Tag: ಪ್ರಸವ

  • ಮಗು ಜನಿಸಿದ ನಂತರ ತೂಕ ಇಳಿಸಿಕೊಳ್ಳಲು ಹೀಗೆ ಮಾಡಿ

    ಮಗು ಜನಿಸಿದ ನಂತರ ತೂಕ ಇಳಿಸಿಕೊಳ್ಳಲು ಹೀಗೆ ಮಾಡಿ

    ಗು ಜನಿಸಿದ ನಂತರ ಇನ್ನೂ ಗರ್ಭಿಣಿಯಂತೆ ಕಾಣುವ ಬಗ್ಗೆ ಕೆಲವರು ಚಿಂತಿತರಾಗಿರುತ್ತಾರೆ. ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಿರುತ್ತಾರೆ. ಆದರೆ ಅದಾಗದೇ ಹಲವಾರು ರೋಗಗಳಿಗೂ ದಾರಿ ಆಗಬಹುದು. ಇದರಿಂದಾಗಿ ಹೆರಿಗೆ ನಂತರ ದೇಹವು ಚೇತರಿಸಿಕೊಳ್ಳುತ್ತಿದ್ದಾಗ ಏನು ಮಾಡಬೇಕು ಎಂಬುದರ ಬಗ್ಗೆ ಕೆಲವು ಮಾಹಿತಿ ಇಲ್ಲಿವೆ.

    ಡಯೆಟ್ ಮಾಡಿ:
    ಗರ್ಭಿಣಿಯಾಗಿರುವಾಗ ಯಾವ ರೀತಿ ತಮ್ಮ ಊಟ, ತಿಂಡಿ ಬಗ್ಗೆ ಕಾಳಜಿ ವಹಿಸುತ್ತೇವೆಯೋ ಅದೇ ರೀತಿ ಹೆರಿಗೆಯ ನಂತರವೂ ಕಾಳಜಿ ವಹಿಸಬೇಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಹೊಂದಿರುವಂಥಹ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಎದೆ ಹಾಲು ಆಗಬೇಕಾದರೆ ತಾಯಿಯ ದೇಹದಿಂದ 500 ಕ್ಯಾಲರಿ ಖರ್ಚಾಗುತ್ತದೆ. ಹಾಗಾಗಿ ತಾಯಿಯ ದೇಹಕ್ಕೆ ದಿನಕ್ಕೆ 2,500 ಕ್ಯಾಲರಿ ಬೇಕಾಗುತ್ತದೆ. ಡಯೆಟ್ ಮಾಡುವಾಗ ಈ ಆಹಾರವನ್ನು ಸೇವಿಸಿ ಆರೋಗ್ಯದಿಂದಿರಿ. ಇದನ್ನೂ ಓದಿ: ಅಂದಕಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕೂ ಧರಿಸಿ ಕಾಲ್ಗೆಜ್ಜೆ

    ಗ್ರೀನ್ ಟೀ: ಇದರಲ್ಲಿ ಅಧಿಕ ಆ್ಯಂಟಿ ಆಕ್ಸಿಡೆಂಟ್‍ಗಳಿರುತ್ತವೆ. ಪ್ರತಿದಿನ 2 ಗ್ರೀನ್ ಟೀ ಕುಡಿಯಿರಿ. ಇದರಿಂದ ಕೊಬ್ಬಿನ ಸಂಗ್ರಹ ಕಡಿಮೆ ಮಾಡುತ್ತದೆ.  ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    ಕ್ಯಾಬಿಜ್: ಇದನ್ನು ಸೇವಿಸುವುದರಿಂದ ಹೆಚ್ಚು ಹಸಿವಾಗುವುದಿಲ್ಲ. 1 ಬಟ್ಟಲು ಕ್ಯಾಬಿಜ್‍ಲ್ಲಿ 20 ಕ್ಯಾಲರಿಗಳಿರುತ್ತವೆ. ಇದರಿಂದಾಗಿ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಎಲೆಕೋಸ್ ಪಲ್ಯ ಮಾಡಿ ಸೇವಿಸಬಹುದು. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

    ಓಟ್ಸ್: ಆರೋಗ್ಯಕರ ಕಾರ್ಬೋಹೈಡ್ರೇಟ್‍ನಿಂದ ಓಟ್ಸ್ ಪೂರಕವಾಗಿದೆ. ಡಯಟ್ ಫುಡ್ ಎಂದಾಕ್ಷಣ ಓಟ್ಸ್ ನೆನಪಾಗುತ್ತದೆ. ಓಟ್ಸ್ ಕೇಕ್, ಪರೋಟ, ಮಾಡಿ ತಿನ್ನಬಹುದು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    ಮೊಸರು: ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎನ್ನುವ ಭಾವನೆ ಕೆಲವರಲ್ಲಿ ಇದೆ. ಆದರೆ ಅದು ತಪ್ಪು. ಮೊಸರಲ್ಲಿ ಕೊಬ್ಬು ಕರಗಿಸುವ ಕಿಣ್ವ ಇರುತ್ತದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಊಟದ ಸಮಯದಲ್ಲಿ ಮೊಸರನ್ನು ತಿನ್ನಿರಿ.

    ನೀರು: ಮನುಷ್ಯನ ದೇಹಕ್ಕೆ ನೀರು ಅತ್ಯಗತ್ಯ. ಇದರಿಂದಾಗಿ ಪ್ರತಿನಿತ್ಯ 4ರಿಂದ 5 ಲೀಟರ್ ನೀರನ್ನು ಕುಡಿಯಬೇಕು. ನೀರು ನಮ್ಮ ದೇಹವನ್ನು ಪುನಃ ಜೀವಂತವಾಗಿಸಿ, ಅನಗತ್ಯ ಜೀವಾಣುವನ್ನು ಹೊರಹಾಕುತ್ತದೆ. ಸ್ಥೂಲ ಕಾಯತೆಯನ್ನು ಉಂಟು ಮಾಡುವ ಕೊಬ್ಬಿನಾಮ್ಲವನ್ನು ಹೊರಹಾಕುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    ಮಸಾಲೆ ಪದಾರ್ಥಗಳು: ಚಕ್ಕೆ, ಮೆಣಸು, ಏಲಕ್ಕಿಯಿಂದ ಚಯಾಪಚಯ ಕ್ರಿಯೆಗೆ ಹೆಚ್ಚು ಮಾಡುತ್ತದೆ. ಬೆವರು ಮತ್ತು ಮಲದ ಮೂಲಕ ತೂಕ ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ

    ಮಸಾಜ್ ಮಾಡಿಕೊಳ್ಳುವುದು:
    ಬೆವರಿಳಿಸದೆ ಹೊಟ್ಟೆ ಭಾಗದ ತೂಕ ಇಳಿಸುವ ಸುಲಭ ಉಪಾಯವೆಂದರೆ ಮಸಾಜ್. ನೀವು ಪ್ರತಿನಿತ್ಯ ಮಸಾಜ್ ಮಾಡುವುದರಿಂದ ಹೊಟ್ಟೆ ಭಾಗದ ಕೊಬ್ಬು ಕರಗಲು ಸಹಕಾರಿಯಾಗುತ್ತದೆ. ನಿಯಮಿತ ಮಸಾಜ್‍ನಿಂದ ಹೊಟ್ಟೆ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದನ್ನೂ ಓದಿ: ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ