ಹುಬ್ಬಳ್ಳಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ಕೈವಶ ಮಾಡಿಕೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಲ್ಲಿನ ಭಾರತೀಯ ನಿವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಬದ್ಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಪಾಲಿಕೆ ಚುನಾವಣೆ ಕುರಿತು ನಗರದಲ್ಲಿ ನಡೆದ ಬಿಜೆಪಿ ನಾಯಕರ ಸಭೆಯ ನಂತರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯರ ರಕ್ಷಣೆಯ ಪ್ರಯತ್ನದಲ್ಲಿದ್ದೇವೆ. ಅಲ್ಲಿಯ ಜನರ ಜೀವನ ಕಾಪಾಡುವುದು ಅತ್ಯವಶ್ಯಕವಿದೆ. ಅಮೆರಿಕ ಸರ್ಕಾರ ಜನರ ರಕ್ಷಣೆ ಬಗ್ಗೆ ಖಾಳಜಿ ತೋರಬೇಕು ಎಂದಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗುವುದು. ವಾರ್ಡ್ ಅಧ್ಯಕ್ಷರ ಮೂಲಕ ಬರುವ ಆಕಾಂಕ್ಷಿಗಳ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಆಕಾಂಕ್ಷಿಗಳು ಇಂದು ಸಂಜೆಯೊಳಗೆ ಅರ್ಜಿಗಳನ್ನು ವಾರ್ಡ್ ಅಧ್ಯಕ್ಷರಿಗೆ ಸಲ್ಲಿಸಬೇಕು. ವಾರ್ಡ್ ಅಧ್ಯಕ್ಷರು ಆ ಅರ್ಜಿಗಳನ್ನು ಮಂಡಲ ಅಧ್ಯಕ್ಷರಿಗೆ ನೀಡಬೇಕು. ಅವರು ಅರ್ಜಿಗಳನ್ನು ಸ್ಕ್ರೀನಿಂಗ್ ಕಮಿಟಿಗೆ ನೀಡಿದ ನಂತರ ನಾಡಿದ್ದು ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು
ನವದೆಹಲಿ: ಕೋಲಾರ ಜಿಲ್ಲೆ ಕೆಜಿಎಫ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಯಲ್ಲಿ ಬಳಕೆಯಾಗದೇ ಇರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ (ಇಂಡಸ್ಟ್ರಿಯಲ್ ಟೌನ್‍ಶಿಪ್) ಪ್ರಾರಂಭಿಸಲು ಅನುಮತಿ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಬುಧವಾರ ನವದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಿರಾಣಿಯವರು, ಕೆಜಿಎಪ್ ನಲ್ಲಿ ಟೌನ್‍ಶಿಪ್ ನಿರ್ಮಾಣದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಕೆಜಿಎಫ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಗೆ ಬರುವ ಸುಮಾರು 3,212 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಡ್ರೋಣ್ ಮೂಲಕ ಸಮೀಕ್ಷೆ ನಡೆಸಿದ್ದು, ಇಲ್ಲಿ ಗಣಿಗಾರಿಕೆ ನಡೆಸಲು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಬಳಕೆಯಾಗದೆ ಉಳಿದಿರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಸಚಿವರಿಗೆ ವಸ್ತುಸ್ಥಿತಿಯನ್ನು ನಿರಾಣಿ ಅವರು ವಿವರಿಸಿದರು. ಟೌನ್‍ಶಿಪ್ ನಿರ್ಮಾಣವಾದರೆ ಈ ಭಾಗದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅನುಕೂಲವಾಗುತ್ತದೆ. ಅಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕೆಜಿಎಫ್ ನಗರವು ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿದ್ದು, ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತ್ಯುತ್ತಮ ರೈಲ್ವೆ ಸಂಪರ್ಕ ಹೊಂದಿದೆ. ಅಲ್ಲದೆ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಕೂಡ ಇಲ್ಲಿಯೇ ಹಾದು ಹೋಗುವುದರಿಂದ ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗಲಿದೆ. ಟೌನ್‍ಶಿಪ್ ನಿರ್ಮಾಣ ಮಾಡಲು ಯೋಗ್ಯವಾಗಿರುವುದರಿಂದ ನಮ್ಮ ಮನವಿಯನ್ನು ಪರಿಗಣಿಸಬೇಕೆಂದು ಕೋರಿದರು.
ಕೆಜಿಎಫ್ ಚಿನ್ನದ ಗಣಿಯು ಅತ್ಯಂತ ಪುರಾತನವಾದ ಗಣಿ ಪ್ರದೇಶವಾಗಿತ್ತು. ಬ್ರಿಟಿಷರ ಕಾಲದಿಂದಲೇ ಇಲ್ಲಿ ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. ಕಳೆದ ಹಲವಾರು ವರ್ಷಗಳಿಂದ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಭಾರತೀಯ ಪರಂಪರೆಯಲ್ಲಿ ಚಿನ್ನಕ್ಕೆ ಅಗ್ರಸ್ಥಾನ. ದೇಶದಲ್ಲಿ ಚಿನ್ನದ ಉತ್ಪಾದನೆ ಪ್ರಮಾಣ ಕಡಿಮೆಯಿರುವುದರಿಂದ ವಿದೇಶಗಳಿಂದ ಪ್ರತಿವರ್ಷ 30 ಬಿಲಿಯ ಡಾಲರ್ (ಅಂದಾಜು 2 ಲಕ್ಷ ಕೋಟಿ ರೂ.ಗೂ ಹೆಚ್ಚು) ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶೀಯವಾಗಿ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ವಾರ್ಷಿಕ 2ರಿಂದ 3 ಟನ್ ಉತ್ಪಾದಿಸಲಾಗುತ್ತಿದೆ. 19 ವರ್ಷಗಳ ಹಿಂದೆ ಮುಚ್ಚಲಾಗಿದ್ದ ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್)ಗಳಲ್ಲಿ ಮತ್ತೆ ಚಿನ್ನದ ಗಣಿಗಾರಿಕೆ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ ಎಂದು ತಿಳಿಸಿದರು.
Met Union Minister of Parliamentary Affairs, Coal & Mines Shri @JoshiPralhad Avaru in New Delhi and discussed the development of an Industrial Township at KGF in Kolar district by utilising unused vacant land at Bharat Gold Mines and other issues. pic.twitter.com/ZzUS0r7kbQ
12,500 ಎಕರೆಯಲ್ಲಿ ಚಿನ್ನ
ಬಿಜಿಎಂಎಲ್‍ಗೆ ಸೇರಿದ ಗಣಿ ಪ್ರದೇಶ ಸುಮಾರು 12,500 ಎಕರೆಗಳಿದ್ದು, ಈ ಪ್ರದೇಶದಲ್ಲಿ ಚಾಂಪಿಯನ್ ರೀಫ್, ಮಾರಿಕುಪ್ಪಂ, ಗೋಲ್ಕೊಂಡ, ಚಿಗರಿಗುಂಟೆ, ಬಿಸಾನತ್ತಂ, ಮೈಸೂರು ಮೈನ್ಸ್, ನಂದಿದುರ್ಗ್, ಹೆನ್ರೀಸ್ ಸೇರಿದಂತೆ 30ಕ್ಕೂ ಹೆಚ್ಚು ಭಾಗಗಳಲ್ಲಿ ಚಿನ್ನವನ್ನು ಹೊರ ತೆಗೆಯಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಸಚಿವರಾದ ಶ್ರೀ @JoshiPralhad ಅವರನ್ನು ನವದೆಹಲಿಯಲ್ಲಿ ಇಂದು ಭೇಟಿಯಾಗಿ ಕೋಲಾರ ಜಿಲ್ಲೆ ಕೆಜಿಫ್ ನಲ್ಲಿರುವ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಗೆ ಸೇರಿರುವ ಬಳಕೆಯಾಗದ ಜಮೀನಿನಲ್ಲಿ ಕೈಗಾರಿಕಾ ಟೌನ್ ಶಿಪ್ ಪ್ರಾರಂಭಿಸಲು ಅನುಮತಿ ನೀಡುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಕೆಜಿಎಫ್ ಚಿನ್ನದ ಗಣಿ ಪ್ರಪಂಚದಲ್ಲೇ ಅತ್ಯಂತ ಹಳೆಯದು. ಕೆಜಿಎಫ್ ಭಾಗದಲ್ಲಿ ಚೋಳರ ಕಾಲದಲ್ಲಿ ಚಿನ್ನದ ನಿಕ್ಷೇಪ ಶೋಧಿಸಿದ್ದರ ಬಗ್ಗೆ ಇತಿಹಾಸದ ದಾಖಲೆಗಳಿವೆ. ನಂತರ ಭೂಗರ್ಭ ಶಾಸಜ್ಞರ ಸಹಾಯದಿಂದ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಕಾಲದಲ್ಲಿ ಚಿನ್ನವನ್ನು ಹೊರ ತೆಗೆಯಲಾಗುತ್ತಿತ್ತು ಎಂದು ಈಸ್ಟ್ ಇಂಡಿಯಾ ಕಂಪನಿ ದಾಖಲೆಗಳಲ್ಲಿಉಲ್ಲೇಖವಿದೆ.
ಕೆಜಿಎಫ್ ಚಿನ್ನದ ಗಣಿ ಪ್ರಪಂಚದಲ್ಲೇ ಅತ್ಯಂತ ಆಳವಾದ ಗಣಿ. ಸುಮಾರು 3,200 ಮೀಟರ್ (10,500 ಅಡಿಗಳು) ಆಳದ ಗಣಿಗಳಿವೆ. ಜತೆಗೆ ಚಿನ್ನದ ಅದಿರು ಹೊರತೆಗೆಯಲು ಸುಮಾರು 1,400 ಕಿ.ಮೀ.ಗಳಷ್ಟು ಉದ್ದದ ಸುರಂಗ ಕೊರೆಯಲಾಗಿದೆ. ಕಾರ್ಮಿಕರು ಗಣಿಯ ಆಳಕ್ಕೆ ಇಳಿಯಲು 30ಕ್ಕೂ ಹೆಚ್ಚು ಶಾಪ್ಟ್ ಗಳನ್ನು ನಿರ್ಮಿಸಲಾಗಿತ್ತು. ಕಂಪನಿ ಉತ್ತುಂಗದಲ್ಲಿದ್ದಾಗ ಸುಮಾರು 35 ಸಾವಿರ ಕಾರ್ಮಿಕರು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಈ ಗಣಿಯಲ್ಲಿ ಒಂದು ಟನ್ ನಿಕ್ಷೇಪದಿಂದ ಸುಮಾರು 3.07 ಗ್ರಾಂ.ನಿಂದ 4.09 ಗ್ರಾಂ.ಗಳಷ್ಟು ಚಿನ್ನ ಲಭಿಸುತ್ತಿತ್ತು. ಹಾಗಾಗಿ ಗಣಿಯನ್ನು ಮುಚ್ಚುವವರೆಗೆ ಬಿಜಿಎಂಎಲ್‍ನ ಅಧಿಕೃತ ದಾಖಲೆಗಳ ಮಾಹಿತಿ ಪ್ರಕಾರ ಒಟ್ಟು 800 ಟನ್ ಚಿನ್ನವನ್ನು ಉತ್ಪಾದಿಸಲಾಗಿದೆ. ಇದಕ್ಕೂ ಮೊದಲು, ಚೋಳರ ಕಾಲದಲ್ಲಿ ಮತ್ತು ಹೈದರಾಲಿ ಹಾಗೂ ಟಿಪ್ಪುಸುಲ್ತಾನರ ಕಾಲದಲ್ಲಿ ಸುಮಾರು 6,200 ಕೆ.ಜಿ.ಗಳಷ್ಟು ಚಿನ್ನವನ್ನು ಉತ್ಪಾದಿಸಲಾಗಿತ್ತು ಎಂಬುದನ್ನು ದಾಖಲೆಗಳ ಸಮೇತ ವಿವರಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ಅಮಾನತು ಮಾಡಿ, ಅವರ ವಿರುದ್ಧ ತನಿಖೆ ನಡೆಸಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಸೂಕ್ತ ಭರವಸೆ
ಸಚಿವ ನಿರಾಣಿಯವರ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರು ಸದ್ಯದಲ್ಲಿಯೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವಸ್ತುಸ್ಥಿತಿ ಅಧ್ಯಯನ ನಡೆಸುವಂತೆ ಸೂಚನೆ ನೀಡಲಾಗುವುದು. ಕೆಜಿಎಫ್ ನಲ್ಲಿ ಕೈಗಾರಿಕಾ ಟೌನ್‍ಶಿಪ್ ಸ್ಥಾಪನೆ ಮಾಡಲು ಕೇಂದ್ರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟರು. ಇದನ್ನೂ ಓದಿ:ಈಶ್ವರಪ್ಪ ವರ್ತನೆಯಿಂದ ಬಿಜೆಪಿಗಂತೂ ಒಳ್ಳೆಯದಾಗಲ್ಲ: ಬೇಳೂರು ಗೋಪಾಲಕೃಷ್ಣ
ಹುಬ್ಬಳ್ಳಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 23.23 ಕೋಟಿ ರೈತರ ಖಾತೆಗೆ ಜಮೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 9.50 ಕೋಟಿಗೂ ಹೆಚ್ಚಿನ ಫಲಾನುಭವಿ ಕೃಷಿ ಕುಟುಂಬಗಳಿಗೆ 19000 ಕೋಟಿಗೂ ಹೆಚ್ಚಿನ ಹಣವನ್ನು ವರ್ಗಾಯಿಸಲಾಗಿದೆ. ಅದರಲ್ಲಿ ಜಿಲ್ಲೆಯಲ್ಲಿ 1.16 ಲಕ್ಷ ರೈತ ಕುಟುಂಬಗಳಿಗೆ 23.23 ಕೋಟಿ ಆರ್ಥಿಕ ಸಹಾಯಧನ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದರು. ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ವಾರ್ಷಿಕ 6000 ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಈ ಯೋಜನೆಯ ಅನುದಾನವನ್ನು 2000ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ.
ಈ ವರೆಗೆ ಧಾರವಾಡ ಲೋಕಸಭಾ ಕ್ಷೇತ್ರದ 1.58 ಲಕ್ಷ ರೈತ ಕುಟುಂಬಗಳು ಕನಿಷ್ಠ ಒಂದು ಕಂತು ಪಡೆಯುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದರು. ಮಾರ್ಚ್ 2019ರಿಂದ ಮಾರ್ಚ್ 2021ರ ವರೆಗೆ 1.58 ಲಕ್ಷ ಕುಟುಂಬಗಳು ಒಟ್ಟು 237.3 ಕೋಟಿ ಆರ್ಥಿಕ ಸಹಾಯಧನ ಪಡೆದಿವೆ. 2021-22ನೇ ಸಾಲಿಗೆ 1.16 ಲಕ್ಷ ರೈತರಿಗೆ ಪ್ರಸಕ್ತ ವರ್ಷದ ಮೊದಲ ಕಂತಿಗೆ 23.23 ಕೋಟಿ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದು ತಿಳಿಸಿದ್ದಾರೆ.
ನವದೆಹಲಿ: ನಾಳೆ ಸಂಜೆಯೊಳಗೆ ಸಚಿವ ಸಂಪುಟ ಸೇರುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಸಂಪುಟ ರಚನೆ ಕುರಿತು ಚರ್ಚೆ ಮಾಡಿದ್ದೇವೆ. ಎಷ್ಟು ಜನ ಮಂತ್ರಿಗಳಾಗಬೇಕು? ಎಷ್ಟು ಜನರು ಸಂಪುಟದಲ್ಲಿರಬೇಕು ಎಂಬುದನ್ನು ಹೈಕಮಾಂಡ್ ತಿಳಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ನಾವು ಬೇರೆ ಬೇರೆ ವಿಂಗಡನೆ ಮಾಡಿರುವ ಎರಡ್ಮೂರು ಪಟ್ಟಿಗಳನ್ನು ಕೊಟ್ಟಿದ್ದೇನೆ. ನಮ್ಮ ಪಕ್ಷದಲ್ಲಿ ಯಾರೂ ವಲಸಿಗರಲ್ಲ, ಎಲ್ಲರೂ ಬಿಜೆಪಿಯವರೇ. ನಾವು ಹೇಳಿದ್ದನ್ನು ಕೇಳಿಸಿಕೊಂಡು ನಾಳೆ ಹೈಕಮಾಂಡ್‍ನಿಂದ ಪಟ್ಟಿ ಬಿಡುಗಡೆ ಮಾಡುತ್ತಾರೆ. ಡಿಸಿಎಂ ಹುದ್ದೆ ಸೃಷ್ಟಿ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮೊಬ್ಲಾಕ್‍ಮೇಲ್, ಶಾಸಕರೊಂದಿಗೆ ಟೀ ಪಾರ್ಟಿ ಮಾಡಿದವರೆಲ್ಲಾ ಮಂತ್ರಿ ಆಗ್ತಾರೆ: ಗೂಳಿಹಟ್ಟಿ ಶೇಖರ್
ಪ್ರಾದೇಶಿಕತೆ, ಸಮುದಾಯ ಸೇರಿದಂತೆ ಎಲ್ಲವನ್ನೂ ಪರಿಗಣಿಸಿ ಸಂಪುಟ ಪಟ್ಟಿ ಬಿಡುಗಡೆ ಮಾಡುತ್ತಾರೆ. ನಾಳೆ ರಾತ್ರಿಯೊಳಗೆ ಸಂಪುಟ ಸೇರುವವರ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಡುಗಡೆ ಮಾಡಲಿದ್ದು, ನಾಳೆ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಪ್ರಮಾಣ ವಚನದ ಕುರಿತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದರು.
ಬೆಂಗಳೂರಿನಲ್ಲಿ ಪೊಲೀಸರ ಮೇಲೆ ವಿದೇಶಿ ಪ್ರಜೆಗಳು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾವು ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿದ್ದೇವೆ. ವಿದೇಶಿ ಪ್ರಜೆಗಳು ಮೊದಲು ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ಅವರಿಗೆ ಸರಿಯಾದ ಕ್ರಮ ಕೈಗೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಸಚಿವ ಸಂಪುಟ ರಚನೆ ಸಂಬಂಧ ಮಹತ್ವದ ಚರ್ಚೆಯಲ್ಲಿ ಸಿಎಂ ಬೊಮ್ಮಾಯಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು.
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದು, ಇದೀಗ ಬಿಎಸ್‍ವೈ ಉತ್ತರಾಧಿಕಾರಿ ಯಾರಾಗಬಹುದು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಬೇರೆ ರಾಜ್ಯಗಳಲ್ಲಿ ಮಾಡಿದಂತೆ ಇಲ್ಲಿಯೂ ಜಾತಿ ಚೌಕಟ್ಟು ಮೀರುತ್ತಾ..? ಅಥವಾ ಪ್ರಯೋಗ ಮಾಡಿದ್ರೆ ಕೈಸುಟ್ಟುಕೊಳ್ಳಬಹುದು ಎಂಬ ಭೀತಿಯಲ್ಲಿ ಲಿಂಗಾಯತ ಸಮುದಾಯದ ನಾಯಕರೊಬ್ಬರಿಗೆ ಹೈಕಮಾಂಡ್ ಮಣೆ ಹಾಕುತ್ತಾ ಎಂಬ ಪ್ರಶ್ನೆ ಎದ್ದಿದೆ. ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಪ್ರಹ್ಲಾದ್ ಜೋಶಿ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಮಹತ್ವದ ಸಭೆ ನಡೆಸಿದ್ರು.
ಸಿಎಂ ರೇಸ್‍ನಲ್ಲಿ ಯಾರಿದ್ದಾರೆ..?
ಅರವಿಂದ್ ಬೆಲ್ಲದ್ ಅವರ ಹೆಸರು ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದೆ. ಯಾಕಂದರೆ ಹೊಸ ಹಾಗೂ ಯುವ ಮುಖ, ಕ್ಲೀನ್ ಹ್ಯಾಂಡ್ ಆಗಿದ್ದಾರೆ. ಮೋದಿ ಪಾಲಿನ ನೀಲಿಗಣ್ಣಿನ ಯುವಕ ಬೆಲ್ಲದ್, ಧಾರವಾಡ ಪಶ್ಚಿಮ ಶಾಸಕನ ಪರ ಆರ್‍ಎಸ್‍ಎಸ್ ಒಲವು ಹೊಂದಿದೆ. ಅಲ್ಲದೆ ಇವರು ಪ್ರಬಲ ಪಂಚಮಸಾಲಿ ಸಮುದಾಯದವರಾಗಿದ್ದಾರೆ. ಮುರುಗೇಶ್ ನಿರಾಣಿ ಕೂಡ ಸಿಎಂ ರೇಸ್ ನಲ್ಲಿ ಕೇಳಿ ಬಂದಿದ್ದು, ಸಚಿವ ಹಾಗೂ ಬೀಳಗಿ ಶಾಸಕರಾಗಿದ್ದು, ಆಡಳಿತದ ಅನುಭವ ಹೊಂದಿದ್ದಾರೆ. ಹೈಕಮಾಂಡ್ ನಂಟು, ಅಮಿತ್ ಶಾ ಬೆಂಬಲವಿದ್ದು, ಪ್ರಬಲ ಪಂಚಮಸಾಲಿ ಸಮುದಾಯದವರಾಗಿದ್ದಾರೆ. ಇದನ್ನೂ ಓದಿ:ಕಣ್ಣೀರ ಹಿಂದಿನ ನೋವೇನು..?, ಆ ನೋವು ಕೊಟ್ಟವರಾರೆಂಬುದನ್ನು ಬಿಎಸ್‍ವೈ ಬಹಿರಂಗಪಡಿಸಲಿ: ಡಿಕೆಶಿ
ಇನ್ನು ಪ್ರಹ್ಲಾದ್ ಜೋಶಿ ಅವರ ಹೆಸರು ಕೂಡ ಸಿಎಂ ರೇಸ್ ನಲ್ಲಿ ಕೇಳಿಬಂದಿದೆ. ಕೇಂದ್ರ ಮಂತ್ರಿ, ಧಾರವಾಡ ಸಂಸದ ಹಾಗೂ ಅನುಭವಿ ರಾಜಕಾರಣಿಯಾಗಿದ್ದು, ಸಂಘದ ಕಟ್ಟಾಳು, ಪಕ್ಷ ನಿಷ್ಠ ಹಾಗೆಯೇ ಮೋದಿ ಆಪ್ತ ಕೂಡ ಹೌದು. ಕ್ಲೀನ್ ಇಮೇಜ್ ಇರುವ ಜೋಶಿ ಅವರು ಚಾಣಾಕ್ಷ ಆಡಳಿತಗಾರರು ಕೂಡ ಆಗಿದ್ದಾರೆ. ಗುಂಪುಗಾರಿಕೆ ಇಲ್ಲ, ಸಂಘಟನಾ ಚತುರರಾಗಿದ್ದಾರೆ. ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡುವ ಮೋದಿ, ಶಾ ಅಚ್ಚರಿಯ ಮುಖವನ್ನು ಸಿಎಂ ಗಾದಿಗೆ ಏರಿಸುವ ಸಾಧ್ಯತೆಗಳು ಕೂಡ ದಟ್ಟವಾಗಿವೆ. ಇದನ್ನೂ ಓದಿ: ಯಡಿಯೂರಪ್ಪಾಜಿ ಜೊತೆಯ ನನ್ನ ಪಯಣದ ಅತ್ಯಂತ ಬೇಸರದ ದಿನ: ರೇಣುಕಾಚಾರ್ಯ
ಒಟ್ಟಿನಲ್ಲಿ ಕಳೆದ ಹಲವು ದಿನಗಳಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳು ಎದ್ದಿತ್ತು. ಇಂದು ಈ ಊಹಾಪೋಹಗಳಿಗೆ ಇಂದು ತೆರೆಬಿದ್ದಿದ್ದು, ತಮ್ಮ ಎರಡು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಹಾಭಾಷಣ ಮಾಡಿ, ತಾವು ರಾಜೀನಾಮೆ ನೀಡುತ್ತಿರುವುದಾಗಿ ಗದ್ಗದಿತರಾಗಿಯೇ ಘೋಷಣೆ ಮಾಡಿದರು. ಅದರಂತೆ ಮಧ್ಯಾಹ್ನ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ನಾನು ರಾಜೀನಾಮೆ ಸಲ್ಲಿಸುತ್ತೇನೆ: ಸಿಎಂ ಯಡಿಯೂರಪ್ಪ
ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಎರಡು ವರ್ಷ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕೇಂದ್ರದ ನಾಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ನಡ್ಡಾ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದಿನ ಸಿಎಂಗೆ ಯಾರ ಹೆಸರನ್ನು ಸೂಚಿಸಿಲ್ಲ ಮತ್ತು ಸೂಚಿಸಲ್ಲ ಎಂದು ಸ್ಪಷ್ಟಪಡಿಸಿದರು. ಇದೀಗ ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಎಂಬ ಕುತೂಹಲ ಹುಟ್ಟಿದೆ.
ಬೆಂಗಳೂರು: ಹೈಕಮಾಂಡ್ ಸಂದೇಶಕ್ಕೂ ಮುನ್ನವೇ ರಾಜ್ಯ ರಾಜಕೀಯದಲ್ಲಿ ಡಿಢೀರ್ ಬೆಳವಣಿಗೆ ನಡೆದಿದ್ದು, ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ಹಾರಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಿರಾಣಿ ದೆಹಲಿ ತಲುಪಲಿದ್ದಾರೆ. ಈ ಮೂಲಕ ಬಿ.ಎಸ್ ಯಡಿಯೂರಪ್ಪ ನಿರ್ಗಮನದ ಬೆನ್ನಲ್ಲೇ ದೆಹಲಿ ಭೇಟಿ ತೀವ್ರ ಕುತೂಹಲ ಹುಟ್ಟಿಸಿದೆ. ಅಲ್ಲದೆ ಇನ್ನೊಂದೆಡೆ ಹೈಕಮಾಂಡ್ ಬುಲಾವ್ ಕೊಟ್ಟಿದೆಯಾ? ಅಥವಾ ಸ್ವಯಂ ದೆಹಲಿಗೆ ಹೊರಟ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇತ್ತ ಇಂದು ದೆಹಲಿಗೆ ಬಂದರೂ ರಾಷ್ಟ್ರೀಯ ನಾಯಕರ ಭೇಟಿ ಅನುಮಾನವಿದೆ. ಯಾಕಂದರೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಗೋವಾದಲ್ಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‍ಎಸ್‍ಎಸ್ ನಾಯಕರ ಭೇಟಿ ಮಾಡುತ್ತಾರಾ..? ಅಥವಾ ತಡರಾತ್ರಿ ಹೈಕಮಾಂಡ್ ನಾಯಕರ ಭೇಟಿ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಸಚಿವರ ಏಕಾಏಕಿ ದೆಹಲಿ ಭೇಟಿ ತೀವ್ರ ಕುತೂಹ ಹುಟ್ಟಿಸಿದ್ದು, ಕಡೆ ಕ್ಷಣದ ಲಾಬಿಗಿಳಿದ್ರಾ ಅನ್ನೋ ಅನುಮಾನ ಕೂಡ ಎದ್ದಿದೆ. ಇದನ್ನೂ ಓದಿ: ಅಧಿಕಾರ ಸ್ವೀಕರಿಸಿದ ಬಳಿಕ ಹಲವು ಸವಾಲುಗಳನ್ನು ಎದುರಿಸಿದ್ದೇನೆ: ಬಿಎಸ್‍ವೈ ಅಳಲು
ಈ ಹಿಂದೆ ಸಿಎಂ ರೇಸ್ ನಲ್ಲಿ ಮುರುಗೇಶ್ ನಿರಾಣಿ ಹೆಸರು ಕೇಳಿ ಬಂದಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ಸಚಿವರು, ನಾನು ಸಿಎಂ ರೇಸ್ ನಲ್ಲಿ ಇಲ್ಲ. ನಾನು ಸಿಎಂ ಆಕಾಂಕ್ಷಿ ಅಲ್ಲ. ಮಾಧ್ಯಮದವರೇ ನನ್ನ ಹೆಸರನ್ನ ಹೇಳುತ್ತಿರುವುದು. ನಾನು ಪಕ್ಷದ ಶಿಸ್ತಿನ ಸಿಪಾಯಿ ಹೈಕಮಾಂಡ್ ನನಗೆ ಕೊಟ್ಟ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೇನೆ. ಅಲ್ಲದೆ ಯಡಿಯೂರಪ್ಪನವರೆ ಮುಂದಿನ ಎರಡು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದರು.
ಹುಬ್ಬಳ್ಳಿ: ಸಿಎಂ ಬಿ.ಎಸ್ ಯಡಿಯೂರಪ್ಪ ಹೈಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿರುವ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ದಿಢೀರ್ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯ ಮಯೂರಿ ಎಸ್ಟೇಟ್ ನಲ್ಲಿರುವ ಪ್ರಹ್ಲಾದ್ ಜೋಶಿ ಮನೆಗೆ ದಿಢೀರ್ ಭೇಟಿ ನೀಡಿರುವ ಬಸವರಾಜ ಬೊಮ್ಮಾಯಿ, ಒಂದು ಗಂಟೆಗೂ ಹೆಚ್ಚು ರಹಸ್ಯ ಮಾತುಕತೆ ನಡೆಸಿರುವುದು ಕುತೊಹಲಕ್ಕೆ ಕಾರಣವಾಗಿದೆ. ಇಂದು ಮುಂಜಾನೆಯಷ್ಟೆ ನಾನು ಸಿಎಂ ಬದಲಾವಣೆ ಬಗ್ಗೆ ಎನೂ ಮಾತನಾಡಲಾರೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಹೇಳಿಕೆ ನೀಡಿದ್ದ ಜೋಶಿ ಜೊತೆ ಬೊಮ್ಮಾಯಿ ರಹಸ್ಯ ಮಾತುಕತೆ ಮಾಡಿರವುದು ರಾಜ್ಯ ರಾಜಕಾರಣದಲ್ಲಿ ಹಲವು ಬಗೆಯ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಜಲ ಪ್ರಳಯದ ಮಧ್ಯೆ ರಾಜಕೀಯ ಪ್ರಹಸನ – ಬಿಎಸ್‍ವೈಗೆ ನಾಳೆ ಬರುತ್ತಾ ಹೈಕಮಾಂಡ್ ಸಂದೇಶ?
ಸುಮಾರು ಒಂದು ಗಂಟೆಗೆ ಹೆಚ್ಚು ಕಾಲ ನಾಯಕರಿಬ್ಬರು ಚರ್ಚೆ ನಡೆಸಿದ್ದು, ನಾಳೆ ಕೇಂದ್ರ ನಾಯಕರಿಂದ ಸಿಎಂ ಬಿಎಸ್‍ವೈಗೆ ಏನೂ ಸಂದೇಶ ಬರಲಿದೆ ಅನ್ನೋದು ಸಹ ಕುತೂಹಲ ಮೂಡಿಸಿದೆ.
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ , ತುಂಬಾ ದಿನಗಳ ನಂತರ ಜೋಶಿಯವರನ್ನು ಭೇಟಿಯಾಗುತ್ತಿದ್ದೇನೆ. ಕೋವಿಡ್ ಕಾರಣಕ್ಕೆ ಮೂರುನಾಲ್ಕು ತಿಂಗಳಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಜೋಶಿಯವರು ಕರೆ ಮಾಡಿ, ಭೇಟಿಯಾಗುವಂತೆ ಸೂಚಿಸಿದ್ದರು. ನನ್ನ ಶಿಗ್ಗಾಂವಿ ಕ್ಷೇತ್ರ ಜೋಶಿಯವರ ಸಂಸತ್ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಮಳೆಯಿಂದ ಹಾನಿ ಹೆಚ್ಚಾಗಿದೆ. ಮಳೆಹಾನಿ ಬಗ್ಗೆ ಚರ್ಚಿಸಲು ಜೋಶಿಯವರನ್ನು ಭೇಟಿ ಮಾಡಿದ್ದೆ. ನಮ್ಮ ಭೇಟಿ ಅತ್ಯಂತ ಸಹಜವಾದದ್ದು. ನಾಯಕತ್ವದ ಬದಲಾವಣೆ ಚರ್ಚೆ ಜೋಶಿ ಮತ್ತು ನನ್ನ ನಡುವೆ ಅಪ್ರಸ್ತುತ. ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.
ಧಾರವಾಡ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆಯ ಬಳಿಕ ಸಿಎಂ ರೇಸ್ ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಎಲ್ಲ ಸುದ್ದಿಯ ಗದ್ದಲದ ಮಧ್ಯೆ ರಸ್ತೆ ಬದಿ ನಿಂತು ಪ್ರಹ್ಲಾದ್ ಜೋಶಿ ಸೀಬೆ ಹಣ್ಣು ಸವಿದಿದ್ದಾರೆ. ಜೊತೆಗೆ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಧಾರವಾಡ ಪೇಡದಷ್ಟೇ ನವಲೂರ ಪೇರಳೆ ಹಣ್ಣು ಬಹಳ ಫೇಮಸ್. ಧಾರವಾಡ ಕಾರ್ಯಕ್ರಮಕ್ಕೆ ಹೋಗಬೇಕಾದ್ರೇ ಸಾವಯವ ಕೃಷಿ ರೈತ ಮಹಿಳೆ ರೇಣುಕಾ ರಾವಳ ಅವರು ಬೆಳದಿದ್ದ ಹಣ್ಣು ತಗೊಂಡು ಸವಿದೆ. ಧಾರವಾಡಕ್ಕೆ ಬಂದರೆ ಪೇರಳೆ ಹಣ್ಣು ತಿನ್ನೋಕೆ ಮರೆಯಬೇಡಿ ಅಂತಾ ಜೋಶಿ ಖುಷಿ ಹಂಚಿಕೊಂಡಿದ್ದಾರೆ.
ನಮ್ಮ ನವಲೂರ ಪ್ಯಾರಲ್ ಹಣ್ಣು…..ಧಾರವಾಡ ಫೇಡೆದ ಅಷ್ಟ ಫೇಮಸ್ ಇರೋದ………. ಇವತ್ತ ಧಾರವಾಡಕ್ಕ ಕಾರ್ಯಕ್ರಮಕ್ಕ ಹೋಗಬೇಕಾರ ಸಾವಯವ ಕೃಷಿ ಒಳಗ ಬೆಳದ ರೈತ ಮಹಿಳೆ ರೇಣುಕಾ ರಾವಳ ಅವರು ಬೆಳದದ್ದ ಪ್ಯಾರಲ ಹಣ್ಣತೊಗೊಂಡ ಸವಿದಿದ್ದು. ಧಾರವಾಡಕ್ಕ ಹೋಗಬೇಕಾರ ಒಮ್ಮೆ ನವಲೂರ ಪ್ಯಾರಲ ಹಣ್ಣ ಮರೆಯೊಹಂಗಿಲ್ಲಾ….ನೀವು ಮರಿಬ್ಯಾಡ್ರಿ. pic.twitter.com/XCaopuIeKX
ಇನ್ನೂ ಧಾರವಾಡದಲ್ಲಿ ಮಾತನಾಡಿದ ಅವರು, ಕೇಂದ್ರದ ನಾಯಕರು ಹಾಗೂ ಯಡಿಯೂರಪ್ಪನವರ ಮಾತುಕತೆಯಾಗಿದೆ ಅಂತಾ ಹೇಳಿದ್ದಾರೆ. ಅದು ಯಾವುದು ನನಗೆ ಗೊತ್ತಿಲ್ಲ. ಸಿಎಂ ಸ್ಥಾನಕ್ಕೆ ನನ್ನ ಹೆಸರು ಹಾಗೂ ಇನ್ನೊಬ್ಬರ ಹೆಸರು ಕೇಳಿ ಬಂದಿದ್ದು ಕೇವಲ ಮಾಧ್ಯಮದಲ್ಲಿ ಮಾತ್ರ. ನನ್ನ ಜೊತೆ ಯಾರೂ ಚರ್ಚೆ ಮಾಡಿಲ್ಲ. ಆ ಚರ್ಚೆಯಲ್ಲಿ ನಾನಿಲ್ಲ. ವಾರಣಾಸಿಗೆ ಯಾರು? ಯಾಕೆ? ಹೋಗಿದ್ದಾರೆ ಎಂದು ಅವರನ್ನೇ ಕೇಳಿ ಎಂದರು. ಇದನ್ನೂ ಓದಿ:ನಿಗರ್ಮನದ ಸಮಯದಲ್ಲೇ ಬಿಎಸ್‍ವೈ ಫುಲ್ ಆಕ್ಟೀವ್ – ದೆಹಲಿಯಲ್ಲಿ ಬೆಲ್ಲದ್ ಲಾಬಿ ಮುಂದುವರಿಕೆ
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬದಲಾವಣೆಯ ಸುದ್ದಿ ಇದೀಗ ಅಧಿಕೃತವಾಗಿದ್ದು, ಜುಲೈ 26ರಂದು ರಾಜ್ಯಪಾಲರನ್ನು ಸಿಎಂ ಯಡಿಯೂರಪ್ಪ ಭೇಟಿ ಆಗಲಿದ್ದು, ಅಂದೇ ಬಿ.ಎಸ್ ಯಡಿಯೂರಪ್ಪ ಅವರು ತಾಂತ್ರಿಕವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆನ್ನಲ್ಲೇ ಇದೀಗ ಸಿಎಂ ರೇಸ್‍ನ ಅಂತಿಮ ಸ್ಪರ್ಧೆಯಲ್ಲಿ ಇಬ್ಬರು ನಾಯಕರ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಕಮಲ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಆಡಿಯೋದಲ್ಲಿ ಈಗಾಗಲೇ ಮೂವರ ಹೆಸರು ಅಂತಿಮ ರೇಸ್ ನಲ್ಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇದೀಗ ಸಿಎಂ ರೇಸ್‍ನ ಅಂತಿಮ ಸ್ಪರ್ಧೆಯಲ್ಲಿ ವಿಶ್ವೇಶ್ವರ ಕಾಗೇರಿ ಹಾಗೂ ಕೇಂದ್ರ ಮಂತ್ರಿ, ಹುಬ್ಬಳ್ಳಿ-ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರ ಹೆಸರು ಕೇಳಿ ಬಂದಿದೆ. ಇದನ್ನೂ ಓದಿ: Exclusive: ಜುಲೈ 26ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ – ರಾಜಾಹುಲಿಗೆ ಹೈಕಮಾಂಡ್ ಸೂಚನೆ!
ಆಡಿಯೋದಲ್ಲಿ ಏನಿದೆ?:
ಯಾರಿಗೂ ಹೇಳಬೇಡ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರ ಟೀಮ್‍ನ್ನು ತೆಗೆಯುತ್ತೇವೆ. ಹೊಸ ತಂಡವನ್ನು ಕಟ್ಟುತ್ತೇವೆ. ಈಗ ಸದ್ಯಕ್ಕೆ ಯಾರಿಗೂ ಹೇಳಬೇಡ. ದೆಹಲಿಯಿಂದನೇ ಮಾಡುತ್ತಾರೆ. ಏನೂ ಸಮಸ್ಯೆ ಇಲ್ಲ, ಭಯಪಡಬೇಡ, ನಾವಿದ್ದೇವೆ. ಯಾರೇ ಆದ್ರೂ ಎಲ್ಲ ನಮ್ಮ ಕೈಯಲ್ಲೇ ಇರುತ್ತೆ. ಮೂರು ಹೆಸರು ಇದೆ, ಇದರಲ್ಲಿ ಯಾರಾದರೂ ಆಗುವ ಛಾನ್ಸ್ ಇದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ ಎನ್ನಲಾದ ಆಡಿಯೋ ಇದೀಗ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಮುಂದಿನ ಸಿಎಂ ಸ್ಥಾನಕ್ಕೆ ಹೆಸರುಗಳು ಪಟ್ಟಿ ರೆಡಿಯಾಗಿದೆಯಾ? ಆಡಿಯೋದಲ್ಲಿ ಹೇಳಿದ ಮೂವರು ಯಾರು?
ಧಾರವಾಡ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ, ಪ್ರಧಾನಿ ತೀರ್ಮಾನಿಸಿದಾಗ ವಿಸ್ತರಣೆಯಾಗುತ್ತದೆ. ರಾಜ್ಯ ಸರ್ಕಾರದ ಶ್ವಾಸಕೋಶ ಸರಿಯಾಗಿದೆ. ಸಹಜವಾಗಿ ಉಸಿರಾಡುತ್ತಿದೆ. ತುಂಬಾನೆ ಗಟ್ಟಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟ ಪ್ರಧಾನಿ ತೀರ್ಮಾನದ ಮೇಲೆ ವಿಸ್ತರಣೆ, ಪುನರ್ ರಚನೆ ಆಗುತ್ತದೆ. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಅದರ ಬಗ್ಗೆ ಮೊದಲೇ ನಮ್ಮ ಸರ್ಕಾರದಲ್ಲಿ ಗೊತ್ತಾಗುವುದಿಲ್ಲ. ಹೀಗಾಗಿ ನಾನು ಉತ್ತರಿಸಲು ಅರ್ಹನಲ್ಲ ಎಂದರು.
ರಾಜ್ಯ ಸರ್ಕಾರಕ್ಕೆ ಉಸಿರಾಟದ ಸಮಸ್ಯೆ ಇದೆಯಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜೋಶಿ, ಸರ್ಕಾರದ ಶ್ವಾಸಕೋಶ ಈಗ ಸರಿಯಾಗಿವೆ, ಸಹಜವಾಗಿ ಉಸಿರಾಡುತ್ತಿದೆ, ಶ್ವಾಸಕೋಶಗಳು ತುಂಬಾನೇ ಗಟ್ಟಿಯಾಗಿವೆ ಹಾಗಾಗಿ ಸರಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ಪಕ್ಷದಲ್ಲಿ ಯಾವುದೇ ಕಚ್ಚಾಟ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಾ.ಸುಧಾಕರ್
ಸುತ್ತೂರು ಮಠಕ್ಕೆ ರಾಜಕಾರಣಿಗಳ ಭೇಟಿ ವಿಚಾರವಾಗಿ ಮಾತನಾಡಿ, ಶ್ರೀಗಳ ಮಾತೋಶ್ರೀ ನಿಧನರಾಗಿದ್ದರು. ಅವರನ್ನು ಭೇಟಿಯಾಗಲು ಕೆಲವರು ಹೋಗುತ್ತಿದ್ದಾರೆ, ಎಲ್ಲವನ್ನೂ ರಾಜಕೀಯ ಅಂದರೆ ಹೇಗೆ, ಅದಕ್ಕೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎನ್ನುವ ಸಿ.ಪಿ ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯೋಗೇಶ್ವರ್ ಯಾವ ವಿ.ವಿಯಲ್ಲಿ ಪರೀಕ್ಷೆ ಬರೆದಿದ್ದಾರೋ ಅಲ್ಲೇ ಫಲಿತಾಂಶ ಬರುತ್ತೆ. ಅವರು ಪರೀಕ್ಷೆ ಬರೆದ ವಿವಿಯ ಕುಲಪತಿ ಅರುಣ್ ಸಿಂಗ್ ಅವರು ಈಗಾಗಲೇ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.