ಹುಬ್ಬಳ್ಳಿ/ಧಾರವಾಡ: 5 ವರ್ಷದ ಬಾಲಕಿ ಮೇಲೆ ಆತ್ಯಾಚಾರಕ್ಕೆ ಯತ್ನಿಸಿ, ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲೆ ಕಟ್ಟಿನಿಟ್ಟಿನ ಕ್ರಮ ಆಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪ್ರತಿಕ್ರಿಯಿಸಿದ್ದಾರೆ.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಈ ಘಟನೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದರಲ್ಲಿ ನಾನು ರಾಜಕೀಯ ಮಾತನಾಡುವುದಿಲ್ಲ. ಆದರೆ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಆಗಬೇಕು. ಎಲ್ಲ ರೀತಿಯ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.ಇದನ್ನೂ ಓದಿ: ನನ್ನ ಮೇಲಿನ ಗುತ್ತಿಗೆದಾರರ ಎರಡೂ ಆರೋಪಗಳು ನಿರಾಧಾರ – ರವಿ ಬೋಸರಾಜು
ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಿಹಾರ್ ಮೂಲದ ಸೈಕೋಪಾತ್ ಈ ಕೃತ್ಯ ಎಸಗಿದ್ದಾನೆ. ಘಟನೆಯನ್ನು ತೀವ್ರವಾಗಿ ಖಂಡಿಸಿದ ಸ್ಥಳೀಯರು ಪೊಲೀಸ್ ಠಾಣೆ ಎದುರು ಜಮಾಯಿಸಿ ಆಕ್ರೋಶ ಹೊರಹಾಕಿದರು.
ಹುಬ್ಬಳ್ಳಿ: ಹನುಮ ಜಯಂತಿ ಪ್ರಯುಕ್ತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಬೆಳಗಾವಿ (Belagavi) ಜಿಲ್ಲೆಯ ಕುಲಗೋಡ ಗ್ರಾಮದ ಪ್ರಸಿದ್ಧ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರು: ಕಾಂಗ್ರೆಸ್ಸಿನವರು ಕೇವಲ ಹಿಂದೂ ವಿರೋಧಿಯಲ್ಲ, ದಲಿತ ವಿರೋಧಿ ಕೂಡ ಎಂದು ಜನರಿಗೆ ಭೀಮ ಹೆಜ್ಜೆ ಕಾರ್ಯಕ್ರಮದ ಮೂಲಕ ತಿಳಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದರು.
`ಭೀಮ ಹೆಜ್ಜೆ 100ರ ಸಂಭ್ರಮ’ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ (Dr.B R Ambedkar) ಅವರು ನಿಪ್ಪಾಣಿಗೆ ಬಂದು 100 ವರ್ಷಗಳಾದ ಹಿನ್ನೆಲೆಯಲ್ಲಿ, ಅಂಬೇಡ್ಕರರ ಜನ್ಮದಿನವೂ ಬರುತ್ತಿರುವ ಸಲುವಾಗಿ 100 ವರ್ಷದ ನೆನಪನ್ನು ಭೀಮ ಹೆಜ್ಜೆ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಇದನ್ನೂ ಓದಿ: ಬಿಹಾರ ಚುನಾವಣೆ ವೇಳೆ ಕೇಂದ್ರ ಸರ್ಕಾರ ಉಗ್ರ ರಾಣಾನನ್ನ ಗಲ್ಲಿಗೇರಿಸಲಿದೆ: ಸಂಜಯ್ ರಾವತ್
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಯಾವ ಕಾರಣಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರೋ ಅದನ್ನು ಜನರಿಗೆ ನೆನಪಿಸಲಾಗುವುದು. ಕಾಂಗ್ರೆಸ್ ಪಕ್ಷವು ಅವರಿಗೆ ಅನ್ಯಾಯ ಮಾಡಿದ್ದರು. ಅವರು ಸಂವಿಧಾನ ರಚನಾ ಸಭೆಯಲ್ಲಿ ಇರಬಾರದೆಂಬ ಕಾರಣಕ್ಕೆ ಹಿಂದೂ ಬಾಹುಳ್ಯದ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ (Pakistana) ಬಿಟ್ಟು ಕೊಟ್ಟ ಸಂಗತಿಯನ್ನು, ಎರಡೆರಡು ಬಾರಿ ಅವರನ್ನು ಸೋಲಿಸಿದ್ದು, ಮಧ್ಯಂತರ ಸರ್ಕಾರ ಬಾರದಂತೆ ತಡೆದುದ್ದನ್ನು ತಿಳಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್
ಬೆಳಗಾವಿ (Belagavi) ಅಧಿವೇಶನದಲ್ಲಿ ನಮ್ಮ ಶಾಸಕಿ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಬಂದು 100 ವರ್ಷವಾಗುತ್ತಿದೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ. ಬೆಳಗಾವಿಗೆ ಮಹಾತ್ಮ ಗಾಂಧಿಯವರು ಬಂದ ಕಾರ್ಯಕ್ರಮವನ್ನು ಅವರು ಮಾಡಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಹಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ- ಗುರುವಾರ ಒಂದೇ ದಿನ 58 ಬಲಿ
ಅಂಬೇಡ್ಕರ್ ಅವರ ಭೇಟಿಯ 100 ವರ್ಷ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಸರ್ಕಾರ ಈ ಕಾರ್ಯಕ್ರಮ ಮಾಡಿದ್ದರೆ ನಾವು ಮಾಡುತ್ತಿರಲಿಲ್ಲ. ಇದು ನಮ್ಮ ಬದ್ಧತೆ ಎಂದು ಹೇಳಿದರು.
ಬೆಂಗಳೂರು/ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ನಾಳೆಯಿಂದ (ಏಪ್ರಿಲ್ 7) ಬಿಜೆಪಿ (BJP) 2ನೇ ಹಂತದ ಹೋರಾಟ ಕೈಗೆತ್ತಿಕೊಂಡಿದೆ. ಜನಾಕ್ರೋಶ ಯಾತ್ರೆ (JanaKrosha Yatra) ಹೆಸರಿನಲ್ಲಿ ಸರ್ಕಾರದ ವಿರುದ್ಧ ನಾಲ್ಕು ಹಂತಗಳಲ್ಲಿ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ.
ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಏಪ್ರಿಲ್ 7 ರಿಂದ ಜನಾಕ್ರೋಶ ಯಾತ್ರೆ.
ಸೋಮವಾರ ಬೆಳಗ್ಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ (Mysuru Chamundehwari Temple) ವಿಶೇಷ ಪೂಜೆ ಸಲ್ಲಿಸುಕ ಮೂಲಕ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು (Pralhad Joshi) ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸರ್ಕಾರದ ದರ ಏರಿಕೆ ನೀತಿ, ಭ್ರಷ್ಟಾಚಾರ, ಕಮೀಷನ್, ದುರಾಡಳಿತ, ಕಾನೂನು ಅವ್ಯವಸ್ಥೆ, ಮುಸ್ಲಿಂ ಓಲೈಕೆ ಖಂಡಿಸಿ ಜನಾಕ್ರೋಶ ಯಾತ್ರೆ ನಡೆಯಲಿದೆ.
ಎಲ್ಲಿ, ಯಾವಾಗ ಜನಾಕ್ರೋಶ ಯಾತ್ರೆ? ಏಪ್ರಿಲ್ 7-12ರ ವರೆಗೆ ಮೊದಲ ಹಂತದ ಜನಾಕ್ರೋಶ ಯಾತ್ರೆಯು ಮೈಸೂರು/ಚಾಮರಾಜನಗರ, ಮಂಡ್ಯ,/ಹಾಸನ, ಕೊಡಗು/ಮಂಗಳೂರು, ಉಡುಪಿ/ ಚಿಕ್ಕಮಗಳೂರು, ಶಿವಮೊಗ್ಗ/ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಯಲಿದೆ.
ಏಪ್ರಿಲ್ 15-18ರ ವರೆಗೆ ಎರಡನೇ ಹಂತದ ಜನಾಕ್ರೋಶ ಯಾತ್ರೆಯು ನಿಪ್ಪಾಣಿ/ಬೆಳಗಾವಿ/ಹುಬ್ಬಳ್ಳಿ, ಬೀದರ್/ಕಲಬುರ್ಗಿ, ವಿಜಯಪುರ/ಬಾಗಲಕೋಟೆಗಳಲ್ಲಿ ನಡೆಯಲಿದೆ.
ಏಪ್ರಿಲ್ 21-25ರ ವರೆಗೆ ಮೂರನೇ ಹಂತದ ಯಾತ್ರೆಯು ಯಾದಗಿರಿ/ರಾಯಚೂರು, ಬಳ್ಳಾರಿ/ವಿಜಯನಗರ, ಕೊಪ್ಪಳ/ಗದಗ, ಹಾವೇರಿ/ದಾವಣಗೆರೆ, ಚಿತ್ರದುರ್ಗ/ತುಮಕೂರು ಜಿಲ್ಲೆಗಳಲ್ಲಿ ನಡೆಯಲಿದೆ
ಏಪ್ರಿಲ್ 27- ಮೇ 03ರ ವರೆಗೆ ನಾಲ್ಕನೇ ಹಂತದ ಯಾತ್ರೆ ಚಿಕ್ಕಬಳ್ಳಾಪುರ/ಕೋಲಾರ, ಬೆಂಗಳೂರು/ಬೆಂಗಳೂರು ಗ್ರಾಮಾಂತರ/ರಾಮನಗರ ಜಿಲ್ಲೆಗಳಲ್ಲಿ ನಡೆಯಲಿದೆ.
– ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ
– ಪೊಲೀಸರು ಕಾಂಗ್ರೆಸ್ ಸರ್ಕಾರದ ಗುಲಾಮರಾ?; ಸಚಿವ ರೋಷಾವೇಶ
ಹುಬ್ಬಳ್ಳಿ: ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮುಸ್ಲಿಮರ ವಿರುದ್ಧವಾಗಿಲ್ಲ. ಕಾಂಗ್ರೆಸ್ ನಾಯಕರಿಗೆ ರಾಜಕೀಯವಾಗಿ ಹಿನ್ನಡೆ ಆಗುತ್ತೆ ಅಂತ ಮಸೂದೆಗೆ ವಿರುದ್ಧ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ. ಸೋನಿಯಾ ಗಾಂಧಿ (Sonia Gandhi) ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ರಾಜಾ ಮಾತೆ ಸುಪುತ್ರ ರಾಹುಲ್ ಗಾಂಧಿ ಈ ಹಿಂದೆ ಬಿಲ್ ಹರಿದು ಹಾಕಿದ್ದಾರೆ. ಅವರು ಈ ಬಿಲ್ ಬಗ್ಗೆ ಮಾತನಾಡುತ್ತಾರೆ. ಮೋದಿ ಸರ್ಕಾರ ಅಸಂವಿಧಾನಕವಾಗಿ ಬಿಲ್ ಮಂಡನೆ ಮಾಡಿಲ್ಲ. ಕಾಂಗ್ರೆಸ್ ನಾಯಕರಿಗೆ ಈ ಬಿಲ್ ನಿಂದ ರಾಜಕೀಯವಾಗಿ ಹಿನ್ನಡೆ ಆಗುತ್ತೆ, ಹೀಗಾಗಿ ವಿರೋಧ ಮಾಡುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ಇದರ ಪ್ರಭಾವ ಗೊತ್ತಾಗುತ್ತದೆ ಎಂದರು.
ವಕ್ಫ್ ಬಿಲ್ ಮುಸ್ಲಿಮರ (Muslims) ವಿರುದ್ಧ ಇಲ್ಲ. 39 ಲಕ್ಷ ಎಕರೆಗೆ 168 ಕೋಟಿ ರೆವೆನ್ಯೂ ಬರ್ತಾ ಇದೆ. ಕರ್ನಾಟಕದಲ್ಲಿ 54 ಸಾವಿರ ಎಕರೆ ವಕ್ಫ್ ಜಮೀನಿದೆ. ಈ ಆಸ್ತಿಯನ್ನ ಸರಿಯಾಗಿ ಬಳಸಿದರೆ, ಸಚ್ಛರ ಕಮೀಟಿ ವರದಿ ಪ್ರಕಾರ 12 ಸಾವಿರ ಕೋಟಿ ಆದಾಯ ಬರ್ತಿತ್ತು. ಇದರಲ್ಲಿ ದುರಪಯೋಗ, ಸ್ವಜನ ಪಕ್ಷಪಾತ ಇದೆ, ಆಸ್ತಿ ನುಂಗ್ತಾ ಇದ್ದಾರೆ. ಆದ್ದರಿಂದ ನಾವೆಲ್ಲ ವಿಚಾರ ಮಾಡಿ ಬಿಲ್ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾರವಾರ | ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಚಾಲನೆ
ಈ ವಕ್ಫ್ ಬಿಲ್ ಬಗ್ಗೆ ಕೆಲವರಿಗೆ ತಪ್ಪಾಗಿ ಅರ್ಥ ಮಾಡಿಸ್ತಿದ್ದಾರೆ. ಬಹಳ ಹಿಂದೂಗಳ ಆಸ್ತಿ ವಕ್ಫ್ ಆಗಿದೆ. ವಕ್ಫ್ ಬೋರ್ಡ್ ಇಂಡಿಪೆಂಡೆಂಟ್ ಇದೆ. ಅನೇಕರ ಮುಸ್ಲಿಮರ ಮನೆಗಳನ್ನ ವಕ್ಫ್ ಆಸ್ತಿ ಮಾಡಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿ ಅನೇಕರ ಮುಸ್ಲಿಂ ಮನೆ ವಕ್ಫ್ ಆಸ್ತಿ ಆಗಿವೆ. ಆದ್ದರಿಂದ ವಕ್ಫ್ ಬೋರ್ಡ್‌ನಲ್ಲಿ ಸರಿಯಾದ ರೀತಿ ಮ್ಯಾನೇಜಮೆಂಟ್ ಆಗಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ವರ್ಮಾ ಪ್ರಮಾಣ ವಚನ ಸ್ವೀಕಾರ
ಇನ್ನೂ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮತ್ತು ಸರ್ಕಾರ ಎಷ್ಟು ಅಸಹಿಷ್ನತೆ ಇದೆ ಅಂತ ಸ್ಪಷ್ಟ ಆಗುತ್ತೆ. ಒಬ್ಬ ಶಾಸಕನಿಗೆ ಜಾತಿ ಅಥವಾ ಅವಾಚ್ಯ ಶಬ್ದದಿಂದ ಬೈದ್ರೆ, ಶೌಚಾಲಯ ಕೆಟ್ಟು ಹೋಗಿದ್ದಕ್ಕೆ ಫೋಟೋ ಹಾಕಿದ್ದಾರೆ ಅದರಲ್ಲೆನು ತಪ್ಪು? ಮೃತಪಟ್ಟ ಯುವಕ ಸೇರಿ ಇಬ್ಬರು ಯುವಕರ ಮೇಲೆ ಎಫ್‌ಐಆರ್ ಹಾಕ್ತಾರೆ. ಅಧಿಕಾರದ ಧರ್ಪ, ದುರಹಂಕಾರ ಯಾವ ಪ್ರಮಾಣದಲ್ಲಿದೆ? ಎಫ್‌ಐಆರ್ ಕೋರ್ಟ್‌ನಲ್ಲಿ ಸ್ಟೇ ಆಗುತ್ತೆ. ಆದರೂ ರೌಡಿ ಶೀಟರ್ ತಗಿತೇನೆ ಅಂತ ಬೆದರಿಸಿದ್ದಾರೆ. ಪೊಲೀಸರಿಗೆ ಹೇಳ್ತೇನೆ ಸರ್ಕಾರ ಒಂದೇ ಇರೋದಿಲ್ಲ, ಯಾವ ಆಧಾರದ ಮೇಲೆ ರೌಡಿ ಶೀಟರ್ ಹಾಕ್ತಿರಾ? ಪೊಲೀಸರೇ ಕಾಂಗ್ರೆಸ್ ಪಕ್ಷದ ಗುಲಾಮರಾ ನೀವು? ನಾವು ಕೂಡ ಸರ್ಕಾರದಲ್ಲಿದ್ದೇವೆ, ರಾಮಾನುಜ, ಎಸ್‌ಪಿ ಅಮಾನತ್ತು ಆಗಬೇಕು. ಪೊಣ್ಣನ್ನ ಅನ್ನೋನು ರಾಜಕೀಯಕ್ಕೆ ಅನ್ ಫಿಟ್ ಇದ್ದಾರೆ. ಕೆಲವೊಮ್ಮೆ ನಮ್ಮ ಫೋಟೋ ಕೂಡ ಹಾಕ್ತಾರೆ ನಾವು ಎಫ್‌ಐಆರ್ ಹಾಕಿದ್ದೇವಾ? ಆತನ ವಾಟ್ಸಪ್‌ನಲ್ಲಿ ಸ್ಪಷ್ಟವಾಗಿ ಹೆಸರಿದೆ, ಶಾಸಕನ ಹೆಸರು ಬರೆದಿದ್ದಾರೆ. ಇವರ ಮೇಲೆ ಒಂದೂ ಕೇಸ್ ಹಾಕಲ್ಲ ಒಳ್ಳೆ ರೀತಿಯ ಕೆಲಸ ಮಾಡುವ ಪೊಲೀಸರು ನಮ್ಮಲ್ಲಿ ಇದ್ದಾರೆ. ಹೈಕೋರ್ಟ್ ಸ್ಟೇ ಮಾಡಿದ ಮೇಲೂ ರೌಡಿ ಶೀಟರ್ ಹಾಕಿದ್ರೆ ಇಬ್ಬರು ಆಫೀಸರ್ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿ/ಬೆಂಗಳೂರು: ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ (Hubballi) ರಾಜಧಾನಿ ಬೆಂಗಳೂರಿಗೆ (Bengaluru) ಸಂಪರ್ಕ ಕಲ್ಪಿಸಲು ಮತ್ತೊಂದು ವಿಮಾನಯಾನ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿಳಿಸಿದರು.
ಹುಬ್ಬಳ್ಳಿ-ಬೆಂಗಳೂರ ಮಧ್ಯೆ ಮತ್ತೊಂದು ವಿಮಾನಸೇವೆ.
ರಾಜ್ಯದ ರಾಜಧಾನಿಯೊಂದಿಗೆ ವಾಣಿಜ್ಯ ನಗರಿಯಾದ ಹುಬ್ಬಳ್ಳಿಯಿಂದ ಈಗ ಮತ್ತೊಂದ ವಿಮಾನಯಾನ ಶೀಘ್ರದಲ್ಲಿಯೇ ( ಮಾರ್ಚ 30ರಿಂದ ) ಆರಂಭವಾಗಲಿದೆ. ಇದರೊಂದಿಗೆ ದಿನಕ್ಕೆ ಮೂರು ವಿಮಾನಗಳು ಬೆಂಗಳೂರು ಮತ್ತು ಹುಬ್ಬಳ್ಳಿ ಮಧ್ಯ ಸಂಚಾರ ಮಾಡಲಿವೆ
ಯಾವ್ಯಾವ ವಿಮಾನಗಳು ಸಂಚರಿಸಲಿವೆ?
ಬೆಂಗಳೂರು – ಹುಬ್ಬಳ್ಳಿ 6E7056 ಬೆಳಿಗ್ಗೆ 9:55 – ಬೆಳಿಗ್ಗೆ 11:20
ಹುಬ್ಬಳ್ಳಿ- ಬೆಂಗಳೂರು 6E7263 ಬೆಳಿಗ್ಗೆ 11:55 – ಮಧ್ಯಾಹ್ನ 1:20
ಹುಬ್ಬಳ್ಳಿ – ಬೆಂಗಳೂರು ನಡುವೆ ಮತ್ತೊಂದು ವಿಮಾನಸೇವೆಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಸಚಿವರು ಇಂಡಿಗೋ (Indigo) ಆಡಳಿತ ವರ್ಗಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಹುಬ್ಬಳ್ಳಿ ಮತ್ತು ಅಹ್ಮದಾಬಾದ್ (Ahmedabad) ನಡುವೆ ವಿಮಾನಯಾನ ಆರಂಭಿಸುವಂತೆ ಇಂಡಿಗೋ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.
ಈ ಸೇವೆಯಿಂದ ಹುಬ್ಬಳ್ಳಿ – ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನಟಿ ರಮೋಲ ಒಂದು ದಿನದ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ!
ಹುಬ್ಬಳ್ಳಿ: ರನ್ಯಾ ರಾವ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಿರ್ವಹಣೆ ನೋಡಿದರೆ ಯಾರನ್ನೋ ರಕ್ಷಣೆ ಮಾಡಲು ಪ್ರಯತ್ನ ಮಾಡುತ್ತಿದ್ದಂತೆ ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಆರೋಪಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಲು ಸಾಲಾಗಿ ಇಷ್ಟು ಆರೋಪಗಳು ಬರುತ್ತಿರುವುದು ನೋಡಿದರೆ ಇದರಲ್ಲಿ ರಾಜಕಾರಣಿಗಳು ಇರುವುದು ಸ್ಪಷ್ಟವಾಗುತ್ತಿದೆ. ಯಾರೋ ಮಂತ್ರಿಯನ್ನು ರಕ್ಷಣೆ ಮಾಡುವ ಕಾರ್ಯ ನಡೆದಿದೆ. ಇದು ದೇಶದ್ರೋಹದ ಕೆಲಸವಾಗಿದೆ. ಅಕ್ರಮವಾಗಿ ತಂದ ಬಂಗಾರ ಎಲ್ಲಿಗೆ ಹೋಗುತ್ತಿತ್ತು. ದೇಶದ್ರೋಹಿಗಳಿಗಾ, ನಕ್ಸಲ್‌ಗಳಿಗಾ, ಎಲ್ಲಿಗೆ ಹೋಗುತ್ತಿತ್ತು? ಇದರಲ್ಲಿ ಸರ್ಕಾರ ಯಾರನ್ನು ರಕ್ಷಣೆ ಮಾಡಲು ಹೊರಟಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇದೆ ಎಂಬ ಅನುಮಾನವಿದೆ. ಡಿಐಜಿ ಮಗಳು ಇದ್ದಾರೆ ಎನ್ನುವ ಆರೋಪಯಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಗುಜರಾತ್ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ – ಶನಿವಾರ ಡೆಲ್ಲಿ ವಿರುದ್ಧ ಫೈನಲ್
ಸಿಐಡಿಗೆ ತನಿಖೆಗೆ ಯಾಕೆ ನೀಡಿದರು. ಒಬ್ಬ ಡಿಐಜಿಯನ್ನು ಒಬ್ಬ ಸಿಐಡಿ ಎಸ್ಪಿ ತನಿಖೆ ಮಾಡಲು ಆಗುತ್ತಾ? ಗೃಹ ಸಚಿವ ಪರಮೇಶ್ವರ ಅವರೇ ಯಾರದ್ದೋ ಒತ್ತಡದಿಂದ ಹೇಳಿಕೆ ನೀಡಬೇಡಿ ಎಂದಿದ್ದಾರೆ. ಇನ್ನೂ ಧರ್ಮಾಧಾರಿತ ಮೀಸಲಾತಿ ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ನಾವು ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮರಾಠಿಯಲ್ಲಿ ಮಾತನಾಡುವಂತೆ ಪಿಡಿಓಗೆ ಧಮ್ಕಿ – ಆರೋಪಿ ಹಿಂಡಲಗಾ ಜೈಲಿಗೆ
ಯಾವ ಜಮೀರ್ ಅಹ್ಮದ್ ಹೇಳಿದ್ರೂ ಆಗಲ್ಲ. ಈ ಹಿಂದೆ ಜಮೀರ್ ನೀಡಿದ್ದ ಒಂದು ಹೇಳಿಕೆ ಏನಾಗಿದೆ ಗೊತ್ತು ಎಷ್ಟು ಆತ್ಮಹತ್ಯೆಗಳಾಗಿವೆ. 40 ಪರ್ಸೆಂಟ್ ಕಮಿಷನ್ ತನಿಖೆ ನ್ಯಾಯಯುತವಾಗಿ ಆಗಬೇಕು. ರಿಪೋರ್ಟ್ ಮಂಡಿಸಿ, ನೀವು ಯಾರಿಗೆ ನೋಟಿಸ್ ಕೊಟ್ಟಿದೀರಿ ನಮಗೆ ಗೊತ್ತಿರುವ ಹಾಗೆ ಯಾರಿಗೂ ನೋಟಿಸ್ ಕೊಟ್ಟಿಲ್ಲ. ಆರೋಪ ಬಂದವರಿಗೆ ನೋಟಿಸ್ ಕೊಟ್ಟಿಲ್ಲ. ಮೊದಲು ನೋಟಿಸ್ ಕೊಡಿ ನೋಟಿಸ್ ಬಂದ ಮೇಲೆ ನಾವು ಉತ್ತರ ಕೊಡುತ್ತೇವೆ. ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರತ್ಯೇಕ ಕರಾವಳಿಯ ಕೂಗು ಎಬ್ಬಿಸಿದ ಪೂಂಜಾ
-ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಜೊತೆ ಚರ್ಚೆ ನಡೆಸಿ, ಮನವಿ ಸಲ್ಲಿಕೆ -ಕೆಂಪು ಮೆಣಸಿನಕಾಯಿ ಬೆಲೆ ಕುಸಿತದಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ರೈತರು
ನವದೆಹಲಿ: ಕೆಂಪು ಮೆಣಸಿನಕಾಯಿ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರ ನೆರವಿಗಾಗಿ ಕರ್ನಾಟಕಕ್ಕೂ ಬೆಂಬಲ ಬೆಲೆ ಯೋಜನೆ ವಿಸ್ತರಿಸುವಂತೆ ಕೇಂದ್ರ ಆಹಾರ, ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಜೊತೆಗೆ ರಾಜ್ಯದ ಕೆಂಪು ಮೆಣಸಿನಕಾಯಿ ಹಿತರಕ್ಷಣೆ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು.
ರಾಜ್ಯದಲ್ಲಿ ಕೆಂಪು ಮೆಣಸಿನಕಾಯಿ ಬೆಳೆಗಾರರು ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಕುಸಿತದಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಹಕರು ಕೇಳುವಂತಹ ಕನಿಷ್ಠ ಬೆಲೆಗೆ ಮಾರಾಟ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹಾಗಾಗಿ ಇದಕ್ಕೆ ಪರಿಹಾರ ಮಾರ್ಗ ಕಲ್ಪಿಸಿ ಎಂದರು.
ಮೆಣಸಿನಕಾಯಿ ಬೆಳೆದ ಕರ್ನಾಟಕದ ರೈತರ ವಿಷಯಕ್ಕೆ ಸಂಬಂಧಿಸಿದಂತೆ ನವದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಚರ್ಚೆ ನಡೆಸಿದೆನು.
ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ನೆರವು ಅಗತ್ಯ:
ಕರ್ನಾಟಕದಲ್ಲಿ ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ ಬೆಲೆ ಕೊರತೆ ಪಾವತಿ ಯೋಜನೆ ಅನುಷ್ಠಾನ ಅತ್ಯಗತ್ಯವಾಗಿದೆ. ಮಾರುಕಟ್ಟೆಯಲ್ಲಿನ ತೀವ್ರ ಬೆಲೆ ಕುಸಿತದಿಂದಾಗಿ ಕರ್ನಾಟಕದ ಅನೇಕ ಕೆಂಪು ಮೆಣಸಿನಕಾಯಿ ರೈತರು ಗಂಭೀರ ಸಮಸ್ಯೆ, ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿದ್ದು, ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಮನವರಿಕೆ ಮಾಡಿದರು.
ಕರ್ನಾಟಕದ ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ರೈತರು ಕೆಂಪು ಮೆಣಸಿನಕಾಯಿ ಕೃಷಿಯನ್ನು ಅವಲಂಬಿಸಿದ್ದಾರೆ ಮತ್ತು ಕೆಂಪು ಮೆಣಸಿನಕಾಯಿ ಪ್ರಸ್ತುತ ಮಾರುಕಟ್ಟೆ ಬೆಲೆ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಅನೇಕ ರೈತರನ್ನು ಸಾಲದ ಬಿಕ್ಕಟ್ಟಿಗೆ ಸಿಲುಕಿಸಿದೆ. ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ಕರ್ನಾಟಕ ರಾಜ್ಯಕ್ಕೆ ವಿಸ್ತರಿಸುವ ತುರ್ತು ಅವಶ್ಯಕತೆಯಿದ್ದು, ಈ ಮೂಲಕ ರಾಜ್ಯದ ರೈತರ ನೆರವಿಗೆ ಧಾವಿಸಿದೆ ಎಂದು ಒತ್ತಾಯಿಸಿದರು.
ಕೃಷಿ ಸಚಿವರ ಭರವಸೆ: ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿಗೆ ಸ್ಪಂದಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕರ್ನಾಟಕದ ಕೆಂಪು ಮೆಣಸಿನಕಾಯಿ ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.
– ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಗೈದು ಭಕ್ತಿ ಸಮರ್ಪಣೆ
ಪ್ರಯಾಗ್‌ರಾಜ್/ಹುಬ್ಬಳ್ಳಿ: ವಿಶ್ವಪ್ರಸಿದ್ಧ ಹಿಂದೂ ಧರ್ಮದ ಶ್ರೇಷ್ಠ ಪ್ರಯಾಗ್‌ರಾಜ್ (Prayag raj) ಮಹಾಕುಂಭದಲ್ಲಿ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi), ಕುಟುಂಬ ಸಹಿತ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಗೈದಿದ್ದಾರೆ.
ತ್ರಿವೇಣಿ ಸಂಗಮದ ಪವಿತ್ರ ಗಂಗೆಯಲ್ಲಿ ಮುಳುಗೇಳುತ್ತಾ ತೀರ್ಥಸ್ನಾನ ಮಾಡಿದ ಸಚಿವರು, ಮಂತ್ರ ಪಠಣದೊಂದಿಗೆ ದೇವರಿಗೆ ನಮಸ್ಕರಿಸಿ, ಲೋಕದ ಸುಭಿಕ್ಷೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುಟುಂಬ ಸಮೇತರಾಗಿ ವಿಶಿಷ್ಠ ಭಂಗಿಯ ಭಗವಾನ್ ಹನುಮ ದೇವಾಲಯ ಹಾಗೂ ಅಕ್ಷಯವತ್‌ಗೆ ತೆರಳಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಭೂ ಒತ್ತುವರಿ ಆರೋಪ – ಎರಡನೇ ದಿನವೂ ಮುಂದುವರಿದ ಸರ್ವೇ ಕಾರ್ಯ
ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮತ್ತು ಹಿಂದೂ ಧರ್ಮದ ಶ್ರೇಷ್ಠ ಆಧ್ಯಾತ್ಮಿಕ ಮಹೋತ್ಸವವೂ ಆಗಿರುವ ಈ ಮಹಾ ಕುಂಭಮೇಳದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಅವರ ಇಡೀ ಕುಟುಂಬವೇ ಭಾಗಿಯಾಗಿ ಶ್ರದ್ಧಾಭಕ್ತಿ ಮೆರೆಯಿತು. ಸಚಿವರೊಂದಿಗೆ ಪತ್ನಿ ಜ್ಯೋತಿ ಜೋಶಿ, ಮಕ್ಕಳಾದ ಅರ್ಪಿತಾ ಜೋಶಿ, ಅನನ್ಯಾ ಜೋಶಿ, ಅನುಷಾ ಜೋಶಿ ಹಾಗೂ ಸಹೋದರ ಗೋವಿಂದ ಜೋಶಿ-ಕಮಲಾ ಜೋಶಿ ದಂಪತಿ ಸೇರಿದಂತೆ ಮಕ್ಕಳು, ಮೊಮ್ಮಕ್ಕಳಾದಿಯಾಗಿ ಕುಟುಂಬದ ಸದಸ್ಯರೆಲ್ಲರೂ ಪುಣ್ಯಸ್ನಾನ ಗೈದು ಭಕ್ತಿ ಸಮರ್ಪಿಸಿದರು. ಇದನ್ನೂ ಓದಿ: 10ಕ್ಕೂ ಹೆಚ್ಚು ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ – ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಈ ವೇಳೆ ಪ್ರಯಾಗರಾಜ್‌ನಲ್ಲಿ ಮಾಧ್ಯಮಗಳೊಂದಿಗೆ ಮಹಾಕುಂಭದ ಅನನ್ಯ ಅನುಭವವನ್ನು ಹಂಚಿಕೊಂಡ ಜೋಶಿ, ಪ್ರಯಾಗ್‌ರಾಜ್ ಮಹಾ ಕುಂಭಮೇಳ ಹಿಂದೂ ಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆಯಾಗಿ ಯಶಸ್ವಿಯಾಗಿ ಜರಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಾಮರಾಜನಗರ: ಚಿರತೆ ದಾಳಿಗೆ ನಾಲ್ಕು ಕರುಗಳು ಬಲಿ
ತ್ರಿವೇಣಿ ಸಂಗಮದಲ್ಲಿ ಇಂದು ಕುಟುಂಬ ಸಹಿತ ಪಾಲ್ಗೊಂಡು ಪವಿತ್ರ ಸ್ನಾನ ಮಾಡುವ ಸುವರ್ಣ ಅವಕಾಶ ಲಭ್ಯವಾಗಿದ್ದು ನಮ್ಮ ಪುಣ್ಯ. ಇದು ನಮಗೆ ಅತ್ಯಂತ ಮಹತ್ವದ ಮತ್ತು ಭಕ್ತಿ ಸಮರ್ಪಣೆಯ ದೈವಿಕ ಕ್ಷಣವಾಗಿದೆ ಎಂದು ಖುಷಿಪಟ್ಟರು. ಇದನ್ನೂ ಓದಿ: ಶಿಂಧೆ ನೇತೃತ್ವದ ಶಿವಸೇನೆಯ 20 ಶಾಸಕರ Y-ಭದ್ರತೆ ವಾಪಸ್ ಪಡೆದ ಫಡ್ನವಿಸ್
ಸಾವಿರಾರು ವರ್ಷಗಳಿಂದ, ವೇದ-ಪುರಾಣಕಾಲದಿಂದ ಮಹಾ ಕುಂಭಮೇಳ ಆಚರಣೆಯಲ್ಲಿದೆ. ದೇಶದೆಲ್ಲೆಡೆಯಿಂದ ಕೋಟ್ಯಂತರ ಸಂಖ್ಯೆಯಲ್ಲಿ ಸಾಧು-ಸಂತರು, ಭಕ್ತರು ಆಗಮಿಸುತ್ತಿದ್ದಾರೆ. ಅತ್ಯಂತ ಶಾಂತಿ, ಸಂಯಮದಿಂದ ಪಾಲ್ಗೊಂಡು ಅವರವರ ಪೂಜಾ ಪದ್ಧತಿಯಲ್ಲಿ ಧಾರ್ಮಿಕ ಉತ್ಸವ ಆಚರಿಸಿ ಅಭೂತಪೂರ್ವವಾಗಿ ಯಶಸ್ವಿಗೊಳಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಡೀ ದೇಶದ ಪೋಷಕರನ್ನು ನೀವು ಅವಮಾನಿಸಿದ್ದೀರಿ – ಯೂಟ್ಯೂಬರ್ ರಣವೀರ್ ಹೇಳಿಕೆಗೆ ಸುಪ್ರೀಂ ಕೆಂಡಾಮಂಡಲ
– ಕೇಂದ್ರಕ್ಕೆ ಹಣೆಪಟ್ಟಿ ಕಟ್ಟಲು ಹೊರಟಿದ್ದ ಸಿಎಂ ಯೂಟರ್ನ್
ಬೆಂಗಳೂರು: ಮೆಟ್ರೋ ದರ ಏರಿಸಿ, ಕೇಂದ್ರಕ್ಕೆ ಅದರ ಹಣೆಪಟ್ಟಿ ಕಟ್ಟಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಜನರೇ ಎದುರೇಟು ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪ್ರತಿಕ್ರಿಯಿಸಿದ್ದಾರೆ.
ಬಿಎಂಆರ್‌ಸಿಎಲ್ (BMRCL) ಮೆಟ್ರೋ ದರ ಪರಿಷ್ಕರಣೆ ಮಾಡಿದ ಬಳಿಕ ಕೇಂದ್ರ ಸರ್ಕಾರದತ್ತ ಬೆರಳು ತೋರಿಸಿ ಆರೋಪ ಹೊರಿಸಿದ್ದ ಸಿಎಂ, ಈಗ ಜನರ ವಿರೋಧ ತಾರಕಕ್ಕೇರುತ್ತಿದ್ದಂತೆ ಮಣಿದು ಬೆಲೆ ಇಳಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ತಯಾರಿಕಾ ವಲಯದಲ್ಲಿ ಮಾನವ-ಯಾಂತ್ರಿಕ ಬುದ್ಧಿಯ ಸಮನ್ವಯತೆ: ಭುವನ್ ಲೋಧಾ
ಸಿಎಂ ಯೂಟರ್ನ್:
ಬೆಂಗಳೂರಿನಲ್ಲಿ ಜನ ಮೆಟ್ರೋ ರೈಲು ಸಂಚಾರ ತಿರಸ್ಕರಿಸುತ್ತಿದ್ದಂತೆ ಸಿಎಂ ಯೂಟರ್ನ್ ಹೊಡೆದಿದ್ದಾರೆ. ಈಗ ಟಿಕೆಟ್ ದರ ಕಡಿಮೆ ಮಾಡುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಏನಾದರೂ ಮಾಡಿ, ರಾಜ್ಯದ ಜನ ಅದನ್ನು ಸಹಿಸದೇ ಇರುವುದ್ದರೆ ಅದನ್ನು ಕೇಂದ್ರ ಸರ್ಕಾರದ ಹಣೆಗೆ ಕಟ್ಟಲು ನೋಡುತ್ತದೆ ಎಂದು ಆರೋಪಿಸಿದರು.
ಬಿಎಂಆರ್ ಸಿಎಲ್ ’ನಮ್ಮ ಮೆಟ್ರೋ’ ದರ ಹೆಚ್ಚಳ ಬಳಿಕ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಆರೋಪ ಹೊರಸಿದ್ದರು.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯೂಟರ್ನ್ ಹೊಡೆಯುವ ಮೂಲಕ ಟಿಕೆಟ್ ದರ ಕಡಿಮೆ ಮಾಡಿ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೇಂದ್ರ ಸರ್ಕಾರದತ್ತ ಆರೋಪ ಮಾಡುವ… https://t.co/SYmeJo9ZzT
ಅಗತ್ಯತೆಗಳ ಬೆಲೆ ಏರಿಕೆ ಕೈ ಬಿಡಲಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದನ್ನು ಬಿಟ್ಟು ಜನಾಭಿಪ್ರಾಯಕ್ಕೆ ಗೌರವ ನೀಡಲಿ. ಇನ್ನಾದರೂ ಜನರ ಅಗತ್ಯತೆಗಳ ಬೆಲೆ ಏರಿಕೆ ನೀತಿಯನ್ನು ಕೈಬಿಡಲಿ ಎಂದು ಸಚಿವ ಪ್ರಲ್ಹಾದ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಆಗ್ರಹಿಸಿದ್ದಾರೆ.
ಎಕ್ಸ್‌ನಲ್ಲಿ ಏನಿದೆ?
ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ದರ ಹೆಚ್ಚಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಆರೋಪ ಹೊರಸಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯೂಟರ್ನ್ ಹೊಡೆಯುವ ಮೂಲಕ ಟಿಕೆಟ್ ದರ ಕಡಿಮೆ ಮಾಡಿ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದತ್ತ ಆರೋಪ ಮಾಡುವ ಸಿದ್ದರಾಮಯ್ಯನವರು, ಸುಳ್ಳು ಹೇಳುವುದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಿ ಎಂದಿದ್ದಾರೆ.ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ದುಬಾರಿಯಾದ ಗುಲಾಬಿ – ತೋಟದಲ್ಲೇ 1 ರೆಡ್ ರೋಸ್‌ಗೆ 25-30 ರೂ.