Tag: ಪ್ರಹ್ಲಾದ್ ಪಟೇಲ್

  • ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ: ಬಿಜೆಪಿ ನಾಯಕ ಪ್ರಹ್ಲಾದ್‌ ಪಟೇಲ್‌

    ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ: ಬಿಜೆಪಿ ನಾಯಕ ಪ್ರಹ್ಲಾದ್‌ ಪಟೇಲ್‌

    – ಉಚಿತಗಳ ಮೇಲಿನ ಅವಲಂಬನೆ ಸಮಾಜವನ್ನು ದುರ್ಬಲಗೊಳಿಸುತ್ತಿದೆ ಎಂದ ಕೇಂದ್ರ ಮಾಜಿ ಸಚಿವ

    ಭೋಪಾಲ್: ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ, ಬಿಜೆಪಿ ನಾಯಕ ಪ್ರಹ್ಲಾದ್‌ ಪಟೇಲ್‌ ಹೇಳಿಕೆ ನೀಡಿದ್ದಾರೆ.

    ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ವೀರಾಂಗನಾ ರಾಣಿ ಅವಂತಿಬಾಯಿ ಲೋಧಿ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಬೇಡಿಕೆ ಅರ್ಜಿಗಳನ್ನು ‘ಭಿಕ್ಷಾಟನೆ’ಗೆ ಹೋಲಿಸಿ ವಿವಾದಕ್ಕೆ ಈಡಾಗಿದ್ದಾರೆ.‌

    ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ನಾಯಕರು ಬರುತ್ತಾರೆ, ಅವರಿಗೆ ಅರ್ಜಿಗಳಿಂದ ತುಂಬಿದ ಬುಟ್ಟಿಯನ್ನು ನೀಡಲಾಗುತ್ತದೆ. ಅವರನ್ನು ವೇದಿಕೆಯ ಮೇಲೆ ಹಾರ ಹಾಕಿ, ಅವರ ಕೈಯಲ್ಲಿ ಪತ್ರವನ್ನು ಇಡಲಾಗುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ. ಕೇಳುವ ಬದಲು, ನೀಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಇದು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ. ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.

    ಉಚಿತಗಳ ಮೇಲಿನ ಅತಿಯಾದ ಅವಲಂಬನೆಯು ಸಮಾಜವನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತದೆ. ಈ ಭಿಕ್ಷುಕರ ಸೈನ್ಯವು ಸಮಾಜವನ್ನು ಬಲಪಡಿಸುತ್ತಿಲ್ಲ. ಅದು ದುರ್ಬಲಗೊಳಿಸುತ್ತಿದೆ. ಉಚಿತಗಳ ಕಡೆಗಿನ ಆಕರ್ಷಣೆಯು ಧೈರ್ಯಶಾಲಿ ಮಹಿಳೆಯರ ಗೌರವದ ಸಂಕೇತವಲ್ಲ. ನಾವು ಅವರ ಮೌಲ್ಯಗಳಿಗೆ ಅನುಗುಣವಾಗಿ ಬದುಕಬೇಕು ಎಂದು ಕರೆ ನೀಡಿದ್ದಾರೆ.

    ಯಾರಾದರೂ ಭಿಕ್ಷೆ ಬೇಡಿದ ಹುತಾತ್ಮರ ಹೆಸರನ್ನು ನೀವು ಹೇಳಬಲ್ಲಿರಾ? ಹಾಗಿದ್ದಲ್ಲಿ, ನನಗೆ ಹೇಳಿ. ನರ್ಮದಾ ಪರಿಕ್ರಮ ಯಾತ್ರಿಕನಾಗಿ, ನಾನು ಭಿಕ್ಷೆ ಬೇಡುತ್ತೇನೆ. ಆದರೆ, ನನಗಾಗಿ ಎಂದಿಗೂ ಬೇಡುವುದಿಲ್ಲ. ಪ್ರಹ್ಲಾದ್ ಪಟೇಲ್‌ಗೆ ಅವರು ಏನನ್ನೂ ನೀಡಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

    ಪಟೇಲ್ ಅವರ ಹೇಳಿಕೆಗೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿ, ಸಚಿವರನ್ನು ಟೀಕಿಸಿದ್ದು, ಅವರ ಹೇಳಿಕೆಗಳು ರಾಜ್ಯದ ಜನರಿಗೆ ಮಾಡಿರುವ ಅವಮಾನ ಎಂದು ಕಿಡಿಕಾರಿದ್ದಾರೆ.

    ಬಿಜೆಪಿಯ ದುರಹಂಕಾರ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ, ಅವರು ಈಗ ಸಾರ್ವಜನಿಕರನ್ನು ಭಿಕ್ಷುಕರು ಎಂದು ಕರೆಯುತ್ತಿದ್ದಾರೆ. ಇದು ಕಷ್ಟಗಳಿಂದ ಬಳಲುತ್ತಿರುವವರ ಭರವಸೆ ಮತ್ತು ಕಣ್ಣೀರಿಗೆ ಮಾಡಿದ ಅವಮಾನ. ಅವರು ಚುನಾವಣೆಗೆ ಮೊದಲು ಸುಳ್ಳು ಭರವಸೆಗಳನ್ನು ನೀಡುತ್ತಾರೆ. ನಂತರ ಅವುಗಳನ್ನು ಪೂರೈಸಲು ನಿರಾಕರಿಸುತ್ತಾರೆ. ಜನರು ಅವರಿಗೆ ನೆನಪಿಸಿದಾಗ, ಅವರು ನಾಚಿಕೆಯಿಲ್ಲದೆ ಅವರನ್ನು ಭಿಕ್ಷುಕರು ಎಂದು ಕರೆಯುತ್ತಾರೆ. ಅವರು ನೆನಪಿಟ್ಟುಕೊಳ್ಳಲಿ, ಶೀಘ್ರದಲ್ಲೇ ಇದೇ ಬಿಜೆಪಿ ನಾಯಕರು ಮತಗಳನ್ನು ಬೇಡಿಕೊಂಡು ಬರುತ್ತಾರೆ ಎಂದು ಪಟ್ವಾರಿ ತೀಕ್ಷ್ಣವಾಗಿ ಟೀಕಿಸಿದ್ದಾರೆ.

  • ಕಾರು ಅಪಘಾತಕ್ಕೀಡಾಗಿ ಕೇಂದ್ರ ಸಚಿವರಿಗೆ ಗಾಯ, ಶಿಕ್ಷಕ ಸಾವು

    ಕಾರು ಅಪಘಾತಕ್ಕೀಡಾಗಿ ಕೇಂದ್ರ ಸಚಿವರಿಗೆ ಗಾಯ, ಶಿಕ್ಷಕ ಸಾವು

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ (Central Minister Pralhad Patel) ಅವರಿದ್ದ ಕಾರು ಅಪಘಾತಕ್ಕೀಡಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

    ಈ ಘಟನೆ ಇಂದು (ಮಂಗಳವಾರ) ನಡೆದಿದೆ. ಸಚಿವರು ನವೆಂಬರ್ 17ರಂದು ನಡೆಯಲಿರುವ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಂದ್ವಾರದಿಂದ ನರಸಿಂಗ್‍ಪುರ ಕಡೆ ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ನಿರಂಜನ್ ಚಂದ್ರವನ್‍ಶಿ ಎಂದು ಗುರುತಿಸಲಾಗಿದೆ. ನಿರಂಜನ್ ಮಕ್ಕಳಾದ ನಿಖಿಲ್ ನಿರಂಜನ್ (7) ಮತ್ತು ಸಂಸ್ಕರ್ ನಿರಂಜನ್ (10) ಗಾಯಗೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ನಿರಂಜನ್ ತಮ್ಮ ಮಕ್ಕಳೊಂದಿಗೆ ಬೈಕ್‍ನಲ್ಲಿ ಮನೆಗೆ ಮರಳುತ್ತಿದ್ದರು. ಇದನ್ನೂ ಓದಿ: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಮನಸ್ಸೋ ಇಚ್ಛೆ 58 ಬಾರಿ ಇರಿದು ಕೊಂದ್ರು

    ಘಟನೆಯಲ್ಲಿ ನಿರಂಜನ್ ಎಂಬವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇವರೆಲ್ಲರೂ ನಾಗ್ಪುರ ನಿವಾಸಿಗಳು. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಧೀರ್ ಜೈನ್ ತಿಳಿಸಿದ್ದಾರೆ.

    ಗಾಯಾಳುಗಳಲ್ಲಿ ಓರ್ವನ ತಲೆಗೆ ಏನು ಬಿದ್ದಿದೆ. ಇದರಲ್ಲಿ 10 ವóದ ಬಾಲಕನ ಸ್ಥಿತಿ ಗಂಭೀರವಾಗಿದೆ. ಜತಿನ್‍ಗೆ ಕೂಡ ಗಾಯಗಳಾಗಿವೆ. ಮೂವರು ಗಾಯಾಳುಗಳನ್ನು ಕೂಡ ನಾಗ್ಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದರಲ್ಲಿ 33 ವರ್ಷದ ನಿರಂಜನ್ ಚಂದ್ರವಂಶಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಿವಿಲ್ ಸರ್ಜನ್ ಡಾ ಎಂಕೆ ಸೋನಿಯಾ ಹೇಳಿದ್ದಾರೆ.