Tag: ಪ್ರಶ್ನೆ ಪತ್ರಿಕೆ ಲೀಕ್

  • ಭದ್ರತೆಗೆ ನೇಮಿಸಿದ್ದ ಸೆಕ್ಯುರಿಟಿಯಿಂದಲೇ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್

    ಭದ್ರತೆಗೆ ನೇಮಿಸಿದ್ದ ಸೆಕ್ಯುರಿಟಿಯಿಂದಲೇ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್

    ಬೆಂಗಳೂರು: ಬೇಲಿಯೆ ಎದ್ದು ಹೊಲ ಮೇಯ್ದ ಎಂಬ ಮಾತಂತೆ ಭದ್ರತೆ ಒದಗಿಸಬೇಕಿದ್ದ ಸೆಕ್ಯುರಿಟಿ ಸಿಬ್ಬಂದಿಯೇ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ, ದುಡ್ಡಿನ ದುರಾಸೆಗೆ ಖಾಕಿ ಖಜಾನೆಗೆ ಭೂಪ ಕೈ ಹಾಕಿದ್ದಾನೆ.

    ಮಣಿಪಾಲ್ ಪ್ರಿಂಟಿಂಗ್ ಪ್ರೆಸ್‍ನ ಹೆಡ್ ಸೆಕ್ಯುರಿಟಿ ಅನಿಲ್ ಪ್ರಾನ್ಸಿಸ್ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಭೂಪ. ಮಡಿಕೇರಿ ನೆರೆ ವೇಳೆ ಪಿಎಸ್‍ಐ ಪರೀಕ್ಷೆಯನ್ನು ಸರ್ಕಾರ ಮುಂದೂಡಿತ್ತು. ಈ ವೇಳೆಗಾಗಲೇ ಪ್ರಶ್ನೆ ಪತ್ರಿಕೆ ಸಿದ್ಧವಿರುವ ವಿಚಾರ ತಿಳಿದಿದ್ದ ಸೆಕ್ಯುರಿಟಿ ಗಾರ್ಡ್, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಡರಾತ್ರಿ ಎರಡು ಗಂಟೆ ಹೊತ್ತಿಗೆ ಪ್ರಿಂಟಿಂಗ್ ಪ್ರೆಸ್‍ಗೆ ನುಗ್ಗಿ, ಪ್ರಶ್ನೆ ಪತ್ರಿಕೆ ಕದ್ದು, ಅಲ್ಲಿಯೇ ಜೆರಾಕ್ಸ್ ಮಾಡಿ ಆಸಲಿ ಪೇಪರ್ ನ ಅಲ್ಲೇ ಇಟ್ಟು ಬಂದಿದ್ದನು. ನಂತರ ಟಿಪನ್ ಬಾಕ್ಸ್ ನಲ್ಲಿ ಬಚ್ಚಿಟ್ಟುಕೊಂಡು ಅಲ್ಲಿಂದ ಪೇಪರ್ ಹೊರತಂದಿದ್ದನು.

    ಪ್ರಶ್ನೆ ಪತ್ರಿಕೆ ಏನು ಮಾಡೋದು ಎಂದು ಒಡಾಡುತ್ತಿದ್ದವನಿಗೆ ದಾವಣಗೆರೆ ಮೂಲದ ಅಮೀರ್ ಅಹಮದ್ ಪರಿಚಯವಾಗಿದ್ದನು. ಈ ಹಿಂದೆ ಆಂಧ್ರದಲ್ಲಿ ಪೇಪರ್ ಲೀಕ್ ಮಾಡಿ ಅಮೀರ್ ಸಿಕ್ಕಿಬಿದ್ದಿದ್ದನು. 45 ಲಕ್ಷಕ್ಕೆ ಡೀಲ್ ಮಾಡಿ 17 ಲಕ್ಷ ರೂ. ಅನಿಲ್ ಪಡೆದಿದ್ದನು. ಸಿಸಿಬಿ ಚಾರ್ಜ್‍ಶೀಟ್‍ನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ಬೆಳಕಿಗೆ ಬಂದ ತಕ್ಷಣ ಆರೋಪಿ ದುಬೈಗೆ ಹಾರಿದ್ದನು.

    ಆದರೆ ಆತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ದುಬೈನಲ್ಲಿದ್ದವನಿಗೆ ಫ್ಯಾಮಿಲಿ ಸೆಂಟಿಮೆಂಟ್ ಡ್ರಾಮಾದಿಂದ ವಾಪಸ್ಸು ಕರೆಸಿಕೊಂಡು, ಸೆರೆಹಿಡಿದಿದ್ದಾರೆ. ಪಿಎಸ್‍ಐ ಪೇಪರ್ ಲೀಕ್ ಪ್ರಕರಣದಲ್ಲಿ ಅನಿಲ್ ಬಿಟ್ಟು ಇನ್ನೂ 119 ಜನ ಆರೋಪಿಗಳ ಮೇಲೆ 2000 ಸಾವಿರ ಪುಟಗಳ ಚಾರ್ಜ್‍ಶೀಟ್ ಅನ್ನು ಸಿಸಿಬಿ ಪೊಲೀಸರು ಸಿದ್ಧಪಡಿಸಿದ್ದಾರೆ.

  • ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಟ್ವಿಸ್ಟ್ – ಸಿಎಂ ಗೃಹ ಕಚೇರಿಗಿದೆ ನಂಟು!

    ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಟ್ವಿಸ್ಟ್ – ಸಿಎಂ ಗೃಹ ಕಚೇರಿಗಿದೆ ನಂಟು!

    ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಚೇರಿಗೂ ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಗೂ ನಂಟು ಹೊಂದಿದ್ದು, ಸಿಎಂ ಗೃಹ ಕಚೇರಿ ಸಿಬ್ಬಂದಿಯೇ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಸಿಎಂ ಗೃಹಕಚೇರಿಯ ಸಿಬ್ಬಂದಿ ಗೋವಿಂದರಾಜರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯನಗರದ ಪಟ್ಟೆಗಾರಪಾಳ್ಯದ ಮನೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಈತ ಮೂಲತಃ ರೈಲ್ವೆ ಇಲಾಖೆಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದನು.

    ಈಗ ನಿಯೋಜನೆ ಮೇಲೆ ಸಿಎಂ ಗೃಹಕಚೇರಿಯಲ್ಲಿ ಗೋವಿಂದರಾಜು ಸಿಬ್ಬಂದಿಯಾಗಿದ್ದಾನೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ರೂವಾರಿ ಈ ಗೋವಿಂದರಾಜು ಆಗಿದ್ದು, ಅನುಮಾನದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ.

    ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಯಾವುದೇ ಸಚಿವರ ಲಿಂಕ್ ಇಲ್ಲ ಎಂದು ಪೊಲೀಸರು ಕೂಡ ಕೈಬಿಟ್ಟಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದಲ್ಲಿ ಚೈತನ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆಗ ಆತ ಸಿಎಂ ಗೃಹ ಕಚೇರಿಯಲ್ಲಿ ಕೆಲಸ ಮಾಡುವ ಗೋವಿಂದರಾಜು ಬಗ್ಗೆ ಹೇಳಿದ್ದಾನೆ. ಗೋವಿಂದರಾಜು ಪೇಪರ್ ಲೀಕ್ ಆಗುವ ಒಂದು ತಿಂಗಳು ಹಿಂದೆ ಬಂದು ಕೆಲಸಕ್ಕೆ ಸೇರಿದ್ದನು. ಈತನಿಗೆ ಸುಮಾರು 3 ಲಕ್ಷ ಹಣವನ್ನು ಕೊಟ್ಟರೆ ಕಿಂಗ್‍ಪಿನ್ ಶಿವಕುಮಾರ್ ನನ್ನು ಭೇಟಿ ಮಾಡಿಸಿ ಪ್ರಶ್ನೆ ಪತ್ರಿಕೆ ಕೊಟ್ಟು ಪರೀಕ್ಷೆ ಬರೆಸುತ್ತಿದ್ದನು. ಇದೇ ರೀತಿ ಸುಮಾರು 20ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಳುಹಿಸಿಕೊಟ್ಟಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    ಈ ಹಿನ್ನೆಲೆಯಲ್ಲಿ ಗೋವಿಂದರಾಜುಗೂ ಆರೋಪಿ ಚೈತನ್ಯ ಮತ್ತು ಶಿವಕುಮಾರ್ ಜೊತೆ ಯಾವ ರೀತಿ ಸಂಪರ್ಕ ಇದೆ. ಬೇರೆ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ವಿಚಾರಣೆ ಮಾಡಲು ಪೊಲೀಸರು ಏಳು ದಿನ ವಶಕ್ಕೆ ಪಡೆದುಕೊಂಡಿದ್ದಾರೆ.

    ನಡೆದಿದ್ದೇನು?
    ನವೆಂಬರ್ 25ರಂದು ನಡೆಯಬೇಕಿದ್ದ ಪೊಲೀಸ್ ಪೇದೆ ಹುದ್ದೆಯ ಲಿಖಿತ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಹೀಗಾಗಿ ಪರೀಕ್ಷೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭಾರೀ ಜಾಲವನ್ನು ಪತ್ತೆ ಹಚ್ಚಿ ಕಿಂಗ್ ಪಿನ್ ಸೇರಿದಂತೆ 115 ಮಂದಿಯನ್ನು ಬಂಧಿಸಿದ್ದರು.

    ಕೊಡಗು ಜಿಲ್ಲೆಯ ಸೋಮವಾರಪೇಟೆಯ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ರಾಜ್ಯದ ವಿವಿಧೆಡೆಯಿಂದ ಪರೀಕ್ಷಾರ್ಥಿಗಳನ್ನು ಕರೆಸಿಕೊಂಡು ಪ್ರಶ್ನೆ ಪತ್ರಿಕೆ ವಿತರಿಸಲು ಸಿದ್ಧತೆ ನಡೆಸಲಾಗಿತ್ತು. ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಈ ಮೊದಲೇ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳಾದ ಬಿ.ಆರ್.ವೇಣುಗೋಪಾಲ್, ಬಿ.ಬಾಲರಾಜು ನೇತೃತ್ವದ ಎರಡು ತಂಡಗಳು ದಾಳಿ ನಡೆಸಿದ್ದವು. ದಾಳಿ ವೇಳೆ ಕಿಂಗ್‍ಪಿನ್ ಶಿವಕುಮಾರ್ ನನ್ನು ಪ್ರಶ್ನೆ ಪತ್ರಿಕೆಗಳ ಸಹಿತ ಬಂಧಿಸಿದ್ದರು.

  • ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಟ್ವಿಸ್ಟ್ – ಪ್ರಮುಖ ಆರೋಪಿಯ ಜೊತೆ ಮಾಜಿ ಸಿಎಂ ಪಿಎ ನಂಟು

    ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಟ್ವಿಸ್ಟ್ – ಪ್ರಮುಖ ಆರೋಪಿಯ ಜೊತೆ ಮಾಜಿ ಸಿಎಂ ಪಿಎ ನಂಟು

    ಬೆಂಗಳೂರು: ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಪ್ರಮುಖ ಆರೋಪಿ ಶಿವಕುಮಾರ್ ಜೊತೆ ಮಾಜಿ ಸಿಎಂ ಪಿಎ ನಂಟು ಹೊಂದಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು, ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದ ಹಿಂದೆ ಬಿಜೆಪಿ ಮುಖಂಡ ಈಶಪ್ಪ ಕೈವಾಡ ಇದೆ ಎನ್ನುವ ವಿಚಾರ ಮೂಲಗಳು ತಿಳಿಸಿವೆ. ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದ ಈಶಪ್ಪ ಶಿವಕುಮಾರ್ ಜೊತೆ ಸೇರಿಕೊಂಡಿದ್ದರು ಎನ್ನುವ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಕೊಪ್ಪಳದ ಗಜೇಂದ್ರಗಡದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಈಶಪ್ಪ, ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಈಗ ಕೋಟಿ ಕೋಟಿ ಒಡೆಯರಾಗಿ ಬದಲಾಗಿದ್ದಾರೆ. ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ನವೆಂಬರ್ 25ರಂದು ನಡೆಯಬೇಕಿದ್ದ ಪೊಲೀಸ್ ಪೇದೆ ಹುದ್ದೆಯ ಲಿಖಿತ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಹೀಗಾಗಿ ಪರೀಕ್ಷೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭಾರೀ ಜಾಲವನ್ನು ಪತ್ತೆ ಹಚ್ಚಿ ಕಿಂಗ್ ಪಿನ್ ಸೇರಿದಂತೆ 115 ಮಂದಿಯನ್ನು ಬಂಧಿಸಿದ್ದರು.

    ಕೊಡಗು ಜಿಲ್ಲೆಯ ಸೋಮವಾರಪೇಟೆಯ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ರಾಜ್ಯದ ವಿವಿಧೆಡೆಯಿಂದ ಪರೀಕ್ಷಾರ್ಥಿಗಳನ್ನು ಕರೆಸಿಕೊಂಡು ಪ್ರಶ್ನೆ ಪತ್ರಿಕೆ ವಿತರಿಸಲು ಸಿದ್ಧತೆ ನಡೆಸಲಾಗಿತ್ತು. ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದ್ರೆ ಈ ಮೊದಲೇ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳಾದ ಬಿ.ಆರ್.ವೇಣುಗೋಪಾಲ್, ಬಿ.ಬಾಲರಾಜು ನೇತೃತ್ವದ ಎರಡು ತಂಡಗಳು ದಾಳಿ ನಡೆಸಿದ್ದವು. ದಾಳಿ ವೇಳೆ ಕಿಂಗ್‍ಪಿನ್ ಶಿವಕುಮಾರ್‍ನನ್ನು ಪ್ರಶ್ನೆ ಪತ್ರಿಕೆಗಳ ಸಹಿತ ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv