Tag: ಪ್ರಶ್ನೆಗಳು

  • ಜಯಾ ಆಸ್ಪತ್ರೆ ವಿಡಿಯೋ ರಿಲೀಸ್: ಮತ್ತೆ ಎದ್ದಿದೆ ಉತ್ತರವಿಲ್ಲದ ಪ್ರಶ್ನೆಗಳು

    ಜಯಾ ಆಸ್ಪತ್ರೆ ವಿಡಿಯೋ ರಿಲೀಸ್: ಮತ್ತೆ ಎದ್ದಿದೆ ಉತ್ತರವಿಲ್ಲದ ಪ್ರಶ್ನೆಗಳು

    ಚೆನ್ನೈ: ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ರಿಲೀಸ್ ಆಗಿದೆ. ಆದರೆ ಈ ವಿಡಿಯೋದ ಬಗ್ಗೆ ಅನೇಕರು ಸಂಶಯ ಕೂಡ ವ್ಯಕ್ತಪಡಿಸಿದ್ದಾರೆ. ಉತ್ತರವಿಲ್ಲದ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

    ಆಸ್ಪತ್ರೆಯ ಬೆಡ್ ಮೇಲೆ ಜಯಲಲಿತಾ ಆಹಾರ ಸೇವನೆ ಮಾಡುತ್ತಿರೋ 20 ಸೆಕೆಂಡ್‍ಗಳ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಜಯಲಲಿತಾ ಜ್ಯೂಸ್ ಕುಡಿಯುತ್ತಾ ಟಿವಿ ನೋಡುತ್ತಿರೋದನ್ನ ಕಾಣಬಹುದು. ಗುರುವಾರ ರಾಧಾಕೃಷ್ಣ ನಗರ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಈ ಹೊತ್ತಲ್ಲೇ ಶಶಿಕಲಾ ಬಣ ಆಸ್ಪತ್ರೆ ವಿಡಿಯೋವನ್ನ ಬಿಡುಗಡೆ ಮಾಡಿದೆ. ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಫೋಟೋ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರೂ ಯಾವುದೇ ಫೋಟೋ ರಿಲೀಸ್ ಆಗಿರಲಿಲ್ಲ.

    ಜಯಲಲಿತಾ ಕೊನೆಯ ದಿನಗಳಲ್ಲಿ ಹೇಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ನಮ್ಮಲ್ಲಿ ಕೆಲವು ವಿಡಿಯೋಗಳಿದ್ದು, ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಶಶಿಕಲಾ ಸೋದರ ಸಂಬಂಧಿ ಜಯನಾಥ್ ದಿವಾಕರನ್ ಈ ಹಿಂದೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು. ಪನ್ನಿರ್ ಸೆಲ್ವಂ ಅವರ ಗುಂಪಿನ ಟೀಕೆಗಳಿಗೆ ಉತ್ತರ ಎಂಬಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.

    ಜಯಲಲಿತಾ ಸಾವು ನಿಗೂಢವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಪನ್ನೀರ್ ಸೆಲ್ವಂ ಬಣ ಒತ್ತಾಯಿಸಿತ್ತು. ಅಲ್ಲದೆ ಜಯಲಲಿತಾ ಅವರನ್ನ ಕೊಲೆ ಮಾಡಲಾಗಿದೆ ಎಂದು ಕೂಡ ಆರೋಪಿಸಲಾಗಿತ್ತು. ಇದನ್ನು ತಮ್ಮ ಫೇಸ್ ಬುಕ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದ ದಿವಾಕರನ್, ”ಜಯಲಲಿತಾ ಹಾಗೂ ಶಶಿಕಲಾ ನಡುವಿನ ಅನ್ಯೋನ್ಯತೆ ಎಷ್ಟಿತ್ತು ಎಂಬುದು ನನಗೆ ಗೊತ್ತು. ಅದಕ್ಕೆ ಸಾಕ್ಷಿಯಾಗಿ ಜಯಲಲಿತಾ ಅವರ ಕೊನೆಯ ದಿನಗಳಲ್ಲಿ ಅವರ ಹಾಗೂ ಶಶಿಕಲಾ ನಡುವಿನ ಬಾಂಧವ್ಯವನ್ನು ಬಿಂಬಿಸುವ ವೀಡಿಯೋಗಳು ನನ್ನಲ್ಲಿವೆ. ಜಯಲಲಿತಾ ತಮ್ಮ ಕೊನೆಯ ದಿನಗಳನ್ನು ಕಳೆದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಅವುಗಳನ್ನು ಚಿತ್ರೀಕರಿಸಲಾಗಿದೆ. ನಾನು ಆ ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಹಾಕಿದರೆ ಹೇಗಿರುತ್ತೆ? ಜಯಲಲಿತಾ ಅವರದ್ದು ಸಹಜ ಸಾವಲ್ಲ ಎಂದು ದನಿಯೆತ್ತಿದ್ದ ಪನ್ನೀರ್ ಸೆಲ್ವಂ ಬಣದ ಪಿಎಚ್ ಪಾಂಡಿಯನ್ ಹಾಗೂ ಮನೋಜ್ ಕೆ. ಪಾಂಡಿಯನ್ ಅವರ ಪರಿಸ್ಥಿತಿ ಹೇಗಿರುತ್ತೆ?” ಎಂದು ದಿವಾಕರನ್ ಹೇಳಿಕೊಂಡಿದ್ದರು. ಇದನ್ನೂ ಓದಿ: ತಮಿಳುನಾಡು ಚುನಾವಣೆಯ ದಿಕ್ಕನ್ನೆ ಬದಲಾಯಿಸುವ ಶಕ್ತಿ ಫೋಟೋ, ವಿಡಿಯೋಗಳಿಗಿದೆ!

    ಉತ್ತರವಿಲ್ಲದ ಪ್ರಶ್ನೆಗಳು
    1. ವಿವಿಐಪಿಗಳಿಗೆ ಆಸ್ಪತ್ರೆಯಲ್ಲಿ ಎಕ್ಸಿಕ್ಯೂಟಿವ್ ಕೊಠಡಿ ನೀಡಲಾಗುತ್ತದೆ. ಆದರೆ ಇದು ಸ್ಪೆಷಲ್ ವಾರ್ಡ್ ಜಯಾಗೆ ಯಾಕೆ ಹೀಗೆ?
    2. ಶ್ವಾಸಕೋಶದಲ್ಲಿ ಸೋಂಕು ಇರುವಾಗ ರೋಗಿಗೆ ನೈಟಿ ಹಾಕಿಕೊಳ್ಳೋಕೆ ಹೇಗೆ ಅವಕಾಶ ಕೊಡಲಾಯಿತು?
    3. ಜಯಾ ವಾರ್ಡ್‍ನಲ್ಲಿ ಮೊಬೈಲ್ ಬಳಕೆಗೆ ಅವಕಾಶ ಇರಲಿಲ್ಲ? ಇಷ್ಟು ಹತ್ತಿರದಿಂದ ವಿಡಿಯೋ ಮಾಡಲು ಹೇಗೆ ಸಾಧ್ಯ?
    4.ಜಯಲಲಿತಾ ಸಾವನ್ನಪ್ಪಿದ ಒಂದು ವರ್ಷದ ಬಳಿಕ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ..?
    5. ಜಯಲಲಿತಾ ಸಾವನ್ನಪ್ಪಿದಾಗ ಇದ್ದ ಅವರ ಮುಖದ ಬಣ್ಣಕ್ಕೂ, ಈ ವಿಡಿಯೋದಲ್ಲಿರೋ ಮುಖದ ಬಣ್ಣಕ್ಕೂ ಸಾಮ್ಯತೆ ಇಲ್ಲ?
    6. ಈ ವಿಡಿಯೋದಲ್ಲಿರುವ ಅಮ್ಮಾ ತುಂಬಾ ಸಣ್ಣ ಇದ್ದಾರೆ. ಜಯಾ ಮೃತದೇಹಕ್ಕೂ ಈ ವಿಡಿಯೋದಲ್ಲಿರೋ ದೇಹಕ್ಕೂ ಸಾಮ್ಯತೆ ಇಲ್ಲ.
    7. ಸಕ್ಕರೆ ಕಾಯಿಲೆಯಿಂದ ಗ್ಯಾಂಗ್ರೀನ್ ಆಗಿ ಒಂದು ಕಾಲನ್ನ ಕತ್ತರಿಸಲಾಗಿತ್ತು ಅಂತಾ ಹೇಳುತ್ತಾರೆ.ಆದ್ರೆ ಈ ವಿಡಿಯೋದಲ್ಲಿ ಎರಡು ಕಾಲುಗಳು ಚೆನ್ನಾಗಿವೆ.
    8. ದೃಶ್ಯದಲ್ಲಿ ಅರ್ಧ ಮುಖ ಮಾತ್ರ ಕಾಣಿಸುತ್ತಿದೆ. ಈ ಅರ್ಧ ಮುಖಗಳು ಕೆಲವು ಬಾರಿ ಕೆಲವರಿಗೆ ಸಾಮ್ಯತೆ ಆಗೋ ಸಾಧ್ಯತೇ ಹೆಚ್ಚು.
    9.ಜಯಾರನ್ನ ಆಸ್ಪತ್ರೆಗೆ ದಾಖಲಿಸಿದ ಕ್ಷಣದಿಂದಲೂ ಅವರು ಐಸಿಯುನಲ್ಲಿದ್ದಾರೆ ಅನ್ನೋ ಮಾಹಿತಿ ಇತ್ತು…? ಆದ್ರೆ, ಇಲ್ಲಿ ಆರಾಮಾಗಿದ್ದಾರೆ..?