Tag: ಪ್ರಶಾಂತ್ ಸಿದ್ದಿ

  • ಕೆಜಿಎಫ್ ತಾತ ಕೊನೆ ಸಿನಿಮಾ: ಜುಲೈ 07ಕ್ಕೆ ನ್ಯಾನೋ ನಾರಾಯಣಪ್ಪ ತೆರೆಗೆ

    ಕೆಜಿಎಫ್ ತಾತ ಕೊನೆ ಸಿನಿಮಾ: ಜುಲೈ 07ಕ್ಕೆ ನ್ಯಾನೋ ನಾರಾಯಣಪ್ಪ ತೆರೆಗೆ

    ಕೆಜಿಎಫ್ ತಾತ ಅಂತಾನೇ ಫೇಮಸ್ ಆಗಿದ್ದ ಕೃಷ್ಣೋಜಿ ರಾವ್ (Krishnaji Rao) ಈಗ ನಮ್ಮ ನಡುವೆ ಇಲ್ಲ. ಆದರೆ, ಅವರು ಕೊಟ್ಟು ಹೋದ ಕೊನೆಯ ಸಿನಿಮಾ ಬೆಳ್ಳಿ ಪರದೆ ಮೇಲೆ ಬರಲು ರೆಡಿಯಾಗಿದೆ. ಇದೇ ಜುಲೈ 07ರಂದು ಕೆಜಿಎಫ್ ತಾತ ನಾಯಕ ನಟನಾಗಿ ಅಭಿನಯಿಸಿರುವ, ಕುಮಾರ್ (Kumar) ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿಬಂದಿರುವ ‘ನ್ಯಾನೋ ನಾರಾಯಣಪ್ಪ’ (Nano Narayanappa) ಚಿತ್ರ ತೆರೆಗೆ ಬರಲಿದೆ.

    ನ್ಯಾನೋ ನಾರಾಯಣಪ್ಪ ಎರಡು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರುವಂತಹ ಸಿನಿಮಾ.  ಯೂತ್ ಕಮರ್ಷಿಯಲ್ ಗಿಂತ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಕೊಡಬೇಕು ಅಂತ ನಿರ್ದೇಶಕ ಕುಮಾರ್, ಕಾಮಿಡಿ ಪ್ಲಸ್ ಎಮೋಷನ್ ಎಲಿಮೆಂಟ್ಸ್ ನ ಬ್ಲೆಂಡ್ ಮಾಡಿ ಒಂದು ಸಂದೇಶಭರಿತ ಚಿತ್ರ ತೆಗೆದಿದ್ದಾರೆ.

    ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತ ಕುಮಾರ್, ಯಂಗ್ ಜನರೇಷನ್ ಗೆ ಮಾದರಿ ಆಗುವಂತೆ ಸಿನಿಮಾ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ನ್ಯಾನೋ ನಾರಾಯಣಪ್ಪನ ಸಿದ್ದಪಡಿಸಿದ್ದಾರೆ. ಅಂದಹಾಗೆ ನಿರ್ದೇಶಕ ಕುಮಾರ್ ತಮ್ಮ ಸಿನಿಮಾಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡ್ತಾನೆ ಇರ್ತಾರೆ. ಡೆಬ್ಯೂ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪದಲ್ಲೂ ಡಿವೋರ್ಸ್ ನಿಂದ ಜನ ಹೇಗೆ ತಮ್ಮ ಜೀವನ ಹಾಳು ಮಾಡಿಕೊಳ್ತಾರೆ ಅನ್ನೋದನ್ನ ತೋರಿಸಿದ್ದರು.  ಇದನ್ನೂ ಓದಿ:3ನೇ ಪತ್ನಿಯಿಂದಲೂ ದೂರಾವಾದ್ರಾ ನಟ ಪವನ್ ಕಲ್ಯಾಣ್?

    ಕ್ರಿಟಿಕಲ್ ಕೀರ್ತನೆಗಳು ಚಿತ್ರದಲ್ಲಿ ಐಪಿಎಲ್ ಬೆಟ್ಟಿಂಗ್ ನಿಂದಾಗಿ ಜನಸಾಮಾನ್ಯರ ಮೇಲೆ ಆಗುವ ಪರಿಣಾಮದ ಬಗ್ಗೆ ಮಾತನಾಡಿದ್ದರು. ಈಗ ನ್ಯಾನೋ ನಾರಾಯಣಪ್ಪ ಚಿತ್ರದಲ್ಲಿ ಬೇಗ ದುಡ್ಡು ಮಾಡುವ ಸಲುವಾಗಿ ಯಾವ್ ರೀತಿ ಸ್ಕ್ಯಾಮ್ ಮಾಡ್ತಾರೆ ಅನ್ನೋದನ್ನ ತಿಳಿಸಲಿಕ್ಕೆ ಹೊರಟಿದ್ದಾರೆ. ಕಾಮಿಡಿ ಜೊತೆಗೆ ಕಾಡುವ ಕಥೆಯನ್ನಿಟ್ಟು ಕುಟುಂಬ ಸಮೇತ ಥಿಯೇಟರ್ ಗೆ ಬಂದು ನೋಡುವಂತಹ ಸಿನಿಮಾ ಮಾಡಿದ್ದಾರೆ

    ಈ‌ ಚಿತ್ರದಲ್ಲಿ ಕೆಜಿಎಫ್ ತಾತ ಜೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಾರೆ. ಕೌಬಾಯ್ ಗೆಟಪ್‍ನಲ್ಲೂ ಖದರ್ ತೋರಿಸಿದ್ದಾರೆ. ಇಳಿವಯಸ್ಸಲ್ಲೂ ಕುಗ್ಗದ ಉತ್ಸಾಹ, ಹುಮ್ಮಸ್ಸು ಕೃಷ್ಣೋಜಿ ರಾವ್‍ರನ್ನ ಹೀರೋ ಮಾಡಿದೆ. 80ರ ದಶಕದಲ್ಲಿ ಕಂಡ ಕನಸು ಕೊನೆಗೂ ಈಡೇರಿದೆ. ಪ್ರಶಾಂತ್ ಸಿದ್ದಿ (Prashant Siddi), ಕಾಕ್ರೋಚ್ ಸುಧಿ (Cockroach Sudhi), ಗಿರೀಶ್ ಶಿವಣ್ಣ, ಅಕ್ಷತಾ ಕುಕ್ಕಿ, ಅಪೂರ್ವ, ಕಾಮಿಡಿ ಕಿಲಾಡಿಗಳು ಸಂತು, ಅನಂತ್ ಪದ್ಮನಾಭ್, ಕಿಂಗ್ ಮೋಹನ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.

     

    ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಿದ್ದು, ಶಿವಶಂಕರ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಆಕಾಶ್ ಪರ್ವ ಸಂಗೀತ, ದೀಪು, ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದ್ದು, ಕೇಸರಿ ಫಿಲ್ಮಂ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಕುಮಾರ್ ಅವ್ರ ಬಂಡವಾಳದಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಜುಲೈ 07ರಂದು ರಾಜ್ಯಾದ್ಯಂತ ನ್ಯಾನೋ ನಾರಾಯಣಪ್ಪನ ದರ್ಶನವಾಗಲಿದೆ. ಮಿಸ್ ಮಾಡದೇ ಥಿಯೇಟರ್ ಗೆ ಬಂದು‌ ಕೆಜಿಎಫ್ ತಾತನ ಕೊನೆಯ ಸಿನಿಮಾ ನೋಡಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಣ್ಣೆ ಹಾಡಿಗೆ ಕುಣಿದ 70ರ ವಯಸ್ಸಿನ ನಟ ಬಿರಾದಾರ್

    ಎಣ್ಣೆ ಹಾಡಿಗೆ ಕುಣಿದ 70ರ ವಯಸ್ಸಿನ ನಟ ಬಿರಾದಾರ್

    ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಬಿರಾದಾರ್ (Biradara) ಅಭಿನಯದ ಐನೂರನೇ ಸಿನಿಮಾ ಎಂದಾಗಿನಿಂದ ಸುದ್ದಿಯಲ್ಲಿದ್ದ ‘90 ಬಿಡಿ ಮನೀಗ್ ನಡಿ’ (90 Bidi Maneege Nadi) ಸಿನಿಮಾ  ಇದೀಗ ಚಿತ್ರದ ಟೈಟಲ್ ಹಾಡನ್ನು ಬಿಡುಗಡೆಗೊಳಿಸಿದೆ. ಈ ಹಿಂದೆ  ಉತ್ತರ ಕರ್ನಾಟಕದ ನಾಟಿ ಶೈಲಿಯ ‘ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರನ್ ಬಾರಸ್ತಿ’ ಎಂಬ ಕಚಗುಳಿ ಇಡುವ ಜವಾರಿ ಹಾಡು ರಿಲೀಸ್ ಮಾಡಿ ಹಿಟ್ ಮಾಡಿಕೊಂಡಿತ್ತು. ಎಪ್ಪತ್ತು ವರ್ಷದ ಬಿರಾದಾರ್ ಚಿತ್ರದ ನಾಯಕಿಯ ಜೊತೆ ಡಾನ್ಸ್ ಮಾಡಿದ ಎನರ್ಜಿ ಕಂಡು ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಅಲ್ಲಿಂದಾಚೆಗೆ ಚಿತ್ರದ ಮೇಲೊಂದು ನಿರೀಕ್ಷೆ ಮೂಡಿಕೊಂಡಿತ್ತು.

    ಮುಂದುವರೆದ ಚಿತ್ರತಂಡ ಇದೀಗ ವಿ. ನಾಗೇಂದ್ರ ಪ್ರಸಾದ್ ರಚನೆಯ, ರಾಜೇಶ್ ಕೃಷ್ಣನ್ ಧ್ವನಿಯಲ್ಲಿ ಮೂಡಿಬಂದ ಹಾಡು ಬಿಡುಗಡೆಗೊಳಿಸಿದೆ. ಕಿರಣ್ ಶಂಕರ್  ಸಂಗೀತ ನಿರ್ದೇಶನವಿರುವ ಈ ಹಾಡು ‘ಸಂಜೆಗಂಟ ಸುಮ್ನೆ ದುಡಿ. ನೈಂಟಿ ಹೊಡಿ ಮನೀಗ್ ನಡಿ’ ಎಂಬ ಸಾಲುಗಳಿಂದ ಪ್ರಾರಂಭಗೊಂಡು, ‘ಸಂಜೆ ಆದ್ರೆ ಆಗು ರೆಡಿ. ನೈಂಟಿ ಹೊಡಿ ಮನೀಗ್ ನಡಿ’ ಎಂಬ ಸಾಲಿನ ಜೊತೆ ಸೇರಿಕೊಂಡು ‘ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ’ ಎನ್ನುತ್ತಾ ಮಜವಾಗಿ ಕೊನೆಗೊಳ್ಳುತ್ತದೆ. ಇದನ್ನೂ ಓದಿ:ಬಾಲಿವುಡ್‌ ಚಿತ್ರಗಳ ಫ್ಲಾಪ್‌ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್‌ ರಿಲೀಸ್

    ಇದೇ ಚಿತ್ರದ ‘ಸಿಂಗಲ್ ಕಣ್ಣಾ’ ಹಾಡಿಗೆ ಬಿರಾದಾರ್ ಜೊತೆ ಪ್ರಯೋಗ ಮಾಡಿ ಗೆದ್ದ ಭೂಷಣ್ ಇಲ್ಲಿಯೂ ಕೊರಿಯೋಗ್ರಫಿಯಲ್ಲಿ ಸದ್ದು ಮಾಡಿದ್ದಾರೆ. ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆಯಡಿ ರತ್ನಮಾಲ ಬಾದರದಿನ್ನಿ ನಿರ್ಮಿಸಿರುವ ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.

    ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಒಟ್ಟಿನಲ್ಲಿ ಮಜವಾದ ಸಾಹಿತ್ಯದ ಜೊತೆ ನಶೆ ಏರಿಸುವ ಎಣ್ಣೆ ಹಾಡಿಗೆ ನಟ ಬಿರಾದಾರ್ ಜೊತೆ ಕರಿಸುಬ್ಬು, ಪ್ರಶಾಂತ್ ಸಿದ್ದಿ (Prashant Siddi) ಸಖತ್ ಸ್ಟೆಪ್ ಹಾಕಿದ್ದು, ಹಾಡಿಗೊಂದು ಮೆರುಗುಕೊಟ್ಟಿದ್ದಾರೆ. ಅಂದಹಾಗೆ ಇದೇ ಬರುವ ಹದಿನೇಳನೇ ತಾರೀಖಿಗೆ ಚಿತ್ರದ ಟ್ರೈಲರ್ ಬಿಡುಗಡೆಯ ಸಿದ್ಧತೆಯಲ್ಲಿ ಚಿತ್ರತಂಡವಿದೆ.

  • ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಹಿಂದೆ ಸ್ಟಾರ್ ಕನ್ನಡಿಗ ಸಿನಿಮಾ ಮಾಡಿದ್ದ ತಂಡವು ಇದೀಗ ‘ಮೈಕಲ್ ಅಂಡ್ ಮಾರ್ಕೊನಿ’‌ ಎಂಬ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ ನಟ ಪ್ರಶಾಂತ್ ಸಿದ್ದಿ ವಿಭಿನ್ನ ಪಾತ್ರ ನಿರ್ವಹಿಸುತ್ತಿದ್ದಾರೆ. ಬ್ಲಾಕ್ ಬಿಲ್ಲಿ ಎಂಬ ಪಾತ್ರವನ್ನು ಅವರು ಪೋಷಣೆ‌ ಮಾಡುತ್ತಿದ್ದು, ಈಗಷ್ಟೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಬ್ಲಾಕ್ ಬಿಲ್ಲಿ ಕ್ಯಾರೆಕ್ಟರ್ ನಂಬರ್ 18, ಏರಿಯಾ ನಂಬರ್-51 ಅಂತ ಬರೆದು ಕುತೂಹಲ ಮೂಡಿಸಿದೆ ಚಿತ್ರತಂಡ. ಇದನ್ನೂ ಓದಿ : ಬಾಗ್ಲು ತೆಗಿ ಮೇರಿ ಜಾನ್ ಹಾಡಿಗೆ ಗಲ್ಫ್ ಕನ್ನಡಿಗರ ಬಹುಪರಾಕ್: ಹಾಡೂ ಬೊಂಬಾಟ್ ಹಿಟ್

    ಸ್ಟಾರ್ ಕನ್ನಡಿಗ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತು ಜೊತೆಗೆ ಬಣ್ಣ ಹಚ್ಚಿದ್ದ ಮಂಜುನಾಥ್ ವಿ ಆರ್ ಮೈಕಲ್ ಅಂಡ್ ಮಾರ್ಕೊನಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಶ್ರೀ ಮಂಜುನಾಥ್ ಪಿಕ್ಚರ್ಸ್ ನಡಿ ನಿರ್ಮಾಣವಾಗ್ತಿರುವ ಈ ಸಿನಿಮಾಗೆ ಹರೀಶ್ ಜೋಡಿ ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ : ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

    ಪಕ್ಕ ಗ್ಯಾಂಗ್ ಸ್ಟಾರ್ ಕಥೆಯುಳ್ಳ, ರಾ ಥೀಮ್ ಕಾನ್ಸೆಪ್ಟ್ ನಲ್ಲಿ ತಯಾರಾಗುತ್ತಿರುವ ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದ ಟೈಟಲ್ ಅನ್ನು ನಟರಾಕ್ಷಸ ಡಾಲಿ ಧನಂಜಯ್ ಮೆಚ್ಚಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ. ಲೂಸ್ ಮಾದ ಯೋಗಿ ತಂಡಕ್ಕೆ ಹಾರೈಸಿದ್ದಾರೆ.