Tag: ಪ್ರಹ್ಲಾದ್ ಜೋಶಿ

  • ಜನವರಿಯಲ್ಲಿ ರಾಜ್ಯಕ್ಕೆ ಪ್ರಧಾನಿ ಮೋದಿ 4 ಬಾರಿ ಬರಲಿದ್ದಾರೆ: ಪ್ರಹ್ಲಾದ್ ಜೋಶಿ

    ಜನವರಿಯಲ್ಲಿ ರಾಜ್ಯಕ್ಕೆ ಪ್ರಧಾನಿ ಮೋದಿ 4 ಬಾರಿ ಬರಲಿದ್ದಾರೆ: ಪ್ರಹ್ಲಾದ್ ಜೋಶಿ

    ಧಾರವಾಡ: ಮುಂದಿನ ವರ್ಷ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) 3-4 ಬಾರಿ ಬರಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.

    ಧಾರವಾಡ (Dharwad) ಹೊರವಲಯದ ಮುಮ್ಮಿಗಟ್ಟಿ ಗ್ರಾಮದ ಹಿಂದೆ ನಿರ್ಮಾಣವಾಗುತ್ತಿರುವ ಐಐಟಿ ಕ್ಯಾಂಪಸ್‌ಗೆ ಭೇಟಿ ನೀಡಿದ ಜೋಶಿ ಪರಿಶೀಲನೆ ನಡೆಸಿ, ಕಟ್ಟಡ ಕಾಮಗಾರಿ ಮುಕ್ತಾಯದ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆಗೆ ಬರಲಿದ್ದಾರೆ. ಜನವರಿ 1ನೇ ತಾರೀಖಿಗೆ ಉದ್ಘಾಟನೆ ಮಾಡಬೇಕು ಎಂಬ ಯೋಜನೆಯಿದೆ. ಕಟ್ಟಡ ತಯಾರಾದರೆ ಅದೇ ದಿನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನೂ ಗೂಂಡಾಗಿರಿ ಮಾಡ್ತಿದ್ದೆ, ಜೀನ್ಸ್ ಪ್ಯಾಂಟ್ ಹಾಕ್ಕೊಂಡ್ರೆ ಹುಡ್ಗೀರೆಲ್ಲಾ ನನ್ನೇ ನೋಡ್ತಿದ್ರು: ಶ್ರೀರಾಮುಲು

    ಲೋಕೋಪಯೋಗಿ ಹಾಗೂ ಗುತ್ತಿಗೆದಾರರಿಗೆ ಜನವರಿ 1ನೇ ತಾರೀಖಿಗೆ ಕಟ್ಟಡ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ. ಕೋವಿಡ್ ಹಿನ್ನೆಲೆ ಕಟ್ಟಡ ಕಾಮಗಾರಿ ತಡವಾಗಿದೆ. ಡಿಸೆಂಬರ್‌ನಲ್ಲೇ ಉದ್ಘಾಟನೆ ಮಾಡಬೇಕು ಎಂದು ನಾನು ಪ್ರಧಾನಿ ಜೊತೆ ಮಾತನಾಡಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಪುಟ್ಟರಾಜು ಎಚ್ಚರಿಕೆಯ ಬೆನ್ನಲ್ಲೇ ಪ್ರತಾಪ್ ಸಿಂಹ ರಸ್ತೆ ವೀಕ್ಷಣೆ

    ಜನವರಿ ತಿಂಗಳಿನಲ್ಲಿ ಪ್ರಧಾನಿ ಮೋದಿ 3-4 ಬಾರಿ ರಾಜ್ಯಕ್ಕೆ ಬರಲಿದ್ದಾರೆ. ಅದೇ ವೇಳೆ ಈ ಕಾರ್ಯಕ್ರಮ ಇಡಲಾಗಿದೆ. ಮುಂದಿನ ವಾರ ನಾನು ಮತ್ತೆ ಐಐಟಿಗೆ ಭೇಟಿ ನೀಡಿ ತೀರ್ಮಾನ ಮಾಡುತ್ತೇನೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ಚುನಾವಣೆಯಲ್ಲೂ ಪ್ರತಿಧ್ವನಿಸಲಿದೆ: ಜೋಶಿ

    ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ಚುನಾವಣೆಯಲ್ಲೂ ಪ್ರತಿಧ್ವನಿಸಲಿದೆ: ಜೋಶಿ

    ನವದೆಹಲಿ: ಗುಜರಾತ್ ಚುನಾವಣಾ ಫಲಿಂತಾಂಶ(Gujarat Election Results) ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯ(Karnataka Vidhan Sabha Election) ಮೇಲೂ ಪರಿಣಾಮ ಬೀರಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ(Prhald Joshi) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಗುಜರಾತ್‌ನಲ್ಲಿ ಬಿಜೆಪಿ(BJP) ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದೊಂದು ರೆಕಾರ್ಡ್ ಬ್ರೇಕ್ ಮಾಡಿರುವ ಫಲಿತಾಂಶ ಎಂದು ಬಣ್ಣಿಸಿದರು.

    ಬಿಜೆಪಿ ಇಷ್ಟೊಂದು ಸಂಖ್ಯೆಯ ಸ್ಥಾನ ಗಳಿಸಿರೋದು ಡಬಲ್ ಇಂಜಿನ್ ಸರ್ಕಾರಗಳ ಬಗ್ಗೆ ಜನರು ವಿಶ್ವಾಸ ಇಟ್ಟಿರೋದನ್ನು ತೋರಿಸುತ್ತದೆ. ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲೂ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಫಲ ನೀಡಿತು ಚಾಣಕ್ಯ ಜೋಡಿಯ ತಂತ್ರ – ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?

    ಎರಡು ಹೊಸ ದಾಖಲೆಯನ್ನು ಬಿಜೆಪಿ ಗುಜರಾತ್ ಚುನಾವಣೆಯಲ್ಲಿ ದಾಖಲಿಸಿದೆ. ಈ ಹಿಂದೆ ಗುಜರಾತ್‌ನಲ್ಲಿ ಕಾಂಗ್ರೆಸ್ ಮಾಧವ್ ಸಿಂಗ್ ಅವರಿದ್ದಾಗ 149 ಸ್ಥಾನಗಳನ್ನ ಪಡೆದಿದ್ದರು. ಗುಜರಾತ್ ಚುನಾವಣಾ ಇತಿಹಾಸದಲ್ಲಿ ಈ ನಂಬರ್ ಬ್ರೇಕ್ ಆಗಿರಲಿಲ್ಲ. ಇದೀಗ ಬಿಜೆಪಿ 156 ಸ್ಥಾನಗಳನ್ನ ಪಡೆದು ಇತಿಹಾಸ ನಿರ್ಮಿಸಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಸತತ 30 ವರ್ಷಗಳ ಕಾಲ ಕಮ್ಯುನಿಸ್ಟ್ ಪಾರ್ಟಿ ಆಡಳಿತ ನಡೆಸಿತ್ತು. ಗುಜರಾತ್ ನಲ್ಲಿ ಈ ಐದು ವರ್ಷ ಬಿಜೆಪಿ ಆಡಳಿತ ನಡೆಸಿದಾಗ ಕಮ್ಯುನಿಸ್ಟ್ ಪಕ್ಷದ ರೆಕಾರ್ಡ್ ಕೂಡ ಬ್ರೇಕ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ದೇಶದ ಜನರು ಮನ್ನಣೆ ನೀಡಿರೋದು ಗುಜರಾತ್ ಚುನಾವಣೆ ಫಲಿಂತಾಶ ತೋರ್ಪಡಿಸುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಬಹುಮತ ಪಡೆಯುವ ವಿಶ್ವಾಸ ಕಾರ್ಯಕರ್ತಲ್ಲಿದೆ. ಗುಜರಾತ್ ಚುನಾವಣಾ ಫಲಿತಾಂಶ ಕಾರ್ಯಕರ್ತದಲ್ಲಿ ಇನ್ನಷ್ಟು ಉತ್ಸಹಾ ತುಂಬಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

    ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರಾ ಪ್ರಾರಂಭಿಸಿದಾಗಲೇ ಕೈ ನಾಯಕರು ಕಾಂಗ್ರೆಸ್ ಚೋಡೋದಲ್ಲಿ ನಿರತರಾಗಿದ್ದರು. ಗುಜರಾತ್ ನಲ್ಲಿ ಇದೀಗ ಕಾಂಗ್ರೆಸ್ ದುಂಡೋ ಎನ್ನುವ ಪರಿಸ್ಥಿತಿಗೆ ಬಂದುಬಿಟ್ಟಿದೆ. ಇನ್ನು ತಾವು ಪ್ರಾಮಾಣಿಕರು ಅಂತಾ ಬೋರ್ಡ್ ಹಾಕಿಕೊಂಡು ತಿರುಗಾಡ್ತಿರುವ ಕೇಜ್ರಿವಾಲ್‌ ಅವರ ಎಎಪಿ ಪಕ್ಷಕ್ಕೂ ತೀವ್ರ ಮುಖಭಂಗವಾಗಿದೆ ಎಂದು ಜೋಶಿ ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇಶದ ಜಿಡಿಪಿಗೆ ಶೇ. 2.5ರಷ್ಟು ಕೊಡುಗೆ ಗಣಿಗಾರಿಕೆಯಿಂದ ನೀಡಲಿದ್ದೇವೆ : ಪ್ರಹ್ಲಾದ್‌ ಜೋಶಿ

    ದೇಶದ ಜಿಡಿಪಿಗೆ ಶೇ. 2.5ರಷ್ಟು ಕೊಡುಗೆ ಗಣಿಗಾರಿಕೆಯಿಂದ ನೀಡಲಿದ್ದೇವೆ : ಪ್ರಹ್ಲಾದ್‌ ಜೋಶಿ

    ಬೆಂಗಳೂರು: ವಾಣಿಜ್ಯ ಕಲ್ಲಿದ್ದಲು ಬ್ಲಾಕ್‌ಗಳ ಹರಾಜು ಹಾಗೂ ಗಣಿಗಾರಿಕೆಯಲ್ಲಿ ಹೂಡಿಕೆ ಅವಕಾಶಗಳ ಹಿನ್ನೆಲೆಯಲ್ಲಿ ಬೆಂಗಳೂರಿ‌ನಲ್ಲಿ (Bengaluru) ನಡೆಯುತ್ತಿರುವ ಹೂಡಿಕೆದಾರರ ಸಮಾವೇಶವನ್ನು ಕೇಂದ್ರ ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಉದ್ಘಾಟಿಸಿದರು. ಈ ವೇಳೆ ಹೂಡಿಕೆದಾರರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜಿಡಿಪಿಗೆ ಗಣಿಗಾರಿಕೆಯಿಂದಲೇ ಶೇ. 2.5ರಷ್ಟು ಕೊಡುಗೆ ನೀಡಲಿದ್ದೇವೆ ಎಂದು ಹೇಳಿದರು.

    ಭಾರತದ (India) ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಕಲ್ಲಿದ್ದಲು ಸೇರಿದಂತೆ ಗಣಿಗಾರಿಕೆಯಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. 2047ರ ವೇಳೆಗೆ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದ್ದು, ಹೇರಳವಾದ ವಿದ್ಯುತ್ ಉತ್ಪಾದನೆ ಅಗತ್ಯವಾಗಿದೆ. ಸಹಜವಾಗಿ ಕಲ್ಲಿದ್ದಲು ಬೇಡಿಕೆ ಕೂಡ ಹೆಚ್ಚಲಿದ್ದು, ಹೂಡಿಕೆದಾರಿಗೆ ಕಲ್ಲಿದ್ದಲು ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ದೇಶದ ಇಂಧನ ಹಾಗೂ ಖನಿಜ ಸಂಪತ್ತಿನ ಸುರಕ್ಷತೆಯನ್ನು ಕಾಪಾಡಲು ನಮ್ಮಲ್ಲಿರುವ ಕಲ್ಲಿದ್ದಲು ಹಾಗೂ ಖನಿಜ ಸಂಪನ್ಮೂಲದ ಸುಸ್ಥಿರ ಉಪಯೋಗ ಅವಶ್ಯಕವಾಗಿದೆ. ಈ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ಹೂಡಿಕೆಯ ಅವಶ್ಯಕತೆ ಇದ್ದು, ಆಸಕ್ತ ಹೂಡಿಕೆದಾರರೊಂದಿಗೆ ನಾವು ನಿರಂತರ ಚರ್ಚೆಯಲ್ಲಿ ತೊಡಗುವ ಉದ್ದೇಶದಿಂದಲೇ ಈ ಹೂಡಿಕೆದಾರರ ಸಮಾವೇಶ ನಡೆಸುತ್ತಿದ್ದೇವೆ ಎಂದು ಹೇಳಿದರು.

    ಪ್ರಸ್ತುತ ನಡೆಯುತ್ತಿರುವ ಕಲ್ಲಿದ್ದಲು ಹಾಗೂ ಖನಿಜಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಹೂಡಿಕೆದಾರರಿಗೆ ಮುಕ್ತ ಆಹ್ವಾನ ನೀಡಲಾಗಿದೆ‌. ಸದ್ಯ ರಾಜ್ಯದಲ್ಲಿ 7 ಕಲ್ಲಿದ್ದಲು ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆರನೇ ಕಂತಿನ 141 ಕಲ್ಲಿದ್ದಲು ಬ್ಲಾಕ್‌ಗಳು ಕೂಡ ಹರಾಜಿಗೆ ಲಭ್ಯವಿದೆ ಎಂದರು ತಿಳಿಸಿದರು. ಇದನ್ನೂ ಓದಿ: ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು

    ಇಂದಿನ ಗಣಿ ಮತ್ತು ಕಲ್ಲಿದ್ದಲು ಹೂಡಿಕೆದಾರರ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಸೇರಿದಂತೆ ಪ್ರಮುಖ ಗಣ್ಯರು, ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಹೂಡಿಕೆದಾರರು ಉಪಸ್ಥಿತರಿದ್ದರು. ಇದನ್ನೂ ಓದಿ: ನಾನೂ ರೌಡಿ, ಬಿಜೆಪಿಗೆ ನನ್ನನ್ನು ಸೇರಿಸಿಕೊಳ್ಳಿ – ಏಕಾಂಗಿ ಪ್ರತಿಭಟನೆ ನಡೆಸಿದ ಪಾನಿಪುರಿ ಮಂಜು

    Live Tv
    [brid partner=56869869 player=32851 video=960834 autoplay=true]

  • ಡಿ.3ರಂದು ಬೆಂಗಳೂರಿನಲ್ಲಿ ಗಣಿ ಹೂಡಿಕೆದಾರರ ಸಮಾವೇಶ : ಪ್ರಹ್ಲಾದ್ ಜೋಶಿ

    ಡಿ.3ರಂದು ಬೆಂಗಳೂರಿನಲ್ಲಿ ಗಣಿ ಹೂಡಿಕೆದಾರರ ಸಮಾವೇಶ : ಪ್ರಹ್ಲಾದ್ ಜೋಶಿ

    ಬೆಂಗಳೂರು: ಇದೇ ತಿಂಗಳ 3ರಂದು ಬೆಂಗಳೂರಿನಲ್ಲಿ (Bengaluru) ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.

    ಮುಂಬೈನಲ್ಲಿ ಇಂದು ಕಲ್ಲಿದ್ದಲು ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಬೈನಲ್ಲಿ‌ (Mumbai) ನಡೆದ ಕಲ್ಲಿದ್ದಲು ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದ್ದು, ಇದೇ ಶನಿವಾರ ಬೆಂಗಳೂರಿನಲ್ಲಿ ಗಣಿಗಾರಿಕೆ ಕುರಿತಂತೆ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ. ಆಸಕ್ತರು ಸಮಾವೇಶದಲ್ಲಿ ಭಾಗವಹಿಸುವಂತೆ ಕೇಂದ್ರ ಸಚಿವ ಹೂಡಿಕೆದಾರರಿಗೆ ಆಹ್ವಾನಿಸಿದ್ದಾರೆ. ಮುಂಬೈ, ಬೆಂಗಳೂರಿನ ಹೂಡಿಕೆದಾರರ ಸಮಾವೇಶಗಳು ಭಾರತದಲ್ಲಿನ ಗಣಿಗಾರಿಕೆ ಕ್ಷೇತ್ರದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.

    ವಾಣಿಜ್ಯ ಗಣಿ ಹರಾಜು ಮತ್ತು ದೇಶದ ಗಣಿಗಾರಿಕೆ ವಲಯದಲ್ಲಿ ವಿವಿಧ ಅವಕಾಶಗಳ ಕುರಿತು ಸಮಾವೇಶವನ್ನು ನಡೆಸಲಾಗುತ್ತಿದೆ. ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದು, ವಿವಿಧ ವಾಣಿಜ್ಯ ಗಣಿಗಳ ಮೆಗಾ ಹರಾಜು ಕುರಿತು ಹೂಡಿಕೆದಾರರಿಗೆ ಮಾಹಿತಿ ಒದಗಿಸುವುದಾಗಿ ತಿಳಿಸಿದರು.

    ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ವಿದ್ಯುತ್ ಉತ್ಪಾದನೆ ಅವಶ್ಯಕವಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಮಹಾರಾಷ್ಟ್ರಕ್ಕೆ 13 ಕಲ್ಲಿದ್ದಲು ಬ್ಲಾಕ್ಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 5 ಗಣಿ ಬ್ಲಾಕ್ಸ್‌ಗಳು ಸಂಪೂರ್ಣವಾಗಿ ಅನ್ವೇಷಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಿವಿಯ ಉದ್ದನೆಯ ಕೂದಲಿಗಾಗಿ ಗಿನ್ನಿಸ್ ವರ್ಲ್ಡ್‌ ದಾಖಲೆ ಬರೆದ ನಿವೃತ್ತ ಶಿಕ್ಷಕ

    ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಬಳಕೆಯನ್ನು ಇನ್ನಷ್ಟು ಸುಧಾರಿಸುವ ಮಾರ್ಗಗಳ ಅಧಿಕಾರಿಗಳೊಂದಿಗೆ ಇದೇ ವೇಳೆ ಜೋಶಿ ಸಭೆ ನಡೆಸಿದರು. ಕಲ್ಲಿದ್ದಲು ವ್ಯಾಗನ್‌ಗಳ ಇಳಿಸುವಿಕೆಯ ಸಮಯವನ್ನು ಸುಧಾರಿಸಲು ಒತ್ತು ಸೇರಿದಂತೆ, ದೀರ್ಘಾವಧಿಯ ಕಲ್ಲಿದ್ದಲು ದಾಸ್ತಾನು ನಿರ್ಮಿಸಲು ಆರ್‌ಎಸ್‌ಆರ್ (ರೈಲ್ ಕಮ್ ಸೀ) ಮೋಡ್ ಅನ್ನು ಅನ್ವೇಷಿಸಲು ಸೂಚನೆ ನೀಡಿದರು. ಜೊತೆಗೆ ರೋಡ್ ಮೋಡ್ ಮತ್ತು ರೋಪ್‌ವೇ ಮೂಲಕ 40,000 TPD ಕಲ್ಲಿದ್ದಲನ್ನು ಎತ್ತಬಹುದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರತರಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದನ್ನೂ ಓದಿ: ಕರ್ತವ್ಯ ನಿರತ ಪೊಲೀಸ್ ಮುಖ್ಯಪೇದೆ ಹೃದಯಾಘಾತದಿಂದ ಸಾವು

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿ–ಹುನಗುಂದ–ರಾಯಚೂರು ಹೈವೇ ನಿರ್ಮಾಣಕ್ಕೆ ಅನುಮೋದನೆ: ಮೋದಿಗೆ ಜೋಶಿ ಅಭಿನಂದನೆ

    ಬೆಳಗಾವಿ–ಹುನಗುಂದ–ರಾಯಚೂರು ಹೈವೇ ನಿರ್ಮಾಣಕ್ಕೆ ಅನುಮೋದನೆ: ಮೋದಿಗೆ ಜೋಶಿ ಅಭಿನಂದನೆ

    ನವದೆಹಲಿ: ಬೆಳಗಾವಿ–ಹುನಗುಂದ–ರಾಯಚೂರು ರಾಷ್ಟ್ರೀಯ ಹೆದ್ದಾರಿ(Belagavi Hungund Raichuru National Highway) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಮಾಹಿತಿ ಹಂಚಿಕೊಂಡಿದ್ದಾರೆ.

    ಇಂದು ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಅವರನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೊಂದಿಗೆ ಭೇಟಿ ಮಾಡಿ, ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣದ‌‌ ಕುರಿತು ಜೋಶಿ ಚರ್ಚೆ ನಡೆಸಿದರು.  ಇದನ್ನೂ ಓದಿ: ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿಲ್ಲ – ಬಿ.ಸಿ ನಾಗೇಶ್

    320 ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಇದೀಗ ರಾಷ್ಟ್ರೀಯ ಹೆದ್ದಾರಿ‌ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಈ ಭಾಗದ ಜನರ ಬಹುಕಾಲದ ಬೇಡಿಕೆಯೊಂದು ಶೀಘ್ರವೇ ಈಡೇರಿದೆ ಎಂದು ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

    ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನರ ಅನುಕೂಲಕ್ಕೆ ಅನುಗುಣವಾಗಿ ಕಾಮಗಾರಿಗೆ ಅನುಮೋದನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಧನ್ಯವಾದಗಳು ಎಂದು ಜೋಶಿ, ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸುತ್ತಮುತ್ತಲಿನ ಹೆದ್ದಾರಿಗಳ ಅಭಿವೃದ್ಧಿ, ಚತುಷ್ಪಥ ಮತ್ತು ಷಟ್ಪಥ ರಸ್ತೆ ಹಾಗೂ ಅಂಡರ್ ಪಾಸ್ ಗಳ ಅಭಿವೃದ್ಧಿಯ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭರವಸೆ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಜೋಶಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಹೋಗೋದಿಲ್ಲ: ಜೋಶಿ

    ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಹೋಗೋದಿಲ್ಲ: ಜೋಶಿ

    ಧಾರವಾಡ: ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರ (Maharastra) ಕ್ಕೆ ಹೋಗುವುದಿಲ್ಲ. ಅದೇ ರೀತಿ ಮಹಾರಾಷ್ಟ್ರದ ಒಂದಿಂಚೂ ಜಾಗ ಕರ್ನಾಟಕಕ್ಕೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಗಡಿ ವಿಚಾರ ಮುಗಿದು ಹೋದ ಅಧ್ಯಾಯ. ಮಹಾರಾಷ್ಟ್ರದವರು ಸುಪ್ರೀಂಕೋರ್ಟ್ (Supreme Court) ಮೊರೆ ಹೋಗಿದ್ದಾರೆ. ವಿವಾದಾತ್ಮಕ ಹೇಳಿಕೆಗಳನ್ನು ಕೊಡದಂತೆ ಮಹಾರಾಷ್ಟ್ರದ ನಮ್ಮ ಪಕ್ಷದ ಶಾಸಕರಿಗೆ ಹೇಳಿದ್ದೇನೆ. ನಮ್ಮ ರಾಜ್ಯದಲ್ಲಿ ಮರಾಠಿಗರು ಕನ್ನಡಿಗರ ಜೊತೆ ಹೊಂದಾಣಿಕೆಯಿಂದ ಇದ್ದಾರೆ. ಇಲ್ಲಿ ಯಾರಿಗೂ ತೊಂದರೆ ಇಲ್ಲ ಎಂದರು.

    ಮಹಾರಾಷ್ಟ್ರ, ಸೊಲ್ಲಾಪುರ, ಸಾಂಗ್ಲಿ, ಕೊಲ್ಲಾಪುರದಲ್ಲಿ ಕನ್ನಡಿಗರು ಸಂತೋಷದಿಂದ ಇದ್ದಾರೆ ಎಂದ ಅವರು, ಸಮಸ್ಯೆಗಳಿದ್ದರೆ ಆಯಾ ರಾಜ್ಯ ಸರ್ಕಾರಗಳ ಜೊತೆ ಮಾತನಾಡಿಕೊಳ್ಳಬೇಕು. ನಮ್ಮ ದೇಶ ಒಂದೇ. ನಾವು ಚೀನಾ, ಪಾಕಿಸ್ತಾನದ ಹೊತೆ ಹೋರಾಡಬೇಕು. ಅದರ ಬದಲಾಗಿ ಕರ್ನಾಟಕ, ಮಹಾರಾಷ್ಟ್ರ ಎಂದು ಬಡಿದಾಡುತ್ತಿರುವುದು ದೌರ್ಭಾಗ್ಯ ಎಂದರು.

    ಈ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದೆ. ಎರಡೂ ರಾಜ್ಯಗಳಿಗೆ ನ್ಯಾಯಯುತವಾಗಿ ನ್ಯಾಯಾಲಯ ತೀರ್ಪು ಕೊಡುತ್ತದೆ ಎಂದು ಜೋಶಿ ಹೇಳಿದರು. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ- ಬಿಜೆಪಿಗೆ ಸುಮಲತಾ ಆಪ್ತ ಸಚ್ಚಿದಾನಂದ ಸೇರ್ಪಡೆ

    ಸಿದ್ದರಾಮಯ್ಯ ಸಿಎಂ ಆದರೆ ರಾಜ್ಯದಲ್ಲಿ ಮತ್ತೆ ಹಿಂದೂಗಳ ಹತ್ಯೆ ಹೆಚ್ಚಾಗುತ್ತದೆ ಎಂಬ ಸಿ.ಟಿ.ರವಿ (C.T Ravi) ಹೇಳಿಕೆಯನ್ನು ಸಮರ್ಥಿಸಿಕೊಂಡ ಜೋಶಿ, ಸಿದ್ದರಾಮಯ್ಯನವರ ಕಾಲದಲ್ಲೇ ಹಿಂದೂಗಳ ಹತ್ಯೆ ಹೆಚ್ಚಾಗಿವೆ. ಆ ಸಮಯದಲ್ಲಿ ಪಿಎಫ್‍ಐ (PFI) ಅದನ್ನು ಬಿಡುಗಡೆ ಮಾಡಿದ್ದ ಸಾಕ್ಷಿಗಳಿವೆ. ಸಿ.ಟಿ ರವಿ ಅವರ ಮನೆಗೆ ಮುತ್ತಿಗೆ ಹಾಕಿದ್ರೆ ನಾವು ಕಾಂಗ್ರೆಸ್‍ನವರ ಮನೆಗೆ ಮುತ್ತಿಗೆ ಹಾಕುತ್ತೇವೆ. ನಮ್ಮ ಸಂಸ್ಕೃತಿ ಅಂತದ್ದಲ್ಲ. ಸಿದ್ದರಾಮಯ್ಯನವರು ಎಚ್ಚರಿಕೆಯಿಂದ ಇರಬೇಕು ಎಂದರು.

    Live Tv
    [brid partner=56869869 player=32851 video=960834 autoplay=true]

  • 225 ಮೀ. ಆಳದ ಕಲ್ಲಿದ್ದಲು ಗಣಿ ಝಾಂಜ್ರಾ ಒಳಗೆ ಪ್ರವೇಶಿಸಿ ಪರಿಶೀಲಿಸಿದ ಮೊದಲ ಸಚಿವ ಪ್ರಹ್ಲಾದ್ ಜೋಶಿ

    225 ಮೀ. ಆಳದ ಕಲ್ಲಿದ್ದಲು ಗಣಿ ಝಾಂಜ್ರಾ ಒಳಗೆ ಪ್ರವೇಶಿಸಿ ಪರಿಶೀಲಿಸಿದ ಮೊದಲ ಸಚಿವ ಪ್ರಹ್ಲಾದ್ ಜೋಶಿ

    ಕೋಲ್ಕತ್ತಾ: 225 ಮೀಟರ್‌ ಆಳದ ಭೂಗತ ಕಲ್ಲಿದ್ದಲು ಗಣಿ ಝಾಂಜ್ರಾ (Jhanjra Coal Mine) ಒಳಗೆ ಪ್ರವೇಶಿಸಿದ ಮೊದಲ ಸಚಿವ ಎಂಬ ಹೆಗ್ಗಳಿಕೆಗೆ ಪ್ರಹ್ಲಾದ್‌ ಜೋಶಿ (Pralhad Joshi) ಅವರು ಪಾತ್ರರಾಗಿದ್ದಾರೆ.

    ದೇಶದಲ್ಲೇ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ, ಭೂ ಮೇಲ್ಮೈಯಿಂದ 225 ಮೀಟರ್ ಆಳದಲ್ಲಿರುವ ಪಶ್ಚಿಮ ಬಂಗಾಳ (West Bengal) ರಾಜ್ಯದ ಪಶ್ಚಿಮ್ ಬರ್ದಮಾನ್ ಜಿಲ್ಲೆಯ ದುರ್ಗಾಪುರ್ ಸಬ್ ಡಿವಿಷನ್‌ನಲ್ಲಿರುವ ಝಾಂಜ್ರಾ ಕಲ್ಲಿದ್ದಲು ಗಣಿಗೆ ಇಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಡಿ.1 ರಿಂದ ಮಿಲ್ಮಾ ಹಾಲಿನ ದರ ಲೀಟರ್‌ಗೆ 6 ರೂ. ಏರಿಕೆ

    ಗಣಿ ಒಳಗೆ 225 ಮೀಟರ್ ಆಳಕ್ಕೆ ತೆರಳಿ ಕಲ್ಲಿದ್ದಲು ಉತ್ಪಾದನೆ ಪರಿಶೀಲನೆ ನಡೆಸಿದ ಜೋಶಿ, ಅಂಡರ್ ಗ್ರೌಂಡ್‌ನಲ್ಲಿ 1.5 ಕಿ.ಮೀ. ಪ್ರಯಾಣಿಸಿದರು. ಈ ವೇಳೆ ಮಾತನಾಡಿದ ಸಚಿವರು, ಈಸ್ಟರ್ನ್‌ಕೋಲ್‌ನ ಝಂಜ್ರಾ ಭೂಗತ ಗಣಿಯೊಳಗೆ 225 ಮೀಟರ್ ಆಳಕ್ಕೆ ತೆರಳಿ ಅಂಡರ್ ಗ್ರೌಂಡ್‌ನಲ್ಲಿ ಒಂದೂವರೆ ಕಿ.ಮೀ. ಪ್ರಯಾಣಿಸಿದ್ದು, ಹೊಸ ಅನುಭವ ನೀಡಿದೆ ಎಂದರು.

    ವರ್ಷಕ್ಕೆ 3.5 ಮಿಲಿಯನ್ ಟನ್ ಸಾಮರ್ಥ್ಯ ಹೊಂದಿರುವ ಝಂಜ್ರಾ ಕಲ್ಲಿದ್ದಲು ಗಣಿ, ಭಾರತದ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಯಾಂತ್ರೀಕೃತ ಭೂಗತ ಗಣಿಯಾಗಿದೆ. ಇಷ್ಟೊಂದು ಆಳಕ್ಕೆ ಹೋಗಿ ಪ್ರತಿ ನಿತ್ಯ ಕಷ್ಟಕರ ಪರಿಸ್ಥಿತಿಗಳನ್ನ ಎದುರಿಸಿ ಕಲ್ಲಿದ್ದಲು ಉತ್ಪಾದನೆಗೆ ಶ್ರಮಿಸುತ್ತಿರುವ ಕಾರ್ಮಿಕರಿಗೆ ಪ್ರಹ್ಲಾದ್ ಜೋಶಿಯವರು ಇದೇ ವೇಳೆ ಅಭಿನಂದನೆ ಸಲ್ಲಿಸಿದರು. ಇಲ್ಲಿನ ಕಾರ್ಮಿಕರು ಯೋಧರ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವರು ಇದೇ ವೇಳೆ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೆನ್ಸೆಕ್ಸ್‌ ಹೈಜಂಪ್‌ – ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ

    ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವ ಗುರಿಯೊಂದಿಗೆ ಕಲ್ಲಿದ್ದಲು ಗಣಿ ಪ್ರದೇಶಗಳಿಗೆ ಭೇಟಿ ನೀಡ್ತಿರುವ ಪ್ರಹ್ಲಾದ್ ಜೋಶಿ, ಹಲವು ಯೋಜನೆಗಳನ್ನ ಹಾಕಿಕೊಂಡಿದ್ದಾರೆ. ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 2MT ಗಿಂತ ಅಧಿಕ ಪ್ರಮಾಣಕ್ಕೆ ಹೆಚ್ಚಿಸಲಾಗಿದೆ. ಕಡಿಮೆ ಎತ್ತರದ 2 ನಿರಂತರ ಗಣಿಗಳನ್ನ ಪರಿಚಯಿಸುವ ಜೊತೆಗೆ 5 MTY ಸಾಮರ್ಥ್ಯದ ಕಲ್ಲಿದ್ದಲು ನಿರ್ವಹಣೆ ಸ್ಥಾವರ ಹಾಗೂ ರೈಲ್ವೇ ಕಾರಿಡಾರ್ ನಿರ್ಮಾಣ ಹಂತದಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಗತಿ ಪಥದಲ್ಲಿ ಸಾಗುತ್ತಿರುವ ಕೇಂದ್ರ ಸಚಿವರ ಈ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

    Live Tv
    [brid partner=56869869 player=32851 video=960834 autoplay=true]

  • 2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಭಾರತಕ್ಕೆ ಈಗಿಂದಲೇ ತಯಾರಿ ಅಗತ್ಯ – ಪ್ರಹ್ಲಾದ್ ಜೋಶಿ

    2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಭಾರತಕ್ಕೆ ಈಗಿಂದಲೇ ತಯಾರಿ ಅಗತ್ಯ – ಪ್ರಹ್ಲಾದ್ ಜೋಶಿ

    ಬೆಂಗಳೂರು: ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ಭಾರತ 2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವನ್ನಾಗಿಸುವುದೇ ವಿಷನ್ ಇಂಡಿಯಾ@2047 (Vision India @ 2047) ಗುರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ವಿಷನ್ ಇಂಡಿಯಾ@2047 ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

    ಭಾರತ 2047ಕ್ಕೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಈಗಿನಿಂದಲೇ ಎಲ್ಲ ಕ್ಷೇತ್ರಗಳಲ್ಲೂ ತಯಾರಿ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.‌ 30 ಟ್ರಿಲಿಯನ್ ಡಾಲರ್ ಆರ್ಥಿಕತೆ ದೇಶವಾದಾಗ ಅಭಿವೃದ್ದಿ ಹೊಂದಿದ ರಾಷ್ಟ್ರವಾಗಿ ಭಾರತ ಬದಲಾಗಿರುತ್ತೆ. ದೇಶಕ್ಕೆ ಹೇರಳವಾದ ವಿದ್ಯುತ್ ಅವಶ್ಯಕತೆ ಇದ್ದು, ಅದಕ್ಕಾಗಿ ಕಲ್ಲಿದ್ದಲು ಉತ್ಪಾದನೆಯನ್ನೂ ಹೆಚ್ಚಿಸುವತ್ತ ಕೇಂದ್ರ ಕಲ್ಲಿದ್ದಲು ಸಚಿವಾಲಯ ಗಮನ ಹರಿಸಿದೆ ಎಂದು ಹೇಳಿದರು‌. ಇದನ್ನೂ ಓದಿ: ರಾಯಚೂರಿನಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಭರ್ಜರಿ ಫೈಟ್ – ಒಂದೇ ಕ್ಷೇತ್ರಕ್ಕೆ 17 ಅರ್ಜಿ

    ಕೇಂದ್ರ ಸಚಿವ ಪೀಯೂಷ್ ಗೋಯಲ್ (Piyush Goyal) ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರವು ಮುಂಬರುವ 25 ವರ್ಷಗಳಲ್ಲಿ ಭಾರತವನ್ನು ಹೇಗೆ ಪ್ರಗತಿಯ ಪಥದಲ್ಲಿ ಮುನ್ನಡೆಸಬಹುದು ಎಂಬ ಬಗ್ಗೆ ಸ್ಟಾರ್ಟಪ್‌ಗಳು ಮತ್ತು ಉದ್ಯಮಶೀಲತೆ ಕೇಂದ್ರೀಕರಿಸಲಿದೆ ಎಂದು ವಿವರಿಸಿದರು.

    “ಅಮೃತ್ ಕಾಲ” ಎಂದು ಕರೆಯಲ್ಪಡುವ ಮುಂದಿನ ಎರಡೂವರೆ ದಶಕಗಳು ಭಾರತದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಲಿವೆ. ಈ ಅವಧಿಯಲ್ಲಿ ಭಾರತವನ್ನು ಅಭೂತಪೂರ್ವ ರೀತಿಯಲ್ಲಿ ಪರಿವರ್ತಿಸುವುದು ಪ್ರಧಾನಿ ಮೋದಿಯವರ ದೃಷ್ಟಿಯಾಗಿದೆ ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 69ನೇ ಅಖಿಲ ಭಾರತ ಸಹಕಾರ ಸಪ್ತಾಹ – 54 ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ

    ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪೀಯೂಷ್ ಗೋಯಲ್, ದೇಶದ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರು ಸಹಭಾಗಿತ್ವ ಸಹಕಾರ ಮತ್ತು ಸ್ಪರ್ಧೆಗಳಿಂದ ಜಾಗತಿಕ ಮಟ್ಟದಲ್ಲಿ ವಿರಾಜಮಾನವಾಗಿದೆ ಎಂದು ಬಣ್ಣಿಸಿದರು. ಭಾರತವು ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದ್ದು, 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಕೇಂದ್ರ ಸರ್ಕಾರವು ದೊಡ್ಡ ಉದ್ಯಮಿಗಳಂತೆಯೇ ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಓಪನ್ ಡೇಟಾ ಇ-ಕಾಮರ್ಸ್‌ ವ್ಯವಸ್ಥೆಗೆ ಚಾಲನೆ ನೀಡಿದ್ದು, ಇದೂ ಸಹ ಬೆಂಗಳೂರಿನಿಂದಲೇ ಆರಂಭವಾಗಬೇಕು ಎಂದು ಗೋಯಲ್‌ ಆಶಯ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬಹುನಿರೀಕ್ಷಿತ ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನಯಾನ ಆರಂಭ

    ಬಹುನಿರೀಕ್ಷಿತ ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನಯಾನ ಆರಂಭ

    – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಹಸಿರು ನಿಶಾನೆ
    – ಮೊದಲ ಪ್ರಯಾಣದಲ್ಲಿ ಉತ್ತರ ಕರ್ನಾಟಕ ಭಾಷೆಯಲ್ಲೇ ಸಲಹೆ, ಸೂಚನೆ

    ಹುಬ್ಬಳ್ಳಿ: ಬಹುನಿರೀಕ್ಷಿತ ದೆಹಲಿ-ಹುಬ್ಬಳ್ಳಿ (Hubballi), ಹುಬ್ಬಳ್ಳಿ-ದೆಹಲಿ (Delhi) ನಡುವೆ ನೇರ ವಿಮಾನಯಾನ ಸಂಪರ್ಕ ಇಂದಿನಿಂದ ಆರಂಭವಾಗಿದೆ. ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ.

    ಈ ವಿಮಾನಯಾನ ಸೇವೆಯಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕ ಜನರ ಬಹುದಿನಗಳ ಕನಸೊಂದು ಈಡೇರಿದಂತಾಗಿದೆ. ಹುಬ್ಬಳ್ಳಿಯಿಂದ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ದೊರೆತಿರುವುದು ನಗರದ ಪ್ರಗತಿಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದೆ. ಪ್ರತಿ ನಿತ್ಯ ಈ ಸೇವೆ ಲಭ್ಯವಿರುತ್ತದೆ. ಹುಬ್ಬಳಿಯ ಜನ ಕೇವಲ 2 ಗಂಟೆ 30 ನಿಮಿಷದಲ್ಲಿ ದೆಹಲಿಗೆ ಪ್ರಯಾಣಿಸಬಹುದಾಗಿದೆ. ಇದನ್ನೂ ಓದಿ: ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ – ಸೇಠ್ ತಿರುಗೇಟು

    ಇಂಡಿಗೋ (IndiGo) ವಿಮಾನ ಪ್ರತಿದಿನ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಸಂಖ್ಯೆ 6E-5625 ಬೆಳಿಗ್ಗೆ 10:00ಕ್ಕೆ ಹೊರಟು 12-45ಕ್ಕೆ ಹುಬ್ಬಳ್ಳಿ ತಲುಪಲಿದೆ. ಮರಳಿ ಮಧ್ಯಾಹ್ನ 1:15ಕ್ಕೆ ಹುಬ್ಬಳ್ಳಿಯಿಂದ ಹೊರಟು 3:45ಕ್ಕೆ ದೆಹಲಿ ತಲುಪಲಿದೆ. ಇದನ್ನೂ ಓದಿ: `ರಾಷ್ಟ್ರಪತಿಗಳು ಸುಂದರವಾಗಿಲ್ಲ’ ಎಂದ TMC ನಾಯಕನ ಪರವಾಗಿ ಕ್ಷಮೆ ಕೋರಿದ ಮಮತಾ ಬ್ಯಾನರ್ಜಿ

    ಇಂದು ಮೊದಲ ವಿಮಾನ ಹಾರಾಟದ ಸಮಯದಲ್ಲಿ ಇಂಡಿಗೋ ಸಂಸ್ಥೆಯ ಅಕ್ಷಯ ಪಾಟೀಲ್ ಅವರು ವಿಮಾನ ಹಾರಾಟಕ್ಕೆ ಮೊದಲು ಪ್ರಯಾಣಿಕರನ್ನುದ್ದೇಶಿಸಿ, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲೇ ಮಾತನಾಡಿದ್ದು ವಿಶೇಷವಾಗಿತ್ತು.

    ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ವರ್ಚುವಲ್ ಮೂಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಎಲ್ಲಿಯೂ ಜನರ ವಿಶ್ವಾಸ ಗಳಿಸಲ್ಲ, ಅಬ್ಬೇಪಾರಿಯಂತೆ ಓಡಾಡುತ್ತಿದ್ದಾರೆ: ಪ್ರಹ್ಲಾದ್ ಜೋಶಿ

    ಸಿದ್ದರಾಮಯ್ಯ ಎಲ್ಲಿಯೂ ಜನರ ವಿಶ್ವಾಸ ಗಳಿಸಲ್ಲ, ಅಬ್ಬೇಪಾರಿಯಂತೆ ಓಡಾಡುತ್ತಿದ್ದಾರೆ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಸಿದ್ದರಾಮಯ್ಯ (Siddaramaiah) ಎಲ್ಲಿ ಹೋದರೂ ಜನರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಲ್ಲ. ಹೀಗಾಗಿ ಅವರು ಪ್ರತಿ ಸಲ ಅಬ್ಬೇಪಾರಿಯಂತೆ ಓಡಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವ್ಯಂಗ್ಯವಾಡಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಜೋಶಿ, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಕೆಲಸ ಮಾಡಲಿಲ್ಲ. ಹೀಗಾಗಿ ಜನರು ಸೋಲಿಸಿ ಮನೆಗೆ ಕಳುಹಿಸಿದರು. ಬಾದಾಮಿಯಲ್ಲಿ ಅವರಿಗೆ ಪುಣ್ಯ ಇತ್ತೋ ಏನೋ, ಆರಿಸಿ ಬಂದರು. ದೊಡ್ಡ ನಾಯಕರಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಅಲ್ಲಿ ಗೆದ್ದರು ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಕೊಡವರಂತೆ ತಮ್ಮ ಸಮುದಾಯದವರ ನರಮೇಧ ಮಾಡಿದ್ರೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡ್ತಿದ್ರಾ? ಪ್ರತಾಪ ಸಿಂಹ

    ಈ ಸಲ ಸಿದ್ದರಾಮಯ್ಯ ಕೋಲಾರಕ್ಕೆ ಹೋಗಿದ್ದಾರೆ. ನಾನು ಕೋಲಾರದವರಿಗೆ ಹೇಳುತ್ತೇನೆ, ಚಾಮುಂಡೇಶ್ವರಿಯಲ್ಲಿ ಏನ್ ಮಾಡಿದ್ದಾರೆ, ಬಾದಾಮಿಯಲ್ಲಿ ಏನ್ ಮಾಡಿದ್ದಾರೆ ಕೇಳಿ. ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಎಂದು ನಾನು ಇವತ್ತೇ ಹೇಳುತ್ತೇನೆ. ಸಿದ್ದರಾಮಯ್ಯ ಇನ್ನು ಸ್ವಲ್ಪ ದಿನದಲ್ಲಿ ಯಾವ ಪಾರ್ಟಿಗೆ ಹೋಗುತ್ತಾರೆ ನೋಡೋಣ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್

    Live Tv
    [brid partner=56869869 player=32851 video=960834 autoplay=true]