Tag: ಪ್ರಸಾದ್ ಅಬ್ಬಯ್ಯ

  • ಮುತಾಲಿಕ್‌ನ ನಾನು ಕೇರ್ ಮಾಡಲ್ಲಾ, ಅವನಿಗೆ ಬೆಂಕಿ ಹಚ್ಚೋದು ಬಿಟ್ಟರೆ ಬೇರೇನು ಗೊತ್ತಿಲ್ಲ: ಪ್ರಸಾದ್ ಅಬ್ಬಯ್ಯ

    ಮುತಾಲಿಕ್‌ನ ನಾನು ಕೇರ್ ಮಾಡಲ್ಲಾ, ಅವನಿಗೆ ಬೆಂಕಿ ಹಚ್ಚೋದು ಬಿಟ್ಟರೆ ಬೇರೇನು ಗೊತ್ತಿಲ್ಲ: ಪ್ರಸಾದ್ ಅಬ್ಬಯ್ಯ

    ಹುಬ್ಬಳ್ಳಿ: ಪ್ರಮೋದ್ ಮುತಾಲಿಕ್ (Pramod Muthalik) ತಾಕತ್ತು ನಾನು ನೋಡುವುದು ಬೇಕಾಗಿಲ್ಲ. ಅವನ ಎಲ್ಲಾ ತಾಕತ್ತು ನಾನು ನೋಡಿದ್ದೇನೆ. ಅವನಿಗೆ ಬೆಂಕಿ ಹಚ್ಚುವುದು ಬಿಟ್ಟರೆ ಬೇರೇನು ಗೊತ್ತಿಲ್ಲ. ಅವನ್ನು ನಾನು ಕೇರ್ ಮಾಡಲ್ಲಾ ಎಂದು ಕಾಂಗ್ರೆಸ್ (Congress) ಶಾಸಕ ಹಾಗೂ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ (Prasad Abbayya) ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿನ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವ ಹಿನ್ನೆಲೆ ಹಿಂದೂ ಸ್ಮಶಾನದಲ್ಲಿ ಕ್ಯಾಂಟೀನ್ ಕಟ್ಟುವುದಲ್ಲ. ಅಬ್ಬಯ್ಯಗೆ ತಾಕತ್ತು ಇದ್ದರೆ ಕಬರಸ್ತಾನದಲ್ಲಿ ಕ್ಯಾಂಟೀನ್ ಕಟ್ಟಲಿ ಎಂದು ಮುತಾಲಿಕ್ ಸವಾಲು ಹಾಕಿದ್ದರು. ಇದನ್ನೂ ಓದಿ: ಬ್ರಿಟಿಷರಂತೆ ಕಾಂಗ್ರೆಸ್‌ – ಸಿಜೆಐ ನಿವಾಸದಲ್ಲಿ ಗಣೇಶ ಪೂಜೆಗೆ ಹೋಗಿದ್ದನ್ನು ಟೀಕಿಸಿದವರಿಗೆ ಮೋದಿ ತಿರುಗೇಟು

    ಈ ಕುರಿತು ಪ್ರತಿಕ್ರಿಯೆ ನೀಡುವಾಗ ಮುತಾಲಿಕ್ ಮೇಲೆ ವಾಗ್ದಾಳಿ ನಡೆಸಿದ ಅಬ್ಬಯ್ಯ, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮೇಲೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಅವನೆಲ್ಲಾ ನಾನು ತಲೆಗೆ ತೆಗೆದುಕೊಳ್ಳೊದಿಲ್ಲ. ಪ್ರಮೋದ್ ಮುತಾಲಿಕ್ ದೊಡ್ಡ ಇಂಟರ್ ನ್ಯಾಷನಲ್ ಲೀಡರ್ ಅಲ್ಲ. ಅವನು ಹೇಳಿದ ತಕ್ಷಣ ನಾನು ತಾಕತ್ತು ತೋರಿಸೋದು ಬೇಕಿಲ್ಲ. ನನಗೆ ನನ್ನ ಜನ ಬೇಕು. ನನ್ನ ಲೀಡರ್ ಬೇಕು. ನನ್ನನ್ನು ಜನ ಆರಿಸಿದ್ದು. ಮುತಾಲಿಕ್ ಅಲ್ಲಾ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಪ್ರತ್ಯಕ್ಷ – ಸಿಸಿಟಿವಿಯಲ್ಲಿ ಓಡಾಟದ ದೃಶ್ಯ ಸೆರೆ

  • ಕ್ರಿಮಿನಲ್‍ಗಳು ನಮ್ಮ ಪಕ್ಷದ ಪಿಲ್ಲರ್‌ಗಳು ಎಂದು ಬಿಜೆಪಿ ಘೋಷಿಸಲಿ: ಪ್ರಸಾದ್ ಅಬ್ಬಯ್ಯ

    ಕ್ರಿಮಿನಲ್‍ಗಳು ನಮ್ಮ ಪಕ್ಷದ ಪಿಲ್ಲರ್‌ಗಳು ಎಂದು ಬಿಜೆಪಿ ಘೋಷಿಸಲಿ: ಪ್ರಸಾದ್ ಅಬ್ಬಯ್ಯ

    ಹುಬ್ಬಳ್ಳಿ: ಶ್ರೀಕಾಂತ್ ಪೂಜಾರಿಯನ್ನು ಬಿಡುಗಡೆ ಮಾಡುವುದಿಲ್ಲ. ಠಾಣೆಯ ಇನ್ಸ್‌ಪೆಕ್ಟರ್‌ನ್ನು ಸಹ ಅಮಾನತು ಮಾಡುವುದಿಲ್ಲ. ನಾವು ಬಿಜೆಪಿಯವರನ್ನು ಕೇಳಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ (Congress) ಶಾಸಕ ಪ್ರಸಾದ್ ಅಬ್ಬಯ್ಯ ( Prasad Abbayya) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ಸ್‌ಪೆಕ್ಟರ್‌ ಮಹಮ್ಮದ್ ರಫೀಕ್ ಅವರಿಗೆ ಯಾವುದೇ ಕಡ್ಡಾಯ ರಜೆ ನೀಡಿಲ್ಲ. ವೈಯಕ್ತಿಕ ಕಾರಣದಿಂದ ರಜೆ ತೆಗೆದುಕೊಂಡಿದ್ದಾರೆ. ಅವರು ಆದಷ್ಟು ಬೇಗ ವಾಪಸ್ ಬರಲಿದ್ದಾರೆ. ಅವರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ. ಅವರು ರೌಡಿಶೀಟರ್‌ಗಳು ನಡುಕ ಹುಟ್ಟಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಭಾರತವನ್ನು ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ತಡೀರಿ – ಮುತಾಲಿಕ್‌ ಸವಾಲ್‌

    ನ್ಯಾಯಾಲಯದ ಆದೇಶ ಇರುವುದರಿಂದ ಶ್ರೀಕಾಂತ್ ಪೂಜಾರಿಯನ್ನು ಬಂಧನ ಮಾಡಲಾಗಿದೆ. ಆತ ರೌಡಿಶೀಟರ್, ಅವನ ಹಿನ್ನೆಲೆ ತೆಗೆದಾಗ 16 ಕೇಸ್‍ಗಳಿದ್ದು, ಜನ ಛೀಮಾರಿ ಹಾಕುತ್ತಿದ್ದಾರೆ. ರೌಡಿಶೀಟರ್ ಹಾಗೂ ಕ್ರಿಮಿನಲ್ ಇದ್ದವರು ತಮ್ಮ ಪಕ್ಷದ ಪಿಲ್ಲರ್‌ಗಳು ಎಂದು ಬಿಜೆಪಿ (BJP) ಘೋಷಣೆ ಮಾಡಲಿ ಎಂದು ಕಿಡಿಕಾರಿದ್ದಾರೆ.

    ರಾಮನ ಭಕ್ತರು ಸರಾಯಿ ಮಾರಾಟ ಮಾಡ್ತಾರಾ? ಮಟ್ಕಾ ಜೂಜಾಟ ಆಡೋನು ರಾಮ ಭಕ್ತನಾ? ಇನ್ನೂ ಪ್ರತಿಭಟನೆ ಮಾಡೋದು ಎಲ್ಲರ ಹಕ್ಕು, ಆದರೆ ಅದರ ಹೆಸರಲ್ಲಿ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಈ ವಿಷಯವನ್ನು ನಮ್ಮ ಜಿಲ್ಲಾಧ್ಯಕ್ಷರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಕಾರ್ಯಕರ್ತರು ಇಂದು ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಯತೀಂದ್ರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ: ರಾಮಲಿಂಗಾ ರೆಡ್ಡಿ

  • ಪಿಎಂ ಕೇರ್ಸ್ ಫಂಡ್‍ಗೆ ವಾರಸುದಾರರು ಯಾರು?: ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನೆ

    ಪಿಎಂ ಕೇರ್ಸ್ ಫಂಡ್‍ಗೆ ವಾರಸುದಾರರು ಯಾರು?: ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನೆ

    ಹುಬ್ಬಳ್ಳಿ: ಪಿಎಂ ಕೇರ್ಸ್ ಫಂಡ್ ಸರ್ಕಾರದ ನಿಧಿಯಲ್ಲಿ ಇಲ್ಲವೆಂದು ಕೇಂದ್ರ ಸರ್ಕಾರ ದೆಹಲಿ ಕೋರ್ಟ್‍ಗೆ ಅಫಿಡೆವಿಟ್ ನೀಡಿದೆ. ಹಾಗಾದರೆ ಈ ನಿಧಿಗೆ ನಿಜವಾದ ವಾರಸುದಾರರು ಯಾರು? ಯಾರ ಉದ್ಧಾರಕ್ಕಾಗಿ ದೇಣಿಗೆ ರೂಪದಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ಪ್ರಥಮ ಅಲೆಯಲ್ಲಿ ಕೇಂದ್ರ ರಾಷ್ಟ್ರೀಯ ವಿಪತ್ತು ನಿಧಿಗೆ ಪರ್ಯಾಯವಾಗಿ ಪಿಎಂ ಕೇರ್ಸ್ ಫಂಡ್ ಸ್ಥಾಪಿಸಿ ಕೊಟ್ಯಂತರ ರೂಪಾಯಿ ಸಂಗ್ರಹಿಸಲಾಗಿದೆ. ಈ ಹಣಕ್ಕೆ ಉತ್ತರದಾಯಿತ್ವ ಇರಬೇಕಲ್ಲವೆ? ಕೊರೊನಾದಂಥ ಸಂಕಷ್ಟ ಸಂದರ್ಭದಲ್ಲೂ ಭಾವನಾತ್ಮಕ ಭಾಷಣದಿಂದ ಜನರಿಂದ ಪಿಎಂ ಕೇರ್ಸ್ ಮೂಲಕ ಹಣ ಲೂಟಿ ಮಾಡಲಾಗಿದೆ. ಇದೀಗ ಕೇಂದ್ರದ ಅಫಿಡೆವಿಟ್‍ನಿಂದ ಪಿಎಂ ಕೇರ್ಸ್ ಫಂಡ್‍ಗೆ ಅಪ್ಪ-ಅಮ್ಮನೇ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಿಎಂ ಕೇರ್ಸ್‍ಗೆ 2.25 ಲಕ್ಷ, ಒಟ್ಟು 103 ಕೋಟಿ ದಾನ ನೀಡಿದ್ದಾರೆ ಪ್ರಧಾನಿ ಮೋದಿ

    ಪ್ರಧಾನಿಯವರ ಕರೆಗೆ ಓಗೊಟ್ಟು ಭಾರತೀಯರು ಪಿಎಂ ಕೇರ್ಸ್‍ಗೆ ತಮ್ಮ ದುಡಿಮೆಯಲ್ಲಿ ಒಂದಿಷ್ಟು ಹಣ ನೀಡಿದ್ದಾರೆ. ದೇಶದ ಜನ ಸಂಕಷ್ಟಕ್ಕಾಗಿ ಸಂಗ್ರಹಿಸಿರುವ ನಿಧಿಯನ್ನು ಕೇಂದ್ರ ಸರ್ಕಾರದ ನಿಧಿ ಅಲ್ಲ ಎಂದು ಅಫಿಡೆವಿಟ್ ನೀಡಿದೆ. ಇದು ಸರ್ಕಾರದ ಸ್ವತ್ತು ಆಗಲ್ಲ ಎನ್ನುವುದಾದರೆ ಪ್ರಧಾನ ಮಂತ್ರಿ ಹೆಸರಲ್ಲಿ ಸ್ಥಾಪಿಸುವ ಉದ್ದೇಶವೇನಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಲ್ಲಿ ಸ್ಥಾಪಿತವಾದ ಪಿಎಂ ಕೇರ್ಸ್ ಸರ್ಕಾರದ ನಿಧಿಯಲ್ಲಿ ಸಂಗ್ರಹವಾದ ಹಣ ಭಾರತದ ಏಕೀಕೃತ ನಿಧಿಗೆ ಹೋಗಲ್ಲ ಎಂಬ ಕೇಂದ್ರದ ವಾದ ಸರಿಯಲ್ಲ, ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅದರದ್ದೇ ಆದ ಘನತೆ-ಗೌರವವಿದೆ. ಆದರೆ ಪ್ರಧಾನಿ ಸ್ಥಾನದಲ್ಲಿ ಕುಳಿತವರಿಂದಲೇ ಆ ಸ್ಥಾನದ ಘನತೆಗೆ ಧಕ್ಕೆಯಾದರೆ, ಅದು ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವೆ ಎಂದು ಪ್ರಸಾದ್ ಅಬ್ಬಯ್ಯ ಕೇಂದ್ರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತಾಂತರವೇ ಮಾಡಲ್ಲ ಅನ್ನೋ ಬಿಷಪ್‍ಗಳು ಯಾಕೆ ಸಿಎಂ ಬಳಿ ಓಡಿ ಬಂದಿದ್ದಾರೆ: ಪ್ರತಾಪ್ ಸಿಂಹ ಪ್ರಶ್ನೆ

  • ಸಿಎಂ ಬದಲಾವಣೆ ಮಾತ್ರವಲ್ಲ, ಸಂಪೂರ್ಣ ಸರ್ಕಾರವೇ ವಿಸರ್ಜನೆಯಾಗ್ಬೇಕಿತ್ತು: ಶಾಸಕ ಅಬ್ಬಯ್ಯ

    ಸಿಎಂ ಬದಲಾವಣೆ ಮಾತ್ರವಲ್ಲ, ಸಂಪೂರ್ಣ ಸರ್ಕಾರವೇ ವಿಸರ್ಜನೆಯಾಗ್ಬೇಕಿತ್ತು: ಶಾಸಕ ಅಬ್ಬಯ್ಯ

    – ಮತ್ತೆ ಚುನಾವಣೆ ಆಗಬೇಕು

    ಧಾರವಾಡ: ಸಿಎಂ ಬದಲಾವಣೆ ಮಾತ್ರವಲ್ಲ, ಸಂಪೂರ್ಣ ಸರ್ಕಾರವೇ ವಿಸರ್ಜನೆಯಾಗಬೇಕಿತ್ತು. ಮತ್ತೆ ಚುನಾವಣೆ ಆಗಬೇಕು ಎಂದು ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಇಷ್ಟು ದಿನ ಭ್ರಷ್ಟಾಚಾರದಿಂದ ಆಡಳಿತ ನಡೆದಿತ್ತು. ಮತ್ತೆ ಭ್ರಷ್ಟ ಸಿಎಂ ಬರುವುದರಿಂದ ಜನರಿಗೆ ಲಾಭ ಇಲ್ಲ ಎಂದ ಅವರು, ಜನರು ಇವರ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದರು.

    ಸಿದ್ದರಾಮಯ್ಯ ಆಡಳಿತಕ್ಕೂ ಈಗಿನ ಆಡಳಿತಕ್ಕೂ ಹೋಲಿಕೆ ಮಾಡಿ ಜನ ನೋಡುತ್ತಿದ್ದಾರೆ. ಮತ್ತೆ ಸಿದ್ದರಾಮಯ್ಯ ಸರ್ಕಾರ ಬರಬೇಕು ಅಂತಾ ಜನ ಬಯಸಿದ್ದಾರೆ. ಮುಂದಿನ ಸಿಎಂ ಯಾರಾಗುತ್ತಾರೆ ಎಂದು ನಾನು ಹೇಗೆ ಹೇಳಲಿ, ಯಾರು ಸಿಎಂ ಆದರೆನು, ಸಂಪೂರ್ಣ ಬಿಜೆಪಿನೇ ಬೇಡ ಎನ್ನುವ ಸ್ಥಿತಿ ಇದೆ ಎಂದರು. ಇದನ್ನೂ ಓದಿ: ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರು