Tag: ಪ್ರಸಾದ್ ಬಿದ್ದಪ್ಪ

  • ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

    ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

    ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಸುದ್ದಿ ಹಲವು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿಯಾಗಿಯೇ ಹರಿದಾಡುತ್ತಿದೆ. ಈ ರೀತಿಯ ಸುದ್ದಿ ಬಂದಾಗೆಲ್ಲ ಸುಮಲತಾ ಅಂಬರೀಶ್ ಅದನ್ನು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಮೊನ್ನೆಯಷ್ಟೇ ಅಭಿಷೇಕ್ ಅಂಬರೀಶ್ ಕೂಡ ಇದೆಲ್ಲ ಸುಳ್ಳು ಸುದ್ದಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಅಂಬರೀಶ್ ಕುಟುಂಬದ ಆಪ್ತರ ಪ್ರಕಾರ ಡಿಸೆಂಬರ್ 11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ.

    ಹಲವು ವರ್ಷಗಳಿಂದ ಪರಿಚಯವಿರುವ ತಮ್ಮ ಗೆಳತಿಯನ್ನೇ ಅಭಿಷೇಕ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಎನ್ನುತ್ತವೆ ಆಪ್ತ ಮೂಲಗಳು. ಅಭಿಷೇಕ್ ಎಂಗೇಜ್ ಮೆಂಟ್ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದ್ದು, ಈಗಾಗಲೇ ರಜನಿಕಾಂತ್ ಸೇರಿದಂತೆ ದಕ್ಷಿಣದ ಹಲವು ದಿಗ್ಗಜರಿಗೆ ಆಹ್ವಾನ ಕೂಡ ಹೋಗಿದೆಯಂತೆ. ಇದನ್ನೂ ಓದಿ: ಬಿಕಿನಿ ತೊಟ್ಟು ಪೋಸ್‌ ಕೊಟ್ಟ ನಿವೇದಿತಾಗೆ ಬೆವರಿಳಿಸಿದ ನೆಟ್ಟಿಗರು

    ಅಭಿಷೇಕ್ ಅಂಬರೀಶ್ ಅವರ ಸ್ನೇಹಿತೆಯಾಗಿರುವ ಅವಿದಾ ಬಿದ್ದಪ್ಪ ಅವರೇ ಅಭಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿಯಾಗಿದ್ದಾರೆ. ಹಲವು ವರ್ಷಗಳಿಂದ ಅಭಿಷೇಕ್ ಮತ್ತು ಅವಿದಾ ಫ್ರೆಂಡ್ಸ್ ಎನ್ನುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಈ ಗೆಳೆತನವೇ ಪ್ರೇಮಕ್ಕೆ ತಿರುಗಿ ಇದೀಗ ಹಸಮಣೆ ಹತ್ತಿಸುತ್ತಿದೆ.

    ನಿನ್ನೆಯಷ್ಟೇ ಅಭಿಷೇಕ್ ಅವರ ಹೊಸ ಸಿನಿಮಾದ ಮುಹೂರ್ತವಾಗಿದ್ದು, ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಭಿ ಅವರ ಎಂಗೇಜ್ ಮೆಂಟ್ ಮುಗಿದ ನಂತರ ಚಿತ್ರೀಕರಣ ಶುರು ಆಗಲಿದೆ. ಅಲ್ಲದೇ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲೂ ಅಭಿ ನಟಿಸಿದ್ದು, ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಮುಗಿಸ್ಬಿಡ್ತೀನಿ ಅಂತಾನೆ: ಗಂಭೀರ ಆರೋಪ ಮಾಡಿದ ನಟಿ ಸಂಜನಾ

    ನನ್ನ ಮುಗಿಸ್ಬಿಡ್ತೀನಿ ಅಂತಾನೆ: ಗಂಭೀರ ಆರೋಪ ಮಾಡಿದ ನಟಿ ಸಂಜನಾ

    ಫ್ಯಾಶನ್ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ ನಟಿ ಸಂಜನಾ. ಮಾಧ್ಯಮಗಳ ಜತೆ ಮಾತನಾಡಿದ ಅವರು, “ಆಡಂ ನನಗೆ ನೇರವಾಗಿ ಪರಿಚಯವೇ ಇಲ್ಲ. ಅವರ ತಂದೆಯೊಂದಿಗೆ ನಾನು ಕೆಲಸ ಮಾಡಿದ್ದೇನೆ. ಅವರು ತುಂಬಾ ಒಳ್ಳೆಯವರು. ಆದರೆ, ಈ ಹುಡುಗನಿಗೆ ಏನಾಗಿದೆ ಅಂತ ನನಗೆ ಗೊತ್ತಿಲ್ಲ. ರಾತ್ರಿಯೆಲ್ಲ ಅಶ್ಲೀಲ ಮಸೇಜ್ ಕಳಿಸ್ತಾನೆ. ತನ್ನೊಂದಿಗೆ ಚಾಟ್ ಮಾಡುವಂತೆ ಒತ್ತಾಯಿಸುತ್ತಾನೆ. ಖಾರವಾಗಿ ನಾನು ರಿಯಾಕ್ಟ್ ಮಾಡಿದಾಗ, ನನ್ನ ಮುಗಿಸ್ಬಿಡ್ತೀನಿ ಅಂತ ಹೆದರಿಸುತ್ತಾನೆ’ ಎಂದು ನಟ ಸಂಜನಾ ಆರೋಪಿಸುತ್ತಾರೆ. ಇದನ್ನೂ ನೋಡಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ

    ಇಂತಹ ಕಿರಿಕಿರಿಯಿಂದಲೇ ಅವರು ಅನೇಕ ಬಾರಿ ಮೊಬೈಲ್ ನಂಬರ್ ಬದಲಾಯಿಸಿದ್ದಾರಂತೆ. ಮತ್ತೆ ಮತ್ತೆ ನಂಬರ್ ಬದಲಾಯಿಸಿದರೆ, ವೃತ್ತಿಗೆ ತೊಂದರೆ ಆಗುವುದರಿಂದ ಇನ್ಮುಂದೆ ಇಂತಹ ಘಟನೆಗಳನ್ನು ಅವರು ಗಂಭೀರವಾಗಿಯೇ ತಗೆದುಕೊಳ್ಳುತ್ತಾರಂತೆ. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

    ಪ್ರಕರಣವನ್ನು ಅಂತ್ಯದವರೆಗೂ ತಗೆದುಕೊಂಡು ಹೋಗುವುದಾಗಿಯೂ ಅವರು ಮಾತನಾಡಿದ್ದಾರೆ. ಏಳು ತಿಂಗಳು ಗರ್ಭಿಣಿಯಾಗಿರುವ ಸಂಜನಾಗೆ ತುಂಬಾ ಮಾನಸಿಕ ಹಿಂಸೆ ಕೊಡುವಂತಹ ಕೆಲಸಗಳು ನಡೆಯುತ್ತಿವೆಯಂತೆ. ಹಾಗಾಗಿ ಪೊಲೀಸ್ ರ ಮೊರೆ ಹೋಗುವುದು ಅನಿವಾರ್ಯ ಅಂದಿದ್ದಾರೆ. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು

    ಪ್ರಸಾದ್ ಬಿದ್ದಪ್ಪ ಪುತ್ರ ಆಡಂನನ್ನು ಈಗಾಗಲೇ ಇಂದಿರಾ ನಗರ ಪೊಲೀಸ್ ರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆಗಲೇ ಅವನು ಸಂಜನಾ ಜತೆ ಮಾಡಿದ್ದ ಚಾಟ್ ಗಳನ್ನು ಡಿಲಿಟ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಡಿಲಿಟ್ ಆದ ಚಾಟ್ ಅನ್ನು ಮತ್ತೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾರಂತೆ ಪೊಲೀಸ್ ಅಧಿಕಾರಿಗಳು.

  • ಆತ ವಾರದಿಂದ ಮಾನಸಿಕ ಹಿಂಸೆ ಕೊಟ್ಟಿದ್ದಾನೆ : ಫ್ಯಾಶನ್ ಐಕಾನ್ ಪುತ್ರನ ವಿಚಿತ್ರ ಖಯಾಲಿ ಬಿಚ್ಚಿಟ್ಟ ನಟಿ ಸಂಜನಾ

    ಆತ ವಾರದಿಂದ ಮಾನಸಿಕ ಹಿಂಸೆ ಕೊಟ್ಟಿದ್ದಾನೆ : ಫ್ಯಾಶನ್ ಐಕಾನ್ ಪುತ್ರನ ವಿಚಿತ್ರ ಖಯಾಲಿ ಬಿಚ್ಚಿಟ್ಟ ನಟಿ ಸಂಜನಾ

    ಒಂದು ಕಾಲದಲ್ಲಿ ಫ್ಯಾಶನ್ ಐಕಾನ್ ಪ್ರಸಾದ್ ಬಿದ್ದಪ್ಪ ಅವರ ಶೋಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ನಟಿ ಸಂಜನಾ, ಇದೀಗ ಬಿದ್ದಪ್ಪ ಅವರ ಪುತ್ರ ಆಡಂ ಬಿದಪ್ಪ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ತಮ್ಮ ಮೊಬೈಲ್ ಗೆ ಆಡಂನಿಂದ ಅಶ್ಲೀಲ, ನಿಂದನಾತ್ಮಕ ಮತ್ತು ಮಾನಸಿಕ ಹಿಂಸೆ ಆಗುವಂತಹ ಮಸೇಜ್ ಗಳು ಬಂದಿವೆ ಎಂದು ಆರೋಪ ಮಾಡಿದ್ದಾರೆ. ಈಗಾಗಲೇ ಆಡಂ ನನ್ನು ವಶಕ್ಕೆ ಪಡೆದಿರುವ ಇಂದಿರಾ ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದಿರುವ ನಟಿ ಸಂಜನಾ, ಮಾಧ್ಯಮಗಳಿಗೆ ಸುದೀರ್ಘ ಎರಡು ಪುಟಗಳಷ್ಟು ಪತ್ರವನ್ನು ಬರೆದಿದ್ದಾರೆ. ಇದನ್ನೂ ಓದಿ : ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಪ್ರಸ್ತಾಪ

    ನಾನು ಅಗ್ಗದ ಪ್ರಚಾರ ಬಯಸಲಾರೆ. ನನಗೆ ಅದರ ಅಗತ್ಯವೂ ಇಲ್ಲ. ಹಾಗಾಗಿ ಮಾಧ್ಯಮಗಳ ಮುಂದೆ ಬರಲು ಹಿಂದೇಟು ಹಾಕುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆಡಂನಿಂದ ತಮಗಾದ ತೊಂದರೆಯನ್ನು ಎಳೆ ಎಳೆಯಾಗಿ ಅವರು ಬಿಚ್ಚಿಟ್ಟಿದ್ದು, ಫೆ. 25 ರಂದು ರಾತ್ರಿ 11 ಗಂಟೆಗೆ ಕುಡಿದ ಮತ್ತಿನಲ್ಲಿದ್ದ ಆಡಂ ತಮಗೆ ಅಶ್ಲೀಲ ಮಸೇಜ್ ಗಳನ್ನು ಕಳುಹಿಸುವ ಮೂಲಕ ಮಾನಸಿಕ ದಾಳಿ ಮಾಡಿದ್ದಾನೆ. ಇದರಿಂದ ನಾನು ಮತ್ತು ನನ್ನ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಅಸಹ್ಯಕರವಾಗಿದ್ದ ಆ ಮಸೇಜ್ ಗಳಿಂದ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ನಾನು ಕಾನೂನು ಮೊರೆ ಹೋಗಬೇಕಾಯಿತು. ಏಳು ತಿಂಗಳು ಗರ್ಭಿಣಿ ನಾನು. ಹಾಗಾಗಿ ನನ್ನ ಮನಸ್ಸಿನಲ್ಲಿ ನಕಾರಾತ್ಮಕ ಅಂಶಗಳು ಘಾಸಿ ಮಾಡಬಾರದೆಂದು ವಿಐಪಿ ಮಗನ ವಿರುದ್ಧ ದೂರು ದಾಖಲಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಪದೇ ಪದೇ ಟಾರ್ಗೆಟ್ ಆಗುತ್ತಿದ್ದೇನೆ

    ನನ್ನದಲ್ಲದ ತಪ್ಪಿಗೆ ಪದೇ ಪದೇ ನಾನು ಟಾರ್ಗೆಟ್ ಆಗುತ್ತಿದ್ದೇನೆ. ನಾನು ಯಾರ ಜೀವನದಲ್ಲೂ ಪ್ರವೇಶ ಪಡೆಯಲು ಬಯಸುವುದಿಲ್ಲ. ಆದರೆ, ಯಾರಾದರೂ ನನ್ನ ಜೀವನಕ್ಕೆ ಎಂಟ್ರಿ ಕೊಟ್ಟರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಅಂಥವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನನ್ನ ವಿರುದ್ಧ ಸಲ್ಲದ ಆರೋಪ ಮಾಡುವವರು, ನನ್ನ ಕುಟುಂಬಕ್ಕೆ ತೊಂದರೆ ಕೊಡಲು ಬಂದವರನ್ನು ಸುಮ್ಮನೆ ಬಿಡಲಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ ಸಂಜನಾ. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಸವಾಲಿನ ಎರಡು ವರ್ಷಗಳು

    ಕಳೆದ ಒಂದೆರಡು ವರ್ಷಗಳಲ್ಲಿ ನನ್ನ ಜೀವನ ಏನೆಲ್ಲ ಅಡೆತಡೆಗಳನ್ನು ಎದುರಿಸಿದೆ. ಈ ಎರಡು ವರ್ಷಗಳಲ್ಲಿ ನಾನು ಸಾಕಷ್ಟು ನೊಂದಿದ್ದೇನೆ. ಕೆಟ್ಟ ದಿನಗಳನ್ನು ಎದುರಿಸಿದ್ದೇನೆ. ನನ್ನ ಅಧ್ಯಾತ್ಮಿಕ ಮನಸ್ಸು ಮತ್ತು ಸಕಾರಾತ್ಮಕ ಭಾವನೆಗಳು ನನಗೆ ಚೈತನ್ಯ ತುಂಬಿವೆ. ಒಂದೊಳ್ಳೆ ದಿನಗಳು ಮತ್ತೆ ನನ್ನ ಬಾಳಲ್ಲಿ ಬರುತ್ತೇವೆ ಎನ್ನುವ ಹೊತ್ತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಎಂದು ಆಡಂ ಪ್ರಕರಣದ ಬಗ್ಗೆ ಉಲ್ಲೇಖಿಸಿದ್ದಾರೆ ಸಂಜನಾ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಕಿರುಕುಳ ಕೊಡುವುದು ಆಡಂ ಚಟ

    ಆಡಂ ತಮ್ಮೊಂದಿಗೆ ನಡೆದುಕೊಂಡ ಬಗ್ಗೆ ಅವರ ಪಾಲಕರಿಗೆ ತಿಳಿಸಿದ್ದೆ. ಅವನು ಕುಡಿದ ಮತ್ತಿನಲ್ಲಿದ್ದಾಗ ಹೀಗೆ ಕಿರುಕುಳ ಕೊಡುವುದು ಸಾಮಾನ್ಯ ಅಭ್ಯಾಸ ಆಗಿ ಹೋಗಿದೆ ಎಂದು ಆತನ ತಾಯಿ ತಿಳಿಸಿದರು. ಅವರ ಪಾಲಕರಿಗೆ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ, ಆಡಂ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ ಸಂಜನಾ.

  • ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್?: ಶಾಕ್‌ನಲ್ಲಿ ನಟಿ ಸಂಜನಾ

    ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್?: ಶಾಕ್‌ನಲ್ಲಿ ನಟಿ ಸಂಜನಾ

    ಒಂದಿಲ್ಲೊಂದು ಕಾರಣದಿಂದಾಗಿ ಸದಾ ಸದ್ದು ಮಾಡುವ ನಟಿ ಸಂಜನಾ, ಈಗ ಮತ್ತೆ ಸುದ್ದಿಗೆ ಆಹಾರವಾಗಿದ್ದಾರೆ. ಈ ಬಾರಿ ಫ್ಯಾಷನ್ ಲೋಕದ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ತಾವೀಗ ಏಳು ತಿಂಗಳ ಗರ್ಭಿಣಿ, ಸಲ್ಲದ ಕಾರಣಕ್ಕಾಗಿ ಸುಖಾಸುಮ್ಮನೆ ನನಗೆ ತೊಂದರೆ ನೀಡಲಾಗುತ್ತಿದೆ ಎಂದಿದ್ದಾರೆ ಸಂಜನಾ. ಇದನ್ನೂ ಓದಿ : ರವಿಚಂದ್ರನ್ ಸಿನಿಮಾ ಹಿರೋಯಿನ್ ಈಗ ನಿರ್ದೇಶಕಿ

    “ನನ್ನ ಜೀವನದಲ್ಲಿ ಈ ಎರಡು ವರ್ಷಗಳು ಅತ್ಯಂತ ನೋವಿನ ವರ್ಷಗಳಾಗಿವೆ. ಒಂದಿಲ್ಲೊಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದೇನೆ. ನಾನು ಮಾಡದೇ ಇರುವ ತಪ್ಪಿಗೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಅವಮಾನಿಸಲಾಗುತ್ತಿದೆ. ಪ್ರತಿ ಸಲವೂ ಗಟ್ಟಿಗೊಳ್ಳುತ್ತಾ, ಮುಂದಿನ ಬದುಕಿನ ಬಗ್ಗೆ ಯೋಚಿಸುತ್ತಾ ಹೋಗುತ್ತಿದ್ದೇನೆ. ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿದೆ. ಎಂತಹ ಸಂದರ್ಭ ಬಂದರೂ ನಾನು ಎದುರಿಸುತ್ತೇನೆ” ಎಂದು ಸುದೀರ್ಘವಾಗಿ ಪತ್ರ ಬರೆದಿದ್ದಾರೆ ಸಂಜನಾ. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

    ಸದ್ಯ ಸಂಜನಾ ಏಳು ತಿಂಗಳ ಗರ್ಭಿಣಿ. ತಾಯ್ತನವನ್ನು ನೆಮ್ಮದಿಯಿಂದ ಅನುಭವಿಸಬೇಕಾದ ಈ ಸಂದರ್ಭದಲ್ಲಿ ತಮಗೆ ವಿಪರೀತ ತೊಂದರೆ ಆಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇಂತಹ ಪ್ರಕರಣದಿಂದ ತಾವು ಮಾತ್ರವಲ್ಲ, ತಮ್ಮ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಕುಡಿದ ಮತ್ತಿನಲ್ಲಿ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆಡಂ ಸಾಕಷ್ಟು ಬಾರಿ ಸಂಜನಾ ಅವರಿಗೆ ಕೆಟ್ಟದ್ದಾಗಿ ಮಸೇಜ್ ಕಳುಹಿಸಿದ್ದಾನಂತೆ. ಚಾರಿತ್ರ್ಯ ಹರಣ ಮಾಡುವಂತಹ ಸಂದೇಶಗಳು ಅವಾಗಿವೆ ಎಂದು ಸಂಜನಾ ಆರೋಪಿಸಿದ್ದಾರೆ ಮತ್ತು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಸದ್ಯ ಆಡಂ ಪೊಲೀಸ್ ರ ಅತಿಥಿಯಾಗಿದ್ದಾನೆ.