Tag: ಪ್ರಸಾರ

  • ನಾಳೆಯೇ ಜೀ ಕನ್ನಡದಲ್ಲಿ ಯೋಗರಾಜ್ ಭಟ್ಟರ ‘ಗಾಳಿಪಟ 2 ‘ ಹಾರಾಟ

    ನಾಳೆಯೇ ಜೀ ಕನ್ನಡದಲ್ಲಿ ಯೋಗರಾಜ್ ಭಟ್ಟರ ‘ಗಾಳಿಪಟ 2 ‘ ಹಾರಾಟ

    ಗಾಳಿಪಟ 2 (Gaalipata 2) ಈ ವರ್ಷ ಬಿಡುಗಡೆಗೊಂಡು ಭರ್ಜರಿಯಾಗಿ ಪ್ರೇಕ್ಷಕರ ಮನಗೆದ್ದ ಸೂಪರ್ ಹಿಟ್ ಸಿನಿಮಾ. ಕನ್ನಡ ಭಾಷಾ ವಿಶೇಷತೆ , ಅಸ್ಮಿತೆಯನ್ನು ಸಾರುವ ಈ ಚಿತ್ರ ಇದೇ ಶನಿವಾರ ಮತ್ತು ಭಾನುವಾರ ಸಂಜೆ 4:30ಕ್ಕೆ ಕನ್ನಡದ ನವೆಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.

    ತನ್ನ ವೀಕ್ಷಕರಿಗೆ ವಿಶೇಷ ಕಾರ್ಯಕ್ರಮಗಳು ನೀಡುವುದರ ಮೂಲಕ ಸದಾ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿ ಈಗಾಗಲೇ ಹಲವಾರು ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ಪ್ರಸಾರ ಮಾಡಿದ್ದು ಇದೀಗ ಗಾಳಿಪಟ 2 ಚಲನಚಿತ್ರವನ್ನು ತನ್ನ ವೀಕ್ಷಕರ ಮುಂದಿಡಲು ಸಜ್ಜಾಗಿದೆ. ಇದನ್ನೂ ಓದಿ:Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್‌

    ವಿಕಟ ಕವಿ, ಯೋಗರಾಜ್ ಭಟ್ (Yogaraj Bhatt) ನಿರ್ದೇಶನವಿರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) , ದಿಗಂತ್ (Diganth), ಪವನ್ ಕುಮಾರ್ (Pawan Kumar), ಹಿರಿಯನಟ ಅನಂತ್ ನಾಗ್ (Ananth Nag) , ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಅವರು ಸಂಗೀತ ಸಂಯೋಜನೆ ಮಾಡಿದ್ದು ಹಾಡುಗಳು ಸಂಗೀತಪ್ರಿಯರ ಹೃದಯಕ್ಕೆ ಹತ್ತಿರವಾಗಿರುವುದು ವಿಶೇಷ.

    ಅಳು, ನಗು ಸಂಬಂಧಗಳ ಮೌಲ್ಯವನ್ನು ತಿಳಿಸುವ ಬದುಕಿನ ಭಾವುಕತೆ ತೆರೆದಿಡುತ್ತಲೇ ತಾಜಾ ಅನುಭವ ನೀಡುವ ಸಿನಿಮಾ ಇದ್ದಾಗಿದ್ದು ಬಾಕ್ಸ್ ಆಫೀಸ್‌ನ್ನೂ ಲೂಟಿ ಮಾಡಿತ್ತು. ಅಷ್ಟೇ ಅಲ್ಲದೆ ಜೀ5 ನಲ್ಲೂ 100Cr+ ವೀಕ್ಷಣೆ ಪಡೆದ ಚಲನಚಿತ್ರವಾಗಿದೆ ಈ ಗಾಳಿಪಟ 2. ಇನ್ನೂ ಇದೇ ಶನಿವಾರ ಮತ್ತು ಭಾನುವಾರ ಸಂಜೆ 4:30ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾಹದಿಂದ ರದ್ದಾದ ಮದುವೆಗೆ ಮರುಜೀವ ನೀಡಿದ ಸಂಘಟನೆಗಳು!

    ಪ್ರವಾಹದಿಂದ ರದ್ದಾದ ಮದುವೆಗೆ ಮರುಜೀವ ನೀಡಿದ ಸಂಘಟನೆಗಳು!

    ಮಡಿಕೇರಿ: ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ರದ್ದಾದ ಮದುವೆಗೆ ಸಂಘಟನೆಗಳು ಮುಂದೆ ನಿಂತು ಮರುಜೀವ ನೀಡಿದ್ದಾರೆ.

    ಎಮ್ಮೆತ್ತಾಳು ಗ್ರಾಮದಲ್ಲಿ ನಡೆಯಬೇಕಿದ್ದ ಮಂಜುಳಾ ಹಾಗೂ ರಜೀಶ್ ಪ್ರವಾಹದಿಂದಾಗಿ ರದ್ದಾಗುವ ಹಾಗೆ ಮಾಡಿತ್ತು. ಹಸಮಣೆ ಏರಬೇಕಿದ್ದ ವಧು ಹಾಗೂ ಕುಟುಂಬದವರ ಎಲ್ಲಾ ವಸ್ತುಗಳನ್ನ ಭೀಕರ ಪ್ರವಾಹ ಆಹುತಿ ಮಾಡಿಕೊಂಡು ಹೋಗಿತ್ತು. ಪ್ರವಾಹಕ್ಕೆ ಸಿಲುಕಿದ್ದ ವಧುವಿನ ಕುಟುಂಬದವರು ಎಲ್ಲಾ ಕಳೆದುಕೊಂಡು ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು.

    ಇನ್ನೇನು ಮಗಳ ಮದುವೆ ನಿಂತೇ ಹೋಯಿತಲ್ಲ ಎಂಬ ಚಿಂತೆಯಲ್ಲಿದ್ದ ಕುಟುಂಬದವರಿಗೆ ಸಾರ್ವಜನಿಕರು ಹಾಗೂ ಸಂಘಟನೆಗಳು ಸಹಾಯ ಹಸ್ತ ಚಾಚಿದ್ದು, ನಿಗದಿತ ದಿನಾಂಕದಂತೆ ಮದುವೆ ಮಾಡಲು ತೀರ್ಮಾನಿಸಿ, ಇಂದು ಬೆಳಗ್ಗೆ ಮದುವೆ ಮಾಡಲು ಮುಂದಾಗಿದ್ದಾರೆ.

    ಈ ಮೊದಲು ಕುಟುಂಬದವರು ಮಕ್ಕಂದೂರು ಸಭಾಂಗಣದಲ್ಲಿ ಮದುವೆ ಮಾಡಲು ನಿಶ್ಚಯಿಸಿದ್ದರು, ಆದರೆ ಪ್ರವಾಹಕ್ಕೆ ಸಿಲುಕಿದ್ದರಿಂದ ಮಡಿಕೇರಿಯಲ್ಲೇ ಮದುವೆ ಮಾಡಲು ಮುಂದಾಗಿದ್ದಾರೆ. ಪ್ರವಾಹದಿಂದ ಜೀವನವನ್ನೇ ಕಳೆದುಕೊಂಡ ಕುಟುಂಬಕ್ಕೆ ಆಸರೆಯಾದ ಸಾರ್ವಜನಿಕರಿಂದ, ಕುಟುಂಬದವರು ತಮ್ಮ ಎಲ್ಲಾ ನೋವನ್ನು ಮರೆತು ಮದುವೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

    ಪ್ರವಾಹದಿಂದಾಗಿ ಮಕ್ಕೋಡ್ಲುವಿನ ಮಂಜುಳಾ ಹಾಗೂ ರಂಜಿತಾ ಎಂಬ ಯುವತಿಯರ ಮದುವೆಗಳು ರದ್ದಾಗುವ ಸ್ಥಿತಿಯಲ್ಲಿದ್ದವು. ಅಗಸ್ಟ್ 26 ಕ್ಕೆ ಮಂಜುಳ ಮದುವೆ ನಿಗದಿಯಾಗಿದ್ದರೆ, ಸೆಪ್ಟೆಂಬರ್ 12 ಕ್ಕೆ ರಂಜಿತಾ ವಿವಾಹ ನಿಗದಿಯಾಗಿತ್ತು. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದ ಎರಡು ಕುಟುಂಬಗಳು ಬಗ್ಗೆ ಪಬ್ಲಿಕ್ ಟಿವಿ ವಿಸ್ತ್ರತ ವರದಿಯನ್ನು ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಗಮನಿಸಿದ ಸಿಎಂ ಕುಮಾರಸ್ವಾಮಿಯವರು ಯುವತಿಯರ ಮದುವೆಗೆ ನೆರವು ನೀಡಿದ್ದರು. ಹೀಗಾಗಿ ಇಂದು ಸರ್ಕಾರ ಹಾಗೂ ಸಂಘಟನೆಗಳ ಸಹಾಯದಿಂದ ಮದುವೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv