Tag: ಪ್ರಹ್ಲಾದ್ ಜೋಶಿ

  • ಇಂದು ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯೋ ಸಾಮರ್ಥ್ಯ ನಮ್ಮಲ್ಲಿದೆ: ಜೋಶಿ

    ಇಂದು ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯೋ ಸಾಮರ್ಥ್ಯ ನಮ್ಮಲ್ಲಿದೆ: ಜೋಶಿ

    ಧಾರವಾಡ: ಮೊದಲು ಯಾರು ಬೇಕಾದರೂ ಎಲ್ಲಿ ಬೇಕಾದಲ್ಲಿ ಬಾಂಬ್ ಹಾಕಿ ಓಡಿ ಹೋಗುತ್ತಿದ್ದರು. ಬಾಂಬ್ ಹಾಕಿದ ಮೇಲೆ ನಾವು ಅಳುತ್ತಾ ಕುಳಿತು ಬಿಡುತ್ತಿದ್ದೆವು. ಆದರೆ ಈಗ ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯುವ ಸಾಮರ್ಥ್ಯ ನಮ್ಮಲ್ಲಿ ಬೆಳೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.

    ಧಾರವಾಡ (Dharwad) ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಆರೋಗ್ಯ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಭಾರತದ ಮೇಲೆ ಯಾರೂ ಈಗ ಕಣ್ಣು ಕೆಕ್ಕರಿಸಿ ನೋಡುವುದಿಲ್ಲ. ಹಾಗೆ ನಾವು ನಮ್ಮ ಸೈನ್ಯವನ್ನು ಬಲಪಡಿಸಿದ್ದೇವೆ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ YST ಜೊತೆ VST ಟ್ಯಾಕ್ಸ್ , ಇದು VST ಸರ್ಕಾರ: ರವಿಕುಮಾರ್ ಕಿಡಿ

    ಸದ್ಯದಲ್ಲೇ ರಾಮ ಮಂದಿರ ನಿರ್ಮಾಣ ಆಗಲಿದೆ, ನೀವೆಲ್ಲ ಅಯೋಧ್ಯೆಗೆ ರಾಮ ಮಂದಿರ ಉದ್ಘಾಟನೆಗೆ ಬರಬೇಕು ಎಂದು ಕಾರ್ಯಕ್ರಮದಲ್ಲಿ ಜೋಶಿ ಕರೆ ನೀಡಿದರು. ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸ್ವೀಕರಿಸುತ್ತೇವೆ, ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ: ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐದಲ್ಲ, 10 ಕೆಜಿ ಅಕ್ಕಿಗೆ ಸರ್ಕಾರ ಹಣ ನೀಡಬೇಕು – ಜೋಶಿ ವಾಗ್ದಾಳಿ

    ಐದಲ್ಲ, 10 ಕೆಜಿ ಅಕ್ಕಿಗೆ ಸರ್ಕಾರ ಹಣ ನೀಡಬೇಕು – ಜೋಶಿ ವಾಗ್ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

    ನವದೆಹಲಿ: ಕಾಂಗ್ರೆಸ್‌ ಸರ್ಕಾರ (Karnataka Congress Government) 10 ಕೆಜಿ ಅಕ್ಕಿಗೆ ಹಣವನ್ನು ನೀಡಬೇಕು ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ (Prahlad Joshi) ಆಗ್ರಹಿಸಿದ್ದಾರೆ.

    5 ಕೆಜಿ ಅಕ್ಕಿಯ ಬದಲಿಗೆ ಪ್ರತಿ ಕೆಜಿಗೆ 34 ರೂಪಾಯಿಂತೆ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಮುಂದಾದ ಕಾಂಗ್ರೆಸ್‌ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್‌ ನಾಯಕರು 10 ಕೆಜಿ ಅಕ್ಕಿ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಈ ಕಾರಣಕ್ಕೆ 10 ಕೆಜಿ ಅಕ್ಕಿಗೆ ಹಣವನ್ನು ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: 5 ಕೆಜಿ ಅಕ್ಕಿಯ ಬದಲು ಖಾತೆಗೆ ಹಣ ಹಾಕಲು ಸರ್ಕಾರ ನಿರ್ಧಾರ: ಮುನಿಯಪ್ಪ

    10 ಕೆಜಿ ಬೇಕಾ ಬೇಡ್ವಾ ಕೈ ಎತ್ತಿ ಎಂದು ಸಿದ್ದರಾಮಯ್ಯ (Siddaramaiah) ಭಾಷಣ ಮಾಡಿದ್ದರು. ಸಿದ್ದರಾಮಯ್ಯನವರು ನಾವೇ ಅಕ್ಕಿಕೊಟ್ಟಿದ್ದು ಎಂದು ದಾರಿ ತಪ್ಪಿಸುತ್ತಿದ್ದರು. ಇವತ್ತು ಮೊದಲ ಬಾರಿಗೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಕನಿಷ್ಠ ಪಕ್ಷ 5 ಕೆಜಿಗೆ ಹಣ ನೀಡುತ್ತಿದ್ದಾರೆ ಎನ್ನುವುದೇ ಸಮಾಧಾನ ಎಂದು ವಾಗ್ದಾಳಿ ನಡೆಸಿದರು.

    10 ಕೆಜಿಗೆ ಅಕ್ಕಿಯ ಹಣ ನೀಡಿದ್ದರೆ ಮರ್ಯಾದಾಸ್ಥರ ಲಕ್ಷಣ ಆಗುತ್ತಿತ್ತು. ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಎಲ್ಲಾ ರಾಜ್ಯಗಳ 80 ಕೋಟಿ ಜನರಿಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ. ನೈಸರ್ಗಿಕ ವಿಕೋಪ, ತುರ್ತು ಪರಿಸ್ಥಿತಿಯಲ್ಲಿ ಅಕ್ಕಿಕೊಡಬೇಕಾಗುತ್ತದೆ. ಈ ಕಾರಣಕ್ಕೆ ಕೇಂದ್ರ ಸರಕಾರ ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕು. ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿಯನ್ನು ಕೊಟ್ಟಿಲ್ಲ ಎಂದರು.

     

    ಯಾರನ್ನು ಕೇಳದೇ ಸಿದ್ದರಾಮಯ್ಯ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ನಮ್ಮ ಬಳಿ ಅಕ್ಕಿ ಇದ್ದರೆ ಕೊಡುತ್ತಿದ್ದೆವು. ಬೇರೆ ರಾಜ್ಯಗಳು ಕೂಡ 10 ಕೆಜಿ ಕೇಳಿದರೆ ಎಲ್ಲಿಂದ ಕೊಡುವುದು? ದೇಶದಲ್ಲಿ ಅಕ್ಕಿ ಸ್ಟಾಕ್ ಇರಲೇ ಬೇಕು. ನೀವು ಗ್ಯಾರಂಟಿ ಕಾರ್ಡ್‌ನಲ್ಲಿ ಸಹಿ ಹಾಕುವಾಗ ಯೋಚನೆ ಮಾಡಬೇಕಿತ್ತು. ಸುಳ್ಳು ಹೇಳುವುದು ಕಾಂಗ್ರೆಸ್ ಡಿಎನ್‌ಎನಲ್ಲಿದೆ. ಹಿಮಾಚಲ, ರಾಜಸ್ಥಾನದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಪೂರ್ಣವಾಗಿಲ್ಲ. ಈಗ ಕರ್ನಾಟಕದಲ್ಲೂ ಜನರನ್ನು ಸಿದ್ದರಾಮಯ್ಯ ಮೋಸದಿಂದ ವಂಚಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳು ಶರಣಾಗದಿದ್ದರೆ ಮನೆ ಜಪ್ತಿ

    ಪಕ್ಷದ ನಾಯಕರ ವಿರುದ್ಧ ರೇಣುಕಾರ್ಯ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾವು ಸೋತಿರಬಹುದು, ನಮ್ಮದು ಐಡಿಯಾಲಜಿ ಪಾರ್ಟಿ. ಯಾವುದೇ ನಾಯಕರು ಬಹಿರಂಗವಾಗಿ ಮಾತನಾಡಬಾರದು. ಬಿಜೆಪಿ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಶೀಘ್ರದಲ್ಲೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆಯಾಗಲಿದೆ ಎಂದು ತಿಳಿಸಿದರು.

  • ಕಂಡೀಷನ್‌ಗಳ ಮೂಲಕ ಗ್ಯಾರಂಟಿಗಳು ಜನರಿಗೆ ತಲುಪದಂತೆ ಕಾಂಗ್ರೆಸ್ ಷಡ್ಯಂತ್ರ ಮಾಡಿದೆ: ಪ್ರಹ್ಲಾದ್ ಜೋಶಿ

    ಕಂಡೀಷನ್‌ಗಳ ಮೂಲಕ ಗ್ಯಾರಂಟಿಗಳು ಜನರಿಗೆ ತಲುಪದಂತೆ ಕಾಂಗ್ರೆಸ್ ಷಡ್ಯಂತ್ರ ಮಾಡಿದೆ: ಪ್ರಹ್ಲಾದ್ ಜೋಶಿ

    ನವದೆಹಲಿ: ಕಂಡೀಷನ್‌ಗಳ (Conditions) ಬಗ್ಗೆ ಮೊದಲೇ ಹೇಳದ ಕಾಂಗ್ರೆಸ್ (Congress) ಈಗ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಗ್ಯಾರಂಟಿಗಳ (Guarantee) ವಿಚಾರದಲ್ಲಿ ಷರತ್ತುಗಳನ್ನು ವಿಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನವದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಗೆ ಕಂಡೀಷನ್ ಹಾಕುವ ಮೂಲಕ ಯೋಜನೆಗಳು ಜನರಿಗೆ ತಲುಪದಂತೆ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಹಿಂದೆ ಎಲ್ಲರಿಗೂ ಫ್ರೀ ಅಂದವರು ಈಗ ಕಂಡೀಷನ್ ಹಾಕುತ್ತಿದ್ದಾರೆ. ಯುವನಿಧಿ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಸೇರಿದಂತೆ ಎಲ್ಲ ಗ್ಯಾರಂಟಿಗಳಿಗೆ ಕಂಡೀಷನ್ ಹಾಕಿದ್ದಾರೆ ಎಂದು ಕಿಡಿಕಾರಿದರು.

    ಎಲ್ಲ ಯೋಜನೆಗಳಿಗೂ ಆನ್‌ಲೈನ್ ಅರ್ಜಿ ಹಾಕುವುದು ಕಡ್ಡಾಯವಾಗಿದೆ. ಈ ಮೂಲಕ ವೆರಿಫಿಕೇಷನ್ ಹೆಸರಿನಲ್ಲಿ ಯೋಜನೆಯನ್ನು ಜನರಿಗೆ ಮತ್ತಷ್ಟು ವಿಳಂಬ ಮಾಡುವ ಲೆಕ್ಕಾಚಾರ ಕಾಂಗ್ರೆಸ್ ಹಾಕಿದೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಜನರು ಉತ್ತರ ನೀಡಲಿದ್ದಾರೆ ಎಂದರು. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ

    ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಮತ್ತು ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಮಾತನಾಡಿ, ಎಮ್ಮೆ ಹತ್ಯೆ ಮಾಡಿ ಎಂದು ನಾವು ಹೇಳಿಲ್ಲ. ಕೋಟ್ಯಂತರ ಜನರ ಮತ್ತು ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆಯಾಗಬಾರದು ಎನ್ನುವ ಕಾರಣಕ್ಕೆ ಗೋ ಹತ್ಯೆ ಬೇಡ ಎಂದು ಹೇಳಿದ್ದೇವೆ. ನಾವು ತಂದಿರುವ ಕಾನೂನು ಸೂಕ್ತವಾಗಿದೆ. ಅದನ್ನು ಅವರು ಮುಟ್ಟಬಾರದು ಎನ್ನುವುದು ನಮ್ಮ ಆಗ್ರಹ. ಆರ್‌ಎಸ್‌ಎಸ್ ಬ್ಯಾನ್ ಮಾಡುವ ಪ್ರಯತ್ನ ಅವರ ಮುತ್ತಾತ, ಅಜ್ಜಿ ಎಲ್ಲ ಮಾಡಿದ್ದಾರೆ ಅದಕ್ಕೆ ಪ್ರತಿಫಲ ಅನುಭವಿಸಿದ್ದಾರೆ. ಇವರು ಅನುಭವಿಸುತ್ತಾರೆ ಎಂದು ತಿರುಗೇಟು ನೀಡಿದರು.

    2-3 ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ:
    ಇನ್ನು 2-3 ದಿನಗಳಲ್ಲಿ ವಿಪಕ್ಷ ನಾಯಕರು ಯಾರು ಎಂಬುದು ಗೊತ್ತಾಗಲಿದೆ. ನನ್ನ ಪ್ರಕಾರ ಇಷ್ಟೊತ್ತಿಗೆ ನಿರ್ಧಾರವಾಗಬೇಕಾಗಿತ್ತು. ಒಡಿಶಾದಲ್ಲಿ ರೈಲು ದುರ್ಘಟನೆ ಹಿನ್ನೆಲೆ ನಮ್ಮ ಕೇಂದ್ರ ನಾಯಕರು ಆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಇನ್ನು 2-3 ದಿನದಲ್ಲಿ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ರಾಜ್ಯಾಧ್ಯಕ್ಷರ ಅವಧಿಯೂ ಈಗಾಗಲೇ ಮುಗಿದಿದೆ. ಪಕ್ಷ ಆ ವಿಚಾರದಲ್ಲೂ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜೋಶಿ ಹೇಳಿದರು. ಇದನ್ನೂ ಓದಿ: IAS ವರ್ಸಸ್‌ IPS: ರೂಪಾ ಮೌದ್ಗಿಲ್‌ಗೆ ಜಾಮೀನು

  • ವಂದೇ ಭಾರತ್‌ ಸೆಮಿಸ್ಪೀಡ್‌ ರೈಲಿನಲ್ಲಿ ಓಡಾಡ್ಬೇಕು ಎಂಬ ಉತ್ತರ ಕರ್ನಾಟಕ ಜನರ ಕನಸು ಶೀಘ್ರವೇ ನನಸು!

    ವಂದೇ ಭಾರತ್‌ ಸೆಮಿಸ್ಪೀಡ್‌ ರೈಲಿನಲ್ಲಿ ಓಡಾಡ್ಬೇಕು ಎಂಬ ಉತ್ತರ ಕರ್ನಾಟಕ ಜನರ ಕನಸು ಶೀಘ್ರವೇ ನನಸು!

    – ಜುಲೈನಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ

    ಹುಬ್ಬಳ್ಳಿ: ವಂದೇ ಭಾರತ್‌ ಸೆಮಿಸ್ಪೀಡ್‌ ರೈಲಿನಲ್ಲಿ (Vande Bharat Express) ಓಡಾಡಬೇಕು ಎಂಬ ಉತ್ತರ ಕರ್ನಾಟಕ ಜನರ ಕನಸು ಶೀಘ್ರದಲ್ಲಿಯೇ ನನಸಾಗಲಿದ್ದು, ಜುಲೈನಲ್ಲಿ ಧಾರವಾಡ-ಬೆಂಗಳೂರು (Bengaluru-Dharawada) ವಂದೇ ಭಾರತ್ ರೈಲಿಗೆ ಚಾಲನೆ ದೊರೆಯಲಿದೆ.

    ಬಹುನಿರೀಕ್ಷಿತ ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸಂಚಾರಕ್ಕೆ ಕೊನೆಯ ಹಂತದ ಸಿದ್ಧತೆ ನಡೆಯುತ್ತಿದ್ದು, ರಾಜ್ಯದಲ್ಲಿ ಓಡಾಟ ನಡೆಸುವ ಎರಡನೇ ವಂದೇ ಭಾರತ್‌ ರೈಲು ಇದಾಗಿದೆ. ರೈಲು ಸೇವೆಯ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣವಾದ ಹಿನ್ನಲೆ, ಕೇಂದ್ರ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ (Ahswini Vaishnaw) ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ. ಜುಲೈ ವೇಳೆಗೆ ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಭರವಸೆಯನ್ನು ರೈಲ್ವೆ ಸಚಿವರು ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ ಸಲ್ಯೂಟ್, ಒದೆನೂ ಸಿಗುತ್ತೆ, ಗುಂಡು ಹಾರಿಸೋದು ಇರುತ್ತೆ: ಜಿ ಪರಮೇಶ್ವರ್

    ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ದೇಶದ ಅತಿ ವೇಗದ ರೈಲು ಇದಾಗಿದ್ದು, ಗಂಟೆಗೆ ಗರಿಷ್ಠ 160 ಕಿ.ಮೀ ವೇಗದದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಐಷರಾಮಿ ವ್ಯವಸ್ಥೆ ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದ್ದು, ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯ ಹೊಂದಿದೆ.

    ಹವಾನಿಯಂತ್ರಿತ ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್‌ಗಳು, ಆನ್‌ಬೋರ್ಡ್‌ ಉಪಾಹಾರದ ವ್ಯವಸ್ಥೆ, ರೀಡಿಂಗ್‌ ಲೈಟ್‌ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ವೈಫೈ, ಮಾಹಿತಿ ಪಡೆಯಬಹುದಾಗಿದೆ. ಚಾರ್ಜಿಂಗ್‌ ಪಾಯಿಂಟ್‌, ಸಿಸಿಟಿವಿ, ಬಯೋ ಶೌಚಾಲಯ ವ್ಯವಸ್ಥೆ ಒಳಗೊಂಡಿರುವ ರೈಲು ಇದಾಗಿದೆ. ಇದನ್ನೂ ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣ- ಪುರುಷರಿಗೆ ಟೆನ್ಶನ್ ಶುರು!

  • ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ ಭವಿಷ್ಯ ಸುಟ್ಟು ಬೂದಿಯಾಗಲಿದೆ: ಪ್ರಹ್ಲಾದ್ ಜೋಶಿ ಕಿಡಿ

    ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ ಭವಿಷ್ಯ ಸುಟ್ಟು ಬೂದಿಯಾಗಲಿದೆ: ಪ್ರಹ್ಲಾದ್ ಜೋಶಿ ಕಿಡಿ

    ಹುಬ್ಬಳ್ಳಿ: ಲಂಕಾದಲ್ಲಿ ರಾಮನ ಭಕ್ತ ಹನುಮಂತ ಹೋಗಿ ಬಾಲಕ್ಕೆ ಬೆಂಕಿ ಹಚ್ಚಿ ಲಂಕೆಯನ್ನು ಸುಟ್ಟು ಭಸ್ಮ ಮಾಡಿದ. ಅದೇ ರೀತಿ ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ (Congress) ಭವಿಷ್ಯ ಸುಟ್ಟು ಬೂದಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ (Bajarang Dal) ವಿಚಾರದಲ್ಲಿ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿಕೊಂಡಿದೆ. ನಾವು ಬಜರಂಗದಳವನ್ನು ಬ್ಯಾನ್ ಮಾಡುವುದಿಲ್ಲ ಎಂದು ವೀರಪ್ಪ ಮೊಯ್ಲಿಯವರೇ ಸ್ಪಷ್ಟಪಡಿಸಿದ್ದಾರೆ. ಆದರೆ ಸುರ್ಜೇವಾಲ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ನಾವು ಬಜರಂಗದಳವನ್ನು ಬ್ಯಾನ್ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದಾರೆ. ಬಜರಂಗದಳದ ಭಯ ಎಷ್ಟಿದೆ ಎನ್ನುವುದನ್ನು ಕಾಂಗ್ರೆಸ್‌ನವರು ಒಮ್ಮೆ ನೋಡಿಕೊಳ್ಳಿ. ಬಜರಂಗದಳ ನಿಷೇಧ ಮಾಡುವುದರ ಬಗ್ಗೆ ಜಗದೀಶ್ ಶೆಟ್ಟರ್ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು ಎಂದು ನಾನು ವಿನಂತಿ ಮಾಡುತ್ತೇನೆ ಎಂದರು. ಇದನ್ನೂ ಓದಿ: ಸಿಎಂ ಪೋಸ್ಟ್‌ಗೆ 2,500 ಕೋಟಿ.. ಮಿನಿಸ್ಟರ್‌ಗಾಗಿ 500 ಕೋಟಿ ರೂ. – ಬಿಜೆಪಿ ವಿರುದ್ಧ ಕಾಂಗ್ರೆಸ್‌ ಭ್ರಷ್ಟಾಚಾರ ಅಸ್ತ್ರ

    ಗೋವಾದಲ್ಲಿ ಬಿಜೆಪಿ (BJP) ಸರ್ಕಾರ ಶ್ರೀರಾಮ ಸೇನೆ ಬ್ಯಾನ್ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಯಾ ರಾಜ್ಯ ಸರ್ಕಾರ ಅಲ್ಲಿನ ವ್ಯವಸ್ಥೆ ನೋಡಿ ಬ್ಯಾನ್ ಮಾಡಿರಬಹುದು. ಅದು ಬೇರೆ ವಿಷಯ. ಬಜರಂಗದಳ ಯಾವುದೇ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗದ ಸಂಘಟನೆ. ಬಜರಂಗದಳ ಯಾವುದೇ ಕಾರಣಕ್ಕೂ ಭಯೋತ್ಪಾದನೆಯ (Terrorism) ಲಿಂಕ್ ಹೊಂದಿಲ್ಲ. ಪಿಎಫ್‌ಐಗೆ (PFI) ಭಯೋತ್ಪಾದಕರ ಜೊತೆ ಲಿಂಕ್ ಇದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾನೂ ಕೂಡ ಶಿವಣ್ಣನ ಅಭಿಮಾನಿ : ಉಲ್ಟಾ ಹೊಡೆದ ಸಂಸದ ಸಿಂಹ

    ಬಿ.ಎಲ್.ಸಂತೋಷ್ (B.L.Santhosh) ಲಿಂಗಾಯತರ ಮತ ಬೇಡ ಎಂಬ ಹೇಳಿಕೆಯ ವಿಚಾರವಾಗಿ ಮಾತನಾಡಿದ ಅವರು, ಬಿ.ಎಲ್.ಸಂತೋಷ್ ಆ ರೀತಿ ಹೇಳಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದರು. ಇದನ್ನೂ ಓದಿ: ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಅಂದ್ರು ಪ್ರಧಾನಿ: ಶೋಭಾ ಕರಂದ್ಲಾಜೆ

  • ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ

    ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ

    ಬೆಂಗಳೂರು: ಜಗದೀಶ್‌ ಶೆಟ್ಟರ್ (Jagadish Shettar) ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಕರ್ನಾಟಕದ ರಾಜಕಾರಣಕ್ಕೆ ಬರುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಮುಖ್ಯಸ್ಥ ಎಚ್‌ಆರ್‌ ರಂಗನಾಥ್‌ (HR Ranganath) ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಪ್ರಧಾನಿ ನರೇಂದ್ರ ಮೋದಿ (Narendra Modi) ಕೆಳಗೆ ಕೆಲಸ ಮಾಡುವುದಕ್ಕೆ ಖುಷಿ ಇದೆ. ಯಾವುದೇ ಕಾರಣಕ್ಕೂ ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮಿತ್ರ ಶೆಟ್ಟರ್‌ ಅವರನ್ನು ಮನವೊಲಿಸಲು ಯಾಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ, ನಾವು ಬಹಳಷ್ಟು ಪ್ರಯತ್ನ ಪಟ್ಟೆವು. ಆದರೆ ಅವರು ಈ ಬಾರಿ ಚುನಾವಣೆಗೆ ನಿಲ್ಲಲೇಬೇಕು ಎಂದು ಹಠ ಹಿಡಿದಿದ್ದರು. ಯಾಕೆ ಅಷ್ಟೊಂದು ಹಠ ಹಿಡಿದಿದ್ದಾರೆ ಎಂಬುದನ್ನು ತಿಳಿಯಲು ನನಗೆ ಸಾಧ್ಯವಾಗಲಿಲ್ಲ ಎಂದು ಉತ್ತರಿಸಿದರು. ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್, ಸವದಿ ಸೋಲಿಸುವ ಹೊಣೆ ನನ್ನದು- ಯಡಿಯೂರಪ್ಪ

    ಶೆಟ್ಟರ್ ಈಗಲೂ ನನ್ನ ಒಳ್ಳೆಯ ಸ್ನೇಹಿತ. ರಾಜಕೀಯವಾಗಿ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಆದರೆ ಒಂದು ದಿನ ಶೆಟ್ಟರ್‌ ತಮ್ಮ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

    ಮುಂದೆ ಲಿಂಗಾಯತ ಸಿಎಂ (Lingayat CM) ಎಂದು ಯಾಕೆ ಇನ್ನೂ ಘೋಷಣೆ ಮಾಡಿಲ್ಲ ಎಂಬ ಪ್ರಶ್ನೆಗೆ, ಅಧಿಕಾರ ಇದ್ದಾಗ ನಾವು ಎಲ್ಲಿಯೂ ಮುಂದಿನ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ. ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ನಾವು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಉತ್ತರಾಖಂಡದ ಚುನಾವಣೆಯ ಉಸ್ತುವಾರಿ ನನಗೆ ನೀಡಲಾಗಿತ್ತು. ಅಲ್ಲಿನ ಸಿಎಂ ಚುನಾವಣೆಯಲ್ಲಿ ಸೋತಿದ್ದರೂ ಮತ್ತೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿದ್ದೇವೆ ಎಂದರು.

     

    ನನಗೆ ಲೋಕಸಭೆ ಚುನಾವಣೆ ಭಯ ಇಲ್ಲ. ಇಲ್ಲಿ ಬಿಜೆಪಿ, ಮೋದಿ ಫ್ಯಾಕ್ಟರ್ ಇದೆ. ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ನಮ್ಮ ನಾಯಕರು. ಈ ಬಾರಿ ನಾವು ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರುತ್ತೇವೆ. ಜೆಡಿಎಸ್‍ಗೆ 10-15 ಸೀಟ್ ಬರಬಹುದು. 2006ರ ನಂತರ ಜೆಡಿಎಸ್ ಜೊತೆ ಯಾವುದೇ ಸಂಬಂಧ ಇಲ್ಲ. ಸೆಕ್ಯುಲರ್‌ ಎಂದು ಹೇಳಿ ಕಾಂಗ್ರೆಸ್, ಜೆಡಿಎಸ್ ನಾಯಕರು ಸೇರುತ್ತಾರೆ ಎಂದು ಟಾಂಗ್‌ ನೀಡಿದರು.

  • ಈ ಸಲ ಕಪ್ ನಮ್ದೆ: ಶೆಟ್ಟರ್‌ಗೆ ಪ್ರಹ್ಲಾದ್ ಜೋಶಿ ಟಾಂಗ್

    ಈ ಸಲ ಕಪ್ ನಮ್ದೆ: ಶೆಟ್ಟರ್‌ಗೆ ಪ್ರಹ್ಲಾದ್ ಜೋಶಿ ಟಾಂಗ್

    ಹುಬ್ಬಳ್ಳಿ: ಶೆಟ್ಟರ್ (Jagadish Shettar) ನಮ್ಮ ತಂಡದಿಂದ ಹೊರಗೆ ಹೋಗಿದ್ದರಿಂದ ನಮಗೆ ಯಾವುದೇ ನಷ್ಟವಿಲ್ಲ. ನಾವು ಅವರಿಗೆ ನಿವೃತ್ತಿ ಹೊಂದಲು ಹೇಳಿದ್ದೆವು. ಆದರೆ ಅವರು ಬೇರೆ ತಂಡದಲ್ಲಿ ಆಡುತ್ತೇನೆ ಎಂದು ಹೋಗಿದ್ದಾರೆ. ಆದರೆ ಈ ಸಲ ಕಪ್ ನಮ್ದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi), ಜಗದೀಶ್ ಶೆಟ್ಟರ್‌ಗೆ ಟಾಂಗ್ ನೀಡಿದ್ದಾರೆ.

    ಶೆಟ್ಟರ್ ಕಾಂಗ್ರೆಸ್ (Congress) ಸೇರ್ಪಡೆಯಿಂದ ಬಿಜೆಪಿ (BJP) ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ವಿಚಾರದ ಕುರಿತು ಹುಬ್ಬಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂಡದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಮುಂಬೈ ಕರ್ನಾಟಕ ಭಾಗದಲ್ಲಿ ನಮ್ಮ ಸ್ಟ್ರೈಕ್ ರೇಟ್ ಜಾಸ್ತಿಯಿದೆ. ಅದು ಮತ್ತೆ ಮುಂದುವರೆಯಲಿದೆ. ತಂಡದ ಹಳೇ ಕ್ರೀಡಾಪಟುಗಳು ನಿವೃತ್ತಿ ಹೊಂದುತ್ತಾರೆ. ಹೊಸ ಕ್ರೀಡಾಪಟುಗಳು ಉತ್ಸಾಹದಿಂದ ಆಡಿ ನಮ್ಮನ್ನು ಗೆಲ್ಲಿಸುತ್ತಾರೆ. ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿರುವುದರಿಂದ ನಮಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಲ್ಪನೆ ಮತ್ತು ಸ್ವಪ್ನ ಕಾಣಲು ಎಲ್ಲರಿಗೂ ಹಕ್ಕಿದೆ. ಅವರೂ ಕಾಣಲಿ ಬಿಡಿ. ಆದರೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್‌ನಿಂದ ನಾವು ಗೆಲ್ಲುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ ಶಾಸಕನ ಗೆಲುವಿಗೆ ವಿಚಿತ್ರ ಹರಕೆ – 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ ಫ್ಯಾನ್ಸ್ 

    ಸೆಂಟ್ರಲ್ ಟಿಕೆಟ್ ನಿರ್ಣಯ ಅಮಿತ್ ಶಾ ಮತ್ತು ಮೋದಿಯವರದ್ದು. ರಾಜ್ಯಸಭಾ ಮತ್ತು ಅದಕ್ಕಿಂತ ಹೆಚ್ಚಿನ ಸ್ಥಾನವನ್ನು ನೀಡುತ್ತೇವೆ. ನಿಮಗೆ ಯಾವ ಸ್ಥಾನ ಬೇಕು ಹೇಳಿ ಎಂದು ಅಮಿತ್ ಶಾ ಮತ್ತು ಮೋದಿಯವರೇ ಶೆಟ್ಟರ್‌ಗೆ ಆಫರ್ ನೀಡಿದ್ದರು. ಆದರೆ ಶೆಟ್ಟರ್ ಅದನ್ನು ಒಪ್ಪದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಬಿಎಸ್‌ವೈ ಕಿಡಿ 

    ಲಿಂಗಾಯತ ಸಮುದಾಯ ನಮಗೆ ಅಸ್ತ್ರ ಅಲ್ಲ. ಲಿಂಗಾಯತರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷಕ್ಕೆ ಅಥವಾ ರಾಹುಲ್ ಗಾಂಧಿಯವರಿಗೆ ಲಿಂಗಾಯತರ ಮೇಲೆ ಪ್ರೀತಿಯಿದ್ದರೆ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎನ್ನಲಿ ನೋಡೋಣ. ನಾವು ನಾಲ್ಕು ಜನ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಚುನಾವಣೆಯ ನಂತರ ನಾಯಕತ್ವವನ್ನು ನಿರ್ಧಾರ ಮಾಡುತ್ತೇವೆ. ಬಸವರಾಜ್ ಬೊಮ್ಮಾಯಿಯವರ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು. ಇದನ್ನೂ ಓದಿ: ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಅಮೆರಿಕಾ, ರಷ್ಯಾ ಪ್ರೆಸಿಡೆಂಟ್‍ನ್ನು ಕರ್ಕೊಂಡು ಬರಲಿ: ಹೆಚ್‍ಡಿ ರೇವಣ್ಣ ಟಾಂಗ್ 

    ಲಿಂಗಾಯತ ಸಿಎಂ ಭ್ರಷ್ಟ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಇನ್ನೂ ಕ್ಷಮೆ ಕೇಳಿಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು. ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗಕ್ಕೂ ಸಹ ದೂರುಗಳು ಸಲ್ಲಿಕೆಯಾಗುತ್ತಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ರೇಡ್

  • ಅಣ್ಣಾಮಲೈ ವಿರುದ್ಧವೂ ಕಿಡಿಕಾರಿದ ಜಗದೀಶ್ ಶೆಟ್ಟರ್

    ಅಣ್ಣಾಮಲೈ ವಿರುದ್ಧವೂ ಕಿಡಿಕಾರಿದ ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಬಿಜೆಪಿ ಸರ್ಕಾರವಿದ್ದಾಗ ನಮ್ಮ ಕೈಕೆಳಗೆ ಕೆಲಸ ಮಾಡಿದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಿಂದಿನ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ನಾನು ಮತ್ತು ಸದಾನಂದಗೌಡರು ಕುಳಿತುಕೊಳ್ಳಬೇಕು ಎಂದು ಅಣ್ಣಾಮಲೈ (Annamalai) ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ( Jagadish Shettar) ಕಿಡಿಕಾರಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯ ಬಿಜೆಪಿ (BJP) ಕೆಲವರ ಕಪಿಮುಷ್ಠಿಯಲ್ಲಿದೆ. ಇದರಿಂದ ಈ ರೀತಿ ಪರಿಸ್ಥಿತಿಯಿದೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಿದ್ದ ಅಣ್ಣಾಮಲೈ ಕರೆದುಕೊಂಡು ಹೋಗಿ ತಮಿಳುನಾಡಿನ (Tamil Nadu) ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಆದರೆ ಚುನಾವಣೆಯಲ್ಲಿ (Election) ಸೋಲಭವಿಸಿದರು. ಒಂದು ಸಲವು ಚುನಾವಣೆಯಲ್ಲಿ ಗೆಲ್ಲದ ಈ ವ್ಯಕ್ತಿಯನ್ನು ಚುನಾವಣೆಯ ಸಹ ಉಸ್ತುವಾರಿಯಾಗಿ ನೇಮಕ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

    ಕೋರ್ ಕಮಿಟಿ ಸಭೆಯಲ್ಲಿ ಈವರೆಗೆ ಅಣ್ಣಾಮಲೈ ಒಂದು ಕ್ಷೇತ್ರದ ಬಗ್ಗೆ ವಿಮರ್ಶೆ ಮಾಡಿಲ್ಲ. ಅಂತವರ ಅವರ ಮುಂದೆ ಹಿರಿಯ ನಾಯಕರು ಸಣ್ಣ ಮಕ್ಕಳಂತೆ ಕುಳಿತುಕೊಳ್ಳಬೇಕು. ನಮ್ಮ ಕೈಕೆಳಗೆ ಕೆಲಸ ಮಾಡಿದ ಐಪಿಎಸ್ ಅಧಿಕಾರಿ ಮುಂದೆ ಕುಳಿತಿದ್ದರೆ ಅವರ ಹಿಂದಿನ ಸಾಲಿನಲ್ಲಿ ನಾನು ಮತ್ತು ಸದಾನಂದಗೌಡರು ಕುಳಿತುಕೊಳ್ಳಬೇಕು. ನಾವು ಇಬ್ಬರು ಮಾಜಿ ಮುಖ್ಯಮಂತ್ರಿಗಳು. ಇಂತಹ ಅವಮಾನಗಳನ್ನು ಎದುರಿಸಿದ್ದೇನೆ ಎಂದು ಕಿಡಿಕಾರಿದರು.

    ಬಿ.ಎಲ್ ಸಂತೋಷ್ (BL Santhosh) ಅವರನ್ನು ಕೇರಳದಲ್ಲಿ (Kerala) ಉಸ್ತುವಾರಿಯಾಗಿ ನೇಮಿಸಿದಾಗ ಒಂದು ಸೀಟ್ ಬಂದಿಲ್ಲ. ಅದೇ ಪರಿಸ್ಥಿತಿ ತಮಿಳುನಾಡು ಚುನಾವಣೆ ವೇಳೆಯೂ ಆಗಿದ್ದು, ಬಿಜೆಪಿ ಒಂದೆರಡು ಸ್ಥಾನ ಪಡೆಯುವಲ್ಲಿ ಮಾತ್ರ ಯಶಸ್ವಿಯಾಯಿತು. ತೆಲಂಗಾಣ, ಕೋಲ್ಕತ್ತಾದಲ್ಲೂ ಇದೇ ಪರಿಸ್ಥಿತಿಯಾಗಿತ್ತು. ಇಷ್ಟೆಲ್ಲಾ ದಾಖಲೆಯಿದ್ದರೂ ಮತ್ತೆ ಬಿಎಲ್ ಸಂತೋಷ್‍ಗೆ ಕರ್ನಾಟಕದಲ್ಲಿ (Karnataka) ಕಾರುಬಾರು ಮಾಡುವುದಕ್ಕೆ ನೀಡಿದ್ದಾರೆ. ಇದರಿಂದ ಏನಾದರೂ ಬಿಜೆಪಿಗೆ ಲಾಭ ಆಗುತ್ತದೆಯೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇಲ್ಲ, ವ್ಯಕ್ತಿ ನಿಷ್ಠೆಯಿದೆ – ಜೋಷಿ ವಿರುದ್ಧ ಶೆಟ್ಟರ್ ಕಿಡಿ

    ನಳಿನ್ ಕುಮಾರ್ ಕಟೀಲ್ ಸಹ ಬಿ.ಎಲ್ ಸಂತೋಷ್ ಶಿಷ್ಯರಾಗಿದ್ದಾರೆ. ಅವರು ಸಹ ಬಿ.ಎಲ್ ಸಂತೋಷ್ ಹೇಳಿದಂತೆ ಕೇಳಿದ್ದರು. ಈ ಹಿಂದೆ ಕಟೀಲ್ ಆಡಿಯೊ ವೈರಲ್ ಆಗಿದ್ದು, ಇದೆಲ್ಲ ಸಂತೋಷ್ ಗೇಮ್ ಪ್ಲ್ಯಾನ್ ಆಗಿದೆ. ಬಿ.ಎಲ್ ಸಂತೋಷ್ ಮಾನಸಪುತ್ರರಿನಿಗೆ ಟಿಕೆಟ್ ನೀಡಿದ್ದರಿಂದ ಇಷ್ಟು ಅವಾಂತರ ಸೃಷ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ : ಶೆಟ್ಟರ್ ನೇರ ಆರೋಪ

  • ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇಲ್ಲ, ವ್ಯಕ್ತಿ ನಿಷ್ಠೆಯಿದೆ – ಜೋಷಿ ವಿರುದ್ಧ ಶೆಟ್ಟರ್ ಕಿಡಿ

    ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇಲ್ಲ, ವ್ಯಕ್ತಿ ನಿಷ್ಠೆಯಿದೆ – ಜೋಷಿ ವಿರುದ್ಧ ಶೆಟ್ಟರ್ ಕಿಡಿ

    – ಜೋಷಿ ನನ್ನ ಪರ ಗಟ್ಟಿ ಧ್ವನಿಯಲ್ಲಿ ಮಾತನಾಡಿಲ್ಲ
    – ನನಗೆ ಐಟಿ, ಇಡಿ ಭಯವಿಲ್ಲ

    ಹುಬ್ಬಳ್ಳಿ: ಪ್ರಹ್ಲಾದ್ ಜೋಷಿ (Pralhad Joshi) ಅವರು ನನ್ನ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿತ್ತು. ಆದರೆ ಅವರು ಬರೀ ಸಬೂಬು ನೀಡಿದರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar)  ಕಿಡಿಕಾರಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಜೋಷಿ ಅವರೇ ನಾನು ನಿಮ್ಮನ್ನು ಸಂಸದರನ್ನಾಗಿ ಮಾಡಲು ಎಷ್ಟು ಮಾಡಿದ್ದೇನೆಂದು ನೆನಪು ಮಾಡಿಕೊಳ್ಳಿ. ನಾನು ಸಭಾಪತಿಯಾಗಿದ್ದಾಗ ನನ್ನ ಪತ್ನಿ ನಿಮ್ಮ ಪರ ಪ್ರಚಾರ ಮಾಡಿದ್ದರು. ನನ್ನ ಫೋಟೋ ಇಲ್ಲದೆ ಪ್ರಚಾರ ಪತ್ರ ಹಂಚಿಲ್ಲ. ಜೋಷಿ ಅವರೇ ಬರೀ ಸಬೂಬು ಹೇಳಬೇಡಿ. ನನ್ನ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿತ್ತು. ನಿಮ್ಮ ಸಲುವಾಗಿ ಹಗಲಿರುಳು ದುಡಿದಿದ್ದೇನೆ ನೆನಪು ಮಾಡಿಕೊಳ್ಳಿ ಎಂದು ಗುಡುಗಿದರು.

    ಹಿರಿಯ ಕೇಂದ್ರ ಸಚಿವ ಹಾಗೂ ಬಿ.ಎಸ್. ಯಡಿಯೂರಪ್ಪ (BS Yediyurappa) ಸಹ ಅಸಹಾಯಕರಾಗಿದ್ದಾರೆ. ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇಲ್ಲ ವ್ಯಕ್ತಿ ನಿಷ್ಠೆಯಿದೆ. ಬೊಮ್ಮಾಯಿ, ಕೇಂದ್ರ ಸಚಿವರ ಮಾತನ್ನು ಒಪ್ಪುವುದಿಲ್ಲ. ಅವರು ಬಲವಾಗಿ ಹೇಳಿಲ್ಲ. ಅವರು ಗಟ್ಟಿ ಧ್ವನಿಯಲ್ಲಿ ಹೇಳಿದ್ದರೆ ಹೀಗೆ ಆಗುತ್ತಿರಲಿಲ್ಲ. ಅರುಣ್ ಜೇಟ್ಲಿಯವರು 2004ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಕರೆದಿದ್ದರು. ಆದರೆ ನಾನು ಜೋಷಿ ಹೆಸರು ಹೇಳಿದ್ದೆ ಎಂದು ನೆನಪಿಸಿಕೊಂಡರು.

    ಇದು ನನ್ನ ಕೊನೆ ಚುನಾವಣೆಯಾಗಿದೆ. 70 ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕೊನೆಯ ಕ್ಷಣದಲ್ಲಿ ಬಿಜೆಪಿಯಲ್ಲಿ ಅಗೌರವ ನೀಡಿದ್ದಾರೆ. ಪಕ್ಷ ನಿಷ್ಠೆ ಮರೆತವರು, ಈ ಬಗ್ಗೆ ಉತ್ತರ ಕೊಡಬೇಕು. ನನ್ನ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ನನಗೆ ಗೌರವ ನೀಡಬೇಕು ಅಂತ ಕಾಂಗ್ರೆಸ್ ಸೇರಿದ್ದೇನೆ. ಬಿ.ಎಲ್ ಸಂತೋಷ್ ನಿಮ್ಮ ಮಾನಸ ಪುತ್ರನ ಮೇಲೆ ಇರುವ ಪ್ರೀತಿ ನನ್ನ ಮೇಲೆ ಒಂದು ಪರ್ಸೆಂಟ್ ನೀಡಿದ್ದರೆ ಸಾಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

    ನಾನು ಸಾವಿರಾರು ಕೋಟಿ ಮನುಷ್ಯ ಅಲ್ಲ. ಅಲ್ಪಸ್ವಲ್ಪ ಆಸ್ತಿ ಎಲ್ಲಾ ಕಾನೂನು ವ್ಯಾಪ್ತಿಯಲ್ಲಿದೆ. ನನಗೆ ಐಟಿ ಇಡಿ ಭಯವಿಲ್ಲ. ಈಶ್ವರಪ್ಪ ಪತ್ರ ಬರೆದ ಹಿಂದೆ ಪಕ್ಷದ ಗೈಡಲೈನ್ಸ್ ಇದೆ. ಬಹುಶಃ ಇವತ್ತು ಈಶ್ವರಪ್ಪ ಮನೆಯವರಿಗೆ ಟಿಕೆಟ್ ಘೋಷಣೆಯಾಗಬಹುದು ಎಂದರು. ಇದನ್ನೂ ಓದಿ: ರೈಸ್ ಮಿಲ್ ಕಟ್ಟಡ ಕುಸಿತ – ನಾಲ್ವರು ಸಾವು, 20 ಮಂದಿಗೆ ಗಾಯ

    ಪದವೀಧರ ಕ್ಷೇತ್ರದ ಚುನಾವಣಾ ಬಂದಾಗ ಗೋಮಧುಸೂಧನ್ ಹೆಸರು ಫೈನಲ್ ಆಗಿತ್ತು. ಆದರೂ ಬಿ.ಎಲ್ ಸಂತೋಷ್ ಹೇಳಿದವರಿಗೆ ಟಿಕೆಟ್ ಸಿಕ್ಕಿತು. ಬಿ.ಎಲ್ ಸಂತೋಷ್ ಬಂದು ಚುನಾವಣಾ ಪ್ರಚಾರ ಮಾಡಿದರು. ಆದ್ರೆ ಫಲಿತಾಂಶ ಏನಾಯಿತು? ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಸಂತೋಷ್ ಹೋಗಿದ್ದರು. ಅಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆದ್ದಿದೆ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ: ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ : ಶೆಟ್ಟರ್ ನೇರ ಆರೋಪ

  • ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸಿಗುವ ವಿಶ್ವಾಸವಿದೆ- ಪ್ರಹ್ಲಾದ್ ಜೋಶಿ

    ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸಿಗುವ ವಿಶ್ವಾಸವಿದೆ- ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ (Jagadish Shettar) ಟಿಕೆಟ್ ಸಿಗುವ ವಿಶ್ವಾಸವಿದೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

    ನಗರದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿ 52 ಜನ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಶೆಟ್ಟರ್‌ಗೆ ಟಿಕೆಟ್ ಸಿಗುವ ನೀರಿಕ್ಷೆ ಇದೆ. ಈಗಾಗಲೆ ನಮ್ಮ ಅಭಿಪ್ರಾಯವನ್ನು ಮುಖಂಡರ ಬಳಿ ಹೇಳಿದ್ದೇವೆ. ಎಲ್ಲವೂ ಸುಲಲಿತವಾಗಿ ಪರಿಹಾರ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಏ.17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಸುತ್ತೇನೆ: ಲಕ್ಷ್ಮಣ ಸವದಿ

    ಕಾಂಗ್ರೆಸ್‍ನಂತೆ ವಂಶಕ್ಕೆ ಟಿಕೆಟ್ ಕೊಡಲ್ಲ
    ಬಿಜೆಪಿಯಲ್ಲಿ (BJP) ಕಾಂಗ್ರೆಸ್‍ನಂತೆ (Congress) ಅಪ್ಪ ಮಕ್ಕಳಿಗೆ ಟಿಕೆಟ್ ಕೊಡುವುದಿಲ್ಲ. ಕಾಂಗ್ರೆಸ್ ಯೂಸ್ ಎಂಡ್ ಥ್ರೋ ಪಕ್ಷ, ಅಂತಹ ಪಕ್ಷಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೋಗಬಾರದು ಅನ್ನೋದು ನಮ್ಮ ಅಪೇಕ್ಷೆ. ಸವದಿ ಅವರಿಗೆ ನಮ್ಮ ಪಾರ್ಟಿ ಎಲ್ಲವನ್ನು ಕೊಟ್ಟಿದೆ. ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಿದ್ದು ನಮ್ಮ ಪಕ್ಷ. ಇಲ್ಲಿ ಅವರಿಗೆ ಉತ್ತಮ ಭವಿಷ್ಯ ಇತ್ತು ಎಂದಿದ್ದಾರೆ.

    ಬಿಜೆಪಿಯಲ್ಲಿ ಟಿಕೆಟ್‍ಗೆ ಬಹಳ ಅಭ್ಯರ್ಥಿಗಳಿದ್ದರು. ಇದರಿಂದ ಕೆಲವು ಕಡೆ ಗೊಂದಲ ಆಗಿದೆ. ಯಾವ ಪಕ್ಷ ಗೆಲ್ಲುತ್ತದೆಯೋ ಅಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. ಇನ್ನೆರಡು ದಿನದಲ್ಲಿ ಪಕ್ಷದಲ್ಲಿ ಎದ್ದಿರುವ ಗೊಂದಲಗಳು ಬಗೆಹರಿಯುತ್ತವೆ. ನಮ್ಮೊಂದಿಗೆ ಪಕ್ಷದ ಕಾರ್ಯಕರ್ತರು ಜೊತೆಗೆ ನಿಲ್ಲುತ್ತಾರೆ ಎಂದಿದ್ದಾರೆ.

    ಅಂಬೇಡ್ಕರ್ (Ambedkar) ದೇಶಕ್ಕೆ ಬಲವಾದ ಆರ್ಥಿಕ ಬುನಾದಿ ಹಾಕಿದ್ದಾರೆ. ಅವರಿಗೆ ಸಿಗಬೇಕಾದ ಪ್ರಾಶಸ್ತ್ಯ ಕಾಂಗ್ರೆಸ್ ಕಾಲದಲ್ಲಿ ಸಿಗಲಿಲ್ಲ. ನಾವು ಅಂಬೇಡ್ಕರ್ ಹುಟ್ಟಿದ ಸ್ಥಳ, ಅಧ್ಯಯನ ಸ್ಥಳ ಅಭಿವೃದ್ಧಿ ಮಾಡಿದ್ದೇವೆ. ಅವರಿಗೆ ಗೌರವ ಕೊಡುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ದೇಶದಲ್ಲಿ ಉತ್ತಮ ಸರ್ಕಾರ ಇದೆ. ಮೋದಿ ಪ್ರಧಾನಿ ಆಗಲು ಅಂಬೇಡ್ಕರ್ ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಂಪಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ