Tag: ಪ್ರಶ್ನೆಪತ್ರಿಕೆ

  • ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!

    ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!

    ಮುಂಬೈ: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಒಂದಿಲ್ಲೊಂದು ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತಾರೆ.

    ಇತ್ತೀಚೆಗೆ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ತಮ್ಮ ಟೆಸ್ಟ್ ಕ್ರಿಕೆಟ್‌ನ 28ನೇ ಶತಕ ಹಾಗೂ ವೃತ್ತಿ ಜೀವನದ 75ನೇ ಶತಕ ಬಾರಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್‌ 360ಗೆ ಯುವರಾಜ್‌ ಸಿಂಗ್‌ ಬೆಂಬಲ

    ಇದೀಗ 9ನೇ ತರಗತಿ ಇಂಗ್ಲಿಷ್‌ ಪರೀಕ್ಷೆಯ ಪ್ರಶ್ನೆಪತ್ರಿಕೆಯೊಂದರಲ್ಲಿ (Exam Question Peper) ವಿರಾಟ್ ಕೊಹ್ಲಿ ಫೋಟೋ ಇರುವುದು ಸುದ್ದಿಯಾಗಿದೆ. ʻಈ ಕೆಳಗಿನ ಚಿತ್ರದ ಬಗ್ಗೆ 100 ರಿಂದ 120 ಪದಗಳಲ್ಲಿ ಉತ್ತರಿಸಿʼ ಎಂಬ ಪ್ರಶ್ನೆ ಕೇಳಿದ್ದು, ಅದರ ಕೆಳಗೆ ಕೊಹ್ಲಿ ಫೋಟೋ ನೋಡಿ ಇದೆ. ಕೊಹ್ಲಿ ಪೋಟೋ ನೋಡುತ್ತಿದ್ದಂತೆ ವಿದ್ಯಾರ್ಥಿಗಳು ಶಾಕ್‌ ಆಗಿದ್ದಾರೆ. ಇನ್ನೂ ಕೆಲವರು ಸಂತಸದಿಂದಲೇ ಉತ್ತರಿಸಿದ್ದಾರೆ. ಇದನ್ನೂ ಓದಿ: IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    2022ರ ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್‌ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕೊಹ್ಲಿ 2022ರ ಏಷ್ಯಾಕಪ್ ಮೂಲಕ ಫಾರ್ಮ್‌ಗೆ ಮರಳಿದರು. ಏಷ್ಯಾಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ 61 ಎಸೆತಗಳಲ್ಲಿ ಬರೋಬ್ಬರಿ 122ರನ್ ಚಚ್ಚಿ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಅದು ಅವರ ವೃತ್ತಿ ಜೀವನದ 71ನೇ ಶತಕವಾಗಿತ್ತು.

    Virat Kohli 2

    ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸುತ್ತಿದ್ದ ಚಿತ್ರವನ್ನೂ ಈ ಪ್ರಶ್ನೆಪತ್ರಿಕೆಯಲ್ಲಿ ನೀಡಲಾಗಿದ್ದು, ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದುವೆರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 28 ಶತಕ, 1 ಟಿ20 ಶತಕ ಹಾಗೂ 46 ಏಕದಿನ ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

  • ಗುಜರಾತ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ರೆ 10 ವರ್ಷ ಜೈಲು, 1 ಕೋಟಿ ದಂಡ – ಮಸೂದೆ ಪಾಸ್‌

    ಗುಜರಾತ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ರೆ 10 ವರ್ಷ ಜೈಲು, 1 ಕೋಟಿ ದಂಡ – ಮಸೂದೆ ಪಾಸ್‌

    ಗಾಂಧಿನಗರ:  ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಕಠಿಣ ಶಿಕ್ಷೆ ವಿಧಿಸುವ ಮಸೂದೆಯನ್ನು ಗುಜರಾತ್‌ ವಿಧಾನಸಭೆ (Gujarat Assembly) ಗುರುವಾರ ಅಂಗೀಕರಿಸಿದೆ.

    ಗೃಹಖಾತೆ ಸಚಿವ ಹರ್ಷ್ ಸಂಘವಿ ಗುಜರಾತ್ ಸಾರ್ವಜನಿಕ ಪರೀಕ್ಷೆ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ)-2023 ಮಸೂದೆಯನ್ನು  ಮಂಡಿಸಿದ್ದರು.  ಸರ್ಕಾರಿ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ (Leaking Question Papers) ಮಾಡುವ ಸಂಘಟಿತ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದರೆ ಗರಿಷ್ಟ 10 ವರ್ಷಗಳ ಜೈಲುಶಿಕ್ಷೆ ಹಾಗೂ 1 ಕೋಟಿ ರೂ. ದಂಡ ವಿಧಿಸಲು ಅವಕಾಶವಿದೆ.

    ಅಪರಾಧಿಗಳು ಅನ್ಯಾಯವಾಗಿ ಗಳಿಸಿದ ಹಣವನ್ನು ವಸೂಲಿ ಮಾಡಲು ಅವರ ಆಸ್ತಿಯನ್ನು ಹರಾಜು ಹಾಕಲು ಈ ಮಸೂದೆಯಲ್ಲಿ ಅವಕಾಶವಿದೆ. ಇದನ್ನೂ ಓದಿ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನ ಸಿಕ್ಕಿಬಿದ್ರೆ 5 ಸಾವಿರ ದಂಡ

    ಕಳೆದೆರಡು ವರ್ಷಗಳಲ್ಲಿ ಗುಜರಾತ್‍ನಲ್ಲಿ ವಿವಿಧ ಸರ್ಕಾರಿ ಹುದ್ದೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಕಳೆದ ವರ್ಷ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯಲ್ಲಿ ತೊಡಗಿಕೊಂಡಿರುವ ಅಂತರಾಜ್ಯ ಗ್ಯಾಂಗ್ ಒಂದನ್ನು ಪೊಲೀಸರು ಭೇದಿಸಿ ಹಲವಾರು ಸದಸ್ಯರನ್ನು ಜೈಲಿಗೆ ಕಳುಹಿಸಿದ್ದರು.

    ವಿಧಾನಸಭೆ ಚುನಾವಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಎತ್ತಿದ ಹಲವಾರು ಪ್ರಮುಖ ವಿಷಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯೂ ಪ್ರಮುಖವಾಗಿತ್ತು.

    ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನು ಮೂರು ವರ್ಷಗಳ ಕಾಲ ಡಿಬಾರ್ ಮಾಡುವ ಅವಕಾಶವೂ ಈ ಮಸೂದೆಯಲ್ಲಿದೆ. ಪರೀಕ್ಷೆಯನ್ನು ನಡೆಸುವ ಪರೀಕ್ಷಕರು ಈ ದಂಧೆಯಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ಜೈಲುಶಿಕ್ಷೆ ಹಾಗೂ ದಂಡವನ್ನು ಪಾವತಿಸಬೇಕಾಗುತ್ತದೆ.

    ಈ ಮಸೂದೆಯಲ್ಲಿ ಹಲವಾರು ದೋಷಗಳಿವೆ ಎಂದು ಗುಜರಾತಿನ ಕಾಂಗ್ರೆಸ್ ನಾಯಕ ಅರ್ಜುನ್ ಮೋದ್ವಾಡಿಯಾ ಆರೋಪಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆ.28ಕ್ಕೆ ಎಫ್‌ಡಿಎ ಪರೀಕ್ಷೆ ಮರು ನಿಗದಿ

    ಫೆ.28ಕ್ಕೆ ಎಫ್‌ಡಿಎ ಪರೀಕ್ಷೆ ಮರು ನಿಗದಿ

    ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮುಂದೂಡಿಕೆಯಾಗಿದ್ದ ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) ಪರೀಕ್ಷೆಯನ್ನು ಫೆ.28 ರಂದು ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ತೀರ್ಮಾನಿಸಿದೆ.

    ಇಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ ಆಯೋಗ ಫೆ.28 ಭಾನುವಾರ ನಡೆಸುವುದಾಗಿ ಅಧಿಕೃತವಾಗಿ ತಿಳಿಸಿದೆ.

    ಕೆಪಿಎಸ್‌ಸಿ  ಕಚೇರಿಯಿಂದಲೇ ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಜ.24ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆಯಾಗಿತ್ತು. ಖಚಿತ ಮಾಹಿತಿಯ ಆಧಾರದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ ಬಳಿಕ ಸೋರಿಕೆ ಪ್ರಕರಣ ಬೆಳಕಿಗೆ ಬಂದಿತ್ತು.

    2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ ಹುದ್ದೆಯ 1,114 ಪೋಸ್ಟ್ ಗಳಿಗೆ 3.74 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

  • ಕೆಪಿಎಸ್‌ಸಿಗೆ ಬೇಕಾಗಿದ್ದು 1,114 ಮಂದಿ – ಆದ್ರೆ 5 ಸಾವಿರ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ರವಾನೆ!

    ಕೆಪಿಎಸ್‌ಸಿಗೆ ಬೇಕಾಗಿದ್ದು 1,114 ಮಂದಿ – ಆದ್ರೆ 5 ಸಾವಿರ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ರವಾನೆ!

    – ಪ್ರಶ್ನೆ ಪತ್ರಿಕೆ ಲೀಕಾಸುರರಿಗೂ ಜಿಲ್ಲೆಯಲ್ಲಿ ಆಫೀಸ್!
    – ಒಂದು ಪ್ರಶ್ನೆ ಪತ್ರಿಕೆ 10 ಲಕ್ಷಕ್ಕೆ ಮಾರಾಟ

    ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನಡೆಸುವ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳ(ಎಫ್‌ಡಿಎ) ಪ್ರಶ್ನೆ ಪತ್ರಿಕೆಯನ್ನು 5 ಸಾವಿರ ಮಂದಿಗೆ ತಲುಪಿಸಲು ʼಲೀಕಾಸುರರುʼ ಪ್ಲಾನ್‌ ಮಾಡಿದ್ದ ವಿಚಾರ ಸಿಸಿಬಿ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.

    ಹೌದು, ಈ ಪ್ರಕರಣದ ಹಿಂದೆ ಸದ್ಯಕ್ಕೆ 14 ಮಂದಿಯ ಬಂಧನವಾಗಿದೆ. ಈ ಆರೋಪಿಗಳು ಜಿಲ್ಲೆಗಳಲ್ಲೂ ತಮ್ಮ ಕಾರ್ಯಸ್ಥಾನ ಮಾಡಿಕೊಂಡು ಒಬ್ಬೊಬ್ಬರನ್ನು ನೇಮಕ ಮಾಡಿದ್ದರು. ಬೆಳಗಾವಿ, ರಾಯಚೂರು , ಮೈಸೂರು, ಯಾದಗಿರಿಯಲ್ಲಿ ವ್ಯಕ್ತಿಗಳನ್ನು ನೇಮಕ ಮಾಡಲಾಗಿತ್ತು.

    ಬಂಧನಕ್ಕೆ ಒಳಗಾದ ವ್ಯಕ್ತಿಗಳ ಸಂಪರ್ಕದಲ್ಲಿ 500 ಮಂದಿಯ ಅಭ್ಯರ್ಥಿಗಳ ಲಿಂಕ್‌ ಇತ್ತು. ಒಟ್ಟು 5 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ದಿನ ಬೆಳಗಾಗುವುದರ ಒಳಗಡೆ ಯಶಸ್ವಿಯಾಗಿ ತಲುಪಿಸಲು ಮೊದಲೇ ಪ್ಲಾನ್‌ ಸಿದ್ಧವಾಗಿತ್ತು. ಕೆಪಿಎಸ್‌ಸಿ 1,114 ಹುದ್ದೆಗಾಗಿ ಅರ್ಜಿ ಆಹ್ವಾನಿಸಿತ್ತು. ಆದರೆ ಪರೀಕ್ಷೆ ನಡೆಯುವ ಮೊದಲೇ 5 ಸಾವಿರ ಮಂದಿಗೆ ಪ್ರಶ್ನೆ ಪತ್ರಿಕೆ ತಲುಪಿಸಲು ಲೀಕಾಸುರರು ಮುಂದಾಗಿದ್ದರು. ಈ ಮೂಲಕ ಹಲವು ವರ್ಷಗಳಿಂದ ಎಫ್‌ಡಿಎ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಸಾವಿರಾರು ಮಂದಿಯ ಕನಸಿಗೆ ಈ ಲೀಕಾಸುರರು ಕೊಳ್ಳಿ ಇಟ್ಟು ಭಗ್ನಗೊಳಿಸಿದ್ದಾರೆ.

    ಪ್ಲಾನ್‌ ಏನಿತ್ತು? ಪ್ರತಿ ಪ್ರಶ್ನೆ ಪತ್ರಿಕೆಗೆ ಬಾರ್‌ ಕೋಡ್‌ ಇರುತ್ತದೆ. ಬಾರ್‌ಕೋಡ್‌ ಇರುವ ಪ್ರಶ್ನೆ ಪತ್ರಿಕೆಯನ್ನು ಬಂಡಲ್‌ನಿಂದ ತೆಗೆದರೆ ಗೊತ್ತಾಗಬಹುದು ಎಂಬ ಕಾರಣಕ್ಕೆ ಅದನ್ನು ತೆಗೆದಿಲ್ಲ. ಬದಲಾಗಿ ಒಟ್ಟು 36 ಪುಟಗಳ ಪ್ರಶ್ನೆ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯಿಂದ 86 ಪ್ರಶ್ನೆ,ಕನ್ನಡ ಪತ್ರಿಕೆಯಿಂದ 86 ಪ್ರಶ್ನೆ ಒಟ್ಟು 172 ಪ್ರಶ್ನೆಗಳನ್ನು ಸೋರಿಕೆ ಮಾಡಿ ಬಳಿಕ ಉತ್ತರಗಳನ್ನು ಸಿದ್ಧಮಾಡಿದ್ದರು.

    ಮೋಹನ್‌ ನಾಪತ್ತೆ: ಕೆಪಿಎಸ್‌ಸಿಯ ಎಸ್‌ಡಿಎ ನೌಕರ ಮೋಹನ್‌ ಪ್ರಶ್ನೆ ಪತ್ರಿಕೆಯನ್ನು ಪ್ರಮುಖ ಪಾತ್ರವಹಿಸಿದ್ದಾನೆ ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ. ಈತ ಈಗಾಗಲೇ ಬಂಧನವಾಗಿರುವ ಕೋರಮಂಗಲದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇನ್ಸ್‌ಪೆಕ್ಟರ್‌ ಚಂದ್ರಪ್ಪ, ಎಸ್‌ಡಿಎ ನೌಕರ ರಾಚಪ್ಪನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ವಿಶೇಷ ಏನೆಂದರೆ ಮೋಹನ್‌ ಬೆಳಗಾವಿಯಲ್ಲಿ ಇಂದು ಎಫ್‌ಡಿಎ ಪರೀಕ್ಷೆ ಬರೆಯಬೇಕಿತ್ತು. ಆದರೆ ಚಂದ್ರಪ್ಪ, ರಾಚಪ್ಪ ಬಂಧನಕ್ಕೆ ಒಳಗಾದ ಸುದ್ದಿ ತಿಳಿದು ಮೋಹನ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಬೆಳಗಾವಿಯಿಂದಲೇ ಪರಾರಿಯಾಗಿದ್ದಾನೆ.

    14 ಮಂದಿ ಬಂಧನ: ಸಿಸಿಬಿ ಪೊಲೀಸರು ಶನಿವಾರ ಈ ಪ್ರಕರಣದ ಸಂಬಂಧ 6 ಮಂದಿಯನ್ನು ಬಂಧಿಸಿದ್ದರು. ನಿನ್ನೆ ರಾತ್ರಿ ಮತ್ತು ಇಂದು ಒಟ್ಟು 8 ಮಂದಿಯನ್ನು ಬಂದಿಸಿದ್ದು, ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈ ಪೈಕಿ ಹಲವು ಮಂದಿ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರಿಂದ ಒಟ್ಟು 36 ಲಕ್ಷ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರ ಪೈಕಿ ಕೆಲವರು ಅಭ್ಯರ್ಥಿಗಳಾಗಿರುವುದು ವಿಶೇಷ.

    ನಕಲಿ ಚೆಕ್‌: ಆರೋಪಿಗಳು ಪ್ರಶ್ನೆ ಪತ್ರಿಕೆ ಮಾರಾಟಕ್ಕೆ 10 ಲಕ್ಷ ರೂ. ದರ ನಿಗದಿ ಮಾಡಿದ್ದರು. ಆರೋಪಿಗಳ ಪೈಕಿ ಹಣ ನೀಡಲು ಸಾಧ್ಯವಾಗದವರು ಖಾಲಿ ಚೆಕ್‌ಗಳನ್ನು ನೀಡಿದ್ದರು. ಈಗ ಖಾಲಿ ಚೆಕ್‌ಗಳನ್ನು ನೀಡಿದವರ ಪತ್ತೆಗೆ ಸಿಸಿಬಿ ಪೊಲೀಸರು ಮುಂದಾಗುತ್ತಿದ್ದಾರೆ.

    ಎಫ್‌ಡಿಎ ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ಕೆಪಿಎಸ್‌ಸಿ ಮೇಲಿದೆ. ಪ್ರಶ್ನೆಪತ್ರಿಕೆ ಸಿದ್ಧಗೊಂಡು, ಪ್ರಿಂಟ್‌ ಮಾಡಿದ ಬಳಿಕ ಪರೀಕ್ಷೆಯ ಹಿಂದಿನ ದಿನ ಜಿಲ್ಲೆಗಳ ಖಜಾನೆಗೆ ಸಾಗಿಸಲಾಗುತ್ತದೆ. ಬಹಳ ರಹಸ್ಯವಾಗಿ ಇರಬೇಕಾದ ಪ್ರಶ್ನೆಗಳು ಆರೋಪಿಗಳಿಗೆ ಸಿಕ್ಕಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

  • 1 ಪೇಪರ್‌ಗೆ 10 ಲಕ್ಷ  ಡೀಲ್‌ – ಕೆಪಿಎಸ್‌ಸಿ ಕಚೇರಿಯಿಂದಲೇ ಎಫ್‌ಡಿಎ ಪ್ರಶ್ನೆ ಪತ್ರಿಕೆ ಲೀಕ್‌

    1 ಪೇಪರ್‌ಗೆ 10 ಲಕ್ಷ ಡೀಲ್‌ – ಕೆಪಿಎಸ್‌ಸಿ ಕಚೇರಿಯಿಂದಲೇ ಎಫ್‌ಡಿಎ ಪ್ರಶ್ನೆ ಪತ್ರಿಕೆ ಲೀಕ್‌

    – ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ
    – ಶನಿವಾರ ಪ್ರಶ್ನೆ ಪತ್ರಿಕೆ ಲೀಕ್‌

    ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಯಿಂದಲೇ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳ(ಎಫ್‌ಡಿಎ) ಪ್ರಶ್ನೆ ಪತ್ರಿಕೆ ಸೋರಿಕೆಯಾದ ವಿಚಾರ ಸಿಸಿಬಿಯ ಪ್ರಾಥಮಿಕ ತನಿಖೆಯ ವೇಳೆ ದೃಢಪಟ್ಟಿದೆ.

    ಇಂದು ಎಫ್‌ಡಿಎ ಪರೀಕ್ಷೆ ನಡೆಯಬೇಕಿತ್ತು. ಆದರೆ ಪರೀಕ್ಷೆ ನಡೆಯುವ ಮುನ್ನವೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ. ಸಿಸಿಬಿ ಪ್ರಕರಣದ ಸಂಬಂಧ  6 ಮಂದಿಯನ್ನು ಬಂಧಿಸಿದೆ.

    ಸದ್ಯಕ್ಕೆ 6 ಮಂದಿ ಬಂಧನಕ್ಕೆ ಒಳಗಾಗಿದ್ದು ಹಲವರು ಪರಾರಿಯಾಗಿದ್ದಾರೆ. ರಾಚಪ್ಪ, ಚಂದ್ರು ಬಂಧಿತ ಪ್ರಮುಖ ಆರೋಪಿಗಳು. ಬಂಧಿತರಿಂದ 24 ಲಕ್ಷ ರೂ. ನಗದು, 3 ವಾಹನಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

    ಕೆಪಿಎಸ್‍ಸಿಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಯಿಂದ ಪ್ರಶ್ನೆ ಪತ್ರಿಕೆ ಬಹಿರಂಗವಾಗಿತ್ತು. ಈ ಅಧಿಕಾರಿಗೆ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್‌ಪೆಕ್ಟರ್‌ ಚಂದ್ರು ಸಾಥ್‌ ನೀಡಿದ್ದ. ಶನಿವಾರ ಸಂಜೆ ಪ್ರಶ್ನೆಪತ್ರಿಕೆಯನ್ನು ಉಲ್ಲಾಳದಲ್ಲಿರುವ ಫ್ಲ್ಯಾಟ್‌ಗೆ ತೆಗೆದುಕೊಂಡು ಹೋಗಿದ್ದ. ಇನ್ಸ್‌ಪೆಕ್ಟರ್‌ ಚಂದ್ರು ಪ್ರಶ್ನೆಪತ್ರಿಕೆಯನ್ನು ರಾಜ್ಯದ ವಿವಿಧೆಡೆ ಇರುವ ಮಧ್ಯವರ್ತಿಗಳಿಗೆ ಹಂಚಿಕೆ ಮಾಡಲು ಸಂಚು ರೂಪಿಸಿದ್ದ. ಪ್ರಾಥಮಿಕ ತನಿಖೆಯ ವೇಳೆ ಕೆಪಿಎಸ್‍ಸಿ ಅಧಿಕಾರಿ ಒಂದು ಪೇಪರ್‌ಗೆ 10 ಲಕ್ಷ ರೂ. ಡೀಲ್‌ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.

    ಈ ಬಗ್ಗೆ ಮಾಹಿತಿ ನೀಡಿದ್ದ ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ್, ಕೆಪಿಎಸ್‌ಸಿ ನಡೆಸುವ ಎಫ್‌ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ವಿಶೇಷ ತಂಡವೊಂದನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ ಹಂಚಲು ಬಳಕೆ ಮಾಡುತ್ತಿದ್ದ ಮೂರು ವಾಹನಗಳನ್ನೂ ಜಪ್ತಿ ಮಾಡಲಾಗಿದೆ. ಸೋರಿಕೆ ಎಲ್ಲಿಂದ ಆಯಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಹೇಳಿದ್ದರು.

  • ಪಿಯುಸಿ ಪ್ರಶ್ನೆಪತ್ರಿಕೆ ಲೀಕ್ ಭಯ ಹಿನ್ನೆಲೆ – ಲೀಕಾಸುರರಿಗೆ ಬಿಗಿ ಮಾಡಿರೋ ಪೊಲೀಸ್ರು

    ಪಿಯುಸಿ ಪ್ರಶ್ನೆಪತ್ರಿಕೆ ಲೀಕ್ ಭಯ ಹಿನ್ನೆಲೆ – ಲೀಕಾಸುರರಿಗೆ ಬಿಗಿ ಮಾಡಿರೋ ಪೊಲೀಸ್ರು

    ಬೆಂಗಳೂರು: ಪಿಯುಸಿ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ಮಕ್ಕಳು ಕಷ್ಟ ಪಟ್ಟು ಓದಿ ಒಳ್ಳೆ ಮಾರ್ಕ್ಸ್ ತೆಗೆದು, ಭವಿಷ್ಯ ರೂಪಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಆದರೆ ಪ್ರಿಪರೇಟರಿ ಪೇಪರ್ ಲೀಕ್ ಆಗಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಮನೆ ಮಾಡಿತ್ತು. ಹೀಗಾಗಿ ಪ್ರಶ್ನೆಪತ್ರಿಕೆ ಲೀಕಾಸುರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಪಿಯುಸಿ ಪಶ್ನೆಪತ್ರಿಕೆ ಲೀಕ್ ಆಗದಂತೆ ತಡೆಯಲು ಪ್ರಯತ್ನ ನಡೆಸಿದ್ದಾರೆ.

    ಪ್ರಿಪರೇಟರಿ ಪರೀಕ್ಷೆಯ ಪೇಪರ್ ಲೀಕ್ ಮಾಡಿದ್ದವರನ್ನ ಸಹ ಅಂದರ್ ಮಾಡಲಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಸೇರಿದಂತೆ 14 ಮಂದಿಯನ್ನ ವಿಚಾರಣೆ ನಡೆಸಲಾಗಿದೆ. ಜೊತೆಗೆ ಪೊಲೀಸರು ಪೂರ್ವಸಿದ್ಧತಾ ಪತ್ರಿಕೆ ಲೀಕ್ ಮಾಡಿದವರನ್ನು ಅರೆಸ್ಟ್ ಮಾಡಿದ್ದಾರೆ. ಇದಲ್ಲದೆ ಪ್ರಶ್ನೆಪತ್ರಿಕೆ ಲೀಕಾಸುರರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

    ಕಳೆದ ಬಾರಿ ಲೀಕ್ ಮಾಡಿದ್ದ ಕಿಂಗ್‍ಪಿನ್ ಶಿವಕುಮಾರ್, ಬಸವರಾಜ್, ಅಮೀರ್ ಅಹ್ಮದ್ ಹಾಗೂ ಅನಿಲ್ ಫ್ರಾನ್ಸಿಸ್ ಚಲನವಲನದ ಮೇಲೆ ಸಹ ಕಣ್ಣಿಡಲಾಗಿದೆ. ಈ ಹಿಂದೆ ಪಿಯುಸಿ ಪತ್ರಿಕೆ ಲೀಕ್ ಮಾಡಿ ಜೈಲು ಸೇರಿದ್ದ ಕಿಂಗ್‍ಪಿನ್‍ಗಳ ಮೇಲೆ ಕೋಕಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಸದ್ಯ ಕಿಂಗ್‍ಪಿನ್‍ಗಳ ಪ್ರತಿಯೊಂದು ಚಲನವಲನದ ಮೇಲೆ ಸಿಸಿಬಿ ಕಣ್ಣಿಟ್ಟಿದ್ದು, ಪಿಯು ಪರೀಕ್ಷೆ ಸುಗಮವಾಗಿ ನಡೆಯಲು ಕಸರತ್ತು ನಡೆಸುತ್ತಿದ್ದಾರೆ.

  • ಈ ಬಾರಿಯ ಪರೀಕ್ಷೆಯಲ್ಲಿ ಪಿಯು ಬೋರ್ಡ್ ಪಾಸ್

    ಈ ಬಾರಿಯ ಪರೀಕ್ಷೆಯಲ್ಲಿ ಪಿಯು ಬೋರ್ಡ್ ಪಾಸ್

    ಬೆಂಗಳೂರು: ಕಳೆದ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದ ಪಿಯು ಬೋರ್ಡ್ ಈ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದೆ.

    2016-17ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಸೋಮವಾರಕ್ಕೆ ಮುಕ್ತಾಯವಾಯಿತು. ಇಂದು ಇಂಗ್ಲಿಷ್ ವಿಷಯದ ಪರೀಕ್ಷೆ ನಡೆದಿದ್ದು ನಾಲ್ಕು ಜನ ಡಿಬಾರ್ ಆಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ ಮಾತನಾಡಿ, ಈ ಬಾರಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೇ ಪಿಯು ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮುಂದಿನ ಏಪ್ರಿಲ್ 5ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯನ್ನು 6.84 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಇಂದಿನದ್ದು ಸೇರಿ ಒಟ್ಟು 38 ಮಂದಿ ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ ಎಂದು ತಿಳಿಸಿದರು.

    ಈ ಬಾರಿ ಏನೇನು ಸುಧಾರಣೆಯಾಗಿತ್ತು?
    ಕಳೆದ ವರ್ಷ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಎರಡು ಬಾರಿ ಸೋರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಡುವ ಖಜಾನೆ (ಸ್ಟ್ರಾಂಗ್ ರೂಂ) ಬಳಿ ಯಾರದ್ದೇ ಚಲನವಲನ ಕಂಡರೂ ತಕ್ಷಣ ಅದರ ವಿಡಿಯೋ ತುಣುಕು ಸಮೇತ `ಅಲರ್ಟ್’ ಮಾಡುವಂತಹ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಈ ಬಾರಿ ಅಳವಡಿಸಿತ್ತು.

    ಖಜಾನೆಯ ಕಣ್ಗಾವಲು ಪ್ರದೇಶದ ವ್ಯಾಪ್ತಿಯೊಳಗೆ ಯಾರದ್ದೇ ಚಲನವಲನ ಕಂಡರೂ ಅದರ 15 ಸೆಕೆಂಡ್ ವಿಡಿಯೋ ತುಣುಕು ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಖಜಾನೆ ಅಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾ ಉಪನಿರ್ದೇಶಕರ ಮೊಬೈಲ್‍ಗಳಿಗೆ ಸಂದೇಶ ರವಾನೆ ಆಗುವಂತಹ ಈ ವ್ಯವಸ್ಥೆಯಿಂದಾಗಿ ಈ ಬಾರಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ.

    ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ದೂರದ ಪರೀಕ್ಷಾ ಕೇಂದ್ರಗಳಿಗೂ ತಲುಪಲು ಸಾಧ್ಯವಾಗುವಂತೆ ಪರೀಕ್ಷಾ ಸಮಯವನ್ನು ಈ ಬಾರಿ ಬದಲಾವಣೆ ಮಾಡಲಾಗಿತ್ತು. ಹಿಂದಿನ ವರ್ಷ ಪರೀಕ್ಷೆಗಳು ಬೆಳಿಗ್ಗೆ 9ರಿಂದ ಆರಂಭವಾಗುತ್ತಿದ್ದರೆ, ಈ ಬಾರಿ ಬೆಳಿಗ್ಗೆ 10.15ರಿಂದ ಆರಂಭಗೊಂಡು ಮಧ್ಯಾಹ್ನ 1.30ರವರೆಗೆ ನಡೆದಿತ್ತು.

    ಕೇರಳದಲ್ಲಿ ಸೋರಿಕೆ: ಕೇರಳದಲ್ಲಿ ಮಾರ್ಚ್ 25ರಂದು ಎಸ್‍ಎಸ್‍ಎಲ್‍ಸಿಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಮಾರ್ಚ್ 31ರಂದು ಮತ್ತೊಮ್ಮೆ ಪರೀಕ್ಷೆ ನಡೆಯಲಿದೆ.

    ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪಿಯು ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಕ್ಕೆ ಕಾಲೇಜಿನ ಮಾನ್ಯತೆ ರದ್ದು