Tag: ಪ್ರಸೂತಿ ರಜೆ

  • ಮಹಿಳೆಯರಿಗೆ ಬಂಪರ್‌ – 6 ತಿಂಗಳು ಪ್ರಸೂತಿ ರಜೆಯ ಜೊತೆ 6 ತಿಂಗಳು ಮಕ್ಕಳ ಆರೈಕೆ ರಜೆ

    ಮಹಿಳೆಯರಿಗೆ ಬಂಪರ್‌ – 6 ತಿಂಗಳು ಪ್ರಸೂತಿ ರಜೆಯ ಜೊತೆ 6 ತಿಂಗಳು ಮಕ್ಕಳ ಆರೈಕೆ ರಜೆ

    ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಬಜೆಟ್‌ ಮಂಡಿಸುತ್ತಿರುವ ಸಿಎಂ ಯಡಿಯೂರಪ್ಪ ಮಹಿಳೆಯರಿಗೆ ಬಂಪರ್‌ ಯೋಜನೆಗಳನ್ನ ಪ್ರಕಟಿಸಿದ್ದಾರೆ.

    ಸಂಜೀವಿನಿ ಯೋಜನೆಯ ಅಡಿ ಮಹಿಳಾ ಸ್ವಸಹಾಯ ಸಂಘಗಳಿಗೆ 60 ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ
    ಸಣ್ಣ ಸಣ್ಣ ಆಹಾರ ಪದಾರ್ಥಗಳ ಮಾರುಕಟ್ಟೆ ಸೌಲಭ್ಯ
    ಉದ್ಯೋಗಸ್ಥ ಮಹಿಳೆಯರ ಮಕ್ಕಳ ಪಾಲನೆಗೆ ಜಿಲ್ಲಾ ಮಟ್ಟದಲ್ಲಿ 2 ಶಿಶುಪಾಲನಾ ಕೇಂದ್ರ ಸ್ಥಾಪನೆ
    ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸಲು ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ
    ವನಿತಾ ಸಂಗಾತಿ – ಗಾರ್ಮೆಂಟ್ಸ್ ಕಾರ್ಮಿಕರಿಗೆ ಉಚಿತ ಬಸ್ ಪಾಸ್

    ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಿರ್ಭಯ ಸಹಾಯ ಕೇಂದ್ರ
    ಮಹಿಳಾ ಸುರಕ್ಷತೆಗೆ ಬೆಂಗಳೂರಿನ 7.500 ಸಿಸಿಟಿವಿ ಅಳವಡಿಕೆ,ಮಹಿಳಾ ಸುರಕ್ಷತೆಗೆ ಇ-ಬೀಟ್ ವ್ಯವಸ್ಥೆ
    ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಗೋದಾಮು-ಅಂಗಡಿ ನೀಡುವಲ್ಲಿ ಶೇ.10 ರಷ್ಟು ಮೀಸಲು
    ಮಹಿಳಾ ಸರ್ಕಾರಿ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆ 6 ತಿಂಗಳು ಜೊತೆಗೆ ಸೇವಾವಧಿಯಲ್ಲಿ 6 ತಿಂಗಳು ಮಕ್ಕಳ ಆರೈಕೆ ರಜೆ
    ಮಹಿಳಾ ಪರ ಚಿಂತನೆ ಜಾರಿಗೊಳಿಸಲು ಸಿಎಂ ಮೇಲ್ವಿಚಾರಣೆಯಲ್ಲಿ ಮಹಿಳಾ ಸಬಲೀಕರಣ ಅಭಿಯಾನ

  • ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ಸಿಕ್ತು ವೇತನ ಸಹಿತ ಪ್ರಸೂತಿ ರಜೆ

    ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ಸಿಕ್ತು ವೇತನ ಸಹಿತ ಪ್ರಸೂತಿ ರಜೆ

    ತಿರುವನಂತಪುರಂ: ಕೇರಳ ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ವೇತನ ಸಹಿತ ಪ್ರಸೂತಿ ರಜೆಯನ್ನು ಕೇರಳ ಸರ್ಕಾರ ಕಲ್ಪಿಸಿದೆ.

    ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕಿಯರಿಗೆ 26 ವಾರಗಳ ಕಾಲ ಮಾತ್ರ ವೇತನ ಸಹಿತ ರಜೆ ಸಿಗುತ್ತಿತ್ತು. ಆದರೆ ಈ ಸೌಲಭ್ಯ ಕೇರಳದ ಖಾಸಗಿ ಶಾಲಾ ಶಿಕ್ಷಕಿಯರಿಗೂ ಅನ್ವಯವಾಗಲಿದೆ. ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    1961ರ ‘ಮಾತೃತ್ವ ಸೌಲಭ್ಯ ಕಾಯಿದೆ’ ಅಡಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ಪ್ರಸೂತಿ ರಜೆ ನೀಡಬೇಕೆಂದು ದೀರ್ಘಕಾಲದಿಂದ ಒತ್ತಾಯಿಸಿದ್ದರು. ಈ ವಿಚಾರವಾಗಿ ಕೇರಳ ಸರ್ಕಾರವು ಕೇಂದ್ರ ಸರ್ಕಾರದಿಂದ ಅನುಮತಿ ಕೋರಿತ್ತು. ಸದ್ಯ ಕೇಂದ್ರ ಸರ್ಕಾರವು ಇದಕ್ಕೆ ಅನುಮೋದನೆ ನೀಡಿದೆ.

    ಹೊಸ ಕಾಯ್ದೆ ಪ್ರಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಾವಿರಾರು ಶಿಕ್ಷಕಿಯರು, ಮಹಿಳಾ ಉದ್ಯೋಗಿಗಳು ಈಗಿನಿಂದ ಸರ್ಕಾರಿ ಶಾಲಾ ಶಿಕ್ಷಕಿಯರು ಹಾಗೂ ಮಹಿಳಾ ಉದ್ಯೋಗಿಗಳಂತೆ 26 ವಾರಗಳ ಮಾತೃತ್ವ ರಜೆ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಶಿಕ್ಷಣ ಸಂಸ್ಥೆಯು ಉದ್ಯೋಗಿಗೆ ತಿಂಗಳಿಗೆ 1,000 ರೂ.ಗಳ ವೈದ್ಯಕೀಯ ಭತ್ಯೆಯನ್ನು ಸಹ ಪಾವತಿಸಬೇಕಾಗುತ್ತದೆ.

    ಭಾರತದಲ್ಲಿ 1961ರ ‘ಮಾತೃತ್ವ ಸೌಲಭ್ಯ ಕಾಯಿದೆ’ಯು ಉದ್ಯೋಗದಲ್ಲಿರುವ ತಾಯಂದಿರಿಗೆ ಹೆರಿಗೆ ರಜೆ ಮತ್ತು ಇತರೆ ಸೌಲಭ್ಯ ಕಲ್ಪಿಸಿಕೊಟ್ಟಿತು. ಆದರೆ ಅಗತ್ಯದಷ್ಟು ರಜೆ, ಶಿಶುವಿಗೆ ಹಾಲುಣಿಸಲು ಬಿಡವು, ಕುಂದು ಕೊರತೆಗಳನ್ನಾಲಿಸಲು ಸೌಲಭ್ಯಗಳಿಲ್ಲದೆಯೇ ಕಾನೂನು ಅಪೂರ್ಣವಾಗಿತ್ತು. ಇದರಿಂದಾಗಿ 2017ರಲ್ಲಿ ಈ ಕಾನೂನಿಗೆ ತಿದ್ದುಪಡಿ ತಂದು, 26 ವಾರಗಳ (ಆರು ತಿಂಗಳು) ಹೆರಿಗೆ ರಜೆಯನ್ನು ಮೊದಲ ಎರಡು ಹೆರಿಗೆಗೆ ನೀಡಲಾಗಿದೆ.

    ಇದರ ಜೊತೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳಿಗೆ ಕನಿಷ್ಠ ವೇತನ ಪ್ರಮಾಣವನ್ನು ನಿಗದಿಪಡಿಸುವತ್ತ ಕೇರಳ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆಗಸ್ಟ್ 29ರಂದು ಕರೆದಿದ್ದ ಕ್ಯಾಬಿನೆಟ್ ಸಭೆಯಲ್ಲಿ ಈ ಸಂಬಂಧ ಚರ್ಚೆಯಾಗಿದೆ. ಈ ಮೂಲಕ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಕಾರ್ಮಿಕರ ಪ್ರಸ್ತುತ ನಿಗದಿತ ವೇತನ ಭತ್ಯೆಯನ್ನು ದಿನಕ್ಕೆ 150 ರೂ.ಗಳಿಂದ 600 ರೂ.ಗೆ ಹೆಚ್ಚಿಸಲು ಕೇರಳ ಸರ್ಕಾರ ಒತ್ತಾಯಿಸಿದೆ.