Tag: ಪ್ರಾಣಪ್ರತಿಷ್ಠಾಪನೆ

  • 33,258 ಹಣತೆಗಳಲ್ಲಿ ಬೆಳಗಿದ `ಸಿಯಾವರ್ ರಾಮಚಂದ್ರ ಕೀ ಜೈ’ ಘೋಷ!

    33,258 ಹಣತೆಗಳಲ್ಲಿ ಬೆಳಗಿದ `ಸಿಯಾವರ್ ರಾಮಚಂದ್ರ ಕೀ ಜೈ’ ಘೋಷ!

    ಮುಂಬೈ: ಇಲ್ಲಿನ ಚಂದ್ರಾಪುರದಲ್ಲಿ ಅಯೋಧ್ಯೆಯ (Ayodhya) ಬಾಲರಾಮನ ಪ್ರಾಣಪ್ರತಿಷ್ಠಾಪನಾ (Pran Pratishtha) ಸಮಾರಂಭವನ್ನು ರಾಮಭಕ್ತರು ವಿಶೇಷವಾಗಿ ಆಚರಿಸಿದ್ದಾರೆ. ಸುಮಾರು 33,258 ಮಣ್ಣಿನ ಹಣತೆಗಳನ್ನು ಬೆಳಗಿಸಿ `ಸಿಯಾವರ್ ರಾಮಚಂದ್ರ ಕೀ ಜೈ’ ಎಂದು ಬರೆದಿದ್ದಾರೆ.

    ರಾಮಭಕ್ತರ ಈ ವಿಶೇಷ ಸಾಧನೆ ಗಿನ್ನಿಸ್ ದಾಖಲೆ ಸೇರಿದೆ. ಶನಿವಾರ ರಾತ್ರಿ ಇಲ್ಲಿನ ಚಂದಾ ಕ್ಲಬ್ ಮೈದಾನದಲ್ಲಿ ರಾಜ್ಯ ಸಚಿವ ಸುಧೀರ್ ಮುಂಗಂತಿವಾರ್ ಅವರ ಸಮ್ಮುಖದಲ್ಲಿ ರಾಮಭಕ್ತರು ಈ ಕಾರ್ಯಕ್ರಮ ನಡೆಸಿದ್ದಾರೆ. ಈ ಮೂಲಕ ಚಂದ್ರಾಪುರದ ಜನ ವಿಶೇಷ ಸಾಧನೆಗೈದಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ಸಾವಿರಾರು ಜನ ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: 9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!

    ಗಿನ್ನೆಸ್ ವಿಶ್ವ ದಾಖಲೆಯ ಮಿಲಿಂದ್ ವರ್ಲೆಕರ್ ಮತ್ತು ಪ್ರಸಾದ್ ಕುಲಕರ್ಣಿ ಅವರು ಈ ಸಾಧನೆಯನ್ನು ಪ್ರಮಾಣೀಕರಿಸುವ ದಾಖಲೆಯನ್ನು ಭಾನುವಾರ ಬೆಳಗ್ಗೆ ಮುಂಗಂತಿವಾರ್ ಅವರಿಗೆ ಹಸ್ತಾಂತರಿಸಿದ್ದಾರೆ.

    ಸೋಮವಾರ (ಜ.22) ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಅಯೋಧ್ಯೆ ಸಂಪೂರ್ಣವಾಗಿ ಸಿಂಗಾರಗೊಂಡಿದೆ. ಈ ಸಮಾರಂಭದಿಂದ ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ. ಜನ ತಮ್ಮ ಸುತ್ತಮುತ್ತಲಿನ ದೇವಾಲಯಗಳು ಸೇರಿದಂತೆ, ಮನೆಯಲ್ಲೂ ಈ ಸಮಾರಂಭವನ್ನು ದೀಪಾವಳಿಯಂತೆ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ-ವಿದೇಶಗಳ ಗಣ್ಯರು ಬಾಲರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದು, ಅಯೋಧ್ಯೆಯಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ:ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೋ

  • 9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!

    9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!

    ಗಾಂಧಿನಗರ: ಗುಜರಾತ್‍ನ ಸೂರತ್ (Surat) ನಗರದ ಕಲಾವಿದರೊಬ್ಬರು 9,999 ವಜ್ರಗಳನ್ನು ಬಳಸಿ ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಕಲಾಕೃತಿಯನ್ನು ರಚಿಸಿದ್ದಾರೆ. ಈ ವೀಡಿಯೋ ಇದೀಗ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.

    ಕಲಾವಿದ ಚಿಕ್ಕ ಚಿಕ್ಕ ವಜ್ರಗಳನ್ನು ಬಳಸಿ ಕಪ್ಪು ಬೋರ್ಡ್ ಮೇಲೆ ರಾಮಮಂದಿರದ ಕಲಾಕೃತಿ ರಚಿಸಿದ್ದಾರೆ. ಈ ಬೋರ್ಡ್ ಮೇಲ್ಭಾಗದಲ್ಲಿ ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ. ಮೇಲಿನ ಬಲ ಮೂಲೆಯಲ್ಲಿ ಭಗವಾನ್ ರಾಮನ ಚಿತ್ರವಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೋ

    ಇನ್ನೂ ಸೂರತ್‍ನಲ್ಲಿ ವಿಶೇಷ ಸೀರೆಯನ್ನೂ ಸಹ ಸಿದ್ಧಪಡಿಸಲಾಗಿತ್ತು. ಇದನ್ನು ದೇವಾಲಯದ ಟ್ರಸ್ಟ್‌ನ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಸೀರೆಯ ಮೇಲೆ ಭಗವಾನ್ ರಾಮನ ಚಿತ್ರ ಮತ್ತು ಅದರ ಮೇಲೆ ಅಯೋಧ್ಯೆಯ ದೇವಾಲಯವನ್ನು ಮುದ್ರಿಸಲಾಗಿದೆ. ಈ ಸೀರೆಯೂ ಸೀತಾ ಮಾತೆಗೆ ಮೀಸಲಿಡಲಾಗಿದೆ.

    ಇಲ್ಲಿನ ವಜ್ರದ ವ್ಯಾಪಾರಿಯೊಬ್ಬರು 5,000 ಅಮೆರಿಕನ್ ವಜ್ರಗಳು ಮತ್ತು ಎರಡು ಕಿಲೋಗ್ರಾಂಗಳಷ್ಟು ಬೆಳ್ಳಿಯನ್ನು ಬಳಸಿ ರಾಮಮಂದಿರದ ಆಕೃತಿಯ ವಿಶೇಷ ನೆಕ್ಲೇಸ್ ಸಹ ಮಾಡಿದ್ದಾರೆ. ಈ ಹಾರವನ್ನು ರಾಮಮಂದಿರ ಟ್ರಸ್ಟ್‌ಗೆ ಉಡುಗೊರೆಯಾಗಿ ನೀಡಲಾಗಿದೆ.

    ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ (Pran Pratishtha) ಸಕಲ ಸಿದ್ಧತೆಗಳು ಆಗಿದೆ. ಸೋಮವಾರ ಶಾಸ್ತ್ರೋಕ್ತವಾಗಿ ಸಮಾರಂಭ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ-ವಿದೇಶಗಳ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..

  • ಬಾಲರಾಮನ ಪ್ರಾಣಪ್ರತಿಷ್ಠಾಪನೆ; ವಿವಿಧ ರಾಜ್ಯಗಳ 50 ವಾದ್ಯಗಳಿಂದ ಹೊಮ್ಮಲಿದೆ ಮಂಗಳ ನಾದ

    ಬಾಲರಾಮನ ಪ್ರಾಣಪ್ರತಿಷ್ಠಾಪನೆ; ವಿವಿಧ ರಾಜ್ಯಗಳ 50 ವಾದ್ಯಗಳಿಂದ ಹೊಮ್ಮಲಿದೆ ಮಂಗಳ ನಾದ

    ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆ (Pran Pratishtha) ಸಮಾರಂಭದಲ್ಲಿ ದೇಶದ ಬೇರೆ ಬೇರೆ ಭಾಗಗಳ 50ಕ್ಕೂ ಹೆಚ್ಚು ಸಾಂಪ್ರದಾಯಿಕ ವಾದ್ಯಗಳಿಂದ `ಮಂಗಳ ನಾದ’ ಹೊರಹೊಮ್ಮಲಿದೆ. ಖ್ಯಾತ ಕವಿ ಯತೀಂದ್ರ ಮಿಶ್ರಾ ಅವರಿಂದ ಆಯೋಜಿಸಲ್ಪಟ್ಟ ಈ ಭವ್ಯವಾದ ಸಂಗೀತ ಕಾರ್ಯಕ್ರಮಕ್ಕೆ ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಬೆಂಬಲ ನೀಡಿದೆ.

    ಸಂಗೀತ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ಎರಡು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ವಾದ್ಯಗಳಲ್ಲಿ ಉತ್ತರ ಪ್ರದೇಶದ ಪಖಾವಾಜ್, ಕೊಳಲು ಮತ್ತು ಧೋಲಕ್, ಕರ್ನಾಟಕದ ವೀಣೆ, ಪಂಜಾಬ್‍ನಿಂದ ಅಲ್ಗೋಜಾ, ಮಹಾರಾಷ್ಟ್ರದಿಂದ ಸುಂದರಿ, ಒಡಿಶಾದಿಂದ ಮರ್ದಲ, ಮಧ್ಯಪ್ರದೇಶದಿಂದ ಸಂತೂರ್, ಮಣಿಪುರದಿಂದ ಪುಂಗ್, ಅಸ್ಸಾಂನಿಂದ ನಾಗದಾ ಮತ್ತು ಕಾಳಿ, ಛತ್ತೀಸ್‍ಗಢದಿಂದ ತಂಬೂರ, ದೆಹಲಿಯಿಂದ ಶೆಹನಾಯಿ, ರಾಜಸ್ಥಾನದಿಂದ ರಾವಣಹತ, ಪಶ್ಚಿಮ ಬಂಗಾಳದಿಂದ ಶ್ರೀಖೋಲ್ ಮತ್ತು ಸರೋದ್, ಆಂಧ್ರಪ್ರದೇಶದಿಂದ ಘಟಂ, ಜಾರ್ಖಂಡ್‍ನಿಂದ ಸಿತಾರ್, ಗುಜರಾತ್‍ನಿಂದ ಸಾಂತರ್, ಬಿಹಾರದಿಂದ ಪಖಾವಾಜ್, ಉತ್ತರಾಖಂಡದಿಂದ ಹುಡ್ಕ ಮತ್ತು ತಮಿಳುನಾಡಿನಿಂದ ನಾಗಸ್ವರಂ, ತವಿಲ್ ಮತ್ತು ಮೃದಂಗಮ್ ಸಹ ಇರಲಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಇದನ್ನೂ ಓದಿ: ಸೋಮವಾರ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ- ಅಯೋಧ್ಯೆಯಲ್ಲಿ ಬಿಗಿ ಭದ್ರತೆ

    ಭಕ್ತಿಸಾಗರದಲ್ಲಿ ಮುಳುಗಿರುವ ಅಯೋಧ್ಯೆಯ (Ayodhya) ಶ್ರೀರಾಮನ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಸಂಗೀತ ಕಾರ್ಯಕ್ರಮ ಹೊಸ ಮೆರುಗು ನೀಡಲಿದೆ. ವಿವಿಧ ರಾಜ್ಯಗಳಿಂದ ಸುಮಾರು 50ಕ್ಕೂ ಹೆಚ್ಚು ವಾದ್ಯಗಳು ಈ ಶುಭ ಸಮಾರಂಭದಲ್ಲಿ ಮಂಗಳಕರ ನಾದವನ್ನು ಹೊಮ್ಮಿಸಲಿವೆ. ಇದು ವಿವಿಧ ರಾಜ್ಯಗಳ ವೈವಿಧ್ಯಮಯ ಸಂಸ್ಕೃತಿಯನ್ನು ಒಟ್ಟುಗೂಡಿಸಲಿದೆ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಸೋಮವಾರ ಅದ್ಧೂರಿಯಾಗಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭಕ್ಕೆ ಅಯೋಧ್ಯೆ ಮಾತ್ರವಲ್ಲದೇ ದೇಶದೆಲ್ಲೆಡೆ ಹಬ್ಬದ ಸಡಗರ ಮನೆ ಮಾಡಿದೆ.

    ಅಯೋಧ್ಯೆಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಅಲ್ಲಿನ ಪ್ರಮುಖ ವೃತ್ತಕ್ಕೆ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರಿಡಲಾಗಿದೆ. ಈ ವೃತ್ತದ ಮಧ್ಯಭಾಗದಲ್ಲಿ 14 ಟನ್ ತೂಕದ ವೀಣೆಯ ಶಿಲ್ಪವನ್ನು ಸ್ಥಾಪಿಸಲಾಗಿದೆ. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..

  • ರಾಯಚೂರಿನಿಂದ ರಾಮಭಕ್ತನ ಪಾದಯಾತ್ರೆ: ರಾಮಮಂದಿರ ತಲುಪಲು 250 ಕಿ.ಮೀ ಬಾಕಿ

    ರಾಯಚೂರಿನಿಂದ ರಾಮಭಕ್ತನ ಪಾದಯಾತ್ರೆ: ರಾಮಮಂದಿರ ತಲುಪಲು 250 ಕಿ.ಮೀ ಬಾಕಿ

    ರಾಯಚೂರು: ಕೋಟ್ಯಂತರ ರಾಮಭಕ್ತರ ಕನಸಾಗಿದ್ದ ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram Mandir) ರಾಮನ ಪ್ರಾಣಪ್ರತಿಷ್ಠಾಪನೆಗೆ ನಾಲ್ಕೇ ದಿನಗಳು ಬಾಕಿ ಇವೆ. ಇನ್ನೂ ರಾಮಮಂದಿರವನ್ನು ಕಣ್ತುಂಬಿಕೊಳ್ಳಲು ರಾಯಚೂರಿನ (Raichur) ರಾಮಭಕ್ತನೊಬ್ಬ ಪಾದಯಾತ್ರೆ ಹೊರಟಿದ್ದು 1,250 ಕಿ.ಮೀ ಕ್ರಮಿಸಿದ್ದು, ಇನ್ನೂ ಕೇವಲ 250 ಕಿ.ಮೀ ಮಾತ್ರ ಬಾಕಿ ಉಳಿದಿದೆ.

    ವಿನೋದ್ ರೆಡ್ಡಿ ಎಂಬವರು ಕಳೆದ ಡಿ.13 ರಿಂದ ರಾಯಚೂರಿನಿಂದ ಪಾದಯಾತ್ರೆ ಆರಂಭಿಸಿದ್ದರು. ಈಗಾಗಲೇ ಯುವಕ 1,250 ಕಿ.ಮೀ ಕ್ರಮಿಸಿದ್ದು ಜನವರಿ 22ರ ಒಳಗಾಗಿ ಅಯೋಧ್ಯೆಯನ್ನು ತಲುಪುವ ಗುರಿ ಹೊಂದಿದ್ದಾರೆ. ಪ್ರತಿದಿನ 45 ರಿಂದ 50 ಕಿ.ಮೀ ಕ್ರಮಿಸುತ್ತಿದ್ದು, ಇದೀಗ ಉತ್ತರಪ್ರದೇಶದ ಪ್ರಯಾಗ್ ರಾಜ್ ತಲುಪಿದ್ದಾರೆ. ಇದನ್ನೂ ಓದಿ: ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್- ವಿಜ್ಞಾನ ಸಾಹಿತ್ಯ ಹಬ್ಬದಲ್ಲಿ ಮಿಂಚಿದ ಕನ್ನಡ

    ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಹೊತ್ತಿಗೆ ಅಯೋಧ್ಯೆ ತಲುಪುವ ಗುರಿ ಹೊಂದಿರುವ ಅವರು, ಪ್ರಾಣಪ್ರತಿಷ್ಠಾಪನೆಯ ದಿನವೇ ಅಯೋಧ್ಯೆ ತಲುಪುವ ಸಾಧ್ಯತೆ ಇದೆ.

    ಮಾರ್ಗಮಧ್ಯೆ ಜನರು ನೀಡುವ ಆಹಾರ ಸ್ವೀಕರಿಸಿ, ದೇವಸ್ಥಾನಗಳಲ್ಲಿ ವಿಶ್ರಾಂತಿ ಪಡೆದು ಬೆಳಗ್ಗಿನ ಜಾವದಿಂದ ಸಂಜೆಯವರೆಗೆ ಪಾದಯಾತ್ರೆ ಮುಂದುವರಿಸುತ್ತಿದ್ದಾನೆ. ಮಾರ್ಗಮಧ್ಯೆ ಶ್ರೀರಾಮನ ಭಕ್ತರು ತೋರಿಸುವ ಪ್ರೀತಿ ಗೌರವ ಇನ್ನಷ್ಟು ಶಕ್ತಿ ನೀಡಿದೆ. ಶ್ರೀರಾಮನೆ ಪ್ರಾಣಪ್ರತಿಷ್ಠಾಪನೆ ವೇಳೆಗೆ ನನ್ನನ್ನು ಕರೆಸಿಕೊಳ್ಳುತ್ತಾನೆ ಎಂದು ವಿನೋದ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣದಲ್ಲಿ ರಾಯಚೂರು ಯುವಶಿಲ್ಪಿಯ ಕಲಾ ಸೇವೆ