Tag: ಪ್ರಾಣಿಗಳು

  • ಭಾರತ್ ಜೋಡೋ ಯಾತ್ರೆಗೆ ಶ್ವಾನ, ಹಸು, ಹಂದಿಗಳೂ ಬಂದಿವೆ – ರಾಗಾ

    ಭಾರತ್ ಜೋಡೋ ಯಾತ್ರೆಗೆ ಶ್ವಾನ, ಹಸು, ಹಂದಿಗಳೂ ಬಂದಿವೆ – ರಾಗಾ

    ನವದೆಹಲಿ: ಕಾಂಗ್ರೆಸ್ (Congress) ಬಲವರ್ಧನೆಗೆ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ದೆಹಲಿ ಪ್ರವೇಶಿಸಿದೆ. ರಾಹುಲ್ ಗಾಂಧಿ (RahulGandhi) ಅವರ ನೇತೃತ್ವದಲ್ಲಿ ನಡೆಯುತ್ತಿರೋ ಈ ಯಾತ್ರೆ ದ್ವೇಷ-ಹಿಂಸೆಗಳಿಲ್ಲದ ಭಾರತದ ಪ್ರತಿರೂಪ ಎಂದು ಜನರು ಹೇಳುತ್ತಿದ್ದಾರೆ.

    ವಿಶೇಷವೆಂದರೆ ಈ ಯಾತ್ರೆಯಲ್ಲಿ ಸಾರ್ವಜನಿಕರನ್ನು ಮಾತ್ರವಲ್ಲದೇ ಪ್ರಾಣಿಗಳನ್ನು ಸ್ವಾಗತಿಸಲಾಗಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ಥಳೀಯ, ವಿದೇಶಿ ಎನ್‌ಜಿಒಗಳಲ್ಲಿ ಮಹಿಳೆ ಉದ್ಯೋಗಿಗಳಿಗೆ ಅವಕಾಶ ಕೊಡ್ಬೇಡಿ – ತಾಲಿಬಾನ್‌ ಆದೇಶ

    ದೆಹಲಿಯ ಕೆಂಪು ಕೋಟೆಯಲ್ಲಿ `ಭಾರತ್ ಜೋಡೋ ಯಾತ್ರೆ’ಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ನಾಯಿಗಳು, ಹಂದಿಗಳು, ಹಸುಗಳೂ ಸೇರಿದಂತೆ ಎಲ್ಲ ಪ್ರಾಣಿಗಳೂ ಬಂದಿವೆ. ಆದರೆ ಯಾವುದಕ್ಕೂ ಕೆಡಕುಂಟು ಮಾಡಿಲ್ಲ. ಎಲ್ಲ ಜನರು ನನ್ನೊಟ್ಟಿಗೆ ಬಂದಿದ್ದಾರೆ. ನಾನು 2,800 ಕಿಮೀ ನಡೆದಿದ್ದೇನೆ. ಆದ್ರೆ ಅಲ್ಲೆಲ್ಲೂ ಯಾವುದೇ ದ್ವೇಷವನ್ನು ನೋಡಲಿಲ್ಲ. ಆದರೆ ಟಿವಿ ಆನ್ ಮಾಡಿದಾಗ, ನಾನು ಹಿಂಸೆಯನ್ನು ನೋಡುತ್ತಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಬಿಜೆಪಿ (BJP) ನನ್ನ ಇಮೇಜ್ ಡ್ಯಾಮೇಜ್ ಮಾಡಲು ಸಾವಿರಾರು ಕೋಟಿ ಖರ್ಚು ಮಾಡಿದೆ. ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ದಿನದ 24 ಗಂಟೆಯೂ ಹಿಂದೂ-ಮುಸ್ಲಿಮರ (Hindu Muslims) ನಡುವೆ ದ್ವೇಷವನ್ನು ಹರಡುತ್ತಿದೆ. ಭಿನ್ನಾಭಿಪ್ರಾಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ದ್ವೇಷವನ್ನು ಹರಡುತ್ತಿದೆ. ಇದು ನರೇಂದ್ರ ಮೋದಿಯವರ (Narendra Modi) ಸರ್ಕಾರವಲ್ಲ. ಇದು ಅಂಬಾನಿ ಮತ್ತು ಅದಾನಿ ಸರ್ಕಾರ. ಇಂದು ಪದವಿ ಪಡೆದ ಯುವಕರು ಪಕೋಡಾಗಳನ್ನು ಮಾರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್‌ ಏರ್‌ವೇಸ್‌ಗೆ 3 ಲಕ್ಷ ದಂಡ

    ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಂಚರಿಸಿ ಈಗ ಹರಿಯಾಣ ಬಳಿಕ ಮತ್ತೆ ದೆಹಲಿ ಪ್ರವೇಶಿಸಿದೆ. ಜ.3 ರಿಂದ ಮತ್ತೆ ಯಾತ್ರೆ ಆರಂಭಿಸಿ ಅಂತಿಮವಾಗಿ ಕಾಶ್ಮೀರದಲ್ಲಿ ಯಾತ್ರೆ ಸಮಾಪ್ತಿಗೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • ಲಂಪಿ ರೋಗ: ರಾಜಸ್ಥಾನದಲ್ಲಿ 12 ಸಾವಿರಕ್ಕೂ ಹೆಚ್ಚು ಮೂಕಪ್ರಾಣಿಗಳು ಬಲಿ

    ಲಂಪಿ ರೋಗ: ರಾಜಸ್ಥಾನದಲ್ಲಿ 12 ಸಾವಿರಕ್ಕೂ ಹೆಚ್ಚು ಮೂಕಪ್ರಾಣಿಗಳು ಬಲಿ

    ಜೈಪುರ: ದೇಶದ ಹಲವು ರಾಜ್ಯಗಳಲ್ಲಿ ಜಾನುವಾರುಗಳನ್ನು ಲಂಪಿ ಚರ್ಮರೋಗ ಬಿಟ್ಟು ಬಿಡದೇ ಕಾಡುತ್ತಿದೆ.

    ಈ ಮಾರಕ ರೋಗದ ಕಾರಣ ಕೇವಲ ರಾಜಸ್ಥಾನವೊಂದರಲ್ಲೇ 12 ಸಾವಿರ ಮೂಕಜೀವಿಗಳು ಸಾವನ್ನಪ್ಪಿವೆ. ಇದರಿಂದ ಎಚ್ಚೆತ್ತ ರಾಜಸ್ಥಾನ ಸರ್ಕಾರ, ಜಾನುವಾರು ಸಂತೆಗಳನ್ನು ನಿಷೇಧಿಸಿದೆ. ರಾಜಸ್ಥಾನದಲ್ಲಿ ಈವರೆಗೂ 2.81 ಲಕ್ಷ ಹಸುಗಳನ್ನು ಲಂಪಿ ರೋಗ ಬಾಧಿಸಿದೆ. ಇದನ್ನೂ ಓದಿ: ಶಂಕಾಸ್ಪದ ಆಧಾರದಲ್ಲಿ ಆರೋಪಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ: ಸುಪ್ರೀಂ

    ಶ್ರೀಗಂಗಾನಗರ ಜಿಲ್ಲೆಯೊಂದರಲ್ಲಿಯೇ 2,511ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ. ನಂತರ ಬಾರ್ಮರ್‌ನಲ್ಲಿ 1,619, ಜೋಧ್‍ಪುರದಲ್ಲಿ 1,581, ಬಿಕಾನೇರ್‌ನಲ್ಲಿ 1,156, ಜಾಲೋರ್‌ನಲ್ಲಿ 1,150 ಮತ್ತು ಜಾಲೋರ್‌ನಲ್ಲಿ 1,138 ಸಾವುಗಳು ವರದಿಯಾಗಿವೆ ಇನ್ನು, ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಅಂಡಮಾನ್ ನಿಕೋಬಾರ್‌ನಲ್ಲಿ ನೂರಾರು ಸಂಖ್ಯೆಯ ಪಶುಗಳು ಸಾವನ್ನಪ್ಪಿವೆ.

    ಸಾವಿರಾರು ಮೂಕಜೀವಗಳು ಲಂಪಿ ರೋಗಕ್ಕೆ ತತ್ತರಿಸಿವೆ. ಇದಕ್ಕೆ 2 ಸ್ವದೇಶಿ ಲಸಿಕೆಗಳನ್ನು ಐಸಿಎಂಆರ್ ಕಂಡು ಹಿಡಿದಿದೆ. ಇದನ್ನು ಆದಷ್ಟು ಬೇಗ ಉತ್ಪತ್ತಿ ಮಾಡಲು ಕೇಂದ್ರ ಪ್ಲಾನ್ ಮಾಡುತ್ತಿದೆ. ಇದನ್ನೂ ಓದಿ: ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಹೆಚ್ಚಿದ ಒತ್ತಡ – ಜಮೀರ್ ಬಾಯಿ ಮುಚ್ಚಿಸಿರೋ ಕಾಂಗ್ರೆಸ್ ನಾಯಕರು

    Live Tv
    [brid partner=56869869 player=32851 video=960834 autoplay=true]

  • ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆ – ಶೇ.40 ರಿಂದ 70ರಷ್ಟು ಮರಣ ಸಾಧ್ಯತೆ

    ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆ – ಶೇ.40 ರಿಂದ 70ರಷ್ಟು ಮರಣ ಸಾಧ್ಯತೆ

    ಬೀಜಿಂಗ್: ಕೊರೊನಾದಿಂದ ಜಗತ್ತು ಇನ್ನೂ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇಂತಹ ಸಂದರ್ಭದಲ್ಲಿಯೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ.

    ಚೀನಾದಲ್ಲಿ ಪ್ರಾಣಿಗಳಿಂದ ಮತ್ತೊಂದು ವೈರಸ್ ಮನುಷ್ಯರಿಗೆ ಸೋಕಿದೆ. ಪ್ರಾಣಿಗಳಿಂದ ವ್ಯಾಪಿಸುವ ಲಾಂಗ್ಯ ಹೆನಿಪಾ ವೈರಸ್ 35ಕ್ಕೂ ಹೆಚ್ಚು ಮಂದಿಯಲ್ಲಿ ಪತ್ತೆ ಆಗಿದೆ. ಲಾಂಗ್ಯ ಹೆನಿಪಾ ವೈರಸನ್ನು ಬಯೋಸೇಫ್ಟಿ ಲೆವೆಲ್-4 ವೈರಸ್ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತ ರಾಹುಲ್ ಭಟ್‌ನನ್ನು ಕೊಂದಿದ್ದ ಭಯೋತ್ಪಾದಕನ ಎನ್‌ಕೌಂಟರ್

    ಇದು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ತೀವ್ರ ಸ್ವರೂಪದ ಅನಾರೋಗ್ಯ ಉಂಟು ಮಾಡುತ್ತದೆ ಎಂದು ಎಚ್ಚರಿಸಿದೆ. ಮರಣ ಸಾಧ್ಯತೆ ಶೇಕಡಾ 40 ರಿಂದ 75ರಷ್ಟಿದೆ ಎಂದು ಹೇಳಿದೆ. ಅಂದ ಹಾಗೇ ಲಾಂಗ್ಯ ಹೆನಿಪಾ ವೈರಸ್ ವ್ಯಾಪ್ತಿ ನಿವಾರಣೆಗೆ ಯಾವುದೇ ಔಷಧಿ ಇಲ್ಲ. ಕೇವಲ ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ಲಭ್ಯವಿದೆ ಎಂದಿದೆ. ಇದನ್ನೂ ಓದಿ: ಮೋದಿ ಗೆದ್ದಿರೋದು 2024ರಲ್ಲಿ ಅಲ್ಲ, ಮೈತ್ರಿ ಮುರಿದ ಬಳಿಕ ಸಿಎಂ ನಿತೀಶ್ ವಾಗ್ದಾಳಿ

    ಏನಿದು ಲಾಂಗ್ಯ ಹೆನಿಪಾ ವೈರಸ್?
    ಇದು ಬಾವಲಿಯಿಂದ ಹಬ್ಬುವ ನಿಫಾ ವೈರಸ್ ತಳಿಗೆ ಸೇರಿದ್ದು, ನಿಫಾ, ಕೋವಿಡ್ ವೈರಸ್ ಮಾದರಿಯಲ್ಲಿ ಹಬ್ಬುವ ಸಾಮರ್ಥ್ಯ ಹೊಂದಿದೆ. ಮೇಕೆ, ನಾಯಿಗಳಲ್ಲಿಯೂ ಲಾಂಗ್ಯ ಹೆನಿಪಾ ವೈರಸ್ ಪತ್ತೆಯಾಗಿದೆ. 2019ರಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಪತ್ತೆಯಾಗಿತ್ತು. 2020ರ ಜುಲೈ ನಂತರ 11, ಲಾಂಗ್ಯ ವೈರಸ್ ತಳಿ ಪತ್ತೆಯಾಗಿತ್ತು. ಪ್ರಸಕ್ತ ವರ್ಷದಲ್ಲಿ ಸೋಂಕಿನ ಹೆಚ್ಚು ಕೇಸ್ ನಮೂದಾಗಿದೆ. ಜ್ವರ, ಕೆಮ್ಮು, ವಾಂತಿ, ಸುಸ್ತು, ಸ್ನಾಯು ನೋವು, ಪ್ಲೇಟ್‌ಲೆಟ್ಸ್ ಸಂಖ್ಯೆ ಕುಸಿತ, ಹಸಿವು ಇಲ್ಲದಿರುವಿಕೆಯ ಲಕ್ಷಣಗಳನ್ನು ಒಳಗೊಂಡಿದೆ. ಸೋಂಕಿನ ಅಪಾಯದ ಹಾನಿ, ತೀವ್ರತೆ ಬಗ್ಗೆ ಸಂಶೋಧನೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ದರ್ಶನ್ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಉಪೇಂದ್ರ

    ದರ್ಶನ್ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಉಪೇಂದ್ರ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿರುವ ಪ್ರಾಣಿಗಳನ್ನ ದತ್ತು ಪಡೆಯುವ ಕರೆಗೆ ರಿಯಲ್ ಸ್ಟಾರ್ ಉಪೇಂದ್ರ ಓಗೊಟ್ಟಿದ್ದಾರೆ. ಉಪೇಂದ್ರ ಮೈಸೂರಿನ ಮೃಗಾಲಯದಿಂದ ಆಫ್ರಿಕನ್ ಆನೆಯನ್ನ ದತ್ತು ಪಡೆದುಕೊಂಡಿರುವ ವಿಷಯವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಪ್ರಾಣಿಗಳೇ ಗುಣದಲಿ ಮೇಲು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರೆಯಂತೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಘಾಲಯ ದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ ಎಂದು ಬರೆದು ಮೃಗಾಲಯ ನೀಡಿರುವ ಪ್ರಮಾಣ ಪತ್ರವನ್ನ ಶೇರ್ ಮಾಡಿಕೊಂಡಿದ್ದಾರೆ.

    ಉಪೇಂದ್ರ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದರ್ಶನ್, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆಫ್ರಿಕನ್ ಆನೆ ದತ್ತು ಪಡೆದ ಶ್ರೀ ಉಪೇಂದ್ರ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಕೊರೊನಾ ಅನ್ನೋ ಮಹಾಮಾರಿ ಇಡೀ ಜೀವಸಂಕುಲವನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಇದಕ್ಕೆ ಪ್ರಾಣಿಗಳೂ ಸಹ ಹೊರತಾಗಿಲ್ಲ. ಕಳೆದ ಒಂದೂವರೆ ವರ್ಷದಿಂದ ಜನ ಸಹ ಮೃಗಾಲಯಗಳತ್ತ ಬರ್ತಿಲ್ಲ. ಹೀಗಾಗಿ ಕೊರೊನಾ ಹಿಡಿತಕ್ಕೆ ಕರ್ನಾಟಕದ ಮೃಗಾಲಯಗಳು ಸಂಕಷ್ಟದಲ್ಲಿ ಸಿಲುಕಿ, ಝೂ ನಿರ್ವಹಣೆಗೂ ಕಷ್ಟಪಡುವಂತಾಗಿತ್ತು. ಪ್ರಾಣಿಗಳ ವೇದನೆ, ಕಷ್ಟ ಸಾರಥಿಗೆ ಆಘಾತವನ್ನುಂಟು ಮಾಡಿತ್ತು. ಮೊದಲೇ ಯಜಮಾನನಿಗೆ ಪ್ರಾಣಿಗಳಂದ್ರೆ ಇಷ್ಟ. ಕೊರೊನಾ ಕಾಲದಲ್ಲಿ ಪ್ರಾಣಿಗಳ ಕಷ್ಟ ನೋಡಲಾಗದೇ ಮಹಾಯಜ್ಞಕ್ಕೆ ಕೈ ಹಾಕಿದ್ರು ಚಾಲೆಂಜಿಂಗ್ ಸ್ಟಾರ್.. ಚಕ್ರವರ್ತಿಯ ಒಂದು ಕರೆಗೆ ಇಡೀ ಕರುನಾಡು ಸಾಥ್ ನೀಡಿದೆ. ಇದೀಗ ದಾಸನ ಈ ಕರೆಗೆ ಚಂದನವನದ ತಾರೆಗಳು ಸಹ ಕೈ ಜೋಡಿಸ್ತಿದ್ದಾರೆ.

  • ರಾಜ್ಯದ ಯಾವುದೇ ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲಿಲ್ಲ- ಪ್ರಾಧಿಕಾರದ ಕಾರ್ಯದರ್ಶಿ ಸ್ಪಷ್ಟನೆ

    ರಾಜ್ಯದ ಯಾವುದೇ ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲಿಲ್ಲ- ಪ್ರಾಧಿಕಾರದ ಕಾರ್ಯದರ್ಶಿ ಸ್ಪಷ್ಟನೆ

    ಮೈಸೂರು: ರಾಜ್ಯದ ಯಾವುದೇ ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲಿಲ್ಲ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಸ್ಪಷ್ಟಪಡಿಸಿದ್ದಾರೆ.

    ರಾಜ್ಯದಲ್ಲಿ ಒಟ್ಟು 5 ಮೃಗಾಲಯಗಳಲ್ಲಿ ಸಿಂಹ, ಚಿರತೆ ಹಾಗೂ ಹುಲಿಗಳಿವೆ. ಈ ಪ್ರಾಣಿಗಳಿಗೆ ಮಾತ್ರ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ. ಆದರೆ ಯಾವುದೇ ಪ್ರಾಣಿಗಳಿಗೆ ಸೋಂಕಿನ ಲಕ್ಷಣ ಕಾಣಿಸಿಲ್ಲ. ನಾವು ಕೇಂದ್ರದ ಎಲ್ಲ ಮಾರ್ಗಸೂಚಿ ಅನುಸಿರಿಸಿದ್ದೇವೆ. ನಮ್ಮ ನಿರ್ದೇಶಕರು ಅಲ್ಲಿನ ಜನರ ಜೊತೆ ಮಾತನಾಡಿದ್ದಾರೆ. ಸೋಂಕು ತಗುಲಿದ ಪ್ರಾಣಿಗೆ ಕೆಮ್ಮು ಬರುತ್ತೆ. ನಂತರ ಊಟ ಬಿಡುತ್ತವೆ. ನಮ್ಮಲ್ಲಿ ಆ ರೀತಿಯ ಸಮಸ್ಯೆ ಇರುವ ಯಾವುದೇ ಪ್ರಾಣಿಗಳು ಇಲ್ಲ ಎಂದು ತಿಳಿಸಿದರು.

    ಬಹುಶಃ ಹೈದರಾಬಾದ್ ಮೃಗಾಲಯದಲ್ಲಿ ಅಸಿಂಪ್ಟಮೆಟಿಕ್ ಕೀಪರ್ ನಿಂದ ಸೋಂಕು ಬಂದಿರಬಹುದು. ಅಲ್ಲಿನ ಪ್ರಾಣಿಗಳಿಗೆ ಬೂಸ್ಟರ್ ಕೊಡುತ್ತಾರೆ. ನಾವು ಆ ರೀತಿಯ ಸಮಸ್ಯೆ ಆದರೆ ನೀರಿನಲ್ಲಿ ಬೂಸ್ಟರ್ ಕೊಡುತ್ತೇವೆ. ಸದ್ಯ ರಾಜ್ಯದ ಮೃಗಾಲಯದ ಪ್ರಾಣಿಗಳಿಗೆ ಕೊರೊನಾ ಆತಂಕ ಇಲ್ಲ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹೇಳಿದ್ದಾರೆ.

  • ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ: ಲಿಂಬಾವಳಿ

    ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ: ಲಿಂಬಾವಳಿ

    ಚಾಮರಾಜನಗರ: ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

    ಗಡಿ ಜಿಲ್ಲೆಯ ಬಂಡೀಪುರಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೇಸಿಗೆ ಆರಂಭವಾಗಿದೆ, ಈ ಹಿನ್ನಲೆಯಲ್ಲಿ ಕಾಡಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬೇಸಿಗೆ ಇರುವುದರಿಂದ ಪ್ರಾಣಿಗಳ ಸಮಸ್ಯೆ ಕೂಡ ಆಲಿಸಲಾಗಿದೆ. ಸೋಲಾರ್ ಪಂಪ್ ಗಳ ಮೂಲಕ ಕೆಲವೆಡೆ ನೀರು ತುಂಬಿಸಲಾಗುತ್ತಿದೆ. ಮುಂದಿನ ಬೇಸಿಗೆ ವೇಳೆಗೆ ಪ್ರಾಣಿಗಳಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ತೊಂದರೆಯಾಗದಂತೆ ಕ್ರಮವಹಿಸುವಂತೆ ತಿಳಿಸಿದರು.

    ಇದೇ ವೇಳೆ ಹುಲಿಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಟ್ಟಿಗೆ ಬಂಡೀಪುರ ಫಾರೆಸ್ಟ್ ರೌಂಡ್ ಹಾಕಿದ್ದರು. ಈ ವೇಳೆ ಎರಡು ಕಡೆ ಹುಲಿ ಪ್ರತ್ಯಕ್ಷವಾಗಿವೆ. ತೀರಾ ಅಪರೂಪಕ್ಕೆ ದರ್ಶನ ಕೊಡುವ ಹುಲಿಗಳು ಸಚಿವರಿಗೆ ಎರಡು ಕಡೆ ದರ್ಶನ ಕೊಟ್ಟಿರೋದು ವಿಶೇಷ. ಬಂಡೀಪುರದ ಕಡುಬನಕಟ್ಟೆ, ಗಾರೆಪಾಲದ ಬಳಿ ಹುಲಿ ದರ್ಶನವಾಗಿದೆ. ಕಡುಬನಕಟ್ಟೆ ಬಳಿ ನೀರಿನಲ್ಲಿ ಕುಳಿತಿದ್ದ ಹುಲಿ ದರ್ಶನವಾಗಿದೆ. ಇದರ ಜೊತೆಗೆ ಆನೆಗಳ ಹಿಂಡಿನ ದರ್ಶನ ಸಹ ಆಗಿದೆ.

  • ಆಗುಂಬೆ, ಸೋಮೇಶ್ವರದಲ್ಲಿ ಪ್ರಾಣಿಗಳಿಗೆ ತಿಂಡಿ ಕೊಟ್ರೆ ಕೇಸ್

    ಆಗುಂಬೆ, ಸೋಮೇಶ್ವರದಲ್ಲಿ ಪ್ರಾಣಿಗಳಿಗೆ ತಿಂಡಿ ಕೊಟ್ರೆ ಕೇಸ್

    – ವಾಹನ ವಾಶ್ ಮಾಡಿದ್ರೂ ಫೈನ್

    ಉಡುಪಿ: ಆಗುಂಬೆ ಘಾಟಿ ಸೋಮೇಶ್ವರದಲ್ಲಿ ಕೋತಿ, ಲಂಗೂರ್ ಗಳು ಸಿಕ್ಕಿತು ಅಂತ ಇನ್ನು ಮುಂದೆ ನೀವೇನಾದರೂ ತಿಂಡಿ ಪ್ಯಾಕೆಟ್ಟುಗಳನ್ನು ಎಸೆದರೆ, ಚಿಪ್ಸ್, ಜಂಕ್ ಫುಡ್ ಕೊಟ್ಟರೆ ಅರಣ್ಯಾಧಿಕಾರಿಗಳಿಗೂ ನೀವು ದಂಡ ಬೇಕಾಗುತ್ತದೆ.

    ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ತಿನ್ನಿಸುವವರು ಮತ್ತು ರಸ್ತೆ ಬದಿ ಆಹಾರ ಪೊಟ್ಟಣಗಳನ್ನು ಎಸೆಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು ವಾರಾಂತ್ಯದಲ್ಲಿ ಕಾರ್ಯಾಚರಣೆಗೆ ಇಳಿದಿದೆ.

    ಸೋಮೇಶ್ವರದಿಂದ ಆಗುಂಬೆವರೆಗಿನ 10ಕಿ.ಮೀ. ರಸ್ತೆಯುದ್ದಕ್ಕೂ ಹೆಬ್ರಿ, ಕಾರ್ಕಳ, ಅಮಾಸೆಬೈಲು ಮತ್ತು ಸಿದ್ಧಾಪುರ ವನ್ಯಜೀವಿ ವಿಭಾಗದ ಸುಮಾರು 40 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಣಿಗಳಿಗೆ ಆಹಾರ ತಿನಿಸುವ ಮತ್ತು ರಸ್ತೆ ಬದಿ ಆಹಾರ ಪೊಟ್ಟಣ, ಪ್ಲಾಸ್ಟಿಕ್ ಎಸೆಯುವ ವಾಹನ ಚಾಲಕರಿಂದ ದಂಡ ವಸೂಲಿ ಮಾಡಲಾಗ್ತಿದೆ. ರಸ್ತೆ ಬದಿ ಆಹಾರ ಎಸೆದ ಮೂವರಿಂದ ಅರಣ್ಯ ಇಲಾಖೆ ಸಿಬ್ಬಂದಿ ದಂಡ ವಸೂಲಿ ಮಾಡಿದರು.

    ಅದೇ ರೀತಿ ಸೋಮೇಶ್ವರದಲ್ಲಿ ಘಾಟಿ ಆರಂಭದ ಸೋಮೇಶ್ವರದಲ್ಲಿ ಮತ್ತು ಆಗುಂಬೆ ಕೊನೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ನಡೆಸಿದರು. ಜಾಗೃತಿ ಫಲಕಗಳನ್ನು ನೆಟ್ಟು ಜನಜಾಗೃತಿ ಮೂಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಸಿದ್ಧಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಭಗವಸ್‍ದಾಸ್ ಕುಡ್ತಲ್‍ಕರ್, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಅಮಾಸೆಬೈಲು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ನಾಲ್ಕು ವಲಯಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

    ಹೆಬ್ರಿ ವಲಯ ವನ್ಯಜೀವಿ ಅರಣ್ಯಾಧಿಕಾರಿ ಅನಿಲ್ ಕುಮಾರ್ ಮಾತನಾಡಿ, ನಿಗದಿ ಪಡಿಸಿದ ದಂಡ ರಸ್ತೆಬದಿ ತ್ಯಾಜ್ಯ, ಪ್ಲಾಸ್ಟಿಕ್ ಕಸ ಇತ್ಯಾದಿ ಎಸೆಯುವುದಕ್ಕೆ 100 ರೂ., ರಸ್ತೆ ಬದಿ ಪೂರ್ವಾನುಮತಿ ಇಲ್ಲದೆ ಅರಣ್ಯಕ್ಕೆ ಪ್ರವೇಶ ಮಾಡುವುದು, ರಸ್ತೆಯ ಬದಿಯ ಜಲಪಾತಗಳಲ್ಲಿ ಸ್ನಾನ ಮಾಡುವುದು, ರಸ್ತೆ ವಾಹನ ತೊಳೆಯುವುದು, ಅಡುಗೆ ತಯಾರಿಸುವುದು, ರಾಷ್ಟ್ರೀಯ ಉದ್ಯಾನವನದ ಒಳಗೆ ಸಕಾರಣವಿಲ್ಲದೆ ನಿಗದಿಪಡಿಸಿದ ಅವಧಿಗಿಂತ ಹೆಚ್ಚು ಸಮಯ ಉಳಿಯುವುದಕ್ಕೆ ತಲಾ 200 ರೂ. ಮತ್ತು ವನ್ಯಪ್ರಾಣಿಗಳಿಗೆ ತಿಂಡಿ ತಿನಿಸು ನೀಡುವುದಕ್ಕೆ 50 ರೂ. ದಂಡವನ್ನು ನಿಗದಿಪಡಿಸಲಾಗಿದೆ ಎಂದರು.

    ಈ ಕಾರ್ಯಾಚರಣೆಯನ್ನು ಆಗುಂಬೆ ಘಾಟಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾದು ಹೋಗುವ ಶನಿವಾರ ಮತ್ತು ರವಿವಾರ ನಡೆಸಲಾಗುತ್ತಿದೆ. ಮನುಷ್ಯ ಸೇವಿಸುವ ಆಹಾರ, ಜಂಕ್ ಫುಡ್‍ಗಳನ್ನು ಪ್ರಾಣಿಗಳಿಗೆ ನೀಡುವುದರಿಂದ ಅದರ ಆಹಾರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಅದರ ಆಹಾರ ಕ್ರಮಗಳನ್ನು ಬದಲಾಗಿ, ಇದೇ ಆಹಾರಕ್ಕೆ ಹೊಂದಿಕೊಳ್ಳುವ ಸಾಧ್ಯತೆ ಇರುತ್ತದೆ. ಆಹಾರ ಸಿಗದೆ ಇದ್ದಾಗ ಮಕ್ಕಳು, ಮನುಷ್ಯರ ಮೇಲೆ ದಾಳಿ ನಡೆಸುವ ಅಪಾಯ ಇರುತ್ತದೆ. ಅಲ್ಲದೆ ರೋಗ ಹರಡುವಿಕೆಗೂ ಕಾರಣವಾಗುತ್ತದೆ. ಅಧಿಕ ಹೋರಾಟಗಾರರಿಂದ ಹಲವು ಬಾರಿ ಅರಣ್ಯ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕಾರ್ಯಾಚರಣೆಗೆ ಇಳಿದಿದೆ.

  • ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ 7 ಜನರ ಬಂಧನ

    ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ 7 ಜನರ ಬಂಧನ

    – ಬಂದೂಕು, ಪಿಸ್ತೂಲ್, ವಾಹನಗಳ ವಶ

    ಚಿತ್ರದುರ್ಗ: ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಏಳು ಮಂದಿ ಬೇಟೆಗಾರರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಪಿಸ್ತೂಲು, ಬಂದೂಕು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಕಾಡಿನಂಚಿನಲ್ಲಿ ಘಟನೆ ನಡೆದಿದ್ದು, ಆರೋಪಿಗಳು ತಂದಿದ್ದ ಅತ್ಯಾಧುನಿಕ ನಾಲ್ಕು ಬಂದೂಕುಗಳನ್ನು, ಒಂದು ಪಿಸ್ತೂಲ್, ಬೌ ಆ್ಯಂಡ್ ಆರೋ, ಹೈ ಫ್ಲ್ಯಾಶ್ ಲೈಟ್‍ಗಳು ಹಾಗೂ ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳು, ಬೇಟೆಗಾರರ ಎರಡು ಮಹಿಂದ್ರ ಜೀಪ್ ಹಾಗೂ ಮಹಿಂದ್ರ ಸ್ಕಾರ್ಪಿಯೋ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಬಂಧಿತ 7 ಮಂದಿ ಆರೋಪಿಗಳು ಶಿವಮೊಗ್ಗ, ಬೆಂಗಳೂರು ಮೂಲದವರಾಗಿದ್ದು, ಪ್ರಮುಖ ನಾಲ್ಕು ಮಂದಿ ಬೇಟೆಗಾಗರರು ಮತ್ತು ಮೂರು ಮಂದಿ ವಾಹನಗಳ ಚಾಲಕರಾಗಿದ್ದಾರೆ. ಬೇಟೆಗಾರರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಪರಿಪಾಲಕರು ಕಾರ್ಯ ಪ್ರವೃತ್ತರಾಗಿ, ಇಡೀ ಅರಣ್ಯ ಪ್ರದೇಶವನ್ನು ಎರಡು ಬಾರಿ ಸ್ಥಳ ವೀಕ್ಷಣೆ ಮಾಡಿ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಚಿತ್ರದುರ್ಗ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾದ ರಘುರಾಮ್ ಜಿ.ಎಚ್., ಹಿರಿಯೂರು ವಲಯ ಅರಣ್ಯಾಧಿಕಾರಿ ಶ್ರಿಹರ್ಷ, ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಕೇಸರಿ ಮತ್ತು ಸಿಬ್ಬಂದಿ ನೇರವಾಗಿ ದಾಳಿ ನಡೆಸಿ ಬೇಟೆಗಾರರನ್ನು ಹಿಡಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಸಿಎಫ್ ಲಿಂಗರಾಜು ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಕಪ್ಪತ್ತ ಗುಡ್ಡದ ಬಳಿ ಪ್ರಾಣಿಗಳ ದಾಳಿಗೆ ರೈತರು ಕಂಗಾಲು

    ಕಪ್ಪತ್ತ ಗುಡ್ಡದ ಬಳಿ ಪ್ರಾಣಿಗಳ ದಾಳಿಗೆ ರೈತರು ಕಂಗಾಲು

    ಗದಗ: ಒಂದೆಡೆ ನೆರೆಯಿಂದ ಬೆಳೆ ಹಾಳಾದರೆ, ಇನ್ನೊಂದೆಡೆ ಪ್ರಾಣಿಗಳ ದಾಳಿಯಿಂದಾ ರೈತರ ಬೆಳೆ ನಾಶವಾಗುತ್ತಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದು, ದಾರಿ ತೋಚದಂತಾಗದೆ ಬೆಳೆ ಹಾಳಾದರೂ ಕೈಕಟ್ಟಿ ಕೂರುವ ಪರಿಸ್ಥಿತಿ ಎದುರಾಗಿದೆ.

    ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡ ಸೆರಗಿನ ಡೋಣಿ ಬಳಿಯ ರೈತರಿಗೆ ಕಾಡು ಪ್ರಾಣಿಗಳ ಕಾಟ ಎದುರಾಗಿದ್ದು, ಸಾಲ ಮಾಡಿ ಬೆಳೆದ ಅನೇಕ ಬೆಳೆಗಳು ಪ್ರಾಣಿಗಳ ಪಾಲಾಗುತ್ತಿವೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತ್ತಗುಡ್ಡದಲ್ಲಿ ಕಾಡುಪ್ರಾಣಿಗಳು ತುಂಬಾ ಇವೆ. ಚಿರತೆ, ಕಾಡುಹಂದಿ, ಕಾಡುಬೆಕ್ಕು, ತೋಳ, ನರಿ, ಕತ್ತೆ ಕಿರುಬ, ನವಿಲು ಸೇರಿದಂತೆ ಅನೇಕ ಪ್ರಾಣಿ, ಪಕ್ಷಿಗಳು ಈ ಕಾಡಲ್ಲಿ ನೆಲೆಯೂರಿವೆ. ಈ ಕಾಡು ಪ್ರಾಣಿಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು, ರೈತರ ಬದುಕನ್ನು ಮೂರಾಬಟ್ಟೆ ಮಾಡುತ್ತಿವೆ.

    ಕಪ್ಪತ್ತಗುಡ್ಡ ಸೇರಗಿನ ಡೋಣಿ, ತಾಂಡಾ, ಕಡಕೊಳ, ಜಲ್ಲಿಗೇರಿ, ಹೊಸಳ್ಳಿ, ಹಿರೇವಡ್ಡಟ್ಟಿ, ಹಾರೊಗೇರಿ ಹೀಗೆ ಅನೇಕ ಗ್ರಾಮಗಳ ಜಮೀನುಗಳಿಗೆ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ. ಫಸಲು ನೀಡುವ ಸಮಯದಲ್ಲಿ ಪ್ರಾಣಿಗಳು ದಾಳಿ ಮಾಡಿ, ಹಾಳುಗೆಡುವುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಕಾಡು ಪ್ರಾಣಿಗಳಿಂದ ಮುಕ್ತಿ ನೀಡಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಕಪ್ಪತ್ತಗುಡ್ಡದ ಸೆರಗಿನ ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ, ಹತ್ತಿ ಹಾಗೂ ಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಪ್ರಾಣಿಗಳು ತಿಂದು ಹಾಕುತ್ತಿವೆ. ಫಸಲು ಬಾರದೆ ರೈತರು ಮತ್ತಷ್ಟು ಸಾಲದ ಸುಳಿಗೆ ಸಿಲುಕಿದ್ದಾರೆ. ಡೋಣಿ ಗ್ರಾಮದಲ್ಲಿ ಮೆಕ್ಕೆಜೋಳ ಫಸಲು ಬರುವ ಸಮಯದಲ್ಲಿ ಕಾಡು ಹಂದಿಗಳು ಜಮೀನಿಗೆ ನುಗ್ಗಿ ಬೆಳೆ ಹಾನಿ ಜೊತೆಗೆ ತೆನೆಗಳನ್ನೂ ತಿಂದು ಹಾಳು ಮಾಡಿವೆ.

    ಈ ಮೊದಲು ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಪಟಾಕಿ ಸಿಡಿಸಿ, ಬೆಂಕಿಹಾಕಿ, ಬಲೆಹಾಕಿ ಓಡಿಸಲಾಗುತ್ತಿತ್ತು. ಆದರೆ ಈಗ ಅರಣ್ಯ ಇಲಾಖೆ ಅಂತಹ ಚಟುವಟಿಕೆಗೆ ಬ್ರೇಕ್ ಹಾಕಿದೆ. ಹೀಗಾಗಿ ರಾತ್ರಿ ಹಗಲು ಎನ್ನುದೆ ಕಾಡು ಪ್ರಾಣಿಗಳನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ರೈತರ ಕಣ್ಣು ತಪ್ಪಿಸಿ ಬೆಳೆಯನ್ನು ನಾಶ ಮಾಡುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಈ ಕುರಿತು ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬೆಳೆ ಹಾನಿಯಾದ ಪ್ರದೇಶವನ್ನು ಸರ್ವೇ ಮಾಡಿ ಪರಿಹಾರ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ವರ್ಷವಿಡಿ ಕಷ್ಟಪಟ್ಟು ದುಡಿದು ಬೆಳೆದ ಬೆಳೆಗೆ ಅರಣ್ಯ ಇಲಾಖೆ ನೀಡುವ ಅಲ್ಪ ಪ್ರಮಾಣದ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಹೀಗಾಗಿ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡು ರೈತರ ಕಷ್ಟವನ್ನು ನೀಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

  • ಕೊರೊನಾ ಭೀತಿ- ಸಫಾರಿಗೆ ಒಲವು ತೋರದ ಪ್ರವಾಸಿಗರು

    ಕೊರೊನಾ ಭೀತಿ- ಸಫಾರಿಗೆ ಒಲವು ತೋರದ ಪ್ರವಾಸಿಗರು

    ಚಾಮರಾಜನಗರ: ಮಹಾಮಾರಿ ಕೊರೊನಾಗೆ ಜನರು ಆತಂಕಗೊಂಡಿದ್ದು, ಲಾಕ್‍ಡೌನ್ ಅನ್‍ಲಾಕ್ ಆದ ಮೊದಲ ವೀಕೆಂಡ್‍ನಲ್ಲಿ ಬಂಡೀಪುರ ಸಫಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರಲಿಲ್ಲ.

    ಚಾಮರಾಜನಗರದ ಗುಂಡ್ಲುಪೇಟೆಯಲ್ಲಿರುವ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯಕ್ಕೆ ವೀಕೆಂಡ್ ಇದ್ದರೂ ಪ್ರವಾಸಿಗರು ಬಂದಿಲ್ಲ. ಬಂಡೀಪುರದ ಮೇಲುಕಾಮನಹಳ್ಳಿಯ ಸಫಾರಿ ಕೇಂದ್ರ ಇದೆ. ಈಗಾಗಲೇ ಸಫಾರಿಗೆ ಅರಣ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೂ ಕೋವಿಡ್-19 ಭೀತಿಯಿಂದ ಸಫಾರಿಗೆ ಜನರು ಒಲವು ತೋರಿಲ್ಲ.

    ವೀಕೆಂಡ್ ಬಂದರೆ ಸಾಕು ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿಪ್ರಿಯರು ಸಫಾರಿಗೆ ಆಗಮಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ಪ್ರವಾಸಿ ಸ್ಥಳಗಳಿಗೆ ನಿರ್ಬಂಧ ಮಾಡಲಾಗಿತ್ತು. ಈಗ ಸಫಾರಿ ಆರಂಭವಾಗಿದ್ದು, ಅರಣ್ಯ ಇಲಾಖೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಕಡಿಮೆ ಪ್ರವಾಸಿಗರು ಆಗಮಿಸಿದ್ದಾರೆ.

    ಮುಂಜಾಗ್ರತಾ ಕ್ರಮವಾಗಿ ಸಫಾರಿ ವಾಹನಕ್ಕೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಸಫಾರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರಿಗೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಇನ್ನೂ ಸಫಾರಿ ವಾಹನದಲ್ಲಿ ಶೇ.50ರಷ್ಟು ಮಂದಿ ಪ್ರಯಾಣಕ್ಕಷ್ಟೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಸಫಾರಿಗೆ ಕೆಲವೇ ಪ್ರವಾಸಿಗರು ಆಗಮಿಸಿದ್ದಾರೆ. ಈಗ ಬಂದಿರುವ ಪ್ರಾಣಿ ಪ್ರಿಯರು ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.