Tag: ಪ್ರಹ್ಲಾದ್ ಜೋಷಿ

  • FPD ಸಮಗ್ರ ಕ್ಷೇತ್ರಮಟ್ಟದ ಮೌಲ್ಯಮಾಪನ ವರದಿ ಪ್ರಹ್ಲಾದ್‌  ಜೋಶಿಗೆ ಸಲ್ಲಿಕೆ

    FPD ಸಮಗ್ರ ಕ್ಷೇತ್ರಮಟ್ಟದ ಮೌಲ್ಯಮಾಪನ ವರದಿ ಪ್ರಹ್ಲಾದ್‌  ಜೋಶಿಗೆ ಸಲ್ಲಿಕೆ

    –  DFPD ಮೌಲ್ಯಮಾಪನ ವರದಿ ಕೇಂದ್ರ ಸಚಿವ ಪ್ರಹ್ಲಾದ್‌  ಜೋಶಿಗೆ ಸಲ್ಲಿಕೆ
    ‎- 112 ಜಿಲ್ಲೆಗಳ ಪಿಡಿಎಸ್ ಕಾರ್ಯಾಚರಣೆ ವಿಶ್ಲೇಷಣೆ
    ‎- AI ಪಾರದರ್ಶಕತೆ ಮತ್ತು SMART ಗೋದಾಮು ಒತ್ತುವರಿ

    ನವದೆಹಲಿ : ‎ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (DFPD) ನಡೆಸಿದ ಸಮಗ್ರ ಕ್ಷೇತ್ರಮಟ್ಟದ ಮೌಲ್ಯಮಾಪನ ವರದಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರಿಗೆ ಸಲ್ಲಿಸಲಾಗಿದೆ.

    ‎ಈ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ (ADP) ಅನ್ನು ಭಾರತ ಸರ್ಕಾರ 2018ರಲ್ಲಿ ಪ್ರಾರಂಭಿಸಿದ್ದು, ದೇಶದ ಅತ್ಯಂತ ಹಿಂದುಳಿದ 112 ಜಿಲ್ಲೆಗಳಲ್ಲಿ ಆರೋಗ್ಯ, ಪೋಷಣೆ, ಶಿಕ್ಷಣ, ಕೃಷಿ, ಹಣಕಾಸು ಸೇರ್ಪಡೆ ಮತ್ತು ಮೂಲಸೌಕರ್ಯಗಳ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿ ತರುವುದು ಈ ಯೋಜನೆಯ ಗುರಿಯಾಗಿದೆ.

    ‎ಈ ವರದಿಯಲ್ಲಿ 112 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಜಾರಿಗೆ ಬಂದ ಸಾರ್ವಜನಿಕ ವಿತರಣಾ ಕಾರ್ಯಾಚರಣೆಗಳ ಕಾರ್ಯಪದ್ಧತಿ, ಅವಲೋಕನಗಳು ಮತ್ತು ಪ್ರಮುಖ ಶಿಫಾರಸುಗಳನ್ನು ಪ್ರಸ್ತುತಪಡಿಸಲಾಗಿದೆ.

    ‎ಜೂನ್ ಮತ್ತು ಜುಲೈ 2025ರಲ್ಲಿ DFPD ಹಾಗೂ ಭಾರತೀಯ ಆಹಾರ ನಿಗಮ (FCI) ನ ಹಿರಿಯ ಅಧಿಕಾರಿಗಳು ನಡೆಸಿದ ಈ ಪರಿಶೀಲನೆಯಲ್ಲಿ ಒಟ್ಟು 140 ಅಧಿಕಾರಿಗಳು ಭಾಗವಹಿಸಿದ್ದರು. ಮೌಲ್ಯಮಾಪನದ ಭಾಗವಾಗಿ 277 ನ್ಯಾಯಯುತ ಬೆಲೆ ಅಂಗಡಿಗಳು (FPS) ಪರಿಶೀಲಿಸಲ್ಪಟ್ಟಿದ್ದು, 458 PMGKAY ಫಲಾನುಭವಿಗಳೊಂದಿಗಿನ ಸಂವಾದಗಳು, 108 ಡಿಪೋಗಳು, 113 ಖರೀದಿ ಕೇಂದ್ರಗಳು ಹಾಗೂ 164 ದೂರು ಅರ್ಜಿದಾರರಿಂದ ಪ್ರತಿಕ್ರಿಯೆ ಸಂಗ್ರಹಿಸಲಾಯಿತು. ಜೊತೆಗೆ ಜಿಲ್ಲಾಡಳಿತಗಳು, ರಾಜ್ಯ ನೋಡಲ್ ಅಧಿಕಾರಿಗಳು ಮತ್ತು FCI/CWC ಅಧಿಕಾರಿಗಳೊಂದಿಗೆ ನಡೆದ ಚರ್ಚೆಗಳು ವರದಿಗೆ ಪೂರಕ ಮಾಹಿತಿಯನ್ನು ಒದಗಿಸಿವೆ ಎಂದು ತಿಳಿಸಿದರು.

     

    ‎ವಿತರಣಾ ವ್ಯವಸ್ಥೆಯ ಸುಧಾರಣೆ:
    ‎ವರದಿಯ ಪ್ರಮುಖ ಶಿಫಾರಸುಗಳಲ್ಲಿ ಫಲಾನುಭವಿಗಳಿಗೆ ಉತ್ತಮ ಸೇವಾ ವಿತರಣೆ, ಕುಂದುಕೊರತೆ ಪರಿಹಾರ ವ್ಯವಸ್ಥೆಯ ದಕ್ಷತೆ, ಸಂಗ್ರಹಣೆ ಮತ್ತು ಸಂಗ್ರಹಣಾ ಕೇಂದ್ರಗಳ ಸುಧಾರಣೆ ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕತೆ ಒತ್ತು ಪಡೆದಿವೆ. DFPD ಶೀಘ್ರದಲ್ಲೇ ಸ್ಥಳೀಯ ಭಾಷೆಗಳಲ್ಲಿ ಸಮಗ್ರ ರಾಷ್ಟ್ರೀಯ ಜಾಗೃತಿ ಅಭಿಯಾನವನ್ನು ಆರಂಭಿಸಿ, ಪಿಡಿಎಸ್ ಅರ್ಹತೆಗಳು, ONORC (One Nation One Ration Card), ಆಹಾರ ಬಲವರ್ಧನೆ ಮತ್ತು ಕುಂದುಕೊರತೆ ಪರಿಹಾರ ಕುರಿತ ಅರಿವು ಮೂಡಿಸಲಿದೆ ಎಂದು ಹೇಳಿದರು.

    ‎ಡಿಜಿಟಲ್ ಕುಂದುಕೊರತೆ ಪರಿಹಾರ:
    ‎ಡಿಜಿಟಲ್ ಮಧ್ಯಸ್ಥಿಕೆಗಳು ಕುಂದುಕೊರತೆ ಪರಿಹಾರದಲ್ಲಿ ಪ್ರಮುಖ ಪಾತ್ರವಹಿಸಲಿವೆ. ಫಲಾನುಭವಿಗಳ ಪ್ರತಿಕ್ರಿಯೆಯನ್ನು AI ಆಧಾರಿತ ವೇದಿಕೆಗಳ ಮೂಲಕ ಸಂಗ್ರಹಿಸಿ, ಅವುಗಳನ್ನು ರಾಜ್ಯ ಆಹಾರ ಆಯೋಗಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುವ ಮೂಲಕ ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ. ಇದರೊಂದಿಗೆ ಫಲಾನುಭವಿಗಳಿಗೆ ವೇಗವಾಗಿ ನ್ಯಾಯ ದೊರಕಲಿದೆ ಎಂದು ತಿಳಿಸಿದರು.

    ‎SMART ಗೋದಾಮುಗಳತ್ತ ಹೆಜ್ಜೆ:
    ‎ಖರೀದಿ ಕೇಂದ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರಗಳ ಸಹಕಾರದಿಂದ ಮೂಲಸೌಕರ್ಯ ಹಾಗೂ ಶೇಖರಣಾ ಸೌಲಭ್ಯಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ವೇಳೆ, SMART ಗೋದಾಮುಗಳು ಮತ್ತು AI ಆಧಾರಿತ ನಿರ್ವಹಣಾ ವ್ಯವಸ್ಥೆಗಳನ್ನು ಉತ್ತೇಜಿಸಿ, ಶೇಖರಣೆಯಲ್ಲಿ ನಷ್ಟ ಕಡಿಮೆ ಮಾಡುವ ಹಾಗೂ ಪಾರದರ್ಶಕತೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

    ‎ಈ ವರದಿ ಸಲ್ಲಿಕೆಯ ಸಂದರ್ಭದಲ್ಲಿ ನೀತಿ ಆಯೋಗದ ಸದಸ್ಯ ಪ್ರೊ. ರಮೇಶ್ ಚಂದ್, DFPD ಕಾರ್ಯದರ್ಶಿ ಶ್ರೀ ಸಂಜೀವ್ ಚೋಪ್ರಾ, ಹಾಗೂ ಡಿಎಫ್‌ಪಿಡಿ, ಎಫ್‌ಸಿಐ, ಸಿಡಬ್ಲ್ಯೂಸಿ ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳು ಹಾಜರಿದ್ದರು.  ಇದನ್ನೂ ಓದಿ:  ಹಿಂದೆ ಜಾಗ ಮಾರಾಟ ಮಾಡಿದಾಗ ಉಲ್ಲಂಘನೆಯಾಗಿರಲಿಲ್ಲ, ಈಗ ಹೇಗೆ ನಿಯಮ ಉಲ್ಲಂಘನೆಯಾಗುತ್ತೆ – ಬಾಲಣ್ಣನ ಪುತ್ರಿ ಸವಾಲು

    ‎‎ಈ ವರದಿ ಮೂಲಕ ಗುರುತಿಸಲಾದ ಕ್ರಮಗಳು ಕೊನೆಯ ಹಂತದ ವಿತರಣೆಯಲ್ಲಿ ಉಂಟಾಗುವ ಅಂತರಗಳನ್ನು ಕಡಿಮೆ ಮಾಡುವುದರೊಂದಿಗೆ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸಮಗ್ರ ಮತ್ತು ಸ್ಪಂದಿಸುವ ಆಹಾರ ಭದ್ರತಾ ವ್ಯವಸ್ಥೆ ನಿರ್ಮಿಸಲು ನೆರವಾಗಲಿದೆ ಎಂದು ಸ್ಪಷ್ಟಪಡಿಸಿದರು.

  • ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗ: ಜೋಶಿ ವಾಗ್ದಾಳಿ

    ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗ: ಜೋಶಿ ವಾಗ್ದಾಳಿ

    ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಗಲಭೆ ಕೇಸ್ (Hubballi Violence Case) ವಾಪಸ್ ಪಡೆದು ಕಾಂಗ್ರೆಸ್ ಸರ್ಕಾರ ಘನಘೋರ ಅಪರಾಧ ಮಾಡಿದೆ. ಕೇಸ್ ವಾಪಸ್ ಪಡೆದಿರುವುದನ್ನು ನಾವು ವಿರೋಧ ಮಾಡಿ ಮನವಿ ಸಲ್ಲಿಸಲು ಅವಕಾಶ ಕೇಳಿದ್ದೇವೆ. ಆದರೆ ನಮ್ಮ ಮನವಿಯನ್ನು ಸಿಎಂ ಸ್ವೀಕಾರ ಮಾಡುತ್ತಿಲ್ಲ. ಇದು ಮುಖ್ಯಮಂತ್ರಿಗಳ ದುರಹಂಕಾರ ತೋರಿಸುತ್ತದೆ. ಈ ಮೂಲಕ ಸಿದ್ದರಾಮಯ್ಯ (CM Siddaramaiah) ಭಯೋತ್ಪಾದಕರ ಬೆಂಬಲಿಗರು ಎಂಬತಾಗುತ್ತದೆ. ನಾವು ಮನವಿ ಕೊಡೋದು ತಪ್ಪಾ? ಇದು ಎಂತಹ ಅಪಹ್ಯಾಸ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ತೆಲಂಗಾಣ ಡಿಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ಸಿರಾಜ್‌ – ಪೊಲೀಸ್‌ ಡ್ರೆಸ್‌ನಲ್ಲಿ ವೇಗಿ

    ನಾವು ಸಮಾಜ ವಿದ್ರೋಹಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಮತಾಂಧರು ಪೊಲೀಸರ ಹತ್ಯೆ ಮಾಡಲು, ಠಾಣೆ ಸುಡಲು ಪ್ರಯತ್ನ ಮಾಡಿದ್ದರು. ಆದರೆ ಇಂದು ಕೇಸ್ ವಾಪಸ್ ಪಡೆದಿರುವುದು ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಪೊಲೀಸರು ಇಂದು ಅನೇಕ ರೋಡ್ ಬಂದ್ ಮಾಡುತ್ತಿದ್ದಾರೆ. ಕ್ಷುಲ್ಲಕ, ವೋಟ್‌ಬ್ಯಾಂಕ್ ರಾಜಕೀಯಕ್ಕೆ ಮಿತಿ ಇರಬೇಕು. ಮತಾಂಧ ಶಕ್ತಿಗಳಿಗೆ ಕಾಂಗ್ರೆಸ್ ಯಾವಾಗಲೂ ಬೆಂಬಲ ನೀಡುತ್ತಿದೆ. ನಮ್ಮ ಮನವಿ ಸಿಎಂ ತೆಗೆದುಕೊಳ್ಳಬೇಕು. ಇಲ್ಲವಾದರೆ ನಾವು ಹೋರಾಟ ಮಾಡುತ್ತೇವೆ. ಅವರು ಸ್ವೀಕಾರ ಮಾಡಿಲ್ಲ ಅಂದರೆ ನಾನು ನುಗ್ಗಿ ಮನವಿ ನೀಡುತ್ತೇವೆ ಎಂದಿದ್ದಾರೆ.

    ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸು ಪಡೆದಿದ್ದು, ತಪ್ಪು ಎಂದು ಗೊತ್ತಾಗಿದೆ. ಅಧಿಕಾರ ಹೋಗುತ್ತದೆ ಎನ್ನುವ ಚಿಂತೆಯಲ್ಲಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ನಾನು ಸಾಕಷ್ಟು ವರ್ಷಗಳಿಂದ ಸಿದ್ದರಾಮಯ್ಯ ಅವರನ್ನು ನೋಡಿದ್ದೇನೆ. ಆದರೆ ಈ ಮಟ್ಟಕ್ಕೆ ಮಾನಸಿಕ ಸಮತೋಲನ ಕಳೆದುಕೊಳ್ಳುವ ಹಂತಕ್ಕೆ ಹೋಗಿರಲಿಲ್ಲ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಇದು ಸಣ್ಣ ಆಲೋಚನೆಯಾಗಿದೆ. ಹಿಂದೂಪರ ಸಂಘಟನೆಗಳ ಕೇಸ್ ವಾಪಸ್ ಪಡೆದಿದ್ದಾರೆ ಎಂದಿದ್ದಾರೆ. ಆದರೆ ಭಜರಂಗದಳ, ವಿಶ್ವ ಹಿಂದೂ ಪರಿಷತ್ತು. ಲಷ್ಕರ್ ತೊಯ್ಬಾ ಜೊತೆಗೆ ಲಿಂಕ್ ಇಲ್ಲ. ಆದರೆ ಇಲ್ಲಿ ಕೆಲವರು ಲಿಂಕ್ ಇದ್ದಾರೆ ಎಂದರು.

    ಇದುವರೆಗೆ ಆರ್‌ಎಸ್‌ಎಸ್ ಮೇಲಿನ ಯಾವುದೇ ಆರೋಪ ಸಾಬೀತು ಆಗಿಲ್ಲ. ಆರ್‌ಎಸ್‌ಎಸ್ (RSS) ದೇಶಭಕ್ತ, ಸಾಂಸ್ಕೃತಿಕ ಸಂಘಟನೆಯಾಗಿದೆ. ದೇಶದ ಪ್ರಧಾನಿಮಂತ್ರಿ ಆರ್‌ಎಸ್‌ಎಸ್, ನಾನು ಆರ್‌ಎಸ್‌ಎಸ್. ನಕಲಿ ಗಾಂಧಿಗಳ ಮನವೊಲಿಸಲು ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ವಿರೋಧ ಮಾಡುತ್ತಾರೆ. ಇದು ದುರ್ದೈವ, ನಾಚಿಕೆಗೇಡಿನ ಸಂಗತಿ. ನಿಮಗೆ ನಾಚಿಕೆ ಆಗುವುದಿಲ್ಲವಾ ಆರ್‌ಎಸ್‌ಎಸ್ ಬಗ್ಗೆ ವಿನಾಕಾರಣ ಮಾತನಾಡಲು ಎಂದು ಕಿಡಿಕಾರಿದರು.ಇದನ್ನೂ ಓದಿ: ಒಳಮೀಸಲಾತಿಗೆ ಕಾಂಗ್ರೆಸ್ ಮಾತ್ರ ಮೀನಾಮೇಷ ಎಣಿಸುತ್ತಿದೆ – ಆರ್.ಅಶೋಕ್

  • ಪ್ರಹ್ಲಾದ್‌ ಜೋಶಿ 2 ಲಕ್ಷಕ್ಕೂ ಹೆಚ್ಚು ಲೀಡ್ ಪಡೆದು ಗೆಲ್ತಾರೆ : ಬಿಎಸ್‌ವೈ ವಿಶ್ವಾಸ

    ಪ್ರಹ್ಲಾದ್‌ ಜೋಶಿ 2 ಲಕ್ಷಕ್ಕೂ ಹೆಚ್ಚು ಲೀಡ್ ಪಡೆದು ಗೆಲ್ತಾರೆ : ಬಿಎಸ್‌ವೈ ವಿಶ್ವಾಸ

    ಹುಬ್ಬಳ್ಳಿ: ಧಾರವಾಡ ಲೋಕಸಭಾ (Dharawad Lok Sabha Constituency) ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ (Prhlad Joshi) 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ (Yediyurappa) ಭವಿಷ್ಯ ನುಡಿದಿದ್ದಾರೆ.

    ಹುಬ್ಬಳ್ಳಿ-ಧಾರವಾಡದಲ್ಲಿ ಇಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನಾಮಪತ್ರ ಸಲ್ಲಿಕೆ ವೇಳೆ ರೋಡ್ ಶೋದಲ್ಲಿ (Road Show) ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: ಭಾರತದ 2 ಲಕ್ಷಕ್ಕೂ ಹೆಚ್ಚು ಎಕ್ಸ್ ಖಾತೆಗಳ ನಿಷೇಧ

    ಧಾರವಾಡ ಕ್ಷೇತ್ರದಲ್ಲಿ ಸತತ 5ನೇ ಬಾರಿ ಕಣಕ್ಕಿಳಿದ ಪ್ರಹ್ಲಾದ್‌ ಜೋಶಿ ಅವರು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಶತಸಿದ್ಧ. ಇದರಲ್ಲಿ ಅನುಮಾನವೇ ಇಲ್ಲವೆಂದು ಬಿಎಸ್‌ವೈ ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ಅಭ್ಯರ್ಥಿಯಾಗಿ 5ನೇ ಬಾರಿ ಸ್ಪರ್ಧಿಸಿರುವ ಜೋಶಿ ಅವರು ಕಳೆದ ನಾಲ್ಕು ಅವಧಿಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅತ್ಯಂತ ಪರಿಶ್ರಮಿ ನಾಯಕ ಎಂದು ಬಿಎಸ್‌ವೈ ಬಣ್ಣಿಸಿದರು. ಇದನ್ನೂ ಓದಿ: ಸುಪ್ರೀಂನಿಂದ ಸದ್ಯಕ್ಕಿಲ್ಲ ರಿಲೀಫ್ – ಏ.29 ರಂದು ಕೇಜ್ರಿವಾಲ್ ಅರ್ಜಿ ವಿಚಾರಣೆ


    ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಕ್ಷೇತ್ರದಾದ್ಯಂತ ಅದ್ಭುತ ಅಭಿವೃದ್ಧಿ ಕಾರ್ಯಗಳನ್ನು ಪ್ರಹ್ಲಾದ ಜೋಶಿ ಮಾಡಿದ್ದಾರೆ. ರೈಲ್ವೆ ಮಾರ್ಗ, ನಿಲ್ದಾಣ ಹೀಗೆ ಅನೇಕ ಮಾದರಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

    ಈಗ 5ನೇ ಬಾರಿಯೂ ಕ್ಷೇತ್ರದ ಅಭಿವೃದ್ಧಿಗಾಗಿ ಜನ ಹಿಂದಿನ ಚುನಾವಣೆಗಳಿಗಿಂತ ಹೆಚ್ಚು ಲೀಡ್ ಕೊಟ್ಟು ಜೋಶಿ ಅವರನ್ನು ಗೆಲ್ಲಿಸಿಕೊಳ್ಳುತ್ತಾರೆ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು.

  • ಎಚ್‌ಡಿಕೆ ಹೇಳಿಕೆ ಬೆನ್ನಲ್ಲೇ ಶೃಂಗೇರಿಗೆ ಭೇಟಿ ನೀಡಲಿದ್ದಾರೆ ನಡ್ಡಾ

    ಎಚ್‌ಡಿಕೆ ಹೇಳಿಕೆ ಬೆನ್ನಲ್ಲೇ ಶೃಂಗೇರಿಗೆ ಭೇಟಿ ನೀಡಲಿದ್ದಾರೆ ನಡ್ಡಾ

    ಬೆಂಗಳೂರು: ಕರ್ನಾಟಕ ಚುನಾವಣೆಗೆ (Karnataka Election) ಕೆಲವೇ ತಿಂಗಳು ಇದ್ದು  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಶೃಂಗೇರಿಗೆ ಭೇಟಿ ನೀಡಲಿದ್ದಾರೆ.

    ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಅವರನ್ನು ಉಲ್ಲೇಖಿಸಿ ಮಾಜಿ ಎಂ ಕುಮಾರಸ್ವಾಮಿ (HD Kumaraswamy) ಹೇಳಿಕೆಯ ಬೆನ್ನಲ್ಲೇ ಜೆಪಿ ನಡ್ಡಾ ಅವರ ಶೃಂಗೇರಿ (Sringeri) ಪ್ರವಾಸ ನಿಗದಿಯಾಗಿದೆ.

    ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಸಿಎಂ ಮಾಡಲು ಆರ್‌ಎಸ್‍ಎಸ್ (RSS) ಮುಂದಾಗಿದೆ. ಅವರು ಶೃಂಗೇರಿ ಮಠವನ್ನು ಒಡೆದ ಗುಂಪಿನ ಬ್ರಾಹ್ಮಣರು. ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕಳೆದ ವಾರ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.  ಇದನ್ನೂ ಓದಿ: 7ನೇ ವೇತನ ಆಯೋಗ ಜಾರಿ, ನೌಕರರಿಗೆ ಸಕಾಲಕ್ಕೆ ಸಂಬಳ: ಜೆಪಿ ನಡ್ಡಾ ಭರವಸೆ

    ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾದ ನಂತರವೂ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಬದ್ಧರಾಗಿದ್ದರು. ಅಲ್ಲದೇ ಅವಕಾಶ ಸಿಕ್ಕಾಗಲೆಲ್ಲಾ ಪೇಶ್ವೇ ಬ್ರಾಹ್ಮಣರ ಬಗ್ಗೆ ಪ್ರಸ್ತಾಪ ಮಾಡುತ್ತಾ ವಿವಾದವನ್ನು ಜೀವಂತವಾಗಿ ಇಡಲು ಮಾಜಿ ಸಿಎಂ ಪ್ರಯತ್ನ ನಡೆಸಿದ್ದರು.


    ಕುಮಾರಸ್ವಾಮಿಯ ಈ ತಂತ್ರಕ್ಕೆ ಟಕ್ಕರ್ ಎಂಬಂತೆ ಫೆಬ್ರವರಿ 20ರಂದು ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಜೆಪಿ ನಡ್ಡಾ ಶೃಂಗೇರಿ ಮಠದ ಜಗದ್ಗುರುಗಳ ಭೇಟಿಗೆ ಸಮಯ ಕೇಳಿದ್ದಾರೆ. ಫೆಬ್ರವರಿ 20ರಂದು ರಾತ್ರಿ ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಜೆಪಿ ನಡ್ಡಾ ಶ್ರೀಗಳನ್ನು ಭೇಟಿ ಮಾಡಲು ಪ್ಲಾನ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 13 ವರ್ಷಗಳ ನಂತರ ದೆಹಲಿಯಲ್ಲಿ ಸುದೀಪ್ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ ಮಾಡಿದ ಕಿಚ್ಚ

    13 ವರ್ಷಗಳ ನಂತರ ದೆಹಲಿಯಲ್ಲಿ ಸುದೀಪ್ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ ಮಾಡಿದ ಕಿಚ್ಚ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಇದೇ ತಿಂಗಳು 28ರಂದು ವಿಶ್ವದಾದ್ಯಂತ ಸಾವಿರಾರು ಥಿಯೇಟರ್ ನಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ ದೇಶದ ನಾನಾ ಕಡೆ ಸುದೀಪ್ ಪ್ರಚಾರ ನಡೆಸಿದ್ದಾರೆ. ಮೊದಲ ಕಂತಿನಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿ ಸೇರಿದಂತೆ ಹಲವು ಕಡೆ ಪ್ರಚಾರದಲ್ಲಿ ತೊಡಗಿದ್ದ ಸುದೀಪ್, ನಿನ್ನೆಯಿಂದ ದೆಹಲಿಯಲ್ಲಿ ಪ್ರಚಾರ ಶುರು ಮಾಡಿದ್ದಾರೆ. 13 ವರ್ಷಗಳ ನಂತರ ಕಿಚ್ಚ ದೆಹಲಿಗೆ ಕಾಲಿಟ್ಟಿದ್ದಾರೆ.

    ಹದಿಮೂರು ವರ್ಷಗಳ ಹಿಂದೆ ತೆರೆಕಂಡ ತೆಲುಗಿನ ‘ಈಗ’ ಸಿನಿಮಾದ ಪ್ರಚಾರಕ್ಕಾಗಿ ದೆಹಲಿಗೆ ಭೇಟಿ ಕೊಟ್ಟಿದ್ದ ಸುದೀಪ್, ಇದೀಗ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರಕ್ಕಾಗಿ ತೆರೆಳಿದ್ದಾರೆ. ಅಲ್ಲಿನ ಮಾಧ್ಯಮಗಳ ಜೊತೆ ವಿಕ್ರಾಂತ್ ರೋಣ ವಿಶೇಷತೆ ಕುರಿತು ಮಾತನಾಡಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ್ದಾರೆ. ಸಿನಿಮಾ ವೀಕ್ಷಿಸುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ವಿಕ್ರಾಂತ್ ರೋಣ ಸಿನಿಮಾ 2 ಡಿ ಮತ್ತು 3ಡಿ ಯಲ್ಲಿ ಬಿಡುಗಡೆ ಆಗುತ್ತಿದ್ದು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ನಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಆದ ಚಿತ್ರದ ಟೀಸರ್ ಮತ್ತು ಹಾಡುಗಳು ಹಿಟ್ ಆಗಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಗೆ ತಾಕತ್ತಿದ್ದರೆ SDPIನ್ನು ನಿಷೇಧ ಮಾಡಲಿ: ದಿನೇಶ್ ಗುಂಡೂರಾವ್

    ಬಿಜೆಪಿಗೆ ತಾಕತ್ತಿದ್ದರೆ SDPIನ್ನು ನಿಷೇಧ ಮಾಡಲಿ: ದಿನೇಶ್ ಗುಂಡೂರಾವ್

    ಬೆಂಗಳೂರು: ಎಸ್‍ಡಿಪಿಐ ಕಾಂಗ್ರೆಸ್ ಕೂಸು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ.

    ಸರಣಿ ಟ್ವೀಟ್ ಮೂಲಕ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿಕಾರಿರುವ ಅವರು ತಾಕತ್ತಿದ್ದರೆ SDPIಯನ್ನ ಬಿಜೆಪಿ ನಿಷೇಧ ಮಾಡಲಿ ಅಂತ ಸವಾಲ್ ಹಾಕಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಎಸ್‍ಡಿಪಿಐ ಕಾಂಗ್ರೆಸ್ ಕೂಸು ಎಂದಿರುವ ಪ್ರಹ್ಲಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ? ಮುಸ್ಲಿಮರ ಮತ ವಿಭಜಿಸಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿರುವ ಎಸ್‍ಡಿಪಿಐ ಕಾಂಗ್ರೆಸ್ ಕೂಸಾಗಲು ಸಾಧ್ಯವೆ? ಎಸ್‍ಡಿಪಿಐ ಮತ್ತು ಓವೈಸಿಯ AIMIM ಪಕ್ಷ BJPಯ ಬೀ ಟೀಂ ಎಂದು ದೇಶಕ್ಕೆ ಗೊತ್ತಿದೆ. ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

    ಪ್ರಹ್ಲಾದ್ ಜೋಶಿ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಸ್‍ಡಿಪಿಐ, ಓವೈಸಿಯ ಎಐಎಮ್‌ಐಎಮ್‌  ಹಾಗೂ ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ. RSS ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ ಎಸ್‍ಡಿಪಿಐ ಪಾತ್ರವೇನು.? ಓವೈಸಿಯ ರೋಲ್ ಏನು ಎಂದು ದೇಶಕ್ಕೆ ತಿಳಿಯಲಿ.

    ಈ ಸಂಘಟನೆಗಳಿಗೆ ನಾಗಪುರದ ಕನೆಕ್ಷನ್ ಇಲ್ಲದಿದ್ದರೆ ಈ ಕೂಡಲೇ ಎಸ್‍ಡಿಪಿಐನ್ನು ನಿಷೇಧಿಸಲಿ. ಎಸ್‍ಡಿಪಿಐನಿಂದ ರಾಜಕೀಯ ಲಾಭ ಪಡೆಯುತ್ತಿರುವ ಬಿಜೆಪಿ ಅವರು ಎಸ್‍ಡಿಪಿಐ ಸಂಘಟನೆ ಕಾಂಗ್ರೆಸ್ ಕೂಸು ಎಂದು ಹಲುಬುವುದ್ಯಾಕೆ.? ಎಸ್‍ಡಿಪಿಐ ಸಂಘಟನೆಯ ಬಗ್ಗೆ ಕಾಂಗ್ರೆಸ್‍ಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸರ್ಕಾರವೇ ಇದೆ. ಎಸ್‍ಡಿಪಿಐ ಸಂಘಟನೆಯನ್ನು ನಿಷೇಧಿಸದಂತೆ ಬಿಜೆಪಿಯವರ ಕೈ ಕಟ್ಟಿ ಹಾಕಿರುವವರು ಯಾರು? ತಾಕತ್ತಿದ್ದರೆ ನಿಷೇಧಿಸಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: 4 ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

    ಎಸ್‍ಡಿಪಿಐ ಸಂಘಟನೆ ಬಿಜೆಪಿಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ. ಎಸ್‍ಡಿಪಿಐ ಸಂಘಟನೆ ನಿಷೇಧವಾಗುವುದು ಬಿಜೆಪಿಯವರಿಗೂ ಸುತಾರಾಂ ಇಷ್ಟವಿಲ್ಲ. ಈ ಸತ್ಯ ಜೋಶಿಯವರಿಗೂ ಗೊತ್ತಿದೆ. ಆದರೂ ಜೋಶಿಯವರು ಜನರ ಕಣ್ಣಿಗೆ ಮಣ್ಣೆರಚಲು ಎಸ್‍ಡಿಪಿಐನೊಂದಿಗೆ ಕಾಂಗ್ರೆಸ್‍ಗೆ ಸಂಬಂಧ ಕಲ್ಪಿಸುತ್ತಾರೆ. ಅಷ್ಟಕ್ಕೂ ಎಸ್‍ಡಿಪಿಐ ಸಂಘಟನೆಯಿಂದ ಕಾಂಗ್ರೆಸ್‍ಗೆ ಏನು ಲಾಭ ಜೋಶಿಯವರೆ.? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಸಿದ್ದರಾಮಯ್ಯಗೆ 1 ಪರ್ಸೆಂಟ್ ಅಷ್ಟೂ ಗೊತ್ತಿಲ್ಲ: ಎಸ್.ಟಿ.ಸೋಮಶೇಖರ್ ತಿರುಗೇಟು

  • ಈಶ್ವರಪ್ಪನವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ: ಪ್ರಹ್ಲಾದ್ ಜೋಶಿ

    ಈಶ್ವರಪ್ಪನವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ: ಪ್ರಹ್ಲಾದ್ ಜೋಶಿ

    ಬೆಂಗಳೂರು: ಈಶ್ವರಪ್ಪ ಹಾಗೆ ಹೇಳಿದ್ದಾರೆ ಎಂದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕೊಲೆ ಪ್ರಕರಣದ ವಿಚಾರವನ್ನು ಸರ್ಕಾರ ಸರಿಯಾಗಿ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆಯೂ ಇಂತಹ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇದರಿಂದಾಗಿ  ಸರ್ಕಾರ ಘಟನೆಯ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗ ಆರೋಪಿಗಳನ್ನು ಬಂಧನ ಮಾಡಬೇಕು ಎಂದು ಒತ್ತಾಯಿಸಿದರು.

    ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪ ಹಾಗೆ ಹೇಳಿದ್ದಾರೆ ಎಂದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ಕೊಲೆಯಿಂದ ಸರ್ಕಾರದ ವೈಫಲ್ಯ ಎಂದು ಹೇಳಲು ಆಗುವುದಿಲ್ಲ. ಸಂಪೂರ್ಣ ತನಿಖೆ ಆಗಬೇಕು. ತಪ್ಪಿತಸ್ಥ ಗೂಂಡಾಗಳನ್ನು ಬಂಧನ ಮಾಡಬೇಕು. ಅದನ್ನು ರಾಜ್ಯ ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.

    ಕಾಂಗ್ರೆಸ್ ಧರಣಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ಗೆ ಬೇರೆ ವಿಚಾರ ಇಲ್ಲ. ಅದಕೋಸ್ಕರ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಧ್ಯೆ ಕಿತ್ತಾಟ ಇದೆ. ಮೊದಲು ಆ ಸಮಸ್ಯೆ ಬಗೆಹರಿಸಿಕೊಳ್ಳಲಿ. ಪ್ರತಿಭಟನೆ ಮಾಡುವ ಹಕ್ಕು ಇದೆ. ಆದರೆ ಪ್ರತಿಭಟನೆ ಮಾಡುವ ವಿಷಯ ಇದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    ಹಿಜಬ್ ಗೊಂದಲ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ಗೆ ಹಿಜಬ್ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಗೊಂದಲದ ಪಾರ್ಟಿಯಾಗಿದೆ. ಮುಸ್ಲಿಂ ಓಟ್ ಕೈತಪ್ಪುತ್ತದೆ ಎಂದು ಏನು ಮಾತಾಡುತ್ತಿಲ್ಲ. ಕಾಂಗ್ರೆಸ್ ನಾಯಕರು ಹೈಕೋರ್ಟ್ ಆದೇಶ ಪಾಲನೆ ಮಾಡಿ ಎಂದು ಹೇಳಲಿ ನೋಡೋಣ ಎಂದು ಸವಾಲೆಸೆದ ಅವರು, ಅದನ್ನು ಹೇಳೋ ಧೈರ್ಯ ಅವರಿಗೆ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಇಂಟಲಿಜೆನ್ಸ್ ಈಶ್ವರಪ್ಪ ಹತ್ರ ಇದೆಯಾ..?- ಪ್ರಿಯಾಂಕ್ ಖರ್ಗೆ ಕಿಡಿ

  • ವಿದ್ಯುತ್‌ಗೆ ಸಮಸ್ಯೆ ಆಗಲ್ಲ, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿದೆ- ಪ್ರಹ್ಲಾದ್‌ ಜೋಷಿ ಸ್ಪಷ್ಟನೆ

    ವಿದ್ಯುತ್‌ಗೆ ಸಮಸ್ಯೆ ಆಗಲ್ಲ, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿದೆ- ಪ್ರಹ್ಲಾದ್‌ ಜೋಷಿ ಸ್ಪಷ್ಟನೆ

    ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಕೊರತೆ ಹೆಚ್ಚಾಗುತ್ತಿದ್ದು ಕರ್ನಾಟಕ ಸೇರಿದಂತೆ ದೆಹಲಿ, ಗುಜರಾತ್, ರಾಜಸ್ಥಾನ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ.

    ರಾಜಸ್ಥಾನದಲ್ಲಿ ಲೋಡ್ ಶೆಡ್ಡಿಂಗ್ ಹೇರಲಾಗಿದೆ. ದೆಹಲಿ ಸಿಎಂ ಕೇಜ್ರಿವಾಲ್ ಪ್ರಧಾನಿ ಮೋದಿಗೆ ಪತ್ರ ಬರೆದು ದೆಹಲಿಯಲ್ಲಿ ವಿದ್ಯುತ್ ಕ್ಷಾಮ ತಲೆದೋರಬಹುದು ಎಂದಿದ್ದಾರೆ. ಮೂಲಗಳ ಪ್ರಕಾರ ದೇಶದಲ್ಲಿ ನಿತ್ಯ 18.5 ಲಕ್ಷ ಟನ್ ಕಲ್ಲಿದ್ದಲು ಅಗತ್ಯ ಇದ್ದು, 17.5 ಲಕ್ಷ ಟನ್ ಪೂರೈಕೆ ಆಗುತ್ತಿದೆ ಎನ್ನಲಾಗಿದೆ.

    ಕಲ್ಲಿದ್ದಲು ಖಾತೆಯನ್ನೂ ನಿಭಾಯಿಸುತ್ತಿರುವ ಪ್ರಹ್ಲಾದ್ ಜೋಷಿ ಉನ್ನತ ಸಭೆ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಟ್ವೀಟ್ ಮಾಡಿ, ದೇಶದಲ್ಲಿ ಸದ್ಯಕ್ಕೆ 43 ಮಿಲಿಯನ್ ಟನ್‍ನಷ್ಟು ಕಲ್ಲಿದ್ದಲು ದಾಸ್ತಾನಿದೆ. ಇದು 24 ದಿನಗಳಿಗೆ ಬೇಕಾಗುವಷ್ಟು ಅಗತ್ಯ ಕಲ್ಲಿದ್ದಲು ದಾಸ್ತಾನು ಇದೆ. ವಿದ್ಯುತ್ ಶಕ್ತಿ ಅಭಾವ ಆಗುವುದಿಲ್ಲ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪ್ರಹ್ಲಾದ್ ಜೋಷಿ ಹೇಳಿದ್ದೇನು?
    ಇಂದು ಕಲ್ಲಿದ್ದಲಿನ ಉತ್ಪಾದನೆ ಮತ್ತು ಪೂರೈಕೆ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು. ದೇಶದಲ್ಲಿ ವಿದ್ಯುತ್ ಶಕ್ತಿಯ ಅಭಾವ ಇರುವುದಿಲ್ಲ. ಕೋಲ್‌ ಇಂಡಿಯಾದಲ್ಲಿ ಸುಮಾರು 43 ಟನ್‌ ಕಲ್ಲಿದ್ದಲಿನ ಸಂಗ್ರಹವಿದ್ದು, ಅದು ಸುಮಾರು 24 ದಿನಗಳ ಕಲ್ಲಿದ್ದಲಿನ ಬೇಡಿಕೆಯನ್ನು ಇಡೇರಿಸಬಲ್ಲದು.

    ಥರ್ಮಲ್ ಪಾವರ್ ಪ್ಲ್ಯಾಂಟಗಳಿಗೆ ಬೇಕಾಗುವಷ್ಟು ಕಲ್ಲಿದ್ದಲನ್ನು ಪ್ರತಿದಿನದಂತೆ ಸರಬರಾಜು ಮಾಡಲಾಗುತ್ತಿದೆ.ಮಳೆಗಾಲವು ಕಡಿಮೆ ಆದ ಹಿನ್ನಲೆಯಲ್ಲಿ ಕಲ್ಲಿದ್ದಲಿನ ಸರಬರಾಜು ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಲಿದ್ದು ದೇಶದಲ್ಲಿ ಅಗತ್ಯ ಕಲ್ಲಿದ್ದಲಿನ ಸಂಗ್ರಹವಿದೆ.

    ದೇಶೀಯ ಕಲ್ಲಿದ್ದಲು ಪೂರೈಕೆ ಹೆಚ್ಚಿದ್ದು ದೇಶದ ಕಲ್ಲಿದ್ದಲು ಆಮದು ಗಣನೀಯವಾಗಿ ಕಡಿಮೆ ಆಗಿರುವದು ಹೆಮ್ಮೆಯ ವಿಷಯ. ಆತ್ಮನಿರ್ಭರಭಾರತದ #AatmanirbharBharat ನಿರ್ಮಾಣದ ಹಾದಿಯಲ್ಲಿ ದೇಶೀಯ ಕಲ್ಲಿದ್ದಲಿನಿಂದ ವಿದ್ಯುತ್‌ ಶಕ್ತಿ ನಿರ್ಮಾಣ ಈ ಹಣಕಾಸಿನ ಅರ್ಧವರ್ಷದ ಅವಧಿಯಲ್ಲಿ ಸುಮಾರು 24% ಹೆಚ್ಚಿದ್ದು, ಕಲ್ಲಿದ್ದಲಿನ ಆಮದು 30% ಕಡಿಮೆಯಾಗಿದೆ. ಇದನ್ನೂ ಓದಿ: ಚೀನಾ ಕೈಯಿಂದ ನಾರ್ವೆಯ ಸೋಲಾರ್‌ ಕಂಪನಿ ಖರೀದಿಸಿದ ರಿಲಯನ್ಸ್‌ 

    ಪ್ರತಿದಿನ ಕೋಲ್‌ ಇಂಡಿಯಾ ಮತ್ತು ಉಳಿದ ಕಲ್ಲಿದ್ದಲು ಉತ್ಪಾದನಾ ಘಟಕಗಳು ವಿದ್ಯುತ್ ಶಕ್ತಿ ಉತ್ಪಾದನೆಗೆ ಬೇಕಾಗುವಷ್ಟು ಕಲ್ಲಿದ್ದಲಿನ ಪೂರೈಕೆ ಮಾಡುತ್ತಿವೆ. ಕಲ್ಲಿದ್ದಲಿನ ಪೂರೈಕೆ ಅತ್ಯಂತ ಗರಿಷ್ಟ ಪ್ರಮಾಣದಲ್ಲಿದ್ದು ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿನ ಕಲ್ಲಿದ್ದಲಿನ ಸಂಗ್ರಹ ಬರುವ ದಿನಗಳಲ್ಲಿ ಹೆಚ್ಚಲಿದೆ.

    ಈ ಹಣಕಾಸಿನ ಅರ್ಧವರ್ಷ ದಲ್ಲಿ ಕಲ್ಲಿದ್ದಲಿನ ಸಾರ್ವಜನಿಕ ವಲಯವಾದ ಕೋಲ್‌ ಇಂಡಿಯಾ ಅತ್ಯಂತ ಗರಿಷ್ಟ ಕಲ್ಲಿದ್ದಲಿನ ಉತ್ಪಾದನೆ ಹಾಗೂ ಪೂರೈಕೆ ಮಾಡಿದೆ. ಸುಮಾರು 263 ಎಂಟಿ ಕಲ್ಲಿದ್ದಲಿನ ಉತ್ಪಾದನೆ ಈ ವರ್ಷ ಆಗಿದ್ದು ಅದು ಕಳೆದ ವರ್ಷಕ್ಕಿಂತ 6.3% ನಷ್ಟು ಹೆಚ್ಚಿಗೆ ಆಗಿದೆ. ಸುಮಾರು 323 ಎಂಟಿ ಸರಬರಾಜು ಮಾಡಿದ್ದು ಕಳೆದ ವರ್ಷಕ್ಕಿಂತ 9% ಹೆಚ್ಚಿಗೆ ಆಗಿದೆ.

  • ಕಾಂಗ್ರೆಸ್‍ನವರು ಭ್ರಷ್ಟಾಚಾರದ ರಕ್ತ ಬೀಜಾಸುರರು: ಜೋಶಿ

    ಕಾಂಗ್ರೆಸ್‍ನವರು ಭ್ರಷ್ಟಾಚಾರದ ರಕ್ತ ಬೀಜಾಸುರರು: ಜೋಶಿ

    ಧಾರವಾಡ: ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಮುಖಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಭ್ರಷ್ಟಾಚಾರದ ರಕ್ತ ಬೀಜಾಸುರರು. ಸಿದ್ದರಾಮಯ್ಯನವರು ಭ್ರಷ್ಟಾಚಾರದ ಆರೋಪ ಮಾಡುವುದರಲ್ಲಿ ಅರ್ಥವಿದೆಯೇ? ಏಳು ವರ್ಷದಿಂದ ದೇಶದಲ್ಲಿ ನಾವು ಸರ್ಕಾರ ನಡೆಸುತ್ತಿದ್ದೇವೆ, ಒಂದೂ ಆರೋಪ ಒಬ್ಬ ಮಂತ್ರಿ ಮೇಲೆಯೂ ಆಗಿಲ್ಲ. ಮಾಲಿನ್ಯ ಮಂಡಳಿ ವರ್ಗಾವಣೆ ಭ್ರಷ್ಟಾಚಾರದ ಆರೋಪ ಕಾಂಗ್ರೆಸ್ ನವರು ಮಾಡಿದ್ದಾರೆ. ತನಿಖೆ ಆಗಬೇಕು ಎನ್ನುತ್ತಿದ್ದಾರೆ, ದಾಖಲೆಗಳನ್ನು ಕೊಡಲಿ, ಸರ್ಕಾರ ತನಿಖೆ ಮಾಡುತ್ತದೆ ಎಂದರು.

    ಸಚಿವ ಉಮೇಶ ಕತ್ತಿ ಉತ್ತರ ಕರ್ನಾಟಕದ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದವರು ಸಿಎಂ ಆಗಬೇಕು ಎಂಬುದು ನಿಜ. ಉಮೇಶ ಕತ್ತಿ ಮುಂದಿನ ಸಿಎಂ ಎಂದು ಹೇಳಿದ್ದಾರೆ. ನಾಳೆಯೇ ಆಗುತ್ತಾರೆ ಎಂದು ಅವರು ಹೇಳಿಲ್ಲವಲ್ಲ. ಅಲ್ಲದೆ ಉಮೇಶ ಕತ್ತಿ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಬರಬೇಕಿದೆ, ಆದರೆ ನಾಳೆ, ನಾಡಿದ್ದು, ಈ ವರ್ಷದಲ್ಲಿ ಅಂತಲ್ಲ, ಆದರೆ ಮುಂದೆ ಉತ್ತರ ಕರ್ನಾಟಕಕ್ಕೆ ಅವಕಾಶ ಬರೇಕಿದೆ, ಖಂಡಿತವಾಗಿಯೂ ಉತ್ತರ ಕರ್ನಾಟಕದವರು ಸಿಎಂ ಆಗಬೇಕು. ಆದರೆ ಇದೇ ಅವಧಿಯಲ್ಲಿ ಎಂದು ಅರ್ಥವಲ್ಲ ಎಂದರು.

  • ಸಿಎಂ ಬದಲಾವಣೆ ವದಂತಿ – ಬಿಎಸ್‍ವೈ ಬಣ ಹೇಳೋದು ಏನು? ರೇಸ್‍ನಲ್ಲಿ ಯಾರಿದ್ದಾರೆ?

    ಸಿಎಂ ಬದಲಾವಣೆ ವದಂತಿ – ಬಿಎಸ್‍ವೈ ಬಣ ಹೇಳೋದು ಏನು? ರೇಸ್‍ನಲ್ಲಿ ಯಾರಿದ್ದಾರೆ?

    ಬೆಂಗಳೂರು: ನಾಯಕತ್ವ ಬದಲಾವಣೆಗೆ ಒಂದು ಬಣ ಯತ್ನಿಸುತ್ತಿರೋ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತರ ಜೊತೆ ಸಭೆ ನಡೆಸಿದ್ದಾರೆ. ವಿರೋಧಿ ಬಣಕ್ಕೆ ಸಿಎಂ ಆಪ್ತರು ಸಂದೇಶ ಕೂಡ ರವಾನಿಸಿದ್ದಾರೆ.

    ಕೆಲವೊಂದಿಷ್ಟು ಜನ ದೆಹಲಿಯಲ್ಲಿ ಕೂತು ಆಟವಾಡುತ್ತಿದ್ದಾರೆ. ಅವರು ಚುನಾವಣೆ ಗೆಲ್ಲಲು ಆಗದವರು ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಕೋವಿಡ್ ಕಾಲದಲ್ಲಿ ಇಂಥಾ ಕೆಲಸ ಮಾಡಿದವರಿಗೆ ಜನ ಪಾಠ ಕಲಿಸ್ತಾರೆ ಎಂದು ಎಚ್ಚರಿಸಿದ್ದಾರೆ. ನಾನು ಪ್ರಹ್ಲಾದ್ ಜೋಷಿ ಹತ್ತಿರ ಮಾತಾಡಿದ್ದೇನೆ. ಅವರು ರಾಜ್ಯ ರಾಜಕಾರಣಕ್ಕೆ ಬರಲ್ಲ ಅಂದಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

    ನಮ್ಮ ಪಕ್ಷದ ನಾಯಕರಲ್ಲಿ ಯಾರಾದ್ರೂ ಮುಂದಿನ ಸಿಎಂ ಆಗ್ತೀವಿ ಅಂತ ಹೊಸ ಬಟ್ಟೆ ಹೊಲಿಸಿದ್ರೆ, ಅದರ ಆಸೆ ಬಿಟ್ಟು ಬಿಡಿ ಎಂದು ಎಸ್‍ಆರ್ ವಿಶ್ವನಾಥ್ ಗುಡುಗಿದ್ದಾರೆ. ಇನ್ನೆರಡು ವರ್ಷವೂ ಯಡಿಯೂರಪ್ಪನವ್ರೇ ಸಿಎಂ. ಮುಂದಿನ ಚುನಾವಣೆ ಕೂಡಾ ಅವರ ನೇತೃತ್ವದಲ್ಲೇ ಎದುರಿಸ್ತೇವೆ. ಕೆಲವರು ದೆಹಲಿಗೆ ಹೋದಾಕ್ಷಣ ಸಿಎಂ ಬದಲಾಗಲ್ಲ ಎಂದು ಬಿಎಸ್‍ವೈ ವಿರೋಧಿ ಟೀಂಗೆ ಗುದ್ದು ನೀಡಿದ್ದಾರೆ. ಇದನ್ನೂ ಓದಿ – ಸಿಎಂ ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?


    ಮಾಡಾಳ್ ವಿರೂಪಾಕ್ಷಪ್ಪ ಮಾತಾಡಿ, ಸಿಎಂ ಬದಲು ಮಾಡೋಕೆ ಬಿಎಸ್‍ವೈ ಏನು ತಪ್ಪು ಮಾಡಿದ್ದಾರೆ. ಪಕ್ಷ ಅಂದ್ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತೆ ಎಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ಶಾಸಕ ಪ್ರೀತಂಗೌಡ, ನಾನು ರಕ್ತದಲ್ಲಿ ಬರೆದುಕೊಡ್ತೇನೆ. ಯಡಿಯೂರಪ್ಪ ಸಿಎಂ ಆಗಿ ಪೂರ್ಣಾವಧಿ ಪೂರೈಸ್ತಾರೆ. 40 ಜನ ಡೆಲ್ಲಿಗೆ ಹೋದ್ರೂ ಏನು ಆಗಲ್ಲ ಎಂದು ಗುಡುಗಿದ್ದಾರೆ. ಮುಂದೊಂದು ದಿನ ವಿಜಯೇಂದ್ರ ಸಿಎಂ ಕೂಡ ಆಗ್ತಾರೆ. ನಾವೆಲ್ಲಾ ಅವರ ಪರ ಎಂದು ಪ್ರೀತಂ ಗೌಡ ಸ್ಪಷ್ಟಪಡಿಸಿದ್ದಾರೆ. ಸಚಿವರಾದ ಗೋಪಾಲಯ್ಯ, ಬಿಸಿ ಪಾಟೀಲ್ ಕೂಡ ಬಿಎಸ್‍ವೈಗೆ ಜೈ ಎಂದಿದ್ದಾರೆ.

    ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ 7 ಮಂದಿ ಉತ್ತರಾಧಿಕಾರಿಗಳ ಹೆಸರುಗಳು ಕೇಳಿಬರುತ್ತಿವೆ. ಬಿಎಸ್‍ವೈ ನಂತರ ಈ 7 ನಾಯಕರಲ್ಲಿ ಇಬ್ಬರಿಗೆ ಅದೃಷ್ಟ ಖುಲಾಯಿಸಬಹುದು ಎನ್ನಲಾಗಿದೆ.

    ಸಿಎಂ ರೇಸ್‍ನಲ್ಲಿ ಯಾರಿದ್ದಾರೆ ?
    ನಂ. 1 – ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
    ನಂ. 2  – ಅರವಿಂದ ಬೆಲ್ಲದ್, ಶಾಸಕ
    ನಂ. 3 – ಶಿವಕುಮಾರ್ ಉದಾಸಿ, ಹಾವೇರಿ ಸಂಸದ
    ನಂ. 4 – ಬಸವರಾಜ್ ಬೊಮ್ಮಾಯಿ, ಸಚಿವ
    ನಂ. 5 – ಗೋವಿಂದ ಕಾರಜೋಳ, ಡಿಸಿಎಂ
    ನಂ. 6 – ಅಶ್ವಥ್ ನಾರಾಯಣ್, ಡಿಸಿಎಂ
    ನಂ. 7 – ಮುರುಗೇಶ್ ನಿರಾಣಿ, ಸಚಿವ