ಯಶ್ ನಟನೆಯ ಕಿರಾತಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಓವಿಯಾ, ಲೈಂಗಿಕ ವಿಷಯದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಈ ಹಿಂದೆ ಅವರು ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಮಾಡಿ ಎಂದು ಸ್ಟೇಟ್ ಮೆಂಟ್ ಕೊಟ್ಟಿದ್ದರು. ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಸೆಕ್ಸ್ ಬಗ್ಗೆ ಮಾತನಾಡಿದ್ದಾರೆ ಓವಿಯಾ. ಈ ಕಾರಣದಿಂದಾಗಿ ಅಭಿಮಾನಿಯೊಬ್ಬ ಬೆಂಕಿ ರೀತಿಯ ಪ್ರಶ್ನೆ ಕೇಳಿದ್ದಾನೆ.
ಕೇವಲ ಸೆಕ್ಸ್ ಗಾಗಿ ನಾನು ಮದುವೆ ಆಗಲಾರೆ. ಸೆಕ್ಸ್ ಮಾಡುವುದಕ್ಕಾಗಿ ಹುಡುಗನನ್ನು ಮದುವೆಯಾಗಿ ಜೀವನ ಪೂರ್ತಿ ಅವನ ಸೇವೆ ಮಾಡಲಾರೆ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಈ ಮಾತು ಕೇಳಿದ ಅನೇಕರು ‘ನೀನೇನು ಸಲಿಂಗಕಾಮಿಯೇ?’ (Homosexuality) ಎಂದು ಪ್ರಶ್ನೆ ಮಾಡಿದ್ದಾರೆ.
ನಟಿ ಓವಿಯಾ (Oviya) ಅಚ್ಚರಿಯ ಹೇಳಿಕೆ ಕೊಡುತ್ತಲೇ ಸುದ್ದಿ ಆಗುತ್ತಿದ್ದಾರೆ. ಅವರು ಆಡಿದ ಮಾತುಗಳು ಸಾಕಷ್ಟು ಚರ್ಚೆಗೂ ಕಾರಣವಾಗಿವೆ. ಕೆಲವರು ಓವಿಯಾ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ಮೊನ್ನೆಯಷ್ಟೇ ಅವರು ಅತ್ಯಾಚಾರ ಕುರಿತಂತೆ ಮಾತನಾಡಿ ‘ವೇಶ್ಯಾವಾಟಿಕೆಯನ್ನು (Prostitution) ಕಾನೂನುಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ’ ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಜೊತೆಗೆ ಲೈಂಗಿಕ ಶಿಕ್ಷಣದ ಬಗ್ಗೆಯೂ ಮಾತನಾಡಿದ್ದರು.
ಎಲ್ಲರಿಗೂ ಲೈಂಗಿಕ ಆಸಕ್ತಿಗಳು ಇವೆ. ಅದನ್ನು ಅದುಮಿಟ್ಟುಕೊಂಡು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಮನುಷ್ಯರಿಗೆ ಸಹಜವಾದದ್ದು ಇರಲೇಬೇಕು ಎಂದು ಓವಿಯಾ ಮಾತನಾಡಿದ್ದರು. ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿತ್ತು. ಓವಿಯಾಗೆ ಅವಕಾಶಗಳು ಕಡಿಮೆ ಆಗುತ್ತಿವೆ. ಹಾಗಾಗಿ ಈ ರೀತಿ ಮಾತನಾಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಮುಂಜಾನೆ ವಾಕಿಂಗ್‍ಗೆ ಹೋಗಿದ್ದಾಗ ಎದುರಲ್ಲಿ ಸಿಕ್ಕ ಜನರು ಕೇಳಿದ ಪ್ರಶ್ನೆಗೆ ನಾಚಿ ನೀರಾಗಿದ್ದಾರೆ.
ವಾಕಿಂಗ್ ಹೋಗುತ್ತಿದ್ದ ಮುಖ್ಯಮಂತ್ರಿ ಸ್ಟಾಲಿನ್ ಅವರ ಬಳಿ ಕೆಲವು ಮಹಿಳೆಯರು ರಸ್ತೆಯಲ್ಲಿ ಮಾತನಾಡಿದ್ದು, ನೀವು ಸದಾ ಯುವಕರಂತೆ ಕಾಣುತ್ತೀರಲ್ಲ, ನಿಮ್ಮ ಸೌಂದರ್ಯ, ಉತ್ಸಾಹದ ಗುಟ್ಟೇನು? ಎಂದು ಕೇಳಿದ್ದಾರೆ. ಇದನ್ನು ಕೇಳಿ ಸಿಎಂ ಸ್ಟಾಲಿನ್ ನಾಚಿಕೊಂಡಿದ್ದಾರೆ. ಮಹಿಳೆ ಆ ಪ್ರಶ್ನೆ ಕೇಳುತ್ತಿದ್ದಂತೆ ಜೋರಾಗಿ ನಕ್ಕು, ನಾನು ಡಯಟ್ ಕಂಟ್ರೋಲ್ ಮಾಡುತ್ತೇನೆ. ಅದರಿಂದಲೇ ನಾನಿನ್ನೂ ಫಿಟ್ ಆಗಿದ್ದೇನೆ ಎಂದಿದ್ದಾರೆ. ಈ ವೀಡಿಯೋವನ್ನು ಡಿಎಂಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗಿದೆ.
M K Stalin blushes as a lady asks the secret of his youthful look, during his morning walk. He responds “diet control”. pic.twitter.com/178TnzrNxE
ನನ್ನ ಬಿಡುವಿಲ್ಲದ ದಿನಚರಿಯ ನಡುವೆಯೇ ನನ್ನ ಆರೋಗ್ಯಕ್ಕೆಂದು ಸ್ವಲ್ಪ ಸಮಯವನ್ನು ಮೀಸಲಿಡುತ್ತೇನೆ. ಹಾಗೇ ನನ್ನ ಬಿಡುವಿನ ಸಮಯದಲ್ಲಿ ಮೊಮ್ಮಕ್ಕಳೊಂದಿಗೆ ಎಂಜಾಯ್ ಮಾಡಿ, ರಿಲ್ಯಾಕ್ಸ್ ಆಗುತ್ತೇನೆ. ಬೆಳಗ್ಗೆ ಬಹಳ ಬೇಗ ಏಳುವ ನಾನು ದಿನವೂ ವಾಕಿಂಗ್ ಹೋಗುತ್ತೇನೆ. ವಾಕಿಂಗ್ ಬಳಿಕ ಯೋಗ ಮಾಡುತ್ತೇನೆ. 10 ದಿನಗಳಿಗೆ ಒಮ್ಮೆ ಸೈಕ್ಲಿಂಗ್ ಮಾಡುತ್ತೇನೆ. ಇದರಿಂದ ನನ್ನ ದೇಹ ಫಿಟ್ ಆಗಿರುತ್ತದೆ. ಇದರಿಂದಲೇ ನಾನು ಎಷ್ಟೇ ಬ್ಯುಸಿಯಾಗಿದ್ದರೂ ಸುಸ್ತಾಗುವುದಿಲ್ಲ ಎಂದಿದ್ದಾರೆ.
M K Stalin blushes as a lady asks the secret of his youthful look, during his morning walk. He responds “diet control”. pic.twitter.com/178TnzrNxE
ಎಂ.ಕೆ. ಸ್ಟಾಲಿನ್ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದ ವೀಡಿಯೋವೊಂದನ್ನು ಇತ್ತೀಚೆಗೆ ಡಿಎಂಕೆ ಹಂಚಿಕೊಂಡಿತ್ತು. ಸ್ಟಾಲಿನ್ ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ಫಿಟ್ನೆಸ್ ವೀಡಿಯೋಗಳನ್ನು ಟ್ವಿಟ್ಟರ್‌ನಲ್ಲಿ ಆಗಾಗ ಪೋಸ್ಟ್ ಮಾಡಲಾಗುತ್ತಿದೆ. ಸ್ಟಾಲಿನ್ ಫಿಟ್ನೆಸ್ ವೀಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಬಿಗ್‍ಬಾಸ್, ಈ ಸೀಸನ್‍ನಲ್ಲಿ ಮೊದಲ ಬಾರಿಗೆ ವೀಕ್ಷಕರಿಗೆ ಸ್ಪರ್ಧಿಗಳ ಜೊತೆಗೆ ಮಾತನಾಡಲು ಅವಕಾಶ ನೀಡಲಾಗಿತ್ತು.
ಅದರಂತೆ ಜನಾರ್ದನ್ ಎಂಬವರು ಕರೆ ಮಾಡಿ, ನಾನು ಪ್ರತಿ ದಿನ ಬಿಗ್‍ಬಾಸ್ ಫಾಲೋ ಮಾಡುತ್ತಿದ್ದೇನೆ. ನನ್ನ ಪ್ರಶ್ನೆ ದಿವ್ಯಾ ಸುರೇಶ್‍ರವರಿಗೆ ಅಂತಾ ಹೇಳಿ, ನೀವು ಬಹಳ ಚೆನ್ನಾಗಿ ಆಟ ಆಡುತ್ತಿದ್ದೀರಾ. ನೀವು ಯಾರನ್ನೋ ಫಾಲೋ ಮಾಡಿ ಆಟ ಆಡುತ್ತಿದ್ದೀರಾ ಎಂಬ ಆರೋಪಗಳು ಕೇಳಿಬರುತ್ತಿದ್ದರೂ ತಲೆ ಕೆಡಿಸಿಕೊಳ್ಳದೇ ಈಗ ನೀವು ಇಂಡಿಪೆಂಡೆಂಟ್ ಆಗಿ ಆಟ ಆಡುತ್ತಿದ್ದೀರಾ.
ಆದರೆ ಮೊನ್ನೆ ನಡೆದ ಲವ್ ಲೆಟರ್ ಟಾಸ್ಕ್ ವೇಳೆ, ಬೇರೆಯವರು ಬರೆದ ಲೆಟರ್‍ನನ್ನು ನೀವು ಹುಡುಕುವುದಕ್ಕೆ ನಿಧಿ ಅವರಿಗೆ ಸಹಾಯ ಮಾಡಿದ್ರಿ. ಕೊನೆಗೆ ನಿಮ್ಮ ಹತ್ತಿರ ಅತೀ ಹೆಚ್ಚು ಲೆಟರ್ಸ್ ಉಳಿಯಿತು. ಇದಕ್ಕೆ ಕಾರಣ ನಿಧಿಯವರು ಹೆಲ್ಪ್ ಮಾಡಿದ್ದು ಎಂದು ನಿಮಗೆ ಅನಿಸುವುದಿಲ್ವಾ ಅಂತಾ ಕೇಳುತ್ತಾರೆ.
ಆಗ ದಿವ್ಯಾ ಸುರೇಶ್, ನಾನು ಕೆಲವೊಂದಷ್ಟು ಪತ್ರವನ್ನು ಮಂಜು ಸಹಾಯದಿಂದ ಮೇಲಕ್ಕೆ ಎತ್ತಿಟ್ಟೆ. ಆದರೆ ನಾನು ಸೇವ್ ಮಾಡಿದ್ದು ಕೇವಲ 5-6 ಲೆಟರ್ ಮಾತ್ರ. ನಾನು ಆಟ ಆಡುವ ವೇಳೆ ನಿಧಿಯವರು ಬಂದು ಈ ರೀತಿ ಆಫರ್ ಮಾಡಿದರು. ಇದನ್ನು ನಾನು ಮಂಜು ಜೊತೆ ಚರ್ಚಿಸಿ ನಂತರ ನಿರ್ಧರಿಸಿದೆ ಎಂದು ಉತ್ತರಿಸುತ್ತಾರೆ.
ಹಾಗದರೆ ಕ್ಯಾಪ್ಟನ್ಸಿ ಟಾಸ್ಕ್ ಬಂದಾಗ ನಿಮಗೆ ಎಲ್ಲರ ಮೇಲೂ ಕೋಪ ಬಂದಿದ್ದು ಯಾಕೆ ಎಂಬ ಪ್ರಶ್ನೆಗೆ, ಇಲ್ಲ ನನಗೆ ಕೋಪ ಏನು ಬಂದಿಲ್ಲ. ಬಹುಶಃ ನನಗೆ ಇವರು ಅತ್ಯುತ್ತಮ ಆಟಗಾರ್ತಿ ಕೊಟ್ಟರು. ಆದರೆ ಅತ್ಯುತ್ತಮ ನೀಡಿದ್ದು ತಪ್ಪು ಎಂದು ಕೆಲವರು ಹೇಳಿದಾಗ ಬೇಜಾರಾಯಿತೇ ಹೊರತು ಒಬ್ಬರಲ್ಲದೇ ಇನ್ನೂ ಎಲ್ಲರೂ ಬಂದಿದ್ದರು ನನಗೆ ಬೇಸರವಾಗುತ್ತಿರಲಿಲ್ಲ ಎಂದು ದಿವ್ಯಾ ಸುರೇಶ್ ಸ್ಪಷ್ಟಪಡಿಸಿದರು.
ಒಟ್ಟಾರೆ ಬಾಯ್ಸ್ ಹಾಸ್ಟೆಲ್ ವರ್ಸಸ್ ಗಲ್ಸ್ ಹಾಸ್ಟೆಲ್ ಟಾಸ್ಕ್‍ನಲ್ಲಿ ನಡೆದ ಯಾರೂ ಊಹಿಸಲಾಗದ ಮೋಸವನ್ನು ಕೇಳಿ ಮನೆಮಂದಿಯಲ್ಲಿ ಶಾಕ್ ಆಗುತ್ತಾರೆ.
ನವದೆಹಲಿ: ಬೆನ್ನು ಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ಸಂಬಂಧ ಸಾರ್ವಜನಿಕರಲ್ಲಿ ನೂರಾರು ಪ್ರಶ್ನೆಗಳಿವೆ. ಈ ಗೊಂದಲಗಳನ್ನು ಬಗೆಹರಿಸಲು ಈಗ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದ್ದು, ವಿನೂತನ ಪ್ರಯೋಗವೊಂದನ್ನು ಆರಂಭಿಸಿದೆ.
ಟ್ವಿಟರ್‌ನಲ್ಲಿ @CovidIndiaSeva ಗೆ ಸಾರ್ವಜನಿಕರು ನೇರವಾಗಿ ತಮ್ಮ ಪ್ರಶ್ನೆಗಳನ್ನು ಟ್ವೀಟ್ ಮಾಡಬಹುದಾಗಿದೆ. ಜನರ ಪ್ರಶ್ನೆಗಳಿಗೆ ಇನ್ಮುಂದೆ ಕೇಂದ್ರ ಆರೋಗ್ಯ ಇಲಾಖೆ ಉತ್ತರಿಸಲಿದೆ.
ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮಗಳ ಇತ್ತೀಚಿನ ಹೊಸ ಮಾಹಿತಿಗಳು, ಸಾರ್ವಜನಿಕರ ಪ್ರಶ್ನೆಗಳು, ಆರೋಗ್ಯ ಸೇವೆಗಳು, ರೋಗಲಕ್ಷಣಗಳನ್ನು ಹೊಂದಿರುವವರ ಸಹಾಯಕ್ಕಾಗಿ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.
ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಪ್ರತಿಕ್ರಿಯಿಸಿದ್ದು, ಆನ್‍ಲೈನ್ ಮೂಲಕ ಜನರಿಗೆ ಪರಿಹಾರ ಕಂಡುಕೊಂಡುವ ಪ್ರಯತ್ನ ಮಾಡುತ್ತಿರುವುದು ಸಂತಸವಾಗಿದೆ. ಇದು ಕೊರೊನಾ ವಿರುದ್ಧದ ಹೋರಾಟದ ಒಂದು ಭಾಗ ಎಂದಿದ್ದಾರೆ.
ಇದು ಕೇವಲ ಕೇಂದ್ರ ಆರೋಗ್ಯ ಇಲಾಖೆ ಮಾತ್ರ ಒಳಗೊಂಡಿರದೇ ರಾಜ್ಯವಾರು ಪೊಲಿಸ್ ಮಹಾನಿರ್ದೇಶಕರು, ಸರ್ಕಾರ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಕಾರ್ಯಾಲಯ, ಕೇಂದ್ರ ಹಣಕಾಸು, ಕೈಗಾರಿಕೆ, ವಿದೇಶಾಂಗ ಸಚಿವಾಲಗಳಿಗೂ ಟ್ಯಾಗ್ ಮಾಡಲಿದೆ. ಜನರ ಹಲವು ಪ್ರಶ್ನೆಗಳಿಗೆ ಎಲ್ಲ ಆಯಾಮಗಳಲ್ಲೂ ಉತ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇದಕ್ಕಾಗಿ ತಜ್ಞರ ತಂಡವೊಂದನ್ನು ರಚಿಸಲಾಗಿದ್ದು, ಸಂಪೂರ್ಣ ಪಾರದರ್ಶಕವಾಗಿರಲಿದೆ. ಅಲ್ಲದೇ ಪ್ರಶ್ನೆಯೊಂದು ಹೆಚ್ಚು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿಕೊಂಡಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾತ್ಮಕವಾಗಿ ಕಾರ್ಯ ನಿರ್ವಹಿಸುವ ಪ್ರಯತ್ನವೂ ಆಗಿದೆ.
Welcome to #CovidIndiaSeva ,an interactive platform set-up by @MoHFW_India for citizen engagement on #COVID19, which will answer public queries and enable E-Governance.
ವೆಲ್ಲಿಂಗ್ಟನ್: ಆನ್ ಫೀಲ್ಡ್ ನಲ್ಲಿ ತಮ್ಮ ನಡವಳಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಚಳಿ ಬಿಡಿಸಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡೂ ಪಂದ್ಯಗಳನ್ನು ಸೋತು ಭಾರೀ ಮುಖಭಂಗ ಅನುಭವಿಸಿದೆ. ಭಾನುವಾರ ಅಂತ್ಯವಾದ ಎರಡನೇ ಮತ್ತು ಕೊನೆಯ ಪಂದ್ಯದಲ್ಲಿ 7 ವಿಕೆಟ್ ಅಂತರದಲ್ಲಿ ನ್ಯೂಜಿಲೆಂಡ್ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಪತ್ರಕರ್ತನ ಮೇಲೆ ಗರಂ ಆಗಿದ್ದಾರೆ.
ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಔಟ್ ಆದಾಗ ಕೊಹ್ಲಿ ಅವರು ಅಗ್ರೆಸೀವ್ ಆಗಿ ನಡೆದುಕೊಂಡಿದ್ದರು. ಇದನ್ನೇ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ ಪತ್ರಕರ್ತ, ನಿನ್ನೆ ವಿಲಿಯಮ್ಸನ್ ಔಟ್ ಆದಾಗ ನೀವು ನಡೆದುಕೊಂಡ ರೀತಿಯ ಬಗ್ಗೆ ಏನು ಹೇಳುತ್ತೀರಾ? ಒಬ್ಬ ಭಾರತೀಯ ನಾಯಕನಾಗಿ ನೀವು ಒಳ್ಳೆಯ ಉದಾಹರಣೆಯಾಗಿರಬೇಕು ಎಂದು ಯೋಚಿಸುವುದಿಲ್ಲವಾ? ಎಂದು ಕೇಳಿದ್ದರು.
ಈ ವಿಚಾರಕ್ಕೆ ಕೆಂಡಾಮಂಡಲವಾದ ಕೊಹ್ಲಿ, ಏನ್ ಮಾತನಾಡುತ್ತಿದ್ದೀರಾ. ನೀವು ಅಲ್ಲಿ ಏನ್ ಆಯ್ತು ಎಂಬುದನ್ನು ತಿಳಿದುಕೊಂಡು ಬಂದು ನನಗೆ ಪ್ರಶ್ನೆ ಮಾಡಿ. ವಿಚಾರದ ಬಗ್ಗೆ ಅರ್ಧ ಮಾಹಿತಿ ಇಟ್ಟುಕೊಂಡು ಪ್ರಶ್ನೆ ಮಾಡಲು ಬರಬೇಡಿ. ನೀವು ವಿವಾದವನ್ನು ಮಾಡಬೇಕು ಎಂದು ಬಂದಿದ್ದರೆ ಇದು ಸರಿಯಾದ ಸ್ಥಳವಲ್ಲ. ನಾನು ಮ್ಯಾಚ್ ರೆಫರಿಯೊಂದಿಗೆ ಮಾತನಾಡಿದ್ದೇನೆ. ಅವರು ಯಾವುದೇ ಸಮಸ್ಯೆಯಿಲ್ಲ ಇಂದು ಹೇಳಿದ್ದಾರೆ ಎಂದು ಗರಂ ಆಗಿಯೇ ಉತ್ತರ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅವರು ಕಳಪೆ ಪ್ರದರ್ಶನ ತೋರಿದ್ದು, ಇಲ್ಲಿಯ ವರೆಗೂ ಒಂದು ಅರ್ಧ ಶತಕವಾಗಲಿ, ಶತಕವಾಗಲಿ ಸಿಡಿಸಿಲ್ಲ. ವಿರಾಟ್ ಕೊಹ್ಲಿ ಕಳೆದ 69 ದಿನಗಳಿಂದ ಎಲ್ಲಾ ಮೂರು ಸ್ವರೂಪಗಳಲ್ಲಿ (ಏಕದಿನ, ಟೆಸ್ಟ್ ಮತ್ತು ಟಿ20) ಒಂದೂ ಶತಕ ಗಳಿಸಿಲ್ಲ. ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಇಂತಹ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ.
ಈ ಅವಧಿಯಲ್ಲಿ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ 22 ಇನ್ನಿಂಗ್ಸ್ ಆಡಿದ್ದಾರೆ. ಅವರು ಕೊನೆಯದಾಗಿ ಡಿಸೆಂಬರ್ 22 ರಂದು ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 136 ರನ್ ಗಳಿಸಿದ್ದರು. ಇದಕ್ಕೂ ಮೊದಲು ಫೆಬ್ರವರಿ 25ರಿಂದ ಅಕ್ಟೋಬರ್ 2014 ರವರೆಗೆ ಸುಮಾರು 210 ದಿನಗಳಲ್ಲಿ ಹಾಗೂ ಫೆಬ್ರವರಿ 24ರಿಂದ 2011ರ ಸೆಪ್ಟೆಂಬರ್ ವರೆಗೆ ಸುಮಾರು 180 ದಿನಗಳಲ್ಲಿ ಕೊಹ್ಲಿ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿರಲಿಲ್ಲ.
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಿಂದಾಗಿ ನಂಬರ್-1 ಸ್ಥಾನದಿಂದ ಕೆಳಗೆ ಇಳಿದಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ 911 ಅಂಕಗಳೊಂದಿಗೆ ಎಂಟನೇ ಬಾರಿಗೆ ಅಗ್ರಸ್ಥಾನಕ್ಕೆ ಏರಿದ್ದರೆ, ಕೊಹ್ಲಿ 906 ಅಂಕಗಳಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಉಳಿದಂತೆ ಅಜಿಂಕ್ಯ ರಹಾನೆ 8ನೇ ಸ್ಥಾನ, ಚೇತೇಶ್ವರ ಪೂಜಾರ 9ನೇ ಸ್ಥಾನ ಹಾಗೂ ಮಾಯಾಂಕ್ ಅಗರ್ವಾಲ್ 10ನೇ ಸ್ಥಾನದಲ್ಲಿದ್ದಾರೆ.
ಬೆಂಗಳೂರು: ಕಾಂಗ್ರೆಸ್ಸಿನಿಂದ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ವಿರುದ್ಧ ಡೈರಿ ಆರೋಪ ವಿಚಾರ, ಕಾಂಗ್ರೆಸ್ಸಿಗೆ 10 ಪ್ರಶ್ನೆ ಕೇಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡೈರಿಯ ಪ್ರತಿ ಹಾಳೆಯಲ್ಲೂ ಯಾರೂ ಸಹಿ ಮಾಡಲ್ಲ. ಡೈರಿಯಲ್ಲಿ ಹಣ ಕೊಟ್ಟಿರೋದು ಬರೆದಿರೋರು, ತಮ್ಮಗೆ ಬಂದಿರೋ ಹಣದ ಬಗ್ಗೆಯೂ ಬರೆಯಬೇಕಲ್ಲವಾ? 2010 ಪೂರ್ವದಲ್ಲಿ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರದ ಪ್ರಕಾರ ‘ಯಡ್ಯೂರಪ್ಪ’ ಅಂತಾ ಸಹಿ ಮಾಡುತ್ತಿದ್ದರು. ಇದೊಂದು ಕಾಂಗ್ರೆಸ್ ಸಂಚು. ಚೌಕಿದಾರರು ವರ್ಸಸ್ ಚೋರ್‍ದಾರರ ನಡುವಿನ ಚುನಾವಣೆ ಇದು ಎಂದು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಬಿಎಸ್ ವೈ ಡೈರಿ ಪ್ರಕರಣ- ಇದು ಜೋಕ್ ಆಫ್ ದಿ ಇಯರ್ ಅಂದ್ರು ಬಿ.ವೈ.ರಾಘವೇಂದ್ರ
ಕಾಂಗ್ರೆಸ್ ಮುಂದಿಟ್ಟ ಪ್ರಶ್ನೆಗಳು:
1. ಡೈರಿ ನಿಮಗೆ ಸಿಕ್ಕಿದ್ದು ಯಾವಾಗ?
2. ಯಾರು ಈ ಡೈರಿಯನ್ನು ತಂದುಕೊಟ್ಟರು?
3. ಡೈರಿಯನ್ನು ಎಲ್ಲಿ ಕೊಟ್ಟರು?
4. ಒರಿಜಿನಲ್ ಡೈರಿ ಎಲ್ಲಿ?
5. ಏಕೆ ಇದುವರೆಗೂ ಈ ಡೈರಿ ಆದರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಲಿಲ್ಲ?
6. 2013 ಮೇ ತಿಂಗಳಿನಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೇ ಇರಲು ಕಾರಣವೇನು?
7. ಯಡಿಯೂರಪ್ಪನವರದ್ದೆಂದು ಹೇಳಲಾದ ಡೈರಿಯು ಡಿ.ಕೆ.ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಾಗಿದೆ.
8. ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್ ಈಗ ಏಕೆ ದೂರು ನೀಡದಿರಲು ಕಾರಣವೇನು?
9 ಎಂಎಲ್ ಸಿ ಗೋವಿಂದರಾಜುಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿತ್ತು ಎಂದು ನಮೂದಾಗಿತ್ತು. ಆಗ ಯಡಿಯೂರಪ್ಪ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ?
10. ಡೈರಿ ಪ್ರಕರಣ ಜನಲೋಕಪಾಲ್ ತನಿಖೆಗೆ ಸೂಕ್ತವಾದುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಆರೋಪ ಮಾಡಿದವರು ದೂರು ನೀಡಬೇಕೆ ಅಥವಾ ದೂರಿಗೆ ಒಳಗಾದವರು ನೀಡಬೇಕೆ? ಎಂದು ಪ್ರಶ್ನಿಸಿದ್ದಾರೆ.
ಬಿಎಸ್‍ವೈ ಡೈರಿ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ ಬಿಎಸ್‍ವೈ ವಿರುದ್ಧ ಆರೋಪಿಸುತ್ತಿದ್ದಾರೆ. ಆದ್ರೆ ಇನ್ನೊಂದೆಡೆ ಬಿಜೆಪಿ ನಾಯಕರು ಬಿಎಸ್‍ವೈ ಪರ ನಿಂತು ಇದು ಕಾಂಗ್ರೆಸ್ ಅವರ ಸಂಚು ಎಂದು ಕಿಡಿಕಾರುತ್ತಿದ್ದಾರೆ.
ಚೆನ್ನೈ: ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಇಂದು ನೂರಾರು ವಿದ್ಯಾರ್ಥಿಗಳ ಜೊತೆ ಸಂವಾದವನ್ನು ಮಾಡಿದ್ದಾರೆ.
ಈ ವೇಳೆ ರಾಹುಲ್ ಗಾಂಧಿ ಅವರನ್ನು ಪ್ರಶ್ನೆ ಕೇಳಲು ವಿದ್ಯಾರ್ಥಿಯೊಬ್ಬಳು ಎದ್ದು ನಿಂತು ರಾಹುಲ್ ಸರ್ ಎಂದು ಪ್ರಶ್ನೆ ಆರಂಭಿಸಿದ್ದಾಳೆ. ಆಗ ರಾಹುಲ್ ಗಾಂಧಿ “ನನ್ನನ್ನು ಸರ್ ಬದಲಿಗೆ ರಾಹುಲ್ ಎಂದು ಕರೆಯಿರಿ” ಎಂದು ಹೇಳಿದ್ದಾರೆ. ಆಗ ವಿದ್ಯಾರ್ಥಿನಿ ನಕ್ಕಿದ್ದು, ಅಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ನಕ್ಕಿದ್ದಾರೆ. ಒಂದರೆಡು ಸೆಕೆಂಡ್ ವಿದ್ಯಾರ್ಥಿ ಸುಮ್ಮನೆ ನಿಂತಿದ್ದು, ಬಳಿಕ ಅವರು ಹೇಳಿದಂತೆ ರಾಹುಲ್ ಎಂದು ಕರೆದು ಪ್ರಶ್ನೆ ಕೇಳಿದ್ದಾಳೆ.
ರಾಹುಲ್ ಗಾಂಧಿ ಅವರು ಬೂದು ಬಣ್ಣದ ಟಿ-ಶರ್ಟ್ ಮತ್ತು ಜೀನ್ಸ್ ಧರಸಿ ವಿದ್ಯಾರ್ಥಿಗಳ ಮದ್ಯೆ ನಿಂತುಕೊಂಡು ಸಂವಾದ ಮಾಡುತ್ತಿದ್ದರು. ಹಣಕಾಸು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆಜ್ರಾ, “ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ಸೇರಿದಂತೆ ಹಲವು ಸಂಶೋಧನಾ ಕೇಂದ್ರಗಳು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಶಮನಕ್ಕಾಗಿ ನಿಮ್ಮ ನಿರ್ಧಾರಗಳೇನು” ಎಂದು ಪ್ರಶ್ನೆ ಮಾಡಿದ್ದಾಳೆ.
ಇದಕ್ಕೆ ರಾಹುಲ್ ಗಾಂಧಿ, “ಭಾರತವು ಸದ್ಯ ಶಿಕ್ಷಣಕ್ಕಾಗಿ ಕಡಿಮೆ ಖರ್ಚು ಮಾಡುತ್ತಿದೆ. ಹಣದ ಮೊತ್ತವನ್ನು ಶೇ.6ಕ್ಕೆ ಹೆಚ್ಚಳ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ಕೇವಲ ಶಿಕ್ಷಣದ ಮೇಲೆ ಖರ್ಚು ಮಾಡುವುದರ ಬಗ್ಗೆ ಮಾತ್ರವಲ್ಲ, ಶಿಕ್ಷಣದ ಮೇಲಿನ ಸ್ವಾತಂತ್ರ್ಯ ಇದರಲ್ಲಿ ಅಡಗಿದೆ ಎಂದು ರಾಹುಲ್ ಗಾಂಧಿಯವರು ಉತ್ತರಿಸಿದರು.
ಸಂವಾದದಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಗೆ, “2019ರಲ್ಲಿ ನಾವು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಮಾಡಲಿದ್ದು, ಅವರಿರು ಉದ್ಯೋಗದಲ್ಲಿ 33% ರಷ್ಟು ಮೀಸಲಾತಿ ಪಡೆಯುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಚುರುಕಾದವರು ಎಂದು ನಾನು ಭಾವಿಸುತ್ತೇನೆ” ಎಂದು ರಾಹುಲ್ ಉತ್ತರಿಸಿದರು.
#WATCH: Congress President Rahul Gandhi asks a student at Stella Maris College, Chennai, to call him Rahul, when she starts a question with "Hi Sir". #TamilNadupic.twitter.com/01LF5AxSex
ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಂದು ಅಧಿಕಾರಿಗಳು ಸ್ಟಾರ್ ನಟರ ವಿಚಾರಣೆ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳ ಪ್ರಶ್ನೆಗೆ ಸ್ಟಾರ್ ನಟರು ಖಡಕ್ ಆಗಿ ಉತ್ತರ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಗುರುವಾರ ಐಟಿ ಅಧಿಕಾರಿಗಳು ಯಶ್, ಸುದೀಪ್, ಪುನೀತ್, ಶಿವಣ್ಣ ಹಾಗೂ ರಾಧಿಕಾ ಅವರ ಮನೆ ಮೇಲೆ ನಡೆಸಿದ್ದರು. ಈ ವೇಳೆ ಹಲವು ದಾಖಲೆಗಳು ಸಿಕ್ಕಿದ್ದು, ಸ್ಟಾರ್ ನಟರು ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ವ್ಯವಹಾರಗಳ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನೆ ಕೇಳುತ್ತಿದ್ದಾರೆ.
* ಐಟಿ ಕೇಳಿದ ಪ್ರಶ್ನೆಗೆ ಯಶ್ ಉತ್ತರವೇನು….? ಐಟಿ ಪ್ರಶ್ನೆ: 70 ಕೋಟಿ ವೆಚ್ಚದಲ್ಲಿ ಕೆಜಿಎಫ್ ನಿರ್ಮಿಸಲಾಗಿದೆ. ಹೂಡಿಕೆ ಬಗ್ಗೆ ನಿಮಗೇನು ಗೊತ್ತು? ಯಶ್ ಉತ್ತರ: ಹಣಕಾಸಿನ ವ್ಯವಹಾರ ಬಗ್ಗೆ ನನಗೇನೂ ಗೊತ್ತಿಲ್ಲ. ನಿರ್ಮಾಪಕರನ್ನೇ ಕೇಳಬೇಕು ಐಟಿ: ನಿಮಗೆ ಸ್ವಲ್ಪನೂ ಮಾಹಿತಿ ಇಲ್ಲದೆ ಬಹುಕೋಟಿ ಸಿನಿಮಾದಲ್ಲಿ ನಟಿಸಿದ್ರಾ? ಯಶ್: ನಿರ್ಮಾಪಕರ ವ್ಯವಹಾರ ಬಗ್ಗೆ ನನಗೇನೂ ತಿಳಿದಿಲ್ಲ. ನಾನು ಒಬ್ಬ ನಟನಷ್ಟೇ. ಐಟಿ: ನೀವು ಕನ್ನಡದ ಸೂಪರ್ ಸ್ಟಾರ್. ನಿಮ್ಮ ಸಂಭಾವನೆ ಎಷ್ಟು? ಯಶ್: ಒಂದೊಂದು ಸಿನಿಮಾಕ್ಕೆ ಒಂದೊಂದು ಸಂಭಾವನೆ ಇರುತ್ತೆ. ಅದು ಬದಲಾಗುತ್ತಿರುತ್ತದೆ. ಐಟಿ: ನಿಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಬಹುದೇ? ಯಶ್: ನನಗೆ 40 ಕೋಟಿ ಸಾಲವಿದೆ. 2 ಬ್ಯಾಂಕ್‍ನಲ್ಲಿ ಸಾಲ ಮಾಡಿದ್ದೇನೆ. ಐಟಿ: ನೀವು ಹೊಸ ಮನೆ ಖರೀದಿ ಮಾಡಿದ್ದೀರಿ. ಇದರ ಬಗ್ಗೆ ದಾಖಲೆ ಕೊಡಬಹುದಾ? ಯಶ್: ಸಾಲ ಪಡೆದು ಮನೆ ಖರೀದಿಸಲಾಗಿದೆ. ಇದರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ನೀಡಲಿದ್ದಾರೆ.
* ಐಟಿ ಕೇಳಿದ ಪ್ರಶ್ನೆಗೆ ಪುನೀತ್ ಉತ್ತರವೇನು….? ಐಟಿ ಪ್ರಶ್ನೆ: ನೀವು ಬಹು ಬೇಡಿಕೆಯ ನಟ. ನಿಮ್ಮ ಸಿನಿಮಾಗಳ ಸಂಭಾವನೆ ಎಷ್ಟು? ಪುನೀತ್ ಉತ್ತರ: ಒಂದೊಂದು ಸಿನಿಮಾಗಳಿಗೆ ಒಂದು ಸಂಭಾವನೆ ಇದೆ. ಐಟಿ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಬಹುದಾ? ಪುನೀತ್: ಎಲ್ಲದಕ್ಕೂ ರಸೀತಿ ಇದೆ. ಸ್ವಲ್ಪ ಟೈಂ ಬೇಕು. ಐಟಿ: ನೀವು ಕೋರಮಂಗಲದಲ್ಲಿ ಆಸ್ತಿ-ಪಾಸ್ತಿ ಹೊಂದಿದ್ದೀರಿ. ಇದರ ವಿವರಣೆ ನೀಡಿ. ಪುನೀತ್: ಎಲ್ಲದಕ್ಕೂ ದಾಖಲಾತಿಗಳಿವೆ. ನನ್ನ ಅಕೌಂಟೆಂಟ್ ಮಾಹಿತಿ ನೀಡ್ತಾರೆ. ಐಟಿ: ಇತ್ತೀಚೆಗೆ ಹೊಸ ಪ್ರಾಜೆಕ್ಟ್‍ಗಳನ್ನು ಆರಂಭಿಸಿದ್ದೀರಿ. ಏನದು? ಪುನೀತ್: ಪಿಆರ್ ಕೆ ಆಡಿಯೋ ಹಾಗೂ ಪಿಆರ್ ಕೆ ಪ್ರೊಡಕ್ಷನ್ ಆರಂಭಿಸಿದ್ದೇವೆ. ಐಟಿ: ದೊಡ್ಡ ದೊಡ್ಡ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದೀರಾ. ಅದರ ಮಾಹಿತಿ ಕೊಡಿ. ಪುನೀತ್: ದೊಡ್ಡ ವ್ಯವಹಾರ ಆಗುತ್ತಿರೋದ್ರಿಂದ ಮಾಹಿತಿಗೆ ಕಾಲಾವಕಾಶ ಬೇಕು.
* ಐಟಿ ಕೇಳಿದ ಪ್ರಶ್ನೆಗೆ ಸುದೀಪ್ ಉತ್ತರವೇನು….? ಐಟಿ ಪ್ರಶ್ನೆ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ. ಸುದೀಪ್ ಉತ್ತರ: ನನಗೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ. ಐಟಿ: ನಿಮ್ಮಲ್ಲಿ ಐಷಾರಾಮಿ ಕಾರುಗಳಿವೆ. ಅದರ ಮಾಹಿತಿ ನೀಡಿ. ಸುದೀಪ್: ಹೊಸದಾಗಿ ಯಾವುದು ಖರೀದಿಸಿಲ್ಲ. ಇವೆಲ್ಲಾ ಹಳೆಯದ್ದು ಐಟಿ: ನೀವು ಬೆಳ್ಳಿತೆರೆ ಅಲ್ಲದೆ, ಕಿರುತೆರೆಯಲ್ಲೂ ನಟನೆ ಮಾಡುತ್ತಿದ್ದೀರಿ. ಎಷ್ಟು ಸಂಭಾವನೆ ಪಡೆಯುತ್ತೀರಿ? ಸುದೀಪ್: ಸಂಭಾವನೆ, ವ್ಯವಹಾರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ಕೊಡಲಿದ್ದಾರೆ ಐಟಿ: ಚಿತ್ರರಂಗವಲ್ಲದೆ ಇತರ ವ್ಯವಹಾರಗಳ ಬಗ್ಗೆ ಮಾಹಿತಿ ಕೊಡಿ. ಸುದೀಪ್: ಎಲ್ಲವನ್ನೂ ಲಿಖಿತ ರೂಪದಲ್ಲಿ ನಮ್ಮ ಅಕೌಂಟೆಂಟ್ ನೀಡಲಿದ್ದಾರೆ.
* ಐಟಿ ಕೇಳಿದ ಪ್ರಶ್ನೆಗೆ ಶಿವಣ್ಣ ಉತ್ತರವೇನು….? ಐಟಿ ಪ್ರಶ್ನೆ: ಮೋಸ್ಟ್ ಬ್ಯುಸಿ ನಟ ನೀವು. ವರ್ಷಕ್ಕೆ ಎಷ್ಟು ಸಿನಿಮಾಗಳ ನಟಿಸುತ್ತೀರಾ? ಶಿವಣ್ಣ ಉತ್ತರ: ವರ್ಷಕ್ಕೆ 7ರಿಂದ 8 ಸಿನಿಮಾಗಳಲ್ಲಿ ನಟಿಸುತ್ತೇನೆ. ಐಟಿ: ನಿಮ್ಮ ಪುತ್ರಿಯ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಇದೆ. ಇದರ ಮಾಹಿತಿ ಕೊಡಿ. ಶಿವಣ್ಣ: ನಮ್ಮ ಅಕೌಂಟೆಂಟ್ ಸಂಪರ್ಕಿಸಿ ಕೊಡುತ್ತೇನೆ. ಐಟಿ: ನೀವು ಸಿನಿಮಾವಲ್ಲದೆ, ಸೀರಿಯಲ್ ನಿರ್ಮಾಣದಲ್ಲಿ ತೊಡಗಿದ್ದೀರಾ? ಶಿವಣ್ಣ: ಹೌದು, ಅದರ ವ್ಯವಹಾರವನ್ನೆಲ್ಲಾ ಪತ್ನಿ ನೋಡಿಕೊಳ್ಳುತ್ತಾರೆ. ಐಟಿ: ರಿಯಲ್ ಎಸ್ಟೇಟ್‍ನಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಾ? ಶಿವಣ್ಣ: ಹೂಡಿಕೆಯ ಬಗ್ಗೆ ನನ್ನ ಅಕೌಂಟೆಂಟ್ ಮಾಹಿತಿ ಕೊಡುತ್ತಾರೆ.
ನವದೆಹಲಿ: ನೋಟು ನಿಷೇಧದಿಂದ ದೇಶದ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಅರಿವನ್ನು ಕೇಂದ್ರ ಸರ್ಕಾರ ಹೊಂದಿರಲಿಲ್ಲ ಎನ್ನುವ ಅಂಶ ಈಗ ಬಹಿರಂಗಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರು 2016 ರ ನವೆಂಬರ್ 8 ರಂದು ರೂ.500 ಹಾಗೂ 1,000 ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದ್ದರು. ಕಾಸರಗೋಡು ಕ್ಷೇತ್ರದ ಸಿಪಿಐ ಸಂಸದ ಪಿ.ಕರುಣಾಕರನ್ ಹಾಗೂ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ತೇಜ್ ಪ್ರತಾಪ್ ಯಾದವ್, ನೋಟು ನಿಷೇಧ ಯಾವ ರೀತಿ ಅರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಕೇಂದ್ರ ಯೋಚಿಸಿತ್ತೆ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ್ದ ಕೇಂದ್ರ ವಿತ್ತ ಸಚಿವಾಲಯದ ಸಹಾಯಕ ಸಚಿವ ರಾಧಾಕೃಷ್ಣನ್, ನೋಟು ನಿಷೇಧದ ಬಳಿಕ ಭಾರತದ ಅರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರ ಮೌಲ್ಯಮಾಪನ ಮಾಡಿರಲಿಲ್ಲವೆಂದು ತಿಳಿಸಿದ್ದಾರೆ.
ಕೇಂದ್ರ ಸರಕಾರ ನೋಟು ನಿಷೇಧದಿಂದ ಭಾರತದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲಾಗಿತ್ತೆ? ಅದರಿಂದ ಏನೇನು ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಪರಿಶೀಲನೆ ಮಾಡಿತ್ತೆ? ಎಂಬ ಪ್ರಶ್ನೆಗೆ ರಾಧಾಕೃಷ್ಣನ್ `ಇಲ್ಲ’ ಎಂದು ಉತ್ತರಿಸಿದ್ದಾರೆ.
ಕೇವಲ ಕಪ್ಪುಹಣ ಮತ್ತು ಕಳ್ಳ ನೋಟುಗಳಿಗೆ ಕಡಿವಾಣ ಹಾಕಲು ನೋಟು ನಿಷೇಧಕ್ಕೆ ಮುಂದಾದ ಕ್ರಮಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸಮ್ಮತಿ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ಉತ್ತರಿಸಲು ನಿರಾಕರಿಸಿದ್ದಾರೆ.
ಮೋದಿ ಸರಕಾರದ ನಿರ್ಧಾರದಿಂದ ಚಲಾವಣೆಯಲ್ಲಿದ್ದ ಶೇ.85ರಷ್ಟು ಕರೆನ್ಸಿ ತನ್ನ ಮೌಲ್ಯ ಕಳೆದುಕೊಂಡಿತ್ತು. ಆದರೆ ಶೇ.99.3 ರಷ್ಟು ಅಪಮೌಲ್ಯಗೊಂಡ ಕರೆನ್ಸಿ ಭಾರತೀಯ ರಿಸರ್ವ್ ಬ್ಯಾಂಕ್‍ಗೆ ವಾಪಾಸಾಗಿತ್ತು. ನೋಟು ನಿಷೇಧಗೊಂಡ ಬಳಿಕ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿದಿದ್ದರೆ ನಂತರದ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆ ಕಾಣಿಸಿತ್ತು. ಈ ಜಿಡಿಪಿ ಬೆಳವಣಿಗೆಗೆ ನೋಟು ನಿಷೇಧವೂ ಒಂದು ಕಾರಣ ಎಂದು ಹೇಳಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಬಂದಿದೆ.
ವೆಂಕಯ್ಯ ನಾಯ್ಡು ಶ್ಲಾಘನೆ: ನೋಟು ನಿಷೇಧ ಮತ್ತು ಜಿಎಸ್‍ಟಿ ಜಾರಿಯಿಂದ ದೇಶದ ಆರ್ಥಿಕತೆಗೆ ಸಹಕಾರಿಯಾಗಿದೆ. ಎಲ್ಲೆಲ್ಲೋ ಅಡಗಿಸಿಟ್ಟ ಕಳ್ಳ ಹಣಗಳ ಲೆಕ್ಕ ಗೊತ್ತಾಗಿದೆ. ಹಣಗಳು ಮರಳಿ ಬ್ಯಾಂಕಿಗ್ ಬಂದಿದೆ. ವಿಶ್ವದ ಆರ್ಥಿಕತೆ ಈಗ ಕುಸಿಯುತ್ತಿದ್ದರೆ ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆಯಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಕ್ಯಾಲಿಫೋರ್ನಿಯಾ: ಪ್ರಶ್ನೆ ಮತ್ತು ಉತ್ತರಗಳಿಗೆ ಮೀಸಲಾಗಿರುವ ಜನಪ್ರಿಯ ಕೋರಾ ತಾಣ ಹ್ಯಾಕ್ ಆಗಿದೆ. ಗ್ರಾಹಕರ ವಿವರಗಳು ಹ್ಯಾಕ್ ಆಗಿದೆ ಎಂದು ಕೋರಾ ತನ್ನ ಬ್ಲಾಗ್ ನಲ್ಲಿ ಹೇಳಿಕೊಂಡಿದೆ.
ಒಟ್ಟು 10 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಗಳು ಹ್ಯಾಕ್ ಆಗಿದೆ. ಬಳಕೆದಾರ ಹೆಸರು, ಇಮೇಲ್ ಐಡಿ, ಪಾಸ್‍ವರ್ಡ್, ಪ್ರಶ್ನೆ, ಉತ್ತರ, ಕಮೆಂಟ್, ಅಪ್‍ವೋಟ್, ಡೈರೆಕ್ಟ್ ಮೆಸೇಜ್‍ಗಳನ್ನು ಹ್ಯಾಕರ್ ಗಳು ಪಡೆದುಕೊಂಡಿದ್ದಾರೆ ಎಂದು ಕೋರಾ ತಿಳಿಸಿದೆ.
We have discovered that some user data was compromised by unauthorized access to our systems. We’ve taken steps to ensure that the situation is contained and are notifying affected users. Protecting your information is our top priority. Read more here: https://t.co/uwbdMjoM1v
ಶುಕ್ರವಾರ ತಾಣ ಹ್ಯಾಕ್ ಆಗಿರುವ ವಿಚಾರ ಗಮನಕ್ಕೆ ಬಂದಿದೆ. ಭದ್ರತಾ ವ್ಯವಸ್ಥೆ ಎಲ್ಲಿ ಲೋಪವಾಗಿದೆ ಎನ್ನುವುದನ್ನು ಪತ್ತೆ ಹಚ್ಚುತ್ತೇವೆ. ಅಷ್ಟೇ ಅಲ್ಲದೇ ಯಾವೆಲ್ಲ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎನ್ನುವುದನ್ನು ಪತ್ತೆ ಮಾಡುತ್ತೇವೆ ಎಂದು ಕೋರಾ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ.
ಫೇಸ್‍ಬುಕ್ ಸಂಸ್ಥೆಯು ಮಾಜಿ ಉದ್ಯೋಗಿಗಳಾದ ಆಡಂ ಮತ್ತು ಚಾರ್ಲಿ ಚೀವರ್ 2009ರಲ್ಲಿ ಕೋರಾ ತಾಣವನ್ನು ಹುಟ್ಟಿಹಾಕಿದ್ದರು. ವಿಶ್ವಾದ್ಯಂತ ಒಟ್ಟು 19 ಕೋಟಿ ಬಳಕೆದಾರರು ಕೋರಾವನ್ನು ಬಳಸುತ್ತಿದ್ದಾರೆ.