Tag: ಪ್ರಾಥಮಿಕ ಶಾಲೆ

  • ಪ್ರಾಥಮಿಕ ಶಾಲಾ ಹಂತದಲ್ಲಿ NEP ಜಾರಿ ಮಾಡೋದಿಲ್ಲ: ಮಧು ಬಂಗಾರಪ್ಪ

    ಪ್ರಾಥಮಿಕ ಶಾಲಾ ಹಂತದಲ್ಲಿ NEP ಜಾರಿ ಮಾಡೋದಿಲ್ಲ: ಮಧು ಬಂಗಾರಪ್ಪ

    ಬೆಂಗಳೂರು: ಯಾವುದೇ ಕಾರಣಕ್ಕೂ ಪ್ರಾಥಮಿಕ ಶಾಲಾ ಹಂತದಲ್ಲಿ ಎನ್‌ಇಪಿ (NEP) ಜಾರಿ ಮಾಡೋದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ಎನ್‌ಇಪಿ ರದ್ದು ಮಾಡುವುದಾಗಿ ಭರವಸೆ ನೀಡಿದ್ದೆವು. ಭರವಸೆ ನೀಡಿದಂತೆ ಎನ್‌ಇಪಿ ರದ್ದು ಮಾಡುತ್ತೇವೆ ಎಂದರು.

    ಪ್ರಾಥಮಿಕ ಶಾಲಾ ಹಂತದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎನ್‌ಇಪಿ ಜಾರಿಗೆ ಸಿದ್ಧತೆ ಮಾಡಿತ್ತು. ಆದರೆ ನಾವು ಅದನ್ನು ಜಾರಿ ಮಾಡೋದಿಲ್ಲ. ಎನ್‌ಇಪಿ ಬದಲಾಗಿ ಹೊಸ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಡಿಸಿ, ಸಿಇಓ, ಕಮಿಷನರ್‌ಗಳಿಗೆ ರೇಟ್ ಫಿಕ್ಸ್ ಆಗಿದೆ: ಕಟೀಲ್ ಗಂಭೀರ ಆರೋಪ

    ನಾವು ಮತ್ತು ಉನ್ನತ ಶಿಕ್ಷಣ ಇಲಾಖೆ ಸಚಿವರು ಇಬ್ಬರು ಚರ್ಚೆ ಮಾಡಿ ಎನ್‌ಇಪಿ ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡೋ ಯೋಜನೆ ಇದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಪ್ರಾರಂಭ ಮಾಡುತ್ತೇವೆ. ಶಿಕ್ಷಣ ನೀತಿ ರೂಪಿಸಲು ತಜ್ಞರ ಸಮಿತಿ ರಚನೆ ಮಾಡಿತ್ತೇವೆ ಎಂದರು. ಇದನ್ನೂ ಓದಿ: ಪಿಯುಸಿಯಲ್ಲಿ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 20 ಆಂತರಿಕ ಅಂಕ ಜಾರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೋಮವಾರದಿಂದ ಪ್ರಾಥಮಿಕ ಶಾಲೆಗಳು ಆರಂಭ – ಮಾರ್ಗಸೂಚಿ ಏನು?

    ಸೋಮವಾರದಿಂದ ಪ್ರಾಥಮಿಕ ಶಾಲೆಗಳು ಆರಂಭ – ಮಾರ್ಗಸೂಚಿ ಏನು?

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ನಿಗದಿಯಂತೆ ಪ್ರಾಥಮಿಕ ಶಾಲೆಗಳು ಆರಂಭಗೊಳ್ಳಲಿವೆ.

    ಕೋವಿಡ್ ನಿಯಮಗಳ ಅನುಸಾರ ಸರಿಸುಮಾರು ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 1ನೇ ತರಗತಿಯಿಂದ ಐದನೇ ತರಗತಿವರೆಗೆ ಸ್ಕೂಲ್ ಶುರುವಾಗುತ್ತಿದೆ. ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಸಕಲ ತಯಾರಿಗಳು ನಡೆದಿವೆ. ಪ್ರಾಥಮಿಕ ಶಾಲೆ ತೆರೆಯುತ್ತಿರೋದನ್ನು ಪೋಷಕರು ಸ್ವಾಗತಿಸಿದ್ದಾರೆ.  ಇದನ್ನೂ ಓದಿ: ತೇಗದ ಮರ ಕಡಿದ ಮಾಲೀಕನ ವಿರುದ್ಧ ಕೇಸ್‌ ದಾಖಲು

    ಅ.25ರಿಂದ ನ.2ರವರೆಗೆ ಮಾತ್ರ ಅರ್ಧ ದಿನ ತರಗತಿ ಮಾತ್ರ ನಡೆಯಲಿದ್ದು, ನವೆಂಬರ್ 2ರಿಂದ ದಿನಪೂರ್ತಿ ಶಾಲೆ ನಡೆಯಲಿದೆ. ಮಕ್ಕಳು ಶಾಲೆಗೆ ಬರಲು ಪೋಷಕರ ಅನುಮತಿ ಕಡ್ಡಾಯವಾಗಿದ್ದು ಹಾಜರಾತಿ ಕಡ್ಡಾಯವಲ್ಲ. ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

    ಒಂದು ತರಗತಿಯಲ್ಲಿ 20 ಮಕ್ಕಳಿಗೆ ಮಾತ್ರ ಅವಕಾಶವಿದ್ದು ನ.2ರಿಂದ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಜಾರಿಯಾಗಲಿದೆ.  ಇದನ್ನೂ ಓದಿ: ಜಮ್ಮು ಕಾಶ್ಮೀರ ಅಭಿವೃದ್ಧಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

  • ಅ.25 ರಿಂದ ಪ್ರೈಮರಿ ಶಾಲೆ ಆರಂಭ – ಮಾರ್ಗಸೂಚಿ ಏನು?

    ಅ.25 ರಿಂದ ಪ್ರೈಮರಿ ಶಾಲೆ ಆರಂಭ – ಮಾರ್ಗಸೂಚಿ ಏನು?

    ಬೆಂಗಳೂರು: ಅಕ್ಟೋಬರ್ 25 ರಿಂದ ಪ್ರಾಥಮಿಕ ಶಾಲೆ ತೆರೆಯಲು ಸರ್ಕಾರ ಅಧಿಕೃತ ಆದೇಶ ಜಾರಿ ಮಾಡಿದೆ.

    ಕೋವಿಡ್ 19 ನಿಂದ ಬಂದ್ ಆಗಿದ್ದ 1 ರಿಂದ 5ನೇ ತರಗತಿ ತೆರೆಯಲು ಸರ್ಕಾರ ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಹಿಂದೆ ಶಿಕ್ಷಣ ಸಚಿವ ನಾಗೇಶ್ ಅವರು ದಸರಾ ಬಳಿಕ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಸರ್ಕಾರ ತಜ್ಞರ ವರದಿಯನ್ನು ಪಡೆದು ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    – ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
    – ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕು
    – ತರಗತಿಯಲ್ಲಿ 1 ಮೀಟರ್ ಅಂತರದಲ್ಲಿ ಕೂರಬೇಕು. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು.
    – ಪೋಷಕರ ಅನುಮತಿ ಪಡೆದು ಮಕ್ಕಳು ತರಗತಿಗೆ ಬರಬಹುದು
    – ಪ್ರವೇಶ ದ್ವಾರಗಳಲ್ಲಿ ಸೇರದಂತೆ ಶಾಲೆಯ ಒಳಗೆ, ಆವರಣದಲ್ಲಿ, ತರಗತಿಗಳ ಒಳಗೆ ಗುಂಪುಗೂಡುವಂತಿಲ್ಲ.
    – ಶಿಕ್ಷಕರು, ಸ್ಟಾಫ್ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು.
    – ಎರಡು ಡೋಸ್ ಪೂರ್ಣ ಮಾಡಿರುವ ಶಿಕ್ಷಕರು, ಸ್ಟಾಫ್ ಗೆ ಮಾತ್ರ 1-5 ತರಗತಿಗಳೊಳಗೆ ಪ್ರವೇಶ.

    ಸ್ವಿಮ್ಮಿಂಗ್ ಪೂಲ್‍ಗೆ ಅನುಮತಿ:
    – ಶೇ.50 ರಷ್ಟು ಸಾಮರ್ಥ್ಯದಲ್ಲಿ ಸ್ವಿಮ್ಮಿಂಗ್ ಪೂಲ್ ಬಳಕೆಗೆ ಅನುಮತಿ ನೀಡಲಾಗಿದೆ. ಕೋವಿಡ್ ನಿಯಮಗಳ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ.

  • ದಸರಾ ಮರುದಿನವೇ 1 ರಿಂದ 5ನೇ ತರಗತಿ ಆರಂಭ: ಬಿ.ಸಿ ನಾಗೇಶ್

    ದಸರಾ ಮರುದಿನವೇ 1 ರಿಂದ 5ನೇ ತರಗತಿ ಆರಂಭ: ಬಿ.ಸಿ ನಾಗೇಶ್

    ಉಡುಪಿ: ರಾಜ್ಯದಲ್ಲಿ ದಸರಾ ಮುಗಿದ ಕೂಡಲೇ ಅಂದರೆ ಅ.16ರಿಂದಲೇ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ‌ ಬಗ್ಗೆ ಶಿಕ್ಷಣ ಸಚಿವ ಬಿ.ಸಿ‌ ನಾಗೇಶ್ ‌ಉಡುಪಿಯಲ್ಲಿ ಘೋಷಣೆ ಮಾಡಿದ್ದಾರೆ.

    ನಗರದ ಒಳಕಾಡು ನಾರ್ತ್ ಶಾಲೆಗೆ ಬಂದು ಶಾಲೆಯ ವೀಕ್ಷಣೆ ಮಾಡಿದರು. ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು. ನಾರ್ಥ್ ಶಾಲೆಯಲ್ಲಿರುವ ಶೈಕ್ಷಣಿಕ ಫೆಸಿಲಿಟಿ ಗಳ ಬಗ್ಗೆ ಮಾಹಿತಿ ಪಡೆದು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು.

    ಭಗವಂತನ ಅನುಗ್ರಹದಿಂದ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಹಲವಾರು ಜಿಲ್ಲೆಯಲ್ಲಿ ಪಾಸಿಟಿವಿಟಿ ಝೀರೋ ಇದೆ. ಶಾಲೆ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯ ಕೊಟ್ಟಿದ್ದಾರೆ. ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭವಾಗುತ್ತದೆ. ಜೊತೆಗೆ ದಸರಾ ಮುಗಿದ ತಕ್ಷಣ ಬಿಸಿಊಟ ಕೂಡ ಆರಂಭವಾಗಲಿದೆ. ಸಿಎಂ ಬೊಮ್ಮಾಯಿ ಕೂಡ ಶೀಘ್ರ ಶಾಲೆ ಆರಂಭಿಸಲು ಆಸಕ್ತಿ ತೋರಿದ್ದಾರೆ ಎಂದರು.

    ಈ ಬಗ್ಗೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಟಾಸ್ಕ್ ಫೋರ್ಸ್ ಸಭೆ ಕರೆಯುತ್ತಾರೆ. ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಮೇರೆಗೆ ಶೀಘ್ರ ಶಾಲೆ ಆರಂಭಿಸುತ್ತೇವೆ. ಇನ್ನು ಎಲ್ಲರಿಗೂ ಶಾಲೆ ಕಡ್ಡಾಯ ಮಾಡಿಲ್ಲ ಮುಂದೆಯೂ ಕಡ್ಡಾಯ ಮಾಡುವುದಿಲ್ಲ. ಆನ್‌ಲೈನ್‌, ಆಫ್ ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ ಎಂದು ಸಚಿವ ನಾಗೇಶ್ ಹೇಳಿದರು.

    ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ. ಆನ್‌ಲೈನ್‌ ತರಗತಿಯಿಂದ ಕೆಳ ಗ್ರಾಮೀಣ ಮಕ್ಕಳಿಗೆ ತೊಂದರೆ ಆಗಿದೆ‌. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ.90ರಷ್ಟು ಇದೆ. ದಸರಾದ ಮರುದಿನದಿಂದಲೇ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ಕೂಡ ಆರಂಭವಾಗಲಿದೆ. ಜಿಲ್ಲಾಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಶಾಲೆಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಡಿಡಿಪಿಐ ಎಚ್ ಎನ್ ನಾಗೂರ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.

  • ದಸರಾ ಬಳಿಕ ಪ್ರಾಥಮಿಕ ಶಾಲೆ ಓಪನ್?

    ದಸರಾ ಬಳಿಕ ಪ್ರಾಥಮಿಕ ಶಾಲೆ ಓಪನ್?

    ಬೆಂಗಳೂರು: ಕೋವಿಡ್ 19 ಕಡಿಮೆ ಆಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಶೀಘ್ರವೇ ಪ್ರಾಥಮಿಕ ಶಾಲೆ ಆರಂಭವಾಗುವ ಸಾಧ್ಯತೆಯಿದೆ.

    6 ರಿಂದ 12ನೇ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ದಸರಾ ಬಳಿಕ ಪ್ರೈಮರಿ ಶಾಲೆ ಆರಂಭಕ್ಕೆ ಚಿಂತನೆ ಮಾಡಿದೆ.

    1-5 ನೇ ತರಗತಿಗಳ ಪ್ರಾರಂಭಕ್ಕೆ ಸರ್ಕಾರ ತಜ್ಞರ ಅಭಿಪ್ರಾಯ ಕೇಳಿದೆ. ತಜ್ಞರು ದಸರಾ ಬಳಿಕ ನೋಡೋಣ ಎಂದು ಸಲಹೆ ನೀಡಿದ್ದಾರೆ. ತಜ್ಞರ ವರದಿ ಆಧರಿಸಿ ಸರ್ಕಾರ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ. ಇದನ್ನೂ ಓದಿ: ಭಾರತ ಕೋವಿಡ್ 19 ನಿರ್ವಹಣೆ ಮಾಡಿದಂತೆ ಬೇರೆ ಯಾವ ದೇಶ ಮಾಡಿಲ್ಲ – ಸುಪ್ರೀಂ ಮೆಚ್ಚುಗೆ

    ಸರ್ಕಾರದ ಪ್ಲ್ಯಾನ್ ಏನು?
    ವಾರದಲ್ಲಿ 3 ದಿನ ಮಾತ್ರ ತರಗತಿ ನಡೆಯಲಿದೆ. 3 ದಿನ ಆಫ್‍ಲೈನ್ ಮತ್ತು 3 ದಿನ ಆನ್‍ಲೈನ್ ಕ್ಲಾಸ್ ನಡೆಸಲು ಚಿಂತನೆ ನಡೆದಿದೆ. ಕಡ್ಡಾಯವಾಗಿ ಕೇವಲ ಬೆಳಗ್ಗೆ ಅವಧಿ ಮಾತ್ರ ತರಗತಿ ನಡೆಯಲಿದ್ದು, ವಿದ್ಯಾರ್ಥಿಗಳು ಹೆಚ್ಚಿರುವ ಕಡೆ 3+3 ದಿನ ತರಗತಿ ನಡೆಸಲು ಅನುಮತಿ ನೀಡುವ ಸಾಧ್ಯತೆಯಿದೆ.

    ಶಾಲೆಗೆ ಹಾಜರಾತಿ ಕಡ್ಡಾಯ ಅಲ್ಲ. ಶಾಲೆಯಲ್ಲಿ ಕೊರೊನಾ ನಿಯಮ ಜಾರಿ ಸಂಬಂಧ ತಜ್ಞರ ವರದಿ ಆಧರಿಸಿ ವಿಶೇಷ ಮಾರ್ಗಸೂಚಿ ಪ್ರಕಟ ಮಾಡಿ ಆರಂಭಿಸಲು ಚಿಂತನೆ ನಡೆದಿದೆ.

  • ಶಾಲೆಗಳ ಆರಂಭ ಬಗ್ಗೆ ತಜ್ಞರ ಸಲಹೆಯಂತೆ ಮುಂದುವರಿಯುತ್ತೇವೆ: ಬಿ.ಸಿ.ನಾಗೇಶ್

    ಶಾಲೆಗಳ ಆರಂಭ ಬಗ್ಗೆ ತಜ್ಞರ ಸಲಹೆಯಂತೆ ಮುಂದುವರಿಯುತ್ತೇವೆ: ಬಿ.ಸಿ.ನಾಗೇಶ್

    ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ಮುಖ್ಯಮಂತ್ರಿಗಳು ತಾಂತ್ರಿಕ ಶಿಕ್ಷಣ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ಅವರು ಇಂದು ತಿಳಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ಕ್ಕೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಒಂದನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಬೇಕೇ ಎಂಬ ಬಗ್ಗೆ ತಾಂತ್ರಿಕ ಶಿಕ್ಷಣ ಸಮಿತಿ ನಿರ್ಧಾರದಡಿ ನಿರ್ಣಯಿಸಬೇಕಾಗಿದೆ ಎಂದರು.

    ತಾಂತ್ರಿಕ ಸಲಹಾ ಸಮಿತಿ ಜೊತೆ ಮುಖ್ಯಮಂತ್ರಿಗಳ ಸಭೆಯ ಬಳಿಕ ಶಾಲಾ ತರಗತಿಗಳ ಕುರಿತು ನಿರ್ಧರಿಸಲಿದ್ದೇವೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಶಿಕ್ಷಕರೂ ಶಾಲೆಗಳ ಆರಂಭಕ್ಕೆ ಉತ್ಸುಕರಾಗಿ ಕಾಯುತ್ತಿದ್ದಾರೆ ಎಂದರು. ಯಾಕೆ ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ಪೋಷಕರೂ ಶಾಲೆಗಳಿಗೆ ಬಂದು ಪ್ರಶ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಭೆಯಲ್ಲಿ ಲಸಿಕೆ, ಹಬ್ಬಗಳ ನಡುವೆ ವೈರಸ್ ನಿಯಂತ್ರಣ ಕುರಿತು ಚರ್ಚೆ: ಗೌರವ್ ಗುಪ್ತ

    ಮುಖ್ಯಮಂತ್ರಿಗಳು ಮತ್ತು ಶಾಸಕರ ಇಚ್ಛಾಶಕ್ತಿಯ ಪರಿಣಾಮವಾಗಿ ರಾಜ್ಯದಲ್ಲಿ ದೊಡ್ಡ ತರಗತಿಗಳು ಆರಂಭಗೊಂಡಿವೆ. ಮಕ್ಕಳ ಸಹಭಾಗಿತ್ವ ಮತ್ತು ಪೋಷಕರ ಸಹಕಾರ ಪೂರ್ಣವಾಗಿ ಲಭಿಸಿದೆ. ಬಹುತೇಕ ಶೇ 70ರಷ್ಟು ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?

    ಮುಖ್ಯಮಂತ್ರಿಗಳು ಮಕ್ಕಳ ಜೊತೆ ಸಂವಾದ ನಡೆಸಿದಾಗ ಆನ್‍ಲೈನ್ ತರಗತಿಗಳಿಂದ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ ಎಂಬುದು ಗೊತ್ತಾಗಿದೆ. ಅನೇಕ ಮಕ್ಕಳು ಇಡೀ ದಿನ ಶಾಲಾ ತರಗತಿ ನಡೆಸಲು ಮತ್ತು ಕುಡಿಯುವ ನೀರು ಹಾಗೂ ಬುತ್ತಿ ತರಲು ಅವಕಾಶ ಕೊಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ ಎಂದರು. ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಮೂಲಸೌಕರ್ಯ ಚೆನ್ನಾಗಿದ್ದು, ಕೋವಿಡ್ ಮಾರ್ಗಸೂಚಿ ಪಾಲನೆ ಕಷ್ಟವಾಗಲಾರದು. ಶಾಲೆಗಳ ಆರಂಭದ ಬಳಿಕ ಕೋವಿಡ್ ಸಂಖ್ಯೆಯಲ್ಲಿ ಹೆಚ್ಚಳ ಆಗಿಲ್ಲ ಎಂದೂ ಅವರು ಪ್ರಶ್ನೆಗೆ ಉತ್ತರ ನೀಡಿದರು.

    ಜನಸಾಮಾನ್ಯರ ಕುಂದುಕೊರತೆ ಪರಿಹಾರಕ್ಕಾಗಿ ತಿಂಗಳಿಗೆ ಎರಡು ಬಾರಿ ಎಲ್ಲ ಸಚಿವರು ಪಕ್ಷದ ಕಾರ್ಯಾಲಯಕ್ಕೆ ಭೇಟಿ ಕೊಡಬೇಕೆಂಬ ಆಶಯಕ್ಕೆ ಅನುಗುಣವಾಗಿ ಇಲ್ಲಿಗೆ ಬಂದಿದ್ದೇನೆ. ಸಾಕಷ್ಟು ಜನ ಅಹವಾಲಯಗಳ ಜೊತೆ ಶಿಕ್ಷಣ ಕ್ಷೇತ್ರದ ಬಗ್ಗೆ ಒಂದಷ್ಟು ಒಳ್ಳೆಯ ವಿಚಾರಗಳನ್ನೂ ತಿಳಿಸಿದ್ದಾರೆ. ಕಾರ್ಯಕರ್ತರ ಭೇಟಿಗೂ ಇದು ಸದವಕಾಶ ಎಂದರು.

  • ಸೆಪ್ಟೆಂಬರ್‌ನಲ್ಲಿ  ಶುರುವಾಗುತ್ತಾ ಶಾಲೆ? ಈ ಬಾರಿಯ ಶೈಕ್ಷಣಿಕ ವರ್ಷಕ್ಕೆ ಸರ್ಕಾರದ ಪ್ಲಾನ್ ಏನು?

    ಸೆಪ್ಟೆಂಬರ್‌ನಲ್ಲಿ ಶುರುವಾಗುತ್ತಾ ಶಾಲೆ? ಈ ಬಾರಿಯ ಶೈಕ್ಷಣಿಕ ವರ್ಷಕ್ಕೆ ಸರ್ಕಾರದ ಪ್ಲಾನ್ ಏನು?

    – ಶನಿವಾರ ಫುಲ್ ಡೇ ನಡೆಯುತ್ತಾ ಕ್ಲಾಸ್

    ಬೆಂಗಳೂರು: ಕೊರೊನಾ ಸೋಂಕಿನ ಜೊತೆ ಜೊತೆಗೆ ಬದುಕುವ ಸಿದ್ಧತೆಗಳ ನಡುವೆಯೇ ಅನ್‍ಲಾಕ್ 4.0 ನಲ್ಲಿ ಶಾಲೆ-ಕಾಲೇಜು ಓಪನ್ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ. ದೇಶದಲ್ಲಿ ಮೂರನೇ ಹಂತದ ಅನ್‍ಲಾಕ್ ನಿಯಮಗಳ ಅಂತ್ಯದಲ್ಲಿದ್ದು, ಸೆಪ್ಟೆಂಬರ್ 1 ರಿಂದ 4ನೇ ಹಂತದ ಅನ್‍ಲಾಕ್ ಮಾರ್ಗಸೂಚಿಗಳು ಜಾರಿಯಾಗಲಿದೆ. ಕೇಂದ್ರ ಸರ್ಕಾರ ಈ ಬಾರಿ ಯಾವುದಕ್ಕೆಲ್ಲ ವಿನಾಯಿತಿ ನೀಡಲಿದೆ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ಇದರ ನಡುವೆಯೇ ಶಾಲೆ ಆರಂಭಿಸಲು ಶೈಕ್ಷಣಿಕ ವರ್ಷದ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ.

    ಅನ್‍ಲಾಕ್ 4.0ನಲ್ಲಿ ಹಂತ ಹಂತವಾಗಿ ಶಾಲೆ ಕಾಲೇಜು ತೆರೆಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 1 ರಿಂದ ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಆರಂಭವಾಗಲಿದೆ. ಅಕ್ಟೋಬರ್ 1 ರಿಂದ ಪದವಿ ಕಾಲೇಜುಗಳು ಓಪನ್ ಆಗಲಿದೆ. ಇದರಂತೆ ಪದವಿ, ಪಿಯು, ಹೈಸ್ಕೂಲ್ ಬಳಿಕ ಪ್ರಾಥಮಿಕ ಶಾಲೆ ತೆರೆಯುವ ಚಿಂತನೆ ಮಾಡಲಾಗಿದೆ.

    ಸಾಮಾನ್ಯ ವರ್ಷಗಳಲ್ಲಿ ಈ ವೇಳೆಗೆ ಶಾಲೆಗಳು ವರ್ಷದ ಅರ್ಧ ಅವಧಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಈ ಬಾರಿ ಕಡಿಮೆ ಅವಧಿಯ ಶೈಕ್ಷಣಿಕ ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಹೊಸ ಯೋಜನೆಯನ್ನು ಸಿದ್ಧಪಡಿಸಿದೆ. ಈಗಾಗಲೇ 4-5 ತಿಂಗಳು ಶಾಲೆ ಆರಂಭ ತಡವಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಪಠ್ಯ ಬೋಧನೆ ಅಸಾಧ್ಯವಾಗಿದ್ದು, ಒಟ್ಟಾರೆ ಪಠ್ಯದಲ್ಲಿ ಶೇ.30ರಷ್ಟು ಕಡಿತ ಮಾಡಿ ಮಕ್ಕಳಿಗೆ ಅತ್ಯಗತ್ಯವಾದ ಪಠ್ಯ ಮಾತ್ರ ಉಳಿಸಿಕೊಳ್ಳಲು ಚಿಂತನೆ ಮಾಡಲಾಗಿದೆ. ಪಠ್ಯ ಕಡಿತ ಸಮಿತಿ ವರದಿ ಬಳಿಕ ಅಂತಿಮ ರೂಪುರೇಷೆ ಲಭಿಸಲಿದೆ.

    ಉಳಿದಂತೆ ಶೈಕ್ಷಣಿಕ ವರ್ಷದ ಅವಧಿ ಕಡಿಯಾದ ಹಿನ್ನೆಲೆಯಲ್ಲಿ ಕಳೆದು ಹೋದ ಅವಧಿ ಸರಿದೂಗಿಸಲು ಶನಿವಾರ ಫುಲ್ ಕ್ಲಾಸ್ ಮಾಡುವ ಚಿಂತನೆ ಇದೆ. ಈ ಹೆಚ್ಚುವರಿ ಅವಧಿಯಲ್ಲಿ ನಿಗದಿತ ಪಠ್ಯ ಮುಗಿಸುವ ಯೋಜನೆ ಮಾಡಲಾಗಿದೆ. ಇದರೊಂದಿಗೆ ಅನೇಕ ಮಹಾ ಪುರುಷರ ಜಯಂತಿಗೆ ನೀಡಲಾಗುವ ರಜೆ ರದ್ದು ಮಾಡಿ ಈ ಸಮಯವನ್ನು ಬೋಧನೆಗೆ ಬಳಸುವ ಪ್ಲಾನ್ ಮಾಡಲಾಗಿದೆ.

    ಶಾಲೆಗಳು ನಿಗದಿಯಂತೆ ನಡೆದಿದ್ದರೆ ಅನೇಕ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಈ ಎಲ್ಲಾ ಪರೀಕ್ಷೆ ಬದಲು ಮಿತವಾದ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ. ಕಿರುಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಕೈಬಿಟ್ಟು ಮಿತವಾದ ಪರೀಕ್ಷಾ ಪದ್ಧತಿ ಆಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ ಲಭಿಸಿದೆ.

  • ಕೊರೊನಾ ಎಫೆಕ್ಟ್: ಪ್ರಾಥಮಿಕ ಶಾಲೆ, ಅಂಗನವಾಡಿಗಳಿಗೂ ರಜೆ

    ಕೊರೊನಾ ಎಫೆಕ್ಟ್: ಪ್ರಾಥಮಿಕ ಶಾಲೆ, ಅಂಗನವಾಡಿಗಳಿಗೂ ರಜೆ

    ಬೆಂಗಳೂರು: ಕೊರೊನಾ ವೈರಸ್ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತ ಪತ್ತೆಯಾಗಿದ್ದು, ಜನತೆ ಆತಂಕದಲ್ಲಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರುನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

    1-9 ನೇ ತರಗತಿವರೆಗಿನ ಪರೀಕ್ಷೆ ಶೀಘ್ರವೇ ಮುಗಿಸಿ ಶಾಲೆಗಳಿಗೆ ರಜೆ ಘೋಷಣೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.

    1-5 ನೇ ತರಗತಿ – ಮಾರ್ಚ್ 11 ರಿಂದ 16 ವರೆಗೆ ಪರೀಕ್ಷೆ ಮುಗಿಸಬೇಕು. 6-9 ನೇ ತರಗತಿ- ಮಾರ್ಚ್ 23 ರ ಒಳಗೆ ಮುಗಿಸಬೇಕು. 10 ನೇ ತರಗತಿ ಮೊದಲೇ ನಿಗದಿ ಪಡಿಸಿದ ವೇಳಾಪಟ್ಟಿಯಂತೆ ಮುಗಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.

    ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪ್ರೀ ನರ್ಸರಿ, ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ರಜೆ ಘೋಷಣೆಯಾದ ಬೆನ್ನಲ್ಲೇ ಅಂಗನವಾಡಿಗಳಿಗೂ ರಜೆ ನೀಡಿ ಆದೇಶಿಸಲಾಗಿದೆ. ದಿನಾಂಕ 10-03-2020 ರಿಂದ 17-03-2020ರವರೆ ಅಂಗನವಾಡಿಗಳಿಗೆ ರಜೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿ ಸುತ್ತೋಲೆ ಹೊರಡಿಸಿದೆ.

    ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಲಿದೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವೈದ್ಯಕಿಯ ಇಲಾಖೆ ಸಮಕ್ಷಮದಲ್ಲಿ ರಜೆ ಘೋಷಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ನಾವು ಈಗಾಗಲೇ ಮುನ್ನೆಚ್ಚರಿಕೆ ಮತ್ತು ಮಾರ್ಗಸೂಚಿಯನ್ನು ನೀಡಿದ್ದೇವೆ ಎಂದು ವೈದ್ಯಕೀಯ ಸಚಿವ ಕೆ.ಸುಧಾಕರ್ ವಿಧಾನಸೌಧದಲ್ಲಿ ತಿಳಿಸಿದ್ದರು.