Tag: ಪ್ರಹ್ಲಾದ್ ಜೋಶಿ

  • ಶಾಸಕರ ಸಭೆಗಳಿಗೂ ಸಚಿವ ಸಂಪುಟಕ್ಕೂ ಸಂಬಂಧ ಇಲ್ಲ: ಪ್ರಹ್ಲಾದ್ ಜೋಶಿ

    ಶಾಸಕರ ಸಭೆಗಳಿಗೂ ಸಚಿವ ಸಂಪುಟಕ್ಕೂ ಸಂಬಂಧ ಇಲ್ಲ: ಪ್ರಹ್ಲಾದ್ ಜೋಶಿ

    ಧಾರವಾಡ: ಶಾಸಕರ ಸಭೆಗಳು ನಡೆಯುತ್ತೇಲೆ ಇರುತ್ತೇವೆ. ಅದಕ್ಕೂ ಸಚಿವ ಸಂಪುಟಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು, ಸಚಿವ ಸಂಪುಟ ವಿಸ್ತರಣೆ ಸಿಎಂ ಮತ್ತು ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ಹಿಂದೆಯೂ ಹುಬ್ಬಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಸಭೆ ಆಗಿತ್ತು. ಅದನ್ನೂ ಸಹ ರಹಸ್ಯ ಸಹ ಎಂದಿದ್ದರು. ಅದೆಲ್ಲ ಏನೂ ಇರುವುದೇ ಇಲ್ಲ ಸದ್ಯ ಆಗುತ್ತಿರುವ ಸಭೆಗಳಿಗೂ ಸಂಪುಟ ವಿಸ್ತರಣೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಷಡ್ಯಂತ್ರ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾನೂನು ತನ್ನ ಕೆಲಸ ಮಾಡುತ್ತಿದೆ. ನಮ್ಮ ಕೈವಾಡ ಇದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆ ರೀತಿ ಆರೋಪ ಮಾಡುವವರಿಗೆ ದೇವರು ಸದ್ಬುದ್ಧಿ ನೀಡಲಿ. ಇದೇ ವೇಳೆ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಹ್ಲಾದ್ ಜೋಶಿ, ರವಿ ಬೆಳಗೆರೆ ನಿಧನ ನಮ್ಮೆಲ್ಲರಿಗೆ ದುಃಖ ತಂದಿದೆ. ಭಗವಂತ ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದರು.

  • ಸಂಸದರ ಆದರ್ಶ ಗ್ರಾಮದ ಮಕ್ಕಳಿಗೆ ಶಾಲೆ ಕಟ್ಟಡನೇ ಇಲ್ಲ!

    ಸಂಸದರ ಆದರ್ಶ ಗ್ರಾಮದ ಮಕ್ಕಳಿಗೆ ಶಾಲೆ ಕಟ್ಟಡನೇ ಇಲ್ಲ!

    ಧಾರವಾಡ: ಸಂಸದರ ಆದರ್ಶ ಗ್ರಾಮಗಳು ಈಗಲೂ ಮೊದಲಿನಂತೆಯೇ ಇವೆ. ಅದಕ್ಕೆ ಕಾರಣ ಆ ಗ್ರಾಮ ದತ್ತು ಪಡೆದ ಸಂಸದರು ಅಭಿವೃದ್ಧಿ ಪಡಿಸದೇ ಇರುವುದು.

    ಹೌದು. ಧಾರವಾಡ ಜಿಲ್ಲೆಯ ಸಂಸದರ ಗ್ರಾಮದ ಸ್ಥಿತಿ ಅದೇ ರೀತಿಯಾಗಿದೆ. ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಹಾರೋಬೆಳವಡಿ ಹಾಗೂ ಕಬ್ಬೇನೂರ ಗ್ರಾಮಗಳನ್ನ ದತ್ತು ಪಡೆದಿದ್ದರು. ಕಬ್ಬೇನೂರ ಗ್ರಾಮದಲ್ಲಿ ಶಾಲೆ ಕಟ್ಟಡಕ್ಕೆ ಅಡಿಪಾಯ ಕೂಡ ಹಾಕಲಾಗಿತ್ತು. ಈ ಕಟ್ಟಡ ನಿರ್ಮಾಣ ಆಗಬಹುದು ಎಂದು ಎಲ್ಲರೂ ನೋಡುತ್ತಿದ್ದರೆ, ಅದು ಆಗಲೇ ಇಲ್ಲ.

    ಈಗ ಇರುವ ಹಳೆ ಶಾಲೆ ಕಟ್ಟಡ ಕೂಡ ಬಿಳುತ್ತಿದೆ. ಸರ್ಕಾರ ಶಾಲೆ ಆರಂಭಕ್ಕೆ ಏನಾದರೂ ಅನುಮತಿ ನೀಡಿದ್ರೆ ಮಕ್ಕಳಿಗೆ ಕುಳಿತುಕೊಳ್ಳಲು ಕಟ್ಟಡನೇ ಇಲ್ಲದಂತಾಗುತ್ತೆ. ಈ ಬಗ್ಗೆ ಸಂಸದರಿಗೆ ಕೇಳಿದ್ರೆ ಕೊರೊನಾ ಹಿನ್ನೆಲೆ ಸಿಎಸ್ ಆರ್ ಫಂಡ್ ಬಂದಿಲ್ಲ ಎನ್ನುತ್ತಾರೆ.

    ಗ್ರಾಮಸ್ಥರು ಹೊಸ ಕಟ್ಟಡದ ಅಡಿಪಾಯ ಹಾಕಿದ್ದಕ್ಕೆ ಹಳೆ ಕಟ್ಟಡದ ದುರಸ್ತಿ ಕೂಡ ಆಗ್ತಿಲ್ಲ. ಹೀಗಾಗಿ ಸಂಸದರು ಈಗ ಕೇಂದ್ರ ಸಚಿವರು ಇದ್ದಾರೆ, ವಿಶೇಷ ಅನುದಾನದಲ್ಲಿ ಶಾಲೆ ಕಟ್ಟಡ ನಿರ್ಮಾಣ ಮಾಡಲಿ ಎಂದು ಆಗ್ರಹಿಸಿದ್ದಾರೆ.

  • ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಕೊರೊನಾ ಪಾಸಿಟಿವ್

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇತ್ತೀಚೆಗೆ ಕೊರೊನಾ ಸೋಂಕು ರಾಜಕಾರಣಿಗಳನ್ನು ಬೆನ್ನು ಬಿಡದೆ ಕಾಡುತ್ತಿದೆ. ಇತ್ತೀಚೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೂ ಕೂಡ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಕೇಂದ್ರ ಸಚಿವರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ತಮಗೆ ಕೊರೊನಾ ಸೋಂಕು ತಗಲಿರುವ ಸುದ್ದಿಯನ್ನು ಸ್ವತಃ ಸಚಿವರೇ ಟ್ವೀಟ್ ಮಾಡಿ ಖಚಿತ ಪಡಿಸಿದ್ದಾರೆ.

    ಸೋಂಕು ತಗುಲಿರುವ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಹ್ಲಾದ್ ಜೋಶಿಯವರು, ಆತ್ಮೀಯರೇ ಕೋವಿಡ್ ಪರೀಕ್ಷೆಯಲ್ಲಿ ನನಗೆ ಸೋಂಕು ದೃಢಪಟ್ಟಿದೆ. ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ. ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಕೂಡ ಕೊರೊನಾ ಚಿಕಿತ್ಸೆ ಫಲಿಸದೇ ವಿಧವಶರಾಗಿದ್ದರು.

    ಈ ಹಿಂದೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಸಂಸದ ಡಿಕೆ ಸುರೇಶ್ ಸೇರಿದಂತೆ ರಾಜ್ಯದ ಹಲವಾರು ರಾಜಕೀಯ ಗಣ್ಯರಿಗೆ ಕೊರೊನಾ ಸೋಂಕು ತಗುಲಿದೆ.

  • ಉಪ ಚುನಾವಣೆಗೂ, ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿಗೂ ಸಂಬಂಧವಿಲ್ಲ: ಪ್ರಹ್ಲಾದ್ ಜೋಶಿ

    ಉಪ ಚುನಾವಣೆಗೂ, ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿಗೂ ಸಂಬಂಧವಿಲ್ಲ: ಪ್ರಹ್ಲಾದ್ ಜೋಶಿ

    – ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ

    ರಾಯಚೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ, ಸಿಬಿಐ ಮತ್ತು ಇಡಿ ದಾಳಿ ಒಂದೇ ದಿವಸಕ್ಕೆ ಆಗುವ ದಾಳಿಯಲ್ಲ ಎಂದು ಕೇಂದ್ರ ಕೇಂದ್ರ ಸಂಸದೀಯ ವ್ಯಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಪ್ರಹ್ಲಾದ್ ಜೋಶಿ, ಎಲ್ಲ ರೀತಿಯ ಪೂರ್ವಸಿದ್ಧತೆ ಮತ್ತು ಹೋಮ್ ವರ್ಕ್ ನಂತರವೇ ದಾಳಿ ಆಗುತ್ತದೆ. ಯಾವುದೇ ದಾಳಿ ಆದಾಗ ರಾಜಕೀಯ ಪ್ರೇರಿತ ಎಂದು ಹೇಳುವುದು ಸರಳ ಶಬ್ದವಾಗಿ ಬಿಟ್ಟಿದೆ. ಡಿ.ಕೆ.ಶಿವಕುಮಾರ್ ರಾಜಕೀಯಕ್ಕೆ ಬರುವ ಮೊದಲು ಹೇಗಿದ್ದರು ಈಗ ಹೇಗಿದ್ದಾರೆ ಎಲ್ಲವನ್ನೂ ನೋಡಿಕೊಂಡು ದಾಳಿ ನಡೆದಿರುತ್ತೆ. ಉಪಚುನಾವಣೆ ಸಂದರ್ಭಕ್ಕೂ ದಾಳಿಗೂ ಸಂಬಂಧವಿಲ್ಲ. ಡಿಕೆಶಿ ಸಿದ್ದರಾಮಯ್ಯ ಒಟ್ಟಿಗೆ ಇದ್ದಾಗಲೂ ನಾವು 25 ಸ್ಥಾನ ಗೆದ್ದಿದ್ದೇವೆ ಎಂದರು.

    ಸದ್ಯ ನಾನು ಅಶೋಕ್ ಗಸ್ತಿ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ ಈಗ ಹೆಚ್ಚಿಗೆ ರಾಜಕಾರಣ ಮಾತನಾಡಲ್ಲ ಅಂತ ಪ್ರಹ್ಲಾದ್ ಜೋಶಿ ಹೇಳಿದರು. ಇನ್ನೂ ಅಶೋಕ್ ಗಸ್ತಿ ಹಾಗೂ ಅವರ ಕುಟುಂಬ ಪಕ್ಷಕ್ಕೆ ನಿಷ್ಠರಾಗಿದ್ದ ಹಿನ್ನೆಲೆ ಅವರಿಗೆ ರಾಜ್ಯಸಭಾ ಸ್ಥಾನ ಒಲಿದು ಬಂದಿತ್ತು, ಆದ್ರೆ ಒಂದು ಬಾರಿಯೂ ಅಧಿವೇಶನದಲ್ಲಿ ಭಾಗವಹಿಸದೇ ಅವರು ನಮ್ಮನ್ನಗಲಿ ಹೋಗಿದ್ದು ದುಃಖದ ಸಂಗತಿ ಅಂತ ಅವರ ನೆನಪುಗಳನ್ನ ಪ್ರಹ್ಲಾದ್ ಜೋಶಿ ಮೆಲುಕು ಹಾಕಿದರು.

  • ಭವಿಷ್ಯಕ್ಕೆ ಪಾಠವಾಗುವಂತೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇನೆ: ಜೋಶಿ

    ಭವಿಷ್ಯಕ್ಕೆ ಪಾಠವಾಗುವಂತೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇನೆ: ಜೋಶಿ

    ನವದೆಹಲಿ: ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಅತ್ಯಂತ ಖಂಡನೀಯ ಮತ್ತು ಇದೊಂದು ಪೂರ್ವ ನಿಯೋಜಿತ ದಾಳಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಮಂಗಳವಾರ ರಾತ್ರಿ ಕಾವಲಬೈರಸಂದ್ರದಲ್ಲಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾತನಾಡುತ್ತಾ ಘಟನೆಯನ್ನು ವಿರೋಧಿಸಿದರು. ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕಾನೂನು ಅಡಿ ದೂರು ದಾಖಲಿಸಬೇಕಿತ್ತು ಆದರೆ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದರು.

    ಪೊಲೀಸ್ ಠಾಣೆಯಿಂದ ಹಿಡಿದು ಸರ್ಕಾರಿ ವಾಹನ ಹಾಗೂ ಬಡ ಜನರ ಆಸ್ತಿ-ಪಾಸ್ತಿ ನಷ್ಟವಾಗಿದೆ. ಎಲ್ಲದಕ್ಕೂ ಬೆಂಕಿ ಹಚ್ಚಿರುವುದು ಆಕ್ಷಮ್ಯ ಅಪರಾಧ. ಈ ಸಂಬಂಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆಗೆ ಮಾತನಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದೇನೆ. ಈಗ ತೆಗೆದುಕೊಳ್ಳುವ ಕ್ರಮ ಮುಂದಿನ ದಿನಗಳಲ್ಲಿ ಮಾದರಿಯಾಗಿರಬೇಕು ಹಾಗೇ ತಪ್ಪಿತಸ್ಥರಿಗೆ ಪಾಠಕಲಿಸುವಂತೆ ಮನವಿ ಮಾಡಿದ್ದೇನೆ ಎಂದರು.

    ಧಾರ್ಮಿಕ ಮುಖಂಡರು ಕೂಡ ಈ ರೀತಿ ಘಟನೆಗಳನ್ನು ವಿರೋಧಿಸಬೇಕು ಆಗ ಮಾತ್ರವೇ ಸಮಾನತೆ ಮತ್ತು ಏಕತೆ ಕಾಪಡಲು ಸಾಧ್ಯ.ಪೊಲೀಸರು ಉತ್ತಮ ಕೆಲಸ ಮಾಡಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಜೋಶಿ ಹೇಳಿದರು.

  • ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿಯ ಮನೆಗೆ ಕೇಂದ್ರ ಸಚಿವ ಜೋಶಿ ಭೇಟಿ

    ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿಯ ಮನೆಗೆ ಕೇಂದ್ರ ಸಚಿವ ಜೋಶಿ ಭೇಟಿ

    ಧಾರವಾಡ: ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿಯ ಗ್ರಾಮಕ್ಕೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೆರಳಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್‍ರ ಸಚಿವರು, ಬಾಲಕಿಗೆ ನ್ಯಾಯ ಕೊಡಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಆರೋಪಿಯನ್ನು ಪೊಲೀಸ್ ಇಲಾಖೆ ಬಂಧಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

    ಸಂತ್ರತ್ತೆಯ ಕುಟುಂಬಕ್ಕೆ ಪರಿಹಾರ ಧನ ನೀಡಲು ನಿಯಮಾವಳಿಗಳನ್ನು ಪರಿಶೀಲಿಸಲಾಗುವುದು, ಅವರ ಕುಟುಂಬದ ನೆರವಿಗಾಗಿ ವ್ಯಯಕ್ತಿಕವಾಗಿ ರೂ.50 ಸಾವಿರ ನೀಡುವುದಾಗಿ ಸಚಿವರು ತಿಳಿಸಿದರು. ಶಾಸಕ ಅಮೃತ ದೇಸಾಯಿ ಮಾತನಾಡಿ, ಕೃಷಿಕ ಕುಟುಂಬವಾಗಿರುವುದರಿಂದ ಘಟನೆಯಿಂದಾಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಅವರ ಅನುಕೂಲಕ್ಕಾಗಿ ರೂ.50 ಸಾವಿರ ವ್ಯಯಕ್ತಿಕ ಸಹಾಯ ಧನ ನೀಡವುದಾಗಿ ಹೇಳಿದರು.

    ಶಾಸಕ ಅರವಿಂದ ಬೆಲ್ಲದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಡಿವೈಎಸ್‍ಪಿ ರವಿ ನಾಯಕ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

    ಏನಿದು ಪ್ರಕರಣ?: ಅಪ್ರಾಪ್ತೆ ಹೊಲದಲ್ಲಿನ ದೇವರಿಗೆ ಪೂಜೆ ಮಾಡಲು ತೆರಳಿದ್ದಳು. ಈ ವೇಳೆ ಗ್ರಾಮದ ಯುವಕ ಬೆದರಿಸಿ ಅತ್ಯಾಚಾರ ಮಾಡಿದ್ದನು. ಮರುದಿನ ಬಾಲಕಿ ತಾಯಿ ಬಳಿ ಹೊಲದಲ್ಲಿ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಹೇಳಿ ವಿಷ ಸೇವಿಸಿದ್ದಾಳೆ. ಕೂಡಲೇ ಕುಟುಂಬಸ್ಥರು ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 2ರಂದು ಸಾವನ್ನಪ್ಪಿದ್ದಳು.

  • ಸಭೆಯಿಂದ ಹೊರ ಹೋಗಿ – ಮಾಸ್ಕ್ ಹಾಕದ ಅಧಿಕಾರಿಗೆ ಪ್ರಹ್ಲಾದ್ ಜೋಶಿ ಕ್ಲಾಸ್

    ಸಭೆಯಿಂದ ಹೊರ ಹೋಗಿ – ಮಾಸ್ಕ್ ಹಾಕದ ಅಧಿಕಾರಿಗೆ ಪ್ರಹ್ಲಾದ್ ಜೋಶಿ ಕ್ಲಾಸ್

    ಧಾರವಾಡ: ಮಾಸ್ಕ್ ಇಲ್ಲದೇ ಸಭೆಗೆ ಆಗಮಿಸಿದ್ದ ಮಹಿಳಾ ಅಧಿಕಾರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತರಾಟೆಗೆ ತೆಗದುಕೊಂಡ ಘಟನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

    ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಇಂದು ಜೋಶಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಭೆಯ ಮೊದಲು ಎಲ್ಲ ಅಧಿಕಾರಿಗಳು ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಕೇಂದ್ರ ಸಚಿವರ ಸಭೆಗೆ ಮಾಸ್ಕ್ ಇಲ್ಲದೇ ಮಹಿಳಾ ಅಧಿಕಾರಿ ಭಾಗಿಯಾಗಿದ್ದರು.

    ವಿಶೇಷ ಭೂಸ್ವಾಧಿನಾಧಿಕಾರಿ ಶಾರದಾ ಕೋಲ್ಕಾರ್ ಅವರಿಗೆ ಕೇಂದ್ರ ಸಚಿವರು ಸಭೆಯಲ್ಲಿ ಮಾಸ್ಕ್ ಇಲ್ಲದೇ ಕುಳಿತಿದ್ದಕ್ಕೆ ತರಾಟೆಗೆ ತೆಗೆದುಕೊಂಡರು. ಮಾಸ್ಕ್ ಇಲ್ಲದೇ ಕುಳಿತಿದ್ದೀರಿ, ಮಾಸ್ಕ್ ಇಲ್ಲ ಅಂದರೆ ಹೊರಗೆ ಹೋಗಿ ಬಿಡಿ ಎಂದು ಕೇಂದ್ರ ಸಚಿವ ಜೋಶಿ ಗರಂ ಆಗುತಿದ್ದಂತೆಯೇ ಶಾರದಾ ಅವರು ಮಾಸ್ಕ್ ತರಿಸಿ ಹಾಕಿಕೊಂಡರು. ಸಚಿವರು ಗರಂ ಆಗುತ್ತಿದ್ದಂತೆಯೇ ಉಳಿದ ಅಧಿಕಾರಿಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾದರು.

  • ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಪೋಷಕರ ಪಟ್ಟು – 59 ದಿನಗಳ ನಂತ್ರ ದೇಶಕ್ಕೆ ಆಗಮಿಸಲಿರೋ ಟೆಕ್ಕಿ ಶವ

    ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಪೋಷಕರ ಪಟ್ಟು – 59 ದಿನಗಳ ನಂತ್ರ ದೇಶಕ್ಕೆ ಆಗಮಿಸಲಿರೋ ಟೆಕ್ಕಿ ಶವ

    ಹುಬ್ಬಳ್ಳಿ: ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಮಾಡಬೇಕೆಂದು ಪೋಷಕರ ಮನವಿ ಮಾಡಿಕೊಂಡಿದ್ದರಿಂದ 59 ದಿನಗಳ ಹಿಂದೆ ಲಂಡನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಹುಬ್ಬಳ್ಳಿಯ ಲಿಂಗರಾಜ ನಗರದ ಎಂಜಿನಿಯರ್ ಶವ ಇಂದು ಬೆಂಗಳೂರಿಗೆ ಬರಲಿದೆ.

    ಶಿವರಾಜ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಈ ವಿಷಯವನ್ನು ಕೇಂದ್ರ ಸಂಸದೀಯ ಸಚಿವ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಅವರು ಶನಿವಾರ ಖಚಿತಪಡಿಸಿದ್ದಾರೆ.

    ಮಾರ್ಚ್ 13 ರಂದು ಆತ್ಮಹತ್ಯೆ ಮಾಡಿಕೊಂಡ ಶಿವರಾಜ ಅಂತ್ಯ ಸಂಸ್ಕಾರವನ್ನು ಭಾರತದಲ್ಲೇ ನಡೆಸಬೇಕೆಂದು ಪಾಲಕರು ಪಟ್ಟು ಹಿಡಿದಿದ್ದರು. ಹೀಗಾಗಿ 59 ದಿನಗಳಿಂದಲೂ ಶವದ ಅಂತ್ಯಸಂಸ್ಕಾರ ನಡೆಸದೆ ಲಂಡನ್ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿತ್ತು.

    ಈ ಕುರಿತು ಶಿವರಾಜ ತಂದೆ, ತಾಯಿ 15 ದಿನಗಳ ಹಿಂದೆಯಷ್ಟೇ ತಮ್ಮ ಮಗನ ಶವವನ್ನು ದೇಶಕ್ಕೆ ತರಲು ಸಹಾಯ ಮಾಡುವಂತೆ ಕೇಂದ್ರ ಸಚಿವ ಜೋಶಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ನಿಟ್ಟಿನಲ್ಲಿ ನೆರವು ನೀಡಿದ್ದರು. ಭಾರತ ಸರ್ಕಾರ ಮನವಿ ಮಾಡಿದ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿ ಶವದ ಜೊತೆ ಪತ್ನಿ, ಮಗು ಬರಲು ಒಪ್ಪಿಗೆ ನೀಡಿದೆ.

    ಕಳೆದ ಎರಡ್ಮೂರು ದಿನಗಳಿಂದ ಸ್ವಲ್ಪ ಮಟ್ಟಿನ ಲಾಕ್‍ಡೌನ್ ತೆರವುಗೊಂಡು ವಿಮಾನಯಾನ ಆರಂಭಗೊಂಡಿದೆ. ಇಂದು ಲಂಡನ್‍ನಿಂದ ಬೆಂಗಳೂರಿಗೆ ವಿಮಾನವೊಂದು ಬರುತ್ತಿದೆ. ಅದೇ ವಿಮಾನದಲ್ಲಿ ಟೆಕ್ಕಿ ಶಿವರಾಜ ಪಾಟೀಲ ಶವ ಹಾಗೂ ಪತ್ನಿ, ಮಗು ಬರುವ ಸಾಧ್ಯತೆ ಇದೆ ಎಂದು ಸಚಿವ ಜೋಶಿ ತಿಳಿಸಿದರು.

  • ಸಾವಿರಾರು ಮಾಸ್ಕ್ ತಯಾರಿಸ್ತಿದ್ದಾರೆ ಧಾರವಾಡ ಮಹಿಳೆಯರು

    ಸಾವಿರಾರು ಮಾಸ್ಕ್ ತಯಾರಿಸ್ತಿದ್ದಾರೆ ಧಾರವಾಡ ಮಹಿಳೆಯರು

    ಹುಬ್ಬಳ್ಳಿ: ಕೊರೊನಾ ಹಾವಳಿಯಿಂದ ಮಾಸ್ಕ್ ಕೊರತೆ ಉಂಟಾಗದಂತೆ ತಡೆಯಲು ಮತ್ತು ಅಗತ್ಯವಿರುವ ಪ್ರತಿಯೊಬ್ಬರಿಗೂ ಉಚಿತ ಮಾಸ್ಕ್ ದೊರೆಯುವಂತೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಕ್ಷೇತ್ರದ ಬಡ ಮಹಿಳೆಯರಿಗೆ ಸಂಸದರ ಅನುದಾನದಡಿ ವಿತರಿಸಿದ್ದ ಹೊಲಿಗೆ ಯಂತ್ರದ ಸಹಾಯದಿಂದ ಈಗಾಗಲೇ ಸಾವಿರಾರು ಮಾಸ್ಕ್ ಸಿದ್ಧಪಡಿಸಲಾಗಿದೆ. ಈಗ ವಿತರಿಸುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೋರಾಟಕ್ಕೆ ಕೈಜೋಡಿಸಿರುವ ಧಾರವಾಡದ ಲೋಕಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಹಿಳೆಯರು ತಮಗೆ ನೀಡಿದ ಯಂತ್ರದಿಂದ ಉಚಿತವಾಗಿ ಮಾಸ್ಕ್ ಹೊಲಿದುಕೊಡುವ ಮೂಲಕ ಮಾದರಿ ಸೇವೆ ಸಲ್ಲಿಸುತ್ತಿದ್ದಾರೆ.

    ಕೇಂದ್ರ ಸಚಿವ ಜೋಶಿ ಅವರು ತಮ್ಮ ಕ್ಷೇತ್ರದಲ್ಲಿ 544 ಬಡ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದ್ದಾರೆ. ಅದರಲ್ಲಿ ಸಂಸದರ ಆದರ್ಶ ಗ್ರಾಮವಾದ ಹಾರೋಬೆಳವಡಿ, ಕಬ್ಬೇನೂರು ಗ್ರಾಮ ಸೇರಿದಂತೆ ಕ್ಷೇತ್ರದ 200ಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ಮಾಸ್ಕ್ ತಯಾರಿಕೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

    ತಲಾ ಒಬ್ಬರು ದಿನಕ್ಕೆ 100 ರಿಂದ 150 ಮಾಸ್ಕ್ ಸಿದ್ಧಪಡಿಸುತ್ತಿದ್ದಾರೆ. ಸಚಿವ ಜೋಶಿ ಅವರು ತಮ್ಮದೇ ಪೋಷಕತ್ವದಲ್ಲಿರುವ ಕ್ಷಮತಾ ಸೇವಾ ಸಂಸ್ಥೆಯನ್ನು ಈ ಜನೋಪಕಾರಿ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಮಾಸ್ಕ್ ತಯಾರಿಕೆಗೆ ಅಗತ್ಯವಿರುವ ಬಟ್ಟೆ ಮತ್ತು ದಾರವನ್ನು ಸಂಸ್ಥೆಯಿಂದ ಉಚಿತವಾಗಿ ವಿತರಣೆ ಮಾಡಿಸಿದ್ದಾರೆ. ಸಚಿವರ ಈ ಮಹತ್ವದ ಸೇವಾ ಕಾರ್ಯಕ್ಕೆ ಗ್ರಾಮೀಣ ಪ್ರದೇಶದ ಮಹಿಳೆಯರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.

    ಕ್ಷಮತಾ ಸೇವಾ ಸಂಸ್ಥೆಯೂ 3 ಲಕ್ಷ ಮಾಸ್ಕ್ ವಿತರಿಸುವ ಗುರಿಯನ್ನು ಇಟ್ಟುಕೊಂಡಿದ್ದು, ಲೋಕಸಭಾ ಕ್ಷೇತ್ರದಲ್ಲಿ ಬರುವ ಸಾವಿರಾರು ಬಡ ಮಹಿಳೆಯರಿಗೆ ‘ಸುವರ್ಣ ಎಜುಕೇಶನ್ ಟ್ರಸ್ಟ್’ ಉಚಿತ ಹೊಲಿಗೆ ತರಬೇತಿ ನೀಡಿದೆ. ತರಬೇತಿ ಹೊಂದಿದ ಮಹಿಳೆಯರನ್ನು ಬಳಸಿಕೊಂಡು ಈಗಾಗಲೇ ಉತ್ತಮ ಗುಣಮಟ್ಟದ 40 ಸಾವಿರಕ್ಕೂ ಹೆಚ್ಚು ಮಾಸ್ಕ್‍ಗಳನ್ನು ತಯಾರಿದಿದೆ.

    ಬಡ ಮಹಿಳೆಯರ ನಿಶ್ವಾರ್ಥ ಸೇವೆ
    ಸಂಸದರ ಅನುದಾನದಡಿ ಈ ಹಿಂದೆ ವಿತರಣೆ ಮಾಡಿದ ಯಂತ್ರಗಳು ಇಂದು ಬಹಳಷ್ಟು ಸಹಕಾರಿಯಾಗಿದ್ದು, ಮಹಿಳೆಯರು ಸ್ವಯಂ ಪ್ರೇರಣೆಯಿಂದ ಉಚಿತ ಮಾಸ್ಕ್ ತಯಾರಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಮಹಿಳೆಯರು ಮಾಸ್ಕ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಮಾಸ್ಕ್ ತಯಾರಿಸುವ ಕುಶರಿ ಕೆಲಸಕ್ಕೆ ಸಂಭಾವನೆ ನೀಡಲು ಮುಂದಾದರೂ ಅದನ್ನು ಈ ಮಹಿಳೆಯರು ನಿರಾಕರಿಸುತ್ತಿದ್ದಾರೆ.

  • ಜನರ ಬವಣೆ ತಪ್ಪಿಸಲು ಆಧಾರ್ ಸೇವಾ ಕೇಂದ್ರ ಸ್ಥಾಪನೆ

    ಜನರ ಬವಣೆ ತಪ್ಪಿಸಲು ಆಧಾರ್ ಸೇವಾ ಕೇಂದ್ರ ಸ್ಥಾಪನೆ

    ಹುಬ್ಬಳ್ಳಿ: ಆಧಾರ್ ನೊಂದಣಿ ಹಾಗೂ ತಿದ್ದುಪಡಿಗಾಗಿ ಜನರು ರಾತ್ರಿ 3 ಗಂಟೆಯಿಂದ ಪೋಸ್ಟ್ ಆಫೀಸ್, ಬ್ಯಾಂಕ್, ಹುಬ್ಬಳ್ಳಿ-ಧಾರವಾಡ ಒನ್ ಹಾಗೂ ನಾಡಕಚೇರಿಗಳ ಮುಂದೆ ಕಾಯುತ್ತಿದ್ದರು. ಇದನ್ನು ತಪ್ಪಿಸಲು ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದ ಕ್ಲಬ್ ರಸ್ತೆಯಲಿರುವ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರದ ಕಾನೂನು ಮತ್ತು ನ್ಯಾಯ, ಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ವಿಸ್ತ್ರುತವಾಗಿ ಮಾತನಾಡಿ ರಾಜ್ಯದಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಆಧಾರ್ ಸೇವಾ ಕೇಂದ್ರ ಹುಬ್ಬಳ್ಳಿಯಲ್ಲಿ ಆರಂಭವಾಗಿದೆ. ಮೈಸೂರಿನಲ್ಲಿ ಆಧಾರ್ ಸೇವಾ ಕೇಂದ್ರ ತರೆಯಲಾಗಿದ್ದು, ಸದ್ಯದಲ್ಲೇ ಧಾರವಾಡ ಎಸ್.ಪಿ. ಸರ್ಕಲ್ ನಲ್ಲಿ ಸೇವಾ ಕೇಂದ್ರ ಉದ್ಘಾಟಿಸಲಾಗುವುದು ಎಂದರು.

    ಹುಬ್ಬಳ್ಳಿಯ ಸೇವಾಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿನಿತ್ಯ 700 ಕಾರ್ಡುಗಳನ್ನು ನೊಂದಣಿ ಮಾಡಲಾಗುತ್ತಿದೆ. ಹೆಚ್ಚಿನ ಬೇಡಿಕೆ ಬಂದಾಗ ಸಾವಿರ ಕಾರ್ಡುಗಳನ್ನು ನೊಂದಣಿ ಮಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಲಾಗುವುದು. ಕೇಂದ್ರ ಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಇಲ್ಲಿಗೆ ಕರೆತಂದು ಭೇಟಿ ನೀಡಿಸಲಾಗುವುದು. ಈ ಮಾದರಿಯ ಕೇಂದ್ರಗಳನ್ನು ಅಗತ್ಯ ಇರುವ ಇತರೆಡೆಗಳಲ್ಲೂ ಸಹ ತರೆಯಲಾಗುವುದು. ಜನರು ರಾತ್ರಿ ಕಾಯುವುದು ತಪ್ಪಿದೆ. ಆನ್‍ಲೈನ್ ಮೂಲಕ ಸಹ ನೊಂದಣಿ ಹಾಗೂ ತಿದ್ದುಪಡಿಗೆ ಟೋಕನ್ ಪಡೆಯಬಹುದಾಗಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

    ಸೇವಾ ಕೇಂದ್ರದಲ್ಲಿ ವ್ಯವಸ್ಥಿತವಾಗಿ ಜನರಿಗೆ ಸೇವೆ ನೀಡಲಾಗುತ್ತಿದೆ. ಆಧಾರ್ ತಿದ್ದುಪಡಿ ನಿಯಮಗಳನ್ನು ಸರಳೀಕರಿಸಲು ಪ್ರಯತ್ನಿಸಲಾಗುವುದು. ಕೇಂದ್ರ ಸರ್ಕಾರ ಆಧಾರ್ ಕಾಯ್ದೆ ರಚಿಸುವ ಮೂಲಕ ಆಧಾರ್ ಮಾನ್ಯತೆ ನೀಡಿದೆ. ಜನಧನ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ನಂಬರ್ ಲಿಂಕ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ನೀಡಲು ಆಧಾರ್‌ಗಳನ್ನು ಲಿಂಕ್ ಮಾಡಲಾಗಿದೆ. ಇದರಿಂದ ಸರ್ಕಾರದ ಯೋಜನೆಗಳು ದುರುಪಯೋಗವಾಗುವುದು ತಪ್ಪಿದೆ. ಆಧಾರ್ ಲಿಂಕ್‍ನಿಂದಾಗಿ ಕೇಂದ್ರ ಸರ್ಕಾರಕ್ಕೆ ಒಂದು ಲಕ್ಷದ ಇಪ್ಪತ್ತೈದು ಸಾವಿರ ಕೋಟಿ ಉಳಿತಾಯವಾಗಿದೆ. ಅನರ್ಹರಿಗೆ ಸೌಲಭ್ಯಗಳು ತಲುಪುವುದು ತಪ್ಪಿದೆ. ಇದೇ ಹಣವನ್ನು ಸರ್ಕಾರ ಜನರ ಕಲ್ಯಾಣಕ್ಕಾಗಿ ವಿನಯೋಗಿಸಿದೆ. ಇತರೆ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಸೇವಾ ಕೇಂದ್ರಗಳನ್ನು ಬಲಗೊಳಿಸಲಾಗುವುದು ಎಂದು ಹೇಳಿದರು.