Tag: ಪ್ರಹ್ಲಾದ್ ಜೋಶಿ

  • ಮೋದಿ ಸೋಲಿಸಲು ಕಾಂಗ್ರೆಸ್‌ನವರು ಪಾಕಿಸ್ತಾನದ ಬೆಂಬಲ ಕೇಳಿದ್ರು – ಪ್ರಹ್ಲಾದ್ ಜೋಶಿ

    ಮೋದಿ ಸೋಲಿಸಲು ಕಾಂಗ್ರೆಸ್‌ನವರು ಪಾಕಿಸ್ತಾನದ ಬೆಂಬಲ ಕೇಳಿದ್ರು – ಪ್ರಹ್ಲಾದ್ ಜೋಶಿ

    ಬೆಂಗಳೂರು: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಸೋಲಿಸಲು ಕಾಂಗ್ರೆಸ್‌ನವರು ಪಾಕಿಸ್ತಾನದ ಬೆಂಬಲ ಕೇಳಿದ್ರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮೋದಿ ಅವರನ್ನು ಸೋಲಿಸಲು ಪಾಕಿಸ್ತಾನದ ಬೆಂಬಲ ಕೇಳಿದ್ದರು. ಈ ತರಹದ ವ್ಯಕ್ತಿಗಳು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲಿ ಪ್ರತಿಭಟನಾಕಾರರಿಗೆ ಸಿಕ್ತು ಲಕ್ಷ ಲಕ್ಷ ಹಣ!

    Congress

    ಕಾಂಗ್ರೆಸ್ ಇಡೀ ದೇಶದಲ್ಲಿ ಭಯೋತ್ಪಾದನೆ ವಿಷಯದಲ್ಲಿ ಪ್ರೆಸ್‌ಮೀಟ್ ಮಾಡುತ್ತಿದ್ದು, ಇದೊಂದು ಹಾಸ್ಯಾಸ್ಪದ ಸಂಗತಿಯಾಗಿದೆ. ಕಾಂಗ್ರೆಸ್‌ನಿಂದಲೇ ಭಯೋತ್ಪಾದನೆ ಪ್ರಾರಂಭವಾಯಿತು. ಆಗ ದೇಶದ ಮೂಲೆ ಮೂಲೆಯಲ್ಲೂ ಭಯೋತ್ಪಾದನಾ ಚಟುವಟಿಕೆಗಳು ನಡೆದಿವೆ. ಈಗ ದೇಶದ ಯಾವುದೇ ಭಾಗದಲ್ಲೂ ಭಯೋತ್ಪಾದನೆ ನಡೆಯುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ತನ್ನ ವೋಟ್‌ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹೊಳೆಗೆ ಕಾರು ಉರುಳಿದ ಪ್ರಕರಣಕ್ಕೆ ಟ್ವಿಸ್ಟ್- ಆಕ್ಸಿಡೆಂಟ್ ಆಗೋ 4 ನಿಮಿಷ ಮೊದಲೇ ಕರೆ ಮಾಡಿದ್ದ ಯುವಕರು..!

    ಕಾಂಗ್ರೆಸ್ ನೀತಿಯಿಂದಲೇ ಭಯೋತ್ಪಾದನೆ ಪ್ರಾರಂಭವಾಯಿತು. ಒಂದು ರೀತಿಯಲ್ಲಿ ಕಾಂಗ್ರೆಸ್ ಪ್ರಾಯೋಜಿತ ಭಯೋತ್ಪಾದನೆಗಳೇ ನಡೆದಿವೆ. ತುಷ್ಟೀಕರಣದ ರಾಜಕಾರಣದ ಪರಾಕಾಷ್ಟೇ ಎಷ್ಟರ ಮಟ್ಟಿಗೆ ಇತ್ತೆಂದರೆ, ಬಾಟ್ಲಾಹೌಸ್ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕರು ಸತ್ತಾಗ ಸೋನಿಯಾಗಾಂಧಿ ಅವರು ಕಣ್ಣೀರು ಹಾಕಿದ್ದರೆಂದು ಪಕ್ಷವೇ ಘೋಷಣೆ ಮಾಡಿದೆ. ತುಕಡೆ-ತುಕಡೆ ಗ್ಯಾಂಗ್ ಅಫ್ಜಲ್ ಗುರು ಪರ ಘೋಷಣೆ ಹಾಕಿದಾಗ ಅವರ ಪರ ನಿಂತವರು ರಾಹುಲ್ ಗಾಂಧಿ. ಈ ರೀತಿ ಹಲವು ಉದಾಹರಣೆಗಳಿವೆ ಅಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಿಕೆಶಿ ಅವರೇ ಸಿದ್ದರಾಮಯ್ಯರ ಟಾರ್ಗೆಟ್: ಸಿದ್ದರಾಮೋತ್ಸವ ಮಾಡ್ತಿರೋದಕ್ಕೆ ನಮಗೆ ಹೊಟ್ಟೆಕಿಚ್ಚಿಲ್ಲ. ಕಾಂಗ್ರೆಸ್ ಪಕ್ಷದವರಿಗೇ ಹೊಟ್ಟೆಕಿಚ್ಚಿದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬಂದು ಮೊದಲು ಖರ್ಗೆಯವರನ್ನ ಮುಳುಗಿಸಿದರು. ನಂತರ ಪರಮೇಶ್ವರ್‌ರನ್ನ ಮುಳುಗಿಸಿದರು. ಈಗ ಸಿದ್ದರಾಮಯ್ಯ ಅವರ ಮುಂದಿನ ಟಾರ್ಗೆಟ್ ಡಿ.ಕೆ.ಶಿವಕುಮಾರ್. ಹಾಗಾಗಿ ಸಿದ್ದರಾಮೋತ್ಸವ ಮಾಡಿದಷ್ಟೂ ನಮಗೇ ಲಾಭ. ಅದಕ್ಕೆ ನಾನು ಶುಭ ಹಾರೈಸುತ್ತೇನೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸುವವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ: ಸಿದ್ದುಗೆ ತಿರುಗೇಟು ನೀಡಿದ ಜೋಶಿ

    ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸುವವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ: ಸಿದ್ದುಗೆ ತಿರುಗೇಟು ನೀಡಿದ ಜೋಶಿ

    ಬೆಂಗಳೂರು: ನೋಟ್ ಬ್ಯಾನ್ ಮಾಡುವ ಮೂಲಕ ದೇಶದ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಆಗಿಲ್ಲ, ಯಾರು ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸಿದ್ದಾರೋ ಅಂತವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.


    ಟ್ವೀಟ್‍ನಲ್ಲಿ ಏನಿದೆ:
    ಸುಳ್ಳಿನ ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ ನವರೇ ಮೊದಲು ನೀವು ಸತ್ಯಾಂಶ ತಿಳಿದು ನಂತರದಲ್ಲಿ ಜನರಿಗೆ ತಿಳಿಸಲು ಪ್ರಯತ್ನಿಸಿ. ಮೌನ ಸರ್ಕಾರದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಕೇವಲ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ, ನಿಮ್ಮ ಮನಮೋಹನ್ ಸಿಂಗ್ ಅವರ ಸರ್ಕಾರದ ಬಗ್ಗೆ ಕೂಡ ಸ್ವಲ್ಪ ಮಾತನಾಡಿ. ಯಾರ ಶಕ್ತಿ ಏನೆಂದು ಅರಿತ ಜನರೇ ಇಂದು ಮೋದಿ ಅವರನ್ನು ಪ್ರಧಾನಿ ಮಾಡಿದ್ದಾರೆ. ಭ್ರಷ್ಟಾಚಾರ ಹಗರಣಗಳನ್ನು ಮಾಡಿ ದೇಶವನ್ನು ಲೂಟಿ ಮಾಡುತ್ತಿದ್ದ ಕಾಂಗ್ರೆಸ್‍ನಿಂದ ಅಧಿಕಾರವನ್ನು ಕಿತ್ತು ಬಿಜೆಪಿಯ ಕೈಗೆ ನೀಡಿರುವುದು ಜನರ ಸ್ವತಃ ನಿರ್ಧಾರ. ಇದನ್ನು ಸಹಿಸಲಾಗದ ನೀವು ಸುಳ್ಳಿನ ಸರಮಾಲೆಯನ್ನು ಪುಸ್ತಕದ ಮೂಲಕ ಬಿಡುಗಡೆ ಮಾಡಿದ್ದೀರಿ. ನಮ್ಮ ಸರ್ಕಾರ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಲಕ್ಷಾಂತರ ಪರಿವಾರಗಳಿಗೆ ರೇಷನ್ ನೀಡಿದೆ. 22 ಲಕ್ಷ ಫಲಾನುಭವಿಗಳು ನಮ್ಮ ಅಟಲ್ ಪಿಂಚಣಿ ಯೋಜನೆ ಉಪಯೋಗ ಪಡೆದಿದ್ದಾರೆ.  ಇದನ್ನೂ ಓದಿ: 8 ವರ್ಷಗಳಲ್ಲಿ ದೇಶದ ಒಟ್ಟು ಸಾಲ 102 ಲಕ್ಷ ಕೋಟಿ ರೂ. ಪ್ರತಿಯೊಬ್ಬರ ತಲೆ ಮೇಲೆ 1.70 ಲಕ್ಷ ರೂ. ಸಾಲ: ಸಿದ್ದು

    ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ 19, 950 ಕೋಟಿ ಸಾಲ ಮಂಜೂರಾಗಿ ಇದು ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ. ಬೀದಿ ಬದಿಯ ವ್ಯಾಪಾರಿಗಳ ಕಲ್ಯಾಣಕ್ಕಾಗಿ 1.42 ಲಕ್ಷ ಖಾತೆಗಳಿಗೆ ರೂ.10,000 ವರ್ಕಿಂಗ್ ಕ್ಯಾಪಿಟಲ್ ಸಾಲ ನೀಡಲಾಗಿದೆ. ಮೇ ತಿಂಗಳಲ್ಲಿ 10.41 ಲಕ್ಷ ಕೋಟಿಯ ಬೆಲೆಯ 594.63 ಕೋಟಿ ಯುಪಿಐ ಟ್ರಾನ್ಸಾಕ್ಷನ್‌ಗಳು ಭಾರತದಲ್ಲಿ ಆಗಿವೆ ಇದು ನಮ್ಮ ಪ್ರಗತಿ ಹಾಗೂ ಉನ್ನತಿಯನ್ನು ಪ್ರದರ್ಶಿಸುತ್ತದೆ. ಆಂತರಿಕ ಮತ್ತು ಬಾಹ್ಯವಾಗಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಅತ್ಯಂತ ಬಲಿಷ್ಠಗೊಳಿಸಿ ಸೈನಿಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದು ನಮ್ಮ ಕೇಂದ್ರ ಸರ್ಕಾರ. ನಿರಂತರವಾಗಿ ನಡೆಯುತ್ತಿದ್ದ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ದೇಶದ ಭದ್ರತೆಗೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಂಡಿದ್ದು ನಮ್ಮ ಕೇಂದ್ರ ಸರ್ಕಾರ.

    ಕಾಶ್ಮೀರ ಪಂಜಾಬ್ ಹಾಗೂ ಈಶಾನ್ಯ ಭಾರತವನ್ನು ಹೊರತುಪಡಿಸಿ 2016 ರಿಂದ ಈಚೆಗೆ ದೇಶದಲ್ಲಿ ಭಯೋತ್ಪಾದನೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಇದು ದೇಶದ ರಕ್ಷಣೆಯಲ್ಲಿ ಸರ್ಕಾರದ ದೃಢತೆಯನ್ನು ತೋರಿಸುತ್ತದೆ. 2014ಕ್ಕೆ ಹೋಲಿಸಿದರೆ ಇಂದು ದೇಶದಲ್ಲಿ ನಕ್ಸಲ್ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿದೆ. 2014ರಲ್ಲಿ 1, 089 ಹಿಂಸಾಚಾರಗಳು ನಡೆದರೆ 2022 ರಲ್ಲಿ ಇದು 509ಕ್ಕೆ ಇಳಿದಿದೆ. 53% ಹಿಂಸಾಚಾರ ಕಡಿಮೆಯಾಗಿದೆ. ಜನರಿಗೆ ಬೇಕಾದ ಮೂಲಸೌಕರ್ಯ ಒದಗಿಸುವಲ್ಲಿ ನಮ್ಮ ಸರ್ಕಾರದ ಸಾಧನೆ ಏನೆಂಬುದನ್ನು ಸ್ವತಃ ಅಂಕಿ ಅಂಶಗಳೇ ಹೇಳುತ್ತದೆ, ಇದನ್ನು ಅರಿತು ನೀವು ಪುಸ್ತಕ ಬಿಡುಗಡೆ ಮಾಡಿದರೆ ಅದಕ್ಕೊಂದು ತೂಕ ಇರುತ್ತದೆ. ನೋಟ್ ಬ್ಯಾನ್ ಮಾಡುವ ಮೂಲಕ ದೇಶದ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಆಗಿಲ್ಲ, ಯಾರು ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸಿದ್ದಾರೋ ಅಂತವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ, ಅದರಲ್ಲಿ ಆಶ್ಚರ್ಯವೇನಿಲ್ಲ. ಯಾಕೆಂದರೆ ನೋಟ್ ಬ್ಯಾನ್ ನಂತರ ಭಾರತದಲ್ಲಾದ ಡಿಜಿಟಲ್ ವ್ಯವಹಾರವು ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದೆ, ಇದು ಬದಲಾಗುತ್ತಿರುವ ಭಾರತಕ್ಕೆ ಒಂದು ಅಡಿಪಾಯ ಎಂದರೂ ತಪ್ಪಾಗದು.

    ಜಗತ್ತು ಕೊರೊನಾ ಬಗ್ಗೆ ಚಿಂತಿಸುತ್ತಿರುವಾಗ 200 ಕೋಟಿಗೂ ಅಧಿಕ ಉಚಿತ ಲಸಿಕೆ ನೀಡಿ ಜಗತ್ತಿಗೆ ಮಾದರಿಯಾಗಿ ನಿಂತ ಭಾರತ ಇಂದು ಜಗತ್ತಿನ ಮುಂದುವರಿದ ದೇಶಗಳಿಗೆ ಲಸಿಕೆ ರಫ್ತು ಮಾಡುತ್ತಿದೆ. ಇದು ನರೇಂದ್ರ ಮೋದಿಯವರ ನಾಯಕತ್ವದ ಸರ್ಕಾರದ ಸಾಧನೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ, ಆದರೆ ಕಾಂಗ್ರೆಸ್ ಮಾತ್ರ ಟೀಕಿಸುವುದರಲ್ಲಿ ಮಗ್ನವಾಗಿದೆ. 130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಮ್ಮ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ನಿಜಕ್ಕೂ ಶ್ಲಾಘನೀಯ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

    Live Tv

  • ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡ್ತಿದೆ: ಪ್ರಹ್ಲಾದ್ ಜೋಶಿ

    ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡ್ತಿದೆ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರಿಗಾಗಿ ಪ್ರತಿ 15 ದಿನಕ್ಕೆ ಯೋಜನೆಯನ್ನ ತಂದಿದೆ. ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶಂಸಿದರು.

    ಹುಬ್ಬಳ್ಳಿಯಲ್ಲಿ ನಡೆದ ಜಿಲ್ಲಾ ಪ್ರಕೋಷ್ಠ ಸಮಾವೇಶದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಇರೋರಿಗೆ ಆ್ಯಂಬಿಷನ್ ಇರಬೇಕು. ಮಂತ್ರ ಹಾಕಿದ್ರೆ ಮಾವಿನಹಣ್ಣು ಉದುರೋದಿಲ್ಲ. ಹೀಗಾಗಿ ಮೋದಿ ಸರ್ಕಾರದ ಯೋಜನೆಗಳನ್ನು ಜನರಿಗೆ ನೀವು ತಲುಪಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಬಸವಣ್ಣನವರ ಅನುಭವ ಮಂಟಪ ಪೀರಭಾಷಾ ಬಂಗ್ಲೆಯಾಗಿದೆ: ಚಂದ್ರಶೇಖರ ಸ್ವಾಮೀಜಿ 

    NARENDRA MODI

    ಮೊದಲು ನೀವು ಯೋಜನೆಯ ಬಗ್ಗೆ ತಿಳಿದುಕೊಳ್ಳಿ. ಮೋದಿ ಸರ್ಕಾರದ ಯೋಜನೆ ಹೇಳಿ ಅಂದ್ರೆ ನಿಮಗೆ ಗೊತ್ತಿಲ್ಲ. ಮೊದಲು ನೀವು ತಿಳಿದುಕೊಳ್ಳಿ ಅಂತ ಬಿಜೆಪಿ ಸ್ಥಳೀಯ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

    ಜನರಿಗಾಗಿ ಉಜ್ವಲ ಯೋಜನೆಯನ್ನ ನೀಡಿದ್ದೀವಿ. ಅಂತರಾಷ್ಟ್ರೀಯ ಕಾರಣದಿಂದ ಗ್ಯಾಸ್ ಬೆಲೆ ಏರಿಕೆಯಾಗಿದೆ. ಆದ್ರೂ 200ರೂ. ಸಬ್ಸಿಡಿ ನೀಡಿದ್ದೇವೆ. ಮೋದಿ ಅವರು ಹಗಲು, ರಾತ್ರಿ ಕಷ್ಟಪಟ್ಟಿದ್ದಾರೆ. ನಾವೇನು ಮಾಡ್ತಿದ್ದಿವಿ? 2024ರಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಭಾರತ ಆಗಬೇಕು ಎಂದರು. ಇದನ್ನೂ ಓದಿ:  ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆ 

  • ನೆಹರು ಜೊತೆ  ಮೋದಿಯನ್ನು ಎಂದಿಗೂ ಹೋಲಿಕೆ ಮಾಡಿಲ್ಲ: ಪ್ರಹ್ಲಾದ್ ಜೋಶಿ

    ನೆಹರು ಜೊತೆ ಮೋದಿಯನ್ನು ಎಂದಿಗೂ ಹೋಲಿಕೆ ಮಾಡಿಲ್ಲ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಮಾಜಿ ಪ್ರಧಾನಿ ನೆಹರು ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಎಂದಿಗೂ ಹೋಲಿಕೆ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟರು.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವೈಚಾರಿಕತೆ ಇರುವ ನಾಯಕರಾಗಿದ್ದಾರೆ. ಅವರು ಸಾಕಷ್ಟು ಬಜೆಟ್ ಮಂಡಿಸಿದ್ದಾರೆ. ಆದರೆ ಅವರ ವೈಚಾರಿಕತೆ ಅವರಿಗರಲಿ, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಈ ರೀತಿ ಮಾತನಾಡುವುದು ಸರಿಯಲ್ಲ. ಈ ದೇಶದಲ್ಲಿ ಹೆಡ್ಗೆವಾರ್ ಆರ್‌ಎಸ್‍ಎಸ್ ಸ್ಥಾಪಿಸಿದ್ದು, ಅವರೊಬ್ಬ ದೇಶದ ಅಪ್ರತಿಮ ನಾಯಕರಾಗಿದ್ದಾರೆ. ಮುಸ್ಲಿಂ ತುಷ್ಟೀಕರಣಕ್ಕೋಸ್ಕರ ಬಾಯಿಗೆ ಬಂದ ಹಾಗೆ ಸಿದ್ದರಾಮಯ್ಯ ಹೇಳಿಕೆ ನೀಡ್ತಿದ್ದಾರೆಂದ ಅವರು, ಆರ್‌ಎಸ್‍ಎಸ್‍ನವರು ಮೂಲ ನಮ್ಮ ದೇಶದವರಲ್ಲ ಎನ್ನುವ ಸಿದ್ದು ಹೇಳಿಕೆಗೆ ತಿರುಗೇಟು ನೀಡಿದರು.

    ಹೆಡ್ಗೆವಾರ್ ಅವರು ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಅವರು ತಿಳಿದುಕೊಂಡು ಮಾತನಾಡಬೇಕು. ಅವರು ಸೇವಾದಳದಲ್ಲಿದ್ದರು. ಅವರೊಬ್ಬರು ಹುಟ್ಟು ದೇಶಭಕ್ತರು. ಸಿದ್ದರಾಮಯ್ಯ ಅವರಿಗೆ ಆರ್‌ಎಸ್‍ಎಸ್ ಬಗ್ಗೆ ಗೊತ್ತಿಲ್ಲ ಅಂದರೆ ಅವರ ಮೇಲೆ ಅನುಕಂಪವಿದೆ. ಗೊತ್ತಿದ್ದರೂ ನಾಟಕ ಮಾಡುತ್ತಿದ್ದಾರೆ. ಪಠ್ಯಪುಸ್ತಕದಲ್ಲಿ ಕಮ್ಯುನಿಷ್ಠರ ವಿಚಾರಧಾರೆ ಹಾಕಿದರೂ, ಸಿದ್ದರಾಮಯ್ಯ ತಾವೊಬ್ಬರೇ ತಜ್ಞರು ಅನ್ಕೊಂಡಿದ್ದಾರೆ. ಅದನ್ನು ಬಿಟ್ಟು ಹೊರಗಡೆ ಬರಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತದಲ್ಲೇ ಯುದ್ಧ ನೌಕೆಗಳು ತಯಾರಾಗೋ ಮೂಲಕ ಪ್ರಧಾನಿಯವರ ಆತ್ಮನಿರ್ಭರ್ ಅಭಿಯಾನಕ್ಕೆ ಬಲ ಬಂದಿದೆ: ರಾಜನಾಥ್ ಸಿಂಗ್

    ಕೆಲ ಗದ್ಯವನ್ನು ಇವರೇ ತೆಗೆದು, ಇವರೇ ಡ್ರಾಮ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಯುಪಿನಲ್ಲಿ 388 ಕ್ಷೇತ್ರದ ನಿಮ್ಮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಜನ ನಿಮ್ಮನ್ನು ಮೂಲೆಗೆ ತಳ್ಳಿದ್ದಾರೆಂದು ಟೀಕಿಸಿದರು. ಇದನ್ನೂ ಓದಿ: ಸೊಳ್ಳೆ ಉತ್ಪಾದನೆಗೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ – 50 ಸಾವಿರ ರೂ. ದಂಡ ವಿಧಿಸಿ: ಡೆಲ್ಲಿ ಹೈಕೋರ್ಟ್

  • ಸಿಎಂ ಕಾರ್ಯಕ್ರಮಕ್ಕೂ ತಟ್ಟಿತು ಲೋಡ್ ಶೆಡ್ಡಿಂಗ್ ಬಿಸಿ

    ಸಿಎಂ ಕಾರ್ಯಕ್ರಮಕ್ಕೂ ತಟ್ಟಿತು ಲೋಡ್ ಶೆಡ್ಡಿಂಗ್ ಬಿಸಿ

    ಧಾರವಾಡ: ಸಿಎಂ ಹಾಗೂ ಕೇಂದ್ರ ಹಾಗೂ ರಾಜ್ಯ ಸಚಿವರು ಭಾಗವಹಿಸಿದ್ದ ಉಳವಿ ಚನ್ನಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲೂ ವಿದ್ಯುತ್ ವ್ಯತ್ಯಯದ ಬಿಸಿ ಉಂಟಾಗಿದೆ.

    ಧಾರವಾಡದಲ್ಲಿ ಇಂದು ಉಳವಿ ಚನ್ನಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಹಾಲಪ್ಪ ಆಚಾರ್ ಭಾಗವಹಿಸಿದ್ದರು.

    BASAVARAJ BOMMAI

    ಮೊದಲು ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ಇರುವ ಚನ್ನಬಸವೇಶ್ವರ ಪುತ್ಥಳಿ ಅನಾವರಣ ಮಾಡಿದ ಸಿಎಂ, ಅಲ್ಲಿಂದ ಚನ್ನಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ವೇದಿಕೆ ಕಾರ್ಯಕ್ರಮ ಆರಂಭವಾದ ಕೆಲವೇ ಕ್ಷಣಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಇದನ್ನೂ ಓದಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು: ಸಿದ್ದಣ್ಣ ಮೇಟಿ

    ಪ್ರತಿದಿನ ಧಾರವಾಡ ನಗರದ ಈ ದೇವಸ್ಥಾನದ ಬಡಾವಣೆಗಳ ಬಳಿ ಲೋಡ್ ಶೆಡ್ಡಿಂಗ್ ಉಂಟಾಗುತ್ತದೆ. ಆದರೆ ಸಿಎಂ ಕಾರ್ಯಕ್ರಮ ಇದ್ದರೂ, ಭಾನುವಾರವೂ ಕೂಡಾ ವಿದ್ಯುತ್ ಕಡಿತಗೊಂಡಿದೆ. ಹಲವು ಚರ್ಚೆಗಳಿಗೆ ಕಾರಣವಾಯಿತು. ಸದ್ಯ ವಿದ್ಯುತ್ ಇಲಾಖೆ ಸಿಎಂ ಕಾರ್ಯಕ್ರಮಕ್ಕೂ ವಿದ್ಯುತ್ ಲೋಡ್ ಶೆಡ್ಡಿಂಗ್ ಬಿಸಿ ತಟ್ಟಿದ್ದು ಇಲ್ಲಿ ಚರ್ಚೆಯ ವಿಷಯವಾಗಿದೆ. ಇದನ್ನೂ ಓದಿ: ದಕ್ಷ, ಜನಪರ ಆಡಳಿತವನ್ನು ಸರ್ಕಾರ ಮಾಡ್ತಿದೆ, ಆಡಳಿತ ವಿರೋಧಿಗಳಿಗೆ ಅದೇ ಉತ್ತರ: ಬೊಮ್ಮಾಯಿ

  • ಸುಪ್ರಭಾತ ಅಭಿಯಾನ- ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು: ಪ್ರಹ್ಲಾದ್ ಜೋಶಿ

    ಸುಪ್ರಭಾತ ಅಭಿಯಾನ- ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಅಜಾನ್ ವಿರುದ್ಧ ನಾಳೆ ಭಜನೆ ಮತ್ತು ಸುಪ್ರಭಾತ ಅಭಿಯಾನದ ಹಿನ್ನೆಲೆಯಲ್ಲಿ ಸರ್ಕಾರ ಸುಮ್ಮನಿದೆ ಎಂದು ಭಾವಿಸಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

    ಶರೇವಾಡ ಗ್ರಾಮದಲ್ಲಿ ಮಾತನಾಡಿದ ಅವರು, ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಗಡುವು ಕೊಟ್ಟಿದ್ದು ಗೊತ್ತಿಲ್ಲ. ಕಾನೂನು ಪ್ರಕಾರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು. ಇದನ್ನೂ ಓದಿ: ಬುರ್ಕಾ ಹಾಕ್ಕೊಂಡು ಓಡಾಡಿದ್ರೂ ಬಿಜೆಪಿಗೆ ಒಂದು ವೋಟು ಬರಲ್ಲ: ಮುತಾಲಿಕ್

    loud speaker

    ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಕಿಂಗ್‍ಪಿನ್ ಹೆಸರು ಬಹಿರಂಗ ಪಡಿಸಿದರೆ ಸರ್ಕಾರ ಉರುಳುತ್ತದೆ ಎನ್ನುವ ಹೆಚ್‍ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರವನ್ನು ಉರುಳಿಸೋದು, ಬಿಡುವುದು ಅವರ ಜವಾಬ್ದಾರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಅಕ್ರಮ ನೇಮಕಾತಿಯ ಬಗ್ಗೆ ಯಾರ ಹತ್ತಿರ ಮಾಹಿತಿ ಇದೆ ಅದನ್ನು ಅವರು ಕೊಡಲಿ. ಸಿಐಡಿ ಈ ಕುರಿತು ಮುಂದಿನ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷನನ್ನೇ ಬಂಧಿಸಲಾಗಿದೆ ಎಂದರು. ಇದನ್ನೂ ಓದಿ: ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಅಳವಡಿಸುವುದು ಕಡ್ಡಾಯ: ಸುಧಾಕರ್

  • ಮತ್ತೆ ಸಿಎಂ ಬದಲಾವಣೆ ಮಾತೇ ಇಲ್ಲ, ದೆಹಲಿಯಿಂದ ನಾನು ಯಾವುದೇ ಲಿಸ್ಟ್ ತಂದಿಲ್ಲ: ಪ್ರಹ್ಲಾದ್ ಜೋಶಿ

    ಮತ್ತೆ ಸಿಎಂ ಬದಲಾವಣೆ ಮಾತೇ ಇಲ್ಲ, ದೆಹಲಿಯಿಂದ ನಾನು ಯಾವುದೇ ಲಿಸ್ಟ್ ತಂದಿಲ್ಲ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ, ಇದೆಲ್ಲಾ ಊಹಾಪೋಹ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ. ‌

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಎಂ ಮತ್ತು ನನ್ನ ಭೇಟಿ ಸಹಜ. ಅದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂಬಿ ಪುತ್ರ ಅಭಿಷೇಕ್‍ಗೆ ಬಿಜೆಪಿ ಗಾಳ – ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?

    ನಾನು ದೆಹಲಿಯಿಂದ ಸಾಮಾನ್ಯನಾಗಿ ಬಂದಿದ್ದೇನೆ. ಯಾವುದೇ ಲಿಸ್ಟ್ ತಂದಿಲ್ಲ. ಮುಂದಿನ ಚುನಾವಣೆವರೆಗೂ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಇರುತ್ತಾರೆ. ಮಾಧ್ಯಮಗಳಲ್ಲಿ ಮಾತ್ರ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ ಎಂದು ಸುದ್ದಿ ಪ್ರಸಾರವಾಗುತ್ತಿದೆ ಎಂದಿದ್ದಾರೆ.

    PSI ನೇಮಕಾತಿಯಲ್ಲಿ ಅಕ್ರಮ ಕುರಿತು ಮಾತನಾಡಿದ ಅವರು, ಮೊದಲಿಗೆ ಸುದ್ದಿ ಕೊಟ್ಟ ಪ್ರಿಯಾಂಕ್ ಖರ್ಗೆ ಈಗ ಯಾಕೆ ತನಿಖೆಗೆ ಸಹಕಾರ ಕೊಡುತ್ತಿಲ್ಲ? ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಗೌಡ 24 ಗಂಟೆ ಪ್ರಿಯಾಂಕ್ ಮನೆಯಲ್ಲಿ ಇರುತ್ತಿದ್ದರು. ಅಂತಹವರು ಹಗರಣದಲ್ಲಿ ಭಾಗಿಯಾಗಿದ್ದಾರೆ. ಅದನ್ನು ಮರೆಮಾಚಲು ಪ್ರಿಯಾಂಕ್ ಯತ್ನಿಸಿದ್ದಾರೆ. ನ್ಯಾಯಾಂಗ ತನಿಖೆಯಲ್ಲಿ ಬಂಧನ ಸಾಧ್ಯತೆ ಕಡಿಮೆ. ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆಗ್ರಹ ಮಾಡುತ್ತಿದ್ದಾರೆ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಸಿಎಂ ಸ್ಥಾನ ಲಾಬಿಗೆ ಅವಕಾಶವಿಲ್ಲ, ಯತ್ನಾಳ್ ಹೇಳಿಕೆ ತಪ್ಪು: ರೇಣುಕಾಚಾರ್ಯ

  • ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜಿನಲ್ಲಿ ವ್ಯತ್ಯಯವಿದೆ, ಕಾಂಗ್ರೆಸ್ ಆರೋಪಿಸಿದಷ್ಟು ಅಲ್ಲ: ಜೋಶಿ

    ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜಿನಲ್ಲಿ ವ್ಯತ್ಯಯವಿದೆ, ಕಾಂಗ್ರೆಸ್ ಆರೋಪಿಸಿದಷ್ಟು ಅಲ್ಲ: ಜೋಶಿ

    ರಾಯಚೂರು: ದೇಶದಲ್ಲಿ ವಿದ್ಯುತ್ ಉತ್ಪಾದನೆ ಕಲ್ಲಿದ್ದಲಿನ ಮೇಲೆ ಈಗ ಹೆಚ್ಚು ಅವಲಂಬನೆಯಾಗಿರುವುದರಿಂದ ರಾಜ್ಯಕ್ಕೆ ಸರಬರಾಜು ಮಾಡುವ ಕಲ್ಲಿದ್ದಲು ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಯವಾಗಿದೆ. ಆದರೆ ಕಾಂಗ್ರೆಸ್ ಆರೋಪ ಮಾಡುವಷ್ಟು ಸಮಸ್ಯೆಯಾಗುವುದಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಪ್ರಹ್ಲಾದ ಜೋಶಿ, ದೇಶದಲ್ಲಿ ಪ್ರತೀ ದಿನ ಗರಿಷ್ಟ 320 ಕೋಟಿ ಯೂನಿಟ್ಸ್ ಡಿಮ್ಯಾಂಡ್ ಮೇಲೆ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ಈಗ ಡಿಮ್ಯಾಂಡ್ 340 -350 ಕೋಟಿ ಯೂನಿಟ್ಸ್ಗೆ ಹೆಚ್ಚಿದೆ. ರಷ್ಯಾದಿಂದ ಬರುತ್ತಿದ್ದ ಗ್ಯಾಸ್, ಹೈಡ್ರೋ ಪವರ್ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಹೀಗಾಗಿ ಕಲ್ಲಿದ್ದಲಿನ ಮೇಲೆ ಹೆಚ್ಚು ಅವಲಂಬನೆಯಾಗಿರುವುದರಿಂದ ಅಂದಿನ ಕಲ್ಲಿದ್ದಲು ಅಂದಿಗೆ ಖಾಲಿಯಾಗುತ್ತಿದೆ ಎಂದರು. ಇದನ್ನೂ ಓದಿ: ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸುತ್ತೇವೆ: ಬೊಮ್ಮಾಯಿ

    ನಿಯಮದ ಪ್ರಕಾರ ವಿದ್ಯುತ್ ಕೇಂದ್ರಗಳಲ್ಲಿ 17 ದಿನಕ್ಕಾಗುವಷ್ಟು ಕಲ್ಲಿದ್ದಲು ಸಂಗ್ರಹ ಇರಬೇಕು. ಆದರೆ ಈಗ 8-10 ದಿನಕ್ಕೆ ಆಗುವಷ್ಟು ಮಾತ್ರ ಸಂಗ್ರಹ ಇದೆ. ಇದರಿಂದ 8-10 ದಿನದ ಬಳಿಕ ಸಂಪೂರ್ಣ ಖಾಲಿಯಾಗುವುದಿಲ್ಲ, ಪುನಃ ಕಳುಹಿಸುತ್ತೆವೆ. ರಾಜ್ಯದಲ್ಲಿ ಅಂದಾಜು ಪ್ರತೀ ದಿನ 20 ಲಕ್ಷ ಟನ್ ಖರ್ಚಾಗುತ್ತಿದೆ. ಅಷ್ಟನ್ನು ಗಣಿಗಳಿಂದ ಸರಬರಾಜು ಮಾಡುತ್ತೇವೆ. ಕಾಂಗ್ರೆಸ್ 10 ವರ್ಷದಲ್ಲಿ ರಾಜ್ಯಕ್ಕೆ ಕೊಟ್ಟ ಕಲ್ಲಿದ್ದಲಿಗಿಂತ ಒಂದುವರೆ ಪಟ್ಟು ಹೆಚ್ಚು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಕೋಮು ಗಲಭೆ ಮಾಡುವ ವ್ಯಕ್ತಿಗಳಿಗೆ ಸರ್ಕಾರ ರಕ್ಷಣೆ ನೀಡಲ್ಲ: ಮುನೇನಕೊಪ್ಪ

    ಸಿಂಗರೇಣಿ ಕೋಲ್ ಫೀಲ್ಡ್ ನಿಂದ ಬರುವ ಕಲ್ಲಿದ್ದಲನ್ನು ಪ್ರತಿದಿನ 7ರಿಂದ 10 ರೇಕ್‌ಗೆ ಏರಿಸಿದ್ದೇವೆ. ಮಹಾನದಿ ಕೋಲ್ ಫೀಲ್ಡ್ಸ್ ನಿಂದ ಹಾಗೂ ಡಬ್ಲ್ಯೂಸಿಎಲ್‌ನಿಂದ ರೋಡ್ ಕಮ್ ರೇಲ್ ಮೂಲಕ ಆಫರ್ ಮಾಡಿದ್ದೇವೆ. ರಾಜ್ಯಕ್ಕೆ ಬೇರೆ ಮೂಲಗಳಿಂದ ವಿದ್ಯುತ್ ಸಿಗುತ್ತಿರುವುದರಿಂದ ಕಲ್ಲಿದ್ದಲು ಬಳಕೆ ಸ್ಥಗಿತಗೊಳಿಸಿರುವುದಾಗಿ ರಾಜ್ಯದ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಸದ್ಯಕ್ಕೆ ಕರ್ನಾಟಕಕ್ಕೆ ಯಾವುದೇ ರೀತಿ ಕಲ್ಲಿದ್ದಲು ಕೊರತೆಯಿಲ್ಲ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.

  • ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಚ್ಚಿದ ಒತ್ತಡ: ಬಿಜೆಪಿಯಲ್ಲಿ ಭಿನ್ನ ನಿಲುವು

    ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಚ್ಚಿದ ಒತ್ತಡ: ಬಿಜೆಪಿಯಲ್ಲಿ ಭಿನ್ನ ನಿಲುವು

    ಬೆಂಗಳೂರು: ಬುಲ್ಡೋಜರ್ ಆಕ್ಷನ್ ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಆಯ್ತು ಈಗ ರಾಷ್ಟ್ರ ರಾಜಧಾನಿ ದೆಹಲಿ ಸರದಿ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಲ್ಡೋಜರ್ ಮಾಡೆಲ್ ಬಂದರೂ ಕರ್ನಾಟಕದಲ್ಲಿ ಏಕೆ ಜಾರಿ ಇಲ್ಲ ಎನ್ನುವುದರ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

    ಸದಾ ಕಾಲ ಎಲ್ಲದರಲ್ಲೂ ಬ್ಯಾಲೆನ್ಸ್ ಮಾಡುವ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲೂ ಬುಲ್ಡೋಜರ್ ಆರ್ಡರ್ ಮಾಡುತ್ತಿಲ್ಲ ಏಕೆ ಎನ್ನುವ ಪ್ರಶ್ನೆ ಆಡಳಿತ ಪಕ್ಷದಲ್ಲಿ ಎದ್ದಿದೆ.

    ಈ ನಡುವೆ ಧರ್ಮ ದಂಗಲ್ ಹೆಸರಲ್ಲಿ ಆಸ್ತಿಪಾಸ್ತಿ ನಷ್ಟ ಉಂಟು ಮಾಡುವ ಕಿಡಿಗೇಡಿಗಳ ವಿರುದ್ಧ ಕಾರ್ಯಾಚರಣೆಗೆ ಹಿಂದೂ ಸಂಘಟನೆಗಳು ಒತ್ತಡ ಹಾಕಿವೆ. ಅಷ್ಟೇ ಅಲ್ಲ ಪಕ್ಷದಲ್ಲೂ ಒತ್ತಡ ಹೆಚ್ಚಿದೆ. ಕೆಲ ಸಚಿವರು, ಹಲವು ಬಿಜೆಪಿ ಶಾಸಕರು ಬುಲ್ಡೋಜರ್ ಕಾರ್ಯಾಚರಣೆ ಅಸ್ತ್ರ ಪ್ರಯೋಗಿಸಲು ಒತ್ತಾಯಿಸಿದ್ದಾರೆ. ಸಚಿವ ಸುನಿಲ್ ಕುಮಾರ್ ಬುಲ್ಡೋಜರ್ ಕಾರ್ಯಾಚರಣೆ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಬುಲ್ಡೋಜರ್ ಕಾರ್ಯಾಚರಣೆ ಬಗ್ಗೆ ಸಿಎಂ ಚಿಂತನೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹೈಡ್ರಾಮಾ – ಸುಪ್ರೀಂನಿಂದ ತಡೆ ಆದೇಶ ಬಂದ ಬಳಿಕವೂ 2 ಗಂಟೆ ಘರ್ಜಿಸಿದ ಜೆಸಿಬಿ

    ಹಾಗಾದರೆ ಸ್ವಪಕ್ಷೀಯರ ಒತ್ತಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮಣೆ ಹಾಕುವುದು ಯಾವಾಗ? ಚುನಾವಣೆ ಹೊತ್ತಲ್ಲಿ ಬುಲ್ಡೋಜರ್ ಸಾಹಸಕ್ಕೆ ಕೈ ಹಾಕಲು ಬೊಮ್ಮಾಯಿ ಹಿಂದೇಟು ಹಾಕ್ತಿದ್ದಾರಾ? ಎನ್ನುವ ಪ್ರಶ್ನೆ ಕೂಡ ಬೇರೆ ಬೇರೆ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಬಸವರಾಜ ಬೊಮ್ಮಾಯಿ ನಡೆಗೆ ಜೈ ಎನ್ನುವಂತೆ ಎಲ್ಲಾ ಕಡೆಗಳಲ್ಲೂ ಬುಲ್ಡೋಜರ್ ಪ್ರಯೋಗ ಮಾಡಲು ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಹೇಳಿದ್ದರು. ಹಾಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನಿಲುವೇ ಬಸವರಾಜ ಬೊಮ್ಮಾಯಿ ನಿಲುವಾಗುತ್ತಾ? ಇಲ್ಲ ಹೈಕಮಾಂಡ್ ಕೇಳಿ ರಾಜ್ಯದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಜ್ಜೆ ಇಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ – ಹಾಕದಿದ್ದರೆ 500 ರೂ. ದಂಡ

  • ಹುಬ್ಬಳ್ಳಿ ಗಲಾಟೆ ಹಿಂದೆ ಯಾರೇ ಇರಲಿ, ಎತ್ತಾಕೊಂಡು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ ಗಲಾಟೆ ಹಿಂದೆ ಯಾರೇ ಇರಲಿ, ಎತ್ತಾಕೊಂಡು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಕಾರ್ಪೊರೇಟ್‌ರ ಇರಲಿ, ಅವರ ತಾತ ಮುತ್ತಾತ ಇರಲಿ, ಅವರನ್ನು ಎತ್ತಾಕಿಕೊಂಡು ಬಂದು ಒಳಗೆ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘಟನೆ ಬಗ್ಗೆ ಗುಡುಗಿದ್ದಾರೆ.

    ಹುಬ್ಬಳ್ಳಿ ದಿಡ್ಡಿ ಹನುಮಂತ ದೇವಸ್ಥಾನ ಭೇಟಿ ಬಳಿಕ ಮಾತನಾಡಿದ ಅವರು, ಕೋಮುವಾದಿ ಮತಾಂಧರು ನಿನ್ನೆ ಗ್ರಾಫಿಕ್ ಆ್ಯನಿಮೇಶನ್ ನೆಪ ಇಟ್ಟುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ದೇವಸ್ಥಾನ, ನಾಗರಿಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ನಾವು ಎಲ್ಲ ವಿವರ ಪಡೆದಿದ್ದೇವೆ ಎಂದಿದ್ದಾರೆ.

    ಯಾರೇ ಇದ್ದರು ಅವರನ್ನು ಒಳಗಡೆ ಹಾಕಬೇಕು, ಪೊಲೀಸರಿಗೆ ಗಾಯವಾದರೂ ತಕ್ಷಣ ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ. ಹೊರಗಿನಿಂದ ಬಂದವರು ಯಾರು, ಕರೆ ಕೊಟ್ಟವರು ಯಾರು, ವಾಟ್ಸಪ್ ಮೆಸೇಜ್ ಮಾಡಿದವರು ಯಾರು ಎಂಬೆಲ್ಲ ವಿಚಾರವಾಗಿ ತನಿಖೆ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದ್ದಾರೆ.

    ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ಸಿಬ್ಬಂದಿ ಕೊಟ್ಟು ಪೊಲೀಸ್ ಠಾಣೆ ಬಲಪಡಿಸುವ ಕೆಲಸ ಮಾಡುತ್ತೇವೆ. ಪಿಎಫ್‍ಐ, ಎಸ್‍ಡಿಪಿಐ ಸಂಘಟನೆ ನಿಷೇಧಕ್ಕೆ ಪ್ರಕ್ರಿಯೆ ನಡೆದಿದೆ ಎಂದು ಹೇಳಿದ್ದಾರೆ.