Tag: ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ

  • ಭೀಕರ ಚಂಡಮಾರುತಕ್ಕೆ 58 ಮಂದಿ ಸಾವು – ಫಿಲಿಪೈನ್ಸ್‌ನಲ್ಲಿ ಬಿಡುವಿಲ್ಲದೇ ನಡೀತಿದೆ ಕಾರ್ಯಾಚರಣೆ

    ಭೀಕರ ಚಂಡಮಾರುತಕ್ಕೆ 58 ಮಂದಿ ಸಾವು – ಫಿಲಿಪೈನ್ಸ್‌ನಲ್ಲಿ ಬಿಡುವಿಲ್ಲದೇ ನಡೀತಿದೆ ಕಾರ್ಯಾಚರಣೆ

    ಮಲಿನಾ: ಫಿಲಿಪೈನ್ಸ್‌ನಲ್ಲಿ ಚಂಡಮಾರುತದಿಂದಾಗಿ ಪ್ರವಾಹ, ಭೂ ಕುಸಿತ ಉಂಟಾಗಿದ್ದು, ಕಳೆದ ಎರಡು ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸುಮಾರು 27 ಜನರು ನಾಪತ್ತೆಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    LIFT

    ಹಳ್ಳಿ-ಹಳ್ಳಿಗಳಲ್ಲಿ ಭೂ ಕುಸಿತ ಉಂಟಾಗುತ್ತಿದ್ದು, ಮಣ್ಣಿನಡಿಯಲ್ಲೇ ಸಿಲುಕಿ ಜನರು ಪ್ರಾಣಬಿಡುತ್ತಿದ್ದಾರೆ. ಸತತವಾಗಿ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಬರಿಗೈನಿಂದಲೇ ಮಣ್ಣನ್ನು ಅಗೆದು ಮೃತದೇಹಗಳನ್ನು ಹೊರತೆಗೆಯುತ್ತಿದ್ದಾರೆ. ಭೂ ಕುಸಿತದೊಂದಿಗೆ ಸಣ್ಣ ಕಲ್ಲು ಮಿಶ್ರಿತ ಮಳೆಯೂ ಆಗುತ್ತಿರುವುದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

    ಪ್ರಾರಂಭದಲ್ಲಿ ಗಂಟೆಗೆ 65 ಕಿಮೀ ವೇಗದಲ್ಲಿ ಇದ್ದ ಈ ಚಂಡಮಾರುತ ಇದೀಗ ಗಂಟೆಗೆ 85 ಕಿಮೀ ವೇಗದಲ್ಲಿ ಅಪ್ಪಳಿಸುತ್ತಿದೆ. ಈ ವರ್ಷ ಅಪ್ಪಳಿಸಿದ ಮೊದಲ ಉಷ್ಣವಲಯದ ಚಂಡಮಾರುತ ಇದಾಗಿದೆ. ಉಷ್ಣವಲಯದ ಚಂಡಮಾರುತ ಮೇಗಿಯಿಂದ ಭೂಕುಸಿತವುಂಟಾಗುತ್ತಿದ್ದು, ಈಗಾಗಲೇ ಫಿಲಿಪೈನ್ಸ್‌ನಲ್ಲಿ ಸಾಕಷ್ಟು ಹಾನಿಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ದೇಶಿ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್

    PILIFINES

    ಫಿಲಿಫೈನ್ಸ್ ದ್ವೀಪ ಸಮೂಹದಲ್ಲಿ 20 ವರ್ಷದಲ್ಲಿ ಸುಮಾರು 20 ಬಾರಿ ಚಂಡಮಾರುತಗಳು ಉಂಟಾಗುತ್ತವೆ. ಇದರೊಂದಿಗೆ ಮಣ್ಣಿನ ಕುಸಿತವುಂಟಾಗಿ ಅದು ಪ್ರವಾಹದ ರೂಪದಲ್ಲಿ ಹರಿದು ವಸತಿ ಪ್ರದೇಶ, ಕೃಷಿ ಭೂಮಿಗಳಿಗೆ ನುಗ್ಗುತ್ತಿದೆ. ಮಳೆಯೊಂದಿಗೆ ಮಣ್ಣಿನ ಕಣಗಳೇ ಸೋಕುತ್ತಿವೆ ಎಂದು ಜನರು ಕಂಗಾಲಾಗಿದ್ದಾರೆ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ ಎನ್ನಲಾಗಿದೆ.

    ಮಂಗಳವಾರವೇ ಭೀಕರ ಭೂಕುಸಿತದಿಂದ ಹಲವು ಮನೆಗಳು ಸಮುದ್ರದ ಪಾಲಾಗಿವೆ. ಇಲ್ಲಿ ಸಿಲುಕಿದ್ದ 400 ಜನರನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ – ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಸ್ಪಷ್ಟನೆ

    ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ – ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಸ್ಪಷ್ಟನೆ

    ಬೆಂಗಳೂರು : ನಗರದಲ್ಲಿ  ಯಾವುದೇ ಭೂಕಂಪನ ಆಗಿಲ್ಲ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಸ್ಪಷ್ಟ ಪಡಿಸಿದೆ.

    ಸ್ಥಳೀಯರಿಗೆ ಆದ ಕಂಪನದ ಅನುಭವ ಕುರಿತಂತೆ ವರದಿಯನ್ನು ಸ್ವೀಕರಿಸಲಾಗಿದೆ. ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ಮತ್ತು ಕಗ್ಗಲೀಪುರ ಸೇರಿಂದಂತೆ ಬೆಂಗಳೂರಿನ ಹಲವೆಡೆ 2021ರ ನವೆಂಬರ್ 26ರಂದು ಬೆಳಗ್ಗೆ 11.50 ರಿಂದ 12.15ರವರೆಗೆ ಯಾವುದೇ ಭೂಕಂಪನ ಸಂಭವಿಸಿಲ್ಲ. ಈ ಅವಧಿಯಲ್ಲಿ ಉಂಟಾಗಿರುವುದು ನಿಗೂಢ ಶಬ್ದವಷ್ಟೇ ಎಂದು ವಿಶ್ಲೇಷಿಸಲಾಗಿರುವುದಾಗಿ ತಿಳಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

    earthquake

    ಇಂದು ಮಧ್ಯಾಹ್ನ 12:15ರ ಸುಮಾರಿಗೆ 10 ರಿಂದ 15 ನಿಮಿಷಗಳ ಅಂತರದಲ್ಲಿ 2 ಭಾರೀ ಬೆಂಗಳೂರಿನ ಆರ್.ಆರ್ ನಗರ, ನಾಗರಭಾವಿ, ಕೆಂಗೇರಿ, ಯಶವಂತಪುರ, ಕಗ್ಗಲಿಪುರ, ಹೆಮ್ಮಿಗೆಪುರ, ಜ್ಞಾನಭಾರತಿ, ಉಲ್ಲಾಳ ಸೇರಿದಂತೆ ಹಲವೆಡೆ ದೊಡ್ಡ ಶಬ್ಧ ಕೇಳಿ ಬಂದಿತ್ತು . ಇದರಿಂದಾಗಿ ಬೆಂಗಳೂರಿನ ಜನರು ಆತಂಕಕ್ಕೆ ಒಳಗಾಗಿದ್ದರು.

    ಮತ್ತೊಂದೆಡೆ ಮಂಡ್ಯದಲ್ಲಿ ಕೂಡ ಬೆಳಗ್ಗೆ 11:50ರ ಸುಮಾರಿಗೆ ಇದೇ ರೀತಿ ಜೋರು ಶಬ್ದ ಕೇಳಿ ಬಂದಿದ್ದು, ಶಬ್ಧಕ್ಕೆ ಮನೆ, ಕಚೇರಿ ಕಟ್ಟಡಗಳ ಕಿಟಕಿಗಳು, ವಸ್ತುಗಳು ನಡುಗಿದೆ. ಈ ಹಿಂದೆ ಕೆಆರ್‍ಎಸ್, ಪಾಂಡವಪುರ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಕೂಡ ಈ ಶಬ್ಧ ಕೇಳಿಬಂದಿತ್ತು. ಈ ಶಬ್ಧಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.