Tag: ಪ್ರಾಣಿ ವಿನಿಮಯ

  • ವಂಡಾಲೂರು ಝೂನಿಂದ ನಾಪತ್ತೆಯಾಗಿದ್ದ ನಟ ಶಿವಕಾರ್ತಿಕೇಯನ್ ದತ್ತು ಪಡೆದ ಸಿಂಹ ಪತ್ತೆ

    ವಂಡಾಲೂರು ಝೂನಿಂದ ನಾಪತ್ತೆಯಾಗಿದ್ದ ನಟ ಶಿವಕಾರ್ತಿಕೇಯನ್ ದತ್ತು ಪಡೆದ ಸಿಂಹ ಪತ್ತೆ

    – ಬೆಂಗಳೂರಿನ ಬನ್ನೇರುಘಟ್ಟ ಪಾರ್ಕ್‌ನಿಂದ ಕಳಿಸಲಾಗಿದ್ದ ಶೆರಿಯಾರ್‌ ಸಿಂಹ

    ಚೆನ್ನೈ/ಬೆಂಗಳೂರು: ತಮಿಳುನಾಡಿನ ವಂಡಾಲೂರು ಮೃಗಾಲಯಕ್ಕೆ (Vandalur Zoo) ಬೆಂಗಳೂರಿನಿಂದ ಕಳಿಸಲಾಗಿದ್ದ ಸಿಂಹವೊಂದು ರಾತ್ರೋರಾತ್ರಿ ನಾಪತ್ತೆಯಾಗಿ, ಆತಂಕ ಸೃಷ್ಟಿಸಿತ್ತು. 2‌ ದಿನಗಳ ಬಳಿಕ ಸಿಂಹ ಪತ್ತೆಯಾಗಿದ್ದು, ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

    ಶೆರಿಯಾರ್ ಹೆಸರಿನ 5 ವರ್ಷದ ಗಂಡು ಸಿಂಹವನ್ನು (Lion Sheryaar) ಗುರುವಾರ (ಅ.02) ಮೊದಲ ಬಾರಿಗೆ ಸಫಾರಿ ವಲಯಕ್ಕೆ ಬಿಡಲಾಗಿತ್ತು. ಆದರೆ, ನಿಗದಿತ ಸಮಯ ಕಳೆದರೂ ಸಿಂಹ ಮಾತ್ರ ಬೋನಿಗೆ ವಾಪಸ್ಸಾಗಲಿಲ್ಲ. ಶನಿವಾರ ಸಂಜೆಯವರೆಗೂ ಸಿಂಹ ಬೋನಿಗೆ ಹಿಂತಿರುಗಲಿಲ್ಲ ಎಂದು ವರದಿಯಾಗಿತ್ತು. ಇದರಿಂದ ಆಘಾತಗೊಂಡ ಮೃಗಾಲಯದ ಸಿಬ್ಬಂದಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕಾಗಿ ರಾಯಚೂರಿನಿಂದ ಕೊಪ್ಪಳಕ್ಕೆ 200 ಬಸ್ – ಇತ್ತ ಬಸ್ಸಿಲ್ಲದೇ ಪ್ರಯಾಣಿಕರ ಪರದಾಟ

    ನಾಪತ್ತೆಯಾಗಿದ್ದ ಶೆರಿಯಾರ್‌ ಸಿಂಹವನ್ನು ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ದತ್ತು ಪಡೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮೃಗಾಲಯದ ಸಿಬ್ಬಂದಿ ಮತ್ತು ವಿಶೇಷ ತಂಡ ರಾತ್ರಿಯಿಡೀ ಪ್ರದೇಶದಲ್ಲಿ ಹುಡುಕಾಟ ನಡೆಸಿತ್ತು. ಅಕ್ಟೋಬರ್ 4 ರಂದು ಶೆರಿಯಾ‌ರ್ ಸಿಂಹ ಸಫಾರಿ ವಲಯದೊಳಗೆ ಕಾಣಿಸಿಕೊಂಡ ಬಳಿಕ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಒಂದೂವರೆ ವರ್ಷದಿಂದ ರೈತರಿಗೆ ಕಾಟ ಕೊಡ್ತಿದ್ದ ಪುಂಡಾನೆ ಸೆರೆ

    ಶೆರಿಯಾರ್‌ ಸಿಂಹವನ್ನು 2023ರಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ 2023ರಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಿಂದ ವಂಡಲೂರಿಗೆ ತರಲಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ರಾಜ್ಯ ಸರ್ಕಾರ – ಪರೀಕ್ಷಾ ಶುಲ್ಕ 710 ರೂ.ವರೆಗೆ ಹೆಚ್ಚಳ

  • ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನ

    ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನ

    – ಅಳಿವಿನಂಚಲ್ಲಿರುವ ಬಿಳಿ ಹುಲಿ, ಕಾಡು ಬೆಕ್ಕು, ಮೊಸಳೆ ಆಮದು

    ಆನೇಕಲ್: ಪ್ರಾಣಿ ವಿನಿಯಯ ಯೋಜನೆಯಡಿ (Animal Exchange) ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (Bannerghatta Biological Park) ನೂತನ ಅಥಿತಿಗಳ ಆಗಮನವಾಗಿದೆ.

    ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯಂತೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ, ಸಂಜಯ್ ಗಾಂಧಿ ಜೈವಿಕ ಉದ್ಯಾನವನ, ಪಾಟ್ನಾ ಹಾಗೂ ಬಿಹಾರದ ನಡುವೆ ಪ್ರಾಣಿ ವಿನಿಮಯ ಯಶಸ್ವಿಯಾಗಿದೆ. ವಿನಿಮಯದ ಭಾಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಒಂದು ಗಂಡು ಜೀಬ್ರಾ ಮತ್ತು ಎರಡು ಗಂಡು ಥಮಿನ್ ಜಿಂಕೆಗಳನ್ನು ಪಾಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ. ಇದರ ಪ್ರತಿಯಾಗಿ ಅಳಿವಿನಂಚಿನಲ್ಲಿರುವ ಘಾರಿಯಲ್ ಮೊಸಳೆ, ಬಿಳಿ ಹುಲಿ ಮತ್ತು ಕಾಡು ಬೆಕ್ಕನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿದ್ದು, ನೂತನ ಪ್ರಾಣಿಗಳ ಆಗಮನದಿಂದ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತಂದೆಯಿಂದಲೇ ಮಗನ ಭೀಕರ ಕೊಲೆ

    ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳಲು ಈ ಹೊಸ ಪ್ರಾಣಿಗಳನ್ನು ಕೆಲವು ದಿನಗಳವರೆಗೆ ಕ್ವಾರಂಟೈನ್ ಪ್ರದೇಶದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ನಿರಂತರ ವೀಕ್ಷಣೆಯಲ್ಲಿರಲು ಪ್ರತ್ಯೇಕ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಲಾಗಿದೆ. ಈ ಪ್ರಾಣಿ ವಿನಿಮಯವು ಮೃಗಾಲಯಗಳಲ್ಲಿನ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಹೆಚ್ಚಿಸಲು ಸಹಕಾರಿಯಾಗಿದ್ದು, ಪ್ರಾಣಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೂ ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಿ, ಹೊಸ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗಲಿದೆ. ಇದನ್ನೂ ಓದಿ: ಬೆಂಗಳೂರು| ಬೈಕ್‌ನಲ್ಲಿ ಬಂದು ಪೆಪ್ಪರ್ ಸ್ಪ್ರೇ ಹಾಕಿ ಯುವಕರ ಮೇಲೆ ಹಲ್ಲೆ

    ಪ್ರಾಣಿ ವಿನಿಮಯ ಕಾರ್ಯಕ್ರಮಗಳು ಹೆಚ್ಚಾಗಿ ಆದಾಗ ಸಂರಕ್ಷಣೆ, ಶಿಕ್ಷಣ ಮತ್ತು ವಿಭಿನ್ನ ಪ್ರಾಣಿಗಳ ಜೀವನ ಶೈಲಿ ಸೇರಿದಂತೆ ಜನರಲ್ಲಿ ದೇಶದಾದ್ಯಂತ ಇರುವ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಭಾರತೀಯ ಪ್ರಾಣಿ ಸಂಗ್ರಹಾಲಯ ಈ ಮಹತ್ತರದ ಪ್ರಾಣಿ ವಿನಿಮಯ ಯೋಜನೆಯನ್ನು ಮಾಡಿದೆ. ಇದನ್ನೂ ಓದಿ: ಮಳೆ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆ – ಗ್ರಾಹಕರು ಹೈರಾಣು, ಯಾವ ತರಕಾರಿಗೆ ಎಷ್ಟು ಬೆಲೆ?