Tag: ಪ್ರಹ್ಲಾದ್ ಜೋಶಿ

  • ರಾಹುಲ್ ಗಾಂಧಿಗೆ ಎಲ್ಲೆಲ್ಲೋ ಕಣ್ಣು ಹೊಡೆಯೋದು ರೂಢಿಯಾಗಿದೆ: ಪ್ರಹ್ಲಾದ್ ಜೋಶಿ ವ್ಯಂಗ್ಯ

    ರಾಹುಲ್ ಗಾಂಧಿಗೆ ಎಲ್ಲೆಲ್ಲೋ ಕಣ್ಣು ಹೊಡೆಯೋದು ರೂಢಿಯಾಗಿದೆ: ಪ್ರಹ್ಲಾದ್ ಜೋಶಿ ವ್ಯಂಗ್ಯ

    ಧಾರವಾಡ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಎಲ್ಲೆಲ್ಲೋ ಕಣ್ಣು ಹೊಡೆಯುವ ಅಭ್ಯಾಸವಾಗಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

    ಸಿನಿಮಾ ನಟಿ ಕಣ್ಣು ಹೊಡೆಯುವಾಗ ರಾಹುಲ್ ಗಾಂಧಿ ಕಣ್ಸನ್ನೆ ಮಾಡಿದ್ದಾರೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಕಣ್ಣು ಹೊಡೆದಿದ್ದು ಒಂದು ದುರಂತ. ಅದ್ಯಾರಿಗೆ ಕಣ್ಣು ಹೊಡೆದ್ರೋ ಒಮ್ಮೆ ಅವರನ್ನೇ ಕೇಳಬೇಕು ಎಂದು ಟೀಕಿಸಿದರು.

    ಜಿಲ್ಲೆಗೊಬ್ಬರು ಸಚಿವರನ್ನು ನೇಮಿಸಲಾಗದ ಸ್ಥಿತಿಯಲ್ಲಿ ಸಿಎಂ ಕುಮಾರಸ್ವಾಮಿ ಇದ್ದಾರೆ. ನಮ್ಮ ರಾಜ್ಯದಲ್ಲಿ ಜಿಲ್ಲಾ ಉಸ್ತವಾರಿಗಳನ್ನು ನೇಮಿಸಲಾಗದ ಸರ್ಕಾರ ನಮ್ಮಲಿದೆ. ರಸ್ತೆಯಲ್ಲಿ ಬಿದ್ದಿರೋ ಗುಂಡಿಗಳನ್ನು ಮುಚ್ಚಿ ಹೇಳೋಕೆ ಜಿಲ್ಲಾಮಟ್ಟದಲ್ಲಿ ಸರ್ಕಾರದ ಓರ್ವ ನಾಯಕನಿಲ್ಲ. ನಾಮಾಕವಸ್ಥೆ ಸರ್ಕಾರ ರಾಜ್ಯದಲ್ಲಿದೆ ಎಂದು ಸಿಎಂ ವಿರುದ್ಧ ಗುಡುಗಿದರು.

  • ಟಿಪ್ಪು ಒಬ್ಬ ಮತಾಂಧ, ಸಮಾಜ ದ್ರೋಹಿ, ಹಜ್ ಭವನಕ್ಕೆ  ಅವರ ಹೆಸರಿಡಬೇಡಿ – ಸಂಸದ ಪ್ರಹ್ಲಾದ್ ಜೋಶಿ

    ಟಿಪ್ಪು ಒಬ್ಬ ಮತಾಂಧ, ಸಮಾಜ ದ್ರೋಹಿ, ಹಜ್ ಭವನಕ್ಕೆ ಅವರ ಹೆಸರಿಡಬೇಡಿ – ಸಂಸದ ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಟಿಪ್ಪು ಒಬ್ಬ ಮತಾಂಧ. ಅವರ ಹೆಸರನ್ನು ಹಜ್ ಭವನಕ್ಕೆ ಇಡಬಾರದು ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಟಿಪ್ಪು ಒಬ್ಬ ಸಮಾಜದ್ರೋಹಿ. ಅವರ ಹೆಸರನ್ನು ಯಾವುದೇ ಕಾರಣಕ್ಕೂ ಹಜ್ ಭವನಕ್ಕೆ ಇಡಬಾರದು. ಅದರ ಬದಲು ಹಜ್ ಭವನಕ್ಕೆ ಅಬ್ದುಲ್ ಕಲಾಂ ಹೆಸರಿಡಲಿ. ಅದಕ್ಕೂ ಒಳ್ಳೆಯದಾಗುತ್ತೆ, ಹಜ್ ಯಾತ್ರೆ ಹೊದವರಿಗೂ ಒಳ್ಳೆಯದಾಗುತ್ತದೆ ಎಂದರು.

    ಹಜ್ ಭವನಕ್ಕೆ ಟಿಪ್ಪು ಹೆಸರಿಡಲು ಮೊದಲು ಬಿಜೆಪಿಯವರೇ ಸೂಚಿಸಿದ್ದರು ಎಂಬ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಯಿಸಿದ ಜೋಶಿ ಕೆಲವರು ತಪ್ಪು ತಿಳುವಳಿಕೆಯಿಂದ ಆ ರೀತಿ ಮಾಡಿರಬಹುದು. ಆದರೆ ಸಿದ್ದರಾಮಯ್ಯನವರಂತೆ ಕುಮಾರಸ್ವಾಮಿ ಮಾಡಬಾರದು. ಇದು ಕುಮಾರಸ್ವಾಮಿಯವರಿಗೆ ಗೊತ್ತಿರುವ ವಿಚಾರ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಕಾವೇರಿ ಪ್ರಾಧಿಕಾರ ರಚನೆ ವಿಚಾರ ಕುರಿತು ಮಾತನಾಡಿದ ಅವರು ಕಾವೇರಿ ಪ್ರಾಧಿಕಾರ ರಚನೆಗೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಕೋರ್ಟ್ ಆದೇಶದಂತೆಯೇ ಅದನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

  • ಹಾವು ಬಂದೈತಿ ಅಂದ್ರ ಪಕ್ಕದ ಮನಿ ಗಂಡಸರನ್ನ ಕರಿ ಅಂದ್ರಂತ, ಹಂಗಾಯ್ತು ಕಾಂಗ್ರೆಸ್ ಪರಿಸ್ಥಿತಿ: ಪ್ರಹ್ಲಾದ ಜೋಶಿ

    ಹಾವು ಬಂದೈತಿ ಅಂದ್ರ ಪಕ್ಕದ ಮನಿ ಗಂಡಸರನ್ನ ಕರಿ ಅಂದ್ರಂತ, ಹಂಗಾಯ್ತು ಕಾಂಗ್ರೆಸ್ ಪರಿಸ್ಥಿತಿ: ಪ್ರಹ್ಲಾದ ಜೋಶಿ

    ಧಾರವಾಡ: ಮನೆಯಲ್ಲಿ ಹಾವು ಬಂದರೆ, ಹೊಡೆಯಲು ಪಕ್ಕದ ಮನೆಯ ಗಂಡಸರನ್ನು ಕರೆಯಲು ಪತ್ನಿಗೆ ಗಂಡ ಹೇಳಿದ ಹಾಗೆ ಇಂದಿನ ಕಾಂಗ್ರೆಸ್ ಪರಿಸ್ಥಿತಿ ಆಗಿದೆ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.

    ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, ಬಿಜೆಪಿಯನ್ನು ಹೊಡೆಯೋಕೆ ಕಾಂಗ್ರೆಸ್‍ನವರು ಪಕ್ಕದ ಮನಿ ದೇವೇಗೌಡರನ್ನ ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ರಾಹುಲ್ ಗಾಂಧಿ ಈಗ ಬೇರೆ ಬೇರೆ ಪಕ್ಷದವರನ್ನು ಸೇರಿಸುತ್ತಿದ್ದಾರೆ. 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಜಯಗಳಿಸಲಿದೆ. ಈಗಾಗಲೇ ನಾಮಾವಶೇಷ ಆಗಿರುವ ಕಾಂಗ್ರೆಸ್ ಪಕ್ಷವನ್ನು ಸಮಾಧಿ ಮಾಡಿ, ಅದರ ಮೇಲೆ ಅಗರಬತ್ತಿ ಹಚ್ಚುವ ಕಾರ್ಯವನ್ನು ಜೆಡಿಎಸ್ ನವರು ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ಇದನ್ನು ಓದಿ: ಕಾಂಗ್ರೆಸ್ ಇಂದು ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡೆಯುವ ಪರಿಸ್ಥಿತಿಗೆ ಬಂದಿದೆ: ಅನಂತಕುಮಾರ್ ಹೆಗಡೆ

    ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಮುರಿದು ಬೀಳುತ್ತದೆ. ರಾಹುಲ್ ಗಾಂಧಿಯವರೇ ದೇವೇಗೌಡರನ್ನ ಹಾಗೂ ಕುಮಾರಸ್ವಾಮಿ ಅರವನ್ನು ತಲೆಯ ಮೇಲೆ ಕೂರಸಿಕೊಳ್ಳಬಾರದು. ಅವರ ಏನು ಮಾಡಿ ಹೋಗತ್ತಾರೆ ಅಂತಾ ನಾನು ಹೇಳಲ್ಲ, ಈಗಾಗಲೇ ನಿಮ್ಮಿಂದ ಪ್ರಮುಖ ಖಾತೆಗಳನ್ನು ಕಿತ್ತುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಪರಿಸ್ಥಿತಿ ಗಂಭೀರವಾಗುತ್ತದೆ ಎಂದು ಭವಿಷ್ಯ ನುಡಿದ್ರು.

  • ವಾಟ್ ನಾನ್ಸೆನ್ಸ್ ಯೂ ಆರ್ ಸ್ಪೀಕಿಂಗ್, ಗಲ್ಲಿ ನಾಯಕರ ರೀತಿ ಮಾತಾಡ್ಬೇಡಿ- ಗೃಹಮಂತ್ರಿ ವಿರುದ್ಧ ಸಿಡಿದೆದ್ದ ಜೋಶಿ

    ವಾಟ್ ನಾನ್ಸೆನ್ಸ್ ಯೂ ಆರ್ ಸ್ಪೀಕಿಂಗ್, ಗಲ್ಲಿ ನಾಯಕರ ರೀತಿ ಮಾತಾಡ್ಬೇಡಿ- ಗೃಹಮಂತ್ರಿ ವಿರುದ್ಧ ಸಿಡಿದೆದ್ದ ಜೋಶಿ

    ಕಲಬುರಗಿ: ರಾಮಲಿಂಗಾ ರೆಡ್ಡಿ ಮತ್ತು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾಗಿ, ಬಿಜೆಪಿ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಮಲಿಂಗಾ ರೆಡ್ಡಿ ಗೃಹ ಸಚಿವರಾಗಿ, ಬಿಜೆಪಿಯವರು ಸತ್ತವರ ಮನೆಗೆ ಹೋಗಿ ರಾಜಕೀಯ ಮಾಡ್ತಾರೆ ಅಂತಾ ಗಲ್ಲಿ ನಾಯಕರ ರೀತಿಯಲ್ಲಿ ಮಾತನಾಡಬೇಡಿ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

    ಕಲಬುರಗಿ ನಗರಕ್ಕೆ ಆಗಮಿಸಿದ್ದ ಸಂಸದ ಪ್ರಹ್ಲಾದ್ ಜೋಶಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇವತ್ತು ರಾಜ್ಯದಲ್ಲಿ ಕೊಲೆ ಸುಲಿಗೆ ನಡೆಯುತ್ತಿವೆ. ರಾಜ್ಯದಲ್ಲಿ ಮಟಕಾ ಮತ್ತು ಓಸಿ ದಂಧೆಗಳು ಮತ್ತೆ ತಲೆ ಎತ್ತುತ್ತಿವೆ. ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿದ ಹಂತಕರನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಆರೋಪಿಗಳ ಸುಳಿವು ಸಹ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೊಲೆಯಾದ ಸಂತೋಷ್ ನಮ್ಮ ಪಕ್ಷದ ಅಧಿಕೃತ ಕಾರ್ಯಕರ್ತರು. ಪಕ್ಷದ ಚಟುವಟಿಕೆಯಲ್ಲಿ ಸಂತೋಷ್ ತಮ್ಮನ್ನು ತೊಡಗಿಸಿಕೊಂಡಿದ್ರು.

    ನೆರೆಯ ಕೇರಳ ರಾಜ್ಯದಲ್ಲಿ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಅಹವಾಲನ್ನು ಸಲ್ಲಿಸಿದೆ. ಆದ್ರೆ ನಮ್ಮ ರಾಜ್ಯ ಸರ್ಕಾರ ಯಾಕೆ ಇದೂವರೆಗೂ ಕೇಂದ್ರ ಸರ್ಕಾರಕ್ಕೆ ಅಹವಾಲು ಸಲ್ಲಿಸಿಲ್ಲ. ಈ ಎರಡೂ ಸಂಘಟನೆಗಳಿಂದ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದರು.

    ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಪಿಎಫ್‍ಐ ಸಂಘಟನೆ ಅಷ್ಟು ಚಟುವಟಿಕೆಯಿಂದ ಕೂಡಿರಲಿಲ್ಲ. ಇತ್ತೀಚಿನ ಕೆಲವು ದಿನಗಳಲ್ಲಿ ಪಿಎಫ್‍ಐ ಮತ್ತು ಎಸ್‍ಡಿಪಿಐ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದೆ. ಸೆಮಿ ಸಂಘಟನೆಯ ನಿಷೇಧದ ಬಳಿಕವೇ ಪಿಎಫ್‍ಐ ಹುಟ್ಟಿಕೊಂಡಿದೆ ಅಂತಾ ಹೇಳಿದ್ರು.

  • ಸರ್ಕಾರ ತಪ್ಪು ಮಾಡಿಲ್ಲ ಅಂದ್ರೆ ಸಿಬಿಐಗೆ ಒಪ್ಪಿಸಲಿ: ಪ್ರಹ್ಲಾದ ಜೋಶಿ

    ಸರ್ಕಾರ ತಪ್ಪು ಮಾಡಿಲ್ಲ ಅಂದ್ರೆ ಸಿಬಿಐಗೆ ಒಪ್ಪಿಸಲಿ: ಪ್ರಹ್ಲಾದ ಜೋಶಿ

    ಧಾರವಾಡ: ಸರ್ಕಾರ ತಪ್ಪು ಮಾಡಿಲ್ಲದೇ ಇದ್ದರೆ ತಕ್ಷಣವೇ ಕಲ್ಲಿದ್ದಲು ಹಗರಣವನ್ನು ಸಿಬಿಐಗೆ ಒಪ್ಪಿಸಲಿ ಎಂದು ಸಂಸದ ಪ್ರಹ್ಲಾದ ಜೋಶಿ ಸವಾಲು ಹಾಕಿದ್ದಾರೆ.

    ಯಡಿಯೂರಪ್ಪ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ ದಾಖಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಎಸಿಬಿ ಸರ್ಕಾರದ ಕೈಗೊಂಬೆಯಾಗಿದೆ. ಎಸಿಬಿಯಿಂದ ಸತ್ಯ ಹೊರಬರುವುದಿಲ್ಲ. ಸಿಎಂ ಸಿದ್ದರಾಮಯ್ಯ ಲೋಕಾಯುಕ್ತರನ್ನು ಹಲ್ಲು ಕಿತ್ತು ಹಾವು ಮಾಡಿದ್ದಾರೆ. ಮುಖ್ಯಮಂತ್ರಿಗಳೇ ನಿಮಗೆ ನೈತಿಕತೆ ಅನ್ನೋದು ಏನಾದರೂ ಇದ್ದರೆ ರಾಜಿನಾಮೆ ನೀಡಿ ಎಂದು ಆಗ್ರಹಿಸಿದರು.

    ಸಚಿವ ವಿನಯ್ ಕುಲಕರ್ಣಿ ಕೈಲಾಗದವನು, ಕೈಲಾಗದವನು ಮೈ ಪರಚಿಕೊಂಡ ಎಂಬಂತಾಗಿದೆ. ವಿನಯ್ ಕುಲಕರ್ಣಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿನಯ್ ಕುಲಕರ್ಣಿ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತಿದ್ದು ಮರೆತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಯಾಗಲು ವಿನಯ್ ಕುಲಕರ್ಣಿ ಅವರೇ ಕಾರಣ ಎಂದು ಜೋಶಿ ಆರೋಪಿಸಿದರು.

    ವಿನಯ್ ಕುಲಕರ್ಣಿ ಅವರು ಅಲ್ಪಸಂಖ್ಯಾತರ ಓಲೈಕೆಗಾಗಿ, ಹಿಂದೂಗಳ ವಿರೋಧವಾಗಿ ನಿಲ್ಲುತ್ತಿದ್ದಾರೆ. ನಿಜವಾಗಿಯೂ ನಿಮಗೆ ತಾಕತ್ತಿದ್ದರೆ ನಮ್ಮ ಮಹಾನಗರ ಪಾಲಿಕೆಗೆ ಬರುವ 137 ಕೋಟಿ ಪಿಂಚಣಿ ಹಣ ಬಿಡುಗಡೆ ಮಾಡಿಸಿ ಎಂದು ಸವಾಲು ಹಾಕಿದರು.

    ಇದನ್ನೂ ಓದಿ: 418 ಕೋಟಿ ರೂ. ಹಗರಣದ ಆರೋಪ- ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಎಸ್‍ವೈ ದಾಖಲೆ ಬಿಡುಗಡೆ

    ರಾಹುಲ್ ಗಾಂಧಿ ತರಹ ಮಾತನಾಡಬೇಡಿ, ಯಾರೋ ಬರೆದು ಕೊಟ್ಟಿದ್ದನ್ನು ಓದಬೇಡಿ, ಸ್ವಂತ ಬುದ್ದಿ ಉಪಯೋಗಿಸಿ ಮಾತನಾಡಿ. ಸಚಿವ ದೇಶಪಾಂಡೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ಹಗಲು ಕನಸು ಕಾಣುತ್ತಿದ್ದಾರೆ. ಮೊದಲು ಅವರು ಮುಂದಿನ ಚುನಾವಣೆಗೆ ಯಾವ ಪಕ್ಷದಲ್ಲಿ ಇರುತ್ತಾರೆ ಎಂದು ಜನರಿಗೆ ತಿಳಿಸಲಿ. ರಾಜ್ಯ ಸರ್ಕಾರ ಧಾರವಾಡದಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಇದು ಸಾಧನಾ ಸಮಾವೇಶ ಅಲ್ಲ, ಕಾಂಗ್ರೆಸ್ ಸಮಾವೇಶ ಎಂದು ಜೋಶಿ ದೂರಿದರು.

    \

     

  • ಸಿಎಂಗೆ ಇದು ಕೊನೆ ದೀಪಾವಳಿ ಎಂದು ಭವಿಷ್ಯ ನುಡಿದ ಸಂಸದ ಪ್ರಹ್ಲಾದ್ ಜೋಶಿ

    ಸಿಎಂಗೆ ಇದು ಕೊನೆ ದೀಪಾವಳಿ ಎಂದು ಭವಿಷ್ಯ ನುಡಿದ ಸಂಸದ ಪ್ರಹ್ಲಾದ್ ಜೋಶಿ

    ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೇ ಕೊನೆಯ ದೀಪಾವಳಿಯಾಗಲಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದಿದ್ದಾರೆ.

    ಮುಂದಿನ ಬಾರಿಯು ನಾನೇ ಸಿಎಂ ಎಂದು ಸಿಎಂ ಹೇಳಿಕೊಂಡು ತಿರುಗುತ್ತಿದ್ದಾರೆ. ಆದ್ರೆ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇದು ಕಾಂಗ್ರೆಸ್ ಸರ್ಕಾರದ ಕೊನೆಯ ಆಡಳಿತಾವಧಿಯಾಗಲಿದೆ ಎಂದು ಹೇಳಿಕೆ ನೀಡಿದರು.

    ಈಗಾಗಲೇ ಕಾಂಗ್ರೆಸ್ ಮನೆ ಮನೆಗೆ ಹೊರಟಿದ್ದು, ಜನರಿಗೆ ಕೊನೆಯದಾಗಿ ಕಾಂಗ್ರೆಸ್ ಪಕ್ಷದ ಅಂತಿಮ ದರ್ಶನ ಪಡೆದುಕೊಳ್ಳಲಿ ಎಂದು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವುದೇ ಸಾಧನೆ ಮಾಡದೆ, ಇಲ್ಲದ ಸಾಧನೆಗಳನ್ನು ತೋರಿಸಲು ಹೊರಟಿದೆ. ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಯಾತ್ರೆ ಮಾಡುತ್ತಿದೆ. ಸಾರ್ವಜನಿಕರ ಹಣವನ್ನು ಯಾತ್ರೆ, ಸಮಾವೇಶದ ಹೆಸರಿನಲ್ಲಿ ಕಿತ್ತು ತಿನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಟಿಪ್ಪು ಜಯಂತಿಗೆ ನಮ್ಮದು ಯಾವಾಗಲೂ ವಿರೋಧವಿದೆ. ಸರ್ಕಾರದ ಹಠಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ. ಟಿಪ್ಪು ಕನ್ನಡ ಭಾಷೆ, ಸಂಸ್ಕತಿ, ಹಿಂದೂ ವಿರೋಧಿಯಾಗಿದ್ದ ಟಿಪ್ಪುನಿಂತವನ ಜಯಂತಿ ಆಚರಣೆ ಸಹಿಸಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಟಿಪ್ಪು ಜಯಂತಿ ರದ್ದುಗೊಳಿಸಲಾಗುವುದು ಎಂದು ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.