Tag: ಪ್ರಹ್ಲಾದ್ ಜೋಷಿ

  • ಹುಬ್ಬಳ್ಳಿಯಲ್ಲಿ ಆಸ್ಪತ್ರೆ ಮಾಡು ಅಂದೋರು, ಇಂದು ಅದೇ ಕ್ಯಾನ್ಸರ್ ನಿಂದ ತೀರಿಕೊಂಡ್ರು- ಜೋಷಿ ಕಣ್ಣೀರು

    ಹುಬ್ಬಳ್ಳಿಯಲ್ಲಿ ಆಸ್ಪತ್ರೆ ಮಾಡು ಅಂದೋರು, ಇಂದು ಅದೇ ಕ್ಯಾನ್ಸರ್ ನಿಂದ ತೀರಿಕೊಂಡ್ರು- ಜೋಷಿ ಕಣ್ಣೀರು

    ಹುಬ್ಬಳ್ಳಿ: ಕೇಂದ್ರ ಸಚಿವ ಅನಂತ ಕುಮಾರ್ ಅವರು ಇಂದು ನಸುಕಿನ ಜಾವ ಅನಾರೋಗ್ಯದಿಂದ ವಿಧಿವಶರಾಗಿದ್ದು, ದೇಶ ಹಾಗೂ ರಾಜ್ಯದ ಎಲ್ಲಾ ರಾಜಕೀಯ ನಾಯಕರು ಕಂಬನಿ ಮಿಡಿಯುತ್ತಿದ್ದಾರೆ.

    ಅನಂತ್ ಜೀ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ದುಃಖತಪ್ತರಾದ ಸಂಸದ ಪ್ರಹ್ಲಾದ್ ಜೋಷಿ, ಇತ್ತೀಚೆಗೆ ಸದನದಲ್ಲಿ ಕೂಡ ಅನೇಕ ಮಂತ್ರಿಗಳಿಗೆ ನಮ್ಮ ಕ್ಷೇತ್ರದ ಕೆಲಸಕ್ಕೆ ಫೋನ್ ಮಾಡಿ ಕರೆಸಿ, ಹುಬ್ಬಳ್ಳಿಯಲ್ಲಿ ಎಂತಾ ದುರ್ದೈವ ನೋಡಿ ಕ್ಯಾನ್ಸರ್ ಆಸ್ಪತ್ರೆ ಆಗಬೇಕು ಅಂತ ಹೇಳಿದಾಗ, ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ತನ್ನ ಛೇಂಬರ್ ಗೆ ಕರೆಸಿ ಮಾತನಾಡಿದ್ರು.

    ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ನಿಂದ ತಾಯಿ ತೀರಿಕೊಂಡರು. ನಡ್ಡಾ ಜೀ.. ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿರ್ಮಾಣವಾಗಬೇಕು. ಪ್ರಹ್ಲಾದ್ ಜೋಷಿ ಹೇಳ್ತಾ ಇದ್ದಾನೆ. ಜಾಗ ಕೊಡುಸ್ತೀನಿ ಅಂತಾನೆ. ಹೀಗಾಗಿ ಅಲ್ಲೊಂದು ಕ್ಯಾನ್ಸರ್ ಆಸ್ಪತ್ರೆ ಮಾಡು ಅಂತ ಅನಂತ ಕುಮಾರ್ ಅವರು ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಸೂಚಿಸಿದ್ದರು. ನಡ್ಡಾ ಅವರು ಕರ್ನಾಟಕ ಸರ್ಕಾರಕ್ಕೆ ಪ್ರೊಪೋಸಲ್ ಕಳುಹಿಸಿ ಇನ್ ಪ್ರಿನ್ಸಿಪಲ್ ಒಪ್ಪಿಗೆ ಕೊಟ್ಟು ಕಳುಹಿಸ್ತೀನಿ ಅಂತ ಹೇಳಿದ್ದರು. ಆದ್ರೆ ಇಂದು ಅನಂತ್ ಜೀ ಅದೇ ಕ್ಯಾನ್ಸರ್ ನಿಂದ ಈ ಲೋಕವನ್ನು ತ್ಯಜಿಸುತ್ತಾರೆ ಎಂದು ಊಹಿಸಿಯೂ ಇಲ್ಲ ಅಂತ ಕಣ್ಣೀರು ಹಾಕಿದ್ರು.

    ಅನಂತ್ ಜೀ ಇನ್ನಿಲ್ಲ ಅಂದಾಗ ನನಗೆ ಬಹಳ ದೊಡ್ಡ ಆಘಾತವೇ ಆಗಿದೆ. ಅವರೊಬ್ಬ ನನ್ನ ವೈಯಕ್ತಿಕ ಗೆಳೆಯ ಅಲ್ಲದೇ ಮಾರ್ಗದರ್ಶಕರಾಗಿಯೂ ಇದ್ದರು. ದೇವರ ಇಚ್ಛೆಗೆ ಉಪಾಯವಿಲ್ಲ ಅಂತ ಗದ್ಗದಿತರಾದ್ರು.

    ಪಾರ್ಲಿಮೆಂಟ್ ನಲ್ಲಿ ಕ್ಯಾಂಟೀನ್ ಊಟ ಮಾಡಲು ಬಿಡುತ್ತಿರಲಿಲ್ಲ. ಊಟ ನನ್ನ ಛೇಂಬರ್ ನಲ್ಲೇ ಬಂದು ಮಾಡಬೇಕು ಅಂತ ಹೇಳುತ್ತಿದ್ದರು. ಅಧಿವೇಶನದ ಸಂದರ್ಭದಲ್ಲಿ ಊಟಕ್ಕೆ ಅವರ ಮನೆಯಲ್ಲೇ ಮಾಡಲು ಬೈದು ಕರೆದುಕೊಂಡು ಹೋಗುತ್ತಿದ್ದರು. ಮತ್ತೊಂದು ಸಲ ನೀನು ಗೆಲ್ಲಬೇಕು. ನಿನ್ನ ಕ್ಷೇತ್ರದಲ್ಲಿ ಏನೇನ್ ಕೆಲ್ಸ ಇದೆ ಅದನ್ನು ಈಗ ಮುಗಿಸಿಬಿಡು ಅಂತ ಹೇಳುತ್ತಿದ್ದರು.

    ಅನಂತ್ ಜೀ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸಂಘಟಿಸಿ 89+5 ಸ್ಥಾನ ಬಂದಿತ್ತು. ಅವರು ಅವತ್ತು ಅಧ್ಯಕ್ಷರಾಗಿ ರಾಜಕೀಯ ಧ್ರುವೀಕರಣ ಆಗದೇ ಇರುತ್ತಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಈ ಸ್ಥಿತಿಗೆ ಬರುತ್ತಿರಲಿಲ್ಲ. ಯಡಿಯೂರಪ್ಪ, ಅನಂತ್ ಜೀ ಅವರನ್ನು ದುಡಿಯುವ ಎತ್ತು ಅಂತ ಕರೆಯುತ್ತಿದ್ದರು. ಬಿಎಸ್‍ವೈ ಮಾಸ್ ಲೀಡರ್, ಇವರೊಬ್ಬ ಕರ್ನಾಟಕ ರಾಜ್ಯದ ಬ್ರೈನ್. ಈ ರೀತಿಯ ಪ್ರಖ್ಯಾತಿಯನ್ನು ಅವರಿಬ್ಬರೂ ಪಡೆದಿದ್ದರು ಅಂತ ಮೆಲುಕು ಹಾಕಿದ್ರು.

    ಎಬಿವಿಪಿ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವುದರಲ್ಲಿ ನಿಪುಣರಾಗಿದ್ದರು. ಇವತ್ತು ಬಹುತೇಕವಾಗಿ ಜನತಾ ಪರಿವಾರದಿಂದ ಬಂದವರು ಬಿಜೆಪಿಯಲ್ಲಿ ಇದ್ದಾರೆಯೋ ಅದರಲ್ಲಿ ಶೇ.90ರಷ್ಟು ಮಂದಿ ಅನಂತ ಕುಮಾರ್ ಅವರ ವೈಯಕ್ತಿಕ ಸಂಬಂಧ, ಚಾಕಚಕ್ಯತೆಯಿಂದ ಬಂದು ಉಳಿದುಕೊಂಡಿದ್ದಾರೆ ಅಂತ ಹೇಳಿದ್ರು.

    ಅನಂತ್ ಜೀ ತಂದೆ ಸಾಮಾನ್ಯ ವ್ಯಕ್ತಿಯಾಗಿದ್ದು, ಓರ್ವ ರೈಲ್ವೇ ನೌಕರರಾಗಿದ್ದಾರೆ. ಅವರು ಕೂಡ ಕ್ಯಾನ್ಸರ್ ನಿಂದಲೇ ತೀರಿಕೊಂಡರು. ತಾಯಿ ಕೂಡ ಕ್ಯಾನ್ಸರ್‍ನಿಂದಲೇ ಮೃತಪಟ್ಟಿದ್ದರು. ಇದೀಗ ಇವರು ಕೂಡ ಅದರಿಂದಲೇ ಮೃತಪಟ್ಟಿದ್ದಾರೆ. ಇದೇ ವಿಚಾರಕ್ಕೆ ನನಗೆ ಬಹಳ ದುಃಖವಾಗುತ್ತದೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಾಳೆ ಮೋದಿ ಸಂಪುಟ ಪುನಾರಚನೆ – ಕರ್ನಾಟಕದ ಈ ಮೂವರಿಗೆ ಮಂತ್ರಿ ಭಾಗ್ಯ ಸಾಧ್ಯತೆ

    ನಾಳೆ ಮೋದಿ ಸಂಪುಟ ಪುನಾರಚನೆ – ಕರ್ನಾಟಕದ ಈ ಮೂವರಿಗೆ ಮಂತ್ರಿ ಭಾಗ್ಯ ಸಾಧ್ಯತೆ

    ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಇದೀಗ ಕೇಂದ್ರ ಸಚಿವ ಸಂಪುಟ ಕೂಡ ಪುನಾರಚನೆಯಾಗುತ್ತಿದೆ. ನಾಳೆ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಸಂಪುಟ ಪುನಾರಚನೆ ಆಗ್ತಿದೆ.

    9 ಸಚಿವರು ಸಂಪುಟದಿಂದ ಔಟ್ ಆಗಲಿದ್ದಾರೆ. ಹೊಸದಾಗಿ ಸುಮಾರು 15 ಮಂದಿ ಸಂಪುಟ ಸೇರುತ್ತಿದ್ದು, 16 ಸಚಿವರ ಖಾತೆ ಬದಲಾಗುತ್ತಿದೆ. 6 ರಾಜ್ಯ ಸಚಿವರಿಗೆ ಬಡ್ತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಸಂಪುಟದಿಂದ ಕೈಬಿಡುವ ಸಚಿವರ ಜೊತೆ ಅಮಿತ್ ಶಾ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಸಿದ್ದು ಸಂಪುಟಕ್ಕೆ ಫೈನಲ್ ಸರ್ಜರಿ: ಮೂವರಿಗೆ ಸಚಿವ ಸ್ಥಾನ ಸಿಗೋದರ ಹಿಂದೆ ಇರೋ ಲೆಕ್ಕಾಚಾರ ಏನು?

    ಹಾಗಿದ್ರೆ ಕರ್ನಾಟಕದಿಂದ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಬಹುದು ಅನ್ನೋ ಲೆಕ್ಕಾಚಾರವನ್ನ ನೋಡೋದಾದ್ರೆ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ,
    ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಹಿಂದೆ ಬಳ್ಳಾರಿ ಸಂಸದ ಶ್ರೀರಾಮುಲುಗೆ ಸ್ಥಾನ ಸಿಗಬಹುದು ಎಂದು ಹೇಳಲಾಗಿತ್ತು ಆದ್ರೆ ಈಗ ಶ್ರೀರಾಮುಲು ಹೆಸರಿಲ್ಲ ಎನ್ನಲಾಗ್ತಿದೆ.