Tag: ಪ್ರಶಾಂತ್ ಸಂಬರ್ಗಿ

  • ಡಾಕ್ಟರ್ ಕೇಳಿ ಟೀ ಮಾಡೋದು ಕಲಿತ್ರಂತೆ ಪ್ರಶಾಂತ್ ಸಂಬರ್ಗಿ

    ಡಾಕ್ಟರ್ ಕೇಳಿ ಟೀ ಮಾಡೋದು ಕಲಿತ್ರಂತೆ ಪ್ರಶಾಂತ್ ಸಂಬರ್ಗಿ

    ಬೆಂಗಳೂರು: ದೊಡ್ಡಮನೆಯಲ್ಲಿ ಸೆಲೆಬ್ರಿಟಿಗಳು ಬಣ್ಣ ಬಣ್ಣದ ಆಟ ಶುರು ಮಾಡಿದ್ದಾರೆ. 2ನೇ ದಿನವೇ ಮನೆಯಲ್ಲಿ ರಂಗು ರಂಗಿನ ಕಥೆಗಳು ಒದೊಂದಾಗಿಯೇ ಹೊರಬರುತ್ತಿದೆ. ಪ್ರಶಾಂತ್ ಸಂಬರ್ಗಿ ಮನೆಯ ಹೆಂಗಳೆಯರಿಗೆ ಟೀ ಮಾಡುವುದನ್ನು ಹೇಳಿಕೊಟ್ಟಿದ್ದಾರೆ.

    ಹಾಲು ಮತ್ತು ನೀರನ್ನು ಕುದಿಸಬಾರದು ವಿಷವಾಗುತ್ತದೆ. ನೀರು, ಟೀ ಪೌಡರ್ ಹಾಕಿ ಕುದಿಸ ಬೇಕು. ಹಾಲು ಒಂದೆಡೆ ಕುದಿಸಬೇಕು. ನಮ್ಮ ಆರೋಗ್ಯಕ್ಕೆ ಯಾವುದು ಬೇಕು ಎಂಬುದನ್ನು ಡಾಕ್ಟರ್ ಕೇಳಿ ಟೀ ಮಡುವುದನ್ನು ಕೇಳಿ ಕಲಿತುಕೊಂಡಿದ್ದೇನೆ. 2 ಗುಳ್ಳೆ ಬಂದಾಗ ಟೀ ಪೌಡರ್ ಹಾಕಿ ಕುದಿಸಬೇಕು. ನಂತರ ತುಂಬಾ ಗುಳ್ಳೆ ಬಂದಾಗ ಆಫ್ ಮಾಡಿ ಟೀ ರೇಡಿಯಾಗುತ್ತದೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ಇದನ್ನು ಕೇಳುತ್ತಾ ನಿಂತಿದ್ದವರು ತಮ್ಮ ಮುಖದ ಭಾವನಗಳಲ್ಲೇ ಉತ್ತರವನ್ನು ನೀಡಿದ್ದಾರೆ.

    ನಂತರ ಪ್ರಶಾಂತ್ ಸಂಬರ್ಗಿ ಹಾಲಿಗೆ ಒಂದು ಹನಿ ಲಿಂಬುವನ್ನು ಹಾಕಿ ಮೊಸರು ಮಾಡುತ್ತೇನೆ ಎಂದು ಹೇಳಿದರು. ಆದರೆ ಕಿಚನ್‍ನಲ್ಲಿ ಇದ್ದ ನಿಧಿ ಸುಬ್ಬಯ್ಯ, ಶಂಕರ್ ಅಶ್ವಥ್, ನಿರ್ಮಿಲಾ ಚನ್ನಪ್ಪ, ಚಂದ್ರಕಲಾ ಮೋಹನ್ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ನಾನು ಮಾಡಿಯೇ ಮಾಡುತ್ತೇನೆ ನೋಡುತ್ತಿರಿ ಅಂತ ಹೇಳಿ ಹೋಗಿದ್ದಾರೆ. ಪ್ರಶಾಂತ್ ಸಂಬರ್ಗಿ ಮೊಸರು ಮಾಡುತ್ತಾರೋ ಇಲ್ಲ ಕೆಸರು ಮಾಡುತ್ತಾರೋ ಎಂದು ಶಂಕರ್ ಅಶ್ವಥ್ ಹಾಸ್ಯ ಮಾಡಿ ನಕ್ಕಿದ್ದಾರೆ.

    ಒಂಟಿ ಮನೆಯ ಮೊದಲ ದಿನದಿಂದಲೇ ಆಟ ಆರಂಭವಾಗಿದೆ. ಬಿಗ್ ಮನೆಯಲ್ಲಿರುವವರು ಒಂದೇ ದಿನದಲ್ಲಿ ಹಲವಾರು ವಿಚಾರಗಳಿಂದ ಸುದ್ದಿ ಮಾಡುತ್ತಿದ್ದಾರೆ. ನಿನ್ನೆ ಬಿಗ್ ಮನೆಯ ವಾಸ್ತು ಬಗ್ಗೆ ಚರ್ಚೆ ನಡೆಸಿದ್ದ ಪ್ರಶಾಂತ್ ಸಂಬರ್ಗಿ ಇಂದು ಟೀ ಮಾಡುವುದು ಹೇಗೆ ಎಂದು ಹೇಳಿ ಕೊಟ್ಟು ಸುದ್ದಿಯಾಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಇರುವ ರೀತಿ, ಏನೇ ಹೇಳಿದರೂ ಅವರದ್ದೇ ಆಗಿರುವ ಸ್ಟೈಲ್‍ನಲ್ಲಿ ಖಡಕ್ ಉತ್ತರವನ್ನು ನೀಡುವುದು. ಕೆಲವಷ್ಟು ವಿಚಾರಗಳಿಗೆ ಅವರದ್ದೇ ಆಗಿರುವ ತಾರ್ಕಿಕವಾದವನ್ನು ಮಾಡುತ್ತಿರುವುದು ನೋಡುಗರಿಗೆ ಇನ್ನಷ್ಟು ಮನರಂಜನೆ ನೀಡಲಿದೆ. ವಾಸ್ತುವಿನ ಕುರಿತಾಗಿ ಮಾತನಾಡಿದಾಲೇ ನೆಟ್ಟಿಗರು ಇವರಿಂದ ಹೆಚ್ಚಿನ ಮನರಂಜನೆಯ ನೀರಿಕ್ಷೆ ಮಾಡಿದ್ದರು. ಇದೀಗ ನೀರಿಕ್ಷೆಯ ಮಟ್ಟ ಹೆಚ್ಚಾಗಿದೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

  • ಅರ್ಜುನ್ ಸರ್ಜಾ ಆಪ್ತನ ವಿರುದ್ಧ ಎಫ್‍ಐಆರ್ ದಾಖಲು- ಶೃತಿ ಆರೋಪ ಏನು?

    ಅರ್ಜುನ್ ಸರ್ಜಾ ಆಪ್ತನ ವಿರುದ್ಧ ಎಫ್‍ಐಆರ್ ದಾಖಲು- ಶೃತಿ ಆರೋಪ ಏನು?

    ಬೆಂಗಳೂರು: ನಟಿ ಶೃತಿ ಹರಿಹರನ್ ದೂರು ನೀಡಿದ 15 ಗಂಟೆಯ ನಂತರ ಪೊಲೀಸರು ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    ಕಳೆದ ರಾತ್ರಿ ಪ್ರಶಾಂತ್ ಸಂಬರ್ಗಿ ವಿರುದ್ಧ ಶೃತಿ ದೂರು ದಾಖಲಿಸಿದ್ದರು. ಆದರೆ ಯಾವುದೇ ಎಫ್‍ಐಆರ್ ದಾಖಲಾಗಿರಲಿಲ್ಲ. ಶೃತಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದ ಪೊಲೀಸರು ಸಂಬರ್ಗಿ ವಿರುದ್ಧ ಎಫ್‍ಐಆರ್ ದಾಖಲಿಸದ್ದಕ್ಕೆ ಸಾರ್ವಜನಿಕ ವಲಯದಿಂದಲೂ ಟೀಕೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎಫ್‍ಐಆರ್ ದಾಖಲಿಸದ್ದು ಎಷ್ಟು ಸರಿ ಎಂದು ಶುಕ್ರವಾರ ಬೆಳಗ್ಗೆಯಿಂದ ಸುದ್ದಿ ಪ್ರಸಾರಿಸಿತ್ತು. ಕೊನೆಗೆ ಈಗ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪ್ರಶಾಂತ್ ವಿರುದ್ಧ ಐಪಿಸಿ ಸೆಕ್ಷನ್ 506(ಬೆದರಿಕೆ), 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು) ಅಡಿ ಎಫ್‍ಐಆರ್ ದಾಖಲಾಗಿದೆ.

    ಶೃತಿ ಹರಿಹರನ್ ದೂರಿನಲ್ಲಿ ಏನಿತ್ತು?
    ಫಿಲಂ ಚೇಂಬರ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಫಿಲಂ ಚೇಂಬರ್ ಕಟ್ಟಡದ ಒಳಗೆ ಮತ್ತು ಹೊರಗೆ ನಮ್ಮ ಪ್ರಕರಣ ಸಂಬಂಧ ಪಡದ ಅನಪೇಕ್ಷಿತ ವ್ಯಕ್ತಿಗಳು ಜಮಾವಣೆಗೊಂಡಿದ್ದರು. ಈ ಸಂದರ್ಭ ದುರ್ಬಳಕೆ ಮಾಡಿಕೊಂಡ ಪ್ರಶಾಂತ್ ಸಂಬರ್ಗಿ ಎಂಬ ವ್ಯಕ್ತಿ ಗೂಂಡಾಗಳ ಜೊತೆ ಜಮಾವಣೆಗೊಂಡಿದ್ದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, ಅವಳು ಶೃತಿ ಹರಿಹರನ್ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ವರ್ತಿಸಿದ್ದಾಳೆ ಎಂದು ಹೇಳಿದ್ದಾರೆ. ಇದು ನನ್ನನ್ನು ಧರ್ಮವೊಂದಕ್ಕೆ ಎತ್ತಿಕಟ್ಟುವ ಅಪರಾಧವಾಗಿರುತ್ತದೆ. ಮುಂದುವರಿದು ವಿದೇಶಿ ಹಣದಲ್ಲಿ ಮಾಧ್ಯಮಗಳಿಗೆ ಹಣ ನೀಡಿ ಮಹಿಳಾ ದೌರ್ಜನ್ಯ ವಿರೋಧಿ ಸುದ್ದಿಗಳನ್ನು ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇದು ಆಧಾರ ರಹಿತ ಆರೋಪವಾಗಿದ್ದು ನನ್ನ ಮತ್ತು ಮಾಧ್ಯಮಗಳ ತೇಜೋವಧೆ ಮಾಡುವ ಕೃತ್ಯವಾಗಿರುತ್ತದೆ.

    ಅಷ್ಟೇ ಅಲ್ಲದೇ ಪ್ರಶಾಂತ್ ಸಂಬರ್ಗಿ ಶೃತಿ ಹರಿಹರನ್ ಬಳಸುವ 3 ಫೇಸ್‍ಬುಕ್‍ಗಳ ಐಪಿ ಅಡ್ರೆಸ್ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದಾರೆ. ಇದು ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಶೃತಿ ಹರಿಹರನ್ ಅವಳನ್ನು ಬಿಡುವುದಿಲ್ಲ ಎಂದಿದ್ದಾರೆ. ಏಕವಚನದಲ್ಲಿ ನಿಂದಿಸಿ ನನ್ನ ಘನತೆಯ ಬದುಕಿಗೆ ಅಡ್ಡಿಯಾಗಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಇದಲ್ಲದೆ ನಾನು ಆರೋಪಿಸಲ್ಪಟ್ಟ ವ್ಯಕ್ತಿ ಕೂಡ ನಟನಾಗಿರೋದ್ರಿಂದ ಅವರ ಅಭಿಮಾನಿಗಳಿಗೆ ನನ್ನ ವಿರುದ್ಧ ಕೊಲೆ, ಹಲ್ಲೆಯ ಪ್ರಚೋದನೆ ಮಾಡಿದ್ದಾರೆ. ಸೂಕ್ತ ಕ್ರಮ ಕೈಗೊಂಡು, ನನಗೆ ರಕ್ಷಣೆ ಕೊಡುವಂತೆ ಕೋರುತ್ತೇನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರ್ಜುನ್ ಆಪ್ತನ ವಿರುದ್ಧ ದೂರು ನೀಡಿದ್ದು ಯಾಕೆ: ಸ್ಪಷ್ಟನೆ ನೀಡಿದ ಶೃತಿ ಹರಿಹರನ್

    ಅರ್ಜುನ್ ಆಪ್ತನ ವಿರುದ್ಧ ದೂರು ನೀಡಿದ್ದು ಯಾಕೆ: ಸ್ಪಷ್ಟನೆ ನೀಡಿದ ಶೃತಿ ಹರಿಹರನ್

    ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ನೀಡಿದ್ದ ದೂರಿನ ಬಗ್ಗೆ ನಟಿ ಶೃತಿ ಹರಿಹರನ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಾಣ ಬೆದರಿಕೆ ಹಾಗೂ ತೇಜೋವಧೆಗೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಹೈ-ಗ್ರೌಂಡ್ಸ್ ಠಾಣೆಯಲ್ಲಿ ದೂರನ್ನು ನೀಡಿದ್ದೇನೆ. ಶೂಟಿಂಗ್ ನಿಮಿತ್ತ ನಾನು ಚೆನ್ನೈಗೆ ಆಗಮಿಸಿದ್ದು, ಇಂದು ಬೆಂಗಳೂರಿಗೆ ಬರಲು ಆಗುವುದಿಲ್ಲ. ಶನಿವಾರ ಬೆಂಗಳೂರಿಗೆ ವಾಪಸ್ಸಾಗುತ್ತೇನೆ ಎಂದು ತಿಳಿಸಿದರು.

    ನನ್ನ ಸ್ನೇಹಿತನಾದ ರಾಮ್, ಪ್ರಶಾಂತ್ ಸೇರಿದಂತೆ ಇತರೆ ಯಾರ ವಿರುದ್ಧವೂ ದೂರನ್ನು ನೀಡುವುದಿಲ್ಲ. ರಾಮ್ ದೂರು ನೀಡುತ್ತಾರೆ ಎಂಬುದು ಶುದ್ಧ ಸುಳ್ಳು. ನಾನು ಇದುವರೆಗೂ ಒಂದೇ ಒಂದು ದೂರನ್ನು ಮಾತ್ರ ನೀಡಿದ್ದೇನೆ. ಅವರು ಪಬ್ಲಿಕ್ ಟಿವಿಯಲ್ಲಿ ನನ್ನ ವಿರುದ್ಧ ಮಾತನಾಡಿದ್ದಕ್ಕೆ, ನಾನು ದೂರನ್ನು ನೀಡಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಯಾವುದೇ ರೀತಿಯ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

    ಪ್ರಶಾಂತ್ ವಿರುದ್ಧ ದೂರನ್ನು ನೀಡಿರುವುದಕ್ಕೆ ನನ್ನ ಬಳಿ ಎಲ್ಲಾ ಸಾಕ್ಷಿಗಳಿವೆ. ಕಾನೂನಿನ ಮೂಲಕ ನಾನು ಹೋರಾಟ ಮಾಡ್ಬೇಕು, ಅದಕ್ಕೆಲ್ಲಾ ತಯಾರಿ ಮಾಡಿದ್ದೀನಿ ಎಂದು ಸ್ಪಷ್ಟ ಪಡಿಸಿದ್ರು.  ಇದನ್ನೂ ಓದಿ: #MeToo ಬ್ಯಾಟಲ್‍ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಪ್ರಶಾಂತ್ ವಿರುದ್ಧ ಶೃತಿ ಮತ್ತೊಂದು ದೂರು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=pqnp-LBxMcc

  • ಪೊಲೀಸ್ ಠಾಣೆ ಮೆಟ್ಟಿಲೇರಿತು #MeToo ಬ್ಯಾಟಲ್ – ಸರ್ಜಾ ಆಪ್ತನ ವಿರುದ್ಧ ಶೃತಿ ದೂರು

    ಪೊಲೀಸ್ ಠಾಣೆ ಮೆಟ್ಟಿಲೇರಿತು #MeToo ಬ್ಯಾಟಲ್ – ಸರ್ಜಾ ಆಪ್ತನ ವಿರುದ್ಧ ಶೃತಿ ದೂರು

    ಬೆಂಗಳೂರು: #MeToo ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಆಪ್ತನ ವಿರುದ್ಧ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಫಿಲಂ ಚೇಂಬರ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಫಿಲಂ ಚೇಂಬರ್ ಕಟ್ಟಡದ ಒಳಗೆ ಮತ್ತು ಹೊರಗೆ ನಮ್ಮ ಪ್ರಕರಣ ಸಂಬಂಧ ಪಡದ ಅನಪೇಕ್ಷಿತ ವ್ಯಕ್ತಿಗಳು ಜಮಾವಣೆಗೊಂಡಿದ್ದರು. ಈ ಸಂದರ್ಭ ದುರ್ಬಳಕೆ ಮಾಡಿಕೊಂಡ ಪ್ರಶಾಂತ್ ಸಂಬರ್ಗಿ ಎಂಬ ವ್ಯಕ್ತಿ ಗೂಂಡಾಗಳ ಜೊತೆ ಜಮಾವಣೆಗೊಂಡಿದ್ದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, ಅವಳು ಶೃತಿ ಹರಿಹರನ್ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ವರ್ತಿಸಿದ್ದಾಳೆ ಎಂದು ಹೇಳಿದ್ದಾನೆ. ಇದು ನನ್ನನ್ನು ಧರ್ಮವೊಂದಕ್ಕೆ ಎತ್ತಿಕಟ್ಟುವ ಅಪರಾಧವಾಗಿರುತ್ತದೆ. ಮುಂದುವರಿದು ವಿದೇಶಿ ಹಣದಲ್ಲಿ ಮಾಧ್ಯಮಗಳಿಗೆ ಹಣ ನೀಡಿ ಮಹಿಳಾ ದೌರ್ಜನ್ಯ ವಿರೋಧಿ ಸುದ್ದಿಗಳನ್ನು ಮಾಡಿದ್ದಾಳೆ ಎಂದು ಹೇಳಿದ್ದಾನೆ.

    ಇದು ಆಧಾರ ರಹಿತ ಆರೋಪವಾಗಿದ್ದು ನನ್ನ ಮತ್ತು ಮಾಧ್ಯಮಗಳ ತೇಜೋವಧೆ ಮಾಡುವ ಕೃತ್ಯವಾಗಿರುತ್ತದೆ. ಮುಂದುವರಿದು ಮಾತನಾಡಿದ ಪ್ರಶಾಂತ್ ಸಂಬರ್ಗಿ ಶೃತಿ ಹರಿಹರನ್ ಬಳಸೋ 3 ಫೇಸ್‍ಬುಕ್‍ಗಳ ಐಪಿ ಅಡ್ರೆಸ್ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದಾನೆ.

    ಇದು ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಶೃತಿ ಹರಿಹರನ್‍ಳನ್ನು ಬಿಡುವುದಿಲ್ಲ ಎಂದಿದ್ದಾನೆ. ಏಕವಚನದಲ್ಲಿ ನಿಂದಿಸಿ ನನ್ನ ಘನತೆಯ ಬದುಕಿಗೆ ಅಡ್ಡಿಯಾಗಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ್ದಾನೆ. ಇದಲ್ಲದೆ ನಾನು ಆರೋಪಿಸಲ್ಪಟ್ಟ ವ್ಯಕ್ತಿ ಕೂಡ ನಟನಾಗಿರೋದ್ರಿಂದ ಅವರ ಅಭಿಮಾನಿಗಳಿಗೆ ನನ್ನ ವಿರುದ್ಧ ಕೊಲೆ, ಹಲ್ಲೆಯ ಪ್ರಚೋದನೆ ಮಾಡಿದ್ದಾನೆ. ಸೂಕ್ತ ಕ್ರಮ ಕೈಗೊಂಡು, ನನಗೆ ರಕ್ಷಣೆ ಕೊಡುವಂತೆ ಕೋರುತ್ತೇನೆ ಎಂಬುದಾಗಿ ಶೃತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

    ಸದ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=RKPY3g4jWRM

    https://www.youtube.com/watch?v=Mud4GP9t0ik

  • ನಟಿ ಶೃತಿ ಹರಿಹರನ್ #MeToo ಆರೋಪಕ್ಕೆ ಧರ್ಮದ ನಂಟು..!

    ನಟಿ ಶೃತಿ ಹರಿಹರನ್ #MeToo ಆರೋಪಕ್ಕೆ ಧರ್ಮದ ನಂಟು..!

    ಬೆಂಗಳೂರು: ನಟಿ ಶೃತಿ ಹರಿಹರನ್ ಅವರು ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ `ಲೈಂಗಿಕ ಕಿರುಕುಳ’ ಆರೋಪ ಮಾಡಿರುವುದು ಇದೀಗ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಇದಕ್ಕೆ ಇದೀಗ ಧರ್ಮದ ನಂಟು ಅಂಟಿಸಲಾಗಿದೆ.

    ಅರ್ಜುನಾ ಸರ್ಜಾ ಅವರು ಹನುಮ ಭಕ್ತ, ಆರೋಪದ ಹಿಂದೆ ಹಿಂದೂ ವಿರೋಧಿ ಅಜೆಂಡಾವಿದೆ. ಸರ್ಜಾ ಅವರು ಹಿಂದೂಧರ್ಮ ಅನುಸರಿಸುತ್ತಾರೆ. ಅವರು ಚೆನ್ನೈನಲ್ಲಿ ಹನುಮನ ಮೂರ್ತಿ ನಿರ್ಮಿಸಿದ್ದಾರೆ. ಅರ್ಜುನ್ ಸರ್ಜಾ ಅವರ ತಂದೆ ಆರ್‍ಎಸ್‍ಎಸ್‍ನಲ್ಲಿದ್ದವರು ಎಂದು ಅರ್ಜುನ್ ಸರ್ಜಾ ಪರ ಕನ್ನಡ ಹೋರಾಟಗಾರ, ಉದ್ಯಮಿ ಪ್ರಶಾಂತ್ ಸಂಬರ್ಗಿ ನಿಂತಿದ್ದಾರೆ.

    ಶೃತಿ ಹರಿಹರನ್ ತಂದೆ ಕಮ್ಯೂನಿಸ್ಟ್ ಬೆಂಬಲಿಗರು. ಶೃತಿ ಹರಿಹರನ್ ಅವರ ಮೀಟೂ ಆರೋಪದ ಹಿಂದೆ ಮೋದಿ ವಿರೋಧಿ, ಹಿಂದೂ ವಿರೋಧಿ, ಬಿಜೆಪಿ ವಿರೋಧಿ ಅಜೆಂಡಾವಿದೆ. ಕವಿತಾ ಲಂಕೇಶ್, ನಟ ಚೇತನ್, ರೂಪಾ ಅಯ್ಯರ್ ಇವರೆಲ್ಲ ಕನ್ನಡ ಸಿನಿಮಾ ಲೋಕದ ಎಡಪಂಥಿಯರು. ಪ್ರಕಾಶ್ ರೈ ಅಂತ ವುಮೆನೈಜರ್ ಹಿಂದೆ ಮುಂದೆ ನೋಡದೆ ಸಪೋರ್ಟ್ ಮಾಡ್ತಿದ್ದಾರೆ. ಇದು ಸಂಪೂರ್ಣ ವ್ಯವಸ್ಥಿತವಾದ ಪೊಲಿಟಿಕಲ್ ಡ್ರಾಮಾ ಎಂದು ಪ್ರಶಾಂತ್ ಸಂಬರ್ಗಿ ಕಿಡಿಕಾರಿದ್ದಾರೆ. ಇದನ್ನು ಓದಿ: ತಾವೇ ಆಂಜನೇಯ ಮೂರ್ತಿಗೆ ಕೆತ್ತನೆ ಮಾಡಿದ ಅರ್ಜುನ್ ಸರ್ಜಾ – ವಿಡಿಯೋ

    ಶೃತಿ ಹರಿಹರನ್ ಆರೋಪವೇನು?:
    ಮ್ಯಾಗಜೀನ್‍ವೊಂದರ ಸಂದರ್ಶನದ ವೇಳೆ ನಟ ಅರ್ಜುನ್ ವಿರುದ್ಧ ಆರೋಪ ಮಾಡಿದ ಶೃತಿ ಹರಿಹರನ್, ವಿಸ್ಮಯ ಚಿತ್ರೀಕರಣದ ವೇಳೆ ತನ್ನ ಮೇಲಾದ ಲೈಂಗಿಕ ಕಿರುಕುಳವಾದ ಅನುಭವವನ್ನು ಬಿಚ್ಚಿಟ್ಟಿದ್ದರು. ಕಳೆದ ವರ್ಷ `ವಿಸ್ಮಯ’ ಅನ್ನೋ ಸಿನಿಮಾವೊಂದನ್ನು ನಾನು ಮಾಡಿದ್ದೆ. ಚಿತ್ರದಲ್ಲಿ ಅರ್ಜುನ್ ಅರ್ಜಾ ಅವರು ನನ್ನ ಸಹನಟನಾಗಿ ಅಭಿನಯಿಸಿದ್ದರು. ಚಿತ್ರದಲ್ಲಿ ನಾನು ಅವರ ಹೆಂಡತಿಯಾಗಿ ನಟಿಸುತ್ತಿದ್ದೆ, ಅದರ ಪ್ರ್ಯಾಕ್ಟೀಸ್ ಮಾಡುತ್ತಿದ್ದೆವು. ಆಗ ಸರ್ಜಾ `ಇನ್ನೊಂಚೂರು ಹೀಗೆ ಪ್ರಾಕ್ಟೀಸ್ ಮಾಡಬಹುದಲ್ವಾ?’ ಅಂತ ಹೇಳಿ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡರು. ಅವರ ಆ ಅಪ್ಪುಗೆಯಿಂದ ಒಮ್ಮೆಲೆ ನಾನು ತಬ್ಬಿಬ್ಬಾಗಿದ್ದು, ಆ ವರ್ತನೆ ತುಂಬಾನೇ ಅಸಹ್ಯವಾಗಿತ್ತು. ಇದರಿಂದ ನನಗೆ ಇರಿಸು ಮುರುಸು ಉಂಟಾಗಿದ್ದು, ಕೂಡಲೇ ನಿರ್ದೇಶಕರ ಬಳಿ ತೆರಳಿ `ಇನ್ನು ಮುಂದೆ ನಾನು ರಿಹರ್ಸಲ್ ಗೆ ಬರಲ್ಲ, ಬರೀ ಶೂಟಿಂಗ್ ಗಷ್ಟೇ ಕರೆಯಿರಿ’ ಅಂತ ಹೇಳಿ ಬಂದುಬಿಟ್ಟೆ. ಆ ಬಳಿಕ ನಾನು ಬರೀ ಶೂಟಿಂಗ್ ಗೆ ಮಾತ್ರ ಹೋಗಿ ಬರುತ್ತಿದ್ದೆ ಅಂತ ಶೃತಿ ಹೇಳಿದ್ದರು.

    ಇಷ್ಟೆಲ್ಲಾ ಆದ್ರೂ ಅರ್ಜುನ್ ಸರ್ಜಾ ಮಾತ್ರ ವಿಚಲಿತನಾದಂತೆ ಕಾಣಲಿಲ್ಲ. ಯಾಕಂದ್ರೆ ಅದಾದ ಬಳಿಕ ಅವರು ನನ್ನ ಜೊತೆ ಮಾತನಾಡುವಾಗಲೂ ಬಳಸಿದ ಭಾಷೆ ಸಭ್ಯವಾಗಿರಲಿಲ್ಲ. ಪದೇ ಪದೇ ಡಿನ್ನರ್ ಗೆ ಕರೆಯುತ್ತಿದ್ದರು. `ರೆಸಾರ್ಟ್ ಗೆ ಹೋಗೋಣ ಬಾ’ ಎಂದು ಕರೆಯಲು ಆರಂಭಿಸಿದ್ರು. ಹೀಗೆ ಕರೆಯುವಾಗ ನಾನು ನೇರವಾಗಿ `ಇಲ್ಲ, ನಾನು ಬರಲ್ಲ’ ಅಂತ ಹೇಳುತ್ತಿದ್ದೆನು. ನನ್ನ ಈ ಮಾತುಗಳನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. `ನೋ ಅಂದ್ರೆ ನೋ’ ಎಂಬುದರ ಅರ್ಥವೇ ಅವರಿಗೆ ಆಗುತ್ತಿಲ್ಲವಲ್ಲ ಅಂತ ನನಗೆ ನಿಜವಾಗಿಯೂ ಅಚ್ಚರಿಯಾಗುತ್ತಿತ್ತು. ಯಾಕಂದ್ರೆ ಅವರಿಗೆ ಹೀಗೆ ಕರೆದಾಗ ಯಾರೂ `ನೋ’ ಅಂತ ಹೇಳಿರಲಿಲ್ಲವೋ ಏನೋ, ಅದಕ್ಕೆ ಅವರು ನನ್ನ ನೇರ ಮಾತುಗಳನ್ನು ಕಡೆಗಣಿಸುತ್ತಿದ್ದರು ಅಂತ ಅವರು ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದರು.

    ಅರ್ಜುನ್ ಸರ್ಜಾ ಹೇಳಿದ್ದೇನು?
    ಶೃತಿ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಇದೂವರೆಗೂ ನಾನು 60 ರಿಂದ 70 ನಟಿಯರ ಜೊತೆ ನಟಿಸಿದ್ದೇನೆ. ಯಾರೂ ಸಹ ಈ ರೀತಿಯ ಆರೋಪ ಮಾಡಿಲ್ಲ. ಜೊತೆಯಲ್ಲಿಯೂ ಕೂರಿಸಿಕೊಂಡು ದೃಶ್ಯದಲ್ಲಿ ಹೇಗೆ ನಟಿಸಬೇಕು? ಡೈಲಾಗ್ ನಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ. ನಮ್ಮ ವೃತ್ತಿಯನ್ನು ಮುಂದಿಟ್ಟುಕೊಂಡು ಇಂತಹ ಕೆಳಮಟ್ಟದಲ್ಲಿ ನಾನು ಎಂದೂ ಇಳಿದಿಲ್ಲ. ನಮ್ಮ ಪ್ರೊಫೆಶನ್ ಮುಂದೆ ಇಟ್ಟುಕೊಂಡು ಒಂದು ಹೆಣ್ಣಿನ ಮೈ ಮುಟ್ಟಬೇಕು ಎಂಬ ಚೀಪ್ ಮೆಂಟಾಲಿಟಿ ನನ್ನಲ್ಲಿ ಇಲ್ಲ. ನಾನು ಮೀಟೂ ವೇದಿಕೆ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ. ಈ ದೊಡ್ಡ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶೃತಿ ಮಾತನಾಡುವ ಮಾತುಗಳಿಗೆ ಯಾವುದಾದರೂ ಆಧಾರವಿದೆಯಾ? ಶೃತಿ ಆರೋಪದ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಅಂತ ಹೇಳಿದ್ದರು.

    ನಾನು ಪ್ರತಿಕ್ರಿಯಿಸಬಾರದು ಅಂತಾ ನಿರ್ಧರಿಸಿದ್ದೆ. ಆದ್ರೆ `ಮೌನಂ ಸಮ್ಮತಿ ಲಕ್ಷ್ಮಣಂ’ ಎಂದು ಅರ್ಥವಾಗುತ್ತದೆ ಎಂದು ಪಬ್ಲಿಕ್ ಟಿವಿ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಒಂದೂವರೆ ವರ್ಷದ ಹಿಂದೆ ನಡೆದ ಸಿನಿಮಾ ಮುಗಿದಿದೆ. ಅಂದೇ ನಿರ್ದೇಶಕರಿಗೆ ಅಥವಾ ಚಲನಚಿತ್ರ ಮಂಡಳಿಗೆ ದೂರು ಕೊಡಬೇಕಿತ್ತು. ಇಷ್ಟು ದಿನ ಸುಮ್ಮನಿದ್ದು ಈವಾಗ ಯಾಕೆ ಹೇಳುತ್ತಿದ್ದಾರೆಂದು ಗೊತ್ತಿಲ್ಲ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=LFKlX3O1iuM

    https://www.youtube.com/watch?v=CT09s2HQWKY

  • ಕನ್ನಡದಲ್ಲಿ ಯಾಕೆ ಮಾತನಾಡಬೇಕು: ಬೆಂಗಳೂರಿನಲ್ಲಿ ನೆಲೆಸಿರುವ ಅನ್ಯಭಾಷಿಕರು ನೋಡ್ಲೇಬೇಕಾದ ವಿಡಿಯೋ

    ಕನ್ನಡದಲ್ಲಿ ಯಾಕೆ ಮಾತನಾಡಬೇಕು: ಬೆಂಗಳೂರಿನಲ್ಲಿ ನೆಲೆಸಿರುವ ಅನ್ಯಭಾಷಿಕರು ನೋಡ್ಲೇಬೇಕಾದ ವಿಡಿಯೋ

    ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಯಾಕೆ ವಿರೋಧಿಸಬೇಕು? ದೇಶದ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಭಾಷೆಗಳು ಹೇಗೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಕನ್ನಡಿಗರೊಬ್ಬರು ಹಿಂದಿಯಲ್ಲಿ ವಿವರಿಸುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಉದ್ಯಮಿ ಪ್ರಶಾಂತ್ ಸಂಬರ್ಗಿ ಅವರು ಈ ವಿಡಿಯೋದಲ್ಲಿ ಮಾತನಾಡಿ ಬೆಂಗಳೂರಿನಲ್ಲಿ ನೆಲೆಸಿರುವ ಹೊರ ರಾಜ್ಯದವರಿಗೆ ಕನ್ನಡ ಕಲಿಯುವಂತೆ ಮನವಿ ಮಾಡಿದ್ದಾರೆ.

    ವಿಡಿಯೋದಲ್ಲಿ ಹೇಳಿದ್ದೇನು?
    ನಾನು ಯಾವುದೇ ಪಕ್ಷಕ್ಕೆ ಸೇರಿದ ವ್ಯಕ್ತಿಯಲ್ಲ. ಯಾವುದೇ ರಾಜಕೀಯ ಉದ್ದೇಶವೂ ನನಗೆ ಇಲ್ಲ. ಮೆಟ್ರೋವನ್ನು ನಾವು ಪ್ರೀತಿಯಿಂದ ‘ನಮ್ಮ ಮೆಟ್ರೋ’ ಎಂದು ಕರೆದಿದ್ದೇವೆ. ಆದರೆ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿದ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಕಳೆದ 70 ವರ್ಷಗಳಿಂದ ಕೇಂದ್ರ ಸರ್ಕಾರಗಳು ಹಿಂದಿ ಅಭಿವೃದ್ಧಿಗೆ 1700 ಕೋಟಿ ರೂ. ಅನುದಾನ ಕೊಟ್ಟಿದೆ.

    ಪ್ರಾದೇಶಿಕ ಭಾಷೆಗಳು ನಮ್ಮ ನಾಡಿನ ಸೊಬಗು. ಭಾರತದ ವಿವಿಧತೆಯಲ್ಲಿ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದೆ. ಆದರೆ ಹಿಂದಿ ದಬ್ಬಾಳಿಕೆಯಿಂದ ವೈವಿಧ್ಯತೆಯಲ್ಲಿ ಏಕತೆಯ ಬದಲು ಮೂರ್ಖತೆಯಲ್ಲಿ ಏಕತೆ ಕಾಣುತ್ತಿದ್ದೇವೆ. ಬಿಹಾರದ ಮೈಥಿಲಿ, ಗುಜರಾತಿನ ಸಿಂಧಿ, ಅಸ್ಸಾಮಿನ ಬೋಡೋ ಭಾಷೆಯನ್ನು ಈಗಾಗಲೇ ಕೊಲ್ಲಲಾಗಿದೆ.

    ಕನ್ನಡ ಹೇಗೆ ಸಾಯುತ್ತದೆ ಎಂದು ನೀವು ಕೇಳಬಹುದು. 18ನೇ ಶತಮಾನದಲ್ಲಿ ಚಾರ್ಲ್ಸ್ ಡಾರ್ವಿನ್ ವಿಕಾಸವಾದ ನಿಮಗೆ ತಿಳಿದಿರಬಹುದು. ಮನುಷ್ಯನಿಗೂ ಮಂಗನಂತೆ ಬಾಲ ಇತ್ತು. ಆದರೆ ನಾವು ಅದನ್ನು ಬಳಸಲಿಲ್ಲ. ಹೀಗಾಗಿ ಬಾಲ ಮಾಯವಾಗಿದೆ ಎನ್ನುವ ವಿಕಾಸವಾದ ಪ್ರಾದೇಶಿಕ ಭಾಷೆಗಳಿಗೂ ಅನ್ವಯವಾಗುತ್ತದೆ. ಹಿಂದಿ ಹೇರಿಕೆ ಜಾಸ್ತಿಯಾಗಿ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾದರೆ ಈ ಭಾಷೆಗಳು ಕಣ್ಮರೆಯಾಗಬಹುದು. ಹೀಗಾಗಿ ಕನ್ನಡ ಕಣ್ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

    ಬೇರೆ ರಾಜ್ಯಗಳಿಂದ ಬೆಂಗಳೂರಿಗೆಂದು ಉದ್ಯೋಗಕ್ಕೆ ಬಂದವರಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ಒಂದು ಕನ್ನಡ ಕಲಿಯಲು ಒಂದು ಹೆಜ್ಜೆ ಇಟ್ಟರೆ ಕನ್ನಡಿಗರು ನಿಮಗೆ ಕನ್ನಡ ಕಲಿಸಲು ಎರಡು ಹೆಜ್ಜೆ ಮುಂದಕ್ಕೆ ಇಡುತ್ತಾರೆ. ನಾವೆಲ್ಲರೂ ಪ್ರಾದೇಶಿಕ ಭಾಷೆಯನ್ನು ಉಳಿಸಲು ಪ್ರಮಾಣ ಮಾಡೋಣ. ಈ ಮೂಲಕ ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸೋಣ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಅಚ್ಚ ಕನ್ನಡಿಗರಾಗಿರುವ ಇವರು ‘ನಿಜವಾದ ಕನ್ನಡಿಗ ಯಾರು’ ಎನ್ನುವ ಶೀರ್ಷಿಕೆಯ ಅಡಿ ವಿಡಿಯೋಗಳನ್ನು ತರುತ್ತಿದ್ದಾರೆ. ಡಬ್ಬಿಂಗ್ ಪರವಾಗಿರುವ ಇವರು ಕನ್ನಡ ಸಾಹಿತ್ಯ ಓದುವವರು, ಕನ್ನಡದಲ್ಲಿ ವ್ಯವಹರಿಸುವವರು ನಿಜವಾದ ಕನ್ನಡಿಗರು ಎಂದು ಹೇಳಿದ್ದಾರೆ. ಬಾಹುಬಲಿ ಸತ್ಯರಾಜ್ ಗಲಾಟೆ ಸಂದರ್ಭದಲ್ಲಿ ಇವರು ವಿಡಿಯೋ ಮೂಲಕ ಕನ್ನಡಿಗರು ಯಾರು ಎಂದು ವಿವರಿಸಿದ್ದರು.
    ಈ ವಿಡಿಯೋಗೆ ಕನ್ನಡ ಸಂಘಟನೆಗಳಿಂದ ಆಕ್ಷೇಪ ಕೇಳಿ ಬಂದಿತ್ತು.

    ವಿಡಿಯೋ ವೀಕ್ಷಿಸಲು ಲಿಂಕ್: https://www.facebook.com/VS.Prashanth.Sambargi