Tag: ಪ್ರಹ್ಲಾದ್ ಜೋಶಿ

  • ಹೆಚ್‌ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಶಾಸಕ ಬೆಲ್ಲದ್‌

    ಹೆಚ್‌ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಶಾಸಕ ಬೆಲ್ಲದ್‌

    ಧಾರವಾಡ: ಹೆಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಮಾಜಿ ಪ್ರಧಾನಿ ಹಾಗೂ ಮಹಾಮುತ್ಸದ್ಧಿ ದೇವೇಗೌಡರ (HD Deve Gowda) ಮಗನಾಗಿದ್ದರೂ ಇಂತಹ ತಳಬುಡ ಇಲ್ಲದ ಹೇಳಿಕೆ ಕೊಟ್ಟಿದ್ದಾರೆ ಎಂದು ಧಾರವಾಡ ಶಾಸಕ ಅರವಿಂದ್‌ ಬೆಲ್ಲದ್‌ (Aravind Bellad) ಕಿಡಿಕಾರಿದರು.

    ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಗೋಡ್ಸೆ ವಂಶಸ್ಥರು ಎಂಬ ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮಾನಸಿಕ ಸ್ಥಿತಿ ತಪ್ಪಿದಂತೆ ಅನಿಸುತ್ತದೆ. ಅವರ ಪಕ್ಷದಿಂದ ಜನ ಓಡಿ ಹೋಗುತ್ತಿದ್ದಾರೆ. ಅವರ ನಾಯಕರೇ ಅವರ ವಿರುದ್ಧ ಬಂಡೆದ್ದಿದ್ದಾರೆ. ಹೀಗಾಗಿ ಏನು ಮಾಡಬೇಕು, ಏನು ಮಾತನಾಡಬೇಕು ತಿಳಿಯದಾಗಿದೆ ಎಂದರು.

    ಈ ರೀತಿ ಹೇಳಿಕೆ ನೀಡಿರುವುದು ಬಹಳ ದುರಾದೃಷ್ಟಕರ ವಿಚಾರ. ಮೋದಿ ಸರ್ಕಾರದಲ್ಲಿ ಜಾತಿ, ಪಂಥ ನೋಡದೆ ಯೋಗ್ಯರಿದ್ದವರಿಗೆ ಸಿಎಂ ಮಾಡುತ್ತಾರೆ ಎಂದ ಅವರು, ಇದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ, ಈ ರೀತಿಯ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಹೆಸರಿನಿಂದ ರಾಜಕಾರಣ ಮಾಡುವುದು ಗೌಡರ ಕುಟುಂಬಕ್ಕೆ ಗೌರವ ತರುವ ವಿಚಾರ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ಜನಾರ್ದನ ಪೂಜಾರಿ ಪ್ರಭಾವ ಬಳಸಿ ಟಿಕೆಟ್‍ಗಾಗಿ ಭಾರೀ ಕಸರತ್ತು

    ಕುಮಾರಸ್ವಾಮಿ ಈ ಹೇಳಿಕೆ ಮೂಲಕ ತಮಗೆ ಮಾತ್ರವಲ್ಲ ಗೌಡರ ಕುಟುಂಬಕ್ಕೆ ಕಳಂಕ ತಂದಿದ್ದಾರೆ. ದೇವೇಗೌಡ, ರೇವಣ್ಣ ಕುಟುಂಬದವರು ಎಲ್ಲರೂ ಕುಮಾರಸ್ವಾಮಿ ಹೇಳಿಕೆ ಖಂಡಿಸುತ್ತಾರೆ ಎಂದು ಕೊಂಡಿದ್ದೇನೆ ಎಂದ ಅವರು, ತಮ್ಮ ವಿಚಾರ ಎಷ್ಟು ಕೆಳಮಟ್ಟದೆಂದು ತೋರಿಸಿದ್ದಾರೆ. ಸಾಮರಸ್ಯ ಕೆಡಿಸುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ, ಬ್ಯಾಲೆನ್ಸ್ ಇಲ್ಲದ ಹೇಳಿಕೆ ಅವರು ನೀಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: Traffic Fine- 50% ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳು ವಿಸ್ತರಿಸಿ: ಸಿಎಂಗೆ ಆಪ್‌ ಪತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿದ್ಯಾರ್ಥಿಗಳಿಗೆ ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್‌ ಜೋಶಿ

    ವಿದ್ಯಾರ್ಥಿಗಳಿಗೆ ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್‌ ಜೋಶಿ

    ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಪರೀಕ್ಷಾ ಪೇ ಚರ್ಚಾ (Pariksha Pe Charcha) ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಿದ್ಯಾರ್ಥಿಗಳ ನಡುವೆ ಕುಳಿತು ವೀಕ್ಷಿಸಿದರು. ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ (Narendra Modi) ಅವರ ಚರ್ಚೆ ಬಳಿಕ ಹುಬ್ಬಳ್ಳಿಯಲ್ಲಿ ಜೋಶಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.‌

    ಮೋದಿಯವರ ಆಶಯದಂತೆ, ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಭಯಪಡದೇ, ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಜೋಶಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಉತ್ತಮ ತಯಾರಿ ಹಾಗೂ ಆತ್ಮಸ್ಥೈರ್ಯದಿಂದ ಯಾವುದೇ ಪರೀಕ್ಷೆಯನ್ನು ಕೂಡ ಯಶಸ್ವಿಯಾಗಿ ಎದುರಿಸಬಹುದು ಎಂಬ ಸ್ಪೂರ್ತಿದಾಯಕ ನುಡಿಗಳನ್ನಾಡಿ ವಿದ್ಯಾರ್ಥಿಗಳಲ್ಲಿ ಸ್ಥೈರ್ಯ ತುಂಬಿದರು.

    ಕಾರ್ಯಕ್ರಮದ ನಂತರ ಸವಾಯೀ ಗಂಧರ್ವ ಸಭಾಭವನದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ, ಮೋದಿ ಅವರು ಬರೆದ ಎಕ್ಸಾಮ್ ವಾರಿಯರ್ಸ್ (Exam Warriors) ಪುಸ್ತಕವನ್ನು ಜೋಶಿ ವಿತರಿಸಿದರು. ಭಾರತದ ಭವಿಷ್ಯವಾದ ಈ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅನುಭವ ತುಂಬಾ ಆನಂದ ನೀಡಿತು. ಈ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದರು.  ಇದನ್ನೂ ಓದಿ: ಕಾಂಪೌಂಡ್ ಕಟ್ಟೋಕೆ ಹಣ ಕೊಡೋದು ಬಿಡಿ; ಮಕ್ಕಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ – ಬೊಮ್ಮಾಯಿ

    ಸುಮಾರು ಐದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಜೋಶಿಯವರು ವಿದ್ಯಾರ್ಥಿಗಳ ಜೊತೆ ಕುಳಿತು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಿಸುವಾಗ ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್‌ DNAಯಲ್ಲಿ ನಿವೃತ್ತಿ, ಪ್ರಾಮಾಣಿಕತೆ ಅನ್ನೋದೆ ಇಲ್ಲ: ಪ್ರಹ್ಲಾದ್ ಜೋಶಿ

    ಕಾಂಗ್ರೆಸ್‌ DNAಯಲ್ಲಿ ನಿವೃತ್ತಿ, ಪ್ರಾಮಾಣಿಕತೆ ಅನ್ನೋದೆ ಇಲ್ಲ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಕಾಂಗ್ರೆಸ್‌ನ DNAಯಲ್ಲಿ ನಿವೃತ್ತಿ, ಪ್ರಾಮಾಣಿಕತೆ ಅನ್ನೋದೆ ಇಲ್ಲ. ಇದ್ರೆ ರಾಹುಲ್ ಗಾಂಧಿ ನಿವೃತ್ತಿ ಪಡೆದಿದ್ದಾರಾ? ಎಂದು ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (pralhad joshi) ತಿರುಗೇಟು ನೀಡಿದರು.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೀಡಿದ ಆಣೆಯಂತೆ ಕಾಂಗ್ರೆಸ್ ನಡೆದುಕೊಂಡಿಲ್ಲ. ದೇಶದಲ್ಲಿ ನರೇಂದ್ರ ಮೋದಿ (Narendra Modi) ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಪಾರದರ್ಶಕ ವ್ಯವಸ್ಥೆ ತಂದಿದೆ. ಆದರೆ ಈ ಪಾರದರ್ಶಕ ವ್ಯವಸ್ಥೆಯನ್ನು ಹಾಳು ಮಾಡಿ, ಹಣ ಹೊಡೆಯೋದಕ್ಕೆ ಕಾಂಗ್ರೆಸ್ (Congress) ಹೊರಟಿದೆ. ಇದೆಲ್ಲಾ ಗಮನಿಸಿದ್ರೆ ಸಿದ್ದರಾಮಯ್ಯ ಭ್ರಷ್ಟ ರಾಜಕಾರಣಿ ಎಂಬುದು ಜಗಜ್ಜಾಹಿರಾಗಿದೆ ಎಂದರು.

    ಮೈಸೂರಿನಲ್ಲಿ (Mysuru) ಸಿದ್ದರಾಮಯ್ಯ  ಸ್ಪರ್ಧೆ ಮಾಡುತ್ತಿಲ್ಲ ಏಕೆಂದರೆ, ಅಲ್ಲಿ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ ಅಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವರು ಬಯಸುತ್ತಿಲ್ಲ ಎಂದ ಅವರು, ಎಲ್ಲವೂ ಕಾನೂನಿನ ಮೇಲೆಯೇ ನಡೆಯಲ್ಲ. ಜನ ಏನು ಉತ್ತರ ನೀಡಬೇಕೋ ನೀಡುತ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ – ಆರೋಪಿ ಆರ್.ಡಿ.ಪಾಟೀಲ್‌ಗೆ ಸಿಐಡಿ ನೋಟಿಸ್

    ಸಿದ್ದರಾಮಯ್ಯ (Siddaramaiah) ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನರೇಂದ್ರ ಮೋದಿ ಅವರು ಒಬ್ಬ ಚುನಾಯಿತ ಪ್ರತಿನಿಧಿ. ಆದರೆ ರಾಹುಲ್ ಗಾಂಧಿ ಏನು? ದೇಶದಲ್ಲಿ ರಾಹುಲ್ ಗಾಂಧಿ ಸಂದೇಶ ದೇಶದ ತುಂಬಾ ಪಸರಿಸುತ್ತಿದೆ. ಆದರೆ ಖರ್ಗೆಯವರ ಸಂದೇಶ ಪಸರಿಸುತ್ತಿದೆ ಅಂತಾ ಯಾಕೆ ಹೇಳಲ್ಲ? ದೇಶದಲ್ಲಿ ಕಾಂಗ್ರೆಸ್ ಸರ್ವಾಧಿಕಾರ ಹಾಗೂ ಕುಟುಂಬ ರಾಜಕಾರಣ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಚಪ್ಪಲಿ ಹೆಸರೇಳಿಕೊಂಡು ಜೆಡಿಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಟೀಲ್‍ಗೆ ಚಪ್ಪಲಿ ಸೇವೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನರ ನಡುವೆ ಓಡಾಡಿಕೊಂಡು ಮಲೆನಾಡ ತಿಂಡಿಗಳನ್ನು ಸವಿದ ಪ್ರಹ್ಲಾದ್ ಜೋಶಿ

    ಜನರ ನಡುವೆ ಓಡಾಡಿಕೊಂಡು ಮಲೆನಾಡ ತಿಂಡಿಗಳನ್ನು ಸವಿದ ಪ್ರಹ್ಲಾದ್ ಜೋಶಿ

    ಚಿಕ್ಕಮಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹಾಗೂ ಮುರುಗನ್ (Murugan) ಸಾವಿರಾರು ಜನರ ಮಧ್ಯೆ ಜನಸಾಮಾನ್ಯರಂತೆಯೇ ಓಡಾಡಿಕೊಂಡು ಮಲೆನಾಡಿನ ತಿಂಡಿಗಳನ್ನು ಸವಿದಿದ್ದಾರೆ.

    ಚಿಕ್ಕಮಗಳೂರು (Chikkamagaluru) ನಗರದಲ್ಲಿ ನಡೆಯುತ್ತಿರುವ ಚಿಕ್ಕಮಗಳೂರು ಹಬ್ಬಕ್ಕೆ (Chikkamagaluru Festival) ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮುರುಗನ್ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೋರ್ಟ್ ಮುಂಭಾಗದ ರಸ್ತೆಯಲ್ಲಿ ಸುಮಾರು 1 ಕಿ.ಮೀ ನಷ್ಟು ಉದ್ದವಿರುವ ಫುಡ್ ಕೋರ್ಟ್‌ನಲ್ಲಿ ಸಾವಿರಾರು ಜನರ ಮಧ್ಯೆ ಜನಸಾಮಾನ್ಯರಂತೆ ಓಡಾಡಿದ್ದಾರೆ.

    ಹೀಗೆ ಓಡಾಡುತ್ತಾ ರಸ್ತೆ ಯುದ್ದಕ್ಕೂ ಇರುವ ಅಂಗಡಿಗಳಲ್ಲಿ ಪುಳಿಯೋಗೊರೆ, ಮದ್ದೂರು ವಡೆ, ಹೋಳಿಗೆ, ಬಜ್ಜಿ, ಪೊಂಗಲ್, ಶಾವಿಗೆ ಬಾತ್ ರುಚಿಯನ್ನು ಸವಿದಿದ್ದಾರೆ. ಬಳಿಕ ಕಾಫಿನಾಡ ಕಾಫಿಯ ರುಚಿಯನ್ನೂ ಸವಿದಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಮುರುಗನ್ ಜೊತೆ ಶಾಸಕ ಸಿಟಿ ರವಿಯೂ ಇದ್ದು, ರಸ್ತೆ ಮಧ್ಯೆ ನಿಂತು ತಿಂಡಿಗಳನ್ನು ಸವಿಯುವ ಮೂಲಕ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರು ಅರೆಸ್ಟ್‌ ಕೇಸ್‌ – ಎನ್‌ಐಎಯಿಂದ ಚಾರ್ಜ್‌ಶೀಟ್‌ ಸಲ್ಲಿಕೆ

    ಸಚಿವರು ಹಾಗೂ ಶಾಸಕರು ಸವಿದ ತಿಂಡಿ ತಿನಿಸುಗಳಿಗೆ ಹಣ ನೀಡಲು ಮುಂದಾದರೂ ಸಹ ಅಂಗಡಿಯವರು ಹಣವನ್ನು ಪಡೆಯಲು ನಿರಾಕರಿಸಿದ್ದಾರೆ. ಆಗ ಕೇಂದ್ರ ಸಚಿವರು ಹಾಗೂ ಶಾಸಕರು ಹಣವನ್ನು ತೆಗೆದುಕೊಳ್ಳಲೇಬೇಕು ಎಂದು ಹೇಳಿ ಅಂಗಡಿ ಮಾಲೀಕರಿಗೆ ನೀಡಿದ್ದಾರೆ.

    ಈ ವೇಳೆ ಜಿಲ್ಲಾಧಿಕಾರಿ ಕೆಎನ್ ರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು, ನಗರ ಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಉಪಸ್ಥಿತರಿದ್ದರು. ಇದನ್ನೂ ಓದಿ: World Economic Forum – ಭಾರತದ ಆರ್ಥಿಕ ಪ್ರಗತಿಯನ್ನು ಕೊಂಡಾಡಿದ ಮಾರ್ಟಿನ್ ವುಲ್ಫ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜ.31 ರಿಂದ 66 ದಿನ ಸಂಸತ್ ಬಜೆಟ್ ಅಧಿವೇಶನ – ಪ್ರಹ್ಲಾದ್ ಜೋಶಿ

    ಜ.31 ರಿಂದ 66 ದಿನ ಸಂಸತ್ ಬಜೆಟ್ ಅಧಿವೇಶನ – ಪ್ರಹ್ಲಾದ್ ಜೋಶಿ

    ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನ (Budget Session of Parliament) ಇದೇ ತಿಂಗಳ 31 ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿರುವ ಸಚಿವರು, ಈ ಬಾರಿ 66 ದಿನಗಳ ಸಂಸತ್ ಅಧಿವೇಶನ ನಡೆಸಲು ಕಾರ್ಯಕ್ರಮ ಹಾಕಿಕೊಂಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: 8 ಗಂಟೆ ವಿಳಂಬ, ಕೊನೆ ಕ್ಷಣದಲ್ಲಿ ವಿಮಾನ ರದ್ದು – ಮತ್ತೊಮ್ಮೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾದ ಸ್ಪೈಸ್ ಜೆಟ್

    ಜನವರಿ 31ರಂದು ಆರಂಭಗೊಳ್ಳುವ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳು ಎಪ್ರಿಲ್ 6ರ ವರೆಗೆ ನಡೆಯಲಿದೆ. ಅಧಿವೇಶನದಲ್ಲಿ ಬಜೆಟ್ ಮಂಡನೆ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸೇರಿದಂತೆ ಇತರ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಜೋಶಿ ತಿಳಿಸಿದ್ದಾರೆ.

    ಅಧಿವೇಶನದ ಸಂದರ್ಭದಲ್ಲಿ, ಸಂಸತ್ತಿನ ಸ್ಥಾಯಿ ಸಮಿತಿ ಎದುರಿರುವ ಹಲವು ರಾಜ್ಯಗಳ ಅನುದಾನಗಳ ಬೇಡಿಕೆ ಕುರಿತು ನಿರ್ಣಯ ಕೈಗೊಳ್ಳಲು ಹಾಗೂ ವಿವಿಧ ಸಚಿವಾಲಯಗಳಿಗೆ ಸಂಬಂಧಪಟ್ಟ ವಿಷಯಗಳ ಕುರಿತು ವರದಿ ಸಿದ್ಧಪಡಿಸಲು ಫೆಬ್ರವರಿ 14 ರಿಂದ ಮಾರ್ಚ್ 12ರ ವರೆಗೆ ವಿರಾಮ ಪಡೆಯಲಾಗುವುದು ಎಂದು ಜೋಶಿ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಬಳಿಕ ಕರ್ನಾಟಕದಲ್ಲೂ ಆಪ್ `ಟಿಕೆಟ್ ಫಾರ್ ಸೇಲ್’ – ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಮಾರಸ್ವಾಮಿ ಪಾರ್ಟಿ ಫಾರ್ ದಿ ಫ್ಯಾಮಿಲಿ, ಆಫ್ ದಿ ಫ್ಯಾಮಿಲಿ, ಬೈ ದಿ ಫ್ಯಾಮಿಲಿ ಥರ: ಪ್ರಹ್ಲಾದ್ ಜೋಶಿ

    ಕುಮಾರಸ್ವಾಮಿ ಪಾರ್ಟಿ ಫಾರ್ ದಿ ಫ್ಯಾಮಿಲಿ, ಆಫ್ ದಿ ಫ್ಯಾಮಿಲಿ, ಬೈ ದಿ ಫ್ಯಾಮಿಲಿ ಥರ: ಪ್ರಹ್ಲಾದ್ ಜೋಶಿ

    ಧಾರವಾಡ: ಕುಮಾರಸ್ವಾಮಿ (H.D Kumaraswamy) ಪಾರ್ಟಿ ಎಂದರೆ ಅದು ಫಾರ್ ದಿ ಫ್ಯಾಮಿಲಿ, ಆಫ್ ದಿ ಫ್ಯಾಮಿಲಿ ಮತ್ತು ಬೈ ದಿ ಫ್ಯಾಮಿಲಿ ಥರ. ಒಂದು ರಸ್ತೆಗೆ ಹೆಚ್‌.ಡಿ ದೇವೇಗೌಡರ (H.D DeveGowda) ಹೆಸರಿಡಬೇಕೆಂಬ ಮನವಿ ಬಂದಿದೆ ಈ ಬಗ್ಗೆ ಯೋಚಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ರಸ್ತೆಗೆ ದೇವೇಗೌಡರ ಹೆಸರಿಡಬೇಕು ಎಂದು ಯಾರೋ ಹೇಳಿದ್ದಾರೆ. ಅದಕ್ಕೆ ಕಾಮೆಂಟ್ ಕೂಡ ಬಂದಿದೆ ಸರ್ವಿಸ್ ರಸ್ತೆಗೆ ಕುಮಾರಸ್ವಾಮಿ, ರೇವಣ್ಣ ಹೆಸರಿಡಬೇಕು, ಸೇತುವೆಗೆ ಪ್ರಜ್ವಲ್‌ ರೇವಣ್ಣ ಹೆಸರು, ಅಂಡರ್ ಪಾಸ್‍ಗೆ ನಿಖಿಲ್ ಹೆಸರು, ಫ್ಲೈಓವರ್‌ಗೆ ಅನಿತಾ ಕುಮಾರಸ್ವಾಮಿ ಎಂದು ಹೆಸರಿಡಿ ಎಂದು ಕಾಮೆಂಟ್ ಬಂದಿವೆ. ಇವರ ಪಕ್ಷಕ್ಕೆ ಜನ ಯಾವ ರೀತಿ ಕಾಮೆಂಟ್ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಿ ಎಂದು ಜೋಶಿ ಲೇವಡಿ ಮಾಡಿದರು. ಇದನ್ನೂ ಓದಿ: ಪಕ್ಷ ತೊರೆದಿದ್ದ ಘಟಾನುಘಟಿ ಕಾಶ್ಮೀರ ನಾಯಕರು ಮತ್ತೆ ಕಾಂಗ್ರೆಸ್ ಸೇರ್ಪಡೆ

    ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮೀಸಲಾತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಸಿಗುವಂತೆ ಸಿಎಂ ದೃಢ ಹೆಜ್ಜೆಯನ್ನಿಡುತ್ತಿದ್ದಾರೆ. ಈ ಸಂಬಂಧ ಸಿಎಂ ಕ್ಯಾಬಿನೆಟ್‍ನಲ್ಲಿ ನಿರ್ಧಾರ ಮಾಡಿದ್ದಾರೆ. ಮೀಸಲಾತಿಗೆ ಬೇಡಿಕೆ ಬಂದಿರುವ ಬಗ್ಗೆ ಎಲ್ಲ ವಿಸ್ತೃತ ವರದಿ ಮಾಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಅವರು ಮುಂದುವರಿಯುತ್ತಾರೆ. ಸಿಎಂ ಮೇಲೆ ವಿಶ್ವಾಸ ಇಟ್ಟು ಮುಂದುವರಿಯಬೇಕು ಎಂದು ಜೋಶಿ ಮನವಿ ಮಾಡಿದರು. ಇದನ್ನೂ ಓದಿ: ದೇಶ ಕಾಯುವಾಗ ನಾವು ನಿಯತ್ತಿನ ನಾಯಿಗಳೇ – ಸಿದ್ದುಗೆ ಸಿ.ಟಿ ರವಿ ಗುದ್ದು

    ಐಐಟಿ (IIT) ಉದ್ಘಾಟನೆ ಜನವರಿ ತಿಂಗಳಲ್ಲಿ ಆಗಬೇಕಿತ್ತು. ಆದರೆ, ಕಟ್ಟಡ ಕಾಮಗಾರಿ ಇನ್ನೂ ಬಾಕಿ ಇರುವುದರಿಂದ ಅದು ಆಗುವುದಿಲ್ಲ. ಇದನ್ನು ಪ್ರಧಾನಿಗಳ ಗಮನಕ್ಕೆ ತಂದಿದ್ದೇನೆ. ಐಐಟಿ ಉದ್ಘಾಟನೆಗೆ ಒಂದು ದಿನ ಬರುವ ಭರವಸೆಯನ್ನು ಮೋದಿ (Narendra Modi) ಅವರು ಕೊಟ್ಟಿದ್ದಾರೆ ಎಂದರು.

    ಸ್ಯಾಂಟ್ರೋ ರವಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸ್ಯಾಂಟ್ರೋ ರವಿ ಯಾರು, ಏನು ಎಂಬುದನ್ನು ಈಗಾಗಲೇ ಸಿಎಂ ಹೇಳಿದ್ದಾರೆ. ಅವರ ಜೊತೆ ಯಾರ ಸಂಪರ್ಕ ಇದೆ ಎಂಬುದನ್ನೂ ಅವರು ಹೇಳಿದ್ದಾರೆ. ಯಾವುದೇ ಆಧಾರ ಇಲ್ಲದೆ ಈ ರೀತಿ ಒಬ್ಬರಿಗೆ ನಾಯಿ ಮರಿ ಎನ್ನುವುದು, ಒಬ್ಬರು ಸ್ಯಾಂಟ್ರೋ ರವಿ ಎಂದು ಮಾತನಾಡುವುದು ಸರಿಯಲ್ಲ. ಈಗ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಚಿಲ್ಲರೆ ಹಂತಕ್ಕೆ ಇಳಿಯಬಾರದು ಎಂದು ಅಭಿಪ್ರಾಯ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಳಸಾ ಬಂಡೂರಿ ಯೋಜನೆಗೆ ಜಲ ಆಯೋಗ ಅನುಮತಿ: ಪ್ರಹ್ಲಾದ್ ಜೋಶಿ ಮಾಹಿತಿ

    ಕಳಸಾ ಬಂಡೂರಿ ಯೋಜನೆಗೆ ಜಲ ಆಯೋಗ ಅನುಮತಿ: ಪ್ರಹ್ಲಾದ್ ಜೋಶಿ ಮಾಹಿತಿ

    ಹುಬ್ಬಳ್ಳಿ: ಕೇಂದ್ರ ಜಲ ಆಯೋಗವು ಕರ್ನಾಟಕದ ಕಳಸಾ ಬಂಡೂರಿ (Kalasa Banduri Yojana) ವಿಸ್ತೃತ ಯೋಜನಾ ವರದಿಗೆ ಅನುಮತಿಯನ್ನು ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahad Joshi) ಹೇಳಿದ್ದಾರೆ.

    ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡ ಅವರು, ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ (AmitShah) ಅವರಿಗೆ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಅನಂತ ಧನ್ಯವಾದಗಳು ತಿಳಿಸುವುದಾಗಿ ಹೇಳಿದರು.

    ಕಳಸಾ ಬಂಡೂರಿ ಯೋಜನೆಗೆ ಈ ಹಿಂದೆ ನಾವು ಕೂಡಾ ಹೋರಾಟ ಮಾಡಿದ್ದೆವು. ಇದೀಗ ವಿಸ್ತೃತ ಯೋಜನಾ ವರದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಬೊಮ್ಮಾಯಿ ಸರ್ಕಾರವೂ ಅತ್ಯಂತ ಪರಿಶ್ರಮ ವಹಿಸಿದೆ, ನಾನು ಬೊಮ್ಮಾಯಿ (Basavaraj Bommai) ಹಾಗೂ ಗೋವಿಂದ್ ಕಾರಜೋಳ (Govind Karajola) ಅವರಿಗೆ ಕೂಡ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಹೊಸವರ್ಷದ ಸಂಭ್ರಮಕ್ಕೆ ಗೋವಾ ಮದ್ಯ ಕರ್ನಾಟಕದತ್ತ – ಒಂದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮದ್ಯ ಅಬಕಾರಿ ವಶಕ್ಕೆ

    ಜನವರಿ 2 ರಂದು ಮಹದಾಯಿ ವಿಚಾರವಾಗಿ ಕಾಂಗ್ರೆಸ್ (Congress) ಬೃಹತ್ ಸಮಾವೇಶ ಮಾಡಲಿದೆ. ಕಾಂಗ್ರೆಸ್ ಸಮಾವೇಶಕ್ಕೂ ಮುನ್ನವೇ ಯೋಜನೆ ವರದಿಗೆ ಅನುಮೋದನೆ ನೀಡಿದೆ. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ಬಿಜೆಪಿ (BJP) ಕೌಂಟರ್ ಕೊಟ್ಟಿದೆ. ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸಮಾವೇಶ ಹಮ್ಮಿಕೊಂಡಿದ್ದರು. ಆದರೆ ಸಮಾವೇಶ ಮಾಡೋ ಒಳಗೆ ಕಳಸಾ ಬಂಡೂರಿ ವಿಸ್ತ್ರತ ವರಿದಿಗೆ ಜಲ ಆಯೋಗ ಅನುಮತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಸೇನೆಯನ್ನ ಕಾಂಗ್ರೆಸ್ ನಂಬಬೇಕು – ಪ್ರಹ್ಲಾದ್‌ ಜೋಶಿ

    ಭಾರತೀಯ ಸೇನೆಯನ್ನ ಕಾಂಗ್ರೆಸ್ ನಂಬಬೇಕು – ಪ್ರಹ್ಲಾದ್‌ ಜೋಶಿ

    ನವದೆಹಲಿ: ಚೀನಾ-ಭಾರತ ಗಡಿ (India-China Clash) ವಿಚಾರವಾಗಿ ರಾಜ್ಯಸಭೆಯಲ್ಲಿ ಇಂದು ಕಾಂಗ್ರೆಸ್ (Congress) ನಡೆಸಿದ ಧರಣಿಯನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷ ಕಾಂಗ್ರೆಸ್ ಸದನ ಪೀಠಕ್ಕೆ ಅಗೌರವ ತೋರುವ ರೀತಿ ನಡೆದುಕೊಳ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಸಂಸತ್ತಿನಲ್ಲಿ ಸೂಕ್ಷ್ಮ ವಿಷಯಗಳ ಚರ್ಚೆ ನಡೆಯದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಪ್ರತಿಪಕ್ಷದ ಸರ್ಕಾರದ ಅವಧಿಯಲ್ಲೂ ಇಂತಹ ಆಚರಣೆಯನ್ನು ಕಂಡಿದ್ದೇವೆ. ಸ್ವತಃ ರಾಜ್ಯಸಭೆ ಸಭಾಪತಿಯವರು ಸಂಧಾನಕ್ಕೆ ಕರೆದರೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬರಲು ಒಪ್ಪಲಿಲ್ಲ. ರಾಜ್ಯಸಭೆ ಪೀಠದಿಂದ ಏನೇ ನಿರ್ದೇಶನಗಳು ಬಂದರೂ ಅದನ್ನ ಉಲ್ಲಂಘಿಸಬೇಕು ಎಂಬ ನಿರ್ಧಾರ ಪ್ರತಿಪಕ್ಷಗಳು ಮಾಡಿದಂತಿದೆ. ಈ ರೀತಿಯ ನಡವಳಿಕೆ ಸದನದಲ್ಲಿ ತೋರುವುದು ಖರ್ಗೆಯವರಿಗೆ ಸರಿಯಾದುದಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಚೀನಾ ಗಡಿ ಸಂಘರ್ಷ – ಮೊಬೈಲ್ ಸಂಪರ್ಕ ಸುಧಾರಣೆಗೆ ತವಾಂಗ್‌ನಲ್ಲಿ 22 ಟವರ್

    ರಾಜ್ಯಸಭೆ ಸಭಾಪತಿ ಅವರು ಪ್ರತಿಪಕ್ಷಗಳಲ್ಲಿ ಕೈ ಮುಗಿದು ಮನವಿ ಮಾಡಿದರು. ಸದನದಲ್ಲಿ ಪೀಠಾಧ್ಯಕ್ಷರು ಎದ್ದು ನಿಂತು ಕೈ ಮುಗಿದು ರಿಕ್ವೆಸ್ಟ್ ಮಾಡುತ್ತಾರೆ ಎಂದರೆ, ಪ್ರತಿಪಕ್ಷ ನಾಯಕ ಹಾಗೂ ಸಭಾ ನಾಯಕರು ಅದನ್ನ ಗೌರವಿಸಬೇಕು. ಆ ಮನವಿಯನ್ನ ಸಾರಾಸಗಟಾಗಿ ಮಲ್ಲಿಕಾರ್ಜುನ ಖರ್ಗೆ ತಳ್ಳಿ ಹಾಕುತ್ತಾರೆ ಎಂದರೆ ಏನರ್ಥ? ಸಂಧಾನದ ಮಾತುಕತೆಗೆ ನಾನು ಬರಲ್ಲ ಅಂತಾ ಖರ್ಗೆ ನೇರವಾಗಿ ಹೇಳಿದರು. ಒಂದು ಸೌಜನ್ಯವನ್ನ ತೋರಿಸಲಿಲ್ಲ. ಈ ನಡವಳಿಕೆ ಖಂಡನೀಯ ಎಂದರು.

    ಕೊನೆಪಕ್ಷ ಪ್ರತಿಪಕ್ಷಗಳು ಚೀನಾ ವಿಚಾರದಲ್ಲಿ ನಮ್ಮ ಸೇನೆಯ ಹೇಳಿಕೆಯನ್ನಾದರೂ ನಂಬಬೇಕು. ಭಾರತೀಯ ಸೇನೆಯ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇಲ್ಲವೇ? ಚೀನಾ-ಭಾರತ ಗಡಿ ವಿಚಾರ ಸೂಕ್ಷ್ಮ ವಿಚಾರವಾಗಿದ್ದು, ಸಾರ್ವಜನಿಕವಾಗಿ ಚರ್ಚೆ ನಡೆಸುವುದು ಎಷ್ಟು ಸೂಕ್ತ? ಕೆಲವು ಸೂಕ್ಷ್ಮ ವಿಚಾರಗಳನ್ನ ಸದನದಲ್ಲಿ ಚರ್ಚಿಸುವುದಕ್ಕಿದ್ದ ಸಭಾ ನಾಯಕರು, ಪ್ರತಿಪಕ್ಷ ನಾಯಕರು ಒಟ್ಟಾಗಿ ಸೇರಿ ಚರ್ಚಿಸುವ ಅಗತ್ಯತೆ ಇರುತ್ತದೆ. ಕಾಂಗ್ರೆಸ್ ಆಡಳಿತ ನಡೆಸುವಾಗಲು ಇಂಥಹ ಹಲವು ನಿದರ್ಶನಗಳಿವೆ ಎಂದು ಹೇಳಿದರು. ಇದನ್ನೂ ಓದಿ: ಭಾರತದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲ : IMA

    ಕಾಂಗ್ರೆಸ್ ಆಡಳಿತ ನಡೆಸುವಾಗ ಇಂಥಹ ಸಂದರ್ಭಗಳಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ರಾಷ್ಟ್ರದ ಹಿತ ಗಮನಿಸಿ ಸರ್ಕಾರಕ್ಕೆ ಸಹಕಾರ ನೀಡಿದೆ. ಸದನದಲ್ಲಿ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿಕೆ ನೀಡಿದ್ದಾರೆ. ಅಲ್ಲದೇ ಭಾರತೀಯ ಸೇನೆ ಕೂಡ ಹೇಳಿಕೆ ನೀಡಿದೆ. ಸೇನೆಯ ಹೇಳಿಕೆಯನ್ನಾದ್ರೂ ನಂಬಿ ಕಾಂಗ್ರೆಸ್ ಸುಗಮವಾಗಿ ಸದನ ನಡೆಯಲು ಅವಕಾಶ ಮಾಡಿಕೊಡಬಹುದಿತ್ತು. ಆದರೆ ಮಲ್ಲಿಕಾರ್ಜುನ ಖರ್ಗೆ ತಮ್ಮ ಪಕ್ಷದ ಮೇಲಿನವರನ್ನ ಮೆಚ್ಚಿಸಬೇಕಿದೆ. ಯಾರನ್ನೋ ಮೆಚ್ಚಿಸಲು ಸಂವಿಧಾನಾತ್ಮಕವಾಗಿ ನಡೆಯುವ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಧರಣಿಗೆ ಜೋಶಿ ತಿರುಗೇಟು ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಡಿಕ್ಷನರಿಯಲ್ಲಿ ಕಾಂಗ್ರೆಸ್‍ನ ಅರ್ಥವನ್ನು ಹೊಡೆದಾಟ, ಬಡಿದಾಟವೆಂದು ಬರೆಯಬೇಕು: ಪ್ರಹ್ಲಾದ್ ಜೋಶಿ

    ಡಿಕ್ಷನರಿಯಲ್ಲಿ ಕಾಂಗ್ರೆಸ್‍ನ ಅರ್ಥವನ್ನು ಹೊಡೆದಾಟ, ಬಡಿದಾಟವೆಂದು ಬರೆಯಬೇಕು: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ರಾಜಕೀಯದಲ್ಲಿ ಕಾಂಗ್ರೆಸ್ ಅಂದರೆ ಹೊಡೆದಾಟ, ಬಡಿದಾಟ, ಬಡವರಿಗೆ ದ್ರೋಹ ಅಂತ ಡಿಕ್ಷನರಿ ಅರ್ಥ ಬರೆಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಟೀಕಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಾವಿಕನಿಲ್ಲದ ದೋಣಿಯಾಗಿದೆ. ಅವರಿಗೆ ರೌಡಿಶೀಟರ್ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲ. ಕಾಂಗ್ರೆಸ್ ನಲ್ಲಿ ಡಿಕೆಶಿ ಮತ್ತು ಮೊಹಮ್ಮದ್ ನಲಪಾಡ್ ಕಥೆ ಎಲ್ಲರಿಗೂ ಗೊತ್ತಿದೆ. ನಡು ರಸ್ತೆಯಲ್ಲಿ ಮರ್ಡರ್ ಮಾಡಲು ಯತ್ನಿಸಿದ ನಲಪಾಡ್ ಅಧ್ಯಕ್ಷರಾದರು. ಆದರೆ ರಕ್ಷಿತ್ ರಾಮಯ್ಯನ ದೂರಯಿಟ್ಟಿರು ಎಂದು ವ್ಯಂಗ್ಯವಾಡಿದರು.

    ಜನಾರ್ದನ ರೆಡ್ಡಿ ಪಕ್ಷಕ್ಕೆ ಬರುವ ವಿಚಾರವಾಗಿ ಯಾವುದೇ ಮಾಹಿತಿ ಇಲ್ಲ. ಅವರು ಪಕ್ಷಕ್ಕೆ ಕರೆತರೋದು ಬಿಡೋದು ನಮ್ಮ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಸದ್ಯ ನನ್ನ ಪ್ರಕಾರ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕಲಾವಿದರೊಂದಿಗೆ ಡೋಲು ಬಾರಿಸಿದ ಮೋದಿ

    ಮೋದಿ ರಾಜ್ಯಕ್ಕೆ ಬರುವ ವಿಚಾರವಾಗಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಈಗಾಗಲೇ ನಮ್ಮ ಪಕ್ಷ ಭರ್ಜರಿ ತಯಾರಿ ನಡೆಸಿದೆ. ಪ್ರಧಾನ ಮೋದಿ ಸೇರಿದಂತೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಇನ್ನೂ ಮುಂದೆ ರಾಜ್ಯಕ್ಕೆ ಬರಲಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ , ಜೆಪಿ ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ಅವರ ಪ್ರವಾಸ ನಿಗದಿಯಾಗಿದೆ. ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಮಾಚಲಕ್ಕೆ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣವಚನ ಸ್ವೀಕಾರ

    Live Tv
    [brid partner=56869869 player=32851 video=960834 autoplay=true]

  • ಆಡಳಿತದಲ್ಲಿ ಗುಜರಾತ್ ಮಾದರಿ, ಟಿಕೆಟ್ ಹಂಚಿಕೆಯಲ್ಲಿ ಪಕ್ಷ ನಿಷ್ಠೆ ಗೆಲುವಿಗೆ ಮಾನದಂಡವಾಗುತ್ತೆ: ಪ್ರಹ್ಲಾದ್‌ ಜೋಶಿ

    ಆಡಳಿತದಲ್ಲಿ ಗುಜರಾತ್ ಮಾದರಿ, ಟಿಕೆಟ್ ಹಂಚಿಕೆಯಲ್ಲಿ ಪಕ್ಷ ನಿಷ್ಠೆ ಗೆಲುವಿಗೆ ಮಾನದಂಡವಾಗುತ್ತೆ: ಪ್ರಹ್ಲಾದ್‌ ಜೋಶಿ

    ಧಾರವಾಡ: ಮುಂಬರುವ ಕರ್ನಾಟಕ ವಿಧಾನಸಭೆ (Karnataka Election) ಚುನಾವಣೆಗೆ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ (BJP) ಗುಜರಾತ್ ಮಾಡೆಲ್ (Gujarat Model) ಅನುಸರಿಸಲಿದೆ ಅಂತಾ ಈಗಲೇ ಲೆಕ್ಕಾಚಾರ ಹಾಕುವ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು. ‌

    ಧಾರವಾಡದಲ್ಲಿ (Dharwad) ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಹಂಚಿಕೆಯಲ್ಲಿ ಪಕ್ಷ ನಿಷ್ಠೆ, ಗೆಲುವು ಹಾಗೂ ಪಕ್ಷದ ಸಿದ್ಧಾಂತಕ್ಕೆ ಬದ್ಧತೆಯೇ ಮುಖ್ಯ ಮಾನದಂಡವಾಗಲಿದೆ ಎಂದರು. ಇದನ್ನೂ ಓದಿ: ಜನವರಿಯಲ್ಲಿ ರಾಜ್ಯಕ್ಕೆ ಪ್ರಧಾನಿ ಮೋದಿ 4 ಬಾರಿ ಬರಲಿದ್ದಾರೆ: ಪ್ರಹ್ಲಾದ್ ಜೋಶಿ

    ಆಡಳಿತ ವಿಚಾರದಲ್ಲಿ ಗುಜರಾತ್ ಮಾಡೆಲ್ ಅನುಸರಿಸುವುದು ಉತ್ತಮ. ಕಳೆದ 8 ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಾನು ಕೆಲಸ ಮಾಡ್ತಿದ್ದೇನೆ. ಒಳ್ಳೆಯ ಸಂಗತಿಗಳು ಎಲ್ಲಿಯೇ ನಡೆದರೂ ಅದನ್ನ ತೆಗೆದುಕೊಳ್ಳಬೇಕು. ಕರ್ನಾಟಕದ ಆಡಳಿತದಲ್ಲೂ ಅಂತಹ ಮಾದರಿಯನ್ನ ಅನುಸರಿಸಲಾಗುವುದು ಎಂದು ಜೋಶಿ ಹೇಳಿದರು.

    ಜನವರಿ 1ಕ್ಕೆ ಧಾರವಾಡ ಐಐಟಿ ಕಟ್ಟಡ ಉದ್ಘಾಟನೆಗೆ ತಯಾರಿ ಮಾಡುವಂತೆ ಜೋಶಿ ಸೂಚನೆ
    ಧಾರವಾಡದಲ್ಲಿ ನಿರ್ಮಾಣವಾಗುತ್ತಿರುವ ಐಐಟಿ ಕಟ್ಟಡ ಕಾಮಗಾರಿಯನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವೀಕ್ಷಿಸಿದರು. ಜನವರಿ 1 ರೊಳಗೆ ನೂತನ ಕಟ್ಟಡ ಕಾಮಗಾರಿ ಮುಗಿಸುವಂತೆ ಪ್ರಹ್ಲಾದ್ ಜೋಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ನಾನೂ ಗೂಂಡಾಗಿರಿ ಮಾಡ್ತಿದ್ದೆ, ಜೀನ್ಸ್ ಪ್ಯಾಂಟ್ ಹಾಕ್ಕೊಂಡ್ರೆ ಹುಡ್ಗೀರೆಲ್ಲಾ ನನ್ನೇ ನೋಡ್ತಿದ್ರು: ಶ್ರೀರಾಮುಲು

    Live Tv
    [brid partner=56869869 player=32851 video=960834 autoplay=true]