Tag: ಪ್ರಾಂಶುಪಾಲೆ

  • ವಿದ್ಯಾರ್ಥಿಗಳಿಂದ ಮಲಗುಂಡಿ ಸ್ವಚ್ಛ ಪ್ರಕರಣ – ಐವರ ಬಂಧನ, ವಾರ್ಡನ್‌ಗೆ ಜಾಮೀನು

    ವಿದ್ಯಾರ್ಥಿಗಳಿಂದ ಮಲಗುಂಡಿ ಸ್ವಚ್ಛ ಪ್ರಕರಣ – ಐವರ ಬಂಧನ, ವಾರ್ಡನ್‌ಗೆ ಜಾಮೀನು

    ಕೋಲಾರ: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ (Toilet Clean) ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆಯಂತೆ 5 ಜನ ಆರೋಪಿಗಳನ್ನು ಮಾಸ್ತಿ ಪೊಲೀಸರು ಬಂಧಿಸಿದ್ದಾರೆ.

    ಕೋಲಾರ (Kolar) ಜಿಲ್ಲೆಯ ಮಾಲೂರು ತಾಲೂಕು ಯಲವಳ್ಳಿ ಬಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಇದೇ ತಿಂಗಳ 17ರಂದು ಮಲಗುಂಡಿ ಸ್ವಚ್ಛಗೊಳಿಸಿ, ಮಕ್ಕಳ ಮೇಲೆ ದೌರ್ಜನ್ಯವೆಸಗಲಾಗಿತ್ತು. ಈ ಘಟನೆ ಬೆಳಕಿಗೆ ಬಂದ ಬಳಿಕ ಎಚ್ಚೆತ್ತ ಅಧಿಕಾರಿಗಳು ಎಲ್ಲಾ ಶಿಕ್ಷಕರು, ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, 5 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಇದನ್ನೂ ಓದಿ: ಮಹಿಳೆಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೂಟಿ- ಆರೋಪಿ ಅಂದರ್

    ಈ ಹಿಂದೆ ಪ್ರಾಂಶುಪಾಲೆ ಭಾರತಮ್ಮ, ಚಿತ್ರಕಲಾ ಶಿಕ್ಷಕ ಮುನಿಯಪ್ಪ, ಸಹ ಶಿಕ್ಷಕ ಅಭಿಷೇಕ್‌ನನ್ನು ಬಂಧಿಸಲಾಗಿತ್ತು. ಇಂದು ವಸತಿ ಶಾಲೆಯ ವಾರ್ಡನ್ ಮಂಜುನಾಥ್ ಹಾಗೂ ಡಿ ಗ್ರೂಪ್ ಸಿಬ್ಬಂದಿ ಕಲಾವತಿ ಎಂಬವರನ್ನು ಬಂಧಿಸಲಾಗಿದೆ. ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ ಹಿನ್ನೆಲೆ 5 ಜನರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಹಾಗೂ ಸಹಾಯಕ ನಿರ್ದೇಶಕ ಶಿವಕುಮಾರ್ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ: ವ್ಯಕ್ತಿಗೆ ಇರಿದಿದ್ದ ಚಾಕುವಿನಿಂದ್ಲೇ ಪೊಲೀಸರ ಮೇಲೆ ಹಲ್ಲೆಗೆ ಯತ್ನ- ರೌಡಿಶೀಟರ್ ಕಾಲಿಗೆ ಗುಂಡೇಟು

    ಪೋಕ್ಸೊ, ಜಾತಿ ನಿಂದನೆ ಹಾಗು ಮಲ ಗುಂಡಿಗೆ ವಿದ್ಯಾರ್ಥಿಗಳನ್ನು ಇಳಿಸಿ ಸ್ವಚ್ಛಗೊಳಿಸಿದ ಹಿನ್ನೆಲೆ ಮೂರು ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಅದರಂತೆ 5 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಸದ್ಯ ವಾರ್ಡನ್ (Wraden) ಮಂಜುನಾಥ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದು, ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸ್ತಿದ್ದ ಕಾರು ಅಪಘಾತ

  • ಶಾಲೆಯಲ್ಲಿ ಅಬಯಾ ಧರಿಸಬಾರದು ಎಂದಿದ್ದಕ್ಕೆ ಪ್ರಿನ್ಸಿಪಾಲ್‌ಗೆ ಭಯೋತ್ಪಾದಕರಿಂದ ಬೆದರಿಕೆ

    ಶಾಲೆಯಲ್ಲಿ ಅಬಯಾ ಧರಿಸಬಾರದು ಎಂದಿದ್ದಕ್ಕೆ ಪ್ರಿನ್ಸಿಪಾಲ್‌ಗೆ ಭಯೋತ್ಪಾದಕರಿಂದ ಬೆದರಿಕೆ

    ಶ್ರೀನಗರ: ಶಾಲೆಯಲ್ಲಿ ವಸ್ತ್ರಸಂಹಿತೆ (Dress Code) ಅನ್ನು ಅನುಸರಿಸಬೇಕಾಗಿ ಆದೇಶಿಸಿದ ಪ್ರಾಂಶುಪಾಲೆಗೆ (Principal) ಭಯೋತ್ಪಾದಕರ (Terrorists) ಗುಂಪೊಂದು ಬೆದರಿಕೆ ಹಾಕಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ (Srinagar) ನಡೆದಿದೆ. ಇದಾದ ಬಳಿಕ ತಕ್ಷಣವೇ ಪ್ರಾಂಶುಪಾಲರು ಕ್ಷಮೆಯಾಚಿಸಿ ವಿದ್ಯಾರ್ಥಿನಿಯರಿಗೆ ಅಬಯಾ (Abaya) ಧರಿಸಲು ಅನುಮತಿ ನೀಡಿದ್ದಾರೆ.

    ಶ್ರೀನಗರದ ವಿಶ್ವ ಭಾರತಿ ಎಂಬವರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಕೆಲ ವಿದ್ಯಾರ್ಥಿನಿಯರಿಗೆ ಶಾಲೆಯೊಳಗೆ ಅಬಯಾ (ಉದ್ದನೆಯ ನಿಲುವಂಗಿ) ಧರಿಸದಂತೆ ಹೇಳಿದ್ದರು. ಆದರೂ ಸಮವಸ್ತçದೊಂದಿಗೆ ಹಿಜಬ್ (ತಲೆಯ ಸ್ಕಾರ್ಫ್) ಧರಿಸಲು ಅನುಮತಿ ನೀಡಿದ್ದರು. ಆದರೆ ಕೆಲವು ವಿದ್ಯಾರ್ಥಿನಿಯರು ಡ್ರೆಸ್ ಕೋಡ್ ಅನ್ನು ಒಪ್ಪಿಕೊಳ್ಳಲು ನಿರಾಕರಿಸಿ ಪ್ರತಿಭಟನೆ ನಡೆಸಿದ್ದಾರೆ.

    ಪ್ರಾಂಶುಪಾಲರು ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಿದ್ದಾರೆ. ಇದು ತಮ್ಮ ಧಾರ್ಮಿಕ ಆಚರಣೆಗಳ ಪ್ರಕಾರ ಧರಿಸಲು ಬಯಸುವ ತಮ್ಮ ಆಯ್ಕೆಯ ವಿರುದ್ಧವಾಗಿದೆ ಎಂದು ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದಾರೆ. ಅಬಯಾ ಧರಿಸಲೇಬೇಕಾದರೆ ನೀವು ಶಾಲೆಗೆ ಬರುವುದು ಬೇಡ. ಮದರಸಾಗೆ ಸೇರಿಕೊಳ್ಳಿ ಎಂದು ಪ್ರಿನ್ಸಿಪಾಲ್ ಹೇಳಿರುವುದಾಗಿ ಕೆಲವರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಪ್ರಾಂಶುಪಾಲರು ನಿರಾಕರಿಸಿದ್ದಾರೆ.

    ಈ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿ ಬಳಿಕ ಪ್ರತಿಭಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿತು. ಸುದ್ದಿ ವಾಹಿನಿಗಳಲ್ಲೂ ಪ್ರಸಾರ ಮಾಡಲಾಯಿತು. ರಾಜಕೀಯ ಮುಖಂಡರು ಶಾಲೆಯ ಅಧಿಕಾರಿಗಳನ್ನು ಟೀಕಿಸಿದರು ಮಾತ್ರವಲ್ಲದೇ ಕರ್ನಾಟಕದಲ್ಲಿ ಹಿಜಬ್ ನಿಷೇಧವಾದ ಘಟನೆಗೆ ಹೋಲಿಸಿದರು. ಇದನ್ನೂ ಓದಿ: ರೈಲು ದುರಂತದ ಬಳಿಕ ಒಡಿಶಾದಲ್ಲಿ ಒಂದಿಲ್ಲೊಂದು ಅವಘಡ – ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ

    ಬಳಿಕ ಪ್ರಾಂಶುಪಾಲರು ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಹಿಜಬ್ ಧರಿಸುತ್ತಾರೆ. ಆದರೆ ಅಬಯಾ ಧರಿಸುವವರು ಕೆಲವೇ ಹುಡುಗಿಯರು ಇದ್ದಾರೆ. ಹೀಗಾಗಿ ಶಾಲೆಯೊಳಗೆ ಅಬಯಾ ಧರಿಸದಂತೆ ಹೇಳಿರುವುದಾಗಿ ಅವರು ಸ್ಪಷ್ಟಪಡಿಸಲು ಯತ್ನಿಸಿದರು. ಆದರೆ ಈ ವಿಚಾರ ಅಲ್ಲಿಗೇ ತಣ್ಣಗಾಗದೇ ಭಯೋತ್ಪಾದಕರು ಕೂಡಾ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದರು.

    ಘಟನೆ ದೊಡ್ಡ ವಿವಾದವಾಗುತ್ತಿದ್ದಂತೆ ಭಯೋತ್ಪಾದಕರ ಗುಂಪೊಂದು ಶಾಲೆಯ ಪ್ರಾಂಶುಪಾಲರನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿದೆ. ಆಕೆ ಬಲಪಂಥೀಯಳೆಂದು ಆರೋಪಿಸಿದೆ. ಯಾವಾಗ ವಿಚಾರ ಭಯೋತ್ಪಾದಕರ ವರೆಗೆ ಹೋಯಿತೋ ಅಂದೇ ಸಂಜೆ ವೇಳೆಗೆ ಪ್ರಾಂಶುಪಾಲರು ಕ್ಷಮೆಯಾಚಿಸಿದ್ದಾರೆ.

    ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ನನ್ನ ಸಂಭಾಷಣೆಯನ್ನು ತಪ್ಪಾಗಿ ನಿರೂಪಿಸಲಾಗಿದೆ. ಯಾವುದೇ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಅಥವಾ ಪೋಷಕರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಅದಕ್ಕೆ ಬೇಷರತ್ ಕ್ಷಮೆಯಾಚಿಸುತ್ತೇನೆ. ಇಂದಿನಿಂದ ವಿದ್ಯಾರ್ಥಿನಿಯರು ಅಬಯಾ ಧರಿಸಬಹುದು ಮತ್ತು ತರಗತಿಗಳಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಇದನ್ನೂ ಓದಿ: ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

  • ಬಿಸಿಯೂಟ ಕಳಪೆಯಾಗಿದೆ ಅಂದಿದ್ದ ವಿದ್ಯಾರ್ಥಿಗೆ ರಾಡ್‍ನಿಂದ ಹಲ್ಲೆಗೈದ ಪ್ರಾಂಶುಪಾಲೆ!

    ಬಿಸಿಯೂಟ ಕಳಪೆಯಾಗಿದೆ ಅಂದಿದ್ದ ವಿದ್ಯಾರ್ಥಿಗೆ ರಾಡ್‍ನಿಂದ ಹಲ್ಲೆಗೈದ ಪ್ರಾಂಶುಪಾಲೆ!

    (ಸಾಂದರ್ಭಿಕ ಚಿತ್ರ)

    ಡೆಹ್ರಾಡೂನ್: ಬಿಸಿಯೂಟದ ಗುಣಮಟ್ಟ ಕಳಪೆಯಾಗಿದೆ ಎಂದು ದೂರಿದ ವಿದ್ಯಾರ್ಥಿಯ ಮೇಲೆ ಪ್ರಾಂಶುಪಾಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಾಖಂಡ್ ರಾಜ್ಯದಲ್ಲಿ ನಡೆದಿದೆ.

    ಡೆಹ್ರಾಡೂನ್ ಜಿಲ್ಲೆಯ ಓಲ್ಡ್ ದಲಾನ್‍ವಾಲಾ ಪ್ರದೇಶ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ 5ನೇ ತರಗತಿಯ 11 ವರ್ಷದ ರಾಹುಲ್ ಹಲ್ಲೆಗೆ ಒಳಗಾದ ವಿದ್ಯಾರ್ಥಿಯಾಗಿದ್ದಾನೆ.

    ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಊಟ ನೀಡಲಾಗುತ್ತದೆ. ಈ ಊಟದ ಗುಣಮಟ್ಟ ಕಳಪೆಯಾಗಿದೆ ಎಂದು ರಾಹುಲ್ ಪ್ರಾಂಶುಪಾಲೆ ನಸ್ರೀನ್ ಬಾನೋಗೆ ದೂರು ನೀಡಿದ್ದ. ಸಮಸ್ಯೆಯನ್ನು ಅರಿತು ಬಗೆಹರಿಸುವ ಬದಲು ಕೋಪಗೊಂಡ ಆರೋಪಿ ಬಾನೋ ಕಬ್ಬಿಣದ ರಾಡ್‍ನಿಂದ ವಿದ್ಯಾರ್ಥಿ ರಾಹುಲ್‍ಗೆ ಮನಬಂದಂತೆ ಥಳಿಸಿದ್ದಾಳೆ

    ಮಾರಣಾಂತಿಕ ಹಲ್ಲೆಯಿಂದಾಗಿ ರಕ್ತಸ್ರಾವ ಉಂಟಾಗಿ ರಾಹುಲ್ ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಸ್ನೇಹಿತರು ಆತನ ಮನೆಗೆ ಎತ್ತಿಕೊಂಡು ಹೋಗಿದ್ದಾರೆ. ಆಘಾತಕ್ಕೆ ಒಳಗಾದ ಪೋಷಕರು ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕ  ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಬಾಲಕನ ತಂದೆ ಧರ್ಮೆಂದ್ರ ಅವರು ಆರೋಪಿಯಾಗಿರುವ ನಸ್ರೀನ್ ಬಾನೋ ವಿರುದ್ಧ ಪಾಸ್ವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.