Tag: ಪ್ರಾದೇಶಿಕ ಕಚೇರಿ

  • ಸದ್ಯಕ್ಕೆ ಬೆಂಗಳೂರಿಗಿಲ್ಲ ಎನ್‍ಐಎ ಪ್ರಾದೇಶಿಕ ಕಚೇರಿ

    ಸದ್ಯಕ್ಕೆ ಬೆಂಗಳೂರಿಗಿಲ್ಲ ಎನ್‍ಐಎ ಪ್ರಾದೇಶಿಕ ಕಚೇರಿ

    ನವದೆಹಲಿ: ಸದ್ಯಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆಯಾಗುವುದಿಲ್ಲ.

    ಹೊಸದಾಗಿ ಮೂರು ಎನ್‍ಐಎ ಕಚೇರಿ ಸ್ಥಾಪನೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ. ಮಣಿಪುರದ ರಾಜಧಾನಿ ಇಂಫಾಲ, ತಮಿಳುನಾಡಿನ ರಾಜಧಾನಿ ಚೆನ್ನೈ ಮತ್ತು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪನೆಯಾಗಲಿದೆ.

    ಉಗ್ರರ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎನ್‍ಐಎ ಪ್ರಾದೇಶಿಕ ಕಚೇರಿ ಸ್ಥಾಪನೆ ಮಾಡುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದರು. ಬೆಂಗಳೂರು, ಸುತ್ತಮುತ್ತ ಉಗ್ರಗಾಮಿ ಕೃತ್ಯ ಹೆಚ್ಚುತ್ತಿರುವ ಹಿನ್ನಲೆ ಎನ್‍ಐಎ ಪ್ರಾದೇಶಿಕ ಕಚೇರಿ ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದರು.

    ಬೆಂಗಳೂರಿನಲ್ಲಿ ಈಗ ಎನ್‍ಐಎ ಉಪ ಶಾಖೆ ಮಾತ್ರ ಇದೆ. ಹೈದರಾಬಾದ್‍ನಲ್ಲಿರುವ ಎನ್‍ಐಎ ಪ್ರಾದೇಶಿಕ ಕಚೇರಿಯ ಅಡಿಯಲ್ಲಿ ಈಗ ಬೆಂಗಳೂರಿನ ಎನ್‍ಐಎ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ತೇಜಸ್ವಿ ಸೂರ್ಯರಿಂದ ಕನ್ನಡಿಗರಿಗೆ ಅಪಮಾನ: ಡಿಕೆಶಿ

    ಪ್ರಸ್ತುತ ಗುವಾಹಟಿ, ಮುಂಬೈ, ಜಮ್ಮು, ಕೋಲ್ಕತ್ತಾ, ಹೈದರಾಬಾದ್, ಕೊಚ್ಚಿ, ಲಕ್ನೋ, ರಾಯ್‍ಪುರ, ಚಂಡೀಗಢದಲ್ಲಿ ಎನ್‍ಐಎ ಪ್ರಾದೇಶಿಕ ಕಚೇರಿಗಳಿವೆ.