Tag: ಪ್ರಾಣಿ- ಪಕ್ಷಿಗಳು

  • ಕುಡಿಯುವ ನೀರಿನ ಬಾನಿ – ಪ್ರಾಣಿ, ಪಕ್ಷಿಗಳ ಕಷ್ಟಕ್ಕೆ ಮರುಗಿನ ಕರುಣಾ ಕಲ್ಯಾಣ ಟ್ರಸ್ಟ್

    ಕುಡಿಯುವ ನೀರಿನ ಬಾನಿ – ಪ್ರಾಣಿ, ಪಕ್ಷಿಗಳ ಕಷ್ಟಕ್ಕೆ ಮರುಗಿನ ಕರುಣಾ ಕಲ್ಯಾಣ ಟ್ರಸ್ಟ್

    ಹಾವೇರಿ: ಪ್ರಾಣಿ ಪಕ್ಷಿಗಳು ತಮ್ಮ ಆಹಾರವನ್ನು ಹೇಗೋ ಹುಡುಕಿಕೊಳ್ಳುತ್ತವೆ. ಆದರೆ ಕುಡಿಯುವ ನೀರಿಗಾಗಿ ಬಹಳ ಪರದಾಡುತ್ತಿರುತ್ತವೆ. ಇವುಗಳ ಕಷ್ಟಕ್ಕೆ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಮರುಗಿದ್ದು ಕುಡಿಯುವ ನೀರಿನ ಬಾನಿಗಳನ್ನು ಇಡುವ ಮೂಲಕ ದಾಹವನ್ನು ನೀಗಿಸುತ್ತಿದೆ.

    ನಗರದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಕೆಲವೊಂದು ಸ್ಥಳಗಳಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ಕುಡಿಯುವ ನೀರಿನ ಬಾನಿಗಳನ್ನು ಇಡಲಾಗಿದೆ. ಈ ಬಗ್ಗೆ ಮಾತನಾಡಿದ ವಸಂತ್ ಕುಮಾರ್ ಅವರು, ನಮಗೆ ಬಾಯಾರಿಕೆಯಾದರೆ ನಾವು ಎಲ್ಲಾದರೂ ಕೇಳಿ ಅಥವಾ ಕೊಂಡು ನೀರನ್ನು ಕುಡಿಯುತ್ತೇವೆ. ಆದರೆ ಪಕ್ಷಿ ಪ್ರಾಣಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಹೀಗಾಗಿ ನಗರದ ಹುಕ್ಕೇರಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ವರ್ತಕರಾದ ಪ್ರಭಾಕರ ರಾವ್ ಮಂಗಳೂರ, ಶಿವರಾಜ ಚ. ವಳಸಂಗದ ಹಾಗೂ ಸಮಾಜ ಸೇವಕರಾದ ಶಿವಬಸಪ್ಪ ಹಲಗಣ್ಣನವರು ಕಾಣಿಕೆಯಾಗಿ ನೀಡಿದ ಹಣದಿಂದ ಬಾನಿಗಳನ್ನು ಇಡಲು ಸಾಧ್ಯವಾಗಿದೆ. ಇನ್ನೂ ಅನೇಕ ವ್ಯಕ್ತಿಗಳು ಸಹಕಾರ ನೀಡುವುದಾದರೆ ನಮ್ಮನ್ನು 70197 32465 ಸಂಪರ್ಕಿಸಬಹುದೆಂದು ಹೇಳಿದರು.

    ಜಿಗ್ನೇಶ್ ಪಟೇಲ್ ಮಾತನಾಡಿ, ನಾವು ಗಳಿಸುವ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜಮುಖಿ ಕೆಲಸಗಳಿಗಾಗಿ ಉಪಯೋಗಿಸಿದರೆ ಸಾರ್ಥಕವೆನಿಸುತ್ತದೆ. ನಗರದಲ್ಲಿ ನೂರಕ್ಕೂ ಹೆಚ್ಚು ಬಾನಿಗಳನ್ನು ಇಡಲು ಉದ್ದೇಶಿಸಲಾಗಿದೆ. ಹೆಚ್ಚುಹೆಚ್ಚು ಜನರು ಈ ಕೆಲಸದಲ್ಲಿ ಸಹಕಾರ ನೀಡಬೇಕೆಂದು ವಿನಂತಿಸಿದರು.

    ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯಕರ್ತರಾದ ಜುಂಜಪ್ಪ ಕಮತರ, ಸಂತೋಷ ಕುಂಬಾರಿ, ಹನುಮಂತ ಹೊನ್ನಪ್ಪನವರ, ವಿನಾಯಕ ಮುಷ್ಟಗೇರಿ, ಇರ್ಫಾನ ನದಾಫ್, ರಾಜಶೇಖರ ಕೋಲಾರ, ರಮೇಶ ಕಂಡೆಪ್ಪಗೌಡ ಇನ್ನಿತರು ಉಪಸ್ಥಿತರಿದ್ದರು.

  • ರಶ್ಮಿಕಾ ಮನೆಯಲ್ಲಿದ್ದಾರೆ ಇಬ್ಬರು ಹುಡುಗರು – ಅಭಿಮಾನಿಗಳಿಗೆ ಇಷ್ಟವಾಯ್ತು ವಿಡಿಯೋ

    ರಶ್ಮಿಕಾ ಮನೆಯಲ್ಲಿದ್ದಾರೆ ಇಬ್ಬರು ಹುಡುಗರು – ಅಭಿಮಾನಿಗಳಿಗೆ ಇಷ್ಟವಾಯ್ತು ವಿಡಿಯೋ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಪ್ರಾಣಿ- ಪಕ್ಷಿಗಳನ್ನು ಕ್ಯೂಟ್ ಆಗಿ ಮುದ್ದು ಮಾಡುತ್ತಾ ಆಟವಾಡ್ತಿರೋ ಫೋಟೋ, ವಿಡಿಯೋವನ್ನು ಟ್ವೀಟ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ರಶ್ಮಿಕಾಗೆ ಪ್ರಾಣಿ-ಪಕ್ಷಿಗಳು ಅಂದ್ರೆ ಅಚ್ಚುಮೆಚ್ಚು. ಆದರಿಂದ ಮನೆಯಲ್ಲಿ ನಾಯಿ, ಬೆಕ್ಕು, ಪಾರಿವಾಳ ಅಂತ ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ. ಅವರ ಬಿಡುವಿನ ಸಮಯದಲ್ಲಿ ಅವುಗಳೊಟ್ಟಿಗೆ ಸಮಯ ಕಳೆದು ಖುಷಿಪಡೋದು ರಶ್ಮಿಕಾಗೆ ಇಷ್ಟ. ಹೀಗಾಗಿ ಎಂದಿನಂತೆ ತಮ್ಮ ಮನೆಯಲ್ಲಿರುವ ಪ್ರೀತಿಯ ಪ್ರಾಣಿಗಳೊಂದಿಗೆ ಆಟವಾಡುತ್ತಿರುವ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಒಂದರಲ್ಲಿ ಪಾರಿವಾಳದ ಜೊತೆ ಪೋಸ್ ಕೊಟ್ಟರೆ, ಇನ್ನೊಂದರಲ್ಲಿ ಮುದ್ದಿನ ಬೆಕ್ಕನ್ನು ಮುದ್ದಾಡುತ್ತಿರುವ ಪೋಸ್ ಕೊಟ್ಟಿದ್ದಾರೆ. ಇದರ ಜೊತೆಯಲ್ಲಿ 2 ಮುದ್ದು ಶ್ವಾನಗಳೊಟ್ಟಿಗೆ ಆಟವಾಡುತ್ತಿರುವ ವಿಡಿಯೋವನ್ನು ಹಾಕಿದ್ದಾರೆ.

    ನಾಯಿಗಳ ಜೊತೆ ಆಟವಾಡುತ್ತಿರುವ ವಿಡಿಯೋಗೆ ರಶ್ಮಿಕಾ,` These are my two big boys ‘ ಎಂದು ಬರೆದಿದ್ದಾರೆ. ಈ ವಿಡಿಯೋಗೆ 9 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 190ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv