Tag: ಪ್ರಹ್ಲಾದ್ ಜೋಶಿ

  • ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಿ ಊದುಬತ್ತಿ ಹಚ್ಚಿ, ಆರತಿ ಬೆಳಗ್ತಾರಾ ನೋಡೋಣ – ಪ್ರಹ್ಲಾದ್‌ ಜೋಶಿ ಟಾಂಗ್‌

    ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಿ ಊದುಬತ್ತಿ ಹಚ್ಚಿ, ಆರತಿ ಬೆಳಗ್ತಾರಾ ನೋಡೋಣ – ಪ್ರಹ್ಲಾದ್‌ ಜೋಶಿ ಟಾಂಗ್‌

    ಹುಬ್ಬಳ್ಳಿ: ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿ ಊದುಬತ್ತಿ ಹಚ್ಚಿ, ಆರತಿ ಬೆಳಗುತ್ತಾರಾ ನೋಡೋಣ. ಅವರು ಟಿಪ್ಪು (Tippu Sultan) ಪ್ರತಿಮೆ ಮಾಡಲಿ, ಅವರನ್ನ ಜನ ಮನೆಗೆ ಕಳಸ್ತಾರೆ ಎಂದು ಶಾಸಕ ತನ್ವೀರ್‌ ಸೇಠ್‌ (Tanveer Sait) ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಟಿಪ್ಪು ಪ್ರತಿಮೆಗೆ ಬೆಂಬಲ ಕೊಟ್ಟವರನ್ನು ಜನರು ಮನೆಗೆ ಕಳಿಸುತ್ತಾರೆ. ಈಗಲೂ ಟಿಪ್ಪು ಜಯಂತಿಗೆ ನಮ್ಮ ವಿರೋಧವಿದೆ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಕನ್ನಡ ವಿರೋಧಿ. ಇದು ನನ್ನ ವೈಯಕ್ತಿಕ ನಿಲುವು ಮತ್ತು ಪಕ್ಷದ ನಿಲವು. ಯಾವುದೇ ಮೂರ್ತಿ ನಿಲ್ಲಿಸಲು ಸರ್ಕಾರದ ಅನುಮತಿ ಬೇಕು. ಜನ ಇದಕ್ಕೆಲ್ಲ ಉತ್ತರ ಕೊಡ್ತಾರೆ. ನಾವು ಯಾವ ಕಾಲದಲ್ಲಿ ಉತ್ತರ ಕೊಡಬೇಕು ಕೊಡ್ತೀವಿ. ನಾವು ಬೇಜವಬ್ದಾರಿಯಿಂದ ಮಾತಾಡೋಕೆ ಆಗಲ್ಲ ಎಂದು ತನ್ವೀರ್‌ಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್

    tippu

    ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆಗೆ ದೇವೇಗೌಡರಿಗೆ ಆಹ್ವಾನ ವಿಚಾರ‌‌ವಾಗಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಗಳು, ಅಶೋಕ್, ಅಶ್ವಥ್ ನಾರಾಯಣ ಅವರೊಂದಿಗೆ ಮಾತನಾಡಿದ್ದೇನೆ. ದೇವೇಗೌಡರು ಈ ದೇಶದ ಪ್ರಧಾನಿಯಾಗಿದ್ದ ಕರ್ನಾಟಕದ ಏಕೈಕ ನಾಯಕ. ಅವರನ್ನು ಕರೆದಿಲ್ಲ ಅನ್ನೋದು ಸರಿಯಲ್ಲ. ಮುಖ್ಯಮಂತ್ರಿಗಳು ನನಗೆ ಹೇಳಿದ್ದಾರೆ. ನಾನು ಕರೆದಿದ್ದೇನೆ ಎಂದು ಹೇಳಿದ್ದಾರೆ. ಆದರೆ ದೇವೇಗೌಡರು ಯಾಕೆ ಬಂದಿಲ್ಲ ಅನ್ನೋದನ್ನು ವಿಚಾರಿಸ್ತೀನಿ ಎಂದಿದ್ದಾರೆ.

    ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದವರು. ಆದರೆ ಅವರ ಅವಧಿಯಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಲಿಲ್ಲ. ಹೆಸರು ಕೂಡ ಇಡಲಿಲ್ಲ. ಅವರ ಕುಟುಂಬಕ್ಕೆ ಕೆಂಪೇಗೌಡರ ನೆನಪು ಆಗಲಿಲ್ಲ. ನಾನು ದೇವೇಗೌಡರ ಬಗ್ಗೆ ಮಾತಾಡಲ್ಲ, ಅವರು ಹಿರಿಯರು. ಕುಮಾರಸ್ವಾಮಿ, ಸಾರಾ ಮಹೇಶ್ ಹೊಟ್ಟೆಕಿಚ್ಚಿನಿಂದ ಮಾತಾಡ್ತೀದಾರೆ. ನಾವು ಮಾಡಲಾಗದ್ದನ್ನು ಬಿಜೆಪಿ ಮಾಡಿದೆ ಎಂಬ ಹೊಟ್ಟೆಕಿಚ್ಚು ಅವರದು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಅರೆಬರೆ ವಸ್ತ್ರ ಧರಿಸಿದವರ ಸಂಚಾರಕ್ಕೆ ನಿಷೇಧ!

    Live Tv
    [brid partner=56869869 player=32851 video=960834 autoplay=true]

  • ಸಹವಾಸ ದೋಷದಿಂದ ರಾಹುಲ್‌ ಗಾಂಧಿ ಥರ ಸಿದ್ದರಾಮಯ್ಯ ಮಾತಾಡ್ತಾರೆ: ಪ್ರಹ್ಲಾದ್ ಜೋಶಿ

    ಸಹವಾಸ ದೋಷದಿಂದ ರಾಹುಲ್‌ ಗಾಂಧಿ ಥರ ಸಿದ್ದರಾಮಯ್ಯ ಮಾತಾಡ್ತಾರೆ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ನೆರಳಲ್ಲಿ ಓಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಒಂದೊಂದು ಸಲ ರಾಹುಲ್ ಗಾಂಧಿ (Rahul Gandhi) ತರಹ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಲೇವಡಿ ಮಾಡಿದರು.

    ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಭಾರತ್‌ ಜೋಡೋ ಯಾತ್ರೆ ಅಂತ ಬಹಳ ದಿನ ರಾಹುಲ್ ಗಾಂಧಿ ಜೊತೆ ನಡೆದಿದ್ದಾರೆ. ಸಹವಾಸ ದೋಷದಿಂದ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ ಏನು ಮಾಡಿಲ್ಲ ಅಂತಾ ಕಳೆದ ಎರಡು ಲೋಕಸಭೆಯಲ್ಲಿ ನಿಮಗೆ ವಿರೋಧ ಪಕ್ಷದ ಅರ್ಹತೆ ಸಿಗಲಿಲ್ಲ. ಎರಡು ರಾಜ್ಯದಲ್ಲಿ ಕಾಂಗ್ರೆಸ್ (Congress) ಇದೆ. ಅದು ಈಗ ಹೋಗೋದಿದೆ. ಆದರೂ ಕಾಂಗ್ರೆಸ್‌ನವರ ದುರಹಂಕಾರ ಕಡಿಮೆ ಆಗಿಲ್ಲ ಎಂದು ಕಿಡಿಕಾರಿದರು.

    ನಿನ್ನೆ ಪ್ರಧಾನ ಮಂತ್ರಿಗಳು ಎರಡು, ಮೂರು ಅದ್ಭುತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ದೇಶದಲ್ಲಿ ನಿರ್ಮಾಣವಾಗಿದೆ. ಇದು ನಮಗೆಲ್ಲ ಸಂತೋಷ. ಕಳೆದ 7 ವರ್ಷದಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ಸರ್ಕಾರಕ್ಕೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ಹೆದ್ದಾರಿ ಹಾಗೂ ರೈಲ್ವೆಯಲ್ಲಿ ಅಭೂತ ಪೂರ್ವ ಕೆಲಸ ಆಗಿದೆ. 52 ಸಾವಿರ ಕಿ.ಮೀ ರೈಲ್ವೆ ವಿದ್ಯುದ್ದೀಕರಣ ಆಗಿದೆ. 8 ವರ್ಷದಲ್ಲಿ 30 ಸಾವಿರ ಕಿ.ಮೀ ನಮ್ಮ ಕಾಲದಲ್ಲಿ ಆಗಿದೆ. ಕಾಂಗ್ರೆಸ್ 50 ವರ್ಷ ಏನ್ ಮಾಡಿದೆ ಅದನ್ನು ನಾವು 7 ವರ್ಷದಲ್ಲಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ರಾಜೀವ್‌ ಗಾಂಧಿ ಹತ್ಯೆ ಕೇಸ್‌ – 30 ವರ್ಷಗಳ ನಂತರ ನಳಿನಿ ಶ್ರೀಹರನ್‌ ಸೇರಿ 3 ಅಪರಾಧಿಗಳು ರಿಲೀಸ್‌

    ನಾವು ಕೆಂಪೇಗೌಡ ಏರ್‌ಪೋರ್ಟ್ ಮಾಡಿದ್ದೇವೆ ಅಂತಾರೆ. ಇದು ಯಡಿಯೂರಪ್ಪ ಕಾಲದಲ್ಲಿ ರೆಸ್ಯೂಲೇಶನ್ ಆಗಿತ್ತು. ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ಬೇಕಿಲ್ಲ, ಜನರ ಕಲ್ಯಾಣ ಬೇಕಿಲ್ಲ. ನಿಮಗೆ ಬೇಕಾಗಿರೋದು ರಾಜಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ – ಗಂಭೀರ ಘಟನೆಯಲ್ಲ: ಲಕ್ಷ್ಮಣ ಸವದಿ

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಬೇಡಿಕೆ ದ್ವಿಗುಣಗೊಳ್ಳುವ ಸಂದರ್ಭದಲ್ಲಿ ಕಲ್ಲಿದ್ದಲು ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತಮ ಅವಕಾಶ : ಪ್ರಹ್ಲಾದ್‌ ಜೋಶಿ

    ವಿದ್ಯುತ್ ಬೇಡಿಕೆ ದ್ವಿಗುಣಗೊಳ್ಳುವ ಸಂದರ್ಭದಲ್ಲಿ ಕಲ್ಲಿದ್ದಲು ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತಮ ಅವಕಾಶ : ಪ್ರಹ್ಲಾದ್‌ ಜೋಶಿ

    ಇಂದೋರ್‌: 2040 ರ ವೇಳೆಗೆ ಭಾರತ ದೇಶದಲ್ಲಿ ತಲಾ ವಿದ್ಯುತ್ ಬಳಕೆ ದ್ವಿಗುಣಗೊಳ್ಳಲಿದ್ದು, ಹೆಚ್ಚಿನ ಕಲ್ಲಿದ್ದಲು(Coal) ಉತ್ಪಾದನೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಹೇಳಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

    ಕಲ್ಲಿದ್ದಲು ಸಚಿವಾಲಯ(Coal Ministry) ಇಂದೋರ್‌ನಲ್ಲಿ ಇಂದು ಮೊಟ್ಟಮೊದಲ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಂಡಿತ್ತು. ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಶಿ, ಕೇಂದ್ರ ಸರಕಾರ ಕಲ್ಲಿದ್ದಲು ಕ್ಷೇತ್ರವನ್ನ ಖಾಸಗಿ ವಲಯಕ್ಕೂ ಅನ್ ಲಾಕ್ ಮಾಡುವ ಮೂಲಕ ಹೆಚ್ಚಿನ ಉತ್ಪಾದನೆಗೆ ಗಮನಹರಿಸಿದೆ ಎಂದರು. ಕಲ್ಲಿದ್ದಲು ಆಮದನ್ನ ಶೇ. 2ಕ್ಕೆ ಇಳಿಸಲಾಗಿದೆ ಎಂದರು.

    ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ್‌ನತ್ತ ಸಾಗುತ್ತಿದೆ. ವಿದ್ಯುತ್ ಬಳಕೆ ದ್ವಿಗುಣಗೊಳ್ಳುವ ಸಂದರ್ಭದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ 6 ನೇ ಹಂತದ 133 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ 5 ನೇ ಹಂತದ 64 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ಅಲ್ಲದೇ 5 ನೇ ಹಂತದ ಎರಡನೇ ಪ್ರಯತ್ನದಲ್ಲಿ 8 ಗಣಿಗಳ ಹರಾಜು ಪ್ರಾರಂಭಿಸಲಾಗಿದೆ ಎಂದು ಜೋಶಿ ತಿಳಿಸಿದರು. ಇದನ್ನೂ ಓದಿ: ಜಿ20 ಲೋಗೋದಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿ ತನ್ನ ಲೋಗೋ ತುರುಕಿದೆ: ಕಾಂಗ್ರೆಸ್‌ ಕಿಡಿ

    ಕಲ್ಲಿದ್ದಲು ಸಚಿವಾಲಯದಲ್ಲಿ ಸಂಪೂರ್ಣ ಪಾರದರ್ಶಕತೆ ತರಲಾಗಿದ್ದು, ಉದ್ಯಮ ಸ್ನೇಹಿ ವಾತಾವರಣ ರೂಪಿಸಲಾಗಿದೆ. ಹೂಡಿಕೆದಾರರು ಹೂಡಿಕೆ ಮಾಡಲು ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ಮುಂದಿನ 25 – 30 ವರ್ಷಗಳ ವರೆಗೆ ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚುತ್ತಲೇ ಹೋಗಲಿದೆ ಎಂದು ಅಭಿಪ್ರಾಯಪಟ್ಟರು.

    ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತವು ಪ್ರಸ್ತುತ ತಲಾ ವಿದ್ಯುತ್ ಬಳಕೆಯ ಹತ್ತನೇ ಒಂದು ಭಾಗವನ್ನು ಹೊಂದಿಲ್ಲ. 2040 ರ ವೇಳೆಗೆ ತಲಾ ಬಳಕೆ ದ್ವಿಗುಣಗೊಳ್ಳಲಿದೆ, ಇದಕ್ಕಾಗಿ ಕಲ್ಲಿದ್ದಲು ಅಗತ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಉತ್ತಮ ತಾಂತ್ರಿಕ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಜೋಶಿ ಹೂಡಿಕೆದಾರರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ವಿದೇಶಿ ತಳಿ, ಜಾರಕಿಹೊಳಿಯನ್ನು ಉಚ್ಛಾಟಿಸಿ: ಯತ್ನಾಳ್

    ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ, ಕೋಲ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷರಾದ ಪ್ರಮೋದ್ ಅಗರವಾಲ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್‌ – ವಿಜಯಪುರದಿಂದ ಕೊಟ್ಟಾಯಂಗೆ ಹೊಸ ರೈಲು

    ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್‌ – ವಿಜಯಪುರದಿಂದ ಕೊಟ್ಟಾಯಂಗೆ ಹೊಸ ರೈಲು

    ಹುಬ್ಬಳ್ಳಿ: ಹುಬ್ಬಳ್ಳಿ (Hubballi), ಧಾರವಾಡ (Dharwad) ಹಾಗೂ ಉತ್ತರ ಕರ್ನಾಟಕ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲ ಕಲ್ಲಿಸಲು ಹೊಸ ರೈಲು (Train) ಸೇವೆ ಸೋಮವಾರದಿಂದ (ನವೆಂಬರ್‌ 7) ಆರಂಭವಾಗಲಿದೆ. ಹುಬ್ಬಳ್ಳಿಯಿಂದ ಶಬರಿಮಲೆಗೆ (Sabarimala Temple) ಪ್ರಯಾಣಿಸಲು ರೈಲು ವ್ಯವಸ್ಥೆ ಕಲ್ಪಿಸುವಂತೆ ಅಯ್ಯಪ್ಪ ಸ್ವಾಮಿ ಭಕ್ತರ ಮನವಿಗೆ ಸ್ಪಂದಿಸಿದ್ದು, ಈ ಸೇವೆ ಆರಂಭಿಸಿರುವುದಾಗಿ ಪ್ರಹ್ಲಾದ್‌ ಜೋಶಿ (Pralhad Joshi) ಅವರು ತಿಳಿಸಿದ್ದಾರೆ.

    ಅಯ್ಯಪ್ಪ ಸ್ವಾಮಿ ಭಕ್ತರ (Ayyappa Swamy Devotees) ಕೋರಿಕೆಗೆ ಸ್ಪಂದಿಸಿದ ಪ್ರಹ್ಲಾದ್‌ ಜೋಶಿ (Pralhad Joshi), ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnaw) ಅವರ ಗಮನಕ್ಕೆ ಈ ವಿಷಯ ತಂದು, ಸೂಕ್ತ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದರು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಉತ್ತರ ಕರ್ನಾಟಕದ ಭಾಗದಿಂದ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ತೆರಳುತ್ತಾರೆ. ಇದರಿಂದ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೇ, ಉತ್ತರ ಕರ್ನಾಟಕ ಭಾಗದ ಎಲ್ಲ ಭಕ್ತರಿಗೂ ರೈಲಿನ ಅನುಕೂಲವಾಗಲಿದೆ. ಇದೆಲ್ಲವನ್ನು ಯೋಚಿಸಿ ವಿಜಯಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಶಬರಿಮಲೆ ಹೊಸ ರೈಲು (Train) ಸಂಪರ್ಕ ಕಲ್ಪಿಸುವಂತೆ ಜೋಶಿ ರೈಲ್ವೆ ಸಚಿವರಿಗೆ ಕೋರಿದ್ದರು. ಅದರಂತೆ ವಿಜಯಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಕೊಟ್ಟಾಯಂ ವರೆಗೆ ರೈಲು ಸೇವೆ ಆರಂಭಿಸುವಂತೆ ಅಶ್ವಿನಿ ವೈಷ್ಣವ್‌ ಆದೇಶಿಸಿದ್ದಾರೆ. ಇದನ್ನೂ ಓದಿ: ಟೆಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್

    ಸಾಂದರ್ಭಿಕ ಚಿತ್ರ

    07385 ಸಂಖ್ಯೆಯ ಸಾಪ್ತಾಹಿಕ ರೈಲು ಸೋಮವಾರ ರಾತ್ರಿ 11 ಗಂಟೆಗೆ ವಿಜಯಪುರದಿಂದ (Vijayapura) ಹೊರಡಲಿದ್ದು, ಬುಧವಾರ ಬೆಳಗಿನ ಜಾವ 2 ಗಂಟೆಗೆ ಕೊಟ್ಟಾಯಂ ತಲುಪಲಿದೆ. ವಿಜಯಪುರ, ಬಸವನ ಬಾಗೇವಾಡಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಆಲಮಟ್ಟಿ, ಗದಗ, ಹುಬ್ಬಳ್ಳಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಅರಸಿಕೇರೆ, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಇರೋಡ್, ತಿರುಪ್ಪೂರು, ಕೊಯಂಬತ್ತೂರು, ಪಾಲಕ್ಕಾಡ್, ತ್ರಿಶೂರ್‌ ಹಾಗೂ ಎರ್ನಾಕುಲಂ ಮಾರ್ಗವಾಗಿ ರೈಲು ಕೊಟ್ಟಾಯಂ ತಲುಪಲಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿ

    ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿ

    ಧಾರವಾಡ: ಕಾಂಗ್ರಸ್‍ನವರಿಗೆ (Congress) ಧ್ಯಾನ (Meditation) ಎಂದರೇ ಏನು ಅಂತಾನೇ ಗೊತ್ತಿಲ್ಲ. ಅವರಿಗೆ ಕೇವಲ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯೇ ಧ್ಯಾನ ಇದ್ದಂತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಲೇವಡಿ ಮಾಡಿದರು.

    ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸುವ ವಿಚಾರದ ಕುರಿತು ಸಿದ್ದರಾಮಯ್ಯ (Siddaramaiah) ಮಾಡಿದ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಅವರು, ಶಾಲಾ ಮಕ್ಕಳಿಗೆ ಧ್ಯಾನ ಮಾಡಿಸುವ ಮೂಲಕ ಹಿಂದುತ್ವ ಹೇರುತ್ತಿದ್ದಾರೆ ಎಂಬುದು ಸುಳ್ಳು. ಶಾಲೆಗಳಲ್ಲಿ ಇಂತದ್ದೇ ದೇವರ ಧ್ಯಾನ ಮಾಡಿ ಎಂದು ಹೇಳಿಲ್ಲ. ಕಾಂಗ್ರೆಸ್‍ನವರು ಭಗವದ್ಗೀತೆಯನ್ನೂ ವಿರೋಧ ಮಾಡುತ್ತಾರೆ. ಒಂದು ಸಮಾಜದ ತುಷ್ಟೀಕರಣ ಮಾಡುವುದಕ್ಕಾಗಿ ಏನು ಬೇಕಾಗಿದೆಯೋ ಅದನ್ನೆಲ್ಲ ಮಾಡಿದ್ದಾರೆ. ತ್ರಿವಳಿ ತಲಾಕ್ ವಿಷಯದಲ್ಲಿ ಸುಪ್ರೀಂ ಕೋರ್ಟ್‍ನ ಆದೇಶವನ್ನೂ ತಿರುವು ಮುರುವು ಮಾಡಿದ್ದಾರೆ ಎಂದು ಆರೋಪಿಸಿದರು.

    ಯೋಗ ಮಾಡಿದಾಗಲೂ ಕಾಂಗ್ರೆಸ್‍ನವರು ವಿರೋಧ ವ್ಯಕ್ಯಪಡಿಸಿದ್ದರು. ಆದರೆ, ಇಡೀ ಜಗತ್ತು ಯೋಗ ಒಪ್ಪಿಕೊಂಡ ಮೇಲೆ ಕಾಂಗ್ರೆಸ್‍ನವರು ಯೋಗ ಒಪ್ಪಿಕೊಳ್ಳುತ್ತಿದ್ದಾರೆ ಎಂದ ಅವರು, ಭಾರತೀಯ ಪರಂಪರೆಯನ್ನು ವಿರೋಧ ಮಾಡುವುದು ಕಾಂಗ್ರೆಸ್‍ನವರ ಕೆಲಸ. ಅವರು ಯಾವ ದೇವರನ್ನು ಆರಾಧನೆ ಮಾಡುತ್ತಾರೋ ಆ ದೇವರು ಅವರಿಗೆ ಸಮೃದ್ಧಿ ನೀಡಲಿ ಎಂದರು. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – BJPಗೆ ಗುಡ್ ಬೈ ಹೇಳಿದ ಹಿರಿಯ ನಾಯಕ

    ಕಾಂಗ್ರೆಸ್‍ನವರು ಹಣ, ಅಧಿಕಾರದ ಧ್ಯಾನ ಮಾಡುತ್ತಾರೆ ಮಾಡಲಿ. ಆದರೆ, ಶಾಲಾ ಮಕ್ಕಳಲ್ಲಿ ಏಕಾಗೃತೆ ಬರಲಿ ಎಂಬ ಕಾರಣಕ್ಕೆ ಧ್ಯಾನ ಮಾಡಿಸುವ ನಿಯಮ ತಂದಿರಬಹುದು. ಆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಕಾಂಗ್ರೆಸ್‍ನವರು ಬೇಜವಾಬ್ದಾರಿತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಒಂದು ಲಕ್ಷ ಸರ್ಕಾರಿ ಉದ್ಯೋಗ, ಉಚಿತ ವಿದ್ಯುತ್ – ಹಿಮಾಚಲ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ

    Live Tv
    [brid partner=56869869 player=32851 video=960834 autoplay=true]

  • 2025ರಲ್ಲಿ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ – ಸಮಾವೇಶದಲ್ಲಿ ಹೂಡಿಕೆದಾರರ ಗಮನ ಸೆಳೆದ ಜೋಶಿ

    2025ರಲ್ಲಿ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ – ಸಮಾವೇಶದಲ್ಲಿ ಹೂಡಿಕೆದಾರರ ಗಮನ ಸೆಳೆದ ಜೋಶಿ

    ಬೆಂಗಳೂರು: ಬಂಡವಾಳ ಹೂಡಿಕೆಗೆ ಕಲ್ಲಿದ್ದಲು (Coal)  ಕ್ಷೇತ್ರದಲ್ಲಿ ಉತ್ತಮ ಅವಕಾಶ ಕಲ್ಪಿಸಲಾಗಿದ್ದು, 2025ರ ಸಾಲಿನಲ್ಲಿ 1 ಬಿಲಿಯನ್‌ ಟನ್‌ (ಶತಕೋಟಿ) ನಷ್ಟು ಕಲ್ಲಿದ್ದಲು ಉತ್ಪಾದಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಬುಧವಾರ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಡೊಮೆಸ್ಟಿಕ್ ಕೋಲ್ ಪ್ರೊಡಕ್ಷನ್ (Domestic Coal Production) 900 ದಶಲಕ್ಷ ಟನ್ ತಲುಪಿದೆ. 2025ರ ಸಾಲಿನಲ್ಲಿ ಕೋಲ್ ಇಂಡಿಯಾ (Coal India) 1 ಬಿಲಿಯನ್‌ ಟನ್‌ ನಷ್ಟು ಕಲ್ಲಿದ್ದಲು ಉತ್ಪಾದಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಶ್ಲೀಲ ದೃಶ್ಯ ನೋಡಿ ಪ್ರಚೋದನೆ – ಅಪ್ರಾಪ್ತನಿಂದ ಬಾಲಕಿಯ ಮೇಲೆ ರೇಪ್‌, ಕೊಲೆ

    ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ಅವಕಾಶಗಳಿವೆ. ಅದಕ್ಕಾಗಿ ಉದ್ಯಮಸ್ನೇಹಿ ವಾತಾವರಣ ಕಲ್ಪಿಸಲಾಗಿದೆ. ಕಲ್ಲಿದ್ದಲು ಕ್ಷೇತ್ರದಿಂದ ದೇಶದ ಜಿಡಿಪಿಗೆ (GDP) ಶೇ 2.5 ರಷ್ಟು ಕೊಡುಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿರ್ದೇಶನ ನೀಡಿದ್ದಾರೆ. ಈ ಗುರಿ ಮುಟ್ಟುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಗುರುವಾರ (ನವೆಂಬರ್‌ 3) 124 ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ನಡೆಯಲಿದೆ. ಯಾರು ಬೇಕಾದರು ಪಾಲ್ಗೊಳ್ಳಬಹುದು. ಗಣಿಗಾರಿಕೆಗೆ (Mining) ಬೇಕಾದ 21 ಕ್ಲಿಯರೆನ್ಸ್ ಗಳನ್ನ ಸುಲಲಿತವಾಗಿ ವರ್ಗಾಯಿಸುವ ನಿಯಮಗಳನ್ನೂ ಜಾರಿಗೆ ತರಲಾಗಿದೆ. ಇದರ ಪರಿಣಾಮವಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯಾಗುತ್ತಿದೆ. ಉತ್ಪಾದನೆ ಕೂಡ ಹೆಚ್ಚಿದೆ ಹೆಚ್ಚಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ರಾಜಕೀಯ ದಾಹಕ್ಕೆ ಇನ್ನೆಷ್ಟು ಹೆಣ ಬೀಳಬೇಕು?: ಸುಂದರೇಶ್

    ಪ್ರಧಾನಿ ಮೋದಿ ಅವರ 5 ಲಕ್ಷಕೋಟಿ ಡಾಲರ್ ಆರ್ಥಿಕತೆಯ ಗುರಿ ತಲುಪುವಲ್ಲಿ ಕರ್ನಾಟಕ ಕೂಡ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಭಾವಿಸಿದ್ದಾರೆ. ಪ್ರಗತಿ ಹೊಂದಿರುವ ರಾಜ್ಯ ಕರ್ನಾಟಕದಲ್ಲೂ ಹೆಚ್ಚಿನ ಹೂಡಿಕೆಗೆ ಹೂಡಿಕೆದಾರರು ಮುಂದೆ ಬರಬೇಕು ಎಂದು ಹೇಳಿದ್ದಾರೆ

    Live Tv
    [brid partner=56869869 player=32851 video=960834 autoplay=true]

  • ಕೋಟಿ ಕಂಠ ಗಾಯನದಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಪ್ರಹ್ಲಾದ್‌ ಜೋಶಿ

    ಕೋಟಿ ಕಂಠ ಗಾಯನದಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಪ್ರಹ್ಲಾದ್‌ ಜೋಶಿ

    ಧಾರವಾಡ: ಅರವತ್ತೇಳನೇ ಕನ್ನಡ ರಾಜ್ಯೋತ್ಸವದ(Kannada Rajyotsava) ಅಂಗವಾಗಿ ಹಮ್ಮಿಕೊಂಡಿರುವ ಕೋಟಿ ಕಂಠ ಕನ್ನಡ ಗಾಯನದಲ್ಲಿ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಕುಣಿದು ಸಂಭ್ರಮಿಸಿದರು. ಕನ್ನಡದ ಕಂಪನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಈ ವಿಶೇಷ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದ್ದು, ಜಗತ್ತಿನ ಮೂಲೆ ಮೂಲೆಗಳಲ್ಲಿ ಏಕಕಾಲಕ್ಕೆ ಕನ್ನಡದ ಗಾನ ಮೊಳಗಿಸಿದ್ದಕ್ಕೆ ಕೇಂದ್ರ ಸಚಿವ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.‌

    ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಅನೇಕ ಕಡೆಗಳಲ್ಲಿ ಹಮ್ಮಿಕೊಂಡಿರುವ “ಕೋಟಿ ಕಂಠ ಗಾಯನ” ವಿಶೇಷ ಕಾರ್ಯಕ್ರಮಗಳಲ್ಲಿ ಧಾರವಾಡದಿಂದ ಪ್ರಹ್ಲಾದ್‌ ಜೋಶಿ ಅವರು ಪಾಲ್ಹೊಂಡಿದ್ದರು. ಸಾವಿರಾರು ಯುವ ಕನ್ನಡಿಗ ಮಿತ್ರರೊಂದಿಗೆ ಕ‌ನ್ನಡ ಹಾಡಿಗೆ ಜೋಶಿ ಅವರು ಹೆಜ್ಜೆ ಹಾಕಿದರು. ಈ ಮೂಲಕ ಕನ್ನಡದ ಕಂಪನ್ನ ಹೆಚ್ಚು ಪಸರಿಸುವ ನಿಟ್ಟಿಲ್ಲಿ ಉತ್ಸುಕರಾಗಿದ್ದ ಯುವಕರಿಗೆ ಪ್ರೇರಣೆ ನೀಡಿದರು. ಇದನ್ನೂ ಓದಿ: 67ನೇ ಕನ್ನಡ ರಾಜ್ಯೋತ್ಸವ – ಸುವರ್ಣ ಸೌಧದಲ್ಲಿ ಕೋಟಿ ಕಂಠ ಗಾಯನ

    ಕನ್ನಡ ನಾಡು ನುಡಿಯ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಇದೇ ವೇಳೆ ಸಂದೇಶ ನೀಡಿದ ಕೇಂದ್ರ ಸಚಿವರು ಎಲ್ಲರೂ ಒಟ್ಟಾಗಿ ಕನ್ನಡ ಗಾಯನ ಪ್ರದರ್ಶನ ಮಾಡುವಂತೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ‌

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಸ್ಥಿತಿ `ಮನೆಯೊಂದು ಮೂರು ಬಾಗಿಲು’ ಆಗಿದೆ – ಜೋಶಿ ಲೇವಡಿ

    ಕಾಂಗ್ರೆಸ್ ಸ್ಥಿತಿ `ಮನೆಯೊಂದು ಮೂರು ಬಾಗಿಲು’ ಆಗಿದೆ – ಜೋಶಿ ಲೇವಡಿ

    ಧಾರವಾಡ: ಕಾಂಗ್ರೆಸ್ (Congress) ಒಡೆದ ಮನೆಯಾಗಿದ್ದು, ಅದಕ್ಕೆ ಮೂರು ಬಾಗಿಲುಗಳಾಗಿವೆ. ಎರಡು ಬಾಗಿಲುಗಳಾಗಿದ್ದವು. ಈಗ ಖರ್ಗೆ (Mallikarjun Kharge) ಅವರದ್ದೊಂದು ಬಾಗಿಲು ಹುಟ್ಟಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಲೇವಡಿ ಮಾಡಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲೀಗ (Congress) ಖರ್ಗೆ ಬೆಂಬಲಿಗರ ಗುಂಪೊಂದು ಹುಟ್ಟಿಕೊಂಡಿದೆ. ಹಾಗಾಗಿ ಕಾಂಗ್ರೆಸ್ ಎಷ್ಟು ಯಾತ್ರೆ ಮಾಡಿದರೂ ಸುಧಾರಣೆ ಆಗಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 8 ನಿಮಿಷವಾಗಿದೆ, ಕೂಡಲೇ ಭಾಷಣ ನಿಲ್ಲಿಸಿ: ಸಭೆಯಲ್ಲೇ ಹರ್ಯಾಣ ಗೃಹ ಸಚಿವರಿಗೆ ಶಾ ಕ್ಲಾಸ್‌


    ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂದು ದೇಶವೇ ನೋಡುತ್ತಿದೆ. ಗುಜರಾತ್‌ಗೆ (Gujarat) ಈಗಾಗಲೇ ನಾನು ಎರಡು ಬಾರಿ ಹೋಗಿ ಬಂದಿದ್ದೇನೆ. ಅಲ್ಲಿ ಕಾಂಗ್ರೆಸ್ (Congress) ಅಡ್ರೆಸ್‌ಗಿಲ್ಲದಂತಾಗಿದೆ. ದೇಶದಲ್ಲೂ ಕೂಡ ನಾಪತ್ತೆಯಾಗುತ್ತಿದೆ ಎಂದು ಕುಟುಕಿದ್ದಾರೆ.

    ಹಿಂದಿ ಹೇರಿಕೆ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (NEP) ಇಂಜಿನಿಯರಿಂಗ್, ಮೆಡಿಕಲ್ (Medical Cource) ಎಲ್ಲಾ ಕೋರ್ಸ್‌ಗಳಿರಬೇಕು, ಆಯಾ ರಾಜ್ಯಗಳ ಭಾಷೆಯಲ್ಲೇ ಇರಬೇಕು ಎಂದು ಹೇಳಿದೆ ಎಂದರು. ಇದನ್ನೂ ಓದಿ: ಕರೆನ್ಸಿ ನೋಟುಗಳಲ್ಲಿರಲಿ ಗಣೇಶ, ಲಕ್ಷ್ಮೀ ಚಿತ್ರ – ಮೋದಿಗೆ ಕೇಜ್ರಿವಾಲ್ ಪತ್ರ

    ರವೀಂದ್ರನಾಥ ಠಾಗೋರ್ ಅವರು, ಭಾಷೆಗಳು ಒಂದು ಕಮಲವಿದ್ದಂತೆ ಎಲ್ಲಾ ಭಾಷೆಗಳು ಕಮಲದ ದಳಗಳಿದ್ದಂತೆ, ಆದರೆ ಹಿಂದಿ ದಳ ಮಧ್ಯೆದಲ್ಲಿದೆ ಎಂದಿದ್ದರು. ದಳಗಳಿಲ್ಲದ ಕಮಲ ಹೂವಾಗುವುದಿಲ್ಲ. ಹಾಗಾಗಿ ಹಿಂದಿ ದಳಗಳನ್ನು ಹೊಂದಿದ ಭಾಷೆ. ನಾವು ಎಲ್ಲ ರಾಜ್ಯದಲ್ಲಿ ಅನುಮತಿ ಕೊಟ್ಟಿದ್ದೇವೆ. ಇಷ್ಟು ಅಧಮ್ಯತೆಯನ್ನು ಸರ್ಕಾರ ಕೊಟ್ಟಿದೆ. ಕೆಲವರಿಗೆ ಮಾಡಲಿಕ್ಕೆ ಕೆಲಸವಿಲ್ಲದೇ ಮಾತನಾಡುತ್ತಾರೆ. ಹಿಂದಿ ಹೇರಿಕೆ ನೆಪದಲ್ಲಿ ಇಂಗ್ಲಿಷ್‌ಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಈ ಕಡೆ ಹಿಂದಿ ಬೆಳೆಯಲೂ ಕೊಡುತ್ತಿಲ್ಲ, ಅತ್ತ ಕಡೆ ಕನ್ನಡ ಬೆಳೆಯಲೂ ಬಿಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಯಾತ್ರೆಯಿಂದ ನಾವು ವಿಚಲಿತರಾಗಿದ್ದೇವೆ – ಪ್ರಹ್ಲಾದ್ ಜೋಶಿ

    ಭಾರತ್ ಜೋಡೋ ಯಾತ್ರೆಯಿಂದ ನಾವು ವಿಚಲಿತರಾಗಿದ್ದೇವೆ – ಪ್ರಹ್ಲಾದ್ ಜೋಶಿ

    ಬೆಂಗಳೂರು: ಭಾರತ್ ಜೋಡೋ ಯಾತ್ರೆಯಿಂದ (Bharat Jodo) ನಾವು ವಿಚಲಿತರಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವ್ಯಂಗ್ಯವಾಡಿದ್ದಾರೆ.

    `ಜೋಡೋ ಯಾತ್ರೆಯಿಂದ ಬಿಜೆಪಿ (BJP) ಭಯ ಬಿದ್ದಿದೆ’ ಎಂಬ ಕಾಂಗ್ರೆಸ್ (Congress) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೌದು. ನಾವು ವಿಚಲಿತರಾಗಿದ್ದಕ್ಕೇ ಗೋವಾದಲ್ಲಿ ಕಾಂಗ್ರೆಸ್ (Congress) ಪಕ್ಷ ಬಿಟ್ಟು ಹೋಗ್ತಿದ್ದಾರೆ. ಭಾರತ್ ಜೋಡೊ (Bharat Jodo) ಆಗ್ತಿದ್ದಂತೆ ರಾಜಸ್ಥಾನದಲ್ಲೂ ಪಕ್ಷ ಬಿಟ್ಟು ಹೋಗಲು ತಯಾರಾಗಿದ್ದಾರೆ. ಜೋಡೋ ಅಂತ ಹೆಸರು ಕೊಟ್ಟು ಕಾಂಗ್ರೆಸ್ ತೋಡೋ ಯಾತ್ರೆ ನಡೆಯುತ್ತಿದೆ. ಅದನ್ನು ಮುಚ್ಚಿಕೊಳ್ಳಲು ಹೀಗೆ ಮಾತಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

    ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಾತನಾಡಿ, ಸಿಎಂ ಬೊಮ್ಮಾಯಿ (Basavaraj Bommai) ದೆಹಲಿಗೆ ಬರ್ತೀನಿ ಅಂತ ಹೇಳಿದ್ದಾರೆ. ದೀಪಾವಳಿ (Diwali) ಮುಗಿದ ಮೇಲೆ ಸಿಎಂ ದೆಹಲಿಗೆ ಬಂದಾಗ ನಾನು ಸಿಎಂ ಚರ್ಚೆ ಮಾಡ್ತೀವಿ. ನಂತರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಾತಾನಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪರಸ್ಪರ ಕಿತ್ತಾಡಿ ಮಕ್ಕಳೊಂದಿಗೆ ಬಾವಿಗೆ ಜಿಗಿದ ಓರಗಿತ್ತಿಯರು – ಗರ್ಭಿಣಿ ಸಾವು

    ಯುವ ಸಮೂಹಕ್ಕೆ ಉದ್ಯೋಗಾವಕಾಶ ಕಲ್ಪಿಸುವ ಸಂಬಂಧ ಮಾತನಾಡಿದ ಅವರು, ಪ್ರಧಾನಿ ಮೋದಿ (Narendra Modi) ಈಗಾಗಲೇ ಎಲ್ಲವನ್ನೂ ಮಾತಾಡಿದ್ದಾರೆ. ಕರ್ನಾಟಕದಲ್ಲಿ 1,000 ನೇಮಕಾತಿ ಆದೇಶ ನೀಡಿದ್ದೇವೆ. ಮುಂದಿನ 12 ತಿಂಗಳು ಈ ಕಾರ್ಯಕ್ರಮ ನಡೆಯುತ್ತೆ. 10 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ನಟ ಚೇತನ್‌ ಒಬ್ಬ ನಾಲಾಯಕ್, ಮುಸ್ಲಿಂ ಏಜೆಂಟ್‌: ಯತ್ನಾಳ್

    ಕೋವಿಡ್, ಉಕ್ರೇನ್ ಯುದ್ಧ ಸೇರಿದಂತೆ ಅನೇಕ ಸಮಸ್ಯೆಗಳ ಮಧ್ಯೆ ಕೆಲಸ ಮಾಡ್ತಿದ್ದೇವೆ. ಈ ನಡುವೆಯೂ ನಮ್ಮ ದೇಶದ ಅರ್ಥ ವ್ಯವಸ್ಥೆ ಉತ್ತಮವಾಗಿದೆ. ವಿದ್ಯುತ್ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ಕಳೆದ 8 ಮೋದಿ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಹ್ಲಾದ್‌ ಜೋಶಿ ಕಾರ್ಯವೈಖರಿ ಹೊಗಳಿದ ಕಾಂಗ್ರೆಸ್ ನಾಯಕ, ರಾಜಸ್ಥಾನ ಸಿಎಂ ಗೆಹ್ಲೋಟ್

    ಪ್ರಹ್ಲಾದ್‌ ಜೋಶಿ ಕಾರ್ಯವೈಖರಿ ಹೊಗಳಿದ ಕಾಂಗ್ರೆಸ್ ನಾಯಕ, ರಾಜಸ್ಥಾನ ಸಿಎಂ ಗೆಹ್ಲೋಟ್

    ಜೈಪುರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಕಲ್ಲಿದ್ದಲು ಮತ್ತು ಗಣಿ ಇಲಾಖೆಯನ್ನ ನಡೆಸುತ್ತಿರುವ ಆಡಳಿತ ರೀತಿಗೆ ಕಾಂಗ್ರೆಸ್ (Congress) ಮುಖಂಡ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‌

    ಪ್ರಹ್ಲಾದ್ ಜೋಶಿಯವರು ರಾಜಸ್ಥಾನ ರಾಜ್ಯದ ವಿದ್ಯುತ್ ಸಮಸ್ಯೆ ಬಗೆಹರಿಸುವಲ್ಲಿ ರಚನಾತ್ಮಕ ಹಾಗೂ ಧನಾತ್ಮಕ ಸ್ಪಂದನೆ ನೀಡಿದ್ದಾರೆಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕೇಂದ್ರದ ಕೋಲ್ ಇಂಡಿಯಾ ಲಿಮಿಟೆಡ್ ಹಾಗೂ ರಾಜಸ್ಥಾನ್ ವಿದ್ಯುತ್ ಉತ್ಪಾದನಾ ನಿಗಮದೊಂದಿಗೆ 1,190 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕುರಿತ ಒಡಂಬಡಿಕೆಗೆ ಅಂಕಿತ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಇದನ್ನೂ ಓದಿ: ಒಂದೇ ಶಬ್ದದಲ್ಲಿ ಹೇಳ್ತೀನಿ, ನನ್ನ ಶಕ್ತಿ ಶಿವ: ರಾಹುಲ್ ಗಾಂಧಿ ಹೇಳಿದ ಗುಟ್ಟುಗಳು

    ರಾಜಸ್ಥಾನದಲ್ಲಿ ವಿದ್ಯುತ್ ಸಮಸ್ಯೆ ಇದ್ದಾಗ ಛತ್ತೀಸಘಡದಲ್ಲಿರುವ ಕಲ್ಲಿದ್ದಲಿನ ಪ್ರಾಧಿಕಾರಗಳೂ ಸಾಕಷ್ಟು ಸಹಕಾರ ನೀಡಿವೆ. ಕೇಂದ್ರ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ನೆರವಾಗಿದೆ. ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿಯವರು ರಾಜಸ್ಥಾನದ ವಿದ್ಯುತ್ ಬರ ನೀಗಿಸುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್‌ ಜೋಶಿ, ರಾಜಸ್ಥಾನದ (Rajasthan) ಸೋಲಾರ್ ಪಾರ್ಕ್ ಯೋಜನೆಯಡಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗುವುದು. ಕೋಲ್ ಇಂಡಿಯಾ ಲಿ. ಸಂಕಲ್ಪಿತ ಗ್ಯಾಸಿಫಿಕೇಶನ್ ಮೂಲಕ ಪರಿಸರ ಸ್ನೇಹಿ ಪರಿಶುದ್ಧ ಸೋಲಾರ್ ವಿದ್ಯುತ್ ಉತ್ಪಾದನಾ ಪ್ರಕ್ರಿಯೆ ಜಾರಿಗೆ ತರಲಾಗಿದೆ. ನಮ್ಮ ದೇಶ ಮುಂದಿನ 50 ವರ್ಷಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ನಿಕ್ಷೇಪ ಹೊಂದಿದೆ. ಈ ಕಲ್ಲಿದ್ದಲನ್ನು ಪರಿಸರ ಸ್ನೇಹಿಯಾಗಿ ಬಳಸಲು ಉದ್ದೇಶಿಸಲಾಗಿದೆ ಎಂದರು. ಇದನ್ನೂ ಓದಿ: ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಗುಜರಾತ್ ಎಎಪಿ ಮುಖ್ಯಸ್ಥ ಪೊಲೀಸ್ ವಶಕ್ಕೆ

    ತಿಳಿವಳಿಕೆ ಪತ್ರಕ್ಕೆ ರಾಜಸ್ಥಾನದ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕುಮಾರ್ ಶರ್ಮಾ, ಕೋಲ್ ಇಂಡಿಯಾ ಲಿ. ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಅಗರವಾಲ್ ಹಾಗೂ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ಅಂಕಿತ ಹಾಕಲಾಯಿತು.

    Live Tv
    [brid partner=56869869 player=32851 video=960834 autoplay=true]