Tag: ಪ್ರಹ್ಲಾದ್ ಮೋದಿ

  • ಕಿಡ್ನಿ ಸಮಸ್ಯೆಯಿಂದ ಪ್ರಧಾನಿ ಮೋದಿ ಸಹೋದರ ಆಸ್ಪತ್ರೆಗೆ ದಾಖಲು

    ಕಿಡ್ನಿ ಸಮಸ್ಯೆಯಿಂದ ಪ್ರಧಾನಿ ಮೋದಿ ಸಹೋದರ ಆಸ್ಪತ್ರೆಗೆ ದಾಖಲು

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ (Prahlad Modi) ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಿಸಲಾಗಿದೆ.

    ಕಿಡ್ನಿ ಸಂಬಂಧಿ ಕಾಯಿಲೆಯ ಸಮಸ್ಯೆಯಿಂದ ಬಳಲುತ್ತಿರುವ ಪ್ರಹ್ಲಾದ್ ಮೋದಿ ಅವರು ಸದ್ಯ ಚೆನ್ನೈನಲ್ಲಿ (Chennai) ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

    ದಾಮೋದರದಾಸ್ ಮುಲ್‍ಚಂದ್ ಮೋದಿ ಮತ್ತು ಅವರ ಪತ್ನಿ ಹೀರಾಬೆನ್‍ಗೆ ಜನಿಸಿದ 5 ಮಕ್ಕಳಲ್ಲಿ ಪ್ರಹ್ಲಾದ್ ಮೋದಿ ನಾಲ್ಕನೆಯವರು. ಅವರು ಗುಜರಾತ್‍ನ ಅಹಮದಾಬಾದ್‍ನಲ್ಲಿ ಕಿರಾಣಿ ಅಂಗಡಿ ಮತ್ತು ಟೈರ್ ಶೋರೂಮ್ ಹೊಂದಿದ್ದಾರೆ. ಇದನ್ನೂ ಓದಿ: `ಕೈ’ಗೆ ಶಾಕ್ – ಚುನಾವಣಾ ರಾಜಕೀಯದಿಂದ ಶಾಸಕ ತನ್ವೀರ್ ಸೇಠ್ ನಿವೃತ್ತಿ

    ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಹೋದರ ಪ್ರಹ್ಲಾದ್ ಮೋದಿ ಅವರು ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿ ಮೈಸೂರು ತಾಲೂಕಿನ ಕಡಕೊಳ ಬಳಿ ನಡೆದಿತ್ತು. ಇದನ್ನೂ ಓದಿ: ಸಿಬಿಐ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮನೀಶ್ ಸಿಸೋಡಿಯಾ

  • ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಸಂಚರಿಸುತ್ತಿದ್ದ ಕಾರು ಅಪಘಾತ

    ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಸಂಚರಿಸುತ್ತಿದ್ದ ಕಾರು ಅಪಘಾತ

    ಮೈಸೂರು: ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಹೋದರ ಪ್ರಹ್ಲಾದ್ ಮೋದಿ (Prahlad Modi) ಅವರಿದ್ದ ಕಾರು ಅಪಘಾತಕ್ಕೀಡಾಗಿರುವ (Car Accident) ಘಟನೆ ಮೈಸೂರು (Mysuru) ತಾಲೂಕಿನ ಕಡಕೊಳ ಬಳಿ ನಡೆದಿದೆ.

    ಮರ್ಸಿಡಿಸ್ ಬೆಂಜ್ ಕಾರಿನಲ್ಲಿದ್ದ ಪ್ರಹ್ಲಾದ್ ಮೋದಿ ಪುತ್ರ ಹಾಗೂ ಸೊಸೆಗೆ ಗಂಭೀರ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಮೈಸೂರು ಎಸ್​ಪಿ ಸೀಮಾ ಲಾಟ್ಕರ್ ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೇಲಿ ಹಾರಿ ಜನರ ಮೇಲೆ ಚಿರತೆ ದಾಳಿ – 25 ಗಂಟೆಯಲ್ಲಿ 15 ಜನರಿಗೆ ಗಾಯ

    ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ (70), ಪ್ರಹ್ಲಾದ್ ಮೋದಿ ಪುತ್ರ ಮೆಹೂಲ್ ಪ್ರಹ್ಲಾದ್ ಮೋದಿ (40), ಸೊಸೆ ಜಿಂದಾಲ್ ಮೋದಿ (35) ಹಾಗೂ ಮೊಮ್ಮಗ ಮಾಸ್ಟರ್ ಮೆಹತ್ ಮೆಹೋಲ್‌ ಮೋದಿ (06) ಹಾಗೂ ಕಾರು ಚಾಲಕ ಸತ್ಯನಾರಾಯಣ ಚಾಲಕ (46) ಬಂಡೀಪುರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಬೇಲಿ ಹಾರಿ ಜನರ ಮೇಲೆ ಚಿರತೆ ದಾಳಿ – 25 ಗಂಟೆಯಲ್ಲಿ 15 ಜನರಿಗೆ ಗಾಯ

    ಅಪಘಾತದಲ್ಲಿ ಮೋದಿ ಸಹೋದರನ ಮೊಮ್ಮಗನ ಕಾಲಿಗೆ ಹಾಗೂ ಪ್ರಹ್ಲಾದ್‌ ಮೋದಿಗೆ ಮುಖದ ಬಳಿ ಗಾಯವಾಗಿದೆ. ಉಳಿದ ಯಾರಿಗೂ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜೆಎಸ್‌ಎಸ್‌ ಆಸ್ಪತ್ರೆಯ ವೈದ್ಯ ಡಾ.ಮಧು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.


    ಸಿಎಂ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳದಲ್ಲೇ ಇದ್ದು ಸನ್ನಿವೇಶ ಗಮನಿಸುತ್ತಿದ್ದಾರೆ. ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲಿ ʻಪ.ಬಂಗಾಳ ಪಡಿತರ ಮಾದರಿʼ ಜಾರಿಗೊಳಿಸಿ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಮೋದಿ ಸಹೋದರ ಪ್ರತಿಭಟನೆ

    ದೇಶದಲ್ಲಿ ʻಪ.ಬಂಗಾಳ ಪಡಿತರ ಮಾದರಿʼ ಜಾರಿಗೊಳಿಸಿ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಮೋದಿ ಸಹೋದರ ಪ್ರತಿಭಟನೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಹೋದರ ಹಾಗೂ ಅಖಿಲ ಭಾರತ ನ್ಯಾಯಬೆಲೆ ವಿತರಕರ ಒಕ್ಕೂಟದ (AIFPSDF) ಉಪಾಧ್ಯಕ್ಷರೂ ಆಗಿರುವ ಪ್ರಹ್ಲಾದ್‌ ಮೋದಿ ಅವರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.

    ಒಕ್ಕೂಟದ ಇತರೆ ಸದಸ್ಯರೊಂದಿಗೆ ಸೇರಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್‌ ಮೋದಿ ಅವರು ಇಂದು ಧರಣಿ ನಡೆಸಿದರು. ಇದನ್ನೂ ಓದಿ: ಆಗಸ್ಟ್‌ 2 ವಿಶೇಷ ದಿನ; ನಾನು DP ಬದಲಾಯಿಸಿದ್ದೇನೆ, ನೀವೂ ಬದಲಾಯಿಸಿ – ಜನತೆಗೆ ಮೋದಿ ಕರೆ

    ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ ನಿಯೋಗವು ತನ್ನ ಉಳಿವಿಗಾಗಿ ನಮ್ಮ ಬಹುಕಾಲದ ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜ್ಞಾಪನ ಪತ್ರವನ್ನು ಸಲ್ಲಿಸಲಿದೆ. ಅಕ್ಕಿ, ಗೋಧಿ ಮತ್ತು ಸಕ್ಕರೆ ಮೇಲಿನ ನಷ್ಟದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಖಾದ್ಯ ತೈಲ ಮತ್ತು ಬೇಳೆ ಕಾಳುಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡಬೇಕು. ಕೇಂದ್ರ ಸರ್ಕಾರವು ನಮಗೆ ಪರಿಹಾರವನ್ನು ನೀಡಬೇಕು ಮತ್ತು ನಮ್ಮ ಆರ್ಥಿಕ ಸಂಕಷ್ಟಗಳನ್ನು ಕೊನೆಗೊಳಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಂದು ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾಗಲಿರುವ ಮೋದಿ

    ಪಶ್ಚಿಮ ಬಂಗಾಳದಲ್ಲಿ ಇರುವ ಹಾಗೆ ಉಚಿತ ಪಡಿತರ ವಿತರಣೆ ವ್ಯವಸ್ಥೆಯನ್ನು ದೇಶಾದ್ಯಂತ (ಪಶ್ಚಿಮ ಬಂಗಾಳ ಪಡಿತರ ಮಾದರಿ) ಜಾರಿಗೆ ತರಬೇಕು ಎಂದು ಪ್ರಹ್ಲಾದ್‌ ಮೋದಿ ಅವರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಕಟ್ಟಡ ನಿರ್ಮಾಣ: ಪ್ರಧಾನಿ ಮೋದಿ ಸಹೋದರನಿಗೆ ನೋಟಿಸ್!

    ಅಕ್ರಮ ಕಟ್ಟಡ ನಿರ್ಮಾಣ: ಪ್ರಧಾನಿ ಮೋದಿ ಸಹೋದರನಿಗೆ ನೋಟಿಸ್!

    ಅಹಮದಾಬಾದ್: ಅಕ್ರಮ ಕಟ್ಟಡ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರಿಗೆ ಸ್ಥಳೀಯ ಮುನ್ಸಿಪಲ್ ಕಾರ್ಪೋರೇಶನ್ ನೋಟಿಸ್ ಜಾರಿ ಮಾಡಿದೆ.

    ಪ್ರಹ್ಲಾದ್ ಮೋದಿಯವರು ಗುಜರಾತ್‍ನ ಸಿಮೇಎಣ್ಣೆ ಹಾಗೂ ಪಡಿತರ ವಿತರಕ ಮಾಲೀಕ ಸಂಘದ ಹಾಲಿ ಅಧ್ಯಕ್ಷರಾಗಿದ್ದು, ತಮ್ಮ ರಾಬರೀ ಕಾಲೋನಿಯ ಪಡಿತರ ಅಂಗಡಿಯ ಬಳಿ ನಿರ್ಮಿಸುತ್ತಿದ್ದ ಕಟ್ಟಡಕ್ಕೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಈ ಸಂಬಂಧ ಹೇಳಿಕೆ ನೀಡಿದ ಪಾಲಿಕೆ ಅಧಿಕಾರಿಗಳು, ಪ್ರಹ್ಲಾದ್ ಮೋದಿಯವರು ನಿರ್ಮಿಸುತ್ತಿರುವ ಕಟ್ಟಡ ಅಕ್ರಮವಾಗಿದ್ದು, ನಿಲ್ಲಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದೆವು. ಆದರೆ ಅವರು ಕಾಮಗಾರಿಯನ್ನು ನಿಲ್ಲಿಸಲಿಲ್ಲ. ಹೀಗಾಗಿ ನೋಟಿಸ್ ಜಾರಿಗೊಳಿಸಿದ್ದಾಗಿ ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಮೋದಿಯವರು, ಅಧಿಕಾರಿಗಳ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಮೊದಲು ಅದೇ ಸ್ಥಳದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವೊಂದನ್ನು ತೆರವುಗೊಳಿಸಲು ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆ. ಅಲ್ಲದೆ ಲಿಖಿತ ರೂಪದಲ್ಲಿಯೂ ಅರ್ಜಿ ಸಲ್ಲಿಸಿದ್ದೆ. ಈ ಕುರಿತು ಯಾವುದೇ ಅಧಿಕಾರಿಗಳು ನನ್ನ ಮನವಿಗೆ ಸ್ಪಂಧಿಸಲಿಲ್ಲ ಎಂದು ತಿಳಿಸಿದ್ದಾರೆ.

    ಕಟ್ಟಡ ಹಳೆಯದಾಗಿದ್ದರಿಂದ ಇತ್ತೀಚೆಗೆ ಕುಸಿದು ಬಿದ್ದಿತ್ತು. ಅದೃಷ್ಟಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಒಂದು ವೇಳೆ ಪ್ರಾಣ ಹಾನಿ ಆಗುತ್ತಿದ್ದರೆ ಅವರು ದೊಡ್ಡ ವಿವಾದವನ್ನೇ ಸೃಷ್ಟಿಸುತ್ತಿದ್ದರು. ಆದ್ದರಿಂದ ಈಗ ನೂತನ ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿದ್ದೇನೆ. ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ನಿಯಮಗಳನ್ನು ಪಾಲಿಸಿದ್ದು ಜಾಗವನ್ನು ಸಕ್ರಮ ಮಾಡಿಕೊಂಡಿದ್ದೇವೆ. ಈ ಕುರಿತು ಪಾಲಿಕೆಗೆ ಶುಲ್ಕ ಸಹ ಪಾವತಿಸಿದ್ದೇನೆ. ಈ ಹಿಂದೆ ನಾನು ಸಾಕಷ್ಟು ಬಾರಿ ಮನವಿ ಮಾಡಿದಾಗ ಅಧಿಕಾರಿಗಳು ಸ್ಪಂದನೆ ನೀಡಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಎಚ್ಚೆತ್ತ ಅಧಿಕಾರಿಗಳು ನೋಟಿಸ್ ಜಾರಿಮಾಡಿದ್ದಾರೆ ಎಂದು ಪ್ರಹ್ಲಾದ್ ಮೋದಿ ಪ್ರತಿಕ್ರಿಯಿಸಿದರು.

  • ಮೋದಿ-ಜಶೋದಾ ಬೆನ್ ಬಗ್ಗೆ ಸಹೋದರ ಪ್ರಹ್ಲಾದ್ ಮೋದಿ ಹೀಗಂದ್ರು

    ಮೋದಿ-ಜಶೋದಾ ಬೆನ್ ಬಗ್ಗೆ ಸಹೋದರ ಪ್ರಹ್ಲಾದ್ ಮೋದಿ ಹೀಗಂದ್ರು

    ಬೆಂಗಳೂರು: ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿಯವರನ್ನು ಟೀಕಿಸಲು ಯಾವುದೇ ವಿಷಯ ಸಿಗುತ್ತಿಲ್ಲ. ಹೀಗಾಗಿ ಪದೇ ಪದೇ ಅತ್ತಿಗೆ ಯಶೋದಾ ಬೆನ್ ವಿಷಯವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಮೋದಿ ಸಹೋದರ ಪ್ರಹ್ಲಾದ್ ಮೋದಿ ಸಿಡಿಮಿಡಿಗೊಂಡಿದ್ದಾರೆ.

    ಬನಶಂಕರಿ ಬಳಿಯ ಶ್ರೀ ಕೃಷ್ಣ ಗ್ರೂಪ್ ಆಪ್ ಇನ್ಸ್ ಟ್ಯೂಟ್ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಟೀಕಿಸಲು ತಮಗೆ ಬೇರೆ ಯಾವುದೇ ವಿಷಯ ಸಿಗದ ಕಾರಣ ಹೀಗಾಗಿ ಕಾಂಗ್ರೆಸ್ ನವರು ಪದೇ ಪದೇ ಅತ್ತಿಗೆ ಜಶೋದಾ ಬೆನ್ ವಿಷಯವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ನಾವೂ ಕೂಡ ಅಣ್ಣ-ಅತ್ತಿಗೆಯನ್ನು ಒಂದು ಮಾಡುವ ಪ್ರಯತ್ನ ಮಾಡುವುದಿಲ್ಲ. ಅಣ್ಣ ತಂದೆಯ ಸಮಾನ. ಅವರ ವೈಯಕ್ತಿಕ ವಿಷಯದಲ್ಲಿ ನಾವು ತಲೆ ಹಾಕಲ್ಲ. ಅಲ್ಲದೇ ತಮ್ಮಕುಟುಂಬ ವರ್ಗದವರು ಯಾರೂ ಕೂಡ ರಾಜಕಾರಣಕ್ಕೆ ಬರಲ್ಲ. ಈ ರಾಷ್ಟ್ರ ರಾಜಕಾರಣಕ್ಕೆ ಒಬ್ಬ ಮೋದಿಯೇ ಸಾಕು ಎಂದರು.

    ನಾನು ಪ್ರಧಾನಿ ಸಹೋದರನಾದರೂ ಸಣ್ಣ ರೇಷನ್ ಅಂಗಡಿ ನಡೆಸುತ್ತಿದ್ದೇನೆ. ಇಲ್ಲಿ ಯಾರೂ ದೊಡ್ಡವರೂ ಅಲ್ಲ. ಚಿಕ್ಕವರೂ ಅಲ್ಲ ಎಂದರು.

    ಹಿಂದೂ ಧರ್ಮ ಅಂದ್ರೇ ಏನು ಅನ್ನೊದನ್ನು ತಿಳಿಸೋಕೆ ಅಂತಲೇ ಜನ್ಮ ತಾಳಿದವರು ವಿವೇಕಾನಂದರು. ಚಿಕ್ಕಂದಿನಲ್ಲೇ ಮೂಢನಂಬಿಕೆಗಳನ್ನ ವಿರೋಧಿಸಿದವರು. ಕೊನೆಗೆ ರಾಮಕೃಷ್ಣ ಪರಮಹಂಸರನ್ನ ಕಲ್ಕತ್ತಾದಲ್ಲಿ ಭೇಟಿ ಮಾಡ್ತಾರೆ. ಅಲ್ಲಿಂದ ಪರಮಹಂಸರನ್ನ ಗುರುವಾಗಿ ಸ್ವೀಕರಿಸ್ತಾರೆ. ವಿವೇಕಾನಂದರು ಕೇವಲ ಭಾರತಕ್ಕೆ ಸೀಮಿತವಲ್ಲ, ಅವರು ವಿಶ್ವ ಗುರುವಾಗಿದ್ದಾರೆ. ಅವರ ವಿಚಾರಗಳು ಯಾವಾಗಲೂ ಪ್ರಸ್ತುತವಾಗಿರುತ್ತವೆ. ವಿವೇಕಾನಂದ ಹಾಗೂ ನರೇಂದ್ರ ಮೋದಿಗೆ ಹೆಸರು ಮತ್ತು ವಿಚಾರಗಳಲ್ಲೂ ಸಾಮತ್ಯೆಗಳಿವೆ. ನರೇಂದ್ರ ಮೋದಿ ವಿಶ್ವ ಗುರು ಆಗ್ತಾರೆ. ನರೇಂದ್ರ ಅನ್ನೊ ಹೆಸರು ಪೂರ್ತಿ ಭಾರತದಲ್ಲಿ ಪ್ರತಿಧ್ವನಿಸುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರ ಎಲ್ಲೆಡೆ ಹರಡುತ್ತಿದೆ ಎಂದು ಅವರು ಹೇಳಿದ್ರು.

    ಹಿಂದೂ ಧರ್ಮದ ಪುನರುತ್ಥಾನಕ್ಕಾಗಿಯೇ ವಿವೇಕಾನಂದರ ಜನ್ಮವಾಗಿದೆ. ಆದರೆ ಅತ್ಯಂತ ಕಿರಿಯ ವಯಸ್ಸಿನಲ್ಲೇ ಅವರು ನಮ್ಮನ್ನೆಲ್ಲ ಬಿಟ್ಟು ಹೋದ್ರು. ಭಾರತದ ರಾಜಕಾರಣದಲ್ಲಿ ವಿವೇಕಾನಂದರ ಯೋಚನೆ, ವಿಚಾರಗಳು ಹಾಗೂ ಚಾಣಕ್ಯ ನೀತಿ ಅತ್ಯಂತ ಪ್ರಮುಖವಾಗಿದೆ. ಈಗಲೂ ಇವರಿಬ್ಬರ ನೀತಿಗಳ ಆಧಾರದ ಮೇಲೆ ಭಾರತದ ರಾಜಕಾರಣ ನಡೆಯುತ್ತಿದೆ. ನರೇಂದ್ರ ಮೋದಿ ವಿವೇಕಾನಂದರ ಯೋಚನೆ ಹಾಗೂ ಚಾಣಕ್ಯನ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ನರೇಂದ್ರ ಮೋದಿಯವರು ವಿವೇಕಾನಂದರ ನಂತರ ಭಾರತವನ್ನು ವಿಶ್ವಗುರುವಿನ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇಬ್ಬರ ಹೆಸರಲ್ಲೂ ನರೇಂದ್ರ ಎಂಬುದು ಸಾಮಾನ್ಯವಾಗಿದೆ. ಭಾರತಕ್ಕೆ ಶುಭದಿನ ಸಮೀಪಿಸುತ್ತಿದೆ ಎಂದು ಹೊಗಳಿದರು.

  • ಟಿಪ್ಪು ಜಯಂತಿ ಆಚರಿಸಿದ ಸರ್ಕಾರದಿಂದ ಸ್ವಾಮಿ ವಿವೇಕಾನಂದರ ಜಯಂತಿ ಯಾಕಿಲ್ಲ: ಸಿಟಿ ರವಿ

    ಟಿಪ್ಪು ಜಯಂತಿ ಆಚರಿಸಿದ ಸರ್ಕಾರದಿಂದ ಸ್ವಾಮಿ ವಿವೇಕಾನಂದರ ಜಯಂತಿ ಯಾಕಿಲ್ಲ: ಸಿಟಿ ರವಿ

    ಬೆಂಗಳೂರು: ಶಾಂತಿ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಆಚರಿಸಲು ರಾಜ್ಯ ಸರ್ಕಾರ ಮರೆತಿದೆ ಅಂತ ಬಿಜೆಪಿ ನಾಯಕ ಸಿಟಿ ರವಿ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಿಂದ ಎಲ್ಲೂ ಅಧಿಕೃತವಾಗಿ ವಿವೇಕಾನಂದ ಹುಟ್ಟುಹಬ್ಬ ಆಚರಣೆ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಯಾವ ಇಲಾಖೆಗಳಿಂದಲೂ ವಿವೇಕಾನಂದರ ಜಯಂತಿ ಆಚರಣೆ ಇಲ್ಲ. ಟಿಪ್ಪು ಜಯಂತಿ ಹಠ ಮಾಡಿ ಮಾಡೋ ಸರ್ಕಾರಕ್ಕೆ ವಿವೇಕಾನಂದರ ಜಯಂತಿ ಮಾಡೋದಕ್ಕೆ ಅಸಡ್ಡೆನಾ? ಕಾಂಗ್ರೆಸ್ ಸರ್ಕಾರ ವಿವೇಕಾನಂದರ ವಿಚಾರದಲ್ಲೂ ರಾಜಕೀಯ ಮಾಡ್ತಿದೆಯಾ ಅಂತ ಪ್ರಶ್ನಿಸಿದ್ದಾರೆ.

    ಎಲ್ಲಾ ಜಯಂತಿಗಳನ್ನ ಘೋಷಣೆ ಮಾಡೋ ಸಿಎಂ ಸಿದ್ದರಾಮಯ್ಯಗೆ ವಿವೇಕಾನಂದರ ಜಯಂತಿ ಮಾಡೋಕೆ ಕಷ್ಟವಾಯ್ತು. ಒಟ್ಟಿನಲ್ಲಿ ರಾಜ್ಯ ಸರ್ಕಾರ ವಿವೇಕನಂದರನ್ನ ಮರೆತು ಹೋಯ್ತು ಅಂತ ಬಿಜೆಪಿ ಕಿಡಿಕಾರಿದೆ.

    ಬಿಜೆಪಿ ವತಿಯಿಂದ ವಿವೇಕಾನಂದ ಪಾರ್ಕ್ ಗಿರಿನಗರ ವಾರ್ಡ್ ನಂಬರ್ 162ರ ವಿವೇಕಾನಂದ ಪಾರ್ಕಿನಲ್ಲಿ ಸ್ವಾಮಿ ವಿವೇಕಾನಂದರ 155ನೇ ಜಯಂತೋತ್ಸವ ಆಚರಣೆ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಹಾಗೂ ಬಸವನಗುಡಿ ಕ್ಷೇತ್ರ ಶಾಸಕ ರವಿಸುಬ್ರಮಣ್ಯ ಸಹ ಭಾಗಿಯಾಗಿದ್ದಾರೆ.