Tag: ಪ್ರಹ್ಲಾದ್ ಜೋಶಿ

  • ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು, ಡಿಕೆಶಿ, ಸಿದ್ದರಾಮಯ್ಯ ಅವರಂತೆ ಯಾಕೆ ಆಡ್ತೀರಾ?: ಜೋಶಿ

    ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು, ಡಿಕೆಶಿ, ಸಿದ್ದರಾಮಯ್ಯ ಅವರಂತೆ ಯಾಕೆ ಆಡ್ತೀರಾ?: ಜೋಶಿ

    ಧಾರವಾಡ: ಕಾಂಗ್ರೆಸ್ ಪಕ್ಷಕ್ಕೆ ಜನ ಹಿತ ಏನು ಹಾಗೂ ಜನ ಎಲ್ಲಿ ಹೋಗಿ ವೋಟು ಹಾಕಿದ್ರು ಅಂತಾ ಗೊತ್ತಿಲ್ಲ. ದೇಶದಲ್ಲಿ 29 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಅದರಲ್ಲಿ ಎನ್‍ಡಿಎ ಮೈತ್ರಿ ಕೂಟ 12 ಸ್ಥಾನಗಳನ್ನು ಗೆದ್ದಿದೆ. ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು, ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೂಡ ರಾಹುಲ್ ರೀತಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.


    ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನ ಎರಡು ಕಡೆ ಗೆದ್ದಿದ್ದು ಬಿಟ್ಟರೆ ಸಮಗ್ರ ಪಾಲು ಇಲ್ಲ. ನಾವು ತೆಲಂಗಾಣ, ಕರ್ನಾಟಕ, ಉತ್ತರ ಈಶಾನ್ಯದಲ್ಲಿ ಗೆದ್ದಿದ್ದೇವೆ. ಮಧ್ಯಪ್ರದೇಶ ಹಾಗೂ ಹಿಂದಿನ ಚುನಾವಣೆಯಲ್ಲಿ ಯುಪಿಯಲ್ಲಿ ಕೂಡಾ ಗೆದ್ದಿದ್ದೇವೆ. ಆಗಲೂ ಸಹಿತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಲ್ಲಿತ್ತು. ತೈಲ ಬೆಲೆ ಕಂಟ್ರೋಲ್ ಆಗಿರುವಂತದ್ದು ಕಾಂಗ್ರೆಸ್ ಸಮಯದಲ್ಲಿ, ಇವತ್ತಿನ ಅಂತರಾಷ್ಟ್ರೀಯ ಬೆಲೆ ಪ್ರಕಾರ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು ನಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒತ್ತಡ ಹಾಕುತಿದ್ದೇವೆ ಎಂದರು. ಇದನ್ನೂ ಓದಿ: ಉಪಚುನಾವಣೆ ಗೆದ್ದರೆ ನಾವು ಭಾರೀ ಬೀಗಬಾರದು, ಸೋತರೆ ಧೃತಿಗೆಡಬಾರದು: ಜೋಶಿ

    ತೆರಿಗೆ ಕಡಿಮೆ ಮಾಡಿ ನಾವು ಪೆಟ್ರೋಲ್ ಹಾಗೂ ಡೀಸೆಲ್ ಕೊಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ಒಂದು ಪೈಸೆ ದರ ಕಡಿಮೆಯಾಗಿಲ್ಲ. ಡಿಕೆಶಿ ಹಾಗೂ ರಾಹುಲ್ ಗಾಂಧಿ ಅವರನ್ನು ನಾನು ಪ್ರಶ್ನೆ ಮಾಡುತ್ತೇನೆ. ಚುನಾವಣೆ ಫಲಿತಾಂಶ ಅವರ ಪರ ಬಂದಿದೆ ಎಂದರೆ ಅವರು ದರ ಕಡಿಮೆ ಮಾಡುವುದಿಲ್ಲವೇ? ಡಿಕೆಶಿ ಹಲವು ಖಾತೆ ನಿರ್ವಹಣೆ ಮಾಡಿವರು. ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು. ಆದರೆ ಡಿಕೆಶಿ ಹಾಗೂ ಸಿದ್ದರಾಮಯ್ಯ ರಾಹುಲ್ ರೀತಿ ಯಾಕೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಕಿಡಿಕಾರಿದರು.

    ಮನೆಯಲ್ಲಿ ತಿಳುವಳಿಕೆ ಇಲ್ಲದವರಿಗೆ ಸ್ವಲ್ಪ ವಿನಾಯ್ತಿ ನೀಡಬಹುದು. ಆದರೆ ನೀವು ರಾಹುಲ್ ರೀತಿ ಅಲ್ಲ, ಸ್ವಲ್ಪ ಪ್ರಬುದ್ಧರಾಗಿ ಮಾತನಾಡಿ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ತೈಲ ದರ ರಾಹುಲ್ ಗಾಂಧಿಗೆ ಕೇಳಿ ಕಡಿಮೆ ಮಾಡ್ತಿರಾ ಎಂದು ಡಿಕೆಶಿಗೆ ಪ್ರಶ್ನೆ ಮಾಡಿದ ಜೋಶಿ, ನಾವು ಅಲ್ಪ ಸಂಖ್ಯಾತರ, ಬಹುಸಂಖ್ಯಾತರ ಪರ ಅಲ್ಲ. ನಾವು ತುಷ್ಟಿಕರಣ ರಾಜಕಾರಣ ಮಾಡಲ್ಲ. ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿ ಅವರು ತುಷ್ಟಿಕರಣ ಮಾಡುತ್ತಿದ್ದಾರೆ. ಆದರೆ ನಮ್ಮದು ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

  • ಉಪಚುನಾವಣೆ ಗೆದ್ದರೆ ನಾವು ಭಾರೀ ಬೀಗಬಾರದು, ಸೋತರೆ ಧೃತಿಗೆಡಬಾರದು: ಜೋಶಿ

    ಉಪಚುನಾವಣೆ ಗೆದ್ದರೆ ನಾವು ಭಾರೀ ಬೀಗಬಾರದು, ಸೋತರೆ ಧೃತಿಗೆಡಬಾರದು: ಜೋಶಿ

    ಧಾರವಾಡ: ಉಪಚುನಾವಣೆ ಇದ್ದಾಗ ಸರ್ಕಾರ ಹಾಗೂ ಸರ್ಕಾರದ ಮಂತ್ರಿಗಳು ನಿಲ್ಲುವುದು ಸಹಜ, ಹಿಂದೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣೆ ನಡೆದಾಗ ಸಿದ್ದರಾಮಯ್ಯನವರು ಅಲ್ಲೇ ಟೆಂಟ್ ಹೊಡೆಡಿದ್ರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಎಂ ಯಾರು ಇರ್ತಾರೆ ಅವರು ಉಪಚುನಾವಣೆ ಗೆಲ್ಲಿಸಲು ನಿಲ್ಲುವುದು ಸಹಜ ಎಂದರು. ಎರಡು ಕ್ಷೇತ್ರಗಳ ಒಟ್ಟು ಮತಗಳ ಸರಾಸರಿ ನೋಡಿದರೆ 53 ರಷ್ಟು ಮತ ಬಿಜೆಪಿಗೆ ಬಿದ್ದಿವೆ. ಡಿಪಾಸಿಟ್ ಕಳೆದುಕೊಂಡಿದ್ದರೆ ರೂಟ್ ಔಟ್, ನಮಗೂ 76 ಸಾವಿರ ವೋಟು ಹಾಕಿದ್ದಾರೆ ಎಂದರು.

    ಸೋಲು ಅಂದರೆ ವಿರೋಧ ಪಕ್ಷದ ಮಾನ್ಯತೆ ಪಡೆಯಲಿಕ್ಕೂ ವಿಫಲರಾಗಿದ್ದು ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ ಜೋಶಿ, ಹಾನಗಲ್‍ನಲ್ಲಿ ಅವರಿಗೆ 4 ಸಾವಿರ ಹೆಚ್ಚು ಮತ ಬಿದ್ದಿವೆ, ಸಿಂದಗಿಯಲ್ಲಿ ಅವರ ಸ್ಥಿತಿ ಏನಾಗಿದೆ, 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ ಎಂದು ಹೇಳಿದರು.

    ಸಿದ್ದರಾಮಯ್ಯ ಸಿಂದಗಿಯಲ್ಲೇ ಟೆಂಟ್ ಹೊಡೆದಿದ್ರು. ಒಟ್ಟಿನಲ್ಲಿ ಗೆದ್ದ ನಂತರ ನಾವು ಭಾರೀ ಬೀಗಬಾರದು, ಸೋತ ನಂತರ ಧೃತಿಗೆಡಬಾರದು ಎಂದು ಜೋಶಿ ಹೇಳಿದರು.

  • ಸುಳ್ಳಿನ ಸ್ಪರ್ಧೆ ಕಥೆ ಹೇಳಿ ಹೆಚ್‍ಡಿಕೆ, ಸಿದ್ದುಗೆ ಟಾಂಗ್ ಕೊಟ್ಟ ಜೋಶಿ

    ಸುಳ್ಳಿನ ಸ್ಪರ್ಧೆ ಕಥೆ ಹೇಳಿ ಹೆಚ್‍ಡಿಕೆ, ಸಿದ್ದುಗೆ ಟಾಂಗ್ ಕೊಟ್ಟ ಜೋಶಿ

    ಹಾವೇರಿ: ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ‘ಸುಳ್ಳಿನ ಸ್ಪರ್ಧೆ’ಯಲ್ಲಿ ಭಾಗವಹಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ.

    ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಒಮ್ಮೆ ಸುಳ್ಳು ಹೇಳುವ ಸ್ಪರ್ಧೆ ನಡೆದಿತ್ತು. ಯಾರು ದೊಡ್ಡ ಸುಳ್ಳು ಹೇಳ್ತಾರೋ ಅವರಿಗೆ ಬಂಗಾರದ ಗಿಫ್ಟ್ ಇತ್ತು. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ಹೇಳ್ತಾರೆ, ನಮ್ಮಜ್ಜ ಮನೆ ಮುಂದೆ 30 ವರ್ಷದಿಂದ ಒಂದು ಬಾವಿ ಇತ್ತು. ಆ ಬಾವಿಯಲ್ಲಿ ನಮ್ಮಜ್ಜನ ವಾಚ್ ಬಿದ್ದಿತ್ತು. ಮೊನ್ನೆ ಬಾವಿ ಸ್ವಚ್ಛ ಮಾಡಿದಾಗ ವಾಚ್ ಸಿಕ್ತು ಎಂದು ಅವರು ಹೇಳುತ್ತಾರೆ. ಕುಮಾರಸ್ವಾಮಿ ಅವರು ಆ ವಾಚ್ 30 ವರ್ಷ ಬಾವಿಯಲ್ಲಿದ್ರೂ ಸರಿಯಾಗಿ ನಡೆಯುತ್ತಿತ್ತು ಎಂದು ಭಾರೀ ಸುಳ್ಳು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ – ಗೋ ಕಳ್ಳರು ಅರೆಸ್ಟ್

    ಅದು ಅಲ್ಲದೇ ಸಿದ್ದರಾಮಯ್ಯ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ನಿಮ್ನಜ್ಜನ ವಾಚ್ ಬಿದ್ದ ಬಾವಿಯಲ್ಲೇ ನಮ್ಮಜ್ಜ ಬಿದ್ದಿದ್ದ. 30 ವರ್ಷ ಏನ್ಮಾಡ್ತಿದ್ದ ನಿಮ್ಮಜ್ಜ ಅಂತ ಹೆಚ್‍ಡಿಕೆ ಕೇಳಿದರೆ, ನಿಮ್ಮಜ್ಜನ ವಾಚ್‍ಗೆ ಕೀ ಕೊಡ್ತಾ ಇದ್ರು ನಮ್ಮಜ್ಜ ಎಂದು ಸಿದ್ದರಾಮಯ್ಯ ದೊಡ್ಡ ಸುಳ್ಳು ಹೇಳುತ್ತಾರೆ. ಹೀಗೆ ಜೋಶಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ‘ಸುಳ್ಳಿನ ಸ್ಪರ್ಧೆ’ ಕತೆ ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

    ಇವರಿಬ್ಬರೂ ಸುಳ್ಳು ಹೇಳೋರು. ಕಾಂಗ್ರೆಸ್, ಜೆಡಿಎಸ್ ನಾಯಕರು ಒಬ್ಬರಿಗಿಂತ ಒಬ್ಬರು ಸುಳ್ಳು ಹೇಳೋರು. ಇದು ಅವರಿಬ್ರೂ ಹೇಳುವ ಸುಳ್ಳಿನ ರೀತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ – 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

  • ಇನ್ಸ್‌ಪೆಕ್ಟರ್‌ ಮೃತಪಟ್ಟಾಗ ಸೋನಿಯಾ ಅತ್ತಿರಲಿಲ್ಲ, ಟೆರರಿಸ್ಟ್ ಸತ್ತಾಗ ಅತ್ತಿದ್ದರು: ಪ್ರಹ್ಲಾದ್ ಜೋಶಿ

    ಇನ್ಸ್‌ಪೆಕ್ಟರ್‌ ಮೃತಪಟ್ಟಾಗ ಸೋನಿಯಾ ಅತ್ತಿರಲಿಲ್ಲ, ಟೆರರಿಸ್ಟ್ ಸತ್ತಾಗ ಅತ್ತಿದ್ದರು: ಪ್ರಹ್ಲಾದ್ ಜೋಶಿ

    ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ಆರ್‌ಎಸ್‌ಎಸ್‌ ತಾಲಿಬಾನ್ ಹೋಲಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇಡಿ ದಾಳಿ ಪ್ರಕರಣ- ದೆಹಲಿಯಲ್ಲಿ ಮೊದಲ ಬಾರಿ ವಿಚಾರಣೆಗೆ ಹಾಜರಾದ ಜಮೀರ್

    ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ. ಹಿಂದೆ ಮೋಹನ ಚಂದ ಎಂಬ ಇನ್ಸ್‌ಪೆಕ್ಟರ್‌ ಸತ್ತಾಗ ಸೋನಿಯಾ ಗಾಂಧಿ ಅತ್ತಿರಲಿಲ್ಲ, ಆದರೆ ಟೆರರಿಸ್ಟ್ ಸತ್ತಾಗ ಅತ್ತಿದ್ದರು ಎಂದಿದ್ದಾರೆ.

    ಸಿದ್ದರಾಮಯ್ಯನವರು ಮುಸಲ್ಮಾನರ ತುಷ್ಟಿಕರಣಕ್ಕಾಗಿ ಈ ರೀತಿ ಹೇಳಿಕೆ ಕೊಡುತ್ತಾರೆ. ಅವರಿಗೆ ಆರ್‌ಎಸ್‌ಎಸ್‌ ಎಂದರೆ ಏನು ಗೊತ್ತು? ನಾನು ಹಾಗೂ ದೇಶದ ಪ್ರಧಾನಿ ಆರ್‌ಎಸ್‌ಎಸ್‍ನವರು, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಹೇಳುತ್ತಾರೆ. ಇದರಿಂದಲೇ ಕಾಂಗ್ರೆಸ್ ಪಕ್ಷ ಬಹಳ ನಷ್ಟ ಅನುಭವಿಸುತ್ತಿದೆ. ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಈಗಲು ಸುಧಾರಿಸದೇ ಇದ್ದರೆ, ಜನ ದಾರಿ ತೋರಿಸುತ್ತಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ನಟ ನಿನಾಸಂ ಸತೀಶ್‍ಗೆ ಮಾತೃ ವಿಯೋಗ

    ದೇಶದ ಜನಕ್ಕೆ ಆರ್‌ಎಸ್‌ಎಸ್‌ ಬಿಜೆಪಿ ಅಂದರೆ ಏನು ಅಂತ ಗೊತ್ತಿದೆ. ಸಿದ್ದರಾಮಯ್ಯ ಗೌರವಾನ್ವಿತ ಲೀಡರ್, ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ಗೌರವ ಇದೆ. ಮಾತನಾಡುವ ಮುನ್ನ ಇತಿಮಿತಿಯಿಂದ ಮಾತನಾಡಬೇಕು. ಕಾಂಗ್ರೆಸ್‍ನವರು ಐಎಸ್‍ಐ ಏಜೆಂಟ್ ಅಂದರೆ ಏನು ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಲೆ ಯತ್ನ- ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಧನ

    ರಾಜ್ಯದಲ್ಲಿ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಎರಡು ಕಡೆ ತಯಾರಿ ನಡೆದಿದೆ. ಯಾರಿಗೆ ಅಭ್ಯರ್ಥಿ ಮಾಡಬೇಕು ಎಂದು ಸರ್ವೇ ನಡೆದಿದೆ. ಎಲ್ಲವನ್ನು ಆಧಾರ ಇಟ್ಟುಕೊಂಡು ಎಲ್ಲರೂ ಸೇರಿ ಕೇಂದ್ರಕ್ಕೆ ಹೆಸರು ಕಳಿಸುತ್ತೇವೆ ಎಂದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರಿಗೆ ನಿರ್ವಹಣೆ ಗೊತ್ತಿಲ್ಲ, ನಾವೂ ಕೂಡಾ ಕೆಲ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಿದ್ದೇವೆ, ನಾವು ಅತ್ಯಂತ ಗೌರವದಿಂದ ನೋಡಿಕೊಂಡು ಚರ್ಚೆ ಮಾಡಿದ್ದೇವೆ, ರಾಹುಲ್ ಹಾಗೂ ಪ್ರಿಯಾಂಕಾ ಅತೀರತರು ಎಂದು ತಿಳಿದುಕೊಂಡ ದುರಹಂಕಾರದ ಪರಿಣಾಮ ಅಮರಿಂದರ್ ಸಿಂಗ್ ಹೊರ ಬಂದಿದ್ದು ಎಂದು ಹೇಳಿದ್ದಾರೆ.

  • ಭಾರತ್ ಬಂದ್ ಯಾವುದೇ ಪರಿಣಾಮ ಬೀರುವುದಿಲ್ಲ: ಜೋಶಿ

    ಭಾರತ್ ಬಂದ್ ಯಾವುದೇ ಪರಿಣಾಮ ಬೀರುವುದಿಲ್ಲ: ಜೋಶಿ

    ಗದಗ: ಭಾರತ್ ಬಂದ್ ಯಾವುದೇ ಪರಿಣಾಮ ಬೀರುವುದಿಲ್ಲ, ಪಂಜಾಬ್ ಹಾಗೂ ಇತರೆ 2 ರಾಜ್ಯ ಹೊರತುಪಡಿಸಿ ದೇಶದಲ್ಲಿ ಎಲ್ಲ ಕಡೆ ಕೃಷಿ ಕಾಯ್ದೆ ಸ್ವಾಗತಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಬಂದ್ ಗೆ ಮುಂದಾದ ಹೋರಾಟಗಾರರ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಮಾತನಾಡಿದರು. ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳಿಗೆ ಕೃಷಿಯಲ್ಲಿ ಅಮೂಲ್ಯ ಪರಿವರ್ತನೆ ಮಾಡಲು ಸಾಧ್ಯವಿರಲಿಲ್ಲ. ಬಿಜೆಪಿ ಜಾರಿ ಮಾಡಿದ ಕಾನೂನನ್ನು ಕಾಂಗ್ರೆಸ್ ಮ್ಯಾನಿಫೆಸ್ಟ್ ನಲ್ಲಿ ಹೇಳಿಕೊಂಡಿದ್ದರು. ಕಾಂಗ್ರೆಸ್ ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಹೇಳಿದ್ದರು. ಆದರೆ ಕಾಂಗ್ರೆಸ್ ನಲ್ಲಿ ಅದನ್ನು ಜಾರಿ ಮಾಡುವ ಧೈರ್ಯ ಇರಲಿಲ್ಲ. ನರೇಂದ್ರ ಮೋದಿ ಸರ್ಕಾರ ಧೈರ್ಯ ದಿಂದ ಅನೇಕ ರಿಫಾರ್ಮ್ ಜಾರಿ ಮಾಡಿದೆ ಎಂದರು. ಇದನ್ನೂ ಓದಿ: ನಾನೇ ಮುಖ್ಯಮಂತ್ರಿಯಾಗಿದ್ರೂ ಕಾಲಮಿತಿಯಲ್ಲಿ ಮೀಸಲಾತಿ ತರಲಾಗುವುದಿಲ್ಲ: ಸಿ.ಸಿ.ಪಾಟೀಲ್

    ದೆಹಲಿನಲ್ಲಿ ಕೆಲ ರೈತರು, ಇನ್ನೂ ಕೆಲವು ರೈತರುಲ್ಲದವರೂ ಹೋರಾಟದಲ್ಲಿದ್ದಾರೆ. ಅವರ ಜೊತೆ 11 ಬಾರಿ ಮಾತುಕತೆಯಾಗಿದೆ. ಬಿಜೆಪಿ ವಿರೋಧಿ ಮನಸ್ಸುಗಳು ಈ ಬಂದ್ ಕೆಲಸ ಮಾಡುತ್ತಿವೆ. ಆದರೆ ಜನ ಕೃಷಿ ಕಾಯ್ದೆ ಪರವಾಗಿದ್ದಾರೆ. ಭಾರತ್ ಬಂದ್ ನಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.

    ಒತ್ತಾಯಪೂರ್ವಕವಾಗಿ ಬಂದ್ ಮಾಡದಂತೆ ಕರ್ನಾಟಕ ಸರ್ಕಾರ ಸಹ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು. ಈ ವೇಳೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ, ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಸೇರಿದಂತೆ ಅನೇಕರು ಇದ್ದರು.

  • ವಲಸೆ ಕಾರ್ಮಿಕರ ಅನುಕೂಲಕ್ಕಾಗಿ 7 ಕಡೆ ವಸತಿ ರಹಿತರ ಆಶ್ರಯ ಕೇಂದ್ರ ನಿರ್ಮಾಣ: ಪ್ರಹ್ಲಾದ್ ಜೋಶಿ

    ವಲಸೆ ಕಾರ್ಮಿಕರ ಅನುಕೂಲಕ್ಕಾಗಿ 7 ಕಡೆ ವಸತಿ ರಹಿತರ ಆಶ್ರಯ ಕೇಂದ್ರ ನಿರ್ಮಾಣ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಅವಳಿ ನಗರದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಅಡಿ 7 ನಗರ ವಸತಿ ರಹಿತರ ಆಶ್ರಯ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದ ಹೊಸೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಗರ ವಸತಿ ರಹಿತರ ಆಶ್ರಯ ಕೇಂದ್ರವನ್ನು ಇಂದು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಉಂಟಾದ ವಲಸೆ ಕಾರ್ಮಿಕ ಸಮಸ್ಯೆಯನ್ನು ನಿವಾರಿಸಲು ಆಶ್ರಯ ಕೇಂದ್ರಗಳು ಅನುಕೂಲವಾಗಲಿವೆ. ಆಶ್ರಯ ಕೇಂದ್ರದಲ್ಲಿ ಗರಿಷ್ಠ 6 ತಿಂಗಳವರೆಗೆ ವಲಸೆ ಕಾರ್ಮಿಕರಿಗೆ ಊಟದೊಂದಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಹುಲಿ ಹುಡುಕೋ ಕಾರ್ಯಾಚರಣೆ ವೇಳೆ ಸಿಕ್ತು ಕಾಡುಕೋಣ..!

    ನಗರದಲ್ಲಿ ಕೈಗೊಳ್ಳಲಾದ ಸಮೀಕ್ಷೆಯಲ್ಲಿ ಕಾರ್ಮಿಕರು ಆಶ್ರಯ ಕೇಂದ್ರದಲ್ಲಿ ಉಳಿದುಕೊಳ್ಳಲು ಒಲವು ತೋರಿಸಿದ್ದಾರೆ. ಈಗ ಉದ್ಘಾಟಿಸಿದ ಆಶ್ರಯ ಕೇಂದ್ರ ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಈ ಕೇಂದ್ರದಲ್ಲಿ ಒಬ್ಬ ವ್ಯವಸ್ಥಾಪಕರು, 3 ಜನ ಆರೈಕೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುವರು. ಇದು 23 ಜನ ಪುರುಷರು ಹಾಗೂ ಮಹಿಳೆಯರಿಗೆ ಆಶ್ರಯ ನೀಡಲಾಗುವುದು ಎಂದರು. ಇದನ್ನೂ ಓದಿ: ಹೆಚ್ಚಾದ ಭೀಮಾ ನದಿ ಒಳಹರಿವು – ಯಾದಗಿರಿ ವೀರಾಂಜನೇಯ, ಕಂಗಳೇಶ್ವರ ದೇಗುಲ ಜಲಾವೃತ

    ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಜಿಲ್ಲಾ ಕೌಶ್ಯಲ್ಯ ಅಭಿವೃದ್ಧಿ ಅಧಿಕಾರಿ ಡಾ.ಚಂದ್ರಪ್ಪ, ಅಬ್ದುಲ್ ರಜಾಕ್ ಗಡವಾಲೆ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

  • ಕಲಬುರಗಿ ಪಾಲಿಕೆ ಗದ್ದುಗೆ ಹಿಡಿಯಲು ಏನು ತಂತ್ರಗಾರಿಕೆ ಮಾಡ್ಬೇಕೋ ಮಾಡ್ತೇವೆ: ಜೋಶಿ

    ಕಲಬುರಗಿ ಪಾಲಿಕೆ ಗದ್ದುಗೆ ಹಿಡಿಯಲು ಏನು ತಂತ್ರಗಾರಿಕೆ ಮಾಡ್ಬೇಕೋ ಮಾಡ್ತೇವೆ: ಜೋಶಿ

    ಧಾರವಾಡ: ಕಲಬುರಗಿ ಪಾಲಿಕೆ ಗದ್ದುಗೆ ಏರುವ ವಿಚಾರವಾಗಿ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಎಲ್ಲಿ ಬಹುಮತ ಇರಲ್ಲ ಅಲ್ಲಿ ಗುದ್ದಾಟ ಇದ್ದೇ ಇರುತ್ತೆ ಎಂದಿದ್ದಾರೆ.

    ಈ ಗುದ್ದಾಟದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಏನು ಮಾಡಬೇಕೋ ಎಲ್ಲ ತಂತ್ರಗಾರಿಕೆಯನ್ನ ಅದಕ್ಕೆ ಬೇಕಾದ ಕಾರ್ಯ ಚಟುವಟಿಕೆಗಳನ್ನ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಮಾಡ್ತಾರೆ ಎಂದರು. ಅಲ್ಲಿ ಯಾರ ಜೊತೆ ಯಾರು ದೊಸ್ತಿ ಆಗುತ್ತೆ ಎನ್ನುವುದು ಹೇಳಲು ಅಧಿಕೃತ ವ್ಯಕ್ತಿ ನಾನಲ್ಲ, ಆದರೆ ರಾಜಕಾರಣದಲ್ಲಿ ಯಾರು ಮಿತ್ರರಲ್ಲ, ಯಾರೂ ಶತ್ರು ಅಲ್ಲ ಎಂದರು.

    ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿರುವ ಜೋಶಿ, ಯಾರನ್ನ ಮೇಯರ್ ಮಾಡಬೇಕು ಎಂದು ಗೆಜೆಟ್ ನೋಟಿಫಿಕೆಷನ್ ಆಗಬೇಕು, ಚುನಾವಣೆ ಪ್ರಕ್ರಿಯೆ ಆಗಬೇಕು, ಮಾಡುವುದಕ್ಕಿಂತ ಮೊದಲು ನಿಮ್ಮನ್ನ ಹೇಳಿ ಮಾಡುತ್ತೆವೆ ಎಂದು ಹೇಳಿದರು. ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್‍ಗೆ ಮೇಯರ್ ಗಿರಿ..?

  • ಇಂದು ದೆಹಲಿಗೆ ಸಿಎಂ ಬೊಮ್ಮಾಯಿ – 4 ಸಚಿವ ಸ್ಥಾನ ಭರ್ತಿ ಬಗ್ಗೆ ನಡೆಯುತ್ತಾ ‘ಹೈ’ಚರ್ಚೆ?

    ಇಂದು ದೆಹಲಿಗೆ ಸಿಎಂ ಬೊಮ್ಮಾಯಿ – 4 ಸಚಿವ ಸ್ಥಾನ ಭರ್ತಿ ಬಗ್ಗೆ ನಡೆಯುತ್ತಾ ‘ಹೈ’ಚರ್ಚೆ?

    ನವದೆಹಲಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ದೆಹಲಿಗೆ ಬರುತ್ತಿದ್ದಾರೆ. ಸಂಸದ ಪ್ರಹ್ಲಾದ್ ಜೋಶಿ ಪುತ್ರಿಯ ಅರತಕ್ಷತೆ ನೆಪದಲ್ಲಿ ದೆಹಲಿ ಟೂರ್ ಇಟ್ಟುಕೊಂಡಿದ್ದು, ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿಎಂ ದೆಹಲಿ ಭೇಟಿ ಬೆನ್ನಲ್ಲೇ ಸಂಪುಟ ವಿಸ್ತರಣೆ ಚರ್ಚೆಯಾಗುವ ಸಾಧ್ಯತೆಗಳಿವೆ. ಈ ಮೂಲಕ ಸಿಎಂ ಅವರು ಬಾಕಿ 4 ಸ್ಥಾನ ಭರ್ತಿ ಮಾಡ್ತಾರಾ ಎಂಬ ಪ್ರಶ್ನೆ ಹುಟ್ಟಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವು ನಾಯಕರ ಭೇಟಿಯಾಗಲಿದ್ದು, ಈ ವೇಳೆ ಯಾವೆಲ್ಲಾ ವಿಷಯದ ಬಗ್ಗೆ ಚರ್ಚೆ ನಡೀಬೋದು ಎಂಬ ಕುತೂಹಲ ಕಮಲ ನಾಯಕರಲ್ಲಿ ಹುಟ್ಟಿಕೊಂಡಿದೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಮತ್ತೆ ಬಿಜೆಪಿಗೆ – ಎಂಐಎಂನಿಂದಾಗಿ ಕಾಂಗ್ರೆಸ್ಸಿಗೆ ಹಿನ್ನಡೆ

    ಅಲ್ಲದೆ ಇದೇ ಕೆಲ ಸಚಿವರ ಖಾತೆ ಬದಲಾವಣೆ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಗಳಿದೆ. ನಿಗಮ ಮಂಡಳಿ ಪುನರ್ ನೇಮಕ ಬಗ್ಗೆಯೂ ಚರ್ಚೆ ನಡೆಯುತ್ತಾ ಎಂಬ ಪ್ರಶ್ನೆಯೂ ಎದ್ದಿದೆ. ಒಟ್ಟಿನಲ್ಲಿ ಸಿಎಂ ಅವರ ದಿಢೀರ್ ದೆಹಲಿ ಪ್ರವಾಸ ಭಾರೀ ನಿರೀಕ್ಷೆ ಹುಟ್ಟಿಸಿದೆ.

  • ಕಾಂಗ್ರೆಸ್ ನಾಯಕರು ಬರೀ ರೈಲು ಬಿಡ್ತಾರೆ- ಜೋಶಿ ವಾಗ್ದಾಳಿ

    ಕಾಂಗ್ರೆಸ್ ನಾಯಕರು ಬರೀ ರೈಲು ಬಿಡ್ತಾರೆ- ಜೋಶಿ ವಾಗ್ದಾಳಿ

    ಹುಬ್ಬಳ್ಳಿ: ಚುನಾವಣೆ ಬಂದಾಗ ಕಾಂಗ್ರೆಸ್ ನಾಯಕರು ಬರೀ ರೈಲು ಬಿಡುತ್ತಾರೆ. ಈ ಹಿಂದೆ 72 ಲಕ್ಷ ರೂ. ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಕೊಡಲಿಲ್ಲ, ಈಗ ಚಂದ್ರನನ್ನು ತಂದುಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಅದೂ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.

    ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೊಟೇಲ್ ನಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಪ್ರಣಾಳಿಕೆಯಲ್ಲಿ ಅವಳಿನಗರದ ಮಧ್ಯೆ ಮೆಟ್ರೋ ರೈಲು ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದು ಕಾಂಗ್ರೆಸ್ ನಾಯಕರು ಜನರಿಗೆ ಬಿಡುತ್ತಿರುವ ರೈಲು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಜಾತಿ, ಭಾಷೆಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುವ ತಂತ್ರ ಪ್ರಾರಂಭವಾಗಿದೆ: ಈರಣ್ಣ ಕಡಾಡಿ

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದಕ್ಕೆ ಅವರನ್ನು ಕೆಳಗೆ ಇಳಿಸಿದರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಆದರೆ ಭ್ರಷ್ಟಾಚಾರ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ ಎಂದು ಜೋಶಿ ತಿರುಗೇಟು ನೀಡಿದರು.

    ನೈರುತ್ಯ ರೈಲ್ವೆ ವಲಯ ಕಚೇರಿಯ ಹೋರಾಟದಿಂದ ಇಲ್ಲಿಯವರೆಗಿನ ಅಭಿವೃದ್ಧಿಗೆ ಬಿಜೆಪಿ ಕಾರಣವಾಗಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹುಬ್ಬಳ್ಳಿ-ಧಾರವಾಡಕ್ಕೆ ಸಾಕಷ್ಟು ಯೋಜನೆಗಳು ಬಂದಿವೆ. ಮುಂದೆ ತಾರಿಹಾಳ ಗ್ರಾಮದ ಬಳಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾ ಗ್ರಾಮ ನಿರ್ಮಾಣ ಮಾಡಲಾಗುತ್ತಿದೆ. ಧಾರವಾಡದಲ್ಲೂ ಕ್ರೀಡಾ ಸಮುಚ್ಚಯ ನಿರ್ಮಾಣ ಮಾಡಲಾಗುವುದು. ರೈಲ್ವೆ ಯೋಜನೆಗಳನ್ನು ಸಹ ತುರ್ತಾಗಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

    ಬಿಜೆಪಿ ಪ್ರಣಾಳಿಕೆ ಬಿಡುಗಡೆ ವೇಳೆ ಮಾಜಿ ಸಚಿವ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ್, ಅಮೃತ್ ದೇಸಾಯಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಜೋಶಿ ಸಹೋದರನ ಪುತ್ರನ ವಿವಾಹಕ್ಕೆ ವೆಂಕಯ್ಯ ನಾಯ್ಡು ಆಗಮನ

    ಜೋಶಿ ಸಹೋದರನ ಪುತ್ರನ ವಿವಾಹಕ್ಕೆ ವೆಂಕಯ್ಯ ನಾಯ್ಡು ಆಗಮನ

    ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋವಿಂದ ಜೋಶಿ ಪುತ್ರ ಅಭಯ ಜೋಶಿ ವಿವಾಹ ಸಮಾರಂಭಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಪತ್ನಿ ಶ್ರೀಮತಿ ಎಂ.ಉಷಾ ಆಗಮಿಸಿದ್ದಾರೆ.

    ನಗರದ ಗೋಕುಲ ರಸ್ತೆಯಲ್ಲಿರುವ ಅನಂತ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಮದುವೆ ನಡೆಯುತ್ತಿದ್ದು, ಎಂ.ವೆಂಕಯ್ಯ ನಾಯ್ಡು ಪರಿವಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಭಾಗಿಯಾಗಿದ್ದಾರೆ. ನವ ವಧು ವರರಿಗೆ ಎಂ.ವೆಂಕಯ್ಯ ನಾಯ್ಡು ಆಶೀರ್ವದಿಸಿದ್ದಾರೆ. ಆಯ್ದ ಗಣ್ಯರಿಗೆ ಮಾತ್ರ ಮದುವೆ ಆಮಂತ್ರಣ ನೀಡಲಾಗಿದ್ದು, ಮಾಧ್ಯಮ ಪ್ರತಿನಿಧಿಗಳಿಗೆ ಸಹ ನಿರ್ಬಂಧ ವಿಧಿಸಲಾಗಿದೆ.

    ಸೇನಾ ಹೆಲಿಕಾಪ್ಟರ್ ಮೂಲಕ ವೆಂಕಯ್ಯ ನಾಯ್ಡು ಆಗಮಿಸಿದರು. ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಇಂದು ನಗರಕ್ಕೆ ಆಗಮಿಸಿದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಸ್ತಕ ನೀಡಿ ಸ್ವಾತಿಸಿದರು. ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್.ಕೆ.ಪಾಟೀಲ್, ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಬರಮಾಡಿಕೊಂಡರು.