Tag: ಪ್ರಾಣಿ ದಯಾ ಸಂಘ

  • ಬೀದಿ ನಾಯಿಯನ್ನ ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ ಪಾಪಿ – ಪ್ರಕರಣ ದಾಖಲು

    ಬೀದಿ ನಾಯಿಯನ್ನ ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ ಪಾಪಿ – ಪ್ರಕರಣ ದಾಖಲು

    ಬೆಂಗಳೂರು: ಈ ಭೂಮಿಯಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಅದೇ ರೀತಿ ಪ್ರಾಣಿಗಳಿಗೂ ಸಹ ಬದುಕುವ ಹಕ್ಕಿದೆ. ಆದರೇ ಬೆಂಗಳೂರಿನ ಜನ ಬೀದಿ ನಾಯಿಗಳನ್ನು ಕೊಲ್ಲುವ ಮಟ್ಟಕ್ಕೆ ಹೋಗ್ತಿದ್ದಾರೆ. ಅತಂಹ ಅನೇಕ ಘಟನೆಗಳು ನಡೆದಿವೆ. ಈಗ ಬೆಂಗಳೂರಿನ ಕೊಟ್ಟಿಗೆ ಪಾಳ್ಯದ ಬಳಿ ಇರುವ ಟೆಲಿಕಾಮ್ ಲೇಔಟ್‍ನಲ್ಲಿ ಯುವಕನೊಬ್ಬ ಕಳೆದ ವಾರ ಬೀದಿ ನಾಯಿಯೊಂದನ್ನು ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ್ದಾನೆ.

    ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಪ್ರಾಣಿ ದಯಾ ಸಂಘದವರು ದೂರು ನೀಡಲು ಹೋದಾಗ ಪೊಲೀಸರು ಮೊದಲಿಗೆ ದೂರು ದಾಖಲಿಸಲು ಹಿಂದೇಟು ಹಾಕಿದ್ರು. ಬಳಿಕ ದೂರು ದಾಖಲಿಸಿಕೊಂಡಿದ್ದಾರೆ. ನಂತರ ನಾಯಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೇ ಆ ನಾಯಿ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದಾದ್ರೆ ನಿಮ್ಮ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ: JDSಗೆ ಸಿದ್ದು ಸವಾಲ್ 

    ಬೀದಿ ನಾಯಿ ಮೇಲೆ ಹೀಗೆ ಹಲ್ಲೆ ಮಾಡಿ ಪ್ರಾಣ ತಗಿಯೋದು ಕ್ರಿಮಿನಲ್ ಅಪರಾಧ ಎಂದು ಕಾನೂನಿದೆ. ಜನ ಅದನ್ನು ಪಾಲಿಸಬೇಕು. ಪ್ರಾಣಿಗಳನ್ನು ಮಾನವೀಯತೆಯಿಂದ ನೋಡಬೇಕು ಎಂದು ಪ್ರಾಣಿ ದಯಾ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.

    ಒಂದು ಜೀವವನ್ನು ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪರಿಸರದಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ನಿಯತ್ತಿನ ಪ್ರಾಣಿ ಅಂತಲೇ ಕರೆಸಿಕೊಳ್ಳೋ ನಾಯಿಯನ್ನ ಯಾಕೇ ಹೀಗೆ ಮಾಡ್ತಾರೆ. ಇನ್ಯಾರೂ ಈ ರೀತಿ ಮಾಡಬಾರದು ಅಂತಹ ಶಿಕ್ಷೆಯನ್ನ ಕಾನೂನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ 

  • ‘ಇದೇನ್ ಇಂಡಿಯಾ, ಪಾಕಿಸ್ತಾನ ಯುದ್ಧನಾ’ – ಅಧಿಕಾರಿ, ಪ್ರಾಣಿ ದಯಾ ಸಂಘದವರ ಮಧ್ಯೆ ವಾಗ್ವಾದ

    ‘ಇದೇನ್ ಇಂಡಿಯಾ, ಪಾಕಿಸ್ತಾನ ಯುದ್ಧನಾ’ – ಅಧಿಕಾರಿ, ಪ್ರಾಣಿ ದಯಾ ಸಂಘದವರ ಮಧ್ಯೆ ವಾಗ್ವಾದ

    ಬೆಂಗಳೂರು: ಚಾಮರಾಜನಗರದ ಬಂಡೀಪುರದಲ್ಲಿ ಹುಲಿ ಹಿಡಿಯುವ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಪ್ರಾಣಿ ದಯಾ ಸಂಘದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.

    ಮಂಗಳವಾರ ವ್ಯಕ್ತಿಯೊರ್ವನನ್ನು ಹುಲಿ ಕೊಂದು ಹಾಕಿತ್ತು. ಈ ಬೆನ್ನಲ್ಲೇ ಸ್ಥಳೀಯರು ಹುಲಿಯನ್ನು ಹಿಡಿಯುವಂತೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹುಲಿಯನ್ನು 24 ಗಂಟೆಯೊಳಗೆ ಹಿಡಿಯಬೇಕು. ಇಲ್ಲವೆಂದಲ್ಲಿ ಅದನ್ನು ಕೊಲ್ಲಲು ಆದೇಶ ಹೊರಡಿಸಿತ್ತು.

    ಈ ಸಂಬಂಧ ಇಂದು ಮಲ್ಲೇಶ್ವರಂನ ಅರಣ್ಯ ಭವನದಲ್ಲಿರುವ ಅರಣ್ಯ ಇಲಾಖೆಯೊಳಗೆ ನಡೆದ ಅಧಿಕಾರಿಗಳು ಹಾಗೂ ಪ್ರಾಣಿದಯಾ ಸಂಘದವರ ಸಭೆಯಲ್ಲಿ ವಾಗ್ವಾದ ನಡೆದಿದೆ. ನಿನ್ನೆಯಷ್ಟೇ ದುರ್ಗಿಯನ್ನು ಆರಾಧನೆ ಮಾಡಿದ್ದೇವೆ. ಮೊದಲೇ ರಾಜ್ಯದ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗಿದೆ. ಈ ಹುಲಿಯನ್ನು ಕೊಲ್ಲಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿ ಸಂಜಯ್ ಮೌನಿಗೆ ಪ್ರಾಣಿ ದಯಾ ಸಂಘದವರು ಮನವಿ ಸಲ್ಲಿಸಿದರು.

    ನಾವು ಹುಲಿಯನ್ನು ಹಿಡಿಯಲು ಯತ್ನ ಮಾಡುತ್ತಿದ್ದೇವೆ ಕೊಲ್ಲಲ್ಲ ಅಂತ ಹೇಳಿದ್ದಾರೆ. ಆದರೆ ಈಗಾಗಲೇ ಮಹಾರಾಷ್ಟ್ರದಿಂದ ಹುಲಿಯನ್ನು ಕೊಲ್ಲುವುದಕ್ಕಾಗಿಯೇ ತಜ್ಞರನ್ನು ಕರೆಸಿಕೊಳ್ಳಲಾಗಿದೆ. ಅಲ್ಲದೆ ಹುಲಿಯನ್ನು ಕೊಲ್ಲಲು ಅಧಿಕೃತ ಅದೇಶ ಕೊಡಲಾಗಿದೆ ಎಂದು ಪ್ರಾಣಿ ದಯಾ ಸಂಘದವರು ವಾದ ಮಾಡಿದರು.

    ಪ್ರಾಣಿದಯಾ ಸಂಘದವರ ಆಕ್ಷೇಪಕ್ಕೆ ಸಿಟ್ಟಿಗೆದ್ದ ಅಧಿಕಾರಿ, ಇದೇನ್ ಇಂಡಿಯಾ – ಪಾಕಿಸ್ತಾನ ಯುದ್ಧನಾ. ನಾವು ಹುಲಿಯನ್ನು ಕೊಲ್ಲಲ್ಲ. ಹುಲಿಯನ್ನು ತಬ್ಬಿ ಹಿಡಿಯೋದಕ್ಕೆ ಆಗುತ್ತಾ? ಸ್ವಲ್ಪ ಏಟು ಮಾಡಿಯೇ ಅದನ್ನು ಹಿಡಿಯಬೇಕಲ್ಲವೇ ಎಂದು ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರು ಪ್ರಾಣಿ ದಯಾ ಸಂಘದವರಿಗೆ ಟಾಂಗ್ ಕೊಟ್ಟರು.

    ಈ ಉತ್ತರಕ್ಕೆ ಸದಸ್ಯರು, ಹುಲಿಗೆ ಹಾನಿ ಮಾಡದೇ ಹಿಡಿಯಿರಿ ಎಂದು ಅಧಿಕಾರಿಗೇ ತಿರುಗೇಟು ನೀಡಿದರು. ಅಣ್ಣಾವ್ರ ಅಭಿಮಾನಿಗಳು ನಾವು, ಮಹಾರಾಷ್ಟ್ರದಲ್ಲಿ ಅವನಿ ಹುಲಿಯನ್ನು ಕೊಂದವನನ್ನು ಕರ್ನಾಟಕಕ್ಕೆ ಕರೆಸಿ ಇಲ್ಲಿ ಹುಲಿ ಹತ್ಯೆ ಮಾಡುವುದಕ್ಕೆ ಬಿಡಲ್ಲ ಎಂದು ಖಡಕ್ ಆಗಿ ತಿಳಿಸಿದರು.

    ಈ ಹಿಂದೆಯೂ ಈ ಹುಲಿ ಸಾಕಷ್ಟು ಜನರಿಗೆ ಹಾನಿ ಮಾಡಿದೆ. ಈಗಾಗಲೇ ಅಲ್ಲಿನ ದೃಶ್ಯಗಳನ್ನು ಪರಿಶೀಲನೆ ಮಾಡಿ ಅದನ್ನು ಹಿಡಿಯುವ ಯತ್ನ ಮಾಡುತ್ತಿದ್ದೇವೆ. ಅಲ್ಲಿ ಮೂರು ಹುಲಿ ಇದೆ. ಬೇರೆ ಹುಲಿಗೆ ತೊಂದರೆಯಾಗದಂತೆ ಕಿಲ್ಲರ್ ಹುಲಿಯನ್ನು ಹಿಡಿದು ಟ್ರೈನ್ ಮಾಡುತ್ತೇವೆ. ಅದನ್ನು ಬೇರೆ ಕಡೆ ಸ್ಥಳಾಂತರ ಮಾಡಲಿದ್ದೇವೆ ಎಂದು ಅಧಿಕಾರಿ ತಿಳಿಸಿದರು.

  • ಬೀದಿ ನಾಯಿಗಳಿಗೆ ಅನ್ನ ಹಾಕಿದ್ದಕ್ಕೆ ಕಾರ್ಯಕರ್ತೆಗೆ ಥಳಿತ!

    ಬೀದಿ ನಾಯಿಗಳಿಗೆ ಅನ್ನ ಹಾಕಿದ್ದಕ್ಕೆ ಕಾರ್ಯಕರ್ತೆಗೆ ಥಳಿತ!

    ಮುಂಬೈ: ಪ್ರಾಣಿ ದಯಾ ಸಂಘದ ಕಾರ್ಯಕರ್ತೆಯೊಬ್ಬರಿಗೆ ಸ್ಥಳೀಯರು ಥಳಿಸಿದ ಅಮಾನವೀಯ ಘಟನೆಯೊಂದು ಪಶ್ಚಿಮ ಅಂಧೇರಿಯಲ್ಲಿ ನಡೆದಿದೆ. ಲೋಕಂಡ್ ವಾಲನಲ್ಲಿರುವ ತಮ್ಮ ಮನೆಯ ಹೊರಗಡೆಯೇ 62 ವರ್ಷದ ಅಂಜಲಿ ಚೌಧರಿ ಥಳಿತಕ್ಕೊಳಗಾಗಿದ್ದಾರೆ.

    ನಾನು ಕಳೆದ 25 ವರ್ಷಗಳಿಂದ ಬೀದಿ ನಾಯಿ ಹಾಗೂ ಬೆಕ್ಕುಗಳಿಗೆ ಆಹಾರ ನೀಡುತ್ತಾ ಬಂದಿದ್ದೇನೆ. ಆದರೆ 2 ವಾರಗಳಿಂದ ಸಮಾಜದ ಕೆಲ ವ್ಯಕ್ತಿಗಳು ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅಲ್ಲದೆ ನಮ್ಮ ಕಟ್ಟಡದ ಹತ್ತಿರ ಬೀದಿ ನಾಯಿಗಳಿಗೆ ಆಹಾರ ಹಾಕಬೇಡ ಎಂದು ಬೆದರಿಸುತ್ತಿದ್ದಾರೆ. ಯಾಕಂದರೆ ಅವುಗಳಿಗೆ ಅನ್ನ ಹಾಕಿದರೆ ಅವುಗಳು ನಮ್ಮ ಮನೆ ಸುತ್ತಲೇ ಸುತ್ತುತ್ತಿರುತ್ತವೆ. ಇದರಿಂದ ನಮಗೆ ತೊಂದರೆಯಾಗುತ್ತದೆ ಎಂದು ನನ್ನ ವಿರುದ್ಧ ಕಿಡಿಕಾರುತ್ತಿದ್ದಾರೆ ಎಂದು ಎನ್‍ಜಿಓ ನಡೆಸುತ್ತಿರುವ ಅಂಜಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಗುರುವಾರ ಮಧ್ಯಾಹ್ನದ ಬಳಿಕ ನಾನು ಬೆಕ್ಕು ಹಾಗು ನಾಯಿಗಳಿಗೆ ಆಹಾರ ನೀಡುತ್ತಿದ್ದೆ. ಈ ವೇಳೆ ಕೆಲ ವ್ಯಕ್ತಿಗಳು ಬಂದು ನನ್ನ ಜೊತೆ ವಾಗ್ವಾದ ನಡೆಸಿದರು. ಅಲ್ಲದೆ ನನ್ನನ್ನು ದೂಡಿದ್ದಾರೆ. ಇದರಿಂದ ಕೆಳಗೆ ಬಿದ್ದಿದ್ದು, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾನು ಬೇರೆ ಪ್ರಾಣಿ ದಯಾ ಸಂಘದವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಕೇಳಿಕೊಂಡೆ. ಹಾಗೆಯೇ ಸಂಘದವರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದಾರೆ.

    ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ನಾನು ಪೊಲೀಸರಿಕೆ ಕರೆ ಮಾಡಿ ಮಾಹಿತಿ ನೀಡಿದೆವು. ಹೀಗಾಗಿ ಸ್ಥಳಕ್ಕೆ ಬಂದ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆದರೆ ಇದುವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲ ಎಂದು ಚೌಧರಿ ಆರೋಪಿಸಿದ್ದಾರೆ.

    ಘಟನಾ ಸ್ಥಳಕ್ಕೆ ಬಂದು ಪೊಲೀಸರು ಆ ಕೂಡಲೇ ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಆ ದಿನ ಅವರು ಎಫ್‍ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಹೀಗಾಗಿ ನಾನು ಡಿಸಿಪಿ ಪರಮ್ಜಿತ್ ಸಿಂಗ್ ಅವರನ್ನು ಭೇಟಿಯಾದೆ. ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪೊಲೀಸರು ಎಫ್‍ಆರ್ ದಾಖಲಿಸಿಕೊಂಡರು ಎಂದು ಸಂಘದ ಮತ್ತೊಬ್ಬ ಕಾರ್ಯಕರ್ತ ಸಂಜೀವ್ ಚೋಪ್ಡಾ ಆರೋಪಿಸಿದ್ದಾರೆ.

    ಚೌಧರಿ ಅವರು ಸುಮಾರು 500ಕ್ಕಿಂತಲೂ ಹೆಚ್ಚು ನಾಯಿ ಹಾಗೂ ಬೆಕ್ಕುಗಳಿಗೆ ಪ್ರತಿದಿನ ಆಹಾರ ನೀಡುತ್ತಿದ್ದಾರೆ. ಅದಕ್ಕಾಗಿ ಅವರು ಸುಮಾರು 80 ಕೆ.ಜಿ ಆಹಾರ ರೆಡಿ ಮಾಡುತ್ತಾರೆ. ಹೀಗೆ ರೆಡಿಯಾದ ಆಹಾರವನ್ನು ಬೀದಿ ಬೀದಿಗಳಿಗೆ ತಮ್ಮ ವಾಹನದಲ್ಲಿ ತೆರಳಿ ನಾಯಿ ಮತ್ತು ಬೆಕ್ಕುಗಳಿಗೆ ಆಹಾರ ನೀಡಿ ಬರುತ್ತಾರೆ ಎಂದು ಚೋಪ್ಡಾ ತಿಳಿಸಿದ್ದಾರೆ.

    ಸದ್ಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ಕಾರ್ಯಕರ್ತೆ ನೀಡಿದ ದೂರು ಹಾಗೂ ಹಾಗೂ ವಿಡಿಯೋ ಆಧರಿಸಿ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಎಣ್ಣೆ ಹೊಡೆಯೋದನ್ನೇ ಚಟ ಮಾಡ್ಕೊಂಡ ಮಂಗಣ್ಣ – ಪ್ರತಿನಿತ್ಯ ಬಾರ್‍ ಗೆ ಎಂಟ್ರಿ: ವಿಡಿಯೋ

    ಎಣ್ಣೆ ಹೊಡೆಯೋದನ್ನೇ ಚಟ ಮಾಡ್ಕೊಂಡ ಮಂಗಣ್ಣ – ಪ್ರತಿನಿತ್ಯ ಬಾರ್‍ ಗೆ ಎಂಟ್ರಿ: ವಿಡಿಯೋ

    ಬೆಂಗಳೂರು: ಕುಡಿತವನ್ನೇ ಚಟವಾಗಿ ಮಾಡಿಕೊಂಡಿರುವ ಕೋತಿಯೊಂದು ಪ್ರತಿನಿತ್ಯ ನಗರದ ಕಮ್ಮನಹಳ್ಳಿಯ ಬಾರ್ ಗೆ ಬರುತ್ತಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

    ದಿವಾಕರ್ ಎಂಬವರ ಬಾರಿಗೆ ಕೋತಿ ಬರುತ್ತಿದ್ದು, ಸೋಮವಾರ ಸಂಜೆ ವೇಳೆಯೂ ಬಾರ್‍ ಗೆ ಬಂದ ಕೋತಿಗೆ ಕೆಲ ಪುಂಡರು ಹೆಂಡ ಕುಡಿಸಿದ್ದಾರೆ. ನಂತರ ಕುಡಿದ ಮತ್ತಿನಲ್ಲಿ ಕೋತಿ ಬಾರ್ ನಲ್ಲಿ ಪುಂಡಾಟ ನಡೆಸಿದೆ.

    ಈ ವೇಳೆ ಕೋತಿ ಕಂಡ ಗ್ರಾಹಕರು ಟೇಬಲ್ ಬಿಟ್ಟು ಓಡಿ ಹೋಗಿದ್ದಾರೆ. ಸ್ಥಳೀಯರ ಮೇಲೂ ಕೋತಿ ದಾಳಿ ನಡೆಸಲು ಯತ್ನಿಸಿದೆ. ಇದರಿಂದ ಸ್ಥಳೀಯರು ಪ್ರಾಣಿ ದಯಾ ಸಂಘಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳ್ಕಕೆ ಆಗಮಿಸಿದ ಪ್ರಾಣಿ ದಯಾ ಸಂಘದವರು ರಾತ್ರಿ 2:30 ವರೆಗೂ ಕೋತಿಯನ್ನು ಕಷ್ಟಪಟ್ಟು ಹಿಡಿದು ರಕ್ಷಿಸಿದ್ದಾರೆ. ಕೋತಿಗೆ ಹೆಂಡ ಕುಡಿಸಿದವರ ಮೇಲೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

    https://www.youtube.com/watch?v=P3ANAgU7Hg4