಎಂದು ಹೇಳುತ್ತಿದೆ ಎಂದು ಹೇಳಿದ್ದಳು. ಇದನ್ನೂ ಓದಿ: ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು: ಡಾ.ಕೆ.ಸುಧಾಕರ್

    ಈ ಬಗ್ಗೆ ವಿಶ್ವವಿದ್ಯಾಲಯ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗುರ್ಸಾಂಗ್ ಪ್ರೀತ್ ನೀಡುವ ಹೇಳಿಕೆಗಳೆಲ್ಲವೂ ವೈಯಕ್ತಿಕವಾಗಿವೆ. ಇವು ಯಾವುದು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿಲ್ಲ. ನಾವು ಯಾವಾಗಲೂ ಜಾತ್ಯಾತೀತ ವಿಶ್ವವಿದ್ಯಾನಿಲಯವಾಗಿದ್ದೇವೆ. ಎಲ್ಲಾ ಧರ್ಮಗಳು ಮತ್ತು ನಂಬಿಕೆಯ ಜನರನ್ನು ಸಮಾನವಾಗಿ ಪ್ರೀತಿ ಮತ್ತು ಗೌರವದಿಂದ ನೋಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್

  • ಎಂಗೇಜ್ ಆಗಿದ್ರೂ ವಿದ್ಯಾರ್ಥಿ ಜೊತೆ ಪ್ರಾಧ್ಯಾಪಕಿ ಲವ್ವಿಡವ್ವಿ – ಲಾಡ್ಜ್‌ನಲ್ಲಿ ಪ್ರೇಮಿಗಳು ಆತ್ಮಹತ್ಯೆ

    ಎಂಗೇಜ್ ಆಗಿದ್ರೂ ವಿದ್ಯಾರ್ಥಿ ಜೊತೆ ಪ್ರಾಧ್ಯಾಪಕಿ ಲವ್ವಿಡವ್ವಿ – ಲಾಡ್ಜ್‌ನಲ್ಲಿ ಪ್ರೇಮಿಗಳು ಆತ್ಮಹತ್ಯೆ

    -28ರ ಮಹಿಳೆ ಸಾವು, 19ರ ವಿದ್ಯಾರ್ಥಿ ಗಂಭೀರ

    ಹೈದರಾಬಾದ್: ಮನೆಯಲ್ಲಿ ಮದುವೆಗೆ ಒಪ್ಪದ್ದಕ್ಕೆ ಪ್ರೇಮಿಗಳಿಬ್ಬರು ಲಾಡ್ಜಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೆಳತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಗೌತಮಿ(28) ಮೃತ ಪ್ರಾಧ್ಯಾಪಕಿ. ಈಕೆ ವಿದ್ಯಾರ್ಥಿಯಾಗಿದ್ದ ಲೋಕೇಶ್ (19) ನನ್ನು ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಮನೆಯವರು ಒಪ್ಪಿಲ್ಲವೆಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಗೌತಮಿ ಗನ್ನವರಂ ಮಂಡಲ ತೆಂಪಲ್ಲಿ ನಿವಾಸಿಯಾಗಿದ್ದು, ಈಕೆ ಉಷಾರಾಮ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಲೋಕೇಶ್ ಅದೇ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದನು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಇಷ್ಟಪಟ್ಟಿದ್ದರು. ನಂತರ ತಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆದರೆ ಇಬ್ಬರ ಮಧ್ಯೆ ವಯಸ್ಸಿನ ಅಂತರ ಇದ್ದುದ್ದರಿಂದ ಎರಡೂ ಕುಟುಂಬದವರು ಇವರ ಮದುವೆಗೆ ಒಪ್ಪಲಿಲ್ಲ.

    ಇದರಿಂದ ನೊಂದ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ನಂತರ ವಿಜಯವಾಡದ ಗಾಂಧಿನಗರದ ಜಗಪತಿ ಲಾಡ್ಜ್‌ಗೆ ಹೋಗಿ ರೂಮ್‍ ಬುಕ್ ಮಾಡಿದ್ದಾರೆ. ಹಬ್ಬಕ್ಕೆ ಶಾಪಿಂಗ್ ಮಾಡಲು ಆಗಮಿಸಿದ್ದಾಗಿ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದರು. ರೂಮಿಗೆ ತೆರಳಿದ್ದ ಇಬ್ಬರು ಜ್ಯೂಸಿನಲ್ಲಿ ಕೀಟನಾಶಕ ಔಷಧಿಯನ್ನು ಬೆರೆಸಿಕೊಂಡು ಕುಡಿದಿದ್ದಾರೆ.

    ರಾತ್ರಿಯಾದರೂ ರೂಮಿನಿಂದ ಇಬ್ಬರು ಹೊರ ಬರದಿದ್ದಕ್ಕೆ ಹೋಟೆಲ್‍ನ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಆಗ ಇಬ್ಬರು ವಿಷ ಸೇವಿಸಿರುವುದು ಕಂಡು ಬಂದಿದೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗೌತಮಿ ಅಷ್ಟರಲ್ಲಿಯೇ ಮೃತಪಟ್ಟಿದ್ದರು. ಇನ್ನೂ ಲೋಕೇಶ್ ಸಾವಿನಿಂದ ಪಾರಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

    ಪ್ರಕರಣದ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತ ಗೌತಮಿಗೆ ಈಗಾಗಲೇ ಮನೆಯಲ್ಲಿ ಬೇರೆ ಹುಡುಗನ ಜೊತೆಗೆ ನಿಶ್ಚಿತಾರ್ಥ ಆಗಿತ್ತು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು. ಅಷ್ಟರಲ್ಲಿಯೇ ಮನೆಯಲ್ಲಿ ಪ್ರೀತಿಸಿದ ಹುಡುಗನ ಜೊತೆ ಮದುವೆಗೆ ಒಪ್ಪದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.