Tag: ಪ್ರಹ್ಲಾದ್ ಜೋಶಿ

  • ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ: ಪ್ರಹ್ಲಾದ್ ಜೋಶಿ

    ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಧಾರವಾಡ ಲೋಕಸಭಾ ಅಭ್ಯರ್ಥಿ (Loksabha Candidate) ನಾನೇ ಎಂದು ಸಂಸದ ಪ್ರಹ್ಲಾದ್ ಜೋಶಿಯವರು ಘೋಷಿಸಿಕೊಳ್ಳುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಶೆಟ್ಟರ್ ಘರ್ ವಾಪ್ಸಿ ಬೆನ್ನಲ್ಲೇ ಬಿಜೆಪಿಯಲ್ಲಿ (BJP) ಬಣ ರಾಜಕೀಯ ಆರಂಭವಾಗಿದೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಈಗಾಗಲೇ ಚುನಾವಣೆಗೆ ತಯಾರಿ ನಡಸಿದ್ದೇನೆ. ಜೋಶಿನೇ ಅಭ್ಯರ್ಥಿ ಮತ್ತೆ ಇನ್ನೇನು ಎಂದರು.

     

    ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಅರವಿಂದ್ ಬೆಲ್ಲದ್ (Arvind Bellad), ಜೋಶಿ ಅವರೇ ನಮ್ಮ ನಾಯಕರು ಸುಮ್ಮನೆ ಏನೇನೋ ಹೇಳಬೇಡಿ ಅಂದ್ರು. ಬಳಿಕ ಮಾತು ಮುಂದುವರಿಸಿದ ಜೋಶಿ, ಶಾಸಕರು, ನಗರ ಘಟಕ ಅಧ್ಯಕ್ಷರು, ಕಾರ್ಯಕರ್ತರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಯಾಕೋ ರಾಷ್ಟ್ರೀಯ ಅಧ್ಯಕ್ಷ ಅಂತ ಹೇಳುತ್ತಿದ್ದಾರೆ. ಪುಣ್ಯಕ್ಕೆ ರಾಷ್ಟ್ರಪತಿ ಆಗುತ್ತಾರೆ ಅಂದಿಲ್ಲ, ಜೋಶಿ ರಾಷ್ಟ್ರಪತಿ ಆಗುತ್ತಾರೆ, ಶೆಟ್ಟರ್ ಅಭ್ಯರ್ಥಿ ಆಗುತ್ತಾರೆ ಅಂತ ಹೇಳುತ್ತಿಲ್ಲ ಅಂದ್ರು. ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗಬೇಕು ಅನ್ನೋದನ್ನ ಶಾಮನೂರು ಸೂಕ್ಷ್ಮವಾಗಿ ಹೇಳಿದ್ದಾರೆ: ಸಿ.ಟಿ ರವಿ

    ಶೆಟ್ಟರ್ ಪಕ್ಷಕ್ಕೆ ವಾಪಸ್ ಆಗಿದ್ದು ಸಂತೋಷ, ಒಳ್ಳೆಯದು. ಶೆಟ್ಟರ್ ಬಂದಿದ್ದು ಸಂತೋಷ ತಂದಿದೆ. ಈ ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ. ನನ್ನದು ಯಾವುದೇ ವಿರೋಧ ಇಲ್ಲ ನಾನು ಆರು ತಿಂಗಳ ಹಿಂದೆ ಶೆಟ್ಟರ್ ವಾಪಸ್ ಬರ್ತಾರೆ ಅಂತ ಹೇಳಿದ್ದೆ. ನಾನು ಇದನ್ನು ಯಾವುದೇ ವ್ಯಂಗ್ಯದಿಂದ ಹೇಳುತ್ತಿಲ್ಲ ಸಹೃದಯದಿಂದ ಹೇಳುತ್ತಿದ್ದೇನೆ. ಶೆಟ್ಟರ್ ಆಗಮನ ವಿಚಾರದಲ್ಲಿ ಸ್ಥಳೀಯ ನಾಯಕರನ್ನು ನಿರ್ಲಕ್ಷ್ಯ ಮಾಡಿಲ್ಲ ಅವರ ಗಮನಕ್ಕೆ ತಂದಿದ್ದೇನೆ ಎಂದರು.

    ನಮಗೆ ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯ ಬೇಕು. ಲಕ್ಷ್ಮಣ ಸವದಿಯಲ್ಲಿ ಬಿಜೆಪಿಯ ವೈಚಾರಿಕ ರಕ್ತವಿದೆ. ಅವರು ವಾಪಸ್ ಪಕ್ಷಕ್ಕೆ ಬಂದ್ರೆ ಸಂತೋಷ. ಬೆಂಗಳೂರಿನಲ್ಲಿ ಶೆಟ್ಟರ್ ಜೊತೆಗೆ ಮಾತನಾಡಿಸಿರುವೆ ವೆಲ್‍ಕಮ್ ಬ್ಯಾಕ್ ಅಂತ ಹೇಳಿದ್ದೇನೆ. ಆದರೆ ವೈಯಕ್ತಿಕವಾಗಿ ಮಾತನಾಡಿಲ್ಲ ಅವರು ಹುಬ್ಬಳ್ಳಿಗೆ ಬರಲಿ ಮಾತನಾಡುವೆ. ಗಾಲಿ ಜನಾರ್ದನ ರೆಡ್ಡಿ ಯಾವಾಗ ಬೇಕಾದರೂ ಪಕ್ಷಕ್ಕೆ ಬರಬಹುದು ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

  • ಶೆಟ್ಟರ್, ಜೋಶಿ ಒಂದು ನಾಣ್ಯದ ಎರಡು ಮುಖದ ರೀತಿ ಕೆಲಸ ಮಾಡಿದ್ದಾರೆ: ವಿ ಸೋಮಣ್ಣ

    ಶೆಟ್ಟರ್, ಜೋಶಿ ಒಂದು ನಾಣ್ಯದ ಎರಡು ಮುಖದ ರೀತಿ ಕೆಲಸ ಮಾಡಿದ್ದಾರೆ: ವಿ ಸೋಮಣ್ಣ

    ಬೆಂಗಳೂರು: ವಿಶೇಷವಾಗಿ ಜಗದೀಶ್ ಶೆಟ್ಟರ್(Jagadish Shettar) ಮತ್ತು ಪ್ರಹ್ಲಾದ್ ಜೋಶಿ(Pralhad Joshi)  ಒಂದು ನಾಣ್ಯದ ಎರಡು ಮುಖದ ರೀತಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಸೋಮಣ್ಣ (V. Somanna)  ಹಾಡಿ ಹೊಗಳಿದ್ದಾರೆ.

    ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆಯಾದ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನವನ್ನು ಸ್ವಾಗತ ಮಾಡುತ್ತೇನೆ. ಶೆಟ್ಟರ್ ಅವರು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳು. ತೀರ್ಮಾನ ಮಾಡುವಾಗ ಒಂದೊಂದು ಸಾರಿ ಎಷ್ಟರ ಮಟ್ಟಿಗೆ ಅನ್ನೋದಕ್ಕಿಂತ, ಅವರ ಹಿರಿಯ ಅನುಭವ ಇಟ್ಟುಕೊಂಡು ಅಮಿತ್ ಶಾ, ನಡ್ಡಾಜೀ ಅವರು ಪ್ರಧಾನಿಗಳ ಸಲಹೆ ಮೇರೆಗೆ ಈ ಕೆಲಸ ಮಾಡಿದ್ದಾರೆ. ಇದನ್ನ ನಾನು ಸ್ವಾಗತ ಮಾಡುತ್ತೇನೆ.  ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಾಗ ರಾಜ್ಯಾದ್ಯಂತ ಓಡಾಡಿದ್ದಾರೆ. ಮೋದಿ ಅವರು ಮತ್ತೆ ಪ್ರಧಾನಿ ಆಗಲಿ ಅಂತಾ ದೇಶದ ಅಭಿವೃದ್ಧಿ ನೋಡಿಕೊಂಡು ಮತ್ತೆ ಬಿಜೆಪಿಗೆ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ: ಮ್ಯಾಕ್ರನ್

    ಇದೇ ವೇಳೆ ಚುನಾವಣೆಗೆ ನಿಲ್ಲುವ ಕುರಿತ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹೈಕಮಾಂಡ್ ತೀರ್ಮಾನ ಮಾಡಿ ತುಮಕೂರಿಗೆ ಹೋಗಿ ನಿಂತುಕೊಳ್ಳಪ್ಪ ಅಂದರೆ ಅವರ ತೀರ್ಮಾನಕ್ಕೆ ಬದ್ಧ ಆಗಿರುತ್ತೀನಿ ಎಂದು ಹೇಳಿದ್ದಾರೆ. ಬಿಜೆಪಿಗೆ ಇನ್ನಷ್ಟು ನಾಯಕರು ಬರುವ ಬಗ್ಗೆ ಗೊತ್ತಿಲ್ಲ ನೋಡಬೇಕು ಎಂದಿದ್ದಾರೆ. ಜೊತೆಗೆ ಅವರ ಪುತ್ರನಿಗೆ ಟಿಕೆಟ್ ಕೇಳಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಆ ರೀತಿ ಇಲ್ಲ ಎಂದು ಪುತ್ರನ ಟಿಕೆಟ್ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!

  • ಮೋದಿಯಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗಿದೆ: ಜೋಶಿ

    ಮೋದಿಯಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗಿದೆ: ಜೋಶಿ

    ಹುಬ್ಬಳ್ಳಿ: ರಾಮ ಒಳ್ಳೆಯ ಭಕ್ತನಿಗಾಗಿ ಕಾಯುತ್ತಿದ್ದ. ಮೋದಿಯಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

    ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ  (Pran Prathistha ceremony) ಹಿನ್ನೆಲೆ ಜೋಶಿಯವರು ಹುಬ್ಬಳ್ಳಿಯಲ್ಲಿ ಅಯೋಧ್ಯೆಯ ನೇರ ಪ್ರಸಾರ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಮನೆಗೆ ರಾಮ ಬಂದಿದ್ದಾನೆ ಅನ್ನೋ ರೀತಿನಲ್ಲಿ ಜನ ಖುಷಿಪಡುತ್ತಿದ್ದಾರೆ. ಇದೇ ರಾಮನ ಪ್ರತಿಷ್ಠಾಪನೆಗಾಗಿ 500 ವರ್ಷಗಳ ಹೋರಾಟ ನಡೆದಿತ್ತು. ಇಂದು ಅತ್ಯಂತ ಸರಳವಾಗಿ ಸುಸೂತ್ರವಾಗಿ ರಾಮನ ಪ್ರತಿಷ್ಠಾಪನೆಯಾಗಿದೆ ಎಂದರು.

    ಇದೇ ವೇಳೆ ಕರ್ನಾಟಕದಲ್ಲಿ ರಜೆ ನೀಡದೆ ಇರೋದಕ್ಕೆ ಕಿಡಿಕಾರಿದ ಜೋಶಿ, ಕಾಂಗ್ರೆಸ್ (Congress) ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಅಯೋಧ್ಯೆಗೆ ಹೋಗುವುದರ ಬಗ್ಗೆಯೇ ಅವರಲ್ಲಿ ಗೊಂದಲ ಇದೆ. ರಾಮ ಜನ್ಮಭೂಮಿ ಹೋರಾಟ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಕನ್ಫ್ಯೂಸ್‍ನಲ್ಲಿದೆ ಎಂದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ಅದ್ಧೂರಿ ರಾಮೋತ್ಸವ – ಅಭಯರಾಮನ ಅನಾವರಣ

    ಮೊದಲು ಆಹ್ವಾನ ಪತ್ರಿಕೆ ಬಂದಿಲ್ಲ ಅಂದ್ರು. ಸೋನಿಯಾ ಗಾಂಧಿ (Sonia Gandhi) ಮತ್ತು ಮಲ್ಲಿಕಾರ್ಜುನ ಖರ್ಗೆಗೆ (Mallikarjun Kharge) ಆಹ್ವಾನ ಕೊಡಲಾಗಿತ್ತು. ಆಹ್ವಾನ ಬಂದ ಮೇಲೆ ನಾವು ಹೋಗಲ್ಲ ಅಂದ್ರು. ಈಗ ರಜೆ ಕೊಡುವ ಕುರಿತು ಅವರಲ್ಲಿ ಗೊಂದಲವಿದೆ. ರಾಹುಲ್ ಗಾಂಧಿಯವರನ್ನು ಸಿದ್ದರಾಮಯ್ಯ ಕೇಳಿರಬೇಕು. ಅವರು ರಜೆ ಬೇಡ ಅಂದಿರಬೇಕು. ಸಿದ್ದರಾಮಯ್ಯ ಮೊದಲಿನಿಂದಲೂ ಹಿಂದೂ ವಿರೋಧಿ. ಮತಕ್ಕಾಗಿ ಸಿದ್ದರಾಮಯ್ಯ ಅಯೋಧ್ಯೆಗೆ ಈಗ ಹೋಗ್ತೀನಿ ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ: ವಾರದಲ್ಲಿ 4 ಬಾರಿ ವಿಮಾನ ಸಂಚಾರ ಆರಂಭ – ಜೋಶಿ ಮಾಹಿತಿ

    ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ: ವಾರದಲ್ಲಿ 4 ಬಾರಿ ವಿಮಾನ ಸಂಚಾರ ಆರಂಭ – ಜೋಶಿ ಮಾಹಿತಿ

    – ಫೆಬ್ರವರಿ 2ರಿಂದ ವಿಮಾನಯಾನ ಶುರು

    ಹುಬ್ಬಳ್ಳಿ: ಹುಬ್ಬಳ್ಳಿ- ಪುಣೆ- ಹುಬ್ಬಳ್ಳಿ ಮಾರ್ಗವಾಗಿ ಇನ್ನು ವಾರಕ್ಕೆ ನಾಲ್ಕು ವಿಮಾನಗಳು (Flight) ನಿರಂತರವಾಗಿ ಸಂಚರಿಸಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮಾಹಿತಿ ನೀಡಿದ್ದಾರೆ.

    ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಸ್ತಾವನೆ ಮೇರೆಗೆ ಕೇಂದ್ರ ವಿಮಾನಯಾನ ಸಚಿವಾಲಯ ಹುಬ್ಬಳ್ಳಿ- ಪುಣೆ-ಹುಬ್ಬಳ್ಳಿ ಮಾರ್ಗವಾಗಿ ವಿಮಾನ ಸಂಚಾರ ಆರಂಭಕ್ಕೆ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಕೇರಳದ ಶ್ರೀಕೃಷ್ಣ ದೇವಾಲಯದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ

    2024 ಫೆಬ್ರವರಿ 2ರಿಂದ ಈ ವಾಯು ಮಾರ್ಗದಲ್ಲಿ ನಾಲ್ಕು ವಿಮಾನಗಳು ಸಂಚಾರ ಪುನರಾರಂಭ ಮಾಡಲಿವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಟ್ವೀಟ್ (Tweet) ಮಾಡಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಶಕ್ತಿ, ಹನುಮನ ಭಕ್ತಿಯ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ? – ಬಿಜೆಪಿ ತಿರುಗೇಟು

    ತಮ್ಮ ಕೋರಿಕೆ- ಪ್ರಸ್ತಾವನೆ ಪರಿಗಣಿಸಿ ಹುಬ್ಬಳ್ಳಿ- ಪುಣೆ- ಹುಬ್ಬಳ್ಳಿ ಮಾರ್ಗವಾಗಿ ವಿಮಾನ ಸಂಚಾರ ಆರಂಭಿಸಿದ್ದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ 6eಯ ಆಡಳಿತ ಮಂಡಳಿಗೆ ಸಚಿವ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದಹನುಮೇಗೌಡ ಕಾಂಗ್ರೆಸ್ ‌ಸೇರ್ಪಡೆ ದಿನಾಂಕ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಸಚಿವ ಪರಮೇಶ್ವರ್

  • ಅರ್ಜೆಂಟೀನಾದಲ್ಲಿ ಲಿಥಿಯಂ ಗಣಿಗಾರಿಕೆಗೆ ಭಾರತ ಸಹಿ – 5 ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆಗೆ ಒಪ್ಪಂದ

    ಅರ್ಜೆಂಟೀನಾದಲ್ಲಿ ಲಿಥಿಯಂ ಗಣಿಗಾರಿಕೆಗೆ ಭಾರತ ಸಹಿ – 5 ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆಗೆ ಒಪ್ಪಂದ

    ನವದೆಹಲಿ: ಭಾರತ (India) ಮತ್ತು ಅರ್ಜೆಂಟೀನಾ (Argentina) ನಡುವೆ 5 ಲಿಥಿಯಂ ಬ್ಲಾಕ್‌ಗಳ ಪರಿಶೋಧನೆ ಹಾಗೂ ಗಣಿಗಾರಿಕೆಗೆ ಒಪ್ಪಂದ ಏರ್ಪಟ್ಟಿದೆ.

    ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ 5 ಲಿಥಿಯಂ ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಟ್ವಿಟ್ಟರ್ ಮೂಲಕ ಮಾಹಿತಿ ರವಾನಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದ ಭಾರತೀಯ ಮೂಲದ ವಿವೇಕ್‌ – ಟ್ರಂಪ್‌ಗೆ ಬೆಂಬಲ

    ಅರ್ಜೆಂಟೀನಾದಲ್ಲಿ 5 ಲಿಥಿಯಂ ಬ್ಲಾಕ್‌ಗಳಲ್ಲಿ ಗಣಿಗಾರಿಕೆ (Lithium Mining) ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಿ ಹಾಕುವ ಮೂಲಕ ಭಾರತ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಂಎಸ್ ಧೋನಿಗೆ ಆಹ್ವಾನ

    ಖನೀಜ್ ಬಿಡೇಶ್ ಇಂಡಿಯಾ ಲಿಮಿಟೆಡ್ ಮತ್ತು CAMYEN, ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದ ಸರ್ಕಾರಿ ಸ್ವಾಮ್ಯದ ಕಂಪನಿ ನಡುವೆ ಒಪ್ಪಂದ ಏರ್ಪಟ್ಟಿದೆ. ಈ ಯೋಜನೆ ಭಾರತಕ್ಕೆ ಲಿಥಿಯಂ ಪೂರೈಕೆಯನ್ನು ಬಲಪಡಿಸುತ್ತದೆ ಎಂದು ಜೋಶಿ ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ; ಇಂದಿನಿಂದ ಪೂಜಾಕಾರ್ಯ ಆರಂಭ – ಯಾವ ದಿನ ಏನು ಕಾರ್ಯಕ್ರಮ?

    ಈ ಒಪ್ಪಂದದಿಂದ ಎರಡೂ ದೇಶಗಳ ಲಿಥಿಯಂ ಗಣಿಗಾರಿಕೆ ಮತ್ತು ಡೌನ್‌ಸ್ಟ್ರೀಮ್ ವಲಯಗಳನ್ನು ಅಭಿವೃದ್ಧಿಪಡಿಸುತ್ತದೆ. ಇದು ಜಾಗತಿಕ ನಿವ್ವಳ ಶೂನ್ಯ ಗುರಿಗಳನ್ನು ಸಾಧಿಸಲು ನಿರ್ಣಾಯಕ ವಸ್ತುಗಳಿಗೆ ಪೂರೈಕೆ, ವೈವಿಧ್ಯೀಕರಣವನ್ನು ಸಹ ಸುಗಮಗೊಳಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನನಗೆ ತುಂಬಾ ಖುಷಿಯಾಗಿದೆ: ಅಯೋಧ್ಯೆ ರಾಮಮಂದಿರಕ್ಕೆ ಮಗ ಕೆತ್ತಿರುವ ರಾಮಲಲ್ಲಾ ಮೂರ್ತಿ ಆಯ್ಕೆಯಾಗಿದ್ದಕ್ಕೆ ತಾಯಿ ಸಂತಸ

  • I.N.D.I.A ಘಟಬಂಧನದ ಅಸ್ತಿತ್ವ ಎಲ್ಲಿದೆ? ಇದು ಚುನಾವಣೆ ಸೋತರೆ ಖರ್ಗೆ ಬಲಿ ಕೊಡುವ ಯತ್ನ: ಜೋಶಿ

    I.N.D.I.A ಘಟಬಂಧನದ ಅಸ್ತಿತ್ವ ಎಲ್ಲಿದೆ? ಇದು ಚುನಾವಣೆ ಸೋತರೆ ಖರ್ಗೆ ಬಲಿ ಕೊಡುವ ಯತ್ನ: ಜೋಶಿ

    ಹುಬ್ಬಳ್ಳಿ: ಐ.ಎನ್.ಡಿ.ಐ.ಎ ಘಟಬಂಧನದ (I.N.D.I.A Alliance) ಅಸ್ತಿತ್ವ ಎಲ್ಲಿದೆ? ತೋರಿಸೋಕೆ ಮಾತ್ರ ಆ ಒಕ್ಕೂಟ ಇದೆ. ಮನೆಮುರುಕ ಘಟಬಂಧನದಲ್ಲಿ ಲೋಕಸಭಾ ಚುನಾವಣೆ ಸೋತರೆ ಗಾಂಧಿ ಕುಟುಂಬದ ಮೇಲೆ ಬರಬಾರದು ಎಂಬ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಬಲಿ ಕೊಡುವ ಪ್ರಯತ್ನ ಇದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಜಗಳ ಆಡುತ್ತಿದ್ದಾರೆ. ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಇದೆ. ಕಮ್ಯುನಿಸ್ಟ್ ಸರ್ಕಾರ ನಮ್ಮ ಮೇಲೆ ಅತ್ಯಾಚಾರ ಮಾಡ್ತಾ ಇದೆ. ನಮ್ಮ ಕಾರ್ಯಕರ್ತರನ್ನು ಹೊಡಿತಾ ಇದ್ದಾರೆ ಎಂದು ಘಟಬಂಧನದಲ್ಲಿದ್ದವರೇ ಹೇಳಿಕೆ ನೀಡುತ್ತಿದ್ದಾರೆ. ಅವರಲ್ಲೇ ಹೊಂದಾಣಿಕೆ ಇಲ್ಲ. ಕಾಂಗ್ರೆಸ್‍ನವರು (Congress) ಯಾವ ಸ್ಥಿತಿಗೆ ಬಂದಿದ್ದಾರೆ ಎಂದರೆ, ಯುಪಿಯಲ್ಲಿ ಎರಡೇ ಟಿಕೆಟ್ ಕೊಡಲಿ ಮೈತ್ರಿ ಮಾಡಿಕೊಳ್ಳುತ್ತೀವಿ ಎನ್ನುತ್ತಾರೆ ಎಂದು ಕಾಂಗ್ರೆಸ್ ಪ್ರಮುಖರೊಬ್ಬರು ಹೇಳಿದ್ದರು. ಕಾಂಗ್ರೆಸ್ ಸೋಲೋದಂತೂ ಗ್ಯಾರಂಟಿ, ಇದನ್ನೇ ನಟ ಜಗ್ಗೇಶ್ ಅವರ ಭಾಷೆಯಲ್ಲಿ ಹೇಳೋದಾದ್ರೆ ಢಮಾರ್ ಆಗೋದು ಗ್ಯಾರಂಟಿ, ಅದಕ್ಕೆ ಇವರನ್ನು ಬಲಿ ಕೊಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: 60 ವರ್ಷಗಳಿಂದ ಮಾಡಿದ ಅನ್ಯಾಯಕ್ಕೆ ಕಾಂಗ್ರೆಸ್ಸಿಗರು ಈಗ ನ್ಯಾಯ ಕೇಳಲು ಹೊರಟಿದ್ದಾರೆ: ಮುನಿಸ್ವಾಮಿ ವ್ಯಂಗ್ಯ

    ಇದೇ ವೇಳೆ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ವಿಚಾರವಾಗಿ ಸರ್ಕಾರದ ತುಷ್ಟೀಕರಣ ರಾಜಕಾರಣ ಇದರಲ್ಲಿ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. ಸಿದ್ದರಾಮಯ್ಯ ಅವರು ನೈತಿಕ ಪೊಲೀಸ್‍ಗಿರಿ ಬಗ್ಗೆ ದೊಡ್ಡ ದೊಡ್ಡದಾಗಿ ಮಾತನಾಡಿದ್ದರು. ಆ ಹುಡುಗಿ ಮೇಲೆ ಅತ್ಯಾಚಾರ ನಡೆದಿದೆ. ಅದಕ್ಕೆ ಕಂಪ್ಲೇಂಟ್ ಕೊಟ್ಟಿದ್ದಾಳೆ. ಸರ್ಕಾರ, ಪೊಲೀಸ್ ಹಾಗೂ ಗೃಹ ಮಂತ್ರಿಗಳ ಧೋರಣೆ ಮಾತ್ರ ನೈತಿಕ ಪೊಲೀಸಗಿರಿ. ಇದನ್ನೆಲ್ಲಾ ನೋಡಿದ್ರೆ ಸರ್ಕಾರ ಯಾರನ್ನೋ ರಕ್ಷಿಸಲು ಹೊರಟಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ದಕ್ಷ ಅಧಿಕಾರಿಗಳನ್ನು ನೇಮಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದೇ ಅನ್ಯಜಾತಿಯವರು ಮಾಡಿದ್ದರೆ, ದೊಡ್ಡದಾಗುತ್ತಿತ್ತು. ಆಕೆ ನಮ್ಮ ಸಮುದಾಯದವರೇ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ ಎಂದಿದ್ದಾರೆ.

    ಈ ಪ್ರಕರಣದಲ್ಲಿ ತುಷ್ಟೀಕರಣ ರಾಜಕಾರಣದ ವಾಸನೆ ಇದೆ. ಅಪರಾಧಿಗಳು ಯಾವುದೇ ಜಾತಿಗೆ ಸೇರಿರಲಿ ಸರ್ಕಾರ ತಮ್ಮ ನಿಯತ್ತನ್ನು ಇದರಲ್ಲಿ ತೋರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಅನಂತ್‍ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕವಾಗಿ ಬೇಸರ ತಂದಿದೆ: ಸೋಮಣ್ಣ

  • ʻಸ್ವಚ್ಛತೀರ್ಥ ಅಭಿಯಾನʼಕ್ಕೆ ರಾಜ್ಯ ನಾಯಕರು ಸಾಥ್‌ – ಹುಬ್ಬಳ್ಳಿಯಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿದ ಪ್ರಹ್ಲಾದ್‌ ಜೋಶಿ

    ʻಸ್ವಚ್ಛತೀರ್ಥ ಅಭಿಯಾನʼಕ್ಕೆ ರಾಜ್ಯ ನಾಯಕರು ಸಾಥ್‌ – ಹುಬ್ಬಳ್ಳಿಯಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿದ ಪ್ರಹ್ಲಾದ್‌ ಜೋಶಿ

    ಹುಬ್ಬಳ್ಳಿ: ಅಯೋಧ್ಯೆಯಲ್ಲಿ (Ayodhya) ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಭಾಗವಾಗಿ ಬಿಜೆಪಿ ದೇಶಾದ್ಯಂತ ದೇವಾಲಯಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಚಿಗೊಳಿಸುವ ʻಸ್ವಚ್ಛ ತೀರ್ಥʼ ಅಭಿಯಾನ (Swachh Teerth Campaign) ಹಮ್ಮಿಕೊಂಡಿದೆ.

    ಜ.14ರ ಭಾನುವಾರದಿಂದ ಈ ಅಭಿಯಾನ ಚಾಲನೆಗೊಂಡಿದ್ದು, ಪಕ್ಷದ ನಾಯಕರು (BJP Leaders), ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ದೇಶದ ವಿವಿಧ ಭಾಗಗಳಲ್ಲಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಖ್ಯಾತ ಬಾಲಿವುಡ್‌ ನಟರೂ ಈ ಅಭಿಯಾನಕ್ಕೆ ಸಾಥ್‌ ನೀಡಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಸಮೀಪಿಸುತ್ತಿರುವಾಗ ದೇಶಾದ್ಯಂತ ಸಂಭ್ರಮದ ವಾತಾವರಣ ಮೂಡಿಸಲು ಬಿಜೆಪಿ ಈ ಅಭಿಯಾನ ಕೈಗೊಂಡಿದೆ.

    ಕರ್ನಾಟಕದಲ್ಲಿಯೂ ಬಿಜೆಪಿ ಹಿರಿಯ ನಾಯಕರು, ಕಾರ್ಯಕರ್ತರು ಈ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರು ಸೋಮವಾರ ಹುಬ್ಬಳ್ಳಿಯ ಸಾಯಿನಗರ ರಸ್ತೆಯಲ್ಲಿರುವ ಶ್ರೀ ಸಿದ್ದಪ್ಪಾಜಿ ಮೂಲ ಗದ್ದುಗೆ ಮಠದ ಆವರಣದಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿ ತಮ್ಮ ಸೇವೆ ಸಲ್ಲಿದ್ದಾರೆ. ಬಿಜೆಪಿ ಹುಬ್ಬಳ್ಳಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹಾನಗರ ಪಾಲಿಕೆಯ ಸದಸ್ಯ ಸಂತೋಷ್‌ ಚೌಹಾಣ್‌ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಈ ವೇಳೆ ಕೈಜೋಡಿಸಿದ್ದಾರೆ. ಈ ಕುರಿತ ಫೋಟೋಗಳನ್ನು ಜೋಶಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ರಾಮಮಂದಿರದ ಉದ್ಘಾಟನೆಯ ದಿನದವರೆಗೆ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತ ಹಿಂದೂ ದೇವಸ್ಥಾನಗಳಲ್ಲಿ ವಿಶೇಷ ಭಜನೆ-ಕೀರ್ತನೆ’ಯಲ್ಲೂ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಭಾನುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಗಾಂಧಿನಗರದ ದೇವಸ್ಥಾನದಲ್ಲಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಒಡಿಶಾದ ಬಾಲೇಶ್ವರದ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು. ಇದನ್ನೂ ಓದಿ: ಹಾಸನಕ್ಕುಂಟು ಶ್ರೀರಾಮನ ನಂಟು – ರಾವಣನ ಸಂಹರಿಸಿ ದೋಷ ನಿವಾರಣೆಗೆ ಇಲ್ಲಿಗೆ ಬಂದಿದ್ದನಂತೆ ಶ್ರೀರಾಮ

    ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸಹ ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೀರ್ಥ ಅಭಿಯಾನಕ್ಕೆ ಸಾಥ್‌ ನೀಡಿದರು. ರಾಜ್ಯದೆಲ್ಲೆಡೆ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನೆರವೇರಲಿ. ಜನವರಿ 22 ರಂದು ಶ್ರೀರಾಮ ಜ್ಯೋತಿ ಬೆಳಗಲು ಸಿದ್ಧತೆಗಳು ಭಕ್ತಿಪೂರ್ವಕವಾಗಿ ಸಾಗಲಿ ಎಂದು ಹಾರೈಸಿದರು. ಇದನ್ನೂ ಓದಿ: ಕಲಬುರಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮನೆಗೆಲಸ, ಟಾಯ್ಲೆಟ್ ಕ್ಲಿನಿಂಗ್ – ಮುಖ್ಯಶಿಕ್ಷಕಿ ವಿರುದ್ಧ FIR

  • ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್‌ ಜೋಶಿ

    ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್‌ ಜೋಶಿ

    – ಭೂಗತ ಕಲ್ಲಿದ್ದಲು ಗಣಿಗಾರಿಕೆಗೆ ಶೇ.50ರಷ್ಟು ರಿಯಾಯಿತಿ – ಜೋಶಿ ಭರವಸೆ

    ಬೆಂಗಳೂರು: ಕಲ್ಲಿದ್ದಲು (Coal) ಅನಿಲೀಕರಣ ಯೋಜನೆಯನ್ನು ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಮುಂದಿಡಲಾಗುವುದು. ನಂತರ ಔಪಚಾರಿಕವಾಗಿ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಭೂಗತ ಕಲ್ಲಿದ್ದಲು ಅನೀಲಿಕರಣ ಯೋಜನೆಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು. ವಾಣಿಜ್ಯ ಗಣಿಗಳಲ್ಲಿ ಭೂಗತ ಗಣಿಗಾರಿಕೆ (Mining) ಮಾಡುವವರಿಗೆ ಕೇಂದ್ರ ಸರ್ಕಾರ ಆಯಾ ರಾಜ್ಯಗಳೊಂದಿಗೆ ಆದಾಯ ಹಂಚಿಕೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ

    ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಮೂಲಕ ಭೂಗತ ಗಣಿಗಾರಿಕೆಗೆ ಪ್ರವೇಶಿಸುವವರಿಗೆ ಈ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಮೇಲ್ಮೈ ಗಣಿಗಾರಿಕೆಗೆ ಹೋಲಿಸಿದರೆ ಭೂಗತ ಗಣಿಗಾರಿಕೆ ಕಡಿಮೆ ಮಾಲಿನ್ಯಕಾರಕವಾಗಿದೆ. ಹಾಗಾಗಿ ಇದನ್ನು ಪ್ರೋತ್ಸಾಹಿಸಲು ಭವಿಷ್ಯದಲ್ಲಿ ಈ ಸಬ್ಸಿಡಿ (ಸಹಾಯಧನ) ಹೆಚ್ಚಿಸಲೂ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.

    ಕಲ್ಲಿದ್ದಲು ಸಚಿವಾಲಯದ ಪಿಎಸ್‌ಯುಗಳು ಒಟ್ಟಾಗಿ 2030ರ ವೇಳೆಗೆ 12 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಲು ಯೋಜಿಸಲಾಗಿದೆ. ಭಾರತವು ಪ್ರಸ್ತುತ ತೆರೆದ ಗಣಿಗಾರಿಕೆ ವಿಧಾನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭೂಗತ ಗಣಿಗಾರಿಕೆ ಪ್ರಸ್ತುತ ಭಾರತದ ಒಟ್ಟು ಕಲ್ಲಿದ್ದಲು ಗಣಿಗಾರಿಕೆ ಉತ್ಪಾದನೆಯಲ್ಲಿ ಕೇವಲ 4 ಪ್ರತಿಶತದಷ್ಟಿದ್ದು ಇದನ್ನು ಹೆಚ್ಚಿಸಲು ಯೋಜಿಸಲಾಗುತ್ತಿದೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾದ ಪತಿ – ಕ್ಷಣಮಾತ್ರದಲ್ಲೇ ಸ್ಕೆಚ್‌ ಹಾಕಿ ಪ್ರಿಯಕರನಿಂದ್ಲೇ ಕೊಲೆ ಮಾಡಿಸಿದ್ಲು ಪತ್ನಿ

    ಮೇಲ್ಮೈ ಕಲ್ಲಿದ್ದಲು ಗಣಿಗಾರಿಕೆ ವಿಧಾನದಲ್ಲಿ ಉತ್ತಮ ಗುಣಮಟ್ಟದ ಹಾಗೂ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಹೊರ ತೆಗೆಯಲಿದ್ದು, ಅಷ್ಟೇ ಅನಾನುಕೂಲತೆ ಸಹ ಹೊಂದಿದೆ. ಅತಿಯಾದ ಹೊರತೆಗೆಯುವಿಕೆಯಿಂದಾಗಿ ಹೆಚ್ಚಿನ ಮಾಲಿನ್ಯ, ಪುನರ್ವಸತಿ ಮತ್ತು ಭೂ ಸ್ವಾಧೀನದ ವೆಚ್ಚಗಳು ಹಾಗೂ ಅರಣ್ಯದ ಸ್ಥಳಾಂತರ ಸಮಸ್ಯೆಗಳು ಅಧಿಕವಾಗಿವೆ ಎಂದು ಸಚಿವ ಜೋಶಿ ವಿವರಿಸಿದ್ದಾರೆ.

    ದೇಶದ ಅತಿದೊಡ್ಡ ಕಲ್ಲಿದ್ದಲು ಗಣಿಗಾರಿಕೆ ಸಂಸ್ಥೆ ಕೋಲ್ ಇಂಡಿಯಾ ಲಿಮಿಟೆಡ್ (Coal India Limited) ತನ್ನ ಭೂಗತ ಗಣಿಗಾರಿಕೆ ಉತ್ಪಾದನೆಯನ್ನು 2030ರ ವೇಳೆಗೆ 100 ಮಿಲಿಯನ್ ಟನ್‌ಗಳಿಗೆ (MT) 4 ಪಟ್ಟು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ರೇಸ್‌ಕೊರ್ಸ್ ಬುಕ್ಕಿಂಗ್‌ ಕೌಂಟರ್‌ ಮೇಲೆ CCB ದಾಳಿ – 3.47 ಕೋಟಿ ರೂ. ಸೀಜ್

    ಇನ್ನೂ ಕಲ್ಲಿದ್ದಲು ಅನಿಲೀಕರಣಕ್ಕಾಗಿ, ಅನಿಯಂತ್ರಿತ ವಲಯಕ್ಕೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗಾಗಿ ಹೊಸ ಉಪವಿಭಾಗವನ್ನು ಸರ್ಕಾರ ಸೇರಿಸಿದೆ. ಭಾರೀ ಗಣಿಗಾರಿಕೆ ಉಪಕರಣಗಳಿಗೆ ಯಾವುದೇ ಉತ್ಪಾದನಾ-ಸಂಯೋಜಿತ ಪ್ರೋತ್ಸಾಹವನ್ನು (PLI) ಯೋಜಿಸಿಲ್ಲ. ಭಾರೀ ಗಣಿಗಾರಿಕೆ ಮತ್ತು ನಿರ್ಮಾಣ ಉಪಕರಣಗಳ ಉತ್ಪಾದನೆಗೆ ಪಿಎಲ್‌ಐ ನೀಡಲು ಸರ್ಕಾರ ಯಾವುದೇ ಯೋಜನೆ ಹೊಂದಿಲ್ಲ. ನಮ್ಮ PSU ಗಳಿಗೆ ಮತ್ತು ಕಲ್ಲಿದ್ದಲು ಬ್ಲಾಕ್‌ಗಳಲ್ಲಿ ಭಾಗವಹಿಸುವ ಖಾಸಗಿ ಕಂಪನಿಗಳಿಗೆ ಖನಿಜ ಹರಾಜಿನಲ್ಲಿ ಖರೀದಿಸಲು ಹೇಳುತ್ತಿದ್ದೇವೆ ಎಂದಿದ್ದಾರೆ.

    ಎನ್‌ಎಲ್‌ಸಿ ಇಂಡಿಯಾ ಮತ್ತು ಕೋಲ್ ಇಂಡಿಯಾದ ಮಾಲೀಕತ್ವವನ್ನು ಸರ್ಕಾರ ಯಾವಾಗಲೂ ಉಳಿಸಿಕೊಳ್ಳುತ್ತದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

  • ಶೇಂಗಾ, ಸೋಯಾಬೀನ್ ಬೆಳೆಗಾರರಿಗೆ ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಕ್ರಮ : ಜೋಶಿ

    ಶೇಂಗಾ, ಸೋಯಾಬೀನ್ ಬೆಳೆಗಾರರಿಗೆ ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಕ್ರಮ : ಜೋಶಿ

    ಬೆಂಗಳೂರು: ಧಾರವಾಡ ಜಿಲ್ಲೆಯಲ್ಲಿ ಶೇಂಗಾ ಮತ್ತು ಸೋಯಾಬಿನ್ (Groundnut, Soybean) ಬೆಳೆಗಳಿಗೂ ಮಧ್ಯಂತರ ಬೆಳೆ ವಿಮೆ (Insurance) ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಂಸದೀಯ ಸಚಿವ ಜೋಶಿ ಅವರು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬೆಳೆ ಹಾನಿ ಸಮೀಕ್ಷೆಗೂ ಮೊದಲೇ ಶೇಂಗಾ ಹಾಗೂ ಸೋಯಾಬಿನ್ ಬೆಳೆ ಕಟವು ಆಗಿದ್ದರಿಂದ ಈ ಎರಡೂ ಬೆಳೆಗಳನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಧ್ಯಂತರ ಪರಿಹಾರ ಪ್ರಕ್ರಿಯೆಯಿಂದ ವಿಮಾ ಕಂಪನಿ ಕೈ ಬಿಟ್ಟಿತ್ತು.  ಇದನ್ನೂ ಓದಿ: 60 ವರ್ಷದ ಕನಸಿನ ಯೋಜನೆ – ಇಂದು ಮೋದಿಯಿಂದ ದೇಶದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ

    ಧಾರವಾಡ ಜಿಲ್ಲಾಡಳಿತ ಮಧ್ಯಂತರ ಬೆಳೆ ವಿಮೆ ಪರಿಹಾರಕ್ಕೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೋಯಾಬಿನ್ ಮತ್ತು ಶೇಂಗಾ ಬೆಳೆಗಳನ್ನ ಹೊರತುಪಡಿಸಿ ಮಿಕ್ಕ ಎಲ್ಲಾ ಬೆಳೆಗಳನ್ನು SBI ವಿಮೆ ಕಂಪನಿ ಅಂಗೀಕರಿಸಿ ಮಧ್ಯಂತರ ವಿಮೆ ಹಣ ಬಿಡುಗಡೆ ಮಾಡಿತ್ತು.

     

    ಈ ವಿಚಾರ ಗಮನಕ್ಕೆ ಬರುತ್ತಲೇ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ವಿಮೆ ಕಂಪನಿಯನ್ನು ಸಂಪರ್ಕಿಸಿ, ಸಭೆ ನಡೆಸಿ ಮುಂಗಾರಿನ ಶೇಂಗಾ ಮತ್ತು ಸೋಯಾಬೀನ್ ಬೆಳೆಗಳಿಗೂ ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಎಂದು ಸಚಿವ ಜೋಶಿ ತಿಳಿಸಿದ್ದಾರೆ.   ಇದನ್ನೂ ಓದಿ: ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ

    ಈ ಬೆಳೆಗಾರರ ಸಮಸ್ಯೆ ಅರಿತು ಕೇಂದ್ರ ಕೃಷಿ ಸಚಿವ ಅರ್ಜುನ್ ಅವರೊಂದಿಗೂ ಚರ್ಚೆ ನಡೆಸಿ, ಫಸಲ್ ಬಿಮಾ CEO ರಿತೇಶ್ ಚೌಹಾನ್ ಮತ್ತು SBI ವಿಮೆ ಕಂಪನಿಯ ರಾಷ್ಟ್ರೀಯ ಮುಖ್ಯಸ್ಥ ಪಿಯೂಷ್ ಸಿಂಗ್ ಅವರ ಗಮನ ಸೆಳೆದು ಶೇಂಗಾ, ಸೋಯಾಬೀನ್ ಬೆಳೆ ಗಾರರಿಗೂ ಮಧ್ಯಂತರ ಬೆಳೆ ವಿಮೆ ಪರಿಹಾರ ಕೈ ಸೇರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜೋಶಿ ಹೇಳಿದ್ದಾರೆ.

    ಧಾರವಾಡ ಜಿಲ್ಲೆಯ ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳಿಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಧ್ಯಂತರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಅತಿ ಶೀಘ್ರದಲ್ಲಿ ಪತ್ರ ತಲುಪಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  • ಸ್ತಬ್ಧಚಿತ್ರ ರಾಜಕಾರಣ ಸಿಎಂಗೆ ಶೋಭೆ ತರಲ್ಲ: ಪ್ರಹ್ಲಾದ್ ಜೋಶಿ

    ಸ್ತಬ್ಧಚಿತ್ರ ರಾಜಕಾರಣ ಸಿಎಂಗೆ ಶೋಭೆ ತರಲ್ಲ: ಪ್ರಹ್ಲಾದ್ ಜೋಶಿ

    – ಸಿಎಂ ಆರೋಪಕ್ಕೆ ಜೋಶಿ ಪ್ರತ್ಯುತ್ತರ

    ಬೆಂಗಳೂರು: ಗಣರಾಜ್ಯೋತ್ಸವಕ್ಕೆ (Republic Day) ಕರುನಾಡಿನ ಸ್ತಬ್ಧಚಿತ್ರ ಆಯ್ಕೆ ಆಗದಿರುವುದನ್ನೇ ಮುಂದಿಟ್ಟುಕೊಂಡು ಕೀಳುಮಟ್ಟದ ರಾಜಕಾರಣ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿವಿಮಾತು ಹೇಳಿದ್ದಾರೆ.

    ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ಧಚಿತ್ರವನ್ನು (Tableau) ಆಯ್ಕೆ ಮಾಡದೆ ಕರುನಾಡಿಗೆ ಕೇಂದ್ರ ಸರ್ಕಾರ (Central Govt) ಅವಮಾನ ಮಾಡಿದೆ ಎಂಬ ಸಿದ್ದರಾಮಯ್ಯ (Siddaramaih) ಟೀಕೆಗೆ ಜೋಶಿ ಅವರು ಎಕ್ಸ್‌ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ.

    ಎಕ್ಸ್‌ನಲ್ಲೇನಿದೆ..?: ಸಿದ್ದರಾಮಯ್ಯನವರೇ ರಾಜಕೀಯ ಮಾಡಬೇಕು ನಿಜ. ಆದರೆ ಎಲ್ಲದರಲ್ಲೂ ರಾಜಕೀಯ ಮಾಡುವುದು, ಸುಳ್ಳು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವುದು ನಿಮಗಾಗಲಿ, ನಿಮ್ಮ ಸ್ಥಾನಕ್ಕಾಗಲಿ ಶೋಭೆ ತರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಶ್ರೀರಾಮಚಂದ್ರನನ್ನು ಪೂಜಿಸ್ತೀವಿ, ಬಿಜೆಪಿ ರಾಜಕೀಯಕ್ಕೆ ನಮ್ಮ ವಿರೋಧ: ಸಿಎಂ

    2015 ರಿಂದ 2023 ರವರೆಗೆ ಕರ್ನಾಟಕ ಪ್ರತಿ ವರ್ಷ ಗಣರಾಜ್ಯೋತ್ಸವ ವೇಳೆ ಸ್ತಬ್ಧಚಿತ್ರ ಪ್ರದರ್ಶನ ಮಾಡಿದೆ. ಅದನ್ನರಿತು ರಾಜಕಾರಣ ಮಾಡಿ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಈವರೆಗೆ ಕರ್ನಾಟಕಕ್ಕೆ ಸ್ತಬ್ಧಚಿತ್ರ ಪ್ರದರ್ಶಿಸಲು ಬರೋಬ್ಬರಿ 14 ಅವಕಾಶಗಳಿದ್ದವು. ಅಂದರೆ ಕೇಂದ್ರದಲ್ಲಿ ಬಿಜೆಪಿ (BJP) ಇದ್ದಾಗಲೇ 10 ಬಾರಿ ಕರುನಾಡಿನ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಸಿಎಂ ಇದನ್ನು ಮರೆತಂತೆ ಇದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ.

    2007, 2009 ಹಾಗೂ 2010 ರಲ್ಲಿ ಕರ್ನಾಟಕಕ್ಕೆ ಸ್ತಬ್ಧಚಿತ್ರ ಪ್ರದರ್ಶಿಸಲು ಅವಕಾಶ ಸಿಗಲಿಲ್ಲವಲ್ಲ. ಆಗ ಎಲ್ಲಿ ಹೋಗಿತ್ತು ನಿಮ್ಮ ನಾಡಪ್ರೇಮ? ಆಗ ಏಕೆ ಪ್ರಶ್ನಿಸಲಿಲ್ಲ? ಆ ಅವಧಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಕರ್ನಾಟಕಕ್ಕೆ ಅವಮಾನ ಆಗಿರಲಿಲ್ಲವೇ? ಎಂದು ಸಚಿವ ಜೋಶಿ ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಆಗಿಲ್ಲದ ಅವಮಾನ ಪದ ಈಗೇಕೆ? ಎಂಬುದು ಜನರಿಗೆ ಅರ್ಥವಾಗುತ್ತದೆ. ಜನರೇನು ಮೂರ್ಖರಲ್ಲ ಎಂದು ಕೇಂದ್ರ ಸಚಿವರು ಕಿಡಿಕಾರಿದ್ದಾರೆ.

    ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡುವುದು ನಮ್ಮ ಕೈಯಲಿಲ್ಲ. ಎಲ್ಲವೂ ನ್ಯಾಯ ಬದ್ಧವಾಗಿಯೇ ನಡೆದಿದೆ. ಆಯ್ಕೆಗಾಗಿ ಆಯಾ ಕ್ಷೇತ್ರದ ಹೆಸರಾಂತ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಅದರಂತೆ ಆಯ್ಕೆ ನಡೆದಿದೆ. ಸಂಸ್ಕ್ರತಿ, ಕಲೆ, ದೇಶ- ರಾಜ್ಯದ ಗೌರವ ಬಿಂಬಿಸುವ, ಸಾದರಪಡಿಸುವ ವಿಷಯದಲ್ಲಿ ಬಿಜೆಪಿ ಎಂದೂ ರಾಜಕಾರಣ ಮಾಡುವುದಿಲ್ಲ. ಅದೇನಿದ್ದರೂ ಕಾಂಗ್ರೆಸ್ ನ (Congress) ಚಾಳಿ ಎಂದು ಪ್ರಹ್ಲಾದ್ ಜೋಶಿ ಸಿಎಂಗೆ ಛಾಟಿ ಬೀಸಿದ್ದಾರೆ.

    ಕೇಂದ್ರ ಸರ್ಕಾರ ರಾಜ್ಯಗಳ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡುವುದಿಲ್ಲ. ಸಿದ್ದರಾಮಯ್ಯ ಅವರು ಒಬ್ಬ ಮುಖ್ಯಮಂತ್ರಿ ಆಗಿ ನಮ್ಮ ಸ್ತಬ್ಧಚಿತ್ರವನ್ನು ಮೊದಲು ಪ್ರದರ್ಶನ ಮಾಡಲು ಬಿಡಲಿಲ್ಲ. ಅವಮಾನವಾಯಿತು ಎನ್ನುವುದು ತರವಲ್ಲ ಎಂದು ಖಂಡಿಸಿದ್ದಾರೆ.