Tag: ಪ್ರಹ್ಲಾದ್ ಜೋಶಿ

  • ಸಣ್ಣ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ ಸ್ಪಷ್ಟನೆ

    ಸಣ್ಣ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ ಸ್ಪಷ್ಟನೆ

    – ಬೇರೆಲ್ಲೂ ಇಲ್ಲದ ನೋಟಿಸ್ ಇಲ್ಲೇಕೆ?; ಜನರ ಕಣ್ಣಿಗೆ ಮಣ್ಣೆರೆಚೋ ಕೆಲಸ

    ನವದೆಹಲಿ: ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ (GST) ಬಾಕಿ ನೋಟಿಸ್ ನೀಡುತ್ತಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ.

    ‘ತೆರಿಗೆ ನೋಟಿಸ್ ನೀಡುವಲ್ಲಿ ರಾಜ್ಯ ಸಾರ್ಕಾರದ ಪಾತ್ರವೇನಿಲ್ಲ’ ಎಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಮಾಡುವುದೆಲ್ಲ ಮಾಡಿಬಿಟ್ಟು ಈಗ ತನಗೇನೂ ಸಂಬಂಧವಿಲ್ಲ ಎನ್ನುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ ಅರಣ್ಯಗಳಲ್ಲಿ ಸಾಕುಪ್ರಾಣಿ, ದನಕರುಗಳನ್ನ ಮೇಯಿಸುವುದು ನಿಷೇಧಿಸಲು ಈಶ್ವರ ಖಂಡ್ರೆ ಆದೇಶ

    ಕರ್ನಾಟಕದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟಿರುವುದು ರಾಜ್ಯ ಸರ್ಕಾರದ ತೆರಿಗೆ ಇಲಾಖೆ ಅಧಿಕಾರಿಗಳು. ಹಾಗಿದ್ದರೂ ಇದೀಗ ರಾಜ್ಯ ಸರ್ಕಾರಕ್ಕೂ, ಜಿಎಸ್‌ಟಿ ನೋಟಿಸ್‌ಗೂ ಸಂಬಂಧವಿಲ್ಲ ಎನ್ನುತ್ತ ಜನರ ಕಣ್ಣಿಗೆ ಮಣ್ಣೆರೆಚೋ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯ – ಆದೇಶ ಎತ್ತಿ ಹಿಡಿದ ಸುಪ್ರೀಂ

    ಬೇರೆಲ್ಲೂ ಇಲ್ಲದ ನೋಟಿಸ್ ಇಲ್ಲೇಕೆ?
    ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದರೆ ಬಹುತೇಕ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತಿತ್ತು. ಆದರೆ ಬೇರೆ ಯಾವುದೇ ರಾಜ್ಯಗಳಲ್ಲೂ ತೆರಿಗೆ ಇಲಾಖೆ ಅಧಿಕಾರಿಗಳಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ನೀಡಲಾಗಿಲ್ಲ.ಕರ್ನಾಟಕದಲ್ಲಿ ಮಾತ್ರ ಇದಾಗಿದೆ ಎಂದರು. ಇದನ್ನೂ ಓದಿ: ಅಮೆರಿಕದಿಂದ ಮೂರು ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಆಗಮನ

    ಜನರ ಜೊತೆಗೆ ಸಣ್ಣ ವ್ಯಾಪಾರಸ್ಥರಿಗೂ ಕಿರುಕುಳ:
    ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಗೋಳು ಹೊಯ್ದುಕೊಳ್ಳುವ ಜೊತೆಗೆ ಇದೀಗ ಹಣ್ಣು, ಹಾಲು, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ಸರಕು ಸೇವಾ ವ್ಯಾಪಾರಿಗಳಿಗೆ ನೋಟಿಸ್ ನೀಡಿ ಕಿರುಕುಳ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಣ್ಣ ಬುದ್ಧಿ ಹೇಳಿದ್ದಕ್ಕೆ ಮಗುವನ್ನು ಬರ್ಬರವಾಗಿ ಕೊಂದ ಚಿಕ್ಕಪ್ಪ

    ಇದರಲ್ಲಿ ಕೇಂದ್ರದ ಪಾತ್ರವಿಲ್ಲ:
    ಜಿಎಸ್‌ಟಿಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ‘ಸಿಜಿಎಸ್‌ಟಿ’ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ‘ಎಸ್‌ಜಿಎಸ್‌ಟಿ’ ಎಂದು ಎರಡು ಭಾಗವಿದೆ. ಆದರಂತೆ ಕರ್ನಾಟಕದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಶೀಘ್ರವೇ ಧರ್ಮಸ್ಥಳ ಪ್ರಕರಣಗಳ ತನಿಖೆ ಆರಂಭ; ಎಸ್‌ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ: ಪರಮೇಶ್ವರ್

    ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಯಾವುದೇ ತೀರ್ಮಾನ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ಸರ್ಕಾರಗಳ ನಿರ್ಣಯವೇ ಇದರಲ್ಲಿ ಅಂತಿಮವಾಗಿರಲಿದೆ ಎಂಬ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: GST ನೋಟಿಸ್‌ ಕೊಟ್ಟ ಕೋತಿ ಕೆಲಸ ರಾಜ್ಯ ಸರ್ಕಾರದ್ದು- ನೋಟಿಸ್ ವಾಪಸ್ ಪಡೆಯಬೇಕು: ಸಿ.ಟಿ.ರವಿ

    ಯುಪಿಐ ಹದಗೆಡಿಸೋ ದುಸ್ಸಾಹಸ:
    ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ನೀಡುವ ಮೂಲಕ ಡಿಜಿಟಲ್, ಯುಪಿಐ ವಹಿವಾಟು ಹದಗೆಡಿಸುವ ದುಸ್ಸಾಹಸಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಗದಗ | ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ನಗರಸಭೆಗೆ ಸಾರ್ವಜನಿಕರಿಂದ ಮುತ್ತಿಗೆ

    ಯುಪಿಐ ವಹಿವಾಟು ವಿಶ್ವಕ್ಕೇ ಮಾದರಿಯಾಗಿದೆ. ಆದರೆ, ರಾಜ್ಯದಲ್ಲಿ ಈ ಪಾರದರ್ಶಕ ವ್ಯವಸ್ಥೆಗೆ ಸಂಚಕಾರ ತರಲೆತ್ನಿಸುತ್ತಿದ್ದು, ರಾಜ್ಯ ಸರ್ಕಾರದ ಈ ಕ್ಷುಲ್ಲಕ ರಾಜಕಾರಣ ನಿಜಕ್ಕೂ ದುರಂತವೇ ಸರಿ ಎಂದು ತೀವ್ರವಾಗಿ ಖಂಡಿಸಿದರು.  ಇದನ್ನೂ ಓದಿ: Kolar| ಹಾಸ್ಟೆಲ್‌ನಲ್ಲಿ ದೆವ್ವ ಇದೆ ಎಂದು ಹೆದರಿಸುತ್ತಿದ್ದ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ವಾರ್ಡನ್

  • NLCILಗೆ ಹೂಡಿಕೆ ವಿನಾಯಿತಿಗೆ ಕೇಂದ್ರ ಸಂಪುಟ ಅಸ್ತು – 7,000 ಕೋಟಿ ಹೂಡಿಕೆ, ಜಂಟಿ ಉದ್ಯಮಕ್ಕೆ ಅವಕಾಶ

    NLCILಗೆ ಹೂಡಿಕೆ ವಿನಾಯಿತಿಗೆ ಕೇಂದ್ರ ಸಂಪುಟ ಅಸ್ತು – 7,000 ಕೋಟಿ ಹೂಡಿಕೆ, ಜಂಟಿ ಉದ್ಯಮಕ್ಕೆ ಅವಕಾಶ

    – RE ವಲಯದ ಮತ್ತಷ್ಟು ವಿಸ್ತಾರ – ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

    ಹುಬ್ಬಳ್ಳಿ: ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ಕೇಂದ್ರ ಸರ್ಕಾರ (Central Government) ಇದೀಗ NLCILಗೆ ಹೂಡಿಕೆ ವಿನಾಯಿತಿ ನೀಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಮಾಹಿತಿ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆಯಲ್ಲಿ ಹೂಡಿಕೆ ವಿನಾಯಿತಿಗೆ ಅನುಮೋದನೆ ನೀಡಿದ್ದು, ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಗೆ (CPSE) ಅನ್ವಯವಾಗುವಂತೆ ಸದ್ಯ ಚಾಲ್ತಿಯಲ್ಲಿರುವ ಹೂಡಿಕೆ ಮಾರ್ಗಸೂಚಿಗಳಿಂದ NLC ಇಂಡಿಯಾ ಲಿಮಿಟೆಡ್ (NLCIL)ಗೆ ವಿಶೇಷ ವಿನಾಯಿತಿ ನೀಡಲಾಗಿದೆ.

    ಸಚಿವ ಸಂಪುಟ ಹೂಡಿಕೆ ವಿನಾಯಿತಿಗೆ ಅನುಮೋದನೆ ನೀಡಿದ್ದರಿಂದಾಗಿ NLCIL ಸ್ವಾಮ್ಯದ ಅಂಗಸಂಸ್ಥೆಯಾದ NLC ಇಂಡಿಯಾ ನವೀಕರಿಸಬಹುದಾದ ಲಿಮಿಟೆಡ್ (NIRL)ನಲ್ಲಿ 7,000 ಕೋಟಿ ರೂ. ಹೂಡಿಕೆ ಮಾಡಲು ಮತ್ತು NIRL ನೇರವಾಗಿ ಅಥವಾ ಜಂಟಿ ಉದ್ಯಮಗಳ ರಚನೆ ಮೂಲಕ ವಿವಿಧ ಯೋಜನೆಗಳಲ್ಲಿ ಹೂಡಿಕೆಗೆ ಅವಕಾಶವಾಗಲಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರ ಬಂಧನ

    2030ರ ವೇಳೆಗೆ 10.11 GW ನವೀಕರಿಸಬಹುದಾದ ಇಂಧನ (RE) ಸಾಮರ್ಥ್ಯ ಅಭಿವೃದ್ಧಿಪಡಿಸುವ ಮತ್ತು 2047ರ ವೇಳೆಗೆ 32 GWಗೆ ವಿಸ್ತರಿಸುವ NLCILನ ಮಹತ್ವಾಕಾಂಕ್ಷೆಯ ಗುರಿಗೆ ಬೆಂಬಲವಾಗಿ ಈ ವಿನಾಯಿತಿ ಘೋಷಿಸಲಾಗಿದೆ. ಇದು ನೇರ ಮತ್ತು ಪರೋಕ್ಷವಾಗಿ ಗಮನಾರ್ಹ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆಯಿದೆ. ಸಮುದಾಯ ಮತ್ತು ದೇಶದ ಸಮಗ್ರ ಆರ್ಥಿಕ ಬೆಳವಣಿಗೆ ಸಾಕಾರಗೊಳ್ಳಲಿದೆ.

    ʻಪಂಚಾಮೃತʼ ಯೋಜನೆ ಗುರಿ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ದೀರ್ಘಾವಧಿಯ ಬದ್ಧತೆಗೆ ಅನುಗುಣವಾಗಿ 2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನ ಸಾಧಿಸಲು ಭಾರತ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ವಲಯ ಮಹತ್ತರ ಹೆಜ್ಜೆಯಿರಿಸಿದೆ. ಇದನ್ನೂ ಓದಿ: ಬಿಜೆಪಿ ಬಂಡಾಯ ನಾಯಕರ ವಿರುದ್ಧ ವರಿಷ್ಠರಿಗೆ ದೂರು ನೀಡಿದ ಎಂ.ಪಿ ರೇಣುಕಾಚಾರ್ಯ ನೇತೃತ್ವದ ಟೀಂ

    ಮಹತ್ವದ ವಿದ್ಯುತ್ ಸೌಲಭ್ಯ ಮತ್ತು ನವರತ್ನ CPSE ಆಗಿ, NLCIL ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹೂಡಿಕೆಯ ಮೂಲಕ, NLCIL ತನ್ನ ನವೀಕರಿಸಬಹುದಾದ ಇಂಧನ ಬಂಡವಾಳವನ್ನು ಗಣನೀಯವಾಗಿ ವಿಸ್ತರಿಸಲು ಮತ್ತು ರಾಷ್ಟ್ರೀಯ ಮತ್ತು ಜಾಗತಿಕ ಹವಾಮಾನ ಕ್ರಿಯೆಯ ಉದ್ದೇಶಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಪ್ರಯತ್ನಿಸುತ್ತದೆ.

    ಪ್ರಸ್ತುತದಲ್ಲಿ NLCIL ಒಟ್ಟು 2 GW ಸ್ಥಾಪಿತ ಸಾಮರ್ಥ್ಯದೊಂದಿಗೆ 7 ನವೀಕರಿಸಬಹುದಾದ ಇಂಧನ ಸ್ವತ್ತುಗಳನ್ನು ನಿರ್ವಹಿಸುತ್ತಿದ್ದು, ಈ ಸ್ವತ್ತುಗಳನ್ನು NIRLಗೆ ವರ್ಗಾಯಿಸಲಾಗುತ್ತದೆ. NIRL ಹೊಸ ಯೋಜನೆಗಳಿಗೆ ಸ್ಪರ್ಧಾತ್ಮಕ ಬಿಡ್ಡಿಂಗ್‌ನಲ್ಲಿ ಭಾಗವಹಿಸುವುದು ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುತ್ತದೆ. ಇದನ್ನೂ ಓದಿ: ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ| ಸಂಸತ್‌ನಲ್ಲಿ ಮಹಾಭಿಯೋಗಕ್ಕೆ ತಯಾರಿ – ಸುಪ್ರೀಂ ಮೆಟ್ಟಿಲೇರಿದ ನ್ಯಾ.ಯಶವಂತ್ ವರ್ಮಾ

    ಕೇಂದ್ರ ಸಚಿವ ಸಂಪುಟ NLCILಗೆ ಹೂಡಿಕೆ ವಿನಾಯಿತಿ ನೀಡಿದ್ದರಿಂದಾಗಿ ಭವಿಷ್ಯದಲ್ಲಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಕಲ್ಲಿದ್ದಲು ಆಮದು ಸಹ ಕಡಿತಗೊಳಿಸುವ ಉದ್ದೇಶವಿದೆ. ದೇಶಾದ್ಯಂತ 24×7 ವಿದ್ಯುತ್ ಪೂರೈಕೆಯ ವಿಶ್ವಾಸಾರ್ಹತೆಗೆ ಪ್ರತೀಕವಾಗಿದ್ದು, ಈ ಮೂಲಕ ಹಸಿರು ಇಂಧನ ವಲಯದಲ್ಲಿ ಭಾರತದ ನಾಯಕತ್ವ ಸ್ಥಾನವನ್ನು ಬಲಪಡಿಸಲಿದೆ ಎಂದಿದ್ದಾರೆ.

  • RE ಸಂಶೋಧನೆ, ನಾವೀನ್ಯತೆ; 1.27 ಲಕ್ಷ ಕೋಟಿ ಯೋಜನೆಗೆ ಕೇಂದ್ರ ಅಸ್ತು: ಪ್ರಹ್ಲಾದ್ ಜೋಶಿ

    RE ಸಂಶೋಧನೆ, ನಾವೀನ್ಯತೆ; 1.27 ಲಕ್ಷ ಕೋಟಿ ಯೋಜನೆಗೆ ಕೇಂದ್ರ ಅಸ್ತು: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ (RDI)ಗಾಗಿ 1.27 ಲಕ್ಷ ಕೋಟಿ ರೂ. ಬಜೆಟ್‌ನ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದರು.

    ಮುಂಬೈನ ಐಐಟಿಯಲ್ಲಿರುವ ರಾಷ್ಟ್ರೀಯ ಫೋಟೊವೋಲ್ಟಾಯಿಕ್ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರ (NCPRE)ಕ್ಕೆ ಬುಧವಾರ ಭೇಟಿ ನೀಡಿದ ಅವರು ಸಲಹಾ ಮಂಡಳಿ ಸದಸ್ಯರೊಂದಿಗೆ ಸಭೆ ನಡೆಸಿ, ಈ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಆ.4 ರಿಂದ ಅಮೆರಿಕದಲ್ಲಿ ಶಾಸಕಾಂಗ ಶೃಂಗಸಭೆ – ಸಭಾಪತಿ ಹೊರಟ್ಟಿ ನೇತೃತ್ವದಲ್ಲಿ MLCಗಳ ನಿಯೋಗ ಭಾಗಿ

    ಕೇಂದ್ರ ಸಚಿವ ಸಂಪುಟ ಎರಡು ವಾರಗಳ ಹಿಂದೆಯಷ್ಟೇ ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆಯನ್ನು ಅನುಮೋದಿಸಿದೆ. ಹಾಗೆಯೇ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಒಟ್ಟು 1.27 ಲಕ್ಷ ಕೋಟಿ ರೂ. ಅನುದಾನ ಒದಗಿಸಿದೆ. ಭಾರತ ಶುದ್ಧ ಇಂಧನಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ಬದ್ಧವಾಗಿದೆ ಎಂದರು.

    ಭಾರತ ನವೀಕರಿಸಬಹುದಾದ ಇಂಧನ ಶಕ್ತಿಯನ್ನು ಅಳವಡಿಸಿಕೊಳ್ಳುವ ಜೊತೆಗೆ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಸಂಶೋಧನೆಗೆ ಉತ್ತೇಜನ ನೀಡುತ್ತಿದೆ. ಇದರ ಪ್ರತಿಫಲವಾಗಿ ಬಾಂಬೆ ಐಐಟಿಯು ಇಂಧನ ಪರಿವರ್ತನೆಯಲ್ಲಿ ಹೆಚ್ಚಿನ ದಕ್ಷತೆ ಪ್ರದರ್ಶಿಸುವ 2 ಟರ್ಮಿನಲ್ ಮೊನೊಲಿಥಿಕ್ ಸಿಲಿಕಾನ್/ಸಿಡಿಟಿಇ-ಪೆರೋವ್‌ಸ್ಕೈಟ್ ಟ್ಯಾಂಡೆಮ್ ಸೌರ ಕೋಶವನ್ನು ಅಭಿವೃದ್ಧಿಪಡಿಸಿದೆ. ಇದು ದೇಶದ ಅತ್ಯುನ್ನತ ಕಾರ್ಯಕ್ಷಮತೆ ಉಳ್ಳದ್ದಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅದ್ಭುತ ಸಾಧನೆ – ಪ್ರಧಾನಿ ಮೋದಿ ಶ್ಲಾಘನೆ

    ಹೆಚ್ಚಿನ ದಕ್ಷತೆ ಮತ್ತು ಕಡಿಮೆ ಬೆಲೆಯ ಸಿಲಿಕಾನ್-ಪೆರೋವ್‌ಸ್ಕೈಟ್ ಟ್ಯಾಂಡೆಮ್ ಸೌರಕೋಶಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬಾಂಬೆ ಐಐಟಿಯ ಎನ್‌ಸಿಆರ್‌ಪಿಇ ಭವಿಷ್ಯದಲ್ಲಿ ಭಾರತದ ಸೌರಶಕ್ತಿ ದಿಕ್ಕನ್ನೇ ಬದಲಾಯಿಸಲಿದೆ. ಸೌರಶಕ್ತಿ ಕಾರ್ಯಾಚರಣೆಗೆ ಸಂಶೋಧನೆ, ಅಭಿವೃದ್ಧಿ ಮತ್ತು ಶಿಕ್ಷಣ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.

    ಬಾಂಬೆ ಐಐಟಿಗೆ 200 ಕೋಟಿ ರೂ. ನೆರವು:
    ಕೇಂದ್ರ ಸರ್ಕಾರ 2010ರಲ್ಲೇ ಬಾಂಬೆ ಐಐಟಿಯಲ್ಲಿ NCPRE ಆರಂಭಿಸಿದ್ದು, ದೇಶದ ಮಹತ್ವಾಕಾಂಕ್ಷೆಯ 100 GW ಸೌರಶಕ್ತಿ ಕಾರ್ಯಾಚರಣೆಗೆ ಸಂಶೋಧನೆ, ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಬೆಂಬಲ ನೀಡುವುದು ಇದರ ಮುಖ್ಯ ಉದ್ದೇಶ. ಇದಕ್ಕಾಗಿ ನವೀಕರಿಸಬಹುದಾದ ಇಂಧನ ಇಲಾಖೆ ಕಳೆದ 15 ವರ್ಷಗಳಲ್ಲಿ NCPRE, IIT ಬಾಂಬೆಗೆ 200 ಕೋಟಿ ರೂ.ಗೂ ಹೆಚ್ಚು ಅನುದಾನ ಒದಗಿಸಿದೆ ಎಂದರು.

    ಐಐಟಿ-ಬಿ ಕ್ಯಾಂಪಸ್‌ನಲ್ಲಿ ಅತ್ಯಾಧುನಿಕ ಪೈಲಟ್ ಉತ್ಪಾದನಾ ಸೌಲಭ್ಯಕ್ಕಾಗಿ ART-PV ಇಂಡಿಯಾಕ್ಕೆ 10 ಮಿಲಿಯನ್ ಡಾಲರ್(83 ಕೋಟಿ ರೂ.) ನೀಡುತ್ತಿದೆ. ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ನಾವೀನ್ಯತೆ ಮತ್ತು ಸ್ವಾವಲಂಬನೆ ಸಾಧಿಸಲು MNRE ನೀತಿ ಮತ್ತು ಆರ್ಥಿಕ ಬೆಂಬಲವನ್ನು ಮುಂದುವರಿಸುತ್ತದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸುಧಾರಿತ ತಂತ್ರಜ್ಞಾನಗಳೊಂದಿಗೆ ದಕ್ಷತೆ ಹೆಚ್ಚಿಸುವುದಲ್ಲದೆ ಬಲವಾದ ನಾವೀನ್ಯತೆ ಪರಿಸರ ವ್ಯವಸ್ಥೆ ನಿರ್ಮಿಸುತ್ತೇವೆ. ಸಂಶೋಧನೆ, ಅಭಿವೃದ್ಧಿ ಮತ್ತು ವಾಣಿಜ್ಯೀಕರಣಕ್ಕೆ MNRE ಕಾರ್ಯತಂತ್ರ ಬೆಂಬಲವಾಗಿದೆ.ಪೆರೋವ್‌ಸ್ಕೈಟ್ ಟ್ಯಾಂಡೆಮ್ ಸೌರಕೋಶಗಳು ಸ್ಕೇಲೆಬಲ್ ಮಾತ್ರವಲ್ಲದೆ ಲಾಭದಾಯಕವೂ ಆಗಿವೆ ಎಂಬುದನ್ನು ವಾಣಿಜ್ಯಿಕವಾಗಿ ಪ್ರದರ್ಶಿಸಬೇಕೆಂದು ಐಐಟಿ ಬಾಂಬೆ-ART PV ತಂಡವನ್ನು ಒತ್ತಾಯಿಸಿದರು.

  • ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅದ್ಭುತ ಸಾಧನೆ – ಪ್ರಧಾನಿ ಮೋದಿ ಶ್ಲಾಘನೆ

    ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅದ್ಭುತ ಸಾಧನೆ – ಪ್ರಧಾನಿ ಮೋದಿ ಶ್ಲಾಘನೆ

    – ಪಳೆಯುಳಿಕೆಯೇತರ ಇಂಧನದಲ್ಲಿ 5 ವರ್ಷ ಮೊದಲೇ ಗುರಿ ಸಾಧನೆಗೆ ಹೆಮ್ಮೆ

    ನವದೆಹಲಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಅದ್ಭುತ ಸಾಧನೆಗೈಯುತ್ತಿದೆ. ಪಳೆಯುಳಿಕೆಯೇತರ ಇಂಧನ ಉತ್ಪಾದನೆಯಲ್ಲಿ 5 ವರ್ಷ ಮೊದಲೇ ಗುರಿ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

    ನವೀಕರಿಸಬಹುದಾದ ಇಂಧನ ವಲಯದಲ್ಲಿ 2030ರ ವೇಳೆಗೆ ಭಾರತ ಒಟ್ಟಾರೆ 484.8 GW ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಗುರಿಯೊಂದಿಗೆ ಹೆಜ್ಜೆ ಹಾಕಿತ್ತು. ಆದರೆ ಪಳೆಯುಳಿಕೆಯೇತರ ಇಂಧನದಲ್ಲಿ ಅದಾಗಲೇ 242.8 GW ಸಾಮರ್ಥ್ಯ ಪೂರೈಸಿದೆ. ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ 5 ವರ್ಷ ಮೊದಲೇ ಗುರಿ ಸಾಧಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ದೇಶದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

    ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಭಾರತದ ಈ ಪ್ರಗತಿ ಮಹತ್ವ ಪಡೆದಿದೆ. ಎನ್‌ಡಿಸಿ ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿರುವ ಕೆಲವೇ ಜಿ20 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತ ತನ್ನ ನಾಯಕತ್ವವನ್ನು ಬಲಪಡಿಸುತ್ತದೆ ಎಂದಿದ್ದಾರೆ. ಜೊತೆಗೆ ಹಸಿರು ಮತ್ತು ಸುಸ್ಥಿರ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆ ಮತ್ತು ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

    2030ಕ್ಕೂ ಮೊದಲೇ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಸ್ಥಾಪಿತ ಸಾಮರ್ಥ್ಯ ಸಾಧಿಸಿರುವುದು ಮಹತ್ವಾಕಾಂಕ್ಷೆ, ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿಯಾಗಿದೆ. 2030ರ ವೇಳೆಗೆ 500 GW ಪಳೆಯುಳಿಕೆಯೇತರ ಸಾಮರ್ಥ್ಯ ಮತ್ತು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯತ್ತ ದೇಶ ಮುನ್ನುಗ್ಗುತ್ತಿದ್ದು, ಮುಂದಿನ ಪೀಳಿಗೆಗೆ ಶುಭವಾಗಲಿದೆ ಎಂದು ಆಶಿಸಿದ್ದಾರೆ.

    ಸಚಿವ ಜೋಶಿ ಇಚ್ಛಾಶಕ್ತಿ ಶ್ಲಾಘಿಸಿ ಪ್ರಧಾನಿ ಟ್ವೀಟ್:
    ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಭಾರತ ಇಂದು ಹಸಿರು ಮತ್ತು ಸುಸ್ಥಿರ ಇಂಧನ ಭವಿಷ್ಯದತ್ತ ಸಾಗುತ್ತಿದೆ. ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.50ರಷ್ಟನ್ನು ಸಾಧಿಸಿದ್ದು, ಅವರ ಇಚ್ಛಾಶಕ್ತಿ, ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ ಶ್ಲಾಘಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

    ಪಿಎಂ ಕುಸುಮ್, ಪಿಎಂ ಸೂರ್ಯಘರ್, ಸೋಲಾರ್ ಪಾರ್ಕ್ ಅಳವಡಿಕೆ-ಅಭಿವೃದ್ಧಿ, ಮತ್ತು ರಾಷ್ಟ್ರೀಯ ವಿಂಡ್-ಸೋಲಾರ್ ಹೈಬ್ರಿಡ್ ಪಾಲಿಸಿಯಂತಹ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮೂಲಕ ನವೀಕರಿಸಬಹುದಾದ ಇಂಧನ ವಲಯಕ್ಕೆ ಬಲಿಷ್ಠ ಬುನಾದಿ ಹಾಕಿದ್ದಾರೆ. ಪಿಎಂ ಸೂರ್ಯ ಘರ್ ಮೂಲಕ 1 ಕೋಟಿ ಮನೆಗಳಿಗೆ ಸೌರಶಕ್ತಿ ಬೆಳಕು ನೀಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಹೈಕಮಾಂಡ್ ನಿರ್ಧಾರವನ್ನು ನಾನು, ಡಿಕೆಶಿ ಇಬ್ಬರೂ ಪಾಲಿಸುತ್ತೇವೆ – ಮತ್ತೆ ಸಿಎಂ ಸ್ಪಷ್ಟನೆ

  • ದಾವಣಗೆರೆ ಬಿಜೆಪಿ ಸಂಘರ್ಷಕ್ಕೆ ಮದ್ದು – ರೇಣುಕಾಚಾರ್ಯ ಅಂಡ್ ಟೀಮ್‌ಗೆ ಬುಲಾವ್

    ದಾವಣಗೆರೆ ಬಿಜೆಪಿ ಸಂಘರ್ಷಕ್ಕೆ ಮದ್ದು – ರೇಣುಕಾಚಾರ್ಯ ಅಂಡ್ ಟೀಮ್‌ಗೆ ಬುಲಾವ್

    ಬೆಂಗಳೂರು: ಬಿಜೆಪಿ ಪಕ್ಷದೊಳಗಿನ ಭಿನ್ನಮತ ಶಮನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕಸರತ್ತು ಮುಂದುವರೆಸಿದ್ದಾರೆ. ನಾಳೆ ಪ್ರಹ್ಲಾದ್ ಜೋಶಿ ಅವರು ಬಿಜೆಪಿ ಕಚೇರಿಯಲ್ಲಿ ದಾವಣಗೆರೆ (Davanagere) ಬಿಜೆಪಿ ನಾಯಕರ ಸಂಘರ್ಷ ಬಗೆಹರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    ದಾವಣಗೆರೆ ಬಿಜೆಪಿ ಗೊಂದಲ ಬಗ್ಗೆ ಶುಕ್ರವಾರ ಪ್ರಹ್ಲಾದ್ ಜೋಶಿ ಅವರು ಮಾಜಿ ಸಚಿವ ರೇಣುಕಾಚಾರ್ಯ (Renukacharya) ಮತ್ತು ತಂಡದ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ರೇಣುಕಾಚಾರ್ಯ ಮತ್ತು ತಂಡಕ್ಕೆ ನಾಳೆಯ ಸಭೆಗೆ ಈಗಾಗಲೇ ಪ್ರಹ್ಲಾದ್ ಜೋಶಿ ಬುಲಾವ್ ನೀಡಿದ್ದಾರೆ. ಇದನ್ನೂ ಓದಿ: ಸಿಎಸ್‌ ವಿರುದ್ಧ ರವಿಕುಮಾರ್ ಅವಹೇಳನಕಾರಿ ಹೇಳಿಕೆ – ನಾಳೆ ಜೋಷಿಗೆ ಸ್ಪಷ್ಟನೆ

    ಇತ್ತೀಚೆಗಷ್ಟೇ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದ ಮಾಜಿ ಸಂಸದ ಸಿದ್ದೇಶ್ವರ್ ಹಾಗೂ ಶಾಸಕ ಬಿ.ಪಿ ಹರೀಶ್, ದಾವಣಗೆರೆ ಲೋಕಸಭೆ ಸೋಲಿಗೆ ರೇಣುಕಾಚಾರ್ಯ ಮತ್ತು ತಂಡದ ಅಡ್ಜಸ್ಟ್ಮೆಂಟ್ ಕಾರಣ ಎಂದು ದೂರು ಕೊಟ್ಟಿದ್ದರು. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಆಗಲಿ: ಸಂಸದ ಯದುವೀರ್

    ಕಳೆದೊಂದು ವರ್ಷದಿಂದಲೂ ನಡೆಯುತ್ತಿರುವ ಜಟಾಪಟಿಗೆ ಈಗ ಹೈಕಮಾಂಡ್ ಸೂಚನೆ ಮೇರೆಗೆ ಪ್ರಹ್ಲಾದ್ ಜೋಶಿ ಅವರು ಮದ್ದು ಅರೆಯಲು ಮುಂದಾಗಿದ್ದಾರೆ. ಹೀಗಾಗಿ ನಾಳೆ ರೇಣುಕಾಚಾರ್ಯ ಜೊತೆ ಪ್ರಹ್ಲಾದ್ ಜೋಶಿ ಅವರು ಚರ್ಚಿಸಿ ಬುದ್ಧಿ ಮಾತು ಹೇಳಿ ಎಚ್ಚರಿಕೆ ನೀಡಲಿದ್ದಾರೆ.

  • ಯುಪಿನಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಮೋದಿ ಅಧ್ಯಕ್ಷತೆಯ ಸಂಪುಟ ಅಸ್ತು!

    ಯುಪಿನಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಮೋದಿ ಅಧ್ಯಕ್ಷತೆಯ ಸಂಪುಟ ಅಸ್ತು!

    – ಆಗ್ರಾದ ಸಿಂಗ್ನಾದಲ್ಲಿ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಅನುಮೋದನೆ

    ಹುಬ್ಬಳ್ಳಿ: ಕೇಂದ್ರ ಸರ್ಕಾರ, ಉತ್ತರ ಪ್ರದೇಶದಲ್ಲಿ (Uttar Pradesh) ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಸಜ್ಜಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿಳಿಸಿದರು.

    ಆಗ್ರಾದ (Agra) ಸಿಂಗ್ನಾದಲ್ಲಿ ಈ ಕೇಂದ್ರ ತೆರೆಯಲು ನಿರ್ಣಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಇದಕ್ಕೆ ಅನುಮೋದನೆ ನೀಡಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ ಸ್ಥಾಪಿಸುವ ಕುರಿತು ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.ಇದನ್ನೂ ಓದಿ: Rain Alert | ಹಾಸನ ಜಿಲ್ಲೆಯ 3, ಉತ್ತರ ಕನ್ನಡ ಜಿಲ್ಲೆಯ 2 ತಾಲೂಕಿನ ಶಾಲೆಗಳಿಗೆ ಗುರುವಾರ ರಜೆ

    ಆಲೂಗಡ್ಡೆ, ಸಿಹಿಗೆಣಸು ಉತ್ಪಾದನೆ ಹಾಗೂ ಸುಗ್ಗಿ ನಂತರದಲ್ಲೂ ಇವುಗಳ ಆಹಾರೋತ್ಪನ್ನ, ಮೌಲ್ಯವರ್ಧಿತ ಆಹಾರ ಪದಾರ್ಥ, ಪೌಷ್ಟಿಕಾಂಶ ಭರಿತ ಆಹಾರ ಭದ್ರತೆ, ರೈತರ ಆದಾಯ ಹೆಚ್ಚಳ ಹಾಗೂ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರ ನೆರವಾಗಲಿದೆ.

    ಅಂತಾರಾಷ್ಟ್ರೀಯ ಆಲೂಗಡ್ಡೆ ಪ್ರಾದೇಶಿಕ ಕೇಂದ್ರ ಸ್ಥಾಪನೆಯಿಂದ ಕೃಷಿ ಮತ್ತು ಆಹಾರೋತ್ಪನ್ನ ವಲಯದಲ್ಲಿ ಹೆಚ್ಚು ಹೂಡಿಕೆಯನ್ನೂ ಆಕರ್ಷಿಸಲಿದೆ. ಭಾರತದಲ್ಲಿ ಆಲೂಗಡ್ಡೆ ವಲಯವು ಉತ್ಪಾದನೆ, ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್, ಸಾರಿಗೆ, ಮಾರುಕಟ್ಟೆ ಇತ್ಯಾದಿಗಳಲ್ಲಿ ಗಮನಾರ್ಹ ಉದ್ಯೋಗಾವಕಾಶ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದನ್ನು ಮತ್ತಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ ಎಂದಿದ್ದಾರೆ.

    ಅSAಖಅ ಅಭಿವೃದ್ಧಿಪಡಿಸಿದ ಹೆಚ್ಚಿನ ಇಳುವರಿ ನೀಡುವ, ಪೋಷಕಾಂಶ ಮತ್ತು ಹವಾಮಾನ ಆಧಾರಿತ ತಳಿಗಳ ಆಲೂಗಡ್ಡೆ ಮತ್ತು ಸಿಹಿಗೆಣಸು ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಏಷ್ಯಾ ಪ್ರದೇಶದಲ್ಲಿಯೂ ಹೆಚ್ಚು ಉತ್ಪಾದನೆ ಮತ್ತು ಬಳಕೆಯಲ್ಲಿದ್ದು, ವಿಶ್ವದರ್ಜೆ ಮಾರುಕಟ್ಟೆ ಕಲ್ಪಿಸುವಲ್ಲಿ ಈ ಕೇಂದ್ರ ನೆರವಾಗಲಿದೆ.

    ಆಲೂಗಡ್ಡೆ, ಸಿಹಿಗೆಣಸು ಅನ್ವೇಷಣೆ ಮತ್ತು ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ಉತ್ತರ ಪ್ರದೇಶದ ಆಗ್ರಾದ ಸಿಂಗ್ನಾದಲ್ಲಿ ಸ್ಥಾಪಿಸುವುದರಿಂದ ಭಾರತದಲ್ಲಿ ಆಲೂಗಡ್ಡೆ ಮತ್ತು ಸಿಹಿಗೆಣಸು ವಲಯಗಳ ಸುಸ್ಥಿರ ಅಭಿವೃದ್ಧಿಗೂ ಗಮನಾರ್ಹ ಕೊಡುಗೆ ನೀಡಲಿದೆ ಎಂದರು.ಇದನ್ನೂ ಓದಿ: ಲೋಕಸಭಾಧ್ಯಕ್ಷ ಓಂ ಬಿರ್ಲಾರನ್ನು ಭೇಟಿ ಮಾಡಿದ ಯು.ಟಿ.ಖಾದರ್

  • ಕರ್ನಾಟಕಕ್ಕೆ ಹೆಚ್‌ಡಿಕೆ, ಜೋಶಿ ಕೊಡುಗೆ ಏನು? ಚರ್ಚೆಗೆ ಬರಲಿ: ಪ್ರದೀಪ್ ಈಶ್ವರ್ ಪಂಥಾಹ್ವಾನ

    ಕರ್ನಾಟಕಕ್ಕೆ ಹೆಚ್‌ಡಿಕೆ, ಜೋಶಿ ಕೊಡುಗೆ ಏನು? ಚರ್ಚೆಗೆ ಬರಲಿ: ಪ್ರದೀಪ್ ಈಶ್ವರ್ ಪಂಥಾಹ್ವಾನ

    – 1 ವರ್ಷದಿಂದ ಏನ್ ಕಡಿದು ಕಟ್ಟೆ ಹಾಕಿದ್ದೀರಾ ಅಂತ ಲೇವಡಿ

    ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹಾಗೂ ಹೆಚ್.ಡಿ ಕುಮಾರಸ್ವಾಮಿಯವರ (HD Kumarswamy) ಕೊಡುಗೆ ಏನು? ಇಬ್ಬರಿಗೂ ಆತ್ಮಸಾಕ್ಷಿಯಿದ್ದರೆ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕೇಂದ್ರ ಸಚಿವರಿಗೆ ಪಂಥಾಹ್ವಾನ ನೀಡಿದ್ದಾರೆ.

    1 ವರ್ಷದಿಂದ ಏನ್ ಕಡೆದು ಕಟ್ಟೆ ಹಾಕಿದ್ದೀರಾ?
    ವಿಧಾನಸೌಧದಲ್ಲಿ ಮಾತನಾಡಿದ ಅವರು, NDA ಎಂದರೆ ನೇಷನ್ ಡೆಸ್ಟ್ರಾಯ್ ಅಲಾಯನ್ಸ್. ಕೇಂದ್ರ ಸಚಿವ ಜೋಶಿ ಮತ್ತು ಕುಮಾರಸ್ವಾಮಿಗೆ ರಾಜ್ಯದ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಕಳೆದ 1 ವರ್ಷದಿಂದ ನೀವು ಇಬ್ಬರು ಕೇಂದ್ರದಲ್ಲಿ ಏನ್ ಕಡಿದು ಕಟ್ಟೆ ಹಾಕಿದ್ದೀರಾ? ಉತ್ತರ ಕೊಡಿ. ಆತ್ಮಸಾಕ್ಷಿ ಇದ್ದರೆ ಬಹಿರಂಗ ಚರ್ಚೆ ಇಬ್ಬರು ಬರಲಿ ಎಂದರು.ಇದನ್ನೂ ಓದಿ: ಬೆಂಗಳೂರು | ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ ಸಾವು

    ಕೇಂದ್ರ ಸರ್ಕಾರ (Central Government) ಏನು ಮಾಡಿದೆ ಎಂದು ತಿಳಿಯುವ ಕುತೂಹಲವಿದೆ. ನಮ್ಮ ರಾಜ್ಯ ಸರ್ಕಾರ 2 ವರ್ಷ ಏನು ಮಾಡಿದೆ ಎಂದು ನಾನು ಹೇಳುತ್ತೇನೆ. ಮೊದಲು ನೀವು ರಾಜ್ಯಕ್ಕೆ ಏನು ಮಾಡಿದ್ದೀರಾ ಹೇಳಿ? ನಮ್ಮ ಸರ್ಕಾರದ ಎಲ್ಲಾ ಸಚಿವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ನಾವು ಪ್ರತಿಭಟನೆ ಮಾಡಿದ್ದೇವೆ. ಆದರೂ ಕೇಂದ್ರ ನಮಗೆ ಏನ್ ಕೊಡ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿದ್ದಾರೆ ಎಂದ ಮೇಲೆ ಅವರಿಗೆ ಜವಾಬ್ದಾರಿ ಇದೆ. ಏನಾದ್ರು ಮಾತಾಡಿದ್ರೆ ಆಪರೇಷನ್ ಸಿಂಧೂರ ಅಂತಾರೆ. ಮೋದಿ ಅಂತಾರೆ. ನಿಮ್ಮ ರಿಪೋರ್ಟ್ ಏನು? ರಾಜ್ಯಕ್ಕೆ ಕೊಡುಗೆ ಏನು? ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

    ರಾಜ್ಯದಿಂದ ಭದ್ರಾ ಮೇಲ್ಡಂಡೆ, ಕೃಷ್ಡ ಮೇಲ್ಡಂಡೆ ಮಾಡಿ, ಬೇಡಿಕೆ ಈಡೇರಿಸಿದ್ದೇವೆ. ಯಾಕೆ ಹಣ ಕೊಡಲಿಲ್ಲ? ಕೇಂದ್ರದ ಎಲ್ಲಾ ಅನುದಾನ ರಾಜ್ಯಕ್ಕೆ ಕಡಿಮೆಯಾಗಿದೆ. ತೆರಿಗೆ ಪಾಲು ಸರಿಯಾಗಿ ಕೊಡ್ತಿಲ್ಲ. ಜಾಸ್ತಿ ಪಾಲು ಕೊಡಬೇಕು. ಕುಮಾರಸ್ವಾಮಿ, ಜೋಶಿ ಚರ್ಚೆಗೆ ಬರಲಿ. ನಾನು ಚರ್ಚೆಗೆ ಸಿದ್ಧ. ಕುಮಾರಸ್ವಾಮಿ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ಕೊಡ್ತೀನಿ. ಒಂದು ವರ್ಷದಿಂದ ರಾಜ್ಯಕ್ಕೆ ಏನ್ ಕೊಟ್ಟಿದ್ದೀರಾ ಹೇಳಿ. ಬಹಿರಂಗ ಚರ್ಚೆಗೆ ಜೋಶಿ, ಕುಮಾರಸ್ವಾಮಿ ಬರಲಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಡಾಲಿ, ಶಿವಣ್ಣ

  • ಮೊದಲ ನಿಧನದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ, ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? – ಜೋಶಿ ಕಿಡಿ

    ಮೊದಲ ನಿಧನದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ, ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? – ಜೋಶಿ ಕಿಡಿ

    -ತಮ್ಮ ಮೇಲಿನ ಆರೋಪ ತಳ್ಳಿಹಾಕಲು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಎಂದ ಕೇಂದ್ರ ಸಚಿವ

    ಧಾರವಾಡ: ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮೊದಲ ನಿಧನದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ. ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? ಈ ಪ್ರಕರಣದಲ್ಲಿ ಸರ್ಕಾರದ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಆರ್‌ಸಿಬಿ (RCB) ವಿಜಯೋತ್ಸವಕ್ಕೂ ಮೊದಲೇ ಪೊಲೀಸ್ ಆಯುಕ್ತ ಬಿ.ದಯಾನಂದ್ (B Dayanand) ಅವರು ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಆಗುವುದಿಲ್ಲ ಎಂದು ಅನುಮತಿ ನಿರಾಕರಿಸಿದ್ದರು. ಹಿಂದಿನ ದಿನ ರಾತ್ರಿ ಆರ್‌ಸಿಬಿ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಕುಣಿದು ಕುಪ್ಪಳಿಸಿದ್ದರು. ಪೊಲೀಸರಿಗೆ ಅದನ್ನು ನಿರ್ವಹಿಸುವುದೇ ಕಷ್ಟವಾಗಿತ್ತು. ಅವರು ಬೆಳಗ್ಗೆ ಅದರ ಬ್ರೀಫಿಂಗ್‌ಗೂ ಹೋಗಿರಲಿಲ್ಲ. ಪೆಂಡಾಲ್ ಹಾಕುವುದನ್ನು ನೋಡಿಯೇ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಸಿಎಂಗೆ ತಿಳಿಸಿದ್ದರು ಎಂದು ಹೇಳಿದರು.ಇದನ್ನೂ ಓದಿ: ಬಿಎಂಟಿಸಿ ಬಸ್ಸು ಡಿಕ್ಕಿ- ದ್ವಿಚಕ್ರ ವಾಹನ ಸವಾರ ಸಾವು

    ಇನ್ನೂ ವಿಜಯೋತ್ಸವಕ್ಕೆ ಅನುಮತಿ ಕೊಡುವ ವಿಚಾರವಾಗಿ ಸಿಎಂ ಹಾಗೂ ಡಿಸಿಎಂ ಮಧ್ಯೆಯೇ ಪೈಪೋಟಿ ಇತ್ತು. ಹೀಗಾಗಿ ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡಲಾಗಿದೆ. ತಮ್ಮ ಮೇಲಿನ ಆರೋಪ ತಳ್ಳಿ ಹಾಕಲು ಅಧಿಕಾರಿಗಳ ಅಮಾನತು ಮಾಡಿದ್ದಾರೆ. ಇದೊಂದು ತಪ್ಪಿಸಿಕೊಳ್ಳುವ ತಂತ್ರ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.

    ಸಿಎಂ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ತೆಗೆದಿದ್ದು ಯಾಕೆ? ಅವರು ಏನಾದರೂ ತಪ್ಪು ಮಾಡಿರಬೇಕಲ್ಲ? ಅವರ ಮೇಲೆ ಎಫ್‌ಐಆರ್ ಯಾಕೆ ಆಗಿಲ್ಲ? ಕೆಲವರನ್ನು ಅಮಾನತು ಮಾಡಿ, ಜನರು ಈ ಕೇಸ್ ಮರೆಯಬೇಕೆಂದು ಹೀಗೆ ಮಾಡುತ್ತಿದ್ದಾರೆ. ವಿಧಾನಸೌಧದಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದು ಯಾರು? ಇನ್ನೂ ಸಿಎಂ, ಸಚಿವರ ಮಕ್ಕಳು ವಿಧಾನಸೌಧದ ಎದುರು ಸೆಲ್ಫಿ ತೆಗೆದುಕೊಂಡರು. ನೂರಾರು ಜನ ವೇದಿಕೆಯಲ್ಲಿದ್ದರು. ಸಿಎಂ ಹುದ್ದೆ ಬಗ್ಗೆ ನಮಗೆ ಗೌರವವಿದೆ. ಅವರು ನಮ್ಮ ರಾಜ್ಯದ ನಾಯಕರು, ಸಿಎಂ ಇರುವ ವೇದಿಕೆಯಲ್ಲಿ ಹೀಗೆಲ್ಲ ಮಾಡಿದ್ದು ಎಷ್ಟು ಸರಿ? ಇದಕ್ಕೆ ಯಾರು ಹೊಣೆ? ಕಾಲ್ತುಳಿತದ ಬಳಿಕ ಮಧ್ಯಾಹ್ನ 3:10ಕ್ಕೆ ಬೌರಿಂಗ್ ಆಸ್ಪತ್ರೆಯಲ್ಲಿ ಮೊದಲ ನಿಧನ ಆಯಿತು. ಅದಾದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ. ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? ಇದಕ್ಕೆಲ್ಲ ಕೋರ್ಟ್ ಕಠಿಣ ಕ್ರಮ ಕೈಗೊಳ್ಳಲಿದೆ. ಇವರು ಸರ್ಕಾರದಲ್ಲಿ ಮುಂದುವರೆಯೋಕೆ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ವರದಕ್ಷಿಣೆ ದುರಾಸೆಗೆ 2ನೇ ಮದುವೆಗೆ ರೆಡಿಯಾಗಿದ್ದ ವ್ಯಕ್ತಿಗೆ ಪತ್ನಿಯಿಂದ ಚಪ್ಪಲಿ ಏಟು

  • ಕಾಂಗ್ರೆಸ್‌ನವ್ರೇ ಇ.ಡಿಗೆ ಪರಂ ವಿರುದ್ಧ ದಾಖಲೆ ಕೊಟ್ಟಿದ್ರೆ ಹೆಸರು ಬಹಿರಂಗಪಡಿಸಿ: ಜೋಶಿಗೆ ಎಂಬಿ ಪಾಟೀಲ್ ಸವಾಲು

    ಕಾಂಗ್ರೆಸ್‌ನವ್ರೇ ಇ.ಡಿಗೆ ಪರಂ ವಿರುದ್ಧ ದಾಖಲೆ ಕೊಟ್ಟಿದ್ರೆ ಹೆಸರು ಬಹಿರಂಗಪಡಿಸಿ: ಜೋಶಿಗೆ ಎಂಬಿ ಪಾಟೀಲ್ ಸವಾಲು

    ಬೆಂಗಳೂರು: ಪರಮೇಶ್ವರ್ ವಿರುದ್ಧ ಇ.ಡಿಗೆ ಯಾವ ಕಾಂಗ್ರೆಸ್ ನಾಯಕರು ದಾಖಲೆ ಕೊಟ್ಟಿದ್ರು ಅಂತ ಪ್ರಹ್ಲಾದ್ ಜೋಶಿ (Pralhad Joshi) ಅವರು ಬಹಿರಂಗಪಡಿಸಲಿ ಎಂದು ಸಚಿವ ಎಂ.ಬಿ.ಪಾಟೀಲ್ (M.B.Patil) ಸವಾಲೆಸೆದಿದ್ದಾರೆ.

    ಬೆಂಗಳೂರಿನಲ್ಲಿ ಮಾತಾಡಿದ ಎಂ.ಬಿ.ಪಾಟೀಲ್, ಇ.ಡಿಗೆ ಪರಮೇಶ್ವರ್ ವಿರುದ್ಧ ಯಾರು ದಾಖಲೆ ಕೊಟ್ರು? ಪ್ರಹ್ಲಾದ್ ಜೋಶಿಯವರ ಬಳಿ ಮಾಹಿತಿ ಇದ್ರೆ ಹೇಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಯಾಕೆ ಕಾಂಗ್ರೆಸ್‌ನವ್ರು ಯಾರು ಅಂತ ಬಹಿರಂಗಪಡಿಸಲು ಜೋಶಿಯವರಿಗೆ ಧೈರ್ಯ ಇಲ್ವಾ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಇಡಿ ತನಿಖೆಗೆ ಸಂಪೂರ್ಣ ಸಹಕಾರ – ದಾಳಿ ಉದ್ದೇಶ ಗೊತ್ತಿಲ್ಲ, ನಾನೇನೂ ಮುಚ್ಚಿಟ್ಟಿಲ್ಲ ಅಂದ ಪರಂ

    ಯಾರು ದಾಖಲೆ ಕೊಟ್ಟವರು ಅಂತ ಅವರಿಗೆ ಗೊತ್ತಿರುತ್ತೆ. ಸಂಪೂರ್ಣ ಮಾಹಿತಿ ಇರುತ್ತೆ. ಅವರ ಅಡಿಯಲ್ಲೇ ಇ.ಡಿ, ಐಟಿ ಎಲ್ಲ ಬರೋದು. ಮೋದಿ, ಪ್ರಹ್ಲಾದ್ ಜೋಶಿಯವರೇ ಇದನ್ನೆಲ್ಲ ಮಾಡಿಸ್ತಿದ್ದಾರೆ. ಹಾಗಾದ್ರೆ ಇ.ಡಿಯವ್ರು ಎಲ್ಲವನ್ನೂ ಪ್ರಹ್ಲಾದ್ ಜೋಶಿಯವರಿಗೆ ರಿಪೋರ್ಟ್ ಮಾಡ್ತಾರೆ ಅಂತ ಆಯ್ತಲ್ಲ ಎಂದು ವಾಗ್ದಾಳಿ ನಡೆಸಿದರು.

  • ಕಾಂಗ್ರೆಸ್‌ನವರೇ ಪರಮೇಶ್ವರ್ ಮೇಲೆ ಕ್ರಮ ಆಗ್ಬೇಕು ಅಂತಾ ಇಡಿಗೆ ಮಾಹಿತಿ ನೀಡಿದ್ದು: ಪ್ರಹ್ಲಾದ್ ಜೋಶಿ

    ಕಾಂಗ್ರೆಸ್‌ನವರೇ ಪರಮೇಶ್ವರ್ ಮೇಲೆ ಕ್ರಮ ಆಗ್ಬೇಕು ಅಂತಾ ಇಡಿಗೆ ಮಾಹಿತಿ ನೀಡಿದ್ದು: ಪ್ರಹ್ಲಾದ್ ಜೋಶಿ

    ಗದಗ: ಕಾಂಗ್ರೆಸ್‌ನ(Congress) ಒಂದು ಗುಂಪು ಪರಮೇಶ್ವರ್ ಮೇಲೆ ಕ್ರಮ ಆಗಬೇಕು ಅಂತ ಇಡಿಗೆ ಎಲ್ಲಾ ಮಾಹಿತಿ ನೀಡಿದೆ. ಯಾರು ಕಳುಹಿಸಿದ್ದು ಅಂತಾ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Prahlad Joshi) ಸ್ಫೋಟಕ ಹೇಳಿಕೆ ನೀಡಿದರು.

    ಗೃಹಸಚಿವ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ ಕುರಿತು ಗದಗದಲ್ಲಿ(Gadag) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2013ರಲ್ಲಿ ಪರಮೇಶ್ವರ್(G Parameshwar) ಅವರನ್ನು ಸೋಲಿಸಿದ್ದು ಯಾರು? ಇದೇ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರನ್ನು ಸೋಲಿಸಿದ್ದು, ಇದು ಜಗತ್ ಜಾಹಿರ ವಿಚಾರ. ಸಿದ್ದರಾಮಯ್ಯನವರೇ, ಜನರು ಇತಿಹಾಸವನ್ನು ಅಷ್ಟು ಬೇಗ ಮರೆಯೋದಿಲ್ಲ ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ

    ಗೋಲ್ಡ್ ಸ್ಮಗ್ಲಿಂಗ್‌ನಿಂದ ಹಿಡಿದು ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಇಡಿಗೆ ಪತ್ರ ಬರೆಯುತ್ತಿದ್ದವರು ಯಾರು? ಕಾಂಗ್ರೆಸ್‌ನ ಒಂದು ಗುಂಪು ಪರಮೇಶ್ವರ್ ಮೇಲೆ ಕ್ರಮ ಆಗಬೇಕು ಎಂದು ಇಡಿಗೆ ಎಲ್ಲಾ ಮಾಹಿತಿ ಕಳುಹಿಸುತ್ತಾರೆ. ಇಷ್ಟೆಲ್ಲಾ ಮಾಡಿ ಈಗ ಡ್ರಾಮ ಮಾಡ್ತಿದ್ದೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಜ್ಯೋತಿ ಮಲ್ಹೊತ್ರಾಗೆ ನಾಲ್ಕು ದಿನ ಪೊಲೀಸ್ ಕಸ್ಟಡಿ ವಿಸ್ತರಣೆ

    ಪರಮೇಶ್ವರ್ ಬಗ್ಗೆ ನಮಗೆ ಗೌರವ ಇದೆ. ಅವರು ಒಬ್ಬ ಸಭ್ಯ ರಾಜಕಾರಣಿ. ಕಾಂಗ್ರೆಸ್‌ನ ಒಂದು ಗುಂಪಿನವರು ಮಾಹಿತಿಗಳನ್ನೆಲ್ಲಾ ಇಡಿಗೆ ಕಳುಹಿಸಿದ್ದು. ಯಾರು ಕಳುಹಿಸಿದ್ದು ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಗುಪ್ತಚರ ಇಲಾಖೆ ಅವರ ಬಳಿ ಇದೆ. ಅವರ ಬಳಿ ಕೇಳಿದ್ರೆ ಯಾರು ಅಂತ ಹೇಳ್ತಾರೆ. ಇಂತಹ ಮಾಹಿತಿ ಸಿಕ್ಕಾಗ ಇಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ ಎಂದರು.

    ಇವರೇ ಮಾಹಿತಿಯನ್ನು ಬೇಕಂತಲೆ ಕೊಟ್ಟಿದ್ದಾರೆ. ಇಡಿ ಕರ್ತವ್ಯದಂತೆ ತನಿಖೆ ಮಾಡ್ತಿದೆ. ಪರಮೇಶ್ವರ್‌ಗೆ ತೊಂದರೆ ಕೊಡಬೇಕು ಎಂಬ ಯಾವ ಉದ್ದೇಶವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಕಾನೂನು ಪ್ರಕಾರ ತಪ್ಪು ಮಾಡಿದ್ರೆ. ನಾನೇ ತಪ್ಪು ಮಾಡಲಿ, ಸಿದ್ದರಾಮಯ್ಯ, ಪರಮೇಶ್ವರ್ ತಪ್ಪು ಮಾಡಲಿ. ನಮ್ಮ ಪಕ್ಷದವರು ಇನ್ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗುತ್ತೆ. ಎಲ್ಲದಕ್ಕೂ ರಾಜಕಾರಣ ಬೆರಸಿದ್ರೆ, ನಿಮ್ಮ ಪಕ್ಷದವರು ಏನೇನು ಮಾಡಿದ್ದಾರೆಂಬುದು ಮುಂದೆ ನಿಮಗೇ ತೊಂದರೆ ಆಗುತ್ತದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ದೈವ ಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡೋಕೆ ಆಗಲ್ಲ: ಹೆಚ್.ಡಿ ರೇವಣ್ಣ

    ಎಲ್ಲಾ ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧೀಯ ಕೇಂದ್ರ ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶದ ಕುರಿತು ಪ್ರತಿಕ್ರಿಯಿಸಿದರು. ರಾಜೀವ್ ಗಾಂಧಿ ದೇಹಾಂತ್ಯವಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಪರಿವಾರದ ಪ್ರಧಾನ ಮಂತ್ರಿ ಇಲ್ಲ. ಅವರದ್ದೇ ಸರ್ಕಾರ ಇದ್ದಾಗಲೂ, ಯಾವ ಪ್ರಧಾನಮಂತ್ರಿ ಹೆಸರು ಬಂದ್ರೂ ಇವರಿಗೆ ಉರಿಯುತ್ತಿತ್ತು. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ತಡೆದುಕೊಳ್ಳಲು ಆಗ್ತಿಲ್ಲ. ಪ್ರಧಾನ ಮಂತ್ರಿ ಕುರ್ಚಿ ಅಂದ್ರೆ, ಗಾಂಧಿ ಪರಿವಾರದವರಿಗೆ ಮಾಡಿಟ್ಟ ಮೀಸಲು ಅಂತ ತಿಳಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಾ.ನಗರ| ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ವಧು

    ಪ್ರಧಾನ ಮಂತ್ರಿ ಜನ ಔಷಧೀಯ ಕೇಂದ್ರ ಬಂದ್ ಮಾಡಿದ್ದಾರೆ. ಔಷಧ ಫ್ರೀ ಕೊಡುತ್ತೇವೆ ಅಂತಾರೆ. ಎಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಔಷಧ ಉಚಿತ ಸಿಗುತ್ತಾ? ಉತ್ತರ ಕರ್ನಾಟಕ ಪ್ರತಿಷ್ಠಿತ ಕಿಮ್ಸ್‌ನಲ್ಲಿ ಔಷಧ ಹೊರಗಡೆ ಬರೆದುಕೊಡ್ತಾರೆ. ನೀವು ಉಚಿತ ಕೊಟ್ರೆ ಜನ ಯಾಕೆ ಪ್ರಧಾನಮಂತ್ರಿ ಔಷಧ ಕೇಂದ್ರಕ್ಕೆ ಹೋಗ್ತಾರೆ. ಉಚಿತ ಔಷಧ ಕೊಟ್ರೆ ಜನೌಷಧೀಯ ಕೇಂದ್ರಕ್ಕೆ ಹೋಗಿ ತೆಗದುಕೊಳ್ಳಲು ಜನರಿಗೆ ಹುಚ್ಚು ಹಿಡಿದಿದ್ಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್‌

    ಕಡಿಮೆ ಬೆಲೆಗೆ ಸಿಗುವ ಔಷಧಕ್ಕೂ ಕಲ್ಲು ಹಾಕ್ತಿರಿ. ಯಾಕೆಂದರೆ ಅದರಲ್ಲಿ ಪ್ರಧಾನಮಂತ್ರಿ ಹೆಸರಿದೆ. ಪ್ರಧಾನ ಮಂತ್ರಿ ಪದವನ್ನು ದ್ವೇಷ ಮಾಡ್ತಿದ್ದಾರೆ. ನೆಹರು, ಗಾಂಧಿ ಕುಟುಂಬದವರು ಪ್ರಧಾನಮಂತ್ರಿ ಆಗುವುದಿಲ್ಲ ಅಂತ ಅವರಿಗೂ ಗೊತ್ತಾಗಿದೆ. ದೇಶದ ಅಭ್ಯುದಯವನ್ನು ವಿರೋಧ ಮಾಡ್ತಿದ್ದಾರೆ. ದೇಶವನ್ನೇ ದ್ವೇಷ ಮಾಡ್ತಾ ಹಿಂದೂಸ್ತಾನ ವಿರುದ್ಧ ಹೋರಾಟ ಮಾಡ್ತೇವೆ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಜನೌಷಧೀಯ ಕೇಂದ್ರದ ಬಗ್ಗೆ ಬಡವರ ಹಿತದೃಷ್ಟಿಯಿಂದ ಮರು ಪರಿಶೀಲನೆ ಮಾಡಬೇಕು. ಜನ ಔಷಧೀಯ ಕೇಂದ್ರ ಬಂದ್ ಮಾಡುವ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು.