Tag: ಪ್ರಹ್ಲಾದ್ ಜೋಶಿ

  • ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಹೈಕಮಾಂಡ್‍ಗೆ ಬಿಟ್ಟ ವಿಚಾರ: ಪ್ರಹ್ಲಾದ್ ಜೋಶಿ

    ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಹೈಕಮಾಂಡ್‍ಗೆ ಬಿಟ್ಟ ವಿಚಾರ: ಪ್ರಹ್ಲಾದ್ ಜೋಶಿ

    – ಕಾಂಗ್ರೆಸ್, ಜೆಡಿಎಸ್ ವಂಶಾಡಳಿತಕ್ಕೆ ಒಳಪಟ್ಟ ಪಕ್ಷಗಳು

    ಹುಬ್ಬಳ್ಳಿ: ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹೈ ಕಮಾಂಡ್‍ಗೆ ಬಿಟ್ಟಿದ್ದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಬಿಜೆಪಿ ಯಾವುದೇ ರೀತಿ ಕುದುರೆ ವ್ಯಾಪಾರ ಮಾಡಿಲ್ಲ. ಮೈತ್ರಿ ಸರ್ಕಾರದ ಅಸಮಾಧಾನದಿಂದ ಅತೃಪ್ತರು ಹೊರಗಡೆ ಬಂದಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್-ಜೆಡಿಎಸ್ ವಂಶಾಡಳಿತಕ್ಕೆ ಒಳಪಟ್ಟ ಪಕ್ಷಗಳು. ಅಲ್ಲಿನ ಕೆಲ ನಾಯಕರಿಗೆ ಕುಟುಂಬದ ಹಿತವೇ ಮುಖ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆ ಪಕ್ಷಗಳ ಬಲ ಮತ್ತಷ್ಟು ಕುಗ್ಗಲಿದೆ ಎಂದು ವಾಗ್ದಾಳಿ ನಡೆಸಿದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಿದ್ದರು. ಆದರೆ ಜೆಡಿಎಸ್-ಕಾಂಗ್ರೆಸ್ ನಾಯಕರು ಜನಾದೇಶವನ್ನು ಧಿಕ್ಕರಿಸಿದ ಆಡಳಿತ ನಡೆಸಿದರು. ಈಗ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಆಡಳಿತಕ್ಕೆ ಬಂದಿದೆ. ಈ ಮೂಲಕ ಜನಾದೇಶಕ್ಕೆ ಗೌರವ ಸಿಕ್ಕಿದೆ ಎಂದು ತಿಳಿಸಿದರು.

    ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡುವುದಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ನಮಗೆ ಸಂಖ್ಯಾಬಲ ಇರುವುದರಿಂದ ಗೆಲ್ಲುತ್ತೇವೆ. ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಆಯ್ಕೆಯ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು. ಮುಂದಿನ ಕೆಲವೇ ದಿನಗಳಲ್ಲಿ ಸಚಿವ ಸಂಪುಟ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.

  • ನೂರಕ್ಕೆ ನೂರು ಬಹುಮತ ಸಾಬೀತು ಪಡಿಸ್ತೇವೆ: ಪ್ರಹ್ಲಾದ್ ಜೋಶಿ

    ನೂರಕ್ಕೆ ನೂರು ಬಹುಮತ ಸಾಬೀತು ಪಡಿಸ್ತೇವೆ: ಪ್ರಹ್ಲಾದ್ ಜೋಶಿ

    ಬೆಂಗಳೂರು: ರಾಜ್ಯದ ಜನರಿಗೆ ಸುಭದ್ರ, ರೈತ, ಜನಪರ ಸರ್ಕಾರವನ್ನು ನೀಡುವುದು ಬಿಜೆಪಿ ಪಕ್ಷದ ಉದ್ದೇಶವಾಗಿದೆ. ಉತ್ತಮ ಆಡಳಿತವನ್ನು ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ನೀಡುತ್ತೇವೆ ಎಂದು ಸಂಸದ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.

    ಬಿಎಸ್‍ವೈ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮವಾರ ಸದನದಲ್ಲಿ ಸರ್ಕಾರ ಬಹುಮತ ಸಾಬೀತು ಮಾಡಲಿದ್ದು, ನೂರಕ್ಕೆ ನೂರು ವಿಶ್ವಾಸ ಇದೆ ಎಂದರು.

    ಸೌಹಾರ್ದಯುತ ಭೇಟಿ ಮಾಡಿ ಬಿಎಸ್‍ವೈ ಅವರಿಗೆ ಶುಭ ಹಾರೈಸಿದ್ದೇನೆ. ಅವರು ಹೋರಾಟಗಾರರಾಗಿದ್ದು, ಸ್ವಪ್ರಯತ್ನದಿಂದ ರೈತ ನಾಯಕನಾಗಿ ಹೊರ ಹೊಮ್ಮಿದವರು. ಅಧಿಕಾರಕ್ಕೆ ಬಂದ ತಕ್ಷಣ ರೈತರ ಪರವಾದ ನಿರ್ಣಯ ಕೈಗೊಂಡಿದ್ದಾರೆ. ಅವರ ಈ ನಿರ್ಣಯ ಬಡವರು, ಕೂಲಿಕಾರ್ಮಿಕರು, ನೇಕಾರರ ಜೀವನಗುಣಮಟ್ಟ ಹೆಚ್ಚಿಸಲಿದ್ದಾರೆ ಎಂದರು.

  • ಅಸಾಧ್ಯವಾಗಿದನ್ನು ಸಾಧ್ಯ ಮಾಡುವವರು ಮೋದಿ, ಈಗ ಜವಾಬ್ದಾರಿ ಹೆಚ್ಚಾಗಿದೆ – ಜೋಶಿ

    ಅಸಾಧ್ಯವಾಗಿದನ್ನು ಸಾಧ್ಯ ಮಾಡುವವರು ಮೋದಿ, ಈಗ ಜವಾಬ್ದಾರಿ ಹೆಚ್ಚಾಗಿದೆ – ಜೋಶಿ

    ಬೆಂಗಳೂರು: ಪ್ರಧಾನಿ ಮೋದಿ ಅವರು ಅಸಾಧ್ಯವಾಗಿರುವುದನ್ನು ಸಾಧ್ಯ ಮಾಡುವವರು. ಇವರ ಕ್ಯಾಬಿನೆಟ್‍ಗೆ ನಾನು ಆಯ್ಕೆಯಾಗಿದ್ದೇನೆ. ಇದರಿಂದ ನಮ್ಮ ಮೇಲೆ ಇರುವ ಜವಬ್ದಾರಿ ಹೆಚ್ಚಿದೆ ಎಂದು ನೂತನ ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನನಗೆ ಕರೆ ಮಾಡಿ ವಿಷಯ ತಿಳಿಸಿದರು. ಸಂಜೆ 5 ಗಂಟೆಗೆ ಪ್ರಧಾನ ಮಂತ್ರಿ ನಿವಾಸಕ್ಕೆ ಬರಬೇಕು. ಹಾಗೆಯೇ ಸಂಜೆ 7 ಗಂಟೆಗೆ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದರು. ಕೇಂದ್ರ ಸಚಿವ ಸ್ಥಾನ ಸಿಗುತ್ತಿರುವುದಕ್ಕೆ ಖುಷಿ ಆಗುತ್ತಿರುವುದಕ್ಕಿಂತ ಜವಬ್ದಾರಿ ಹೆಚ್ಚಿದೆ. ಮೋದಿ ಅವರ ಮೇಲೆ ಜನರ ನಿರೀಕ್ಷೆ ಬಹಳ ಇದೆ. ಕಳೆದ 5 ವರ್ಷ ಅವರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಮೋದಿ ಅವರು ಅಸಾಧ್ಯವಾಗಿರುವುದನ್ನು ಸಾಧ್ಯ ಮಾಡುವವರು. ಹೀಗಾಗಿ ನಮ್ಮ ಮೇಲು ಹೆಚ್ಚು ಜವಾಬ್ದಾರಿ ಇದೆ. ಬಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಚೆನ್ನಾಗಿ ಕೆಲಸ ಮಾಡುತ್ತೇವೆ ಎಂದು ಖುಷಿಯನ್ನು ವ್ಯಕ್ತಪಡಿಸಿದರು.

    ನಮ್ಮ ಪಕ್ಷದ ಮೇಲೆ ನನಗೆ ಭರವಸೆ ಇದೆ. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದ ಹಿಡಿದು ಇಂದಿನ ನಾಯಕರಾದ ಮೋದಿ ಹಾಗೂ ಅಮಿತ್ ಶಾ ಅವರು ಸೂಕ್ತ ನಿರ್ಧಾರವನ್ನೇ ತೆಗೆದುಕೊಂಡು ಬಂದಿದ್ದಾರೆ. ಮುಂದೆಯೂ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಹಿಂದಿನ ಕ್ಯಾಬಿನೆಟ್‍ನಲ್ಲಿ ನನಗೆ ಸ್ಥಾನ ಕೊಡದ ಬಗ್ಗೆ ನಾನು ಮಾತನಾಡುವುದಿಲ್ಲ ಹಿಂದೆ ಕೂಡ ನಮ್ಮ ನಾಯಕರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದರು. ಈಗಲೂ ಸರಿಯಾಗಿಯೇ ತಿರ್ಮಾನಿಸಿದ್ದಾರೆ. ಉತ್ತರ ಕರ್ನಾಟಕದಿಂದ ನಾನು ಮತ್ತು ಸುರೇಶ್ ಅಂಗಡಿ ಇಬ್ಬರು ಇದ್ದೇವೆ ಹಾಗೆಯೇ ದಕ್ಷಿಣದಿಂದ ಸದಾನಂದ ಗೌಡರು ಇದ್ದಾರೆ. ನಾವೆಲ್ಲರೂ ಸೇರಿ ಸಮಗ್ರ ಕರ್ನಾಟದ ಅಭಿಮೃದ್ಧಿ ಪರವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಪ್ರಥಮ ಬಾರಿಗೆ ಕೇಂದ್ರ ಸಚಿವನಾಗುತ್ತಿದ್ದೇನೆ ಇಂತಹದ್ದೆ ಖಾತೆ ಬೇಕು ಅಂತ ನಿರೀಕ್ಷೆ ಮಾಡಿಲ್ಲ. ಮೋದಿ ಹಾಗೂ ನಮ್ಮ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಬದ್ಧ ಎಂದರು. ಬಳಿಕ ಅನಂತ್‍ಕುಮಾರ್ ಹೆಗಡೆ ಅವರಿಗೆ ಕೊಕ್ ಕೊಟ್ಟಿರುವ ವಿಚಾರವಾಗಿ ಮಾತನಾಡಿ, ನಮ್ಮ ನಾಯಕರು ಯಾವ ಕಾಲಕ್ಕೆ ಏನು ಮಾಡಬೇಕು ಎಂದು ಮೊದಲೇ ಯೊಚನೆ ಮಾಡಿರುತ್ತಾರೆ. ಹಿಂದೆ ಅವರಿಗೆ ಸ್ಥಾನ ಕೊಟ್ಟಿದ್ದರು. ಈ ಬಾರಿ ನನಗೆ ಸ್ಥಾನ ಕೊಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

    ಮಹದಾಯಿ ವಿಚಾರವಾಗಿ ಮಾತನಾಡಿ, ಈ ವಿಷಯ ಕೋರ್ಟ್‍ನಲ್ಲಿದೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಈ ಬಗ್ಗೆ ವರದಿ ವರದಿ ಸಲ್ಲಿಸಿದೆ. ಕೋರ್ಟ್‍ನಲ್ಲಿ ಈ ವಿಚಾರ ಪೆಂಡಿಂಗ್ ಅಲ್ಲಿ ಇದೆ. ಹೀಗಾಗಿ ಕೋರ್ಟ್ ಮಹದಾಯಿ ವಿಚಾರದಲ್ಲಿ ತೀರ್ಪು ಕೊಟ್ಟ ನಂತರ ನಾವು ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

  • ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡುವಂತಹ ಸ್ಥಿತಿ ಕುಮಾರಸ್ವಾಮಿಯದ್ದು – ಜೋಶಿ

    ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡುವಂತಹ ಸ್ಥಿತಿ ಕುಮಾರಸ್ವಾಮಿಯದ್ದು – ಜೋಶಿ

    ಧಾರವಾಡ: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುವಂತಹ ಸ್ಥಿತಿ ಕುಮಾರಸ್ವಾಮಿ ಅವರದ್ದು ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಜಾಸ್ತಿ ಹಣ ಇದೆ ಎಂದು ಮೆಸೇಜ್ ಬರುತ್ತದೋ ಅಲ್ಲೆಲ್ಲ ಐಟಿ ದಾಳಿ ಆಗುತ್ತದೆ. ಬಿಜೆಪಿ ಪ್ರಮುಖ ನಾಯಕರು ಮತ್ತು ಜನಪ್ರತಿನಿಧಿಗಳ ಮನೆ ಮೇಲೂ ದಾಳಿ ಆಗಿದೆ ಎಂದು ಹೇಳಿದರು.

    ಚುನಾವಣೆಗೂ ಮುಂಚೆ ಜೆಡಿಎಸ್ ಪ್ರಮುಖರ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರದ್ದು ಕಳ್ಳನ ಜೀವ ಹುಳ್ಳುಳ್ಳಗೆ ಅನ್ನೋ ಪರಿಸ್ಥಿತಿ ಆಗಿದೆ. ಅವರು ಸರಿಯಾಗಿ ಇದ್ದಿದ್ದರೆ ಐಟಿ ದಾಳಿಗೆ ಏಕೆ ಹೆದರಬೇಕು? ನೀವು ಸರಿಯಾಗಿ ಇದ್ದರೆ ಐಟಿ ಅಧಿಕಾರಿಗಳು ಬರಲಿ ಬಿಡಿ ಎನ್ನಬೇಕಿತ್ತು. ನಿಮ್ಮ ಬಳಿ ಎಲ್ಲಾ ಸರಿ ಇರುವಾಗ ಯಾಕೆ ತೊಂದರೆ ಎನ್ನುತ್ತಿರಿ? ಹಾಗಾದರೆ ನಿಮ್ಮ ಮನೆಯಲ್ಲಿ ದುಡ್ಡು ಇದೆ. ಅದಕ್ಕೆ ನಿಮಗೆ ಹಾಗೆ ಅನಿಸುತ್ತಿದೆ ಎಂದು ವಾಗ್ದಾಳಿ ಮಾಡಿದರು.

    ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಬರ ಪರಿಹಾರದ ಕಾಮಗಾರಿಗಳು ನಡೆಯುತ್ತಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನಿರ್ಮಾಣವಾಗಿದೆ. ಮಲೆನಾಡಿನ ಪ್ರದೇಶಗಳಲ್ಲಿಯೂ ನೀರಿನ ಅಭಾವ ಉಂಟಾಗಿದೆ. ರಾಜ್ಯ ಸರ್ಕಾರ ನಾಯಕರು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಪಕ್ಷದಲ್ಲಿರುವ ಬಂಡಾಯ ಶಮನ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ ಎಂದು ಮೈತ್ರಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

    ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದ ಬಗ್ಗೆ ಮಾತನಾಡಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಬೇಕು. ಜಿಂದಾಲ್‍ನವರು ಇಷ್ಟು ಭೂಮಿ ತೆಗೆದುಕೊಂಡು ಏನು ಮಾಡುತ್ತಾರೆ. ಮೈತ್ರಿ ಸರ್ಕಾರ ಕಮೀಷನ್ ಪಡೆದು ಟೆಂಡರ್‍ ಗಳನ್ನು ನೀಡುತ್ತಿದ್ದಾರೆ. ಟೆಂಡರ್ ಕರೆದು ಕಮೀಷನ್ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಮೋದಿ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಇಲ್ಲಿ ಇಷ್ಟು ಪ್ರಮಾಣದಲ್ಲಿ ನಿಮ್ಮದೇ ಮೈತ್ರಿ ಸರ್ಕಾರ ಲೂಟಿ ಮಾಡುತ್ತಿದೆ. ಈ ಬಗ್ಗೆ ರಾಹುಲ್ ಗಾಂಧಿ ಬಾಯಿ ತೆರೆಯಬೇಕು. ಈ ಬಗ್ಗೆ ನಾನು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಪತ್ರ ಬರೆಯುತ್ತೇನೆ ಅವರಿಂದ ಪ್ರತಿಕ್ರಿಯೆ ಕೇಳುವೆ ಎಂದು ಹೇಳಿದರು.

  • ಮೈತ್ರಿ ಸರ್ಕಾರ ಅನೈತಿಕ ಸಂಬಂಧದಿಂದ ಹುಟ್ಟಿರುವ ಅಸಹಜ ಶಿಶು: ಪ್ರಹ್ಲಾದ್ ಜೋಶಿ

    ಮೈತ್ರಿ ಸರ್ಕಾರ ಅನೈತಿಕ ಸಂಬಂಧದಿಂದ ಹುಟ್ಟಿರುವ ಅಸಹಜ ಶಿಶು: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ರಾಜ್ಯ ಮೈತ್ರಿ ಸರ್ಕಾರ ಅನೈತಿಕ ಸಂಬಂಧದಿಂದ ಹುಟ್ಟಿರುವ ಅಸಹಜ ಶಿಶು, ಆಂತರಿಕ ಕಚ್ಚಾಟದಿಂದ ರಾಜ್ಯ ಮೈತ್ರಿ ಸರ್ಕಾರ ಪತನವಾಗುತ್ತೆ ಎಂದು ಎಂದು ಸಂಸದ ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳು ಎನ್‍ಡಿಎ ಪರವಾಗಿ ಬಂದಿವೆ, ಹೀಗಾಗಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಮತ್ತೊಮ್ಮೆ ಆಡಳಿತಕ್ಕೆ ಬರುವುದು ಖಚಿತ ವಿಶ್ವಾಸ ವ್ಯಕ್ತಪಡಿಸಿದರು.

    ನಮ್ಮ ಸಮೀಕ್ಷೆಗಳ ಪ್ರಕಾರವೂ ರಾಜ್ಯದಲ್ಲಿ 20 ಮತ್ತು ದೇಶದಲ್ಲಿ 280ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಈ ಬಾರಿ ಆಡಳಿತದ ಪರವಾದ ಅಲೆ ಕೆಲಸ ಮಾಡಿದೆ. ಆಡಳಿತ ಪರ, ಅಭಿವೃದ್ಧಿ ಪರ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಧಾನಿಗಳು ಜಾರಿಗೆ ತಂದಿರುವ ಯೋಜನೆಗಳು ಮುಂದುವರಿಯುತ್ತವೆ. ಇನ್ನು ಹೊಸ ಯೋಜನೆಗಳು ಜಾರಿಗೆ ತರುತ್ತಾರೆ ಎಂದರು.

    ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯ ಉಪಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಪಡೆಯುವುದು ಖಚಿತ. ಸಂಖ್ಯಾಬಲ ಹೆಚ್ಚಿಸಿಕೊಂಡು ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಜನಾದೇಶ ಬಿಜೆಪಿ ಪರ ಇದ್ದು, ಕಳೆದ 1 ವರ್ಷದಿಂದ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ. ಮೈತ್ರಿ ಕೇವಲ ಅನೈತಿಕ ಅಷ್ಟೇ ಅಲ್ಲ, ಅದು ಅಸಹಜವಾಗಿರುವ ಶಿಶು. ಅಸಹಜ ಆಗಿರುವುದರಿಂದಲೇ ಅದ್ದರಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

  • ದೋಸ್ತಿ ಸರ್ಕಾರಕ್ಕೆ ವಿಲನ್ ಯಾರಾದ್ರು ಇದ್ರೆ ಅದು ಸಿದ್ದರಾಮಯ್ಯ: ಜೋಶಿ ಟಾಂಗ್

    ದೋಸ್ತಿ ಸರ್ಕಾರಕ್ಕೆ ವಿಲನ್ ಯಾರಾದ್ರು ಇದ್ರೆ ಅದು ಸಿದ್ದರಾಮಯ್ಯ: ಜೋಶಿ ಟಾಂಗ್

    ಧಾರವಾಡ: ಸಮ್ಮಿತ್ರ ಸರ್ಕಾರವನ್ನು ಪತನ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ಲಾನ್ ಮಾಡುತ್ತಿದ್ದಾರೆ. ಚುನಾವಣೆ ಬಳಿಕ ದೋಸ್ತಿ ಸರ್ಕಾಕ್ಕೆ ವಿಲನ್ ಅಂತ ಯಾರಾದರೂ ಇದ್ದರೇ ಅದು ಸಿದ್ದರಾಮಯ್ಯ ಅವರೇ ಎಂದು ಹಾಲಿ ಸಂಸದ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ.

    ಕುಂದಗೋಳ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೋಸ್ತಿ ಸರ್ಕಾರಕ್ಕೆ ವಿಲನ್ ಇದ್ದರೆ ಅದು ಸಿದ್ದರಾಮಯ್ಯ ಅವರು ಮಾತ್ರ. ಸಮ್ಮಿಶ್ರ ಸರ್ಕಾರವನ್ನು ಅವರೇ ಬೀಳಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಇದೇ ವೇಳೆ 20 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಳ ಹೊಡೆತಗಳು ಬಹಳ ಇವೆ. ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ತಲುಪಿದ್ದಾರೆ ಎಂದರು.

    ದೋಸ್ತಿ ಸರ್ಕಾರದಲ್ಲಿ ನಡೆಯುತ್ತಿರುವ ವಿಷಯಗಳು ಸಿದ್ಧರಾಮಯ್ಯನವರ ಕುಮ್ಮಕ್ಕಿಲ್ಲದೇ ಆಗಲು ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಯಾವುದೇ ಸ್ಥಾನಮಾನದಲ್ಲಿರುವುದು ಅವರಿಗೆ ಇಷ್ಟವಿಲ್ಲ. ಸಿದ್ದರಾಮಯ್ಯನವರೇ ಸಮ್ಮಿಶ್ರ ಸರ್ಕಾರ ಬೀಳಿಸುವ ಕುತಂತ್ರ ನಡೆಸಿದ್ದಾರೆ. ಸಿದ್ಧರಾಮಯ್ಯ ಕುತಂತ್ರ ಮಾಡುತ್ತಾರೆ ಬಳಿಕ ಬಿಜೆಪಿ ಮೇಲೆ ಆಪಾದನೆ ಮಾಡುತ್ತಾರೆ. ಹೀಗಾಗಿ ದೋಸ್ತಿ ನಾಯಕರು ಅವರವರೇ ಹೊಡೆದಾಡಿಕೊಂಡು ಬಿಜೆಪಿಯತ್ತ ಬರುತ್ತಾರೆ ಎಂದು ಜೋಶಿ ಹೇಳಿದರು.

  • ಮೋದಿ ಸುಮಲತಾಗೆ ಬೆಂಬಲ ನೀಡಿದ್ಮೇಲೆ ಸಿಎಂ ಟೇಪ್ ರೆಕಾರ್ಡ್ ಚೇಂಜ್ ಆಗಿದೆ: ಜೋಶಿ ಟಾಂಗ್

    ಮೋದಿ ಸುಮಲತಾಗೆ ಬೆಂಬಲ ನೀಡಿದ್ಮೇಲೆ ಸಿಎಂ ಟೇಪ್ ರೆಕಾರ್ಡ್ ಚೇಂಜ್ ಆಗಿದೆ: ಜೋಶಿ ಟಾಂಗ್

    ಧಾರವಾಡ: ಕಾಂಗ್ರೆಸ್-ಜೆಡಿಎಸ್‍ನವರು ಹತಾಶೆಗೊಂಡು ಮಾತನಾಡುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಸುಮಲತಾ ಅಂಬರೀಶ್‍ಗೆ ಬೆಂಬಲ ನೀಡಿದ ಮೇಲೆ ಸಿಎಂ ಕುಮಾರಸ್ವಾಮಿ ಟೇಪ್ ರೆಕಾರ್ಡ್ ಚೇಂಜ್ ಆಗಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್‍ನವರು ಹತಾಶೆಗೊಂಡು ಮಾತನಾಡುತ್ತಿದ್ದಾರೆ. ದೇಶದ ಪ್ರಧಾನಿ ಎನ್ನುವುದನ್ನು ಮರೆತು ಮೋದಿ ಅವರನ್ನು ಏಕವಚನದಲ್ಲಿ ಬೈಯ್ಯುವ ಕೀಳುಮಟ್ಟಕ್ಕೆ ಮೈತ್ರಿ ಪಕ್ಷದವರು ಇಳಿದಿದ್ದಾರೆ. ಮಹದಾಯಿ ವಿಳಂಬ ವಿಚಾರವಾಗಿ ಮಾತನಾಡಿ, ಮೇಲ್ಮನವಿ ಸಲ್ಲಿಸಿದಾಗ ಗೆಜೆಟ್ ನೋಟಿಫಿಕೇಷನ್ ಮಾಡೋಕೆ ಬರೊಲ್ಲ ಅಂತ ಅವರೇ ಹೇಳಿದ್ದಾರೆ. ಆದರೆ ಈಗ ಮೋದಿ ಅವರು ಸುಮಲತಾಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ ಮೇಲೆ ಕುಮಾರಸ್ವಾಮಿ ಟೇಪ್ ರೆಕಾರ್ಡ್ ಚೇಂಜ್ ಆಗಿದೆ. ಜನಕ್ಕೆ ಸುಳ್ಳು ಹೇಳುವ ಟೋಪಿ ಹಾಕುವ ಕೆಲಸವನ್ನು ಅವರು ಬಹಳ ದಿನದಿಂದ ಮಾಡಿದ್ದಾರೆ ಎಂದು ಜೋಶಿ ಟೀಕಿಸಿದರು.

    ಕುಮಾರಸ್ವಾಮಿ ಹುಬ್ಬಳ್ಳಿಗೆ ಬಂದು ನನಗೆ ಎರಡು ಪ್ರಶ್ನೆ ಕೇಳಿದ್ದಾರೆ. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಏನಾಯ್ತು ಅಂತ ಅವರು ಕೇಳಿದ್ದಾರೆ. ಸಿಎಂ ಸ್ಥಾನದಲ್ಲಿದ್ದುಕೊಂಡು ವಿಷಯ ತಿಳಿಯದ ನೀವೊಬ್ಬ ಅಜ್ಞಾನಿ. ಇಲ್ಲವೇ ಗೊತ್ತಿದ್ದು ಸುಳ್ಳು ಹೇಳುತ್ತಾ ಇದ್ದೀರಾ ಅನಿಸುತ್ತಿದೆ ಎಂದು ಕಿಡಿಕಾರಿದರು.

    ಹುಬ್ಬಳ್ಳಿ-ಅಂಕೋಲಾ ಬಗ್ಗೆ ಜನರನ್ನು ನ್ಯಾಯಾಲಯಕ್ಕೆ ಕಳುಹಿಸಿದವರೇ ಇವರು. ನೈಋತ್ಯ ರೈಲ್ವೆ ವಲಯಕ್ಕೆ ಅಡ್ಡಗಾಲು ಹಾಕಿದ್ದು ಕೂಡ ಇವರೇ. ಆದ್ರೆ ನಾವು ಸುಪ್ರೀಂ ಕೋರ್ಟಗೆ ಹೋಗಿ ನೈಋತ್ಯ ರೈಲ್ವೆ ವಲಯ ಮಾಡಿಸಿದ್ದೇವೆ. ಉತ್ತರ ಕರ್ನಾಟಕ ವಿರೋಧಿ ನಿಲುವು ನಿರಂತರವಾಗಿ ಅನುಸರಿಸಿಕೊಂಡು ಬಂದವರು ಈಗ ಉತ್ತರ ಕರ್ನಾಟಕದ ಮೇಲೆ ಪ್ರೀತಿ-ಪ್ರೇಮ ಹರಿದು ಬಂದಂತೆ ಮಾತಾಡ್ತಾ ಇದ್ದಾರೆ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  • ಒಂದು ಮನೆಯನ್ನು ಇಬ್ಭಾಗ ಮಾಡೋ ಕುತಂತ್ರಿ ಪ್ರಹ್ಲಾದ್ ಜೋಶಿ: ವಿನಯ್ ಕುಲಕರ್ಣಿ

    ಒಂದು ಮನೆಯನ್ನು ಇಬ್ಭಾಗ ಮಾಡೋ ಕುತಂತ್ರಿ ಪ್ರಹ್ಲಾದ್ ಜೋಶಿ: ವಿನಯ್ ಕುಲಕರ್ಣಿ

    ಧಾರವಾಡ: ಜಿಪಂ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಾಕ್ಷ್ಯನಾಶ ಆರೋಪದಡಿ ಧಾರವಾಡ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿ ಮೇಲೆ ಎಫ್‍ಐಆರ್ ದಾಖಲಿಸಲು ಕೋರ್ಟ್ ಸೂಚನೆ ನೀಡಿದ್ದು, ಇದಕ್ಕೆಲ್ಲಾ ಪ್ರಹ್ಲಾದ್ ಜೋಶಿ ಕಾರಣ ಎಂದು ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಂಗದ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಆದರೆ ಯಾವತ್ತೋ ಆಗಿರುವ ಕೇಸ್ ಚುನಾವಣೆಯಲ್ಲಿಯೇ ಯಾಕೆ ಬಂತು ಎನ್ನುವುದು ನನ್ನ ಪ್ರಶ್ನೆ. ಆ ಕೇಸ್ ಹಾಕಿರುವ ಗುರುನಾಥಗೌಡ ಪ್ರಹ್ಲಾದ ಜೋಶಿ ಜೊತೆಯೇ ಇರುತ್ತಾರೆ. ಹಾಗಾದ್ರೆ ಯಾರೂ ಈ ಕೇಸ್ ಮಾಡಿದಂತಾಯ್ತು? ನಾನು ಆರೋಪಿಯೂ ಇಲ್ಲ, ಎಫ್‍ಐಆರ್ ನಲ್ಲಿಯೂ ಇಲ್ಲ, ಚಾರ್ಜ್ ಶೀಟ್‍ನಲ್ಲಿಯೂ ಇಲ್ಲ. ಆದರೆ ಈಗ ಚುನಾವಣೆ ಸಮಯದಲ್ಲಿ ಪ್ರಹ್ಲಾದ್ ಜೋಶಿ ಇಂತಹ ಕುತಂತ್ರ ತಂದಿದ್ದಾರೆ ಎಂದು ಕಿಡಿಕಾರಿದರು.

    ಯೋಗಿಶಗೌಡ ಕೊಲೆ ಪ್ರಕರಣದಲ್ಲಿ 62 ಸಾಕ್ಷಿಗಳು ಇದ್ದವು, ಅದರಲ್ಲಿ 59 ಸಾಕ್ಷಿಗಳು ಮುಗಿದಿವೆ. ಧಾರವಾಡದಲ್ಲಿ ಏನು ಆದರೂ ವಿನಯ್ ಕುಲಕರ್ಣಿ ಮಾತ್ರ ಕಾಣುತ್ತಾರೆ. ಒಂದು ಮನೆಯನ್ನು ಇಬ್ಭಾಗ ಮಾಡುವಂತಹ ಕುತಂತ್ರಿ ಪ್ರಹ್ಲಾದ್ ಜೋಶಿ. ಈ ಕೇಸ್ ಆಗಿ ಎರಡ್ಮೂರು ವರ್ಷ ಆದ ಮೇಲೆ ಈಗ ಮತ್ತೆ ವಿಚಾರ ಎತ್ತಿದ್ದಾರೆ. ಇದೆಲ್ಲವೂ ಪ್ರಹ್ಲಾದ್ ಜೋಶಿ ಕುತಂತ್ರ ಎಂದು ವಿನಯ್ ಕುಲಕರ್ಣಿ ಹರಿಹಾಯ್ದರು.

    ಏನಿದು ಪ್ರಕರಣ?
    ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಪೊಲೀಸ್ ಅಧಿಕಾರಿಗಳಾದ ತುಳಜಪ್ಪ ಸುಲ್ಪಿ ಹಾಗೂ ಚಂದ್ರಶೇಖರ್ ವಿರುದ್ಧ ಕೂಡ ಎಫ್‍ಐಆರ್ ದಾಖಲಿಸಿಕೊಳ್ಳುವಂತೆ ಧಾರವಾಡ ಜೆಎಂಎಫ್‍ಸಿ ಕೋರ್ಟ್ ಆದೇಶಿಸಿದೆ. ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಒತ್ತಡ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

    ಈ ಕೊಲೆ ಪ್ರಕರಣ 2017ರಲ್ಲಿ ನಡೆದಿದ್ದು, ಯೋಗೀಶಗೌಡ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆ ಆರು ಜನರೂ ಕೂಡ ವಿನಯ್ ಅವರ ಅನುಯಾಯಿಗಳೇ ಆಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್ ಅವರ ಕೈವಾಡ ಇದೆ ಎಂದು ಯೋಗೀಶಗೌಡರ ಪತ್ನಿ ಮಲ್ಲಮ್ಮ ಸಂಶಯ ವ್ಯಕ್ತಪಡಿಸಿದ್ದರು.

  • ಜೋಶಿಗೆ ಶಕ್ತಿಯಿದ್ರೆ ಸ್ವಂತ ಹೆಸರು ಹೇಳಿಕೊಂಡು ಚುನಾವಣೆ ಎದುರಿಸಲಿ: ಕುಲಕರ್ಣಿ ಸವಾಲ್

    ಜೋಶಿಗೆ ಶಕ್ತಿಯಿದ್ರೆ ಸ್ವಂತ ಹೆಸರು ಹೇಳಿಕೊಂಡು ಚುನಾವಣೆ ಎದುರಿಸಲಿ: ಕುಲಕರ್ಣಿ ಸವಾಲ್

    ಹುಬ್ಬಳ್ಳಿ: ಸಂಸದ ಪ್ರಹ್ಲಾದ್ ಜೋಶಿಗೆ ಶಕ್ತಿಯಿದ್ದರೆ ಸ್ವಂತ ಹೆಸರು ಹೇಳಿಕೊಂಡು ಚುನಾವಣೆ ಎದುರಿಸಲಿ ಎಂದು ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಸವಾಲ್ ಹಾಕಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ಹೆಸರಿನಲ್ಲಿ ಮತ ಕೇಳೋಕೆ ನನಗೆ ನಾಚಿಕೆಯಾಗಲ್ಲ. ವಿನಯ್ ಕುಲಕರ್ಣಿ ಬೇಕಾದರೆ ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳಲಿ ಎನ್ನೋ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.

    ನಮ್ಮ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಬಿಟ್ಟುಬಿಡೋಣ. ವಿನಯ್ ಕುಲಕರ್ಣಿ ವರ್ಸಸ್ ಪ್ರಹ್ಲಾದ್ ಜೋಶಿ ಎಂದು ಚುನಾವಣೆ ಮಾಡೋಣ. ಪ್ರಹ್ಲಾದ್ ಜೋಶಿ ಅವರು ನನ್ನ ವಿರುದ್ಧ ತಮ್ಮ ಹೆಸರು ಹೇಳಿಕೊಂಡು ಚುನಾವಣೆ ಎದುರಿಸಲಿ ಎಂದು ಸವಾಲ್ ಹಾಕಿ ಕಿಡಿಕಾರಿದರು.

    ಜೋಶಿ 15 ವರ್ಷದಿಂದ ಸಂಸದರಾಗಿ ಕ್ಷೇತ್ರಕ್ಕೇನು ಮಾಡಿದ್ದಾರೆ? ಯಾಕೆ ಅವರು ಬೇರೆಯವರ ಹೆಸರಲ್ಲಿ ಮತ ಕೇಳುತ್ತಾರೆ? ಹಾಗಾದರೇ ಧಾರವಾಡ ಕ್ಷೇತ್ರಕ್ಕೆ ಅವರೇನು ಕೆಲಸ ಮಾಡಿಲ್ಲವಾ? ಎಂದು ಪ್ರಶ್ನಿಸಿ ಜೋಶಿಗೆ ಕುಲಕರ್ಣಿ ಟಾಂಗ್ ಕೊಟ್ಟರು.

  • ಜೆಡಿಎಸ್ ತಾನೂ ಹಾಳಾಗುತ್ತೆ ಜೊತೆಗೆ ಕಾಂಗ್ರೆಸ್ಸನ್ನು ಮುಗಿಸಿ ಹೋಗುತ್ತೆ: ಜೋಶಿ ವ್ಯಂಗ್ಯ

    ಜೆಡಿಎಸ್ ತಾನೂ ಹಾಳಾಗುತ್ತೆ ಜೊತೆಗೆ ಕಾಂಗ್ರೆಸ್ಸನ್ನು ಮುಗಿಸಿ ಹೋಗುತ್ತೆ: ಜೋಶಿ ವ್ಯಂಗ್ಯ

    -ಕಾಂಗ್ರೆಸ್ ಪಕ್ಷವನ್ನ ಮುಗಿಸಲು ದೊಡ್ಡಗೌಡರಿಂದ ಭಾರೀ ಪ್ಲಾನ್

    ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಮುಗಿಸಲು ದೊಡ್ಡಗೌಡರು ಭಾರೀ ಪ್ಲಾನ್ ಮಾಡಿದ್ದಾರೆ. ಈ ಟ್ರಾಪ್‍ನಲ್ಲಿ ಹೋಗಿ ಕಾಂಗ್ರೆಸ್ಸಿನವರು ಬೀಳುತ್ತಿದ್ದಾರೆ ಎಂದು ಹೆಚ್‍ಡಿಡಿ ಪ್ಲಾನ್ ಬಗ್ಗೆ ಬಿಜೆಪಿ ಮುಖಂಡ, ಸಂಸದ ಪ್ರಹ್ಲಾದ್ ಜೋಶಿ ಬಿಚ್ಚಿಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸಲು ದೇವೇಗೌಡರು ಭಾರಿ ಟ್ರಾಪ್ ಮಾಡಿದ್ದಾರೆ. ದೇವೇಗೌಡರಿಗೆ ದೃತರಾಷ್ಟ್ರ ಮೋಹ ಶುರುವಾಗಿದೆ. ಅವರ ಮಕ್ಕಳು, ಮೊಮ್ಮಕ್ಕಳ ಮೋಹದಲ್ಲಿ ಕಾಂಗ್ರೆಸ್‍ನಂತಹ ಕೌರವ ಕುಲ ಹಾಳಾಗುತ್ತೆ. ಜೆಡಿಎಸ್ ತಾನೂ ಹಾಳಾಗುತ್ತೆ, ಕಾಂಗ್ರೆಸ್ಸನ್ನೂ ಹಾಳು ಮಾಡುತ್ತಿದೆ ಎಂದಿದ್ದಾರೆ.

    ಕಾಂಗ್ರೆಸ್ಸನ್ನ ಮುಗಿಸಲು ಕೆಲ ಕೈ ನಾಯಕರೇ ರೆಡಿಯಾಗಿದ್ದಾರೆ. ಇದರಲ್ಲಿ ಕೆಲ ಕಾಂಗ್ರೆಸ್ ರಾಜ್ಯ ನಾಯಕರು ಕೂಡ ಭಾಗಿಯಾಗಿದ್ದಾರೆ. ಇಷ್ಟರಲ್ಲೆ ಅವರ ಹೆಸರುಗಳು ಮಾಧ್ಯಮಗಳ ಮೂಲಕವೇ ಹೊರ ಬೀಳಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ತನ್ನಿಂದ ತಾನೇ ಆಗಲಿದೆ. ಈ ಚುನಾವಣೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲು ದೊಡ್ಡ ಮುನ್ನುಡಿಯನ್ನ ಬರೆಯಲಿದೆ ಎಂದು ವಿಜಯಪುರದ ಖಾಸಗಿ ಹೋಟೇಲ್‍ನಲ್ಲಿ ಸ್ಫೋಟಕ ವಿಚಾರವನ್ನು ಹೊರಹಾಕಿದ್ದಾರೆ.

    ಧಾರವಾಡ ಕಟ್ಟಡ ದುರಂತ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಈ ಕಟ್ಟಡ ದುರಂತದಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಧನ ನೀಡಬೇಕು. ಕೆಲವು ಪ್ರಭಾವಿಗಳು ಹೆಚ್ಚು ದುಡ್ಡುಗಳಿಸಲು ಕಳಪೆ ಕಾಮಗಾರಿ ಮಾಡಿದ್ದಾರೆ. ಬಿಲ್ಡಿಂಗ್ ಮಾಲೀಕರ ಮೇಲೆ ವೀಕ್ ಸೆಕ್ಷನ್‍ಗಳನ್ನು ಹಾಕಿದ್ದಾರೆ. ಪರಿಹಾರ ಹಾಗೂ ಗಾಯಾಳುಗಳಿಗೆ ಚಿಕಿತ್ಸೆಗೆ ನೀಡುವುದು ವಿಳಂಬ ಆಗುತ್ತಿದೆ ಎಂದು ಜೋಶಿ ಕಿಡಿಕಾರಿದ್ದಾರೆ.