Tag: ಪ್ರಾಣಿಬಲಿ

  • ರಕ್ತಾಭಿಷೇಕ ನಡೆದಿದ್ದು ಬಲಪಡಿಸೋದಕ್ಕಲ್ಲ, ನನ್ನ ವಶೀಕರಣಕ್ಕೆ – ಸ್ನೇಹಮಯಿ ಕೃಷ್ಣ ದೂರು

    ರಕ್ತಾಭಿಷೇಕ ನಡೆದಿದ್ದು ಬಲಪಡಿಸೋದಕ್ಕಲ್ಲ, ನನ್ನ ವಶೀಕರಣಕ್ಕೆ – ಸ್ನೇಹಮಯಿ ಕೃಷ್ಣ ದೂರು

    ಮೈಸೂರು: ಮುಡಾ ಪ್ರಕರಣದ (MUDA Case) ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಪೋಟೋಗೆ ರಕ್ತದ ಅಭಿಷೇಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೂಜೆ ಮಾಡಿದ್ದು, ಶಕ್ತಿ ತುಂಬಲು ಅಲ್ಲ ವಶೀಕರಣಕ್ಕೆ ಎಂದು ಸ್ನೇಹಮಯಿ ಕೃಷ್ಣ (Snehamayi Krishna) ಗಂಭೀರ ಆರೋಪ ಮಾಡಿ ಮಂಗಳೂರು ಪೊಲೀಸ್ ಕಮಿಷನರ್‌ಗೆ (Mangaluru Police Commissioner) ಸ್ನೇಹಮಯಿಕೃಷ್ಣ ಲಿಖಿತ ದೂರು ನೀಡಿದ್ದಾರೆ.

    ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 13/2025 ಸಂಖ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ತಿಳಿದುಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಸ್ನೇಹಮಯಿ ಕೃಷ್ಣ ಕೈಬಲಪಡಿಸಲು ಮಂಗಳೂರಲ್ಲಿ ಪ್ರಾಣಿಬಲಿ ಶಂಕೆ

    ಮುಡಾ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುರವರಿಗೆ ಬಲ ತುಂಬುವ ಸಲುವಾಗಿ ಈ ರೀತಿ ಮಾಡಲಾಗಿದೆ ಎಂದು ಹೇಳಿರುತ್ತೀರಿ. ಆದರೆ ನನ್ನ ಅನುಭವ ಮತ್ತು ಲಭ್ಯವಿರುವ ಮಾಹಿತಿ ಪ್ರಕಾರ ನಮಗೆ ಬಲ ತುಂಬುವ ಸಲುವಾಗಿ ಈ ಕೃತ್ಯ ನಡೆಸಿರುವುದಿಲ್ಲ. ನಮ್ಮನ್ನು ವಶೀಕರಣ ಮಾಡಿಕೊಂಡು, ಆಮೀಷಕ್ಕೆ ಒಳಪಡಿಸಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಅನುಕೂಲ ಮಾಡಿಕೊಡಬೇಕು. ಮುಡಾ ಹೋರಾಟದಿಂದ ಹಿಂದೆ ಸರಿಯಬೇಕು ಅಂತ ಹೀಗೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರೆ. ಇದನ್ನೂ ಓದಿ: ಬಜೆಟ್‌ ಮಂಡನೆ ವೇಳೆ ನಿರ್ಮಲಾ ಉಲ್ಲೇಖಿಸಿದ ಕವಿತೆ ಬರೆದ ಗುರಜದ ವೆಂಕಟ ಅಪ್ಪರಾವ್ ಯಾರು ಗೊತ್ತಾ?

    ಅದರಲ್ಲೂ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಹಿಂದಕ್ಕೆ ಪಡೆಯಬೇಕು. ಈ ದುರುದ್ದೇಶದಿಂದ ಈ ಕೃತ್ಯವನ್ನು ನಡೆಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಸಾಕ್ಷ್ಯಾಧಾರಗಳನ್ನು ನೀಡುತ್ತಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ಮಂಗಳೂರು ಕಮಿಷನರ್‌ಗೆ ಲಿಖಿತ ದೂರು ನೀಡಿದ್ದಾರೆ. ಇದನ್ನೂ ಓದಿ: ಅನಗತ್ಯ ವೆಚ್ಚ, ಲೂಟಿಗೆ ಕಡಿವಾಣ ಹಾಕಿ ಅತ್ಯಧಿಕ ಗಾತ್ರದ ಬಜೆಟ್‌ ಮಂಡಿಸಿದ ಕೇಂದ್ರ ಸರ್ಕಾರ: ಆರ್‌.ಅಶೋಕ್

  • ಸ್ನೇಹಮಯಿ ಕೃಷ್ಣ ಕೈಬಲಪಡಿಸಲು ಮಂಗಳೂರಲ್ಲಿ ಪ್ರಾಣಿಬಲಿ ಶಂಕೆ

    ಸ್ನೇಹಮಯಿ ಕೃಷ್ಣ ಕೈಬಲಪಡಿಸಲು ಮಂಗಳೂರಲ್ಲಿ ಪ್ರಾಣಿಬಲಿ ಶಂಕೆ

    – ನನ್ನ ಕುಗ್ಗಿಸಲು ಹಲವು ಪ್ರಯತ್ನ ನಡೆದಿದೆ ಎಂದ ಸಾಮಾಜಿಕ ಕಾರ್ಯಕರ್ತ
    – ಪ್ರಸಾದ್ ಅತ್ತಾವರ ವಿರುದ್ಧ ಮತ್ತೊಂದು ಎಫ್‌ಐಆರ್

    ಮೈಸೂರು: ಮುಡಾ ಹಗರಣ (MUDA Case) ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಸ್ನೇಹಿಮಯಿ ಕೃಷ್ಣ (Snehamayi Krishna) ಅವರನ್ನು ಬಲಪಡಿಸಲು ಪ್ರಾಣಿಬಲಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ.

    ಮಂಗಳೂರಿನಲ್ಲಿ (Mangaluru) ಸ್ನೇಹಮಯಿ ಕೃಷ್ಣ ಅವರ ಹೆಸರಿನಲ್ಲಿ ವಾಮಾಚಾರ ನಡೆದಿದೆ ಎನ್ನಲಾಗಿದೆ. ದೇವಿ ಮುಂದೆ ಸ್ನೇಹಮಯಿ ಕೃಷ್ಣ ಅವರ ಭಾವಚಿತ್ರ ಇಡಲಾಗಿದೆ. ಜೊತೆಗೆ ದೇವಿಗೆ ರಕ್ತಾಭಿಷೇಕ ಮಾಡಿರುವ ಫೋಟೋ ರಿವೀಲ್ ಆಗಿದೆ. ಇದನ್ನೂ ಓದಿ: ಮುಡಾ ಹಗರಣದಲ್ಲಿ ಅಕ್ರಮ ಹಣದ ವರ್ಗಾವಣೆಯಾಗಿದೆ – ಇಡಿಯಿಂದ ಸಬ್ ರಿಜಿಸ್ಟ್ರಾರ್‌ಗಳಿಗೆ 104 ಪುಟಗಳ ಪತ್ರ

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಪರವಾಗಿ ಅಥವಾ ನನಗೆ ಶಕ್ತಿ ತುಂಬಲು ಈ ರೀತಿ ಮಾಡಿಲ್ಲ. ಹರ್ಷ ಮತ್ತು ಶ್ರೀನಿಧಿ ನನ್ನ ಬಳಿಗೆ ಪಾರ್ವತಿ ಸಿದ್ದರಾಮಯ್ಯ ಪರವಾಗಿ ಬಂದಿದ್ದರು. ಅವರ ಪರವಾಗಿ ಬಂದು ಆಮಿಷವೊಡ್ಡಿದ್ದರು. ಇದರಿಂದ ನನ್ನ ಪರ ಹೇಗೆ ಅನ್ನುವುದು ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

    ಬ್ಲಾಕ್ ಟೀ ಶರ್ಟ್ ಹಾಕಿರುವ ವ್ಯಕ್ತಿ ನಮ್ಮ ಬಾಸ್ ಅಂತ ಶ್ರೀನಿಧಿ ಮತ್ತು ಹರ್ಷ ನನ್ನ ಮಗನಿಗೆ ಪೋಟೋ ತೋರಿಸಿದ್ದಾರೆ. ಇವರು ಮಂಗಳೂರಿನಲ್ಲಿ ಇದ್ದಾರೆ. ಇವರು ಹೇಳಿದ್ದಂತೆ ಮಾಡುತ್ತೇವೆ ಎಂದಿದ್ದರು. ನನ್ನ ಪರವಾಗಿ ಅಲ್ಲ, ನನ್ನ ವಶಪಡಿಸಿಕೊಳ್ಳಲು ಈ ರೀತಿ ಮಾಡಿರಬಹುದು. ಹಲವು ರೀತಿ ನನ್ನ ಕುಗ್ಗಿಸುವ ಹಲವು ಪ್ರಯತ್ನ ನಡೆದಿದೆ. ಅದರಲ್ಲಿ ಇದು ಒಂದಾಗಿದೆ ಎಂದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪರ ನಾವೆಲ್ಲ ನಿಂತುಕೊಳ್ತೀವಿ – ಪರಮೇಶ್ವರ್

    ಅವರು ಏನೇ ಪ್ರಯತ್ನ ಪಟ್ಟರೂ, ನನ್ನ ಹೋರಾಟ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.

    ಸಲೂನ್‌ವೊಂದರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ವಿಚಾರಣೆ ವೇಳೆ ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿ ಪ್ರಾಣಿ ಬಲಿ ಕೊಟ್ಟಿರುವ ಫೋಟೋ ಬಯಲಾಗಿದೆ. ಹಣ ತುಂಬಿದ ಬ್ಯಾಗ್‌ನ ಫೋಟೋವನ್ನು ಹೆಂಡತಿಗೆ ಪ್ರಸಾದ್ ಕಳುಹಿಸಿದ್ದ. ಇದನ್ನೂ ಓದಿ: ಮುಡಾ 50:50 ಸೈಟು ಹಗರಣ – ಜೆಡಿಎಸ್‌ ಶಾಸಕ ಜಿಟಿಡಿ, ಪುತ್ರ ಹರೀಶ್‌ ಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಎಲ್ಲವನ್ನೂ ಉಲ್ಲೇಖಿಸಿದ್ದಾರೆ. ಪೂಜೆಯ ಮಧ್ಯವರ್ತಿಯಾಗಿ ಪ್ರಸಾದ್ ಅತ್ತಾವರ ಭಾಗವಹಿಸಿರುವ ಶಂಕೆ ವ್ಯಕ್ತವಾಗಿದೆ.