Tag: ಪ್ರಹ್ಲಾದ್ ಜೋಶಿ

  • ಅಕ್ಕಿ ಕೊಡ್ತೀವಿ ಅಂದ್ರೂ ರಾಜ್ಯ ಸರ್ಕಾರ ತಗೋತಿಲ್ಲ – ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ

    ಅಕ್ಕಿ ಕೊಡ್ತೀವಿ ಅಂದ್ರೂ ರಾಜ್ಯ ಸರ್ಕಾರ ತಗೋತಿಲ್ಲ – ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ

    – ಹಿಮಾಚಲ ಪ್ರದೇಶದ ತರಹ ಕರ್ನಾಟಕ ಆಗುತ್ತೆ: ಎಚ್ಚರಿಕೆ

    ಹುಬ್ಬಳ್ಳಿ: ಕೇಂದ್ರದಿಂದ ಅಕ್ಕಿ ಕೊಡುತ್ತೇವೆ ಅಂದರೂ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವಾಗ ಅಕ್ಕಿ ಕೊಡ್ತೀನಿ ಅಂದರೂ ತಗೋತಿಲ್ಲ. ಮುನಿಯಪ್ಪ ಅವರು ಬಂದು ಅಕ್ಕಿ ಕೊಡ್ತೀರಾ ಅಂತಾ ಕೇಳಿದ್ರು. ನಾವು ಎಸ್ ಅಂದೀವಿ. ಆದ್ರೆ ಸಿದ್ದರಾಮಯ್ಯ ಅನುಮತಿ ಕೊಟ್ಟಿಲ್ಲ. ಯಾಕೆ ಕೊಟ್ಟಿಲ್ಲ ಅನ್ನೋದನ್ನ ಮುನಿಯಪ್ಪ ಹೇಳಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: Tumkur | ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾರು ಅಪಘಾತ – ಐವರು ದಾರುಣ ಸಾವು!

    ಇದೇ ವೇಳೆ ಕಾಂಗ್ರೆಸ್‌ನಲ್ಲಿ ಸಿಎಂ ವಿಚಾರಕ್ಕೆ ಕೋಲಾಹಲ ವಿಚಾರ ಕುರಿತು ಮಾತನಾಡಿ, ಸಿಎಂ ವಿಚಾರವಾಗಿ ಮೊದಲು ದೇಶಪಾಂಡೆ ನಾನ ರೆಡಿ ಅಂದರು. ಆಮೇಲೆ ಪರಮೇಶ್ವರ, ಡಿಕೆ ಶಿವಕುಮಾರ್ ಅಂತೂ ಮೊದಲೇ ಕಾಯ್ತಿದ್ದಾರೆ. ಎಂ.ಬಿ ಪಾಟೀಲ್‌, ಸತೀಶ್ ಜಾರಕಿಹೊಳಿ ಇನ್ನಷ್ಟು ದಿನಕ್ಕೆ ಪೋಸ್ಟರ್ ಹಾಕ್ತಾರೆ. ಕಾಂಗ್ರೆಸ್‌ನವರು ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸೋಮವಾರ ಬಂಧನ ಅವಧಿ ಮುಕ್ತಾಯ – ಜಾಮೀನು ಅರ್ಜಿ ಸಲ್ಲಿಸಲು ದರ್ಶನ್‌ ತಯಾರಿ!

    ಅಭಿವೃದ್ಧಿ ಬಗ್ಗೆ ಮಾತಾಡಿ ಅಂತ ಕೇಳಿದ್ದಾರೆ. ನಾನು ಇವಾಗ ದುಡ್ಡು ಕೊಡ್ರಪ್ಪಾ ಅಂತಾ ಕೇಳಬೇಕು. ಬರ ಪರಿಹಾರದ ದುಡ್ಡು ಕೊಟ್ಟಿಲ್ಲ. ಅನೇಕ ಕಾಂಗ್ರೆಸ್ ಶಾಸಕರು, ಅಧಿಕಾರಿಗಳು ನಮಗೆ ದುಡ್ಡು ಕೊಡಿಸಿ ಅಂತಾ ಕೇಳ್ತಿದ್ದಾರೆ. ರಸ್ತೆ ಎಲ್ಲ ಹಾಳಾಗಿವೆ, ಹುಬ್ಬಳ್ಳಿಯಲ್ಲೂ ರಸ್ತೆ ಸರಿ ಇಲ್ಲ, ಪಾಲಿಕೆಗೆ ದುಡ್ಡು ಕೊಡುತ್ತಿಲ್ಲ. ರಾಜ್ಯದಲ್ಲಿ ಆರ್ಥಿಕ ಅಸಮತಲೋತನ ಉಂಟಾಗಿದೆ. ಪ್ಲ್ಯಾನ್‌ ಇಲ್ಲದೇ ಅಸಮತೋಲನ ಉಂಟಾಗಿದೆ. ಹಿಮಾಚಲ ಪ್ರದೇಶದ ತರಹ ಕರ್ನಾಟಕ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮದ ಉನ್ನತೀಕರಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ – 5 ಕೋಟಿ ಅನುದಾನ ಘೋಷಿಸಿದ ಸಿಎಂ 

    ಮಹದಾಯಿ ರಾಜಕೀಯ ಜೋರು:
    ಶಿಗ್ಗಾಂವಿ ಉಪ ಚುನಾವಣೆ ಸನಿಹದಲ್ಲಿ ಮಹದಾಯಿ ರಾಜಕೀಯ ಜೋರಾಗಿದೆ. ಇದರ ಮಧ್ಯೆ, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ರೈತ ಮುಖಂಡರು, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ, ಜುಲೈನಲ್ಲಿ ಮೀಟಿಂಗ್ ಇತ್ತು. ರಾಜ್ಯ ಸರ್ಕಾರ ಇದನ್ನು ನಮ್ಮ ಗಮನಕ್ಕೆ ತಂದಿರಲಿಲ್ಲ ಎಂದು ಜೋಶಿ ದೂಷಿಸಿದ್ದಾರೆ. ಮಹದಾಯಿ ವಿಚಾರದಲ್ಲಿ ರಾಜ್ಯಸರ್ಕಾರ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ನಾವು ರಾಜ್ಯದ ಹಿತ ಕಾಪಾಡುವ ಕೆಲಸ ಮಾಡ್ತೀವಿ ಎಂದು ಜೋಶಿ ಹೇಳ್ಕೊಂಡಿದ್ದಾರೆ. ಸಂಸದ ಬೊಮ್ಮಾಯಿ ಕೂಡ, ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಕಾಂಗ್ರೆಸ್‌ನಿಂದಲೇ ಹಿನ್ನಡೆ ಆಗಿದೆ ಎಂದು ಕಿಡಿಕಾರಿದ್ದಾರೆ.

  • ದರ್ಶನ್‌, ಮುಡಾ ವಿಚಾರ ಬಿಡ್ರಪ್ಪ, ಮಹದಾಯಿ ವಿಚಾರ ಮಾತನಾಡಿ – ಡಿಕೆಶಿ

    ದರ್ಶನ್‌, ಮುಡಾ ವಿಚಾರ ಬಿಡ್ರಪ್ಪ, ಮಹದಾಯಿ ವಿಚಾರ ಮಾತನಾಡಿ – ಡಿಕೆಶಿ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಪ್ರಕರಣ ಡೈವರ್ಟ್ ಮಾಡಲು ರೇಣುಕಾಸ್ವಾಮಿ ಹತ್ಯೆ ಫೋಟೋ ರಿಲೀಸ್ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.

    ಬೆಂಗಳೂರಲ್ಲಿ (Bengaluru) ಮಾತನಾಡಿದ ಅವರು, ದರ್ಶನ್ (Darshan), ಮೂಡಾ ವಿಚಾರ ಬಿಡ್ರಪ್ಪ. ಮಹಾದಾಯಿ (Mahadayi Project) ವಿಚಾರದಲ್ಲಿ ಏನಾಗಿದೆ ಮಾತನಾಡಿ, ಮೊದಲು ಭದ್ರಾ ಮೇಲ್ದಂಡೆ ದುಡ್ಡು ಕೊಡಿಸ್ರಪ್ಪ. 5,300 ಕೋಟಿ ಬರಬೇಕಾದುದ್ದನ್ನ ಕೊಡಿಸಿ. ಪ್ರಹ್ಲಾದ್ ಜೋಶಿಯವರಿಂದ ಕೊಡಿಸಿ. ಆಮೇಲೆ ಅವರ ಮಾತಿನ ಬಗ್ಗೆ ಉತ್ತರ ಕೊಡೋಣ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿಲ್ಲ. ಕೇಂದ್ರದಿಂದ 5,300 ಕೋಟಿ ಹಣ ಬಂದಿಲ್ಲ. ಕೇಂದ್ರಕ್ಕೆ ಹೋಗುವ ಬಗ್ಗೆ ಚರ್ಚೆ ಮಾಡ್ತೇವೆ. ಸಿಎಂ ಜೊತೆ ಮೊದಲು ಚರ್ಚೆ ಮಾಡ್ತೇವೆ. ನಂತರ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಹೇಳ್ತೇವೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ!

    ಇದೇ ವೇಳೆ ಎತ್ತಿನಹೊಳೆ ನೀರು ಕೊಟ್ಟರೆ ಡಿಕೆಶಿಗೆ ಭಗೀರಥ ಎನ್ನುತ್ತೇವೆ ಎಂಬ ಡಾ.ಕೆ.ಸುಧಾಕರ್ ಸವಾಲನ್ನ ಸ್ವೀಕರಿಸುತ್ತೇನೆ ಅಂತ ಡಿಸಿಎಂ ಡಿಕೆಶಿ ಹೇಳಿದ್ದಾರೆ. ಸುಧಾಕರ್ ಸವಾಲನ್ನ ಸ್ವೀಕರಿಸುತ್ತೇನೆ. ನಿನ್ನೆ ಎತ್ತಿನಹೊಳೆ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ಎಲ್ಲರೂ ನಮಗೆ ಸಹಕಾರ ಕೊಟ್ಟಿದ್ದಾರೆ. ರಾಜಕೀಯವಾಗಿ ಟೀಕೆ ಮಾಡಬಹುದು. ಆದರೆ ನಾವು ನಮ್ಮ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಒಳ್ಳೆಯ ಮಳೆ ಬಿದ್ದಿದೆ ಬೆಳೆ ಆಗ್ತಿದೆ. ಎಲ್ಲಾ ವಿಘ್ನಗಳು ನಿವಾರಣೆಯಾಗಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಹಬ್ಬ

    ಇನ್ನೂ ಬಯಲು ಸೀಮೆಯಲ್ಲಿ ಕೆರೆಗಳು ತುಂಬಿಲ್ಲ. ಎತ್ತಿನಹೊಳೆ ಯೋಜನೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಚಿಕ್ಕಬಳ್ಳಾಪುರ ಸಂಸದರು ಸವಾಲ್ ಹಾಕಿದ್ದಾರೆ. ಅವರ ಸವಾಲ್ ಅನ್ನು ನಾನು ಸ್ವೀಕರಿಸುತ್ತೇನೆ. ಹಿಂದೆ ಶರಾವತಿ ಸುಟ್ಟುಹೋಗಿತ್ತು. ಅದನ್ನ ನಾವು ಸರಿಮಾಡಿದ್ದೇವೆ. ತುಂಗಭದ್ರಾ ಗೇಟ್ ಕೊಚ್ಚಿ ಹೋಗಿತ್ತು. ಅದನ್ನ ಸರಿಪಡಿಸಿದ್ದೆವು, ಈಗ ನೀರು ತುಂಬಿದೆ. ಎಲ್ಲವೂ ಸರಿಯೋಗ್ತಿದೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ: ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

    ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ 2,000 ಅಡಿಗೆ ನೀರು ಹೋಗಿದೆ. ಎತ್ತಿನಹೊಳೆಗಾಗಿ ಎಲ್ಲರೂ ಹೋರಾಟ ಮಾಡಿದ್ದರು. ಸುಧಾಕರ್ ಸೇರಿ ಎಲ್ಲರೂ ಹೋರಾಟ ಮಾಡಿದ್ದರು. ಮೊಯ್ಲಿ, ಮುನಿಯಪ್ಪನವರು ಫೈಟ್ ಮಾಡಿದ್ದರು. ತುಮಕೂರು, ದೊಡ್ಡಬಳ್ಳಾಪುರಗಳಲ್ಲೂ ಪ್ರಾಬ್ಲಂ ಇದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ. ನಾನು ವಾಪಸ್ ಬಂದ ನಂತರ ಅದನ್ನ ಬಗೆಹರಿಸುತ್ತೇನೆ ಮಾಡ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶೋತ್ಸವದ ದಿನ ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆ ಮೂಂದೂಡಿಕೆ!

  • ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ – ಶಕ್ತಿ ಪರಿವರ್ತನಾ ಶೃಂಗಸಭೆಯಲ್ಲಿ ಜೋಶಿ ಶ್ಲಾಘನೆ

    ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ – ಶಕ್ತಿ ಪರಿವರ್ತನಾ ಶೃಂಗಸಭೆಯಲ್ಲಿ ಜೋಶಿ ಶ್ಲಾಘನೆ

    – ಸೌರ ವಿದ್ಯುತ್ ಸ್ಥಾವರಗಳಿಗೆ ಶೇ.76ರಷ್ಟು ಸುಂಕ ಇಳಿಸಿ ಉತ್ತೇಜನ

    ನವದೆಹಲಿ: ಭಾರತ ಇಂದು ಪ್ರಧಾನಿ ಮೋದಿ (PM Modi) ಜೀ ಅವರ ನಾಯಕತ್ವದಲ್ಲಿ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಮೆಚ್ಚುಗೆ ವ್ಯಕ್ತಪಡಿಸಿದರು.

    ನವದೆಹಲಿಯಲ್ಲಿ (New Delhi) ಹನಿವೆಲ್ ಮತ್ತು CNBC-TV18 ಆಯೋಜಿಸಿದ್ದ ಭಾರತ ಶಕ್ತಿ ಪರಿವರ್ತನಾ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜಾಗತಿಕವಾಗಿ ಇಂಧನ ಕ್ಷೇತ್ರದಲ್ಲಿ ಶುದ್ಧ ಮತ್ತು ಸುಸ್ಥಿರ ಇಂಧನಕ್ಕಾಗಿ (Sustainable Energy) ಭಾರತ ಪ್ರಭಾವಶಾಲಿ ಹೆಜ್ಜೆಯನ್ನಿಟ್ಟಿದೆ. ಆರ್ಥಿಕತೆ ಜೊತೆಗೆ ಪರಿಸರ ಕಾಳಜಿ, ನಿರ್ವಹಣೆಗೂ ಮಹತ್ವ ನೀಡಿದೆ ಎಂದು ಹೇಳಿದರು.

    ಸೌರ ವಿದ್ಯುತ್ ಸ್ಥಾವರ ಸುಂಕ ಶೇ.76 ಇಳಿಕೆ: ಸೌರ ವಿದ್ಯುತ್ (Solar Power) ಉತ್ಪಾದನೆಗೆ ಉತ್ತೇಜನ ನೀಡಲೆಂದು ಭಾರತ ಸರ್ಕಾರ ಗ್ರಿಡ್ ಸಂಪರ್ಕಿತ ಸೌರ ವಿದ್ಯುತ್ ಸ್ಥಾವರಗಳಿಗೆ ಇದ್ದ ಸುಂಕವನ್ನು ಶೇ.76ರಷ್ಟು ಇಳಿಸಿದೆ. 2010-11ರಲ್ಲಿ ರೂ.10.95 ಇದ್ದ ಸುಂಕ 2023-24 ರ ಅವಧಿಯಲ್ಲಿ ಕೇವಲ ರೂ.2.60ಗೆ ಇಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ

    ನವೀಕರಿಸಬಹುದಾದ ಇಂಧನ (Renewable Energy) ಕ್ಷೇತ್ರ ಭಾರತೀಯ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತದ ತ್ವರಿತ ಬೆಳವಣಿಗೆ ಮತ್ತು ಆರ್ಥಿಕತೆ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ. ಈ ಕ್ಷೇತ್ರದಲ್ಲಿ ಭಾರತ ಒಂದು ಸ್ಪರ್ಧಾತ್ಮಕ ಉದ್ಯಮವನ್ನೇ ಸೃಷ್ಟಿಸಲಿದೆ. ಅಷ್ಟರ ಮಟ್ಟಿಗೆ ಸದೃಢವಾಗಿದೆ. ಭಾರತದಲ್ಲಿ ಸೌರಶಕ್ತಿಯ ವೆಚ್ಚ ವಿಶ್ವದಲ್ಲೇ ಅತ್ಯಂತ ಅಗ್ಗವಾಗಿದೆ ಎಂದು ಶ್ಲಾಘಿಸಿದರು.

    ಹೆಚ್ಚುವರಿ ವಿದ್ಯುಚ್ಛಕ್ತಿ ಸಂಗ್ರಹಿಸಲು ಯೋಜಿಸಿದ್ದು, ದೊಡ್ಡ ಪ್ರಮಾಣದ ಗ್ರಿಡ್ ಸಂಗ್ರಹಣೆಯಲ್ಲಿ ಯಶಸ್ಸು ಅತ್ಯಗತ್ಯ. ಇದಕ್ಕಾಗಿ PSP ಯೋಜನೆಗಳ ಅಭಿವೃದ್ಧಿಗೆ ವೇಗ ನೀಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಗಣೇಶ ಮತ್ತೆ ಬಂದ.. ಪರಿಸರ ಸ್ನೇಹಿ ಮೂರ್ತಿಯ ಪ್ರಯೋಜನ ನಿಮಗೆಷ್ಟು ಗೊತ್ತು?

    24,000 ಕೋಟಿ ರೂ. ವೆಚ್ಚದಲ್ಲಿ ಹೆಚ್ಚಿನ ದಕ್ಷತೆಯ ಸೌರ PV ಮಾದರಿ ಘಟಕಕ್ಕೆ PLI ಯೋಜನೆ ಜಾರಿಗೊಳಿಸುತ್ತಿದ್ದು, ಈ ಯೋಜನೆಯಡಿ 48,337 MW ಸಾಮರ್ಥ್ಯದ ಉನ್ನತ-ದಕ್ಷತೆಯ ಸೌರ PV ಮಾದರಿಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

    ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 10 ವರ್ಷಗಳಲ್ಲಿ 75.52 GW ನಿಂದ 203 GW ಗಿಂತ ಹೆಚ್ಚಾಗಿದೆ. 165 ಪ್ರತಿಶತದಷ್ಟು ಹೆಚ್ಚಳ ಕಂಡಿದೆ. ಭಾರತದಲ್ಲಿ ಒಟ್ಟು ಆರ್‌ಇ ಉತ್ಪಾದನೆಯು 193.50 ಬಿಲಿಯನ್ ಯುನಿಟ್‌ಗಳಿಂದ 2023-24ರಲ್ಲಿ 360 ಬಿಲಿಯನ್ ಯುನೈಟ್‌ಗೆ ಏರಿಕೆಯಾಗಿದೆ, ಇದು ಶೇ.86ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: Kolkata Horror | ಆರ್‌.ಜಿ ಕರ್‌ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!

    3 ತಿಂಗಳಲ್ಲಿ 2.5 ಲಕ್ಷಕ್ಕೂ ಅಧಿಕ ಸೂರ್ಯ ಘರ್:
    ತಾವು ನವೀಕರಿಸಬಹುದಾದ ಇಂಧನ ಖಾತೆ ವಹಿಸಿಕೊಂಡ ಮೇಲೆ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಛಾವಣಿಗಳಲ್ಲಿ ಸೌರ ಘಟಕಗಳನ್ನು ಸ್ಥಾಪಿಸಲಾಗಿದೆ. ಒಟ್ಟು 3.28 ಲಕ್ಷ ಅಳವಡಿಕೆಗಳ ಪೈಕಿ ಶೇ.75ಕ್ಕೂ ಹೆಚ್ಚು ಈ ಮೂರು ತಿಂಗಳಲ್ಲಿ ಆಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು.

  • ದರ ಏರಿಕೆ ನಿಯಂತ್ರಿಸಲು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

    ದರ ಏರಿಕೆ ನಿಯಂತ್ರಿಸಲು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆ ಹಿನ್ನೆಲೆ ಇದೀಗ ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ಮಾರಾಟಕ್ಕೆ ಮುಂದಾಗಿದೆ.

    ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಈರುಳ್ಳಿಯನ್ನು ವಾಹನಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ.ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ – ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯತ್ನಾಳ್

    ದೆಹಲಿಯ ಕೃಷಿ ಭವನದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಚಿಲ್ಲರೆ ಅಂಗಡಿಗಳ ಮೂಲಕ ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಪ್ರತಿ ಕಿಲೋಗ್ರಾಂಗೆ 35 ರೂ. ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

    ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಈ ಕಾರ್ಯಕ್ರಮವನ್ನು ನಿಯೋಜಿಸಲಾಗಿದೆ. ಈರುಳ್ಳಿ ಖರೀದಿ ಮಾಡಿ ಸಂಗ್ರಹಿಸಿ, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಗ್ರಾಹಕರಿಗೆ ಹೊರ ಕಡಿಮೆ ಮಾಡಲು ಕೆ.ಜಿಗೆ 35 ರೂ.ಯಂತೆ ದರ ಇಳಿಸಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: FIRE ಮನವಿಯನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ : ಸಿಎಂ

    ಕೃಷಿ ಭವನ, ಎನ್‌ಸಿಯುಐ ಸಂಕೀರ್ಣ, ರಾಜೀವ್ ಚೌಕ್ ಮೆಟ್ರೋ ನಿಲ್ದಾಣ, ಪಟೇಲ್ ಚೌಕ್ ಮೆಟ್ರೋ ನಿಲ್ದಾಣ, ಸಿಜಿಒ ಮತ್ತು ನೋಯ್ಡಾ ಮತ್ತು ಗಾಜಿಯಾಬಾದ್‌ನ ಕೆಲವು ಭಾಗಗಳು ಸೇರಿದಂತೆ 38 ಸ್ಥಳಗಳಲ್ಲಿ ಈರುಳ್ಳಿ ಮಾರಾಟ ವಾಹನಗಳ ಮೂಲಕ ಮಾರಾಟವನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

  • ಕಳಸಾ-ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆ ಕರೆಯಿರಿ- ಸಿಎಂಗೆ ಕೋನರೆಡ್ಡಿ ಒತ್ತಾಯ

    ಕಳಸಾ-ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆ ಕರೆಯಿರಿ- ಸಿಎಂಗೆ ಕೋನರೆಡ್ಡಿ ಒತ್ತಾಯ

    ಬೆಂಗಳೂರು: ಮಹದಾಯಿ (Mahadayi), ಕಳಸಾ-ಬಂಡೂರಿ (Kalasa-Banduri)ಯೋಜನೆ ಕಾಮಗಾರಿ ಪ್ರಾರಂಭ ಮಾಡುವ ಪ್ರಸ್ತಾವನೆಯನ್ನು ಕೇಂದ್ರದ ವನ್ಯಜೀವಿ ಮಂಡಳಿ ತಿರಸ್ಕಾರ ಮಾಡಿರುವ ಹಿನ್ನಲೆಯಲ್ಲಿ ಕೂಡಲೇ ಸರ್ವಪಕ್ಷಗಳ ಸಭೆ ಕರೆಯುವಂತೆ ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ಕಾಂಗ್ರೆಸ್ ಶಾಸಕ ಕೋನರೆಡ್ಡಿ (Konareddy) ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ವಿಜಯೇಂದ್ರ ಚಾಲನೆ: ರಾಜ್ಯದಲ್ಲಿ 1 ಕೋಟಿ ನೋಂದಣಿ ಗುರಿ

    ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಬಹುದಿನಗಳ ಕನಸು ಕಳಸಾ-ಬಂಡೂರಿ, ಮಹದಾಯಿ ಯೋಜನೆಗಳು. 20 ವರ್ಷಗಳಿಂದ ಹೋರಾಟ ನಡೆದುಕೊಂಡು ಬಂದಿದ್ದು, ಎಲ್ಲವೂ ಮುಗಿದಿದೆ. ಯೋಜನೆ ಪ್ರಾರಂಭವಾಗುವ ನಿರೀಕ್ಷೆ ರಾಜ್ಯದ ಜನತೆಗೆ ಇತ್ತು. ಮೊನ್ನೆ ಕೇಂದ್ರ ವನ್ಯಜೀವಿ ಮಂಡಳಿಯು ಅನುಮತಿಯನ್ನು ತಿರಸ್ಕರಿಸಿದೆ. ಸಿಎಂ ಕೂಡಲೇ ಸರ್ವಪಕ್ಷಗಳ ಸಭೆ ಮತ್ತು ಆ ಭಾಗದ ಶಾಸಕರನ್ನು ಕರೆದು ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದ್ದೇನೆ. ಸಿಎಂ ಶೀಘ್ರವೇ ಇದರ ಬಗ್ಗೆ ವಿಚಾರ ಮಾಡಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.

    ಚುನಾವಣೆ ಪೂರ್ವದಲ್ಲಿ ಬಿಜೆಪಿಯವರು ಸಾಕಷ್ಟು ಭಾಷಣ ಮಾಡಿದ್ದರು. ಮಹದಾಯಿ ಯೋಜನೆಯನ್ನು ನಾವು ಮಾಡೇ ಮಾಡುತ್ತೇವೆ ಎಂದಿದ್ದರು. ಇವತ್ತು ಬಿಜೆಪಿಯವರು ತಮ್ಮ ಮಾತನ್ನು ಮರೆತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರಿಗೆ ನಾನು ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರದಿಂದ ಯೋಜನೆ ಪ್ರಾರಂಭಕ್ಕೆ ಅನುಮತಿ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಎದೆಮೂಳೆ ಮುರಿತ, ವೃಷಣಕ್ಕೆ ಹಾನಿ; 600 ರೂ.ನ ಮೆಗ್ಗಾರ್‌ನಿಂದ ಕರೆಂಟ್ ಶಾಕ್ ಕೊಟ್ಟು ಹಿಂಸೆ

  • ರಾಯರ ಆರಾಧನೆಗೆ ಗುರುವಾರ ಬ್ರೇಕ್ ಕೊಡಿ ಅಂದ್ರೆ ಹೇಗಿರುತ್ತೆ? – ಜೋಶಿ

    ರಾಯರ ಆರಾಧನೆಗೆ ಗುರುವಾರ ಬ್ರೇಕ್ ಕೊಡಿ ಅಂದ್ರೆ ಹೇಗಿರುತ್ತೆ? – ಜೋಶಿ

    – ಅಸ್ಸಾಂ ವಿಧಾನಸಭೆಗೆ ಶುಕ್ರವಾರ 2 ಗಂಟೆ ನಮಾಜ್‌ಗೆ ಬ್ರೇಕ್ ರದ್ದುಪಡಿಸುವ ನಿರ್ಣಯ ಸ್ವಾಗತಾರ್ಹ

    ಹುಬ್ಬಳ್ಳಿ: ವಿಧಾನಸಭೆ, ಲೋಕಸಭೆ, ರಾಜ್ಯಸಭೆಗಳು ನಮಾಜ್ ಮಾಡಲು ಇವೆಯೇ? ನಾನು ಶ್ರೀ ರಾಘವೇಂದ್ರ ಸ್ವಾಮಿ ಆರಾಧಕ. ನಾನು ಅಂದು ಗುರು ರಾಯರನ್ನು ಆರಾಧಿಸಬೇಕು. 2 ತಾಸು ಸದನ ಮುಂದೂಡಿ ಅಥವಾ ಅಂದು ರಜೆ ಘೋಷಿಸಿ ಎಂದರೆ ಆಗುತ್ತದೆಯೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪ್ರಶ್ನಿಸಿದ್ದಾರೆ.

    ಶುಕ್ರವಾರವೂ ವಿಧಾನಸಭೆ ಕಲಾಪಕ್ಕೆ ಬ್ರೇಕ್ ನೀಡದೇ ಮುಂದುವರಿಸುವ ಬಗ್ಗೆ ಕೈಗೊಂಡ ಅಸ್ಸಾಂ ವಿಧಾನಸಭೆ (Assam Legislative Assembly) ನಿರ್ಣಯದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸ್ಸಾಂ ವಿಧಾನಸಭೆಯಲ್ಲಿ ಶುಕ್ರವಾರ, ಮುಸ್ಲಿಂ ಶಾಸಕರಿಗೆ ನೀಡುತ್ತಿದ್ದ 2 ಗಂಟೆ ನಮಾಜ್ (Namaz) ಬ್ರೇಕ್ ರದ್ದುಗೊಳಿಸಲು ಕೈಗೊಂಡ ನಿರ್ಣಯ ಸರಿಯಾಗಿದೆ. ಸಂಸತ್ ಮತ್ತು ವಿಧಾನಸಭೆ ನಮಾಜ್ ಮಾಡುವ ಸ್ಥಳವೇ? ಇದು ತುಷ್ಟೀಕರಣದ ಪರಮಾವಧಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜೈಲಿನಲ್ಲಿ ಬೀಡಿ, ಸಿಗರೇಟಿಗಾಗಿ ಕೈದಿಗಳ ಪ್ರತಿಭಟನೆ

    ರಾಯರ ಆರಾಧನೆಗೆ ಗುರುವಾರ ಬ್ರೇಕ್ ಕೊಡಿ ಎಂದರೆ ಹೇಗಿರುತ್ತದೆ? ನಾನು ಶ್ರೀ ರಾಘವೇಂದ್ರ ಸ್ವಾಮಿ ಆರಾಧಕ. ನನ್ನಂತೆ ಎಲ್ಲಾ ಸದಸ್ಯರು ಅವರವರ ದೈವರಾಧನೆಗೆ ಸದನಕ್ಕೆ 2 ಗಂಟೆ ವಿರಾಮ ನೀಡಿ, ಸೋಮವಾರ ರಜೆ ಕೊಡಿ, ಗುರುವಾರ ರಜೆ ಕೊಡಿ ಎನ್ನಬಹುದೇ? ಅದೆಲ್ಲ ನಡೆಯುವಂಥದ್ದೇ? ಭಾನುವಾರ ಸದನಕ್ಕೆ ಬ್ರೇಕ್ ಇದ್ದೇ ಇರುತ್ತದೆ. ನಮ್ಮ ನಮ್ಮ ವೈಯಕ್ತಿಕ ಅನುಕೂಲಕ್ಕೆ ಸೋಮವಾರ ಕೊಡಿ ಎಂದರೆ ಅದು ಎಷ್ಟರ ಮಟ್ಟಿಗೆ ಸಮಂಜಸವಾಗಿರುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!

    ಅಸ್ಸಾಂ ವಿಧಾನಸಭೆ ಮುಸ್ಲಿಂ ಶಾಸಕರಿಗೆ ಶುಕ್ರವಾರ 2 ಗಂಟೆ ಕಲಾಪಕ್ಕಿದ್ದ ವಿರಾಮವನ್ನು ರದ್ದುಪಡಿಸಲು ಕೈಗೊಂಡ ನಿರ್ಣಯ ಸ್ವಾಗತಾರ್ಹ. ಆದರೆ, ವಿಪಕ್ಷಗಳು ಇದನ್ನು ವಿರೋಧಿಸುವುದು ತುಷ್ಟೀಕರಣದ ಪರಮಾವಧಿ ಆಗಿದೆ ಮತ್ತು ಅವರ ಬೇಕೂಫಿತನವನ್ನು ಪ್ರದರ್ಶಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟಿಕೆಟ್ ಸಿಗಲಿ, ಸಿಗದೇ ಇರಲಿ ಪಕ್ಷದ ಜೊತೆ ಇರ್ತೇನೆ, ಜೆಡಿಎಸ್‌ಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇನೆ: ಸಿಪಿವೈ

  • ದುಬೈನಲ್ಲಿ ಕಾರು-ಲಾರಿ ಡಿಕ್ಕಿ: ಬೆಳಗಾವಿ ಮೂಲದ ಒಂದೇ ಕುಟುಂಬದ ನಾಲ್ವರ ಸಜೀವ ದಹನ

    ದುಬೈನಲ್ಲಿ ಕಾರು-ಲಾರಿ ಡಿಕ್ಕಿ: ಬೆಳಗಾವಿ ಮೂಲದ ಒಂದೇ ಕುಟುಂಬದ ನಾಲ್ವರ ಸಜೀವ ದಹನ

    ಬೆಳಗಾವಿ: ಒಂದು ಕುಟುಂಬದ ನಾಲ್ವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ದುಬೈನ (Dubai) ಓಮಾನ್‌ನಲ್ಲಿ (Oman) ನಡೆದಿದೆ.

    ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್ (Gokak) ತಾಲೂಕಿನ ನಿವಾಸಿಗಳಾದ ಪವನಕುಮಾರ್ ತಹಶಿಲ್ದಾರ, ಪೂಜಾ, ವಿಜಯಾ, ಆದಿಶೇಷ ಮೃತಪಟ್ಟವರು.ಇದನ್ನೂ ಓದಿ: ಶೋಭಿತಾ ಜೊತೆ ಮದುವೆ ಹೇಗಿರಬೇಕು?- ರಿವೀಲ್ ಮಾಡಿದ ನಾಗಚೈತನ್ಯ


    ದುಬೈಗೆ ತಾಯಿ, ಇಬ್ಬರು ಮಕ್ಕಳು ಹಾಗೂ ಅಳಿಯನೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಹೈಮಾ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲೇ ನಾಲ್ವರು ಸಜೀವ ದಹನಗೊಂಡಿದ್ದಾರೆ.

    ಮೃತದೇಹಗಳನ್ನು ಭಾರತಕ್ಕೆ ತರಲು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತುಕತೆ ನಡೆಸುತ್ತಿದ್ದು, ವಿದೇಶಾಂಗ ಸಚಿವ ಎಸ್.ಜೈಶಂಕರ್ (S. Jaishankar) ಹಾಗೂ ಪ್ರಹ್ಲಾದ್ ಜೋಶಿಗೆ (Pralhad Joshi) ಮನವಿ ಸಲ್ಲಿಸಿದ್ದಾರೆ.ಇದನ್ನೂ ಓದಿ: ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ- ರೌಡಿಶೀಟರ್ ಕಾಲಿಗೆ ಪಿಎಸ್‌ಐ ಗುಂಡೇಟು

  • ನಿಮ್ಮ ಜಗಳದಿಂದ ಸರ್ಕಾರ ಅಸ್ಥಿರಗೊಂಡರೆ ಅದಕ್ಕೂ ನಮಗೆ ಸಂಬಂಧವಿಲ್ಲ: ಜೋಷಿ ಕಿಡಿ

    ನಿಮ್ಮ ಜಗಳದಿಂದ ಸರ್ಕಾರ ಅಸ್ಥಿರಗೊಂಡರೆ ಅದಕ್ಕೂ ನಮಗೆ ಸಂಬಂಧವಿಲ್ಲ: ಜೋಷಿ ಕಿಡಿ

    ಬೆಂಗಳೂರು: ನಮ್ಮಿಂದ ಸರ್ಕಾರ ಅಸ್ಥಿರವಾಗುವುದಿಲ್ಲ. ನಿಮ್ಮ ಜಗಳದಿಂದ ಅಸ್ಥಿರಗೊಂಡರೆ ಅದಕ್ಕೂ ನಮಗೆ ಸಂಬಂಧವಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹೇಳಿದ್ದಾರೆ.

    ರಾಜ್ಯಪಾಲರ ಮೂಲಕ ಬಿಜೆಪಿ (BJP) ಕಾಂಗ್ರೆಸ್ ಸರ್ಕಾರ (Congress Government) ಅಸ್ಥಿರಗೊಳಿಸುವ ಆರೋಪವನ್ನು ನಿರಾಕರಿಸಿ ಪಬ್ಲಿಕ್‌ ಟಿವಿಗೆ ಅವರು ಹೇಳಿಕೆ ನೀಡಿದರು.

    ನಿಮ್ಮ ಮನೆಯನ್ನು ನೀವು ಮೊದಲು ಸರಿ ಮಾಡಿಕೊಳ್ಳಿ, ಬೇರೆಯವರ ಮೇಲೆ ಆರೋಪ ಬಿಡಿ. ಬಿಜೆಪಿ ಯಾವ ಕಾರಣಕ್ಕೂಈ ಸರ್ಕಾರ ತೆಗೆಯುವ ಉದ್ದೇಶ ಹೊಂದಿಲ್ಲ. ಸಿಎಂ ಮೇಲೆ ಆರೋಪ ಬಂದಿದೆ. ಅವರು ಶುದ್ಧರಾಗಿ ಹೊರಗೆ ಬರಲಿ. ಪಾರದರ್ಶಕ ತನಿಖೆ ನಡೆಯಲಿ ಎಂದರು. ಇದನ್ನೂ ಓದಿ: Renukaswamy Case | ಪ್ರಮುಖ ಸಾಕ್ಷಿ, ಹಾಸ್ಯ ನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ!

     

    ಸಿದ್ದರಾಮಯ್ಯ ಮೇಲೆ ನಮಗೇನೂ ಕೋಪ ಇಲ್ಲ. ಬಿಜೆಪಿ ಸರ್ಕಾರ ಅಸ್ಥಿರಗೊಳ್ಳುತ್ತಿಲ್ಲ. ನಮಗೆ ವಿಪಕ್ಷ ಆಗಿ ಕೆಲಸ ಮಾಡಲು ಜನಾದೇಶ ಕೊಟ್ಟಿದ್ದಾರೆ. ಆ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರಾಸಿಕ್ಯೂಷನ್‌ ವಾರ್‌ – ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಮುಂದಾದ ಕಾಂಗ್ರೆಸ್‌

    ಕಾಂಗ್ರೆಸ್ 58 ವರ್ಷ ಕಾಲ ದೇಶದಲ್ಲಿ ಆಡಳಿತ ಮಾಡಿದ್ದು, 92 ಬಾರಿ ಗಟ್ಟಿಮುಟ್ಟಾದ ಚುನಾಯಿತ ಸರ್ಕಾರಗಳನ್ನು ರಾಜ್ಯಪಾಲರ ಮೂಲಕ ಉರುಳಿಸಿದೆ. INDIA ಒಕ್ಕೂಟದಲ್ಲಿರುವ ಅನೇಕ ಪಕ್ಷಗಳ ಸರ್ಕಾರಗಳನ್ನು ಇವರೇ ತೆಗೆದಿದ್ದಾರೆ. ಇವರು ಈಗ ನಮಗೆ ರಾಜ್ಯಪಾಲರ ವಿಚಾರದಲ್ಲಿ ಬೋಧನೆ ಮಾಡುತ್ತಿರುವುದು ಬಹಳ ದೊಡ್ಡ ಆಶ್ಚರ್ಯ ಎಂದು ಜೋಷಿಯವರು ಠಕ್ಕರ್‌ ನೀಡಿದರು.

     

  • ರಾಜ್ಯದ 2 ಮೆಟ್ರೋ ಕಾರಿಡಾರ್‌ಗಳಿಗೆ ಕೇಂದ್ರ ಅನುಮೋದನೆ: ಪ್ರಹ್ಲಾದ್ ಜೋಶಿ

    ರಾಜ್ಯದ 2 ಮೆಟ್ರೋ ಕಾರಿಡಾರ್‌ಗಳಿಗೆ ಕೇಂದ್ರ ಅನುಮೋದನೆ: ಪ್ರಹ್ಲಾದ್ ಜೋಶಿ

    ನವದೆಹಲಿ: ನಮ್ಮ ಬೆಂಗಳೂರು ಮೆಟ್ರೋ (Namma Metro) ರೈಲು ಯೋಜನೆ 3ನೇ ಹಂತದ 2 ಕಾರಿಡಾರ್‌ಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.

    ಬೆಂಗಳೂರಿನ ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 21 ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್-1ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅನುಮೋದಿಸಿದೆ. ಇದರ ಜೊತೆಗೆ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 9 ನಿಲ್ದಾಣಗಳೊಂದಿಗೆ ಕಾರಿಡಾರ್-2ಕ್ಕೂ ಕೇಂದ್ರದಿಂದ ಅನುಮೋದನೆ ನೀಡಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: TB Dam| ಮೊದಲ ಎಲಿಮೆಂಟ್ ಅಳವಡಿಸುವ ಕಾರ್ಯ ಯಶಸ್ವಿ

    ಈ ಮೆಟ್ರೋ ರೈಲು ಯೋಜನೆ ಕಾರಿಡಾರ್ ಅನುಮೋದಿಸುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕದ ರಾಜಧಾನಿಗೆ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಳೆದ ಹತ್ತು ವರ್ಷಗಳಿಂದಲೂ ಸಮರ್ಥ ಆಡಳಿತ ನಡೆಸುವ ಜೊತೆಗೆ ರಾಷ್ಟ್ರದ ಸಂಪೂರ್ಣ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಈ ಕಾರ್ಯತತ್ಪರತೆ ರಾಜ್ಯ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವೈದ್ಯಕೀಯ ಕೋರ್ಸುಗಳ ನೋಂದಣಿಗೆ ಅಂತಿಮ ಅವಕಾಶ: ಕೆಇಎ

  • ಜಲಾಶಯ ನಿರ್ವಹಣೆಗೆ ಕೇಂದ್ರ ಸಮಿತಿ ಸಲಹೆ ಧಿಕ್ಕರಿಸಿದೆ ರಾಜ್ಯ ಸರ್ಕಾರ: ಜೋಶಿ ಆರೋಪ

    ಜಲಾಶಯ ನಿರ್ವಹಣೆಗೆ ಕೇಂದ್ರ ಸಮಿತಿ ಸಲಹೆ ಧಿಕ್ಕರಿಸಿದೆ ರಾಜ್ಯ ಸರ್ಕಾರ: ಜೋಶಿ ಆರೋಪ

    – ರಾಜ್ಯದ ಜಲಾಶಯಗಳ ವ್ಯವಸ್ಥಿತ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಲು ಸಲಹೆ

    ಹುಬ್ಬಳ್ಳಿ: ಜಲಾಶಯಗಳ (Reservoir)  ಸಮರ್ಪಕ ನಿರ್ವಹಣೆಗೆ ಕೇಂದ್ರ ಸಮಿತಿ ನೀಡಿದ ಸಲಹೆಗಳನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಆರೋಪಿಸಿದ್ದಾರೆ.

    ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ (Crest Gate) ಬಿರುಕು ಬಿಟ್ಟು ಆತಂಕ ಸೃಷ್ಟಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಜಲಾಶಯಗಳ ನಿರ್ವಹಣೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಆರೋಪಿಯ ಹೊಡೆತಕ್ಕೆ ಕನ್ನಡಕ ಒಡೆದು ಬಿದ್ದ ಗಾಜಿನಿಂದ ಕಣ್ಣಲ್ಲಿ ರಕ್ತ!

    ಬೇಸಿಗೆಯಲ್ಲಿ ಜಲಾಶಯ ಖಾಲಿ ಇದ್ದಾಗಲೆ ನಿರ್ವಹಣೆ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ಉದಾಸೀನ ತೋರಿದೆ. ಈಗದರ ಪರಿಣಾಮ ಎದುರಿಸುವಂತಾಗಿದೆ. ಕಳೆದ ಆರು ತಿಂಗಳ ಕಾಲ ಜಲಾಶಯ ಖಾಲಿ ಆಗಿತ್ತು. ರಾಜ್ಯ ಸರ್ಕಾರ ಆಗಲೇ ಸಮರ್ಪಕ ನಿರ್ವಹಣೆ ಕೈಗೊಳ್ಳಬೇಕಿತ್ತು. ಆದ್ರೆ ಅದನ್ನ ಮಾಡಲಿಲ್ಲ, ಕೇಂದ್ರ ಸರ್ಕಾರದ ಸಲಹೆಗಳನ್ನೂ ಪಾಲಿಸದೇ ಧಿಕ್ಕರಿಸಿತು. ಸರ್ಕಾರ ಮತ್ತು ನಿರ್ವಹಣೆ ಹೊಣೆ ಹೊತ್ತವರ ತೀವ್ರ ನಿರ್ಲಕ್ಷ ತೋರಿದ್ದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಜೋಶಿ ಆರೋಪಿಸಿದ್ದಾರೆ.

    ರಸ್ತೆ ರಿಪೇರಿಗೂ ಹಣವಿಲ್ಲ:
    ರಾಜ್ಯ ಸರ್ಕಾರದ ಬಳಿ ರಸ್ತೆ ರಿಪೇರಿಗೂ ಹಣವಿಲ್ಲ. ಇನ್ನು ಸಮಾನಾಂತರ ಜಲಾಶಯ ಹೇಗೆ ನಿರ್ಮಾಣ ಮಾಡುತ್ತಾರೆ? ಎಂದು ಸಚಿವ ಜೋಶಿ ಪ್ರಶ್ನಿಸಿದ್ದಾರೆ.

    ಬೇಕಾಬಿಟ್ಟಿ ಆಡಳಿತ, ಭ್ರಷ್ಟಾಚಾರದ ಫಲವಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಜಲಾಶಯಗಳ ವ್ಯವಸ್ಥಿತ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದಾರೆ.

    10 ಸಾವಿರ ಕೋಟಿ ಎಲ್ಲಿ?
    ಹಿಂದೆ ಸಿದ್ದರಾಮಯ್ಯ (Siddaramaiah) ಅವರೇ ಮುಖ್ಯಮಂತ್ರಿ ಆಗಿದ್ದಾಗ ಜಲಾಶಯಗಳ ನಿರ್ವಹಣೆಗೆ ಪ್ರತಿ ವರ್ಷ 10,000 ಕೋಟಿ ವೆಚ್ಚ ಮಾಡುವುದಾಗಿ ಹೇಳಿದ್ದರು. ಆದರೆ, ಪ್ರತಿ ವರ್ಷವಲ್ಲ ಆಡಳಿತದ 5 ವರ್ಷವೂ ಹತ್ತು ಸಾವಿರ ಕೋಟಿ ಖರ್ಚು ಮಾಡಲಿಲ್ಲ ಎಂದು ಹೇಳಿದ್ದಾರೆ.

    ರಾಜ್ಯ ಸರ್ಕಾರ ಇನ್ನಾದರೂ ತುಂಗಭದ್ರಾ ಡ್ಯಾಂ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳ ನಿರ್ವಹಣೆಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Tumkur | ವಯಸ್ಸಾಗ್ತಿದೆ ಅಂತ ಆತುರಪಟ್ರೆ ಮಕ್ಮೇಲ್‌ ಟೋಪಿ – 3 ವರ್ಷದಲ್ಲಿ 5 ಮದ್ವೆಯಾಗಿದ್ದ ಐನಾತಿ ಮಹಿಳೆ ಅರೆಸ್ಟ್

    ರೈತರಿಗೆ ಅನುಕೂಲ ಕಲ್ಪಿಸಲಿ:
    ರಾಜ್ಯ ಸರ್ಕಾರ ಕೂಡಲೇ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಸರಿಪಡಿಸಲು ಮುಂದಾಗಬೇಕು. ಈ ಮೂಲಕ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.‌