Tag: ಪ್ರಹ್ಲಾದ್ ಜೋಶಿ

  • ವಿಧಾನಸಭೆ ಚುನಾವಣೆ ಹೇಗೆ ಗೆದ್ದಿರಿ ಉತ್ತರಿಸಿ – ರಾಹುಲ್ ಗಾಂಧಿಗೆ ಜೋಶಿ ಸವಾಲು

    ವಿಧಾನಸಭೆ ಚುನಾವಣೆ ಹೇಗೆ ಗೆದ್ದಿರಿ ಉತ್ತರಿಸಿ – ರಾಹುಲ್ ಗಾಂಧಿಗೆ ಜೋಶಿ ಸವಾಲು

    – ಚುನಾವಣೆ ಲೋಪವಾಗಿದ್ದರೆ ಪ್ರಕರಣ ಏಕೆ ದಾಖಲಿಸಲಿಲ್ಲ?
    – ಚುನಾವಣಾ ಆಯೋಗವನ್ನು ದೂರುವ ಮೊದಲು ಸ್ಪಷ್ಟಪಡಿಸಿ ಎಂದ ಕೇಂದ್ರ ಸಚಿವ

    ನವದೆಹಲಿ: ಕಾಂಗ್ರೆಸ್ (Congress) ಚುನಾವಣಾ ಆಯೋಗದ (Election Commission) ಮೇಲೆ ಆರೋಪ ಹೊರಿಸುವ ಮೊದಲು ಕರ್ನಾಟಕ ವಿಧಾನಸಭೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತು ಎಂಬುದಕ್ಕೆ ರಾಹುಲ್ ಗಾಂಧಿ ಉತ್ತರಿಸಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸವಾಲು ಹಾಕಿದರು.

    ದೆಹಲಿಯಲ್ಲಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ಚುನಾವಣಾ ಆಯೋಗದ ಲೋಪವಿದೆ’ ಎನ್ನುವುದಾದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಇವಿಎಂಗಳು ಮತ್ತು ಚುನಾವಣಾ ಆಯೋಗ ಕಾರ್ಯ ನಿರ್ವಹಿಸಿದೆ. ಹಾಗಾದರೆ ಕಾಂಗ್ರೆಸ್‌ನವರು ಹೇಗೆ ಆಯ್ಕೆಯಾದರು ಎಂದು ಪ್ರಶ್ನಿಸಿದರು.

    ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರ ವಾದ ತರ್ಕಬದ್ಧವಲ್ಲ. 2020ರಲ್ಲಿಯೂ ಆಯ್ಕೆಯಾಗಿದ್ದರು. ಆಗದೇ ಚುನಾವಣಾ ಆಯೋಗ ಕಾರ್ಯ ನಿರ್ವಹಿಸುತ್ತಿತ್ತು. ಲೋಪವಾಗಿದ್ದರೆ ಈವರೆಗೂ ಏಕೆ ಪ್ರಕರಣ ದಾಖಲಿಸಲಿಲ್ಲ ಮತ್ತು ದಾಖಲೆ ಸಲ್ಲಿಸಲಿಲ್ಲ? ಈಗ ಒಂದು ವರ್ಗವನ್ನು ಸಮಾಧಾನಪಡಿಸಲು ಈ ನಡೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಸಂಸತ್‌ನಲ್ಲಿ ಚರ್ಚೆ ಅಸಾಧ್ಯವೆಂದ ಮಾಜಿ ಸ್ಪೀಕರ್:
    ಚುನಾವಣಾ ಆಯೋಗದ ಕಾರ್ಯ ನಿರ್ವಹಣೆ ಬಗ್ಗೆ ಸಂಸತ್ತು ಚರ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಲೋಕಸಭೆ ಮಾಜಿ ಸ್ಪೀಕರ್ ಬಲರಾಮ್ ಜಾಖರ್ ತೀರ್ಪಿತ್ತಿದ್ದಾರೆ. ಇನ್ನು, ಸುಪ್ರೀಂ ಕೋರ್ಟ್‌ನಲ್ಲಿ ಸಹ ವಿಚಾರಣೆ ನಡೆಯುತ್ತಿದ್ದು, ಇದು ಕಾನೂನು ವ್ಯಾಪ್ತಿಗೊಳಪಟ್ಟಿದೆ. ಹಿಂದೆಯೂ ಎಸ್‌ಐಆರ್ ನಡೆಸಲಾಗಿದೆ. ಆದರೆ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

    2023ರಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಸಹ ಬಿಜೆಪಿಯೇ ಅಧಿಕಾರದಲ್ಲಿತ್ತು. ಹಾಗಿದ್ದರೂ ಕಾಂಗ್ರೆಸ್ ಬಹುಮತದಿಂದ ಗೆದ್ದಿತು. ಆಗ ಚುನಾವಣಾ ಆಯೋಗ ಮತ್ತು ಇವಿಎಂ ಎಲ್ಲಾ ಚೆನ್ನಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಾಕ್ಷಣ ನಿಮಗೆ ಚುನಾವಣಾ ಆಯೋಗ ಚೆನ್ನಾಗಿಲ್ಲ, ಇವಿಎಂಗಳು ವಿಶ್ವಾಸಾರ್ಹವಲ್ಲ ಅಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

    ಜಗತ್ತಿಗೇನು ಹೇಳಲು ಹೊರಟಿದ್ದೀರಿ?
    ಕರ್ನಾಟಕದಲ್ಲಿ ವಿಧಾನಸಭೆ ಫಲಿತಾಂಶ ನಿಮ್ಮ ಪರವಾಗಿತ್ತು. ಆದರೆ ಲೋಕಸಭೆ ಇರಲಿಲ್ಲ. ಮಹಾರಾಷ್ಟ್ರದಲ್ಲಿ ಲೋಕಸಭೆ-ವಿಧಾನಸಭೆ ನಿಮ್ಮಂತೆ ಆಗಲಿಲ್ಲ. ದೇಶ ಮತ್ತು ಜಗತ್ತಿಗೆ ಏನನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದೀರಿ? ಭಾರತದಲ್ಲಿ ಚುನಾವಣೆಗಳು ಸರಿಯಾಗಿ ನಡೆಯುವುದಿಲ್ಲ ಎಂದು ಸಾರಲು ಪ್ರಯತ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.

    ಜಾರ್ಖಂಡ್, ಜಮ್ಮು-ಕಾಶ್ಮೀರ ಹೇಗೆ ಗೆದ್ದಿರಿ?
    ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ಸಾಂಸ್ಥಿಕ ಸಂಸ್ಥೆಗಳ ವಿರುದ್ಧ ಮಾತನಾಡುತ್ತಾರೆ. ಚುನಾವಣೆಗಳಲ್ಲಿ ಅಕ್ರಮ ನಡೆದರೆ ನಿಮ್ಮ ಅಭ್ಯರ್ಥಿಗಳು ಜಾರ್ಖಂಡ್‌ನಲ್ಲಿ ಹೇಗೆ ಗೆದ್ದರು? ಜಮ್ಮು ಮತ್ತು ಕಾಶ್ಮೀರದಲ್ಲಿ ಹೇಗೆ ಗೆದ್ದಿದ್ದೀರಿ? ಸ್ವಲ್ಪ ತಾರ್ಕಿಕವಾಗಿ ಕೆಲಸ ಮಾಡಿ, ಜನರು ಬುದ್ಧಿವಂತರಿದ್ದಾರೆ. ಹಾಗಾಗಿಯೇ ತಮ್ಮ ಪಕ್ಷವನ್ನು ವಿಪಕ್ಷದಲ್ಲಿ ಸ್ಥಾನದಲ್ಲಿರಿಸಿದ್ದಾರೆ ಮತ್ತು ಮೂರೇ ಮೂರು ರಾಜ್ಯಗಳಲ್ಲಿ ಆಡಳಿತ ನೀಡಿದ್ದಾರೆ ಎಂದು ರಾಹುಲ್ ಗಾಂಧಿಗೆ ಚಾಟಿ ಬೀಸಿದರು.

    ಸುಂಕದಿಂದ ರಾಜತಾಂತ್ರಿಕ ಸಂಬಂಧಕ್ಕಿಲ್ಲ ಧಕ್ಕೆ:
    ಕೇವಲ ಸುಂಕ ಏರಿಕೆ, ಬದಲಾವಣೆಯಿಂದ ಭಾರತದ ರಾಜತಾಂತ್ರಿಕ ಸಂಬಂಧ ದುರ್ಬಲವಾಗುವುದಿಲ್ಲ. ಭಾರತದ ಸ್ಥಾನಮಾನವನ್ನು ಜಗತ್ತು ಗುರುತಿಸುತ್ತಿದೆ. 190ಕ್ಕೂ ಹೆಚ್ಚು ದೇಶಗಳ ಬೆಂಬಲವನ್ನು ಭಾರತ ಗಳಿಸಿದೆ ಎಂದು ಸ್ಪಷ್ಟಪಡಿಸಿದರು.

    ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕ ಯೋಜನೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಸುಂಕ ನೀತಿಗಳ ಆಧಾರದ ಮೇಲೆ ಅಂತರಾಷ್ಟ್ರೀಯ ಸಂಬಂಧಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಭಾರತ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಜಾಗತಿಕವಾಗಿ ಗೌರವಿಸಲ್ಪಟ್ಟಿದೆ ಎಂದು ಪ್ರತಿಪಾದಿಸಿದರು.

  • ಬೆಂಗಳೂರು-ಬೆಳಗಾವಿ ನೂತನ `ವಂದೇ ಭಾರತ್’ ರೈಲು; ಆ.10ಕ್ಕೆ ಪ್ರಧಾನಿ ಹಸಿರು ನಿಶಾನೆ – ಸಚಿವ ಪ್ರಹ್ಲಾದ್ ಜೋಶಿ

    ಬೆಂಗಳೂರು-ಬೆಳಗಾವಿ ನೂತನ `ವಂದೇ ಭಾರತ್’ ರೈಲು; ಆ.10ಕ್ಕೆ ಪ್ರಧಾನಿ ಹಸಿರು ನಿಶಾನೆ – ಸಚಿವ ಪ್ರಹ್ಲಾದ್ ಜೋಶಿ

    ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರ ಕೋರಿಕೆಯಂತೆ ಬೆಂಗಳೂರು-ಬೆಳಗಾವಿ ನೂತನ `ವಂದೇ ಭಾರತ್’ ರೈಲು (Vande Bharat Train) ಸಂಚಾರ ಸೇರಿದಂತೆ 3 ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆ.10ರಂದು ಚಾಲನೆ ನೀಡಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಆ.10ರ ಭಾನುವಾರ ಕರ್ನಾಟಕ ಪ್ರವಾಸ ಕೈಗೊಂಡ ವೇಳೆ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್‌

    ಮೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ:
    ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಜ್ಯದಲ್ಲಿ 3 ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರು-ಬೆಳಗಾವಿ, ನಾಗ್ಪುರದ ಅಜ್ನಿ-ಪೂನಾ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೋದೇವಿ ಕಾರ್ತ ಮಧ್ಯೆ ನೂತನ ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಲಿವೆ. ಇದನ್ನೂ ಓದಿ: ನಿಜವಾದ ಭಾರತೀಯ ಯಾರೆಂದು ನಿರ್ಧರಿಸೋದು ಸುಪ್ರೀಂಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರಲ್ಲ – ಪ್ರಿಯಾಂಕಾ ಗಾಂಧಿ

    ಸಚಿವ ಜೋಶಿ ಕೋರಿಕೆಗೆ ಸ್ಪಂದನೆ:
    ಈ ಹಿಂದೆ ಸಚಿವ ಪ್ರಹ್ಲಾದ್ ಜೋಶಿ ಅವರು ಬೆಂಗಳೂರು-ಬೆಳಗಾವಿ ಮಧ್ಯೆ ನೂತನ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಪ್ರಧಾನಿ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ಅವರು ಭಾನುವಾರ ತಾವೇ ಖುದ್ದು ಈ ಹೊಸ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಜಲಪ್ರಳಯಕ್ಕೆ ಕೊಚ್ಚಿ ಹೋದ ಗ್ರಾಮ

    ರೈಲು ಸಂಚಾರದ ವೇಳೆ:
    ಈ ನೂತನ ವಂದೇ ಭಾರತ್ ರೈಲು ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1:50ಕ್ಕೆ ತಲುಪಲಿದೆ. ವಾಪಸ್ ಬೆಂಗಳೂರಿನಿಂದ ಮಧ್ಯಾಹ್ನ 2:20ಕ್ಕೆ ಹೊರಟು ರಾತ್ರಿ 10:40ಕ್ಕೆ ಬೆಳಗಾವಿ ತಲುಪಲಿದೆ.

    ಈ ರೈಲು ಸಂಚಾರದಿಂದ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಮಧ್ಯೆ ಸಂಪರ್ಕ ಹೆಚ್ಚಲಿದ್ದು, ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲ್ವೆ ಸೌಲಭ್ಯ ಕಲ್ಪಿಸುವಲ್ಲಿ ಶ್ರಮಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

  • ಪ್ರಜ್ವಲ್‌ಗೆ ಶಿಕ್ಷೆ ವಿಧಿಸಿದ್ರೆ ಬಿಜೆಪಿಗೇಕೆ ಮುಜುಗರ, ಖಲಿಸ್ತಾನಿ ಟೆರರಿಸ್ಟ್ ಜೊತೆ ರಾಹುಲ್ ಗಾಂಧಿ ಫೋಟೋ ಇದೆ: ಜೋಶಿ

    ಪ್ರಜ್ವಲ್‌ಗೆ ಶಿಕ್ಷೆ ವಿಧಿಸಿದ್ರೆ ಬಿಜೆಪಿಗೇಕೆ ಮುಜುಗರ, ಖಲಿಸ್ತಾನಿ ಟೆರರಿಸ್ಟ್ ಜೊತೆ ರಾಹುಲ್ ಗಾಂಧಿ ಫೋಟೋ ಇದೆ: ಜೋಶಿ

    ಹುಬ್ಬಳ್ಳಿ: ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ ವಿಧಿಸಿದ್ದು ಬಿಜೆಪಿಗೇಕೆ (BJP) ಮುಜುಗರ ಆಗುತ್ತೆ? ಕಾಂಗ್ರೆಸ್‌ನವರು ಯಾವ ಯಾವ ಅಪರಾಧಿಗಳ ಜೊತೆ ಇದ್ರು ಗೊತ್ತಾ? ಖಲಿಸ್ತಾನಿ ಟೆರರಿಸ್ಟ್ ಜೊತೆ ರಾಹುಲ್ ಗಾಂಧಿ (Rahul Gandhi) ಫೋಟೋ ಇದೆ ಎಂದು ಕಾಂಗ್ರೆಸ್‌ ನಾಯಕರ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ ವೀಧಿಸಿದ್ದು ಬಿಜೆಪಿಗೆ ಮುಜುಗರ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಅಶ್ಲೀಲ ವಿಡಿಯೋದಲ್ಲಿ ಇದ್ದದ್ದು ಪ್ರಜ್ವಲ್‌ ಅಂತ ಪತ್ತೆಹಚ್ಚಿದ್ದೇ ಹೊಸ ತಂತ್ರಜ್ಞಾನ – ದೇಶದಲ್ಲೇ ಮೊದಲ ಪ್ರಯೋಗ

    ‌ಧರ್ಮಸ್ಥಳ ಕೇಸ್‌ ಬಗ್ಗೆ ಜೋಶಿ ಹೇಳಿದ್ದೇನು?
    ಶಿಕ್ಷೆ ಆಗಿದೆ, ನಮಗೆ ಮುಜುಗರ ಯಾಕೆ ಆಗುತ್ತೆ? ಕಾಂಗ್ರೆಸ್‌ನವರು ಯಾವ ಯಾವ ಅಪರಾಧಿಗಳ ಜೊತೆ ಇದ್ರು ಗೊತ್ತಾ? ಖಲಿಸ್ತಾನಿ ಟೆರರಿಸ್ಟ್ ಜೊತೆ ರಾಹುಲ್ ಗಾಂಧಿ ಫೋಟೋ ಇದೆ. ಯಾಸಿನ್ ಮಲ್ಲಿಕ್ ಜೊತೆ ಇಲ್ಲಿರುವವರ ಫೋಟೋ ಇದೆ. ಅವರದ್ದು ಸಪ್ರೇಟ್ ಪಕ್ಷ, ನಮ್ಮದು ಅಲೈನ್ಸ್ ಆಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿ ಮೇಲೆ ರೇಪ್‌ – ಪಿಜಿ ಮಾಲೀಕ ಅಶ್ರಫ್‌ ಅರೆಸ್ಟ್‌

    ಇನ್ನೂ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಮಾಡಿದ್ದಾರೆ, ತನಿಖೆ ಆಗಲಿ. ಭಾರೀ ಅಪರಾಧ ಆಗಿದೆ ಅಂತ ಮೊದಲೇ ಬಿಂಬಿಸೋದು ಸರಿಯಲ್ಲ. ವೀರೇಂದ್ರ ಹೆಗಡೆ ಅವರು ತನಿಖೆ ಮಾಡಲಿ ಅಂತ ಅಂದಿದ್ದಾರೆ, ಎಸ್‌ಐಟಿ ನೀವೇ ಮಾಡಿದ್ದೀರಿ, ಯಾಕೆ ಅವಸರ ಮಾಡ್ತೀರಿ? ಅಂದು ಹೇಳಿದರು. ಇದನ್ನೂ ಓದಿ: ಭೂಗಳ್ಳರಿಂದ ಮಳವಳ್ಳಿ ಶಾಸಕರಿಗೆ ಜೀವ ಬೆದರಿಕೆ – ಕೆಡಿಪಿ ಸಭೆಯಲ್ಲೇ ನರೇಂದ್ರಸ್ವಾಮಿ ಆತಂಕ

    ಕಾಂಗ್ರೆಸ್‌ನವರು ಪಾಕಿಸ್ತಾನದಲ್ಲಿ ಹೀರೋ ಆಗ್ತಿದ್ದಾರೆ
    ಕಾಂಗ್ರೆಸ್ ಪಕ್ಷ ದೇಶದ ಹಿತವನ್ನ ಮರೆತು ಪಾಕಿಸ್ತಾನವನ್ನ ಸಾಫ್ಟ್ ಆಗಿ ನೋಡ್ತಾ ಇದೆ. ಭಯೋತ್ಪಾದನೆ ಆರೋಪಗಳಿಂದ ಮುಕ್ತಗೊಳಿಸುವ ಪ್ರಯತ್ನ ಮಾಡ್ತಾ ಇದೆ. ಮಲೆಗಾವ್ ಪ್ರಕರಣದ ನಂತರದ ಘಟನೆಗಳಲ್ಲಿ ನಡೆದುಕೊಂಡದ್ದು ಗೊತ್ತಿದೆ. ತನಿಖೆ ಬಂದ್ ಮಾಡಿದ ಶರತ್ ಪವಾರ್‌ರ ಪಕ್ಷ ಹಿಂದೂ ಟೆರರ್ ಅಂತ ಹೇಳೋ ಪ್ರಯತ್ನ ಮಾಡಿದ್ರ. ಸಂಜೋತ ಹಾಗೂ ಮಲೆಗಾವ್ ಲಿಂಕ್ ಮಾಡಿದ್ರು. ಮಲೆಗಾವ್ ಬಾಂಬ್ ಸ್ಫೋಟದಲ್ಲಿ ಮುಸಲ್ಮಾನರು ಯಾಕೆ ಮಾಡ್ತಾರೆ? ಹಿಂದೂ ಟೆರೇರ್ ಅಂತ ಹೇಳಿ ಪಾಕಿಸ್ತಾನವನ್ನ ರಕ್ಷಿಸುವ ಕೆಲಸ ಮಾಡಿದ್ರು. ನಾವು ಪಾಕಿಸ್ತಾನವನ್ನ ಜಗತ್ತಿನಲ್ಲಿ ಬೆತ್ತಲೆ ಮಾಡಬೇಕು ಅನ್ನೋ ಪ್ರಯತ್ನದಲ್ಲಿದ್ದೆವು. ಆದ್ರೆ ಮಲೆಗಾವ್‌ದಲ್ಲಿ ಆರಂಭಿಕ ಆರೋಪಿಗಳನ್ನ ಬಿಡಿಸುವ ಕೆಲಸವನ್ನ ಕಾಂಗ್ರೆಸ್‌ನವರು ಮಾಡಿದ್ರು. ಕಾಂಗ್ರೆಸ್‌ನವರು ದೇಶದಲ್ಲಿ ಹೀರೊ ಆಗೋದನ್ನ ಬಿಟ್ಟು ಪಾಕಿಸ್ತಾನದಲ್ಲಿ ಹೀರೊ ಆಗೋಕೆ ಹೊರಟಿದ್ದಾರೆ. ಗೃಹ ಮಂತ್ರಿ ಹೇಳಿದ್ದಾರೆ ಹಿಂದೂ ಯಾವತ್ತೂ ಟೆರರಿಸ್ಟ್ ಆಗೋಕೆ ಸಾಧ್ಯವೇ ಇಲ್ಲ ಅಂತ. ಪಹಲ್ಗಾಮ್ ಉಗ್ರರು ಪಾಕಿಸ್ತಾನದವರೇ ಅಂತ ಹೇಳೋಕೆ ಏನು ಸಾಕ್ಷಿ ಅಂತ ಚಿದಂಬರಂ ಹೇಳ್ತಾರೆ. ಕಾಂಗ್ರೆಸ್ಸಿನ ಮನಸ್ಥಿತಿ ದೇಶದಲ್ಲಿ ಯಾವ ಮಟ್ಟಕ್ಕೆ ಹೋಗ್ತಾ ಇದೆ ಅನ್ನೋದನ್ನ ನೀವೇ ಯೋಚಿಸಿ ಎಂದು ಕಿಡಿ ಕಾರಿದ್ದಾರೆ.

  • ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕಿದ ಭಾರತ

    ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕಿದ ಭಾರತ

    – 1,08,494 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಮುಂಚೂಣಿಯಲ್ಲಿದೆ: ಪ್ರಹ್ಲಾದ್ ಜೋಶಿ
    – ಭಾರತವೀಗ 3ನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರ

    ನವದೆಹಲಿ: ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಈಗ ಜಪಾನ್‌ಗಿಂತ (Japan) ಮುಂದಿದ್ದು, 1,08,494 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

    ನವದೆಹಲಿಯಲ್ಲಿಂದು ಈ ಮಾಹಿತಿ ಹಂಚಿಕೊಂಡ ಸಚಿವರು, ಜಪಾನ್ ಸದ್ಯ 96,459 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದರೆ ಭಾರತ (India) 1,08,494 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಮುಂಚೂಣಿಯಲ್ಲಿದೆ. ಪಳೆಯುಳಿಕೆಯೇತರ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 50% ಅನ್ನು ಅದಾಗಲೇ ಸಾಧಿಸಿದೆ ಎಂದಿದ್ದಾರೆ. ಇದನ್ನೂ ಓದಿ: ‘ಮಹಾ’ ಚುನಾವಣೆಯಲ್ಲಿ ಇವಿಎಂ ತಿರುಚುವಿಕೆ ನಡೆದಿಲ್ಲ.. ಪರಿಶೀಲನೆಯಿಂದ ಮತ್ತೆ ಸಾಬೀತು: ಚುನಾವಣಾ ಆಯೋಗ

    ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವೀಗ ಜಪಾನ್ ಅನ್ನು ಹಿಂದಿಕ್ಕುವ ಮೂಲಕ ಮೂರನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಚೀನಾ ಮತ್ತು ಅಮೆರಿಕ ನಂತರದ ಸ್ಥಾನದಲ್ಲಿ ಭಾರತ ರಾರಾಜಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆಯಾಗಿ ಖುಷ್ಬೂ ಸುಂದರ್‌ ನೇಮಕ

    ಭಾರತ ವಿಶ್ವದ ಮೂರನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೆಂಬಲ, ಪ್ರೋತ್ಸಾಹ, ಮಾರ್ಗದರ್ಶನ ಅತ್ಯಮೂಲ್ಯವಾಗಿದೆ. ಮೋದಿ ಅವರ ದೂರದೃಷ್ಟಿಯಿಂದಾಗಿ ಭಾರತ ಶುದ್ಧ ಇಂಧನ ಕ್ರಾಂತಿಯಲ್ಲಿ ಜಾಗತಿಕವಾಗಿ ಮುಂಚೂಣಿ ಸಾಧಿಸಿದೆ ಎಂದು ವಿವರಿಸಿದ್ದಾರೆ.

    ಅಂತರರಾಷ್ಟ್ರೀಯ ಇಂಧನ ಸಂಸ್ಥೆ 2024ರ ದತ್ತಾಂಶದ ಪ್ರಕಾರ ಚೀನಾ (China) ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. 2023ರಲ್ಲಿ 260 ಗಿಗಾವ್ಯಾಟ್ ಸೇರಿಸಿದ್ದು, ಕಳೆದ ವರ್ಷಕ್ಕಿಂತ ಮೂರುಪಟ್ಟು ಸನಿಹದಲ್ಲಿದೆ. ನವೀಕರಿಸಬಹುದಾದ ಇಂಧನಕ್ಕಾಗಿ ಚೀನಾ 14ನೇ ಪಂಚವಾರ್ಷಿಕ ಯೋಜನೆಗೆ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸಿದ್ದು, ಮತ್ತಷ್ಟು ಬೆಳವಣಿಗೆಗೆ ಕಾರಣವಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಟೇಕಾಫ್‌ ಆಗ್ಬೇಕಿದ್ದ ಫ್ಲೈಟ್‌ನಲ್ಲಿ ತಾಂತ್ರಿಕ ದೋಷ – ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ ವಿಮಾನ ರದ್ದು

    ಅಮೆರಿಕ 2022ರಲ್ಲಿ ಹಣದುಬ್ಬರ ಕಡಿತ ಕಾಯ್ದೆಯಲ್ಲಿ (IRV) ಸೌರ ಪಿವಿಗಾಗಿ ಉದಾರವಾಗಿ ಅನುದಾನ ಒದಗಿಸಿತು. ಪರಿಣಾಮ 2023ರಲ್ಲಿ ಯುಎಸ್‌ನಲ್ಲಿ 70% ರಷ್ಟು ಹೆಚ್ಚಾಗಿ ದಾಖಲೆಯ 32 ಗಿಗಾವ್ಯಾಟ್ ತಲುಪಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆ. 11ರಿಂದ ಕಾಶಿ ವಿಶ್ವನಾಥ ಧಾಮ ಪ್ಲಾಸ್ಟಿಕ್ ಮುಕ್ತ

    ಭಾರತ 2023ರಲ್ಲಿ 12 ಗಿಗಾವ್ಯಾಟ್ ಸೌರ ಪಿವಿ (ಫೋಟೋವೋಲ್ಟಾಯಿಕ್) ಅನ್ನು ಸ್ಥಾಪಿಸಿತು. 2024ರಲ್ಲಿ ಇದು ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಬ್ರೆಜಿಲ್ 2023ರಲ್ಲಿ 15 ಗಿಗಾವ್ಯಾಟ್ ಸೌರ ಪಿವಿ ಸಾಮರ್ಥ್ಯ ಸಾಧಿಸಿದ್ದು, ಇದು ಹಿಂದಿನ ವರ್ಷಕ್ಕಿಂತ 30% ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸುಹಾಸ್‌ ಶೆಟ್ಟಿ ಹತ್ಯೆ ಎನ್‌ಐಎಗೆ ಹಸ್ತಾಂತರ; ಅಮಿತ್‌ ಶಾ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಕ್ಯಾ. ಚೌಟ

    ಪ್ಯಾರಿಸ್ ಒಪ್ಪಂದ ಸಾಧಿಸಿದ ಭಾರತ:
    ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ ಭಾರತ ತನ್ನ ವಿದ್ಯುತ್ ಸಾಮರ್ಥ್ಯದ 50% ಅನ್ನು ಪಳೆಯುಳಿಕೆಯೇತರ ಮೂಲಗಳಿಂದ 5 ವರ್ಷ ಮೊದಲೇ ಸಾಧಿಸಿದೆ. 2030ರ ವೇಳೆಗೆ ಪಳೆಯುಳಿಕೆಯೇತರ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 50% ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.

    ಭಾರತದ ಇಂಧನ ಸಾಮರ್ಥ್ಯವೀಗ 484.8 ಗಿಗಾವ್ಯಾಟ್ ಜೂನ್ 30ರ ಹೊತ್ತಿಗೆ ಭಾರತದ ಒಟ್ಟು ಇಂಧನ ಸಾಮರ್ಥ್ಯ 484.8 ಗಿಗಾವ್ಯಾಟ್ ಆಗಿದ್ದು, ಇದರಲ್ಲಿ 242.04 ಗಿಗಾವ್ಯಾಟ್ (49.92%) ಉಷ್ಣ-ಕಲ್ಲಿದ್ದಲಿನಿಂದ ಹಾಗೂ 8.78 ಗಿಗಾವ್ಯಾಟ್ (1.81%) ಪರಮಾಣುವಿನಿಂದ ಮತ್ತು 234.00 ಗಿಗಾವ್ಯಾಟ್ (48.27%) ನವೀಕರಿಸಬಹುದಾದ ಮೂಲಗಳಿಂದ ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 6520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಪ್ರಹ್ಲಾದ್‌ ಜೋಶಿ

    ಗ್ಲ್ಯಾಸ್ಗೋದಲ್ಲಿ ನಡೆದ ಸಿಒಪಿ26ನಲ್ಲಿ ಭಾರತ ತನ್ನ ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿದೆ. 2030ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು 500 ಗಿಗಾವ್ಯಾಟ್‌ಗೆ ಹೆಚ್ಚಿಸಲಿದೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಂದ 50% ರಷ್ಟು ಇಂಧನ ಅಗತ್ಯಗಳನ್ನು ಪೂರೈಸಲಿದೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ಕೇಸ್‌ನಿಂದ ನನ್ನ ಜೀವನವೇ ಹಾಳಾಯ್ತು: ಪ್ರಜ್ಞಾ ಠಾಕೂರ್

    1 ಶತಕೋಟಿ ಟನ್ ಇಂಗಾಲ ಹೊರಸೂಸುವಿಕೆ ಗುರಿ:
    ಭಾರತ ಒಂದು ಶತಕೋಟಿ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಗುರಿ ಹೊಂದಿದ್ದು, 2030ರ ವೇಳೆಗೆ 45% ರಷ್ಟು ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿ ಸಾಧಿಸುವತ್ತ ಹೆಜ್ಜೆ ಹಾಕಿದೆ ಎಂದು ತಿಳಿಸಿದ್ದಾರೆ.

  • 6520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಪ್ರಹ್ಲಾದ್‌ ಜೋಶಿ

    6520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಪ್ರಹ್ಲಾದ್‌ ಜೋಶಿ

    – ಪ್ರಧಾನ ಮಂತ್ರಿ ಕಿಸಾನ್‌ ಸಂಪದ ಯೋಜನೆಗೆ 1920 ಕೋಟಿ ಹೆಚ್ಚುವರಿ ಹಣ
    – 100 ಆಹಾರ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಗೆ ಕೇಂದ್ರ ಒಪ್ಪಿಗೆ
    – 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕ ಸ್ಥಾಪನೆಗೆ 1,000 ಕೋಟಿ

    ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್‌ ಸಂಪದ ಯೋಜನೆ (PMKSY) ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 15ನೇ ಹಣಕಾಸು ಆಯೋಗದಡಿ ಒಟ್ಟು 6,520 ಕೋಟಿ ರೂ. ವೆಚ್ಚಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 15ನೇ ಹಣಕಾಸು ಆಯೋಗದಡಿ (2021-22 ರಿಂದ 2025-26) ನಡೆಯುತ್ತಿರುವ ಕೇಂದ್ರ ವಲಯದ ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ (PMKSY) ಗಾಗಿ ಹೆಚ್ಚುವರಿ 1920 ಕೋಟಿ ಸೇರಿದಂತೆ ಒಟ್ಟು 6,520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲಾಯಿತೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ಕೇಸ್‌ನಿಂದ ನನ್ನ ಜೀವನವೇ ಹಾಳಾಯ್ತು: ಪ್ರಜ್ಞಾ ಠಾಕೂರ್

    ಆಹಾರ ಘಟಕಗಳಿಗೆ 1000 ಕೋಟಿ: ಕಿಸಾನ್‌ ಸಂಪದ ಯೋಜನೆ ಮೂಲಕ ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಆಹಾರ ಮೌಲ್ಯವರ್ಧನ ಮೂಲಸೌಕರ್ಯ (ICCVAI) ಮತ್ತು 100 ಆಹಾರ ಪರೀಕ್ಷಾ ಪ್ರಯೋಗಾಲಯಗಳು ಹಾಗೂ 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕಗಳನ್ನು ಸ್ಥಾಪಿಸಲು 1000 ಕೋಟಿ ವೆಚ್ಚಕ್ಕೆ ಕೇಂದ್ರ ಅನುಮೋದನೆ ನೀಡಿದೆ.

    ICCVAI ಮತ್ತು FSQAI ಇವೆರೆಡೂ PMKSYಯ ಬೇಡಿಕೆ ಆಧಾರಿತ ಘಟಕ ಯೋಜನೆಗಳಾಗಿವೆ. ಹಾಗಾಗಿ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಂಪದ ಮೂಲಕ ವಿವಿಧ ಯೋಜನೆ ಮಂಜೂರಾತಿಗೆ 920 ಕೋಟಿ ಒದಗಿಸಿದೆ. ಪ್ರಸ್ತಾವಿತ 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕಗಳನ್ನು ಅನುಷ್ಠಾನಗೊಳಿಸಲಾಗುವುದು. ಇದರಿಂದ ವರ್ಷಕ್ಕೆ 20ರಿಂದ 30 ಲಕ್ಷ ಮೆಟ್ರಿಕ್ ಟನ್‌ ಆಹಾರ ಸಂರಕ್ಷಣಾ ಸಾಮರ್ಥ್ಯದ ನಿರೀಕ್ಷೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಮೂರು ತಿಂಗಳಲ್ಲಿ ಶಾಸಕರ ಪಕ್ಷಾಂತರದ ಬಗ್ಗೆ ಕ್ರಮ ತೆಗೆದುಕೊಳ್ಳಿ – ತೆಲಂಗಾಣ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಸೂಚನೆ

    ಖಾಸಗಿ ವಲಯದಡಿ ಪ್ರಸ್ತಾವಿತ 100 ಆಹಾರ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಯಿಂದ ಆಹಾರ ಮಾದರಿ ಪರೀಕ್ಷೆ ಸುಲಲಿತವಾಗಲಿದೆ. ಅಲ್ಲದೇ, ಸುಧಾರಿತ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದರಿಂದಾಗಿ ಆಹಾರ ಸುರಕ್ಷತೆ ಹಾಗೂ ಸುರಕ್ಷಿತ ಆಹಾರಗಳ ಪೂರೈಕೆಗೆ ಹೆಚ್ಚು ಹೆಚ್ಚು ನೆರವಾಗಲಿದೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

  • ಹುಬ್ಬಳ್ಳಿಗೆ 10 ಹೊಸ ಮೆಮು ರೈಲು ಸಂಚಾರ ಆರಂಭಿಸಿ: ಜೋಶಿ ಮನವಿ

    ಹುಬ್ಬಳ್ಳಿಗೆ 10 ಹೊಸ ಮೆಮು ರೈಲು ಸಂಚಾರ ಆರಂಭಿಸಿ: ಜೋಶಿ ಮನವಿ

    * ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪ್ರಹ್ಲಾದ್‌ ಜೋಶಿ ಮನವಿ
    * ಹುಬ್ಬಳ್ಳಿಯಲ್ಲಿ ಮತ್ತೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕೆ ಒತ್ತಾಯ

    ನವದೆಹಲಿ: ಹುಬ್ಬಳ್ಳಿ-ಧಾರವಾಡ ಅಕ್ಕಪಕ್ಕದ ಪಟ್ಟಣಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ 10 ಹೊಸ ಮೆಮು ರೈಲುಗಳ ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರಲ್ಲಿ ಪ್ರಹ್ಲಾದ್‌ ಜೋಶಿ (Pralhad Joshi) ಮನವಿ ಮಾಡಿದರು.

    ನವದೆಹಲಿಯಲ್ಲಿ ಬುಧವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿ ಮಾಡಿದ ಧಾರವಾಡ ಸಂಸದ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ, ಪಟ್ಟಣ ಹಾಗೂ ಗ್ರಾಮಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರಿಗಾಗಿ 10 ಹೊಸ ಮೆಮು (MEMU) ರೈಲುಗಳ ಸಂಚಾರ ಆರಂಭಿಸಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ನ್ಯಾ. ವರ್ಮಾ ನಡೆ ವಿಶ್ವಾಸ ಮೂಡಿಸುವುದಿಲ್ಲ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

    ಹುಬ್ಬಳ್ಳಿ ಉತ್ತರ ಕರ್ನಾಟಕದ ವಾಣಿಜ್ಯ ರಾಜಧಾನಿ ಆಗಿದ್ದು, ಅಕ್ಕಪಕ್ಕದ ಪಟ್ಟಣ, ಗ್ರಾಮೀಣ ಪ್ರದೇಶಗಳಿಂದ ಪ್ರತಿನಿತ್ಯ ಲಕ್ಷಾಂತರ ಮಂದಿ ಸಂಚರಿಸುತ್ತಿರುತ್ತಾರೆ. ಹಾಗಾಗಿ, ಇಲ್ಲಿ ಹೊಸ ಮೆಮು (ಮೇನ್‌ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌) ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

    ಪ್ಯಾಸೆಂಜರ್‌ ರೈಲು ಸಹ ಓಡಿಸಲು ಮನವಿ: ಹುಬ್ಬಳ್ಳಿ ನಗರಕ್ಕೆ ಶಿಕ್ಷಣ, ಉದ್ಯೋಗ, ವ್ಯಾಪಾರ, ಆಸ್ಪತ್ರೆಗಳಿಗಾಗಿ ಅಸಂಖ್ಯಾತ ಜನ ಸಂಚರಿಸುತ್ತಾರೆ. ದಿನನಿತ್ಯದ ರೈಲುಗಳು ಭರ್ತಿಯಾಗಿರುತ್ತವೆ. ಹಾಗಾಗಿ, ಜನ ಸಂಚಾರ ಅನುಕೂಲಕ್ಕೆ ಮೆಮು ರೈಲುಗಳು ಅಗತ್ಯತೆಯಿದೆ. ಈ ಭಾಗದಲ್ಲಿ ರಸ್ತೆ ಸಾರಿಗೆಗಿಂತ ರೈಲು ಸಂಚಾರ ಅನುಕೂಲಕರವಾಗಿ ಪರಿಣಮಿಸಿದ್ದು, ಕೋವಿಡ್‌ ವೇಳೆ ಸ್ಥಗಿತಗೊಳಿಸಿದ್ದ ಅನೇಕ ಪ್ಯಾಸೆಂಜರ್‌ ರೈಲು ಸಂಚಾರ ಸಹ ಆರಂಭಿಸುವಂತೆ ಸಚಿವ ಜೋಶಿ ಮನವಿ ಮಾಡಿದರು.

    ಬೆಂಗಳೂರು ರೈಲು ನಿಲ್ದಾಣ ಬಿಟ್ಟರೆ ಹುಬ್ಬಳ್ಳಿಯೇ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾಗಿದ್ದು, ನಿತ್ಯ ಕಡಿಮೆ ಎಂದರೂ 50 ಸಾವಿರಕ್ಕೂ ಅಧಿಕ ಪ್ರಯಾಣಿಕರಿಂದ ತುಂಬಿರುತ್ತದೆ. ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿ ಹೊಂದಿರುವ ಹುಬ್ಬಳ್ಳಿ ನಿಲ್ದಾಣ ಭಾರತೀಯ ರೈಲ್ವೆಯಲ್ಲಿ ಮಹತ್ತರವಾಗಿದ್ದು, ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿವರ್ತಿಸುವುದು ಅತ್ಯಗತ್ಯವಾಗಿದೆ ಎಂದು ಅಶ್ವಿನಿ ವೈಷ್ಣವ್‌ ಅವರಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 8,280 ಎಕರೆ ಭೂಸ್ವಾಧೀನ ಬಾಕಿ – ಅಶ್ವಿನಿ ವೈಷ್ಣವ್

    ಮತ್ತೊಂದು ರೈಲ್ವೆ ಬ್ರಿಡ್ಜ್‌ ನಿರ್ಮಾಣಕ್ಕೆ ಬೇಡಿಕೆ: ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟದ ರೈಲ್ವೆ ನಿಲ್ದಾಣವಾಗಿ ಪರಿವರ್ತಿಸುವ ಬಗ್ಗೆ ಸಹ ಮಹತ್ವದ ಚರ್ಚೆ ನಡೆಸಿದರು. ಅಲ್ಲದೇ, ನಗರದ ಗದಗ ರಸ್ತೆ ಮೇಲಿರುವ ಡಬಲ್‌ ಲೈನ್ ರೈಲ್ವೆ ಬ್ರಿಡ್ಜ್‌ನ್ನು 4 ಲೈನ್‌ಗೆ ವಿಸ್ತರಿಸುವ ಸಲುವಾಗಿ ಇನ್ನೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಮುಂದಿಟ್ಟರು ಸಚಿವ ಪ್ರಹ್ಲಾದ್‌ ಜೋಶಿ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಹ ಈ ಬಗ್ಗೆ ಗಮನ ಸೆಳೆದರು.

    ಉತ್ತರ ಕರ್ನಾಟಕದ ರೈಲ್ವೆ ಪ್ರತಿಯೊಂದು ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

    ಹುಬ್ಬಳ್ಳಿ ಆಧಾರ್‌ ಸೇವಾ ಕೇಂದ್ರ ಸ್ಥಾಪನೆಗೆ ಮನವಿ: ಇದೇ ವೇಳೆ ಕೇಂದ್ರ ಸಚಿವ ಜೋಶಿ ಅವರು, ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ʼಆಧಾರ್ ಸೇವಾ ಕೇಂದ್ರʼವಾಗಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದರು. ವಾಣಿಜ್ಯ ನಗರಿ ಹುಬ್ಬಳ್ಳಿ ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿದ್ದು, ಇಲ್ಲೀಗ ಆಧಾರ್‌ ಸೇವಾ ಕೇಂದ್ರ ಅತ್ಯಂತ ಅವಶ್ಯಕವಾಗಿದೆ. ದೇಶಾದ್ಯಂತ ಪ್ರತಿ ಜಿಲ್ಲಾವಾರು ಕೇಂದ್ರದ ಜೊತೆಗೆ ಪ್ರಮುಖ ನಗರಗಳಲ್ಲಿ ಸಹ ಈ ಕೇಂದ್ರಗಳನ್ನು ಮುಂದುವರಿಸುವಂತೆ ಕೋರಿದರು. ಜಿಲ್ಲಾ ಕೇಂದ್ರದ ಜತೆ ಹುಬ್ಬಳ್ಳಿ ಮತ್ತಿತರ ಪ್ರಮುಖ ನಗರಗಳಲ್ಲಿ ಆಧಾರ್‌ ಸೇವಾ ಕೇಂದ್ರಗಳನ್ನು ಮುಂದುವರಿಸುವಂತೆ ಟೆಂಡರ್ ಕರೆಯಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ಕರ್ನಾಟಕದಲ್ಲಿ ರಸಗೊಬ್ಬರದ ಅಭಾವವಿಲ್ಲ: ಪ್ರಹ್ಲಾದ್‌ ಜೋಶಿ

    ಕರ್ನಾಟಕದಲ್ಲಿ ರಸಗೊಬ್ಬರದ ಅಭಾವವಿಲ್ಲ: ಪ್ರಹ್ಲಾದ್‌ ಜೋಶಿ

    ನವದೆಹಲಿ: ಕೇಂದ್ರ ಸರ್ಕಾರ ರಸಗೊಬ್ಬರ ಕಳುಹಿಸಿಲ್ಲ ಎಂಬ ರಾಜ್ಯ ಸರ್ಕಾರದ ಟೀಕೆಯ ಬೆನ್ನಲ್ಲೇ ಕರ್ನಾಟಕದಲ್ಲಿ (Karnataka) ರಸಗೊಬ್ಬರದ ಅಭಾವವಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದ್ದಾರೆ.

    ಕೇಂದ್ರ ಸರ್ಕಾರದಿಂದ ಸರಬರಾಜು ಆಗಿರುವ ರಸಗೊಬ್ಬರಗಳಲ್ಲಿ 1.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಸಂಗ್ರಹಣೆ ಮಾಡಲಾಗಿದೆ. ರೈತರಿಗೆ (Farmers) ಬೇಕಾದ ರಸಗೊಬ್ಬರಗಳನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ನೀಡಲಾಗಿದ್ದು, ಸರಿಯಾದ ಕ್ರಮದಲ್ಲಿ ಬಳಸಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಧಮ್ಮು-ತಾಕತಿದ್ರೆ ಕೇಂದ್ರದಿಂದ ಯೂರಿಯಾ ಕೊಡಿಸಲಿ – ಚಲುವರಾಯಸ್ವಾಮಿ

    ರಸಗೊಬ್ಬರದ ಬೇಡಿಕೆ ಹೆಚ್ಚಿದ್ದು, ಅಗತ್ಯ ರಸಗೊಬ್ಬರಗಳನ್ನು ಕರ್ನಾಟಕಕ್ಕೆ ಸರಬರಾಜು ಮಾಡುವಂತೆ ಕೋರಿ ಇಂದು ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಾದ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.  ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ರದ್ದು

    ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರೈತರ ಬೆನ್ನೆಲುಬಾಗಿ ನಿಂತಿದ್ದು, ಎಂತಹದ್ದೇ ಸಮಯದಲ್ಲೂ ರೈತರ ಹಿತ ಕಾಪಾಡುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಾದ ಜೆಪಿ ನಡ್ಡಾ ಅವರಿಗೆ ಅನಂತ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಜೋಶಿ ಬರೆದಿದ್ದಾರೆ.

  • ರಾಜ್ಯದ ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ಪೂರೈಕೆಯಾಗಿದೆ, ಸಿಎಂ ಬರೀ ಸುಳ್ಳು ಹೇಳ್ತಿದ್ದಾರೆ – ಜೋಶಿ ಕಿಡಿ

    ರಾಜ್ಯದ ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ಪೂರೈಕೆಯಾಗಿದೆ, ಸಿಎಂ ಬರೀ ಸುಳ್ಳು ಹೇಳ್ತಿದ್ದಾರೆ – ಜೋಶಿ ಕಿಡಿ

    -ರೈತರ ಹಿತದೃಷ್ಟಿಯಿಂದ 8.73 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ

    ನವದೆಹಲಿ: ಕರ್ನಾಟಕಕ್ಕೆ (Karnataka) ರಸಗೊಬ್ಬರ ಪೂರೈಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬರೀ ಸುಳ್ಳು ಹೇಳುತ್ತಾ, ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕಿಡಿಕಾರಿದ್ದಾರೆ.

    ರಾಜ್ಯದಲ್ಲಿ ಮುಂಗಾರು ಹಂಗಾಮಿಗಾಗಿ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾದ ಅವಶ್ಯಕತೆಯಿದೆ ಎಂದು ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು. ಆದರೆ, ಕೇಂದ್ರ ರಸಗೊಬ್ಬರ ಇಲಾಖೆ ರಾಜ್ಯದ ರೈತರ ಹಿತದೃಷ್ಟಿಯಿಂದ ಸಕಾಲಿಕವಾಗಿ 8.73 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ – ಸೂಲಿಬೆಲೆ ವಿರುದ್ಧ ದಾಖಲಾದ ಕೇಸ್‌ ರದ್ದು

    ರಾಜ್ಯದಲ್ಲಿ ಪ್ರಸ್ತುತ 7.08 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಮಾರಾಟ ದಾಖಲಾಗಿದೆ. ಕೇಂದ್ರ ಸರ್ಕಾರ ಸಕಾಲಕ್ಕೆ ಸಮರ್ಪಕವಾಗಿ ರಸಗೊಬ್ಬರ ಪೂರೈಸಿದ್ದರಿಂದಲೇ ಇಷ್ಟೊಂದು ಪ್ರಮಾಣದಲ್ಲಿ ರಸಗೊಬ್ಬರ ವಹಿವಾಟು ನಡೆದಿದೆ. ವಾಸ್ತವ ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಅವರು ವಿನಾಕಾರಣ ಕೇಂದ್ರದ ಮೇಲೆ ವೃಥಾ ಆರೋಪ ಮಾಡುತ್ತಿರುವುದು ನಿಜಕ್ಕೂ ಶೋಚನೀಯ ಎಂದು ಖಂಡಿಸಿದ್ದಾರೆ.

    ಸಿಎಂಗೆ ಸುಳ್ಳು ಹೇಳೋದೇ ಕಾಯಕವಾಗಿದೆ:
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೀ ಸುಳ್ಳು ಹೇಳುವುದೇ ಒಂದು ಕಾಯಕವಾಗಿ ಬಿಟ್ಟಿದೆ. ಯಾವತ್ತೂ ಮಾತಿಗೆ ಮೊದಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನೇ ಚಟವಾಗಿಸಿಕೊಂಡಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಯೂರಿಯಾ ಅಭಾವವಿಲ್ಲ ಎಂದಿದ್ದಾರೆ ಚಲುವರಾಯಸ್ವಾಮಿ:
    ರಾಜ್ಯದಲ್ಲಿ ಯೂರಿಯಾ ಅಭಾವವಿಲ್ಲ. ಹೆಚ್ಚಿನ ಸಂಗ್ರಹಣೆಯಿದೆ ಎಂದು ಖುದ್ದು ಕೃಷಿ ಸಚಿವ ಚಲುವರಾಯಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿಎಂ ಆರೋಪ ಅಕ್ಷಮ್ಯ:
    ರಸಗೊಬ್ಬರ ಪೂರೈಕೆ, ದಾಸ್ತಾನು ವಿಷಯದಲ್ಲಿ ಕೃಷಿ ಸಚಿವರೇ ಸತ್ಯ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದಾರೆ. ಆದರೆ, ಸಿಎಂ ಮಾತ್ರ ಅವಾಸ್ತವಿಕ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಕುರ್ಚಿ ಗಲಾಟೆ, ಹದಗೆಟ್ಟ ರಾಜ್ಯದ ಆರ್ಥಿಕ ಸ್ಥಿತಿ ಮತ್ತು ತಮ್ಮ ಸರ್ಕಾರದ ದುರಾಡಳಿತವನ್ನೆಲ್ಲ ಮರೆಮಾಚಲು ಹೀಗೆ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದು ಅಕ್ಷಮ್ಯ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಪ್ರಥಮ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಣೆ

  • ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲ ಎಂದಿದ್ದು ಗೋವಾ ಸಿಎಂ ವೈಯಕ್ತಿಕ ಹೇಳಿಕೆ – ಜೋಶಿ ಸ್ಪಷ್ಟನೆ

    ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲ ಎಂದಿದ್ದು ಗೋವಾ ಸಿಎಂ ವೈಯಕ್ತಿಕ ಹೇಳಿಕೆ – ಜೋಶಿ ಸ್ಪಷ್ಟನೆ

    ನವದೆಹಲಿ: ಮಹದಾಯಿ ಯೋಜನೆಗೆ (Mahadayi Scheme) ಕೇಂದ್ರ ಅನುಮತಿ ನೀಡುವುದಿಲ್ಲ ಎಂಬುದು ಗೋವಾ ಸಿಎಂ (Goa CM) ವೈಯಕ್ತಿಕ ಹೇಳಿಕೆ. ಇದು ಕೇಂದ್ರದ ಅಧಿಕೃತ ಹೇಳಿಕೆಯಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಸ್ಪಷ್ಟನೆ ನೀಡಿದ್ದಾರೆ.

    ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲವೆಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವುದು ಅವರ ವೈಯುಕ್ತಿಕ ಅನಿಸಿಕೆಯಾಗಿದೆ. ಕೇಂದ್ರ ಸರ್ಕಾರ ಹಾಗೆ ಹೇಳಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲವೆಂದು ಆಕ್ಷೇಪಿಸಿದ್ದಾರೆ.ಇದನ್ನೂ ಓದಿ: ಹೊಳೆನರಸೀಪುರ‌ ರೇಪ್ ಕೇಸ್ – 2ನೇ ಬಾರಿಯೂ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

    ಕೇಂದ್ರ ಸರ್ಕಾರ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡುವುದಿಲ್ಲ. ಮೂರೂ ರಾಜ್ಯಗಳಿಗೆ ಹೊಂದಿಕೆ ಆಗುವಂತೆಯೇ ನಿರ್ಧಾರ ತೆಗೆದುಕೊಳ್ಳಲಿದೆ. ಅದರಲ್ಲೂ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

    ಕಳಸಾ ಬಂಡೂರಿ ಅನುಷ್ಠಾನಕ್ಕೆ ಸಿದ್ಧ:
    ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಭಾಗದ ಜನರ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಕಳಸಾ ಬಂಡೂರಿ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ. ಕರ್ನಾಟಕದ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಅವರು ನಿಷ್ಪಕ್ಷಪಾತ ನಡೆ ಅನುಸರಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಕಿಲ್ಲ ಎಂದಿದ್ದಾರೆ.

    ರಾಜಕೀಯ ಬಣ್ಣ ಬೇಡ:
    ಮಹದಾಯಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಬೇಕಿದೆ. ವಾದ-ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ಗೋವಾ ಸಿಎಂ ಹೇಳಿಕೆ ವೈಯುಕ್ತಿಕವಾಗಿದ್ದು, ಇದಕ್ಕೆ ರಾಜಕೀಯ ಬಣ್ಣ ಹಚ್ಚಬಾರದು ಎಂದು ಮನವಿ ಮಾಡಿದ್ದಾರೆ.

    ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ನನ್ನನ್ನೂ ಭೇಟಿಯಾಗಿ `ಜಲಶಕ್ತಿ ಸಚಿವರು ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿಗೆ ಬೆಂಬಲವಾಗಿದ್ದಾರೆ ಎಂದಿದ್ದಾರೆ. ಮಾಧ್ಯಮಗಳ ಮುಂದೆಯೂ ಅದನ್ನೇ ಹೇಳಿದ್ದಾರೆಂದು ತಿಳಿಸಿದ್ದಾರೆ.ಇದನ್ನೂ ಓದಿ: ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ

  • ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ರೂ. ಉಳಿತಾಯ: ಪ್ರಹ್ಲಾದ್ ಜೋಶಿ

    ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ರೂ. ಉಳಿತಾಯ: ಪ್ರಹ್ಲಾದ್ ಜೋಶಿ

    – `ಮೆರ್ಕಾಮ್ ಇಂಡಿಯಾ’ ಶೃಂಗಸಭೆಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ
    – ದೇಶದಲ್ಲಿ 14.9 ಬಿಲಿಯನ್ ಡಾಲರ್ ಪಳೆಯುಳಿಕೆ ಇಂಧನ ಆಮದು ತಗ್ಗಿದೆ
    – ಪಿಎಂ ಸೂರ್ಯಘರ್ ಯೋಜನೆಯಡಿ 58.7 ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕಾರ

    ನವದೆಹಲಿ: ನವೀಕರಿಸಬಹುದಾದ ಇಂಧನ ವಲಯಕ್ಕೆ ಉತ್ತೇಜನ ನೀಡಿದ್ದರ ಫಲವಾಗಿ 4 ಲಕ್ಷ ಕೋಟಿ ರೂ. ವೆಚ್ಚ ಉಳಿತಾಯ ಆಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದರು.

    ನವದೆಹಲಿಯಲ್ಲಿ (New Dehi) ನಡೆದ `ಮೆರ್ಕಾಮ್ ಇಂಡಿಯಾ’ (the Mercom India) ನವೀಕರಿಸಬಹುದಾದ ಶೃಂಗಸಭೆಯನ್ನು (Renewables Summit 2025) ಉದ್ದೇಶಿಸಿ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ ವಿಸ್ತರಣೆಗೆ ಆದ್ಯತೆ ನೀಡಿದ್ದರಿಂದ ಪಳೆಯುಳಿಕೆ ಇಂಧನ ಆಮದು ತಗ್ಗಿದೆ. ಅಲ್ಲದೇ, ಪರಿಸರ ಮಾಲಿನ್ಯ ಸಂಬಂಧಿತ ವೆಚ್ಚವನ್ನು ಸಹ ತಪ್ಪಿಸಿದೆ. ಈ ಮೂಲಕ ಸುಮಾರು 4 ಲಕ್ಷ ಕೋಟಿ ರೂ. ಆರ್ಥಿಕ ಉಳಿತಾಯಕ್ಕೆ ನೆರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಂಸತ್‌ ಕಚೇರಿಯಲ್ಲಿ ನಿತಿನ್‌ ಗಡ್ಕರಿ ಭೇಟಿಯಾದ ಕ್ಯಾ.ಬ್ರಿಜೇಶ್‌ ಚೌಟ

    ಅಂತರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಅಧ್ಯಯನದ ಪ್ರಕಾರ ನವೀಕರಿಸಬಹುದಾದ ಇಂಧನದಿAದಾಗಿ ದೇಶದಲ್ಲಿ 14.9 ಬಿಲಿಯನ್ ಡಾಲರ್ ಪಳೆಯುಳಿಕೆ ಇಂಧನ ಆಮದು ಕಡಿಮೆಯಾಗಿದೆ. 410.9 ಮಿಲಿಯನ್ ಟನ್ CO₂ ಹೊರಸೂಸುವಿಕೆ ಸಹ ತಗ್ಗಿದೆ ಮತ್ತು 31.7 ಬಿಲಿಯನ್ ಡಾಲರ್ ಮೌಲ್ಯದಷ್ಟು ಆರೋಗ್ಯ ಮತ್ತು ವಾಯುಮಾಲಿನ್ಯದಿಂದ ಪ್ರಯೋಜನವಾಗಿದೆ ಎಂದರು. ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ – ಸದನದಲ್ಲಿ ಅನುಮೋದನೆ

    33,000 ಕೋಟಿ ರೂ. ಹೂಡಿಕೆ ನಿರೀಕ್ಷೆ:
    ಪ್ರಧಾನಮಂತ್ರಿ ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆಯಡಿ 58.7 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಈಗಾಗಲೇ 17.2 ಲಕ್ಷ ಘಟಕಗಳು ಪೂರ್ಣಗೊಂಡಿವೆ. ಈ ವಲಯದಲ್ಲಿ 30 ಗಿಗಾವ್ಯಾಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ (BESS)ಗಾಗಿ 5,400 ಕೋಟಿ ರೂ. ಕಾರ್ಯಸಾಧ್ಯತಾ ಅಂತರ ನಿಧಿ (VGF) ಯೋಜನೆ ಸಹ ಆರಂಭಿಸಲಾಗಿದೆ. ಇದು 33,000 ಕೋಟಿ ರೂ. ಅಷ್ಟು ಹೂಡಿಕೆ ಆಕರ್ಷಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು.

    2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಗ್ರ ಪ್ರಸರಣ ಯೋಜನೆ ಹಾಕಿಕೊಳ್ಳಲಾಗಿದೆ. ವಿದ್ಯುತ್ ಸಚಿವಾಲಯ, ಸಿಇಎ, ಸಿಟಿಯು ಮತ್ತು ಪವರ್‌ಗ್ರಿಡ್‌ನೊಂದಿಗೆ ಸಮನ್ವಯದಿಂದ ಯೋಜನೆ ರೂಪಿಸಲಾಗಿದೆ. 24,000 ಕೋಟಿ ರೂ. ವೆಚ್ಚದ `ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಯೋಜನೆ (PLI)’ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರಸ್ತೆ ಕುಸಿದು ಉಕ್ಕಿ ಹರಿದ ನೀರು – ಮಾನವ ಸೇತುವೆ ನಿರ್ಮಿಸಿ 35 ಶಾಲಾ ಮಕ್ಕಳನ್ನು ರಸ್ತೆ ದಾಟಿಸಿದ ಗ್ರಾಮಸ್ಥರು

    8.6 ಲಕ್ಷ ಟನ್ ಹಸಿರು ಹೈಡ್ರೋಜನ್‌ಗೆ ಅನುಮೋದನೆ:
    ಎಂಎಸ್‌ಎಂಇ ಮತ್ತು ನವೋದ್ಯಮಗಳಿಗೆ ಶುದ್ಧ ಇಂಧನ ನಾವೀನ್ಯತೆಗಾಗಿ ಅಧಿಕಾರ ನೀಡಲಾಗುತ್ತಿದೆ. ಅಲ್ಲದೇ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ 19,744 ಕೋಟಿ ರೂ. ವೆಚ್ಚ, 3,000 ಮೆಗಾವ್ಯಾಟ್ ಎಲೆಕ್ಟ್ರೋಲೈಸರ್ ಸಾಮರ್ಥ್ಯದ ಹಂಚಿಕೆ ಮತ್ತು ವರ್ಷಕ್ಕೆ 8.6 ಲಕ್ಷ ಟನ್‌ಗೂ ಹೆಚ್ಚು ಹಸಿರು ಹೈಡ್ರೋಜನ್ ಉತ್ಪಾದನೆ ಅನುಮೋದನೆಯೊಂದಿಗೆ ವೇಗದ ಪ್ರಗತಿ ಸಾಧಿಸುತ್ತಿದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಭಾರತ ನವೀಕರಿಸಬಹುದಾದ ಇಂಧನ ವಲಯದಲ್ಲಿ ತನ್ನ ಬದ್ಧತೆ ಪೂರೈಸುತ್ತಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿಯತ್ತ ಸಾಗಿದೆ. ಕಾಲಮಿತಿಗಿಂತ 5 ವರ್ಷ ಮೊದಲೇ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಉತ್ಪಾದನೆ ಸಾಮರ್ಥ್ಯ ಸಾಧಿಸಿದೆ. ಪ್ರಸ್ತುತ 245 ಗಿಗಾವ್ಯಾಟ್ ಮೀರಿದೆ. 116 ಗಿಗಾವ್ಯಾಟ್ ಸೌರ ವಿದ್ಯುತ್ ಮತ್ತು 52 ಗಿಗಾವ್ಯಾಟ್ ಪವನ ವಿದ್ಯುತ್ ಉತ್ಪಾದನೆ ಸಹ ಸಾಧಿಸಲಾಗಿದೆ ಎಂದು ವಿವರಿಸಿದರು.