ನವದೆಹಲಿ: ರಾಮನವಮಿ ಹಿನ್ನೆಲೆ ಸಂಸತ್ ಅಧಿವೇಶನವನ್ನು ಮುಂದೂಡಲು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷದ ಸಂಸದರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಸ್ಪೀಕರ್ ಜೊತೆಗೆ ಚರ್ಚಿಸಿ ಅನಿರ್ದಿಷ್ಟಾವಧಿಗೆ ಕಲಾಪಗಳನ್ನು ಮುಂದೂಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಬಾರಿಯ ಅಧಿವೇಶನ ಸಮರ್ಪಕವಾಗಿ ನಡೆದಿದೆ. ಲೋಕಸಭೆ 128% ರಷ್ಟು, ರಾಜ್ಯಸಭೆ 98% ರಷ್ಟು ನಡೆದಿದೆ. ಕಲಾಪಗಳಲ್ಲಿ ಎಲ್ಲಾ ಸಚಿವಾಲಯಗಳ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಒಟ್ಟು 13 ಬಿಲ್ ಮಂಡನೆ ಮಂಡನೆ ಮಾಡಲಾಗಿದೆ. ಲೋಕಸಭೆಯಲ್ಲಿ 12 ಬಿಲ್ ಮಂಡಿಸಲಾಗಿದೆ. ರಾಜ್ಯಸಭೆಯಲ್ಲಿ ಒಂದು ಬಿಲ್ ಮಂಡಿಸಲಾಗಿದೆ. ಇದಲ್ಲದೆ ಫೈನಾನ್ಸ್ ಬಿಲ್ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.
ಇದು ಸಾಲದು ಎನ್ನುವಂತೆ ಉಕ್ರೇನ್ ಪರಿಸ್ಥಿತಿ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ನಡೆಲಾಗಿದೆ. ಪ್ರತಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಬೆಲೆ ಏರಿಕೆ ಬಗ್ಗೆಯೂ ಸರ್ಕಾರ ಉತ್ತರ ನೀಡಿದೆ. ಆದರೆ ವಿಪಕ್ಷ ಸರ್ಕಾರ ಓಡಿ ಹೋಗುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ ಎಂದು ಜೋಶಿ ಹೇಳಿದರು. ಇದನ್ನೂ ಓದಿ: ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್-ಕಿಸ್ ಮಾಡುವಂತಿಲ್ಲ; ಕೊರೊನಾ ಟಫ್ ರೂಲ್ಸ್
ಧಾರವಾಡ: ಸಿದ್ದರಾಮಯ್ಯ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ, ಹೀಗಾಗಿ ಸಿನಿಮಾ ನೋಡುವುದಿಲ್ಲ ಅಂತಾರೆ. ಬೇರೆ ಸಿನಿಮಾ ನೋಡೋಕೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧದಿಂದಲೇ ಸಿನಿಮಾ ಜನಪ್ರಿಯ ಆಗಿದೆ. ಸಿದ್ದರಾಮಯ್ಯ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ ಹೀಗಾಗಿ ಸಿನಿಮಾ ನೋಡಲ್ಲ ಎನ್ನುತ್ತಿದ್ದಾರೆ. ಬೇರೆ ಸಿನಿಮಾ ನೋಡಲು ಹೋಗುತ್ತಾರೆ. ಈ ಸಿನಿಮಾಗೆ ಇಂಗ್ಲೀಷ್ ಸಬ್ ಟೈಟಲ್ ಇದೆ. ಇಂಗ್ಲೀಷ್ ಬರೋಲ್ವಾ? ನಿಮಗೆ ಪಕ್ಕದಲ್ಲಿ ಓರ್ವ ಅನುವಾದಕರನ್ನು ಕುಳ್ಳಿರಿಸಿಕೊಂಡು ನೋಡಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಪೊಲೀಸ್‍ಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಬೆಂಗಳೂರಿನಲ್ಲಿ ಕಾಶ್ಮೀರಿ ಪಂಡಿತರ ಸರ್ವೆ ಈಗ ಆಗಿದೆ ಅಂತಾ ಮಾಹಿತಿ ಬಂದಿದೆ. ಅವರು ಬಯಸಿದಲ್ಲಿ ವಸತಿ ಕಲ್ಪಸಿ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡುತ್ತ ಬಂದಿದೆ. ಕಾಶ್ಮೀರ ಫೈಲ್ಸ್‌ಗೆ ವಿರೋಧ ಮಾಡೋದಕ್ಕೆ ಇದೇ ಕಾರಣ. 70 ವರ್ಷದಲ್ಲಿ 58 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಆಗ ತುಷ್ಟೀಕರಣ ರಾಜಕಾರಣ, ಆರ್ಟಿಕಲ್ 370, ಕಾಶ್ಮೀರಕ್ಕೆ 35ಎ ಕೊಟ್ಟಿದ್ದರು, ಇದನ್ನೆಲ್ಲ ಕೊಟ್ಟು ಭಾರತದ ಕಾನೂನು ನಡೆಯದಂತೆ ಮಾಡಿದ್ದರು. ಇದನ್ನೆಲ್ಲ ಮುಚ್ಚಿ ಹಾಕಲು ಕಾಶ್ಮೀರ ಫೈಲ್ಸ್ ಸಿನಿಮಾ ವಿರೋಧಿಸುತ್ತಿದ್ದಾರೆ. ಸಮಾಜ ಈಗ ಜಾಗೃತ ಆಗಿದೆ. ಆದರೂ ತುಷ್ಟೀಕರಣ ರಾಜಕಾರಣ ಬಿಡುತ್ತಿಲ್ಲ. ಹಿಂದುಗಳು, ಪಂಡಿತರ ಸರ್ವನಾಶ ಆದರೂ ಇವರಿಗೆ ಚಿಂತೆ ಇಲ್ಲ. ಅವರನ್ನು ಕೊಯ್ದು ಎರಡು ಭಾಗ ಮಾಡಿದರೂ ಅದನ್ನು ಮರಿಯಬೇಕು. ಆದರೆ ನಮಗೆ ಓಟ್ ಸಿಗಬೇಕು. ಇದೇ ಕಾಂಗ್ರೆಸ್ ನೀತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಶ್ವತ್ಥನಾರಾಯಣ ನಾನು ಅಣ್ಣ-ತಮ್ಮಂದಿರಂತೆ : ಆರ್.ಅಶೋಕ್
ನೀವು ಮೊದಲು ಸಿನಿಮಾ ನೋಡಿ, ನೋಡಿದ ಬಳಿಕ ತಪ್ಪಾಗಿದೆ ಅಂತಾ ಹೇಳಿ. ಆಗ ಜನ ಕ್ಷಮಿಸುತ್ತಾರೆ. ಕಾಶ್ಮೀರ ದೌರ್ಜನ್ಯ ವೇಳೆ ಬಿಜೆಪಿ ಸರ್ಕಾರ ಇರಲಿಲ್ಲ. ವಿ.ಪಿ. ಸಿಂಗ್ ಸರ್ಕಾರ ಇತ್ತು ಅಲ್ಲಿ. ಮುಫ್ತಿ ಮಹಮ್ಮದ ಸಯೀದ್ ಗೃಹ ಮಂತ್ರಿಯಾಗಿದ್ದರು. ಆಗ ಯಾವುದೇ ಸಂಗತಿ ಹೊರ ಬರುತ್ತಿರಲಿಲ್ಲ. ಆಗ ನಾವು ಸರ್ಕಾರದ ಭಾಗ ಆಗಿರಲಿಲ್ಲ, ಹೊರಗಿನಿಂದ ಬೆಂಬಲ ಕೊಟ್ಟಿದ್ದು. ಆ ಸರ್ಕಾರ ಹಿಂದೂ ವಿರೋಧಿ ಅಂತಾ ಪರಿವರ್ತನೆ ಆಯ್ತು. ಹೀಗಾಗಿ ನಾವು ಬೆಂಬಲ ವಾಪಸ್ ಪಡೆದುಕೊಂಡಿದ್ದು ಎಂದರು. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ
ಬೆಂಗಳೂರು: ಮೋದಿ ಪ್ರಧಾನಿಯಾದಾಗಿನಿಂದ ದೇಶದ ಘನತೆ ಕಮ್ಮಿಯಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ದದಲ್ಲಿ ಸಾವನ್ನಪ್ಪಿದ ಕನ್ನಡಿಗ ನವೀನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿಗಳು ವಿದ್ಯಾರ್ಥಿಗಳನ್ನು ಪ್ರೇರಪಿಸಬೇಕು. ಆದರೆ ಪ್ರಧಾನಿಗಳ ಮಾತು ಶೋಭೆ ತರುತ್ತದೇಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್
ಪಿಯುಸಿಯಲ್ಲಿ ನವೀನ್ 94% ಮಾಕ್ರ್ಸ್ ತೆಗೆದುಕೊಂಡಿದ್ದರು. ಯಾರು 85-90% ತಗೋತಾರೆ ಅವರ ಜೀವನದ ಬೆಲೆ ಹೆಚ್ಚಾ? ಅಥವಾ ಯಾರು ಕಡಿಮೆ ಮಾಕ್ರ್ಸ್ ತಗೋತಾರೆ ಅವರ ಜೀವನದ ಬೆಲೆ ಕಡಿಮೆಯೇ ಎಂದು ಪ್ರಶ್ನಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿ ಕಾರಿದರು.
ಇದು ಇಂಟೆಲಿಜೆನ್ಸ್ ವೈಫಲ್ಯ ಅಲ್ವಾ? ಉಕ್ರೇನ್‍ನಲ್ಲಿ ಇನ್ನೂ ಅದೇಷ್ಟೂ ವಿದ್ಯಾರ್ಥಿಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ನಮ್ಮ ರಾಜ್ಯ ಇನ್ನೂ ನಾಟಕವೇ ಮಾಡುತ್ತಿದೆ. ಉಕ್ರೇನ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಈಗಾಗಲೇ ಕ್ಲೋಸ್ ಮಾಡಲಾಗಿದೆ. ಆದರೂ ಇಲ್ಲಿಂದ ಹೋದ ನಾಲ್ಕು ಮಂತ್ರಿಗಳು ಯಾರ ಹತ್ತಿರ ಮಾತಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಈಗಾಗಲೇ ಪಾಕಿಸ್ತಾನದವರಿಗೆ ಸುರಕ್ಷಿತ ಮಾರ್ಗ ಸಿಕ್ಕಿದೆ. ನಮ್ಮ ದೇಶಕ್ಕೆ ಯಾಕೆ ಸಿಕ್ಕಿಲ್ಲ. ಆತಂಕದಲ್ಲಿ ಮನೆಗೆ ಹೋಗಬೇಕು ಅಂತ ಇರುವ ವಿದ್ಯಾರ್ಥಿಗಳ ಮುಂದೆ ಉದ್ದುದ್ದ ಭಾಷಣ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಭಾರತ್‍ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ
ಕೇಂದ್ರ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದೆ ಕೇವಲ ತಮಾಷೆ ನೋಡುತ್ತಿದೆ. ನಿಜವಾದ ನ್ಯಾಟೋ ಇಲ್ಲಿಯೇ ಇದೆ. ಕೇವಲ ವಿದ್ಯಾರ್ಥಿಗಳ ಲೆಕ್ಕ ಸಿಗುತ್ತಿದೆ. ಉಳಿದವರ ಕಥೆ ಏನು? ಕೇವಲ 10 ಜನ ವಿದ್ಯಾರ್ಥಿಗಳನ್ನು ಕರೆತಂದು ಬೆನ್ನು ಚಪ್ಪರಿಸಿಕೊಳ್ತಿದ್ದೀರಿ. ಸಾವಿರಾರು ಜನರನ್ನು ಅಲ್ಲಿಯೇ ಬಿಟ್ಟು ಬಂದಿದ್ದೀರಲ್ಲ ಅವರ ಕಥೆ ಏನು? ಹೀಗೆ ಮಾಡಿದರೆ ಭಾರತ ವಿಶ್ವ ಗುರು ಹೇಗೆ ಆಗುತ್ತದೆ. ಮೋದಿ ಬಂದಾಗಿನಿಂದ ದೇಶದ ಘನತೆ ಕಮ್ಮಿಯಾಗಿದೆ ಎಂದು ದೂರಿದರು.
ನೇಪಾಳವೂ ನಿಮ್ಮ ಮಾತು ಕೇಳಲ್ಲ ನೆನಪಿಡಿ, ಮುಂಚೆ ಅಕ್ಕ ಪಕ್ಕದ ದೇಶಗಳು ನಮ್ಮ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ್ದವು. ಈಗ ಆ ದೇಶಗಳೆಲ್ಲ ಚೈನಾ ಜೊತೆಗೆ ಸೇರಿಕೊಳ್ಳುತ್ತಿವೆ ಎಂದರು.
ಬೆಳಗಾವಿ: ಕರ್ನಾಟಕಕ್ಕೆ ಯುಪಿಎ ಸರ್ಕಾರದಲ್ಲಿ 8 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ 40 ಸಾವಿರಕ್ಕೂ ಅಧಿಕ ಕೋಟಿ ಅನುದಾನವನ್ನು ಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಸಣ್ಣ ಕಾಲಘಟ್ಟದಲ್ಲಿ ಆಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಲಘಟ್ಟದಲ್ಲಿ ನಿತಿನ್ ಗಡ್ಕರಿ (Nitin Gadkari) ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿಗಳು ನಡೆಯುತ್ತಿವೆ ಎಂದರು.
ರಾಜ್ಯಕ್ಕೆ ಯಾರು ನೀಡದಷ್ಟು ಹೆದ್ದಾರಿ ಅಭಿವೃದ್ಧಿಗೆ ಅನುದಾನವನ್ನ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರು ನೀಡಿದ್ದಾರೆ. ಕೇಂದ್ರ ಸಚಿವ ಗಡ್ಕರಿ ಅವರಿಗೆ ನಾವು ಎದ್ದು ನಿಂತು ಧನ್ಯವಾದ ಅರ್ಪಿಸಬೇಕು. ಅಮೆರಿಕ ದೇಶ ಶ್ರೀಮಂತವಾಗಿ ಇರುವುದಕ್ಕೆ ಅಲ್ಲಿನ ರಸ್ತೆಗಳು ಕಾರಣ. ಹೀಗಾಗಿ ನಮ್ಮ ದೇಶದ ರಸ್ತೆಗಳನ್ನು ನಿತಿನ್ ಗಡ್ಕರಿ ಅವರು ಅಭಿವೃದ್ಧಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನ ಪರಿವರ್ತನೆ ಮಾಡುವ ಕೆಲಸವನ್ನ ಮಾಡಿದ್ದಾರೆ. 70 ವರ್ಷದಲ್ಲಿ 91 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗಿದೆ. ನರೇಂದ್ರ ಮೋದಿ ಮತ್ತು ನಿತಿನ್ ಗಡ್ಕರಿ ನೇತೃತ್ವದಲ್ಲಿ ಈವರೆಗೂ 1 ಲಕ್ಷಕ್ಕೂ ಅಧಿಕ ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.
ಯುಪಿಎ ಸರ್ಕಾರದಲ್ಲಿ ರಾಜ್ಯಕ್ಕೆ 8 ಸಾವಿರ ಕೋಟಿ ಕೊಟ್ಟಿದ್ದರು. ಇಂದು ಮೋದಿ ಸರ್ಕಾರ 40 ಸಾವಿರಕ್ಕೂ ಅಧಿಕ ಕೋಟಿ ಅನುದಾನವನ್ನ ಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಯಾವುದೇ ಒಬ್ಬ ಎಂಪಿ ಸಹ ಗಡ್ಕರಿ ಅವರಿಗೆ ನೀವು ಅನುದಾನ ಕೊಟ್ಟಿಲ್ಲ ಅಂತಾ ಹೇಳಿಲ್ಲ. ಹೀಗಾಗಿ ಗಡ್ಕರಿ ಅವರಿಗೆ ಗಡ್ಕರಿಯಲ್ಲ.. ರೋಡ್ಕರಿ ಅಂತಾ ಕರೆಯುತ್ತಾರೆ ಎಂದಿದ್ದಾರೆ.
ಬೆಳಗಾವಿ: ಸರ್ಕಾರ ಸಂಪೂರ್ಣ ವೆಚ್ಚ ಭರಿಸಿ ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳನ್ನು ಸಮೀಪದ ಏರ್‌ಪೋರ್ಟ್‍ಗೆ ಕರೆದುಕೊಂಡು ಬರುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಕ್ರೇನ್ ಅಕ್ಕಪಕ್ಕದ ದೇಶಗಳ ಜೊತೆ ಮಾತುಕತೆ ಮಾಡಲಾಗುತ್ತಿದೆ. ಅವರ ಸಹಯೋಗ ಸಹಕಾರ ಪಡೆದು ಕೆಲಸ ಮಾಡುತ್ತಿದ್ದೇವೆ. ದೆಹಲಿ, ಮುಂಬೈ ಯಾವುದಾದರೂ ಪ್ರಮುಖ ನಗರ ಆಯ್ಕೆ ಮಾಡಿ ಭಾರತ ಸರ್ಕಾರ ಸಂಪೂರ್ಣ ಮುಕ್ತವಾಗಿ ಕರೆದುಕೊಂಡು ಬರುತ್ತಿದೆ ಎಂದರು.
ಉಕ್ರೇನ್‍ನಲ್ಲಿ ಈಗಿನ ವಾಸ್ತವಿಕ ಚಿತ್ರಣ, ಅಲ್ಲಿಂದ ಬರುವ ವೀಡಿಯೋಗಳು ಎಲ್ಲಾ ಸತ್ಯವೋ ಸುಳ್ಳೋ ಎನ್ನುವುದು ಪರಿಶೀಲನೆ ಆಗುತ್ತಿಲ್ಲ. ಸದ್ಯ ಪ್ರಧಾನಿ ಮಾರ್ಗದರ್ಶನ ನೇತೃತ್ವದಲ್ಲಿ ಟಾಪ್ ಪ್ರಿಯಾರಿಟಿಯಿಂದ ನಾವು ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದೇವೆ ಎಂದು ಹೇಳಿದರು.
ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಿನ್ನೆ ಮೂರು ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ನಮ್ಮ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ಇದು ಅತ್ಯಂತ ಕಠಿಣ ಕ್ಲಿಷ್ಟಕರ ಸನ್ನಿವೇಶವಾಗಿದೆ. ಉಕ್ರೇನ್ ಜೊತೆಯೂ ನಮ್ಮ ಮಾತುಕತೆ ನಡೆಯುತ್ತಿದೆ. ನಾನು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ವಿದೇಶಾಂಗ ರಾಜ್ಯ ಸಚಿವರ ಜೊತೆ ಸಂಪರ್ಕದಲ್ಲಿ ಇದ್ದೇವೆ. ಕ್ಲಿಷ್ಟಕರ ಸನ್ನಿವೇಶ ಇರುವುದರಿಂದ ರಷ್ಯಾದ ಜೊತೆಯೂ ಮಾತನಾಡಬೇಕಾಗುತ್ತದೆ. ಉಕ್ರೇನ್ ಜೊತೆಯೂ ಮಾತನಾಡಬೇಕಾಗುತ್ತದೆ. ನಮ್ಮ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವುದು ನಮ್ಮ ಆದ್ಯತೆ. ಇದು ಬಹುದೊಡ್ಡ ಚಾಲೆಂಜ್ ಎಂದರು.
ಹಿಂದೆ ಇರಾಕ್ ಅಫ್ಘಾನಿಸ್ತಾನದಲ್ಲಿ ಸಮಸ್ಯೆಯಾದ ಸಂದರ್ಭದಲ್ಲಿ ಯಶಸ್ವಿಯಾಗಿ ಸ್ಥಳಾಂತರ ಮಾಡಿದ್ದೇವು. ಆದರೆ ಉಕ್ರೇನ್‍ನಲ್ಲಿ ನಿರೀಕ್ಷೆಗಿಂತ ಬೇಗ ಯುದ್ಧ ಶುರುವಾಗಿರುವುದರಿಂದ ಸಮಸ್ಯೆ ಆಗಿದೆ. ಭೌಗೋಳಿಕವಾಗಿ ಉಕ್ರೇನ್ ಬಹಳ ವಿಶಾಲವಾಗಿದೆ. ಇಂದೂ ಸಹ ವಿಮಾನಗಳು ಭಾರತಕ್ಕೆ ಬರುತ್ತಿವೆ. ಕೇಂದ್ರ ಸರ್ಕಾರ ಅತ್ಯಂತ ಸಂವೇದನಾಶೀಲವಾಗಿ ಪ್ರಯತ್ನ ಮಾಡ್ತಿದ್ದೇವೆ. ಕಷ್ಟ ಇದೆ ನಾವು ಏನು ಆಗೇ ಇಲ್ಲ ಅಂತಾ ಹೇಳುತ್ತಿಲ್ಲ. ಆದರೆ ಸುರಕ್ಷಿತವಾಗಿ ಮಕ್ಕಳನ್ನು ಕರೆತರಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಉಕ್ರೇನ್‍ನ ಕೀವ್, ಖಾರ್ಕೀವ್‍ನಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಪರದಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೀವ್ ಮತ್ತು ಖಾರ್ಕೀವ್‍ಗೆ ರೆಸ್ಕ್ಯೂಗೆ ರೀಚ್ ಆಗೋಕೆ ಆಗುತ್ತಿಲ್ಲ. ಉಕ್ರೇನ್ ಭಾರತೀಯ ರಾಯಭಾರಿ ಕಚೇರಿಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಹೆಚ್ಚಿನ ಫೋನ್‍ಗಳ ವ್ಯವಸ್ಥೆ ಮಾಡಿದ್ದೇವೆ. ಕೆಲವೊಂದು ವೇಳೆ ಎಲೆಕ್ಟ್ರಿಸಿಟಿ ಸೇರಿ ಇತರ ಸೌಲಭ್ಯ ಸಿಗಲ್ಲ. ನನಗೆ ಬಂದ ಫೋನ್‍ಗಳನ್ನು ಸ್ವೀಕರಿಸುತ್ತಿದ್ದೇನೆ. ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆ ತರುವುದು ನಮ್ಮ ಆದ್ಯತೆ ಎಂದರು. ಇದನ್ನೂ ಓದಿ:ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ
ಬಾಂಬ್ ದಾಳಿ, ಶೆಲ್ಲಿಂಗ್ ಆಗುತ್ತಿದೆ. ಎರಡೂ ಕಡೆ ಸೈನಿಕರು ಸುತ್ತವರೆದಿದ್ದಾರೆ. ಹೀಗಾಗಿ ರೀಚ್ ಆಗಲು ಆಗುತ್ತಿಲ್ಲ. ನಾವು ಅಲ್ಲಿ ರೀಚ್ ಆಗಲು ಆಗುತ್ತಿಲ್ಲ, ಇದು ಬಹಳ ಕಷ್ಟಕರ ಪರಿಸ್ಥಿತಿಯಾಗಿದೆ. ಕೆಲವು ಪೋಷಕರು ನನಗೂ ಫೋನ್ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ನಿನ್ನೆಯಿಂದ ನ್ಯೂಕ್ಲಿಯರ್ ಮಾತುಕತೆ ನಡೆಯುತ್ತಿದೆ. ಇದರಲ್ಲಿ ಸತ್ಯ ಎಷ್ಟು ಸುಳ್ಳು ಎಷ್ಟು ನನಗೆ ಗೊತ್ತಿಲ್ಲ. ಇದು ನಮಗೆ ಚಾಲೇಂಜಿಂಗ್ ಟೈಮ್. ನಮ್ಮ ನಾಗರಿಕರನ್ನು ಹೇಗಾದರೂ ಮಾಡಿ ಸುರಕ್ಷಿತವಾಗಿ ಕರೆತರೋದೆ ನಮ್ಮ ಪ್ರಥಮ ಆದ್ಯತೆಯಾಗಿದೆ. ಸ್ವತಃ ಪ್ರಧಾನಿ ಡೇ ಟು ಡೇ ಮಾನಿಟರ್ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ
ಮಂಡ್ಯ: ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿರುವ ಮಂಡ್ಯ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರ ನಿಯೋಜಿಸಿರುವ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಕರೆತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.
ಕೇವಲ ಮಂಡ್ಯ ಅಲ್ಲದೆ ರಾಜ್ಯದ 29 ಜಿಲ್ಲೆಗಳ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ:ಉಕ್ರೇನ್‍ನಲ್ಲಿ ಸಿಲುಕಿರುವ ತುಮಕೂರಿನ ಅಕ್ಕ, ತಮ್ಮ
ಈಗಾಗಲೇ ಉಕ್ರೇನ್‍ನಲ್ಲಿ ಭಾರತೀಯರನ್ನು ಪಾರುಮಾಡುವ ಸಾಹಸಗಳು ನಡೆಯುತ್ತಿವೆ. ರಷ್ಯಾ- ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರನ್ನು ರೊಮೇನಿಯಾಗೆ ಸ್ಥಳಾಂತರಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಕೆಲ ಭಾರತೀಯರನ್ನು ಏರ್‌ಲಿಫ್ಟ್ ಮೂಲಕ ವಾಪಸ್ ಕರೆಸಿಕೊಂಡಿದ್ದಾರೆ. ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರು ಇಲ್ಲಿಯವರೆಗೆ ತಮ್ಮ ಜೀವ ಉಳಿಸಿಕೊಳ್ಳಲು ಮೆಟ್ರೋ ಸುರಂಗಗಳಲ್ಲಿ ಅಡಗಿ ಕುಳಿತಿದ್ದಾರೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್ ಸೇನೆ
ಧಾರವಾಡ: ಶಾಲೆಗಳಿಗೆ ಕೇಸರಿ ಶಾಲು ಅಥವಾ ಹಿಜಬ್ ಹಾಕಿಕೊಂಡು ಬರುವುದು ಸರಿಯಲ್ಲ. ಇದರಿಂದ ಶಾಲೆಗಳಲ್ಲಿ ಧರ್ಮದ ಸಮಸ್ಯೆ ಆಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪ ರಾಷ್ಟ್ರ ಧ್ವಜ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಎರಡು ನೂರು ವರ್ಷಗಳ ನಂತರ ಕೇಸರಿ ಧ್ವಜ ಬರಹುದು ಎಂದು ಏನೋ ಹೇಳಿಕೆ ಕೊಟ್ಟಿದ್ದಾರೆ. ನನ್ನ ಪ್ರಕಾರ ನಮ್ಮ ರಾಷ್ಟ್ರ ಧ್ವಜ ಎರಡು ನೂರು ವರ್ಷದ ನಂತರ ಒಮ್ಮತದಿಂದ ಒಪ್ಪಿದ್ದೇವೆ. 75 ವರ್ಷದಿಂದ ತ್ರಿವರ್ಣ ಧ್ವಜದ ಜೊತೆ ನಮ್ಮ ಸಂಬಂಧ ಇದೆ. ಅದು ಗೌರವದ ಪ್ರತೀಕ, ಅದೇ ಇರುತ್ತದೆ. ಇದನ್ನೇ ಇಟ್ಟುಕೊಂಡು ವಿಧಾನ ಸಭೆ ಹಾಗೂ ಪರಿಷತ್ ಕಲಾಪ ಹಾಳು ಮಾಡುವಂತದ್ದು ಸರಿ ಅಲ್ಲ ಎಂದರು. ಇದನ್ನೂ ಓದಿ: ಇದು RSS ಕುತಂತ್ರ – ಈಶ್ವರಪ್ಪ ಪೆದ್ದ: ಸಿದ್ದರಾಮಯ್ಯ
ಕಾಂಗ್ರೆಸ್‍ಗೆ ಏನಾಗಿದೆ ಅಂದರೆ ನೆಪ ಸಿಕ್ಕಿದೆ. ನನಗೆ ಖಚಿತ ಮಾಹಿತಿ ಇದೆ. ಹಿಜಬ್ ವಿಚಾರದಲ್ಲಿ ಕಾಂಗ್ರೆಸ್‍ನಲ್ಲೇ ಎರಡು ಬಣ ಆಗಿದೆ. ಹಿಜಬ್ ಪರ ನಾವು ತೀರ್ಮಾನ ತೆಗೆದುಕೊಂಡರೆ ನಷ್ಟ ಹಾಗೂ ವಿರುದ್ಧ ತೀರ್ಮಾನ ತೆಗೆದುಕೊಂಡರೆ ಮುಸ್ಲಿಂ ಮತ ಹೋಗುತ್ತವೆ ಎಂಬ ಚಿಂತೆ ಅವರಿಗೆ ಇದೆ. ಈ ಕಾರಣದಿಂದ ಈ ವಿಷಯ ಇಟ್ಟುಕೊಂಡು ಅಗತ್ಯಕ್ಕಿಂತ ಹೆಚ್ಚು ವಿವಾದ ಮಾಡಿ ಕಲಾಪ ಹಾಳು ಮಾಡುತಿದ್ದಾರೆ. ಜನರ ದುಡ್ಡನ್ನು ವ್ಯರ್ಥ ಮಾಡುತ್ತಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೆನೆ ಎಂದು ಹೇಳಿದರು. ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್
ನೀವು ಚರ್ಚೆಗೆ ಬನ್ನಿ, ನಿಮಗೆ ಆಂತರಿಕ ಸಮಸ್ಯೆ ಮುಚ್ಚಿಕೊಳ್ಳಲು ಈಶ್ವರಪ್ಪನ ಹೇಳಿಕೆ ನೆಪವಾಗಿ ಇಟ್ಟುಕೊಂಡಿದ್ದೀರಾ. ಇದು ಜನರಿಗೆ ಮಾಡುವ ದ್ರೋಹ. ಕೇಸರಿ ಶಾಲು ಅಥವಾ ಹಿಜಬ್ ಹಾಕಿಕೊಂಡು ಬರುವುದು ಸರಿಯಲ್ಲ. ಇದರಿಂದ ಧರ್ಮದ ಸಮಸ್ಯೆ ಆರಂಭ ಆಗುತ್ತದೆ. ಶಾಲೆಗಳಲ್ಲಿ ಗ್ರೂಪ್‍ಗಳು ಬೆಳೆಯುತ್ತವೆ. ಇಂತಹ ಅತ್ಯಂತ ಘನಘೋರ ತಪ್ಪನ್ನು ದುರುದ್ದೇಶದಿಂದ ಮಾಡುತ್ತಿದ್ದಾರೆ ಎಂದರು.
ಕೆಲ ಪತ್ರಿಕೆಗಳಲ್ಲಿ ಕೂಡಾ ಇದು ವರದಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರೋಧಿ ಸಂಘಟನೆಗಳು ಯಾವ ರೀತಿ ಪ್ರಚಾರ ಮಾಡುತ್ತಿವೆ. ಟ್ವೀಟ್‍ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ. ಅಲ್ಲಾಹೂ ಅಕ್ಬರ್ ಘೋಷಣೆ ಮಾಡಿದ್ದನ್ನು ವೈಭವಿಕರಿಸುತ್ತಿದ್ದಾರೆ. ಇದಕ್ಕೆಲ್ಲವೂ ಪ್ಲಾನ್ ಆಗಿ ದೇಶಕ್ಕೆ ಬದನಾಮ್ ಮಾಡಲು ಪ್ರಯತ್ನ ನಡೆದಿದೆ. ಇದಕ್ಕೆ ಕಾಂಗ್ರೆಸ್ ನವರು ಮೋದಿ ಅಥವಾ ಬೊಮ್ಮಾಯಿ ವಿರೋಧದ ಭರದಲ್ಲಿ ದೇಶವನ್ನು ವಿರೋಧ ಮಾಡಬಾರದು ಎಂದು ತಿಳಿಸಿದರು.
ಹುಬ್ಬಳ್ಳಿ: ಬಿಜೆಪಿ ಪ್ಲ್ಯಾನ್‍ಗೆ ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನವಾಗುತ್ತಾ? ಹಿರಿಯ ರಾಜಕಾರಣಿಯನ್ನು ತರಲು ಬಿಜೆಪಿ ಕಸರತ್ತು ನಡೆಸಿದೆಯಾ ಎನ್ನುವ ಪ್ರಶ್ನೆಗಳು ಸದ್ಯ ಕುತೂಹಲಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಸುಳಿವು ಬಿಟ್ಟು ಕೊಟ್ಟಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈಗಾಗಲೇ ಪರಿಷತ್ ಚುನಾವಣೆಗೆ ರಾಜ್ಯದಿಂದ ಇಬ್ಬರ ಹೆಸರನ್ನು ದೆಹಲಿಗೆ ಕಳುಹಿಸಿದ್ದೇವೆ. ಅದರಲ್ಲಿ ಹೊರಟ್ಟಿ ಹೆಸರು ಇದ್ದರೂ ಇರಬಹುದು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಕುಟುಂಬ ಮಣಿಪುರವನ್ನು ಎಟಿಎಂ ಆಗಿ ಬಳಸಿದೆ: ಸ್ಮೃತಿ ಇರಾನಿ
ಹುಬ್ಬಳ್ಳಿ: ಹಿಜಬ್ ಹಾಕಿಸೋಕೆ ಅಥವಾ ತೆಗಿಸೋಕೆ ಯಾರೇ ಬಂದರೂ ಒದ್ದು ಒಳಗೆ ಹಾಕಿ ಸರ್ಕಾರ ಎಷ್ಟು ದಿನ ಇವರನ್ನು ಸಂಬಾಳಿಸಬೇಕು. ಗಲಾಟೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಮುಂದಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹಿಜಬ್ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಪ್ರಕರಣ ಈಗಾಗಲೇ ಕೋರ್ಟ್‍ನಲ್ಲಿದೆ. ಕೋರ್ಟ್‍ನಲ್ಲಿರುವಾಗಲೇ ದುರದ್ದೇಶದಿಂದ ಗಲಾಟೆ ಮಾಡಲಾಗುತ್ತಿದೆ. ಮಧ್ಯಂತರದ ಆದೇಶ ಎಲ್ಲಿ ಪಾಲನೆ ಆಗುತ್ತಿಲ್ಲವೋ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ನ್ಯಾಯಾಲಯ ಹಿಜಬ್ ಪರ ಅಥವಾ ವಿರುದ್ಧವಾದರೂ ಕೊಡಲಿ, ಅದನ್ನು ನಾವು ಪಾಲನೆ ಮಾಡಬೇಕಾಗುತ್ತದೆ. ಆದರೆ ಪರವಾಗಿ ಬಂದರೂ, ವಿರುದ್ಧವಾಗಿ ಬಂದರೂ ಹಿಜಬ್ ಹಾಕುತ್ತೇವೆ ಎನ್ನುವುದು ಸರಿಯಲ್ಲ. ಶಾಲೆ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಮಾತ್ರ ಬರಲು ಅವಕಾಶ ನೀಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೈನ್ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ರಚಿಸಿದ 20 ವರ್ಷದ ಯುವತಿ
ಸದನದಲ್ಲಿ ಕಾಂಗ್ರೆಸ್ ನಿರಂತರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದೇ ಅವರ ಕಾಯಕವಾಗಿದೆ. ಅವರಿಗೆ ದೇವರು ಆದಷ್ಟು ಬೇಗ ಸದ್ಭುದ್ದಿ ನೀಡಲಿ, ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ವಿಪಕ್ಷಗಳು ಸರ್ಕಾರಕ್ಕೆ ಸಲಹೆ ನೀಡಬೇಕಿದೆ. ಅದನ್ನು ಬಿಟ್ಟು ಈ ರೀತಿ ಪ್ರತಿಭಟನೆಗೆ ಮುಂದಾಗಿದ್ದು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ತೆಗೆದು ರೀಲ್ಸ್ ಮಾಡ್ತಾರೆ, ಈಗ ಹಿಜಾಬ್ ತೆಗೆಯೋಕಾಗಲ್ವಾ – ಬೆಳಗಾವಿ ವಿದ್ಯಾರ್ಥಿನಿಯರ ಪ್ರಶ್ನೆ
ಹುಬ್ಬಳ್ಳಿ: ಜಮೀರ್ ಹೇಳಿಕೆ ಚಿಲ್ಲರೆ ಹೇಳಿಕೆ, ಅತ್ಯಂತ ಕೀಳು ಮಟ್ಟದ ಹೇಳಿಕೆ ಎಂದು ಶಾಸಕ ಜಮೀರ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಜಮೀರ್ ಒಬ್ಬ ಶಾಸಕನಾಗಿ ಇಂತಹ ಕೀಳು ಮಟ್ಟದ ಹೇಳಿಕೆ ನೀಡಬಾರದು, ಸದನದಲ್ಲಿಂದು ಹಿಜಾಬ್, ನ್ಯಾಯಲಯ ಮಧ್ಯಂತರ ಆದೇಶ ಮತ್ತು ಜಮೀರ್ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದಿದ್ದಾರೆ.
ಕಾಂಗ್ರೆಸ್‍ನ ತುಷ್ಠಿಕರಣ ರಾಜಕೀಯದಿಂದ ಪಾಕಿಸ್ತಾನ ನಿರ್ಮಾಣವಾಗಿದೆ. ಈಗ ಮತ್ತೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಮುಸ್ಲಿಂರಿಗೆ ಸಲಹೆ ನೀಡುತ್ತೇನೆ ಕಾಂಗ್ರೆಸ್ ನಿಮ್ಮ ಮಕ್ಕಳನ್ನು ಬಳಿಸಿಕೊಳ್ಳುತ್ತಿದೆ. ಹಿಂದಿನಿಂದಲೂ ಇದೇ ರಾಜಕಾರಣ ಮಾಡಿದೆ. ಇದಕ್ಕೆ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ಎಲ್ಲಾ ವರ್ಗಕ್ಕೂ ವಸ್ತ್ರ ಸಂಹಿತೆ ಇರುತ್ತದೆ. ಶಿಕ್ಷಣ ಇಲಾಖೆ,ಪೊಲೀಸ್, ಮಿಲ್ಟ್ರಿ, ವೈದ್ಯರು ಎಲ್ಲರಿಗೂ ಇರುತ್ತದೆ. ಅದನ್ನು ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ, ಚೀನಾ ಏಜೆಂಟ್ ಆಗಿದ್ದಾರೆ ತೆಲಂಗಾಣ ಸಿಎಂ: ಬಿಜೆಪಿ
ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಯುವರಾಣಿ ಒಂದು ಶಬ್ಧ ಬಳಕೆ ಮಾಡಿದ್ದಾರೆ. ಅವರು ಮಾಡಿದ ಶಬ್ಧದ ಬಳಿಕೆಯನ್ನು ನಾನು ಬಳಕೆ ಮಾಡಲ್ಲ ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನೂ ಹಿಜಾಬ್ ವಿಚಾರದಲ್ಲಿ ಶಾಲೆ, ಕಾಲೇಜುಗಳಲ್ಲಿ ಯಾರೇ ಪ್ರತಿಭಟನೆ ಮಾಡಿದರು. ಅವರನ್ನು ಬಂಧನ ಮಾಡಬೇಕೆಂದು ಒತ್ತಾಯಿಸಿದ್ದಾರೆ.