ನವದೆಹಲಿ: ಪಾಕಿಸ್ತಾನ (Pakistan) ಮತ್ತು ಕಾಂಗ್ರೆಸ್ (Congress) ಸ್ಥಿತಿ ಒಂದೇ ರೀತಿಯಾಗಿದೆ. ಪಾಕ್ ಆರ್ಥಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದೆ. ಈಗ ನೈತಿಕವಾಗಿ, ಬೌದ್ಧಿಕವಾಗಿಯೂ ದಿವಾಳಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಪಾಕ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಬಿಜೆಪಿ ಆರೋಪದ ವಿಚಾರಕ್ಕೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಮಾಧ್ಯಮದಲ್ಲೂ ವಿಚಾರ ಬಂದಿದೆ. ಆ ವ್ಯಕ್ತಿಯನ್ನು ಸರ್ಕಲ್ ಮಾಡಿ ಗುರುತಿಸಲಾಗಿದೆ. ಸರ್ಕಾರ ಈ ವ್ಯಕ್ತಿಯನ್ನು ವಿಚಾರಣೆ ಮಾಡಿಲ್ಲ. ಇದು ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮರಿ ಖರ್ಗೆ ಪುಕ್ಕಲ, ಸ್ವಂತ ಕ್ಷೇತ್ರದಲ್ಲಿ ಸತ್ಯವನ್ನು ಎದುರಿಸುವ ಧೈರ್ಯವಿಲ್ಲ: ಸೂಲಿಬೆಲೆ ಕಿಡಿ
ರಾಜ್ಯ ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ಜಾತಿಗಣತಿ ವರದಿ ಸರಿಯಿಲ್ಲ ಎಂದು ಕಾಂಗ್ರೆಸ್ ಪಕ್ಷದವರೇ ಹೇಳಿದ್ದಾರೆ. ಡಿಸಿಎಂ, ಶಾಮನೂರು ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದಲ್ಲೇ ಇರುವ ಭಿನ್ನಾಭಿಪ್ರಾಯದ ಬಗ್ಗೆ ಏನು ಹೇಳುತ್ತೀರಾ? ಇದು ಗಣತಿ ಅಲ್ಲ, ಕೇವಲ ವರದಿ. ಜನಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅವಕಾಶ. ಗಣತಿ ಸರಿ ಆಗಿಲ್ಲ, ಮನೆಮನೆಗೆ ಹೋಗಿಲ್ಲ ಎಂಬ ಆರೋಪ ಕೂಡ ಇದೆ. ಚುನಾವಣಾ ಸಮಿತಿ ಸಭೆಯ ಬಗ್ಗೆ ನನಗೇನು ಗೊತ್ತಿಲ್ಲ. ಅದು ಪಕ್ಷದ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ಊಹಾಪೋಹಗಳ ಮೇಲೆ ಉತ್ತರಕೊಡಲ್ಲ ಎಂದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಹೆಚ್ಡಿಕೆ ಬಿಜೆಪಿಯನ್ನ ಬೀದಿಗೆ ನಿಲ್ಲಿಸಿದ್ದಾರೆ, ಮುಂದೆ ಇನ್ನೇನು ಕಾದಿದೆಯೋ: ಹೆಚ್.ಸಿ ಬಾಲಕೃಷ್ಣ
ಡಿ.ಕೆ ಹಿಮಾಚಲಕ್ಕೆ ಹೋಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಇರೋದು ಮೂರು ರಾಜ್ಯದಲ್ಲಿ. ಆ ಮೂರು ಸರ್ಕಾರದಲ್ಲಿ ಇವರು ಟ್ರಬಲ್ ಶೂಟರ್. ಹಾಗೆನಾದರೂ ಇವರು ಟ್ರಬಲ್‌ಶೂಟರ್ ಆಗಿದ್ದರೆ ದೇಶಾದ್ಯಂತ ಕಾಂಗ್ರೆಸ್‌ಗೆ ಆಗಿರುವ ಟ್ರಬಲ್ ಶೂಟ್ ಮಾಡಲಿ. ಕಾಂಗ್ರೆಸ್ 40-50 ಕ್ಷೇತ್ರಗಳು ಗೆಲ್ಲಲ್ಲ. ಅದನ್ನು ಗೆದ್ದರೆ ಇವರು ಟ್ರಬಲ್ ಶೂಟರ್ ಎಂದು ಹೇಳಿದರು. ಇದನ್ನೂ ಓದಿ: ವಿಧಾನಸೌಧಲ್ಲಿ ಪಾಕ್ ಪರ ಘೋಷಣೆ – ಸರ್ಕಾರಕ್ಕೆ ಎಫ್‌ಎಸ್‌ಎಲ್ ವರದಿ ಸಲ್ಲಿಕೆ
ಹುಬ್ಬಳ್ಳಿ: ನಿಮಗೆ ಮಾನ ಮರ್ಯಾದೆ ಇಲ್ಲ ಅಂದ್ರೆ ನನಗೂ ಇಲ್ಲ ಅಂದುಕೊಂಡಿದ್ದಿರಾ? ಸಿದ್ದರಾಮಯ್ಯನವರೇ (Siddaramaiah) ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯುವುದಿಲ್ಲ ಅಂತ, ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹರಿಹಾಯ್ದಿದ್ದಾರೆ.
ಮಹದಾಯಿ ವಿಚಾರವಾಗಿ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಪ್ರತಿಕ್ರಿಯೆ ನೀಡಿ ಅವರು, ಸಿದ್ದರಾಮಯ್ಯ ಅವರಿಗೆ ಮಹಾದಾಯಿಗೆ (Mhadei River) EC ಸಿಕ್ಕಿದೆ ಅಂತಾನೂ ಗೊತ್ತಿಲ್ಲ. ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಿ, ನೀವು ಏಕವಚನದಲ್ಲಿ ಮಾತನಾಡಿದ್ದಿರಿ ನಿಮ್ಮ ಸಂಸ್ಕೃತಿಗೆ ನಾನು ಇಳಿಯುವದಿಲ್ಲ. ನೀವು ಹೇಗೆ ಪ್ರಮಾಣವಚನ ಸ್ವೀಕರಿಸಿದ್ದೀರೋ, ನಾನೂ ಹಾಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ. ಆಡಳಿತ ಅಧಿಕಾರ ನಿಮಗೆ ಜಾಸ್ತಿ ಇರಬಹುದು. ಆದ್ರೆ ಕೇಂದ್ರ ಸರ್ಕಾರದ ಒಬ್ಬ ಮಂತ್ರಿ ರಾಜ್ಯದ ಮುಖ್ಯಮಂತ್ರಿ ಸಂವಿಧಾನದಲ್ಲಿ ಒಂದೇ ಎಂದು ಹೇಳಿದ್ದಾರೆ.
ನಾನು ಮಾನ ಮರ್ಯಾದೆ ಬಿಟ್ಟು ವರ್ತನೆ ಮಾಡುವುದಿಲ್ಲ. ಸಿದ್ದರಾಮಯ್ಯ ಏನು ಫೈಲ್ ನೋಡದೆ ಉಡಾಫೆ ಹೊಡೀತಾರೆ. ಕಾಂಗ್ರೆಸ್ ಎಲ್ಲಾ ಸಂದರ್ಭದಲ್ಲಿ ಕಳಸಾ ಬಂಡೂರಿಗೆ ಅನ್ಯಾಯ ಮಾಡಿದೆ. ಡಿಪಿಆರ್ ಸಹ ಬಿಜೆಪಿ ಮಾಡಿದೆ, ಆದರೆ ಸೋನಿಯಾ ಗಾಂಧಿ ಗೋವಾಗೆ ಹೋಗಿ ಹನಿ ನೀರು ಕೊಡಲ್ಲ ಅಂದ್ರು ಫಾರೆಸ್ಟ್ ಕ್ಲಿಯರ್ ಬೇಕಾಗಿದೆ, ತಾಂತ್ರಿಕ ಸಮಸ್ಯೆಯಿದೆ. ಹುಲಿ ಸಂರಕ್ಷಣೆ ಪ್ರಾಧಿಕಾರದ ಅನುಮತಿ ಬೇಕಾಗಿದೆ. ಆದರೆ ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ, ಇವರಿಗೆ ಎಷ್ಟು ನಾಲಿಗೆ ಇದೆ ಅಂತ ಗೊತ್ತಾಗಿದೆ. ದೇಶದಲ್ಲಿ ಇವತ್ತು ಕಾಂಗ್ರೆಸ್ ಯಾವ ಪರಿಸ್ಥಿತಿಗೆ ಬಂದಿದೆ ಅಂದ್ರೆ ಎರಡು ಸೀಟ್ ಕೊಡಿ, ಮೂರು ಸೀಟ್ ಕೊಡಿ ಅಂತ ತೃಣಮೂಲ ಕಾಂಗ್ರೆಸ್ ಬಳಿ ಭಿಕ್ಷೆ ಬೇಡ್ತಿದ್ದೀರಿ. ಮುಂದೆ ಈಗ ಇರುವ ಸ್ಥಾನಗಳೂ ಕಡಿಮೆಯಾಗಲಿದೆ ಎಂದು ಕುಟುಕಿದ್ದಾರೆ.
ಸಿಟಿ ರವಿ ಮತ್ತು ಶೋಭಾ ಕರಂದ್ಲಾಜೆ ಗೋ ಬ್ಯಾಕ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸ್ವಂತ ಬಲ ಮತ್ತು ಅಭಿವೃದ್ಧಿಯಿಂದ ಗೆಲ್ಲೋದಿಲ್ಲ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಷಡ್ಯಂತ್ರಕ್ಕೆ ಜನ ಬಲಿಯಾಗೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿ: ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅವರು ಫೆ.28ರಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ (Dharwad Lok Sabha Constituency) ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಪುಸ್ತಕವನ್ನು ಜೈಶಂಕರ್ ಅಂದು ಬಿಡುಗಡೆಗೊಳಿಸಲಿದ್ದಾರೆ. ಇದನ್ನೂ ಓದಿ: ಮೊದಲ 100 ದಿನ ಏನು ಮಾಡಬೇಕು? – ಹೊಸ ಸರ್ಕಾರದ ಕೆಲಸಕ್ಕೆ ಈಗಲೇ ತಯಾರಿ ಆರಂಭಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ (Pralhad Joshi) ಅವರ 16 ವರ್ಷದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಮಾಹಿತಿ ಒಳಗೊಂಡ ಪುಸ್ತಕ ಇದಾಗಿದೆ.
ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕಾಗಿ ಕೈಗೊಂಡ ಚಟುವಟಿಕೆಗಳನ್ನು ಈ ಪುಸ್ತಕ ವಿಸ್ತಾರವಾಗಿ ಒಳಗೊಂಡಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿ: ಅಯೋಧ್ಯೆ ಯಾತ್ರಿಕರ ರೈಲಿನಲ್ಲಿ ನಡೆದ ಗಲಾಟೆ ಕಾಂಗ್ರೆಸ್ (Congress) ತುಷ್ಟೀಕರಣ ರಾಜಕಾರಣದ ಫಲ. ಕಾಂಗ್ರೆಸ್ ಮತ್ತು ತುಷ್ಟೀಕರಣದ ಕೆಲ ಪಕ್ಷಗಳು ಈ ರೀತಿ ಮಾಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟ್ ಬ್ಯಾಂಕ್‍ಗಾಗಿ ಇಂತಹ ಘಟನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಯಾರಿಗೂ ಈ ರೀತಿಯ ಉತ್ತೇಜನ ಕೊಡಬಾರದು ಅನ್ನೋದು ನಮ್ಮ ಉದ್ದೇಶ. ಅಯೋಧ್ಯೆಗೆ ಹೋಗಿ ಬಂದರೆ ತಪ್ಪೇನು? ಕೆಲವರು ಮೆಕ್ಕಾ – ಮದೀನಾಕ್ಕೂ ಹೋಗುತ್ತಾರೆ. ಈ ರೀತಿ ಧಮ್ಕಿ ಹಾಕಿದವರನ್ನು ಹಿಡಿದು ಒದ್ದು ಒಳಗೆ ಹಾಕಬೇಕು. ಸರ್ಕಾರ ಅಂಥವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಾ.ಮಂಜುನಾಥ್ ಏನು ತೀರ್ಮಾನ ಮಾಡ್ತಾರೆ ಎಂದು ಸಮಯ ಬಂದಾಗ ನೋಡೋಣ: ಹೆಚ್‍ಡಿಕೆ
ಕಾಂಗ್ರೆಸ್ ಸರ್ಕಾರ ಇರುವವರೆಗೂ ಏನು ಬೇಕಾದರೂ ಮಾಡಬಹುದು ಎನ್ನುವ ಧೈರ್ಯ ಅವರಿಗೆ. ಕೆಜಿ ಹಳ್ಳಿ, ಡಿಜೆ ಹಳ್ಳಿಯಂತಹ ಪ್ರಕರಣ ಮಾಡಬಹುದು ಎಂಬ ಧೈರ್ಯವಿದೆ. ಹುಬ್ಬಳ್ಳಿ ಗಲಭೆ ಪ್ರಕರಣದ ಅರೋಪಿಗಳಿಗೂ ಪತ್ರ ಬರೆದು ಬಿಡುಗಡೆಗೊಳಿಸಿದರು. ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಏನು ಬೇಕಾದರೂ ಮಾಡಬಹುದು ಎನ್ನುವ ಮಾನಸಿಕತೆ ಬೆಳೆದಿದೆ ಎಂದಿದ್ದಾರೆ.
ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎರಡು ನಿರ್ಣಯಗಳ ಅಂಗೀಕಾರ ವಿಚಾರವಾಗಿ ಮಾತನಾಡಿ, ಇದು ಅತ್ಯಂತ ದುರ್ದೈವದ ಸಂಗತಿ. ಹೆಚ್.ಕೆ ಪಾಟೀಲ್‍ರಂತಹ ಹಿರಿಯ ರಾಜಕಾರಣಿಗಳು ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದಿರುವುದು ಘೋರ ದುರಂತ. ಪ್ರತಿಯೊಂದು ಪ್ಲಾನಿಂಗ್ ಕಮಿಷನ್‍ನಲ್ಲಿ ನಿರ್ಧಾರವಾಗುತ್ತೆ. 15ನೇ ಹಣಕಾಸು ಆಯೋಗದ ಪ್ರಕ್ರಿಯೆ ನಡೆದಾಗ ಸಿದ್ದರಾಮಯ್ಯ ಅವರ ಸರ್ಕಾರವೇ ಅಧಿಕಾರದಲ್ಲಿತ್ತು. ಹಿಂದೆ ಎಷ್ಟು ಅನುದಾನ ಬರ್ತಿತ್ತು? ಈಗ ಎಷ್ಟು ಬರುತ್ತಿದೆ ಎಂದು ಪರಿಶೀಲಿಸಲಿ. ಹಿಂದಿಗಿಂತ ಹೆಚ್ಚು ಅನುದಾನ ಬರುತ್ತಿರುವುದನ್ನು ಯಾಕೆ ಪರಿಗಣಿಸುತ್ತಿಲ್ಲ? ತಮ್ಮ ಕೊರತೆ ಮುಚ್ಚಿಕೊಳ್ಳಲು ದಾರಿ ತಪ್ಪಿಸುತ್ತಿದ್ದಾರೆ. ಸುಳ್ಳು ಹೇಳುವ ಮೂಲಕ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಸಿಎಂ ಮತ್ತು ಹೆಚ್.ಕೆ ಪಾಟೀಲ್ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಸರ್ಕಾರ ದಿವಾಳಿಯಾಗಿ ದೇವಾಲಯಕ್ಕೆ ಟ್ಯಾಕ್ಸ್: ದೇವಸ್ಥಾನದ ಆದಾಯದ ಮೇಲೆ ತೆರಿಗೆ ವಿಚಾರ ಚರ್ಚ್ ಮತ್ತು ಮಸೀದಿಯಲ್ಲಿ ಎಷ್ಟು ಹಣ ಸಂಗ್ರಹ ಆಗುತ್ತೆ ಲೆಕ್ಕ ಕೊಡಲಿ. ಆ ಹಣದಲ್ಲಿ 10% ತೆರಿಗೆ ರೂಪದಲ್ಲಿ ಪಡೆಯಲಿ ನೋಡೋಣ. ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಅದನ್ನು ಸರಿದೂಗಿಸಲು ಬೇರೆ ಬೇರೆ ರೂಪದಲ್ಲಿ ತೆರಿಗೆ ಹಾಕಿದ್ದಾರೆ. ಈ ಮೂಲಕ ಹಿಂದೂ ವಿರೋಧಿ ನೀತಿಯನ್ನು ತೋರಿಸುತ್ತಿದ್ದಾರೆ. ಚರ್ಚ್ ಮತ್ತು ಮಸೀದಿಗಳಿಂದ ಒಂದು ನಯಾ ಪೈಸೆ ತೆಗೆದು ನೋಡಲಿ. ದೇವಸ್ಥಾನದ ದುಡ್ಡು ಹೊಡೆಯಲು ನೋಡ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅವರ ಬತ್ತಳಿಕೆಯಲ್ಲಿ ಏನಿದೆ ಎಂದು ನಮಗೆ ಗೊತ್ತಿದೆ: ಡಿಕೆಶಿ
ಧಾರವಾಡ: ದೇಶದಲ್ಲಿ ಮೊದಲು ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದ್ದವು. ಆರ್ಟಿಕಲ್ 370 ( Article 370) ತೆಗೆದು ಉಗ್ರರ ಚಟುವಟಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ನರೇಂದ್ರ ಗ್ರಾಮದಲ್ಲಿ ನಡೆಯುತ್ತಿರುವ ಸಂಸದರ ಕ್ರೀಡೋತ್ಸವದ ಕಬಡ್ಡಿ ಪಂದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ, ಮೊದಲು ಬೆಂಗಳೂರು, ಹೈದರಾಬಾದ್‍ನಲ್ಲಿ ಬಾಂಬ್ ಹಾರುತ್ತಿದ್ದವು. ಈಗ ಎಲ್ಲವೂ ಬಂದ್ ಆಗಿದೆ. ಏಕೆಂದರೆ ಆರ್ಟಿಕಲ್ 370 ಕಿತ್ತೆಸೆಯಲಾಗಿದೆ. ಮೊದಲು ದೇಶದೊಳಗೆ ಬಂದು ಬಾಂಬ್ ಹಾಕುತ್ತಿದ್ದರು. ಈಗ ನಾವು ಪಾಕಿಸ್ತಾನದ ಅವರ ಮನೆಗೆ ನುಗ್ಗಿ ಹೊಡೆಯುತ್ತಿದ್ದೇವೆ. ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ. ಈಗ ಎಲ್ಲಿಯಾದರೂ ಬಾಂಬ್ ಹಾರುತ್ತಿವೆಯಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಧರ್ಮಪತ್ನಿಯನ್ನು ನಮಗೆ ಪರಿಚಯಿಸಿ: ಸಿಎಂಗೆ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯ
– ಬೆಳಗಾವಿ ರಾಣಿ ಚನ್ನಮ್ಮ, ಧಾರವಾಡ, ಗುಲ್ಬರ್ಗ ವಿವಿಗಳಿಗೆ ಅನುದಾನ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
– ಜಮ್ಮುವಿನಲ್ಲಿ ಪ್ರಧಾನಮಂತ್ರಿ ಉಷಾ ಯೋಜನೆಗೆ ಚಾಲನೆ; ನೇರ ಪ್ರಸಾರದಲ್ಲಿ ಸಚಿವ ಪ್ರಹ್ಲಾದ್ ಜೋಶಿ, ಸಂಸದೆ ಮಂಗಳಾ ಅಂಗಡಿ ಭಾಗಿ
ಬೆಳಗಾವಿ: ಕರ್ನಾಟಕ (Karnataka), ಜಮ್ಮು-ಕಾಶ್ಮೀರ (Jammu and Kashmir) ಸೇರಿದಂತೆ ದೇಶದ ಅನೇಕ ವಿಶ್ವವಿದ್ಯಾಲಯಗಳಿಗೆ (University) ಕೇಂದ್ರ ಸರ್ಕಾರ 3600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
ಉಷಾ ಯೋಜನೆಯಡಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ. ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ಹಾಗೂ ಧಾರವಾಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ದೊರೆಯಲಿದೆ. ಜಮ್ಮು- ಕಾಶ್ಮೀರ ಸೇರಿದಂತೆ ದೇಶದ ಹಲವಾರು ವಿಶ್ವವಿದ್ಯಾಲಯಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಈ ಅನುದಾನ ಬಿಡುಗಡೆ ಮಾಡಿದ್ದಾರೆ. ಸಾಕ್ಷರತೆಯಿಂದ ಮಾತ್ರ ದೇಶದ ನೈಜ ವಿಕಾಸ ಸಾಧ್ಯವೆಂದು ನಂಬಿರುವ ಮೋದಿಯವರು ದೇಶದ ವಿಶ್ವವಿದ್ಯಾಲಯಗಳಿಗೆ ಹೊಸ ಜೀವ ತುಂಬಲು ಈ ಮಹತ್ತರವಾದ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತದ ಯುವ ಜನತೆಗೆ ಶಿಕ್ಷಣ ಮತ್ತು ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸಿ ಭಾರತವನ್ನು ವಿಶ್ವಗುರು ಮಾಡುವ ಧ್ಯೇಯ ಪ್ರಧಾನಿಯವರದ್ದಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳ ಅಮೂಲ್ಯ ಜೀವನ ರೂಪಿಸಲು ಪ್ರಧಾನಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು ಅಭಿವೃದ್ಧಿಗೆ ಐತಿಹಾಸಿಕ ಕ್ರಮ ಜಮ್ಮು- ಕಾಶ್ಮೀರ ಎಂದರೆ ಹಿಂಸಾಚಾರ, ಭಯೋತ್ಪಾದನೆಯೇ ಎಲ್ಲರ ಮನದಲ್ಲಿ ಹಾದು ಹೋಗುತ್ತಿತ್ತು. ಈಗ ಅದು ಸಂಪೂರ್ಣ ಬದಲಾಗಿದೆ. ಅಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ವಿಶ್ವವಿದ್ಯಾಲಯಗಳ ಅನುದಾನ ಬಿಡುಗಡೆ ಸೇರಿದಂತೆ ಜಮ್ಮುವಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮೋದಿಯವರು ಇಂದು ಅಲ್ಲಿಂದಲೇ ಚಾಲನೆ ನೀಡಲಿದ್ದಾರೆ. ನಾನು ಮತ್ತು ಸಂಸದೆ ಮಂಗಳಾ ಅಂಗಡಿ ಅವರು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕಮಲ್‌ನಾಥ್ ಇಂದು, ಎಂದೆಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ: ದಿಗ್ವಿಜಯ್ ಸಿಂಗ್
ಹುಬ್ಬಳ್ಳಿ: ಶಾಲೆ, ಹಾಸ್ಟೆಲ್ ಗಳಲ್ಲಿ ‘ಜ್ಞಾನ ದೆಗುಲವಿದು ಧೈರ್ಯವಾಗಿ ಪ್ರಸ್ನಿಸಿ ಎಂಬುದನ್ನು ಬರೆಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ (Congress) ಮುಟ್ಟಾಳತನವನ್ನು ತೋರ್ಪಡಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಘೋಷ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ತಿದ್ದುಪಡಿ ಮಾಡಿರುವುದು ಕಾಂಗ್ರೆಸ್‌ನ ತುಷ್ಟೀಕರಣದ ಪರಮಾವಧಿ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಕಲ್ಕಿಧಾಮ ದೇಗುಲಕ್ಕೆ ಮೋದಿ ಶಂಕುಸ್ಥಾಪನೆ- ಇದು ನನ್ನ ಸೌಭಾಗ್ಯವೆಂದ ಪ್ರಧಾನಿ
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬುದು ರಾಷ್ಟ್ರಕವಿ ಕುವೆಂಪು (Kuvempu) ಅವರ ಘೋಷವಾಕ್ಯ. ಇದನ್ನು ತಿದ್ದುಪಡಿ ಮಾಡುವ ಮೂಲಕ ಕುವೆಂಪು ಅವರಿಗೂ ಈ ಸರ್ಕಾರ ಅವಮಾನ ಮಾಡಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರ, ಕುವೆಂಪು ಅವರ ಘೋಷ ವಾಕ್ಯವನ್ನೇ ಬದಲಾಯಿಸಿದೆ. ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ದೃಷ್ಟಿಯಲ್ಲಿ ಕುವೆಂಪು ಜಾತ್ಯಾತೀತರಲ್ಲವೇ (Secular) ಎಂದು ಪ್ರಶ್ನಿಸಿದರು. ಹಿಂದೂ ವಿರೋಧಿ ನಡೆ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂದಿರುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿರುವ ಜೋಶಿ ಅವರು, ಇದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ಪರಾಕಾಷ್ಠೆ ತಲುಪಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಎಷ್ಟರ ಮಟ್ಟಿಗೆ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದೆ ಮತ್ತು ಯಾವ ಹಂತಕ್ಕೆ ತುಷ್ಟೀಕರಣ ಮಾಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಚಿವ ಜೋಶಿ ಕಿಡಿಕಾರಿದರು.
ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಚರ್ಚೆ
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬುದನ್ನು ಅಳಿಸಿ ಹಾಕಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ತಿದ್ದುಪಡಿ ಮಾಡಿರುವ ಬಗ್ಗೆ ಬಹುತೇಕ ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ಅಲ್ಲಿ ಬಿಜೆಪಿ ಚರ್ಚೆ ಮಾಡಲಿದೆ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಂದಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಿಯಾಗಿ ಸರ್ಕಾರ ನಿರ್ವಹಿಸಲಾಗದೇ ಕೇಂದ್ರದ ಮೇಲೆ ಬೊಟ್ಟು ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುಳ್ಳು ಹೇಳುವುದನ್ನ ಸಿಎಂ ಸ್ವಭಾವ ಮಾಡಿಕೊಂಡಿದ್ದಾರೆ. ಹಾಗಾಗಿ ನಾನು ಅವರನ್ನು ಸುಳ್ಳುರಾಮಯ್ಯ ಎನ್ನುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವ್ರು ಕೊಟ್ಟ ಕಾರ್ಡ್ ನೀಡಿದ್ರೆ ಮೈತ್ರಿ ಪಕ್ಷದಿಂದ ಗಿಫ್ಟ್
ನಾನು ಸುಳ್ಳು ಹೇಳಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಪದೇಪದೆ ಸುಳ್ಳು ಹೇಳುತ್ತಲೇ ಇರುತ್ತಾರೆ. ಹೇಳೋದೆಲ್ಲವೂ ಸುಳ್ಳೇ. ಅವರು ಹತ್ತು ಬಾರಿ ನಿವೃತ್ತಿ ಪಡೆಯಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: BJP- JDS ಸೀಟು ಹಂಚಿಕೆ ಇನ್ನೂ ಆಗಿಲ್ಲ: ಪ್ರಹ್ಲಾದ್ ಜೋಶಿ
ಎನ್‌ಆರ್‌ಡಿಫ್ (NRDF) ಫಂಡ್‌ನಲ್ಲಿ ಯುಪಿಎ ಯಾವತ್ತು ಹೆಚ್ಚು ಹಣ ಕೊಟ್ಟಿಲ್ಲ. ಆದರೆ ಹೆಚ್ಚುವರಿ ಮಾತ್ರವಲ್ಲದೆ ಅಡ್ವಾನ್ಸ್ ಹಣ ಕೊಡ್ತಿದ್ದೇವೆ. ಒಂದೇ ಒಂದು ರೂಪಾಯಿ ಜಿಎಸ್‌ಟಿ (GST) ಹಣ ಕೂಡ ಬಾಕಿ ಇಲ್ಲ. 10 ವರ್ಷ ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಕೇಂದ್ರ ಪಾಲಿನ ತೆರಿಗೆ ಹಂಚಿಕೆಯಲ್ಲಿ 2.85 ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ: ದೆಹಲಿ ಚಲೋ ಪ್ರತಿಭಟನೆ ನಿಗ್ರಹಕ್ಕೆ ಯತ್ನ – ಪೊಲೀಸರ ವರ್ತನೆ ಖಂಡಿಸಿ ಶುಕ್ರವಾರ ದೇಶಾದ್ಯಂತ ರಸ್ತೆ ತಡೆ
ಕೇಂದ್ರ ಸರ್ಕಾರ ವಿವಿಧ ಯೋಜನೆಗಳಲ್ಲಿ ನೀಡಿದ ಅನುದಾನ ಸಂಪೂರ್ಣವಾಗಿ ಬಳಕೆ ಆಗಿಲ್ಲ. ಫೆಬ್ರವರಿ ಅಂತ್ಯ ಬಂದರೂ ಶೇ.30 ರಿಂದ 38 ರಷ್ಟು ಅನುದಾನ ಖರ್ಚು ಆಗದೇ ಉಳಿದಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಕೇಂದ್ರದಿಂದ ಯಾವುದೇ ವಿಶೇಷ ಅನುದಾನ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರಕ್ಕೆ 50 ವರ್ಷ ಅವಧಿಗೆ 6,279 ಕೋಟಿ ರೂ. ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಬೆಂಗಳೂರಲ್ಲಿ 3 ದಿನ ಅಲ್ಲ, 2 ದಿನ ಮಾತ್ರ ಮದ್ಯ ಮಾರಾಟ ಬಂದ್
ಅನುದಾನ ವಿಚಾರವಾಗಿ ರಾಜ್ಯ ಸರ್ಕಾರದ ಡ್ಯಾಶ್‌ಬೋರ್ಡ್‌ನಲ್ಲಿ ಎಲ್ಲ ಮಾಹಿತಿ ಹಾಕಿದ್ದರು. ಅದನ್ನು ಡೌನ್‌ಲೋಡ್ ಮಾಡಲು ಬಿಜೆಪಿ ನಾಯಕರಿಗೆ ಸೂಚಿಸಿದ್ದೆ. ಅಷ್ಟರಲ್ಲಿ ಅಂಕಿ-ಅಂಶವೇ ಡಿಲೀಟ್ ಆಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಲ್ಲ ಸಲ್ಲದ್ದನ್ನು ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಜೋಶಿ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ:ರಾಜ್ಯದಲ್ಲಿ ಬೇಬಿ ಅಂಬುಲೆನ್ಸ್ ಆರಂಭ – ವಿಶೇಷತೆ ಏನು?
ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ BJP-JDS ಮೈತ್ರಿಯಲ್ಲಿ ಸೀಟು ಹಂಚಿಕೆ ಇನ್ನೂ ಯಾವುದು ಫೈನಲ್ ಆಗಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್, ಬಿಜೆಪಿ ಸೀಟು ಹಂಚಿಕೆ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ಸೇರಿದಂತೆ ಯಾವುದೇ ಕ್ಷೇತ್ರದ ಸೀಟು ಹಂಚಿಕೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ನಮ್ಮ ರಾಷ್ಟ್ರೀಯ ನಾಯಕರು ರಾಜ್ಯ ಬಿಜೆಪಿ ಘಟಕದ ಜೊತೆ ಚರ್ಚಿಸಲಿದ್ದಾರೆ. ಆನಂತರವೇ ಸೀಟು ಹಂಚಿಕೆ ನಿರ್ಧಾರವಾಗಲಿದೆ. ಈಗಿನದ್ದೆಲ್ಲ ಊಹಾಪೋಹ. ಕ್ರಿಯೆ – ಪ್ರತಿಕ್ರಿಯೆಗಳಸ್ಟೇ ಎಂದು ಸಚಿವ ಜೋಶಿ ಪ್ರತಿಕ್ರಿಯಿಸಿದರು.
ಭರ್ಜರಿ ಗೆಲುವು ಸಾಧಿಸುವೆ: ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತಯಾರಿ ನಡೆಸಿದ್ದೇನೆ. ನಾನು ಮತ್ತೆ ಭರ್ಜರಿ ಮತಗಳೊಂದಿಗೆ ಗೆಲ್ಲುತ್ತೇನೆ ಎಂದು ಇದೇ ವೇಳೆ ಜೋಶಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಸೇರ್ಪಡೆ ಜಿಲ್ಲಾಧ್ಯಕ್ಷರು ನೋಡಿಕೊಳ್ಳುತ್ತಾರೆ: ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ತುದಿಗಾಲಲ್ಲಿ ಇರುವ ಮುಖಂಡರು ಮತ್ತು ಕಾರ್ಯಕರ್ತರ ಸೇರ್ಪಡೆ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದರು.