Tag: ಪ್ರಾಧ್ಯಾಪಕರು

  • ವಿಶ್ವಾದ್ಯಂತ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 8 ಪ್ರಾಧ್ಯಾಪಕರು

    ವಿಶ್ವಾದ್ಯಂತ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 8 ಪ್ರಾಧ್ಯಾಪಕರು

    – ಬೆಂಗಳೂರು ವಿಶ್ವವಿದ್ಯಾಲಯದಿಂದ ಮತ್ತೊಂದು ಜಾಗತಿಕ ಮೈಲಿಗಲ್ಲು

    ಬೆಂಗಳೂರು: 2024ರಲ್ಲಿ ವಿಶ್ವಾದ್ಯಂತದ ಟಾಪ್ 2% ವಿಜ್ಞಾನಿಗಳ ಪ್ರತಿಷ್ಠಿತ ಪಟ್ಟಿಯಲ್ಲಿ (Top Scientists List) ಬೆಂಗಳೂರು ವಿಶ್ವವಿದ್ಯಾನಿಲಯದ (Bengaluru University) ಎಂಟು ಪ್ರಾಧ್ಯಾಪಕರು (Professors) ಸ್ಥಾನ ಪಡೆದುಕೊಂಡಿದ್ದಾರೆ. ಯುಎಸ್‌ಎ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್‌ನ ಎಲ್ಸೆವಿಯರ್ ಪಬ್ಲಿಷಿಂಗ್‌ನಿಂದ ವಾರ್ಷಿಕವಾಗಿ ಸೂಚ್ಯಂಕಗಳನ್ನು ಸಂಕಲಿಸಿ ಅದರ ಆಧಾರದ ಮೇಲೆ ಪ್ರಾಧ್ಯಾಪಕರನ್ನು ಗುರುತಿಸಲಾಗಿದೆ.

    ಬೆಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ, ಭೌತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ ಮತ್ತು ಗಣಿತ ವಿಭಾಗಗಳಿಗೆ ಸೇರಿದ ಪ್ರಾಧ್ಯಾಪಕರುಗಳನ್ನು ಗುರುತಿಸಿ ಗೌರವಿಸಲಾಗಿದೆ. ಚಂದ್ರಶೇಖರಯ್ಯ ಡಿ.ಎಸ್, ದೇವಿ ಎಲ್.ಗೋಮತಿ, ರುದ್ರಯ್ಯ ಎನ್, ಶಿವಕುಮಾರ್, ಸಿ.ಶ್ರೀನಿವಾಸ್, ಕುಂಬಿನರಸಯ್ಯ ಎಸ್, ಈರಯ್ಯ ಬಿ, ಮತ್ತು ವಿಷ್ಣು ಕಾಮತ್ ಅವರು ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಚೆನ್ನೈ ರಸ್ತೆಯಲ್ಲಿ ಪೀಸ್ ಪೀಸ್ ಮಾಡಿದ ಮಹಿಳೆಯ ಶವ ತುಂಬಿದ ಸೂಟ್‍ಕೇಸ್ ಪತ್ತೆ – ಕೊಲೆಯಾಗಿದ್ದು ಸೆಕ್ಸ್ ವರ್ಕರ್!

    ವಿಶ್ವವಿದ್ಯಾನಿಲಯಗಳ ಪೈಕಿ ಬೆಂಗಳೂರು ವಿಶ್ವವಿದ್ಯಾನಿಲಯ ರಾಜ್ಯದ ವಿಶ್ವವಿದ್ಯಾನಿಲಯಗಳಿಂದ ಹೆಚ್ಚಿನ ಸಂಖ್ಯೆಯ ಪ್ರಾಧ್ಯಾಪಕರನ್ನು ಹೊಂದಿದ್ದು, ಮತ್ತೊಮ್ಮೆ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ. ಇದನ್ನೂ ಓದಿ: ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಜಿಯೋ – ಗಾಜನೂರು, ಪೆದ್ದನಪಾಳ್ಯ, ಹುಗ್ಯಂನಂಥ ಗ್ರಾಮಗಳಲ್ಲೂ ಟವರ್‌

    ಈ ಸಾಧನೆ ಕುರಿತು ಉಪಕುಲಪತಿ ಡಾ.ಜಯಕರ ಎಸ್.ಎಂ. ಪ್ರತಿಕ್ರಿಯಿಸಿ, ಬೆಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ಮನ್ನಣೆಯನ್ನು ಗಳಿಸಿದೆ ಮತ್ತು ಇದು ನಮ್ಮ ಪುರಸ್ಕಾರಗಳಿಗೆ ಮತ್ತೊಂದು ಹೆಮ್ಮೆಯ ಸೇರ್ಪಡೆಯಾಗಿದೆ. ವಿಶ್ವವಿದ್ಯಾನಿಲಯವು ವಿಜ್ಞಾನ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತದೆ. ಈ ಗೌರವ ಆ ಪ್ರಯತ್ನಗಳ ಫಲವಾಗಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪ್ರಭಾವ ಬೀರಿದ್ದಾರೆ. ಇದು ಭವಿಷ್ಯದಲ್ಲಿ ನಮ್ಮ ವಿದ್ಯಾರ್ಥಿಗಳ ಅಭಿವೃದ್ಧಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯವು ವಿಜ್ಞಾನ ಮತ್ತು ಸಂಶೋಧನೆಯನ್ನು ಇನ್ನಷ್ಟು ಉತ್ತೇಜಿಸುತ್ತದೆ ಎಂದರು. ಇದನ್ನೂ ಓದಿ: ಮನೆಯಲ್ಲಿದ್ದ 5 ವರ್ಷದ ಮಗು ಸಾವು- ಸಾವಿನ ಸುತ್ತ ಅನುಮಾನದ ಹುತ್ತ!

  • ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ಲಕ್ನೋ: ಸೆಕ್ಯೂರಿಟಿ ಗಾರ್ಡ್ (Security) ಒಬ್ಬರು ಅಪಾರ್ಟ್ಮೆಂಟ್ ಗೇಟ್ ಬಾಗಿಲು ತೆಗೆಯೋದು ತಡವಾಗಿದ್ದಕ್ಕೇ ಮಹಿಳಾ ಪ್ರೊಫೆಸರ್( Women Professor) ಸಿಬ್ಬಂದಿಯ ಕಾಲರ್‌ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಅಲ್ಲದೇ ಬಾಯಿಗೆ ಬಂದಂತೆ ಬೈದು ನಿಂದಿಸಿದ್ದಾಳೆ.

    ನೊಯ್ಡಾದ ಸೆಕ್ಟರ್ 121 ರಲ್ಲಿರುವ ಕ್ಲಿಯೋ ಕೌಂಟಿಯಲ್ಲಿ ಘಟನೆ ನಡೆದಿದ್ದು, ಕಳೆದ ಒಂದು ತಿಂಗಳಲ್ಲಿ ಇದು ನೊಯ್ಡಾದಲ್ಲಿ ನಡೆದ 2ನೇ ಘಟನೆಯಾಗಿದೆ. ಮಹಿಳಾ ಪ್ರೊಫೆಸರ್ (Professor) ಸುತಾಪ್ ದಾಸ್ ಎಂಬಾಕೆಯೇ ತನ್ನ ಕಾರಿನಿಂದ ಇಳಿದು ಭದ್ರತಾ ಸಿಬ್ಬಂದಿ (security guard) ಸಚಿನ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯಾವಳಿ ಸಿಸಿಟಿಯಲ್ಲಿ (CCTV) ಸೆರೆಯಾಗಿದೆ. ಇದನ್ನೂ ಓದಿ: ʼಬ್ರಹ್ಮಾಸ್ತ್ರʼ ಚಿತ್ರದಲ್ಲಿ ನಾಯಕನ ತಾಯಿ ಪಾತ್ರ ಮಾಡಿರೋ ನಟಿ ರಣಬೀರ್‌ ಮಾಜಿ ಪ್ರೇಯಸಿ?

    ಘಟನೆ ಬಳಿಕ ಮಾತನಾಡಿದ ಭದ್ರತಾ ಸಿಬ್ಬಂದಿ ಸಚಿನ್, ನಾವು ಆರ್‌ಎಫ್‌ಐಡಿ (RFID) ಕೆಲಸ ಮಾಡುತ್ತಿದೆವು. ಈ ವೇಳೆ ಮಹಿಳೆ ಆಕೆಯ ಕಾರಿನ ಸಂಖ್ಯೆಯನ್ನು ತೋರಿಸಲಿಲ್ಲ. ಆದರೂ ನಾವು ಕಾರನ್ನು ಒಳಗೆ ಹೋಗಲು ಅನುಮತಿಸಿದೆವು. ನಂತರ ಆಕೆ ಕಾರನ್ನು ನಿಲ್ಲಿಸಿ ಬಂದು ಬಾಯಿಗೆ ಬಂದಂತೆ ನಿಂದಿಸಲು ಶುರು ಮಾಡಿದ್ಲು. ಜೊತೆಗೆ ಕಪಾಳಮೋಕ್ಷ ಮಾಡಿದಳು. ತಕ್ಷಣ ನಾವು ಪೊಲೀಸರಿಗೆ (Police) ದೂರವಾಣಿ ಕರೆ ಮಾಡಿ ಘಟನೆ ವಿವರಿಸಿದೆವು. ಇದನ್ನೂ ಓದಿ: ಕ್ರಾಂತಿಕಾರಿ ಸಾಧು ಎಂದೇ ಹೆಸರಾಗಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

    ಭದ್ರತಾ ಸಿಬ್ಬಂದಿ ಗೇಟ್ ತೆರೆಯುವುದು ತಡ ಮಾಡಿದ್ದಕ್ಕೇ ಪ್ರಾಧ್ಯಾಪಕಿ ಕಪಾಳಮೋಕ್ಷ ಮಾಡಿದ್ದಾರೆ. ಮಹಿಳೆ, ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿ ನಿಂದಿಸುತ್ತಿದ್ದರೂ ಯಾರೊಬ್ಬರೂ ಮಧ್ಯ ಪ್ರವೇಶಿಸಲಿಲ್ಲ. ಆದರೆ ಸಹ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದರು. ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅದಾದ ಕೆಲವೇ ಕ್ಷಣಗಳಲ್ಲಿ ಆಕೆಗೆ ಜಾಮೀನು ನೀಡಲಾಯಿತು ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿದ ಮಹಿಳೆ – ರಂಪಾಟದ ವೀಡಿಯೋ ವೈರಲ್

    ಕಳೆದ ತಿಂಗಳು ಇದೇ ರೀತಿ ಘಟನೆಯೊಂದು ನಡೆದಿತ್ತು. ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿ ತನ್ನ ದರ್ಪ ತೋರಿಸಿದ್ದು, ಹಲ್ಲೆಗೂ ಮುಂದಾಗಿರುವ ಘಟನೆ ನೊಯ್ಡಾದ ಜೇಪೆ ಗ್ರೂಪ್ ಸೊಸೈಟಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕರು!

    ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕರು!

    ಭೋಪಾಲ್: ಪ್ರಾಧ್ಯಾಪಕರು ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಕಾಲೇಜಿನ ಕಚೇರಿಯಲ್ಲಿ ನಡೆದಿದೆ.

    ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಎಂಪಿ ಕಾಲೇಜಿನ ಕಚೇರಿಯೊಳಗೆ ಪ್ರಾಧ್ಯಾಪಕ ಮತ್ತು ಕಾಲೇಜು ಪ್ರಾಂಶುಪಾಲರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಮಾತಿಗೆ ಮಾತು ಬೆಳೆದು ಪ್ರಾಧ್ಯಾಪಕರ ಕೋಪ ತೀವ್ರವಾಗಿ ಹೋಗಿದ್ದು, ಪ್ರಾಂಶುಪಾಲರನ್ನು ಥಳಿಸಿದ್ದಾರೆ. ಈ ದೃಶ್ಯಾವಳಿ ಕಛೇರಿಯಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇದನ್ನೂ ಓದಿ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ಶಾಲೆಗೆ ವಾಪಸ್ – ತಹಶೀಲ್ದಾರ್‌ಗೆ ಗ್ರಾಮಸ್ಥರಿಂದ ಅಭಿನಂದನೆ

    Professor thrashes Principal inside his office, video goes viral [Watch] | Catch News

    ಈ ದೃಶ್ಯದಲ್ಲಿ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪ್ರಾಧ್ಯಾಪಕನ ಕೋಪ ಹೆಚ್ಚಾಗಿ ತನ್ನ ಕೈಯಲ್ಲಿದ್ದ ಪುಸ್ತಕವನ್ನು ಎಸೆದಿದ್ದಾರೆ. ನಂತರ ಪ್ರಾಂಶುಪಾಲರ ಮೇಲೆ ಹಲ್ಲೆ ಮಾಡಲು ಹೋಗಿದ್ದಾರೆ. ಈ ವೇಳೆ ಪ್ರಾಂಶುಪಾಲರ ಕಪಾಳಕ್ಕೆ ಹೊಡೆದಿದ್ದಾರೆ.

    POLICE JEEP

    ಪ್ರಸ್ತುತ ಪ್ರಾಂಶುಪಾಲರು ಪ್ರಾಧ್ಯಾಪಕರ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

  • ಜುಲೈ 19ರಿಂದ ಪದವಿ ಕಾಲೇಜುಗಳು ಪ್ರಾರಂಭ?

    ಜುಲೈ 19ರಿಂದ ಪದವಿ ಕಾಲೇಜುಗಳು ಪ್ರಾರಂಭ?

    ಬೆಂಗಳೂರು: ಜುಲೈ 19ರಿಂದ ಪದವಿ ಕಾಲೇಜು ಪ್ರಾರಂಭ ಮಾಡಲು ಸರ್ಕಾರದ ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರಬೀಳುವುದೊಂದೇ ಬಾಕಿ ಇದೆ.

    ಒಂದು ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಕಾಲೇಜಿಗೆ ಬರಲು ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಶೇ.65ರಷ್ಟು ಲಸಿಕೆ ಅಭಿಯಾನ ಮುಕ್ತಾಯವಾಗಿದೆ. ಜುಲೈ 19ರ ವರೆಗೆ ಉಳಿದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಕಾಲೇಜಿಗೆ ಬರಲು ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಆಫ್ ಲೈನ್ ಜೊತೆಗೆ ಆನ್ ಲೈನ್ ತರಗತಿಗಳನ್ನು ನಡೆಸಲು ಸಹ ತೀರ್ಮಾನಿಸಲಾಗಿದೆ.

    ಆಫ್ ಲೈನ್ ಅಥವಾ ಆನ್ ಲೈನ್ ಎರಡರಲ್ಲಿ ಯಾವುದಾದರೂ ಒಂದು ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಾಗಿ ಇರಬೇಕು. ಉನ್ನತ ಶಿಕ್ಷಣ ಇಲಾಖೆಯಿಂದ ನಿಯಮ ಜಾರಿ ಮಾಡಲಾಗಿದ್ದು, ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಒಂದು ಡೋಸ್ ಆದರೂ ಲಸಿಕೆ ಹಾಕಿಸಿರಬೇಕು. ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದರಿಂದ ಕಾಲೇಜು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಅದರಲ್ಲೂ ತರಗತಿಗಳಿಗೆ ಹಾಜರಾಗಬೇಕಾದಲ್ಲಿ ಒಂದು ಡೋಸ್ ಆದರೂ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ.

  • ಅನುಚಿತ ವರ್ತನೆ- ಬುದ್ಧಿ ಹೇಳಿದ್ದಕ್ಕೆ ಪ್ರಾಧ್ಯಾಪಕರ ಮೇಲೇ ಗುಂಡು ಹಾರಿಸಿದ ವಿದ್ಯಾರ್ಥಿ

    ಅನುಚಿತ ವರ್ತನೆ- ಬುದ್ಧಿ ಹೇಳಿದ್ದಕ್ಕೆ ಪ್ರಾಧ್ಯಾಪಕರ ಮೇಲೇ ಗುಂಡು ಹಾರಿಸಿದ ವಿದ್ಯಾರ್ಥಿ

    ಲಕ್ನೋ: ಇತರೆ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಪ್ರಾಧ್ಯಾಪಕರು ಗದರಿಸಿದ್ದು, ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿ ತನ್ನ ಮೂವರು ಸ್ನೇಹಿತರೊಂದಿಗೆ ಪ್ರಾಧ್ಯಾಕರ ಮೇಲೆಯೇ ಗುಂಡು ಹಾರಿಸಿದ್ದಾರೆ.

    ಉತ್ತರ ಪ್ರದೇಶದ ಗಾಜಿಯಾಬಾದ್‍ನ ಸರಸ್ವತಿ ವಿಹಾರದ ಕಾಲೋನಿಯ ಖಾಸಗಿ ಶಾಲೆಯ ಬಳಿ ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದ್ದು, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಸಚಿನ್ ತ್ಯಾಗಿ ಅವರು ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಗುಂಡು ಹಾರಿಸಲಾಗಿದೆ.

    ಗ್ರಾಮಾಂತರ ಎಸ್‍ಪಿ ಇರಾಜ್ ರಾಜಾ ಈ ಕುರಿತು ಮಾಹಿತಿ ನೀಡಿದ್ದು, ವಿದ್ಯಾರ್ಥಿ ತರಗತಿಯಲ್ಲಿ ಇತರ ಸಹಪಾಠೀಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಪ್ರಾಧ್ಯಾಪಕರು ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿ ದ್ವೇಷ ಬೆಳೆಸಿಕೊಂಡಿದ್ದು, ಈ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಪ್ಲಾನ್ ಮಾಡಿದ್ದು, ತನ್ನ ಮೂವರು ಸಹಪಾಠಿಗಳೊಂದಿಗೆ ಸೇರಿ ಪ್ರಾಧ್ಯಾಪಕರ ಮೇಲೆಯೇ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಪ್ರಾಧ್ಯಾಪಕರು ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ.

    ಹತ್ತಿರದ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯದಿಂದ ಗುರುತಿಸಲಾಗಿದ್ದು, ವಿಚಾರಣೆಗೆ ಹಾಜರುಪಡಿಸುವಂತೆ ವಿದ್ಯಾರ್ಥಿಗಳ ಪೋಷಕರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಅವರ ಮೊಬೈಲ್ ಫೋನ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ವಿರುದ್ಧ ಪ್ರಾಧ್ಯಾಪಕರು ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.