Tag: ಪ್ರಶಾಂತ್ ಸಂಬರ್ಗಿ

  • ಮಂಜು ವಿರುದ್ಧ ತಿರುಗಿ ಬಿದ್ದ ದಿವ್ಯಾ

    ಮಂಜು ವಿರುದ್ಧ ತಿರುಗಿ ಬಿದ್ದ ದಿವ್ಯಾ

    ಬಿಗ್‍ಬಾಸ್ ಮನೆಯ ಜೋಡಿಯೊಂದು ಕಿತ್ತಾಡಿಕೊಂಡಿದೆ. ಕೈ ಹಿಡಿದುಕೊಂಡು ಜೊತೆ ಜೊತೆಯಾಗಿ ನಡೆದಾಡುತ್ತಾ ನಕ್ಕು ನಲಿಯುತ್ತಿದ್ದ ಜೋಡಿ ಇದೀಗ ಬಿಗ್‍ಬಾಸ್ ಮನೆಯಲ್ಲಿ ಮುನಿಸಿಕೊಂಡು ಸುದ್ದಿಯಾಗಿದೆ.

    ಹೌದು ಬಿಗ್‍ಬಾಸ್ ಮನೆಯಲ್ಲಿ ಮೊದಲಿನಿಂದಲೂ ಬಿಗ್‍ಬಾಸ್ ಕ್ಯಾಮೆರಾ ಮತ್ತು ವೀಕ್ಷಕರ ಕಣ್ಣಿಗೆ ಬಿದ್ದಿದ್ದು ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಮುದ್ದಾದ ಜೋಡಿ. ಈ ಜೊಡಿ ಮೊದಲಿನಿಂದ ತಮಾಷೆ, ಹರಟೆ, ಜೊತೆಯಲ್ಲಿಯೆ ಹೆಚ್ಚು ಸಮಯ ಕಳೆಯುವ ಮೂಲಕವಾಗಿ ಗುರುತಿಸಿಕೊಂಡಿತ್ತು. ಇದೀಗ ಮೊದಲ ಬಾರಿ ಕಿತ್ತಾಡಿಕೊಂಡಿದೆ.

    ಪ್ರಶಾಂತ್ ಸಂಬರ್ಗಿ ಆಟ ಮನೆಯಲ್ಲಿ ಶುರುವಾಗಿದೆ. ಮಂಜು ವಿರುದ್ಧವಾಗಿ ಎಲ್ಲರ ಬಳಿ ಹೇಳಿ ಎಲ್ಲರೂ ಮಂಜು ವಿರುದ್ಧವಾಗಿ ತಿರುಗಿ ಬೀಳುವಂತೆ ಸಂಬರ್ಗಿ ಮಾಡಿದ್ದಾರೆ. ಮಂಜುಗೆ ಅತ್ಯಂತ ಹತ್ತಿರ ಎಂದರೆ ದಿವ್ಯಾ ಸುರೇಶ್ ಇದೀಗ ಅವರ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದೆ. ನಿನ್ನೆ ಇಬ್ಬರು ಮಾತಿಗೆ ಮಾತು ಆಡಿಕೊಂಡಿದ್ದಾರೆ.

    ನೀನು ಮಂಜುನ ಬಾಲ ಆಗಿದ್ದೀಯಾ.. ನೆರಳಲ್ಲಿ ಬದುಕಬೇಡ, ಯಾರೊಬ್ಬರ ಪ್ರಾಪರ್ಟಿ ಆಗಬಾರದು ಎಂದು ಸಂಬರ್ಗಿ ದಿವ್ಯಾಗೆ ಹೇಳಿದ್ದರು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ದಿವ್ಯಾ ಮಂಜುನನ್ನು ದೂರ ಇಡಲು ಆರಂಭಿಸಿದ್ದರು.

    ಬಿಗ್‍ಬಾಸ್ ಮನೆಯಲ್ಲಿ ಕಿಚನ್ ಡಿಪಾರ್ಟ್‍ಮೆಂಟ್ ನೀಡಲಾಗಿತ್ತು. ಆದರೆ ಮಂಜು ಅಡುಗೆ ಮನೆಗೆ ಹೋಗದೆ ಹೊರ ಭಾಗದಲ್ಲಿ ಕುಳಿತು ಮಾತನಾಡುತ್ತಾ ಇದ್ದರು. ನಾನು ವಾಕಿಂಗ್ ಮುಗಿಸಿ ಬಂದು ಪಾತ್ರೆ ತೊಳೆಯುತ್ತೇನೆ ಎಂದು ಮಂಜು ಹೇಳಿದ್ದರು. ಆದರೆ ದಿವ್ಯಾ ಪಾತ್ರೆ ತೊಳೆಯುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ನಾನು ಕಿಚನ್ ಹೋಗಲ್ಲ ಎಂದು ಮಂಜು ಹೇಳಿದ್ದಾರೆ. ಈ ವೇಳೆ ದಿವ್ಯಾ ಮಂಜುಗೆ ಮಾತಿಗೆ ಮಾತು ಆಗಿದೆ. ಮಂಜು ಈ ವಿಚಾರವಾಗಿ ಕೊಂಚ ಬೇಸರವಾಗಿದ್ದಾರೆ. ಬಿಗ್‍ಬಾಸ್‍ಮನೆಯಲ್ಲಿ ಎಷ್ಟು ಚೆನ್ನಾಗಿ ಮಾತನಡಿಕೊಂಡು ಇರುವವರು ಯಾವ ಸಮಯದಲ್ಲಿ ಬೇಕಾದರು ಕಿತ್ತಾಡಿಕೊಳ್ಳಬಹುದು ಎನ್ನುವುದು ಮಾತ್ರ ಸತ್ಯ.

  • ಮಂಜುನ ಮದ್ವೆ ಆಗೋಕೆ ಚಾನ್ಸೇ ಇಲ್ಲ: ದಿವ್ಯಾ ಸುರೇಶ್

    ಮಂಜುನ ಮದ್ವೆ ಆಗೋಕೆ ಚಾನ್ಸೇ ಇಲ್ಲ: ದಿವ್ಯಾ ಸುರೇಶ್

    ಬಿಗ್ ಬಾಸ್ ಮನೆಯಲ್ಲಿ ಮೂರು ವಾರಗಳ ಬಳಿಕ ನಿಜವಾದ ಆಟ ಶುರುವಾಗಿದೆ. ಇತ್ತ ಪ್ರಶಾಂತ್ ಸಂಬರ್ಗಿ ಕೂಡ ತಮ್ಮ ರಿಯಲ್ ಆಟ ಶುರು ಮಾಡಿದ್ದು, ಮಂಜು ವಿರುದ್ಧ ಎಲ್ಲರ ಜೊತೆ ಮಾತನಾಡಲು ಆರಂಭಿಸಿದ್ದಾರೆ. ಹಾಗೆಯೇ ಮಂಜು ಜೊತೆ ಆತ್ಮೀಯತೆಯಿಂದ ಇರುವ ದಿವ್ಯಾ ಸುರೇಶ್ ಬಳಿಯೂ ಸಂಬರ್ಗಿ ಚಾಡಿ ಹೇಳಿದ್ದಾರೆ.

    ಹೌದು.. ಸಂಜೆ ವೇಳೆ ಗಾರ್ಡನ್ ಏರಿಯಾದಲ್ಲಿ ದಿವ್ಯ ಉರುಗುಡ, ಶುಭಾ ಪೂಂಜಾ, ಚಂದ್ರಕಲಾ ಕುಳಿತಿರುತ್ತಾರೆ. ಇವರ ಪಕ್ಕದಲ್ಲಿಯೇ ಪ್ರಶಾಂತ್ ಸಂಬರ್ಗಿ ಹಾಗೂ ದಿವ್ಯಾ ಸುರೇಶ್ ಕುಳಿತುಕೊಂಡು ಗಾಢವಾದ ಚರ್ಚೆ ನಡೆಸಿದ್ದಾರೆ. ಈ ವೇಳೆ ಪ್ರಶಾಂತ್ ಸಂಬರ್ಗಿ, ಮಂಜುನ ವಿರುದ್ಧ ದಿವ್ಯಾ ಸುರೇಶ್ ಬಳಿ ಮಾತನಾಡಲು ಶುರು ಮಾಡಿದ್ದು, ಸಾಕಷ್ಟು ವಿಚಾರಗಳ ಬಗ್ಗೆ ತಿಳಿ ಹೇಳಿದ್ದಾರೆ.

    ಫಾದರ್ಲಿ ಅಡ್ವೈಸ್ ಟು ಯೂ.. ನಿನ್ನಿಂದ ನನಗೆ ಏನೂ ಎಕ್ಸ್ ಪೆಕ್ಟೇಷನ್ ಇಲ್ಲ. ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಷ್ಟೆ. ಆದರೆ ಮನೆಯಲ್ಲಿ ನಿನ್ನನ್ನು ಎಲ್ಲರೂ ಯೂಸ್ ಮಾಡಿಕೊಳ್ತಿದ್ದಾರೆ ಅಂತ ನನಗೆ ಅನಿಸ್ತಿದೆ. ಅವರು ಫೇಮಸ್ ಆಗೋಕೆ ನಿನ್ನ ಬಳಕೆ ಮಡ್ತಿದ್ದಾರೆ ಅಂತ ಹೇಳುವ ಮೂಲಕ ಮಂಜು ವಿಚಾರನೂ ಸಂಬರ್ಗಿ ಪ್ರಸ್ತಾಪ ಮಾಡಿದ್ದಾರೆ.

    ಆಗ ದಿವ್ಯಾ.. ನಾನು ವೀಕ್ ಅನಿಸುವಂತೆ ಫೀಲ್ ಆಯ್ತು. ಮಂಜುನ ಜೊತೆ ಫ್ರೆಂಡ್‍ಶಿಪ್ ಜಾಸ್ತಿ ಆಗಿ ಉಳಿದವರ ಜೊತೆ ಫ್ರೆಂಡ್‍ಶಿಪ್ ಕಡಿಮೆ ಆಗಿರುವುದಕ್ಕೆ ಹಾಗನಿಸಿತೋ ಗೊತ್ತಿಲ್ಲ ಅಂದ್ರು. ಈ ವೇಳೆ ಪ್ರಶಾಂತ್, ಮಂಜು ನಿನಗೆ ಜೀವನ ಪೂರ್ತಿ ಗೆಳೆಯನಾಗಿಯೇ ಇರುತ್ತಾನೆ ಎಂದು ಹೇಳುತ್ತಾ, ನೀನು ಅವನನ್ನು ಮದುವೆ ಆಗ್ತಿಯಾ ಎಂದು ನೇರವಾಗಿಯೇ ಕೇಳಿದ್ದಾರೆ. ನಾನು ಮಂಜುನ ಮದುವೆ ಆಗೋಕೆ ಚಾನ್ಸೇ ಇಲ್ಲ. ನನಗೆ ಆತ ಬೆಸ್ಟ್ ಫ್ರೆಂಡ್ ಅಷ್ಟೆ ಎಂದು ದಿವ್ಯಾ ಸುರೇಶ್ ಸ್ಪಷ್ಟಪಡಿಸಿದರು.

    ಮನೆಯಲ್ಲಿ ಎಲ್ಲರೂ ಒಂದೊಂದು ರೀತಿಯ ಐಡೆಂಟಿಟಿ ಇಟ್ಟುಕೊಂಡಿದ್ದಾರೆ. ಶುಭಾ ಅವರು ಚೈಲ್ಡಿಶ್ ಆಗಿ ಇರುವ ಮೂಲಕ ಅವರದ್ದೇ ಆದ ಒಂದು ಐಡೆಂಟಿಟಿ ಕ್ರಿಯೆಟ್ ಮಾಡಿಕೊಂಡಿದ್ದಾರೆ. ಮಹಿಳೆಯರಲ್ಲಿ ನೀನೇ ಸ್ವಲ್ಪ ಸ್ಟ್ರಾಂಗ್ ಆಗಿ ಇರೋದು. ಆದರೆ ನೀನು ಮಂಜುನ ಬಾಲ ಆಗ್ತಿದ್ದೀಯಾ. ಇದನ್ನು ನಾನು ಓಪನ್ ಆಗಿ ಹೇಳ್ತಿದ್ದೇನೆ. ನಿನಗೆ ಬೇಜಾರು ಅನಿಸಿದರೂ ಪರವಾಗಿಲ್ಲ. ಯಾರದ್ದೇ ನೆರಳಲ್ಲಿ ಬದುಕಬೇಡ. ಅಲ್ಲದೆ ನೀನು ಯಾರ ಪ್ರಾಪರ್ಟಿ ಕೂಡ ಆಗಬಾರದು ಎಂದು ದಿವ್ಯಾ ಸುರೇಶ್ ಗೆ ಸಂಬರ್ಗಿ ಪಾಠ ಮಾಡಿದ್ದಾರೆ.

    ಈ ಮೊದಲು ಸಂಬರ್ಗಿಯವರು ಶಮಂತ್ ಬಳಿಯೂ ಮಂಜು ಬಗ್ಗೆ ಮಾತನಾಡಿದ್ದರು. ಮಂಜುಗೆ ಏನೂ ಸ್ಕೋಪ್ ಇಲ್ಲ. ಅವನ ಕ್ರಿಯೆಟಿವಿಟಿ ಎಲ್ಲಾ ಮುಗಿದು ಹೋಗಿದೆ. ನೀನು ಹೀಗೆ ಮಾಡ್ತಾ ಇರು. ಸೆಂಟರ್ ಆಫ್ ಅಟ್ರಾಕ್ಷನ್ ನೀನು ಆಗಬೇಕು. ಅರ್ಥ ಆಯ್ತಾ ಅಂದಾಗ ಶಮಂತ್ ಹೌದು ಅಂತ ತಲೆ ಅಲ್ಲಾಡಿಸುತ್ತಾ ಸಂಬರ್ಗಿ ಮಾತನ್ನು ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಸಂಬರ್ಗಿಯ ಈ ಆಟ ಎಲ್ಲಿವರೆಗೆ ತಲುಪುತ್ತೆ ಎಂಬುದನ್ನು ಕಾದು ನೋಡಬೇಕಿದೆ.

  • ಮಾವನ ವಿರುದ್ಧ ತಿರುಗಿ ಬಿದ್ದ ಅಳಿಯ

    ಮಾವನ ವಿರುದ್ಧ ತಿರುಗಿ ಬಿದ್ದ ಅಳಿಯ

    ಬಿಗ್‍ಬಾಸ್ ಮನೆಯಲ್ಲಿ ಇಷ್ಟು ದಿನಗಳ ಚೆನ್ನಾಗಿದ್ದ ಮಾವ-ಅಳಿಯನ ಮಧ್ಯೆ ಜಗಳ ಶುರುವಾಗಿದೆ. ಮಾವ, ಅಳಿಯ ಎಂದು ಕರೆದುಕೊಳ್ಳುತ್ತಿದ್ದ ಅವರು ಏನು.. ಏನು ಎಂದು ಮಾತಿಗೆ ಮಾತು ಬೆಳಸುವಷ್ಟರಮಟ್ಟಿಗೆ ಕಿತ್ತಾಡಿಕೊಂಡಿದ್ದಾರೆ.

    ಚದುರಂಗದ ಆಟದಲ್ಲಿ ಬಿಗ್‍ಬಾಸ್ ಕೆಲವು ನಿಯಮಗಳನ್ನು ಹಾಕಿದ್ದಾರೆ. ಈ ನಿಯಮವನ್ನು 2 ಗುಂಪಿನ ತಂಡದ ಸದಸ್ಯರು ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ಕುರಿತಾಗಿ ಮಂಜು ಪಾವಗಡ ಮತ್ತು ಪ್ರಶಾಂತ್ ಸಂಬರ್ಗಿಯ ಮಧ್ಯೆ ಜಗಳವಾಗಿದೆ.

     ಮನೆಯಲ್ಲಿ ಚದುರಂಗದ ಆಟ ನಡೆಯುತ್ತಿದೆ. ಈ ಆಟದಲ್ಲಿ ಕೆಲವು ನಿಯಮಗಳನ್ನು ಬಿಗ್‍ಬಾಸ್ ಹಾಕಿದ್ದಾರೆ. ಒಬ್ಬ ಸ್ಪರ್ಧಿ ತಮ್ಮ ಆಟವನ್ನು ಮಗಿಸಿ ಬಿಗ್‍ಬಾಸ್ ಹೇಳುವವರೆಗೂ ಮನೆಯಿಂದ ಸ್ಪರ್ಧಿಗಳು ಹೊರಗೆ ಬರುವಂತಿಲ್ಲ. ಆದರೆ ಸಂಬರ್ಗಿ ಹೊರಗೆ ಬಂದಿದ್ದಾರೆ. ಮಾವ ನೀನು ಅವರು ಹೇಳುವ ಮೊದಲೆ ಯಾಕೆ ಹೊರಗೆ ಬರುತ್ತಿಯಾ ಪೌಲ್ ಎಂದು ಹೇಳಿದ್ದರೆ ಏನು ಮಾಡುತ್ತಿದ್ದೆ? ಎಂದ ಮಂಜು ಅವರದ್ದೇ ಗುಂಪಿನ ಸದಸ್ಯನಾಗಿರುವ ಸಬಂರ್ಗಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

    ಚದುರಂಗದ ಆಟದಲ್ಲಿ ಸೋತು ಸಂಬರ್ಗಿ ಆಟದಿಂದ ಹೊರೆ ಇದ್ದಾರೆ. ಚಂದ್ರಕಲಾ ಮೋಹನ್ ನೀಡಿದ್ದ ಸವಾಲನ್ನು ಸ್ವೀಕರಿಸಿದ ಅರವಿಂದ್ ಆಟವನ್ನು ಪೂರ್ತಿ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ಅರವಿಂದ್ ಅವರಿಗೆ ಶುಭಕೋರಲು ಹೊರಗೆ ಬಂದಿದ್ದಾರೆ. ಈ ವೇಳೆ ರೂಲ್ಸ್ ಬ್ರೇಕ್ ಮಾಡಿರುವ ಕುರಿತಾಗಿ ಮನೆಯಲ್ಲಿ ಜಗಳವಾಗಿದೆ.

    ನಿನಗೆ ಮಾತ್ರ ಅಲ್ಲ ನನಗೂ ಜವಾಬ್ದಾರಿ ಇದೆ. ನಿನಗೆ ಒಬ್ಬನಿಗೆ ಬುದ್ದಿವಂತಿಕೆ ಇಲ್ಲ. ನೀನು ಯಾಕೆ ಆಚೆ ಬಂದೆ. ಸರಿ ಇರಲ್ಲ ಹೇಳುತ್ತಿದ್ದೇನೆ ಎಂದು ಸಂಬರ್ಗಿ ಮಂಜುಗೆ ಅವಾಜ್ ಹಾಕಿದ್ದಾರೆ. ಮಂಜು ಮಾತ್ರ ರೂಲ್ಸ್ ವಿಚಾರವಾಗಿ ಮೊದಲು ನಿಧಾನವಾಗಿ ಹೇಳಿದ್ದರು ಆದರೆ ಇಬ್ಬರ ನಡುವೆ ಮಾತಿಗೆ ಮಾತು ಬೆಳದಿದೆ. ಈ ವೇಳೆ ಮನೆಯ ಕ್ಯಾಪ್ಟನ್ ಅರವಿಂದ್ ಮಧ್ಯ ಪ್ರವೇಶಿಸಿ ಇಬ್ಬರ ಜಗಳವನ್ನು ತಡೆದಿದ್ದಾರೆ. ಇಂದು ಪ್ರಸಾರವಾಗಲಿರುವ ಎಪಿಸೋಡ್‍ನಲ್ಲಿ ಈ ಕುರಿತಾಗಿ ಎನೆಲ್ಲಾ ಡ್ರಾಮಾ ನಡೆಯಲಿದೆ ಎಂಬುದನ್ನು ಕಾದು ನೋಡ ಬೇಕಿದೆ.

  • ಬಿಗ್‍ಬಾಸ್ ಮನೆ ತುಪ್ಪದ ವಿಷ್ಯ ಬ್ಯಾಡವೋ ಶಿಷ್ಯ..

    ಬಿಗ್‍ಬಾಸ್ ಮನೆ ತುಪ್ಪದ ವಿಷ್ಯ ಬ್ಯಾಡವೋ ಶಿಷ್ಯ..

    ಬಿಗ್‍ಬಾಸ್ ಮನೆಯಲ್ಲಿ ತುಪ್ಪದ ವಿಷ್ಯಕ್ಕೆ ಗಲಾಟೆ ನಡೆದಿದೆ. ರುಚಿಯಾದ ತುಪ್ಪ ಎಲ್ಲರ ಮನದಲ್ಲಿ ಕೊಂಚ ಬಿಸಿ ಬಿಸಿ ಮಾಡಿದ್ದಂತೂ ಸುಳ್ಳಲ್ಲ. ತುಪ್ಪಕ್ಕಾಗಿ ಮನೆ ಮಂದಿ ಕಿತ್ತಾಡಿಕೊಂಡಿದ್ದಾರೆ.

    ಹೌದು ಬಿಗ್‍ಬಾಸ್ ಮನೆಯಲ್ಲಿ ರೇಶನ್ ಒಂದು ಅಳತೆಯಲ್ಲಿ ಬರುತ್ತದೆ. ಬೇಕಾ ಬಿಟ್ಟಿಯಾಗಿ ಖರ್ಚು ಮಾಡುವಂತಿಲ್ಲ. ಮಾಡಿದರೆ ಅವರೆ ಮುಂದೆ ಮತ್ತೆ ರೇಶನ್ ಬರುವವರೆಗೂ ಅದೇ ಸಾಮಾಗ್ರಿಗಳಲ್ಲಿ ಅಡುಗೆ ಮಾಡಿಕೊಂಡು ಹೋಗಬೇಕು. ಆದರೆ ಒಂಟಿ ಮನೆಯ ಸದಸ್ಯರು ತುಪ್ಪ ಖಾಲಿ ಆಗಿದೆ ಎಂದು ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.

    ಪ್ರಶಾಂತ್ ಸಂಬರಗಿ ಮನೆಯವರಿಗಾಗಿ ತಪ್ಪು ಉಪಯೋಗಿಸಿ ಹೊಸ ಅಡುಗೆ ಮಾಡಿದ್ದಾರೆ. ಶುಭಾ ಪೂಂಜಾ, ನಿಧಿ, ಚಂದ್ರಕಲಾ ಮೋಹನ್ ಮನೆಯಲ್ಲಿರುವ ತುಪ್ಪ ಖಾಲಿ ಆಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲ ಪ್ರಶಾಂತ್ ಮಾಡಿಕೊಟ್ಟಿರುವ ತಿಂಡಿಯನ್ನು ತಿಂದು ಮತ್ತೆ ತುಪ್ಪವನ್ನು ಖಾಲಿ ಮಾಡಿದ್ದೀರಾ ಎಂದು ಬೆರಳು ಮಾಡಿ ತೋರಿಸಿದ್ದಾರೆ. ಒಬ್ಬರು ಒಂದೊಂದು ರೀತಿಯಾಗಿ ಮಾತನಾಡಿದ್ದಾರೆ. ಸಂಬರಗಿ ಮಾತ್ರ ನಾನು ತಪ್ಪವನ್ನು ಬಳಕೆಯೆ ಮಾಡಿಲ್ಲ ಎಂದು ಜಾರಿಕೊಂಡ್ರು.

    ಮನೆಯಲ್ಲಿ ಎಲ್ಲರಿಗೂ ಅಡುಗೆಯನ್ನು ಮಾಡುತ್ತಾರೆ ಅದನ್ನು ಎಲ್ಲರೂ ತಿನ್ನಬೇಕು. ನಾವು ನಮಗೆ ಬೇಕಾದದ್ದನ್ನು ಹೋಗಿ ಮಾಡಿಕೊಂಡು ತಿನ್ನ ಬಾರದು. ಎಲ್ಲರೂ ಹೊಂದಿಕೊಂಡು ಹೋಗೋಣ ಎಂದು ಮನೆಯ ಕ್ಯಾಪ್ಟನ್ ಅರವಿಂದ್ ಹೇಳಿದ್ದಾರೆ. ಮನೆಯ ಸದಸ್ಯರೆಲ್ಲ ಈ ವಿಚಾರವಾಗಿ ಒಪ್ಪಿಕೊಂಡಿದ್ದಾರೆ.

    ನಿಧಿ, ಶುಭಾ ವಾದ ಮನೆಗೆ ಬರುವ ರೇಶನ್ ಬಳಕೆ ಸರಿಯಾಗಿ ಆಗಬೇಕು, ಎಲ್ಲರಿಗೂ ಸಿಗಬೇಕು ಎನ್ನುತ್ತಾರೆ. ಆದರೆ ಮನೆಮಂದಿ ಮಾತ್ರ ಈ ವಿಚಾರವನ್ನು ಅರ್ಥ ಮಾಡಿಕೊಳ್ಳದೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತಾಡಿದ್ದರಿಂದ ಡೊಡ್ಡ ಮನೆಯಲ್ಲಿ ಡೊಡ್ಡದಾಗಿಯೇ ಒಂದು ಗಲಾಟೆ ಆಗಿದೆ.

    ಆದರೆ ನಿನ್ನೆ ಪೂರ್ತಿಯಾಗಿ ಮನೆ ಮಂದಿ ಮಾತನಾಡಿಕೊಂಡಿದ್ದೇಲ್ಲ ತುಪ್ಪದ್ದೇ ವಿಚಾರ. ತುಪ್ಪ ಖಾಲಿಯಾಗಿದೆ ಎಂದು ಮನೆಯಲ್ಲಿ ಒಂದು ಡ್ರಾಮಾವೇ ನಡೆದಿದೆ.

  • ಶುಭಾ ಜೊತೆ ನಮಗೆ ಇನ್ನೊಂದು ಮದ್ವೆ ಊಟ ಪಕ್ಕಾ ಅಂದ್ರು ಗೀತಾ..!

    ಶುಭಾ ಜೊತೆ ನಮಗೆ ಇನ್ನೊಂದು ಮದ್ವೆ ಊಟ ಪಕ್ಕಾ ಅಂದ್ರು ಗೀತಾ..!

    ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯ ಉರುಡುಗ ಜೋಡಿ ಟಾಸ್ಕ್ ಆಡಿ ಗೆದ್ದಿದ್ದರು. ಅದಾದ ಬಳಿಕದಿಂದ ಈ ಜೋಡಿ ಬಗ್ಗೆ ಮನೆಮಂದಿಯೆಲ್ಲಾ ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಈ ಕುರಿತು ಗೀತಾ ಹಾಗೂ ಪ್ರಶಾಂತ್ ಸಂಬರ್ಗಿ ಕೂಡ ಭಾರೀ ಚರ್ಚೆಯನ್ನೇ ನಡೆಸಿದ್ದಾರೆ.

    ಹೌದು. ಜೋಡಿ ಟಾಸ್ಕ್‍ನಲ್ಲಿ ಆಡಲು ದಿವ್ಯ ಉರುಡುಗ ಅವರು ಅರವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕದಿಂದ ಇಬ್ಬರೂ ಹೆಚ್ಚು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದಿವ್ಯ ಹಾಗೂ ಅರವಿಂದ್ ಮಧ್ಯೆ ಏನೋ ನಡೆಯುತ್ತಿದೆ ಅಂತ ಮನೆ ಮಂದಿ ಪಿಸು ಪಿಸು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಹಿಂದೆ ದಿವ್ಯ ಉರುಡುಗ ಅವರು ಪ್ರಶಾಂತ್ ಸಂಬರ್ಗಿ ಜೊತೆ ಚೆನ್ನಾಗಿಯೇ ಇದ್ದರು. ಆದರೆ ಜೋಡಿ ಟಾಸ್ಕ್ ಬಂದ ಬಳಿಕ ದಿವ್ಯ ಉರುಡುಗ ವರ್ತನೆ ಬದಲಾಗಿದೆ ಎಂದು ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಮಾತನಾಡಿಕೊಂಡಿದ್ದಾರೆ.

    ಇತ್ತ ಗೀತಾ ಹಾಗೂ ಸಂಬರ್ಗಿ ಕೂಡ ದಿವ್ಯ, ಅರವಿಂದ್ ಜೋಡಿ ಬಗ್ಗೆ ರಾತ್ರಿ ಚರ್ಚೆ ನಡೆಸಿದ್ದಾರೆ. ಇವರು ಲವ್ ಮಾಡ್ತಿದ್ದಾರೋ ಹೇಗೆ ಎಂದು ಗೀತಾ ಅವರು ದಿವ್ಯ ಬಳಿಯೇ ಹಲವು ಬಾರಿ ಪ್ರಶ್ನೆ ಮಾಡಿದ್ದರಂತೆ. ಆಗ ದಿವ್ಯ, ಜೋಡಿ ಟಾಸ್ಕ್ ಅಂತ ಒಟ್ಟಾಗಿ ಇದ್ದೇವೆ ಎಂದು ಉತ್ತರಿಸಿರುವುದಾಗಿ ಸಂಬರ್ಗಿ ಬಳಿ ಗೀತಾ ಹೇಳಿದ್ದಾರೆ.

    ಅರವಿಂದ್ ಅವರು ದಿವ್ಯಾರನ್ನು ಲವ್ ಮಾಡುವ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಓಪನ್ ಆಗಿದ್ದಾರೆ ಎಂದು ಸಂಬರ್ಗಿ ಹೇಳಿದ್ದಾರೆ. ಸಂಬರ್ಗಿ ಮಾತಿಗೆ ದನಿಗೂಡಿಸಿದ ಗೀತಾ, ಶುಭಾ ಪೂಂಜಾ ಮದುವೆ ನಂತರದಲ್ಲಿ ಇನ್ನೊಂದು ಮದುವೆ ಊಟ ಸಿಗಬಹುದು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ಜೋಡಿ ಟಾಸ್ಕ್ ಮುಗಿದು 2 ದಿನವಾದರೂ ಇವರಿಬ್ಬರು ಒಟ್ಟಾಗಿದ್ದಾರೆ ಅಂತ ಹೇಳಿಕೊಂಡು ಗೀತಾ, ಪ್ರಶಾಂತ್ ನಕ್ಕಿದ್ದಾರೆ. ಜೊತೆಗೆ ಒಳ್ಳೆಯದಾದರೆ ಆಗಲಿ, ನಾವು ಓವರ್ ಆಗಿ ಯೋಚನೆ ಮಾಡುತ್ತಿದ್ದೆವೆ ಅಂತ ಗೀತಾ ಅವರನ್ನೇ ಅವರು ಪ್ರಶ್ನೆ ಮಾಡಿಕೊಂಡಿದ್ದಾರೆ.

  • ನಿರ್ಮಲಾ ಮೌನ ಪ್ರಶಾಂತ್ ಸಂಬರ್ಗಿಗೆ ಸಂಕಟ

    ನಿರ್ಮಲಾ ಮೌನ ಪ್ರಶಾಂತ್ ಸಂಬರ್ಗಿಗೆ ಸಂಕಟ

    ವಾರಾಂತ್ಯದಲ್ಲಿ ಬಿಗ್‍ಬಾಸ್ ಜರ್ನಿ ಮುಗಿಸಿ ಹೊರನಡೆಯುವ ನಿರ್ಮಲಾ ಅವರಿಗೆ ಬಿಗ್‍ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದರು. ಆದರೆ ನಿರ್ಮಲಾ ಅವರ ಮೌನ ಪ್ರಶಾಂತ್ ಅವರಿಗೆ ಕುತ್ತು ತಂದಿದೆ.

    ಮುಂದಿನವಾರಕ್ಕೆ ಎಲಿಮಿನೇಷನ್‍ಗೆ ಯಾರನ್ನಾದರೂ ನಾಮಿನೇಟ್ ಮಾಡಬೇಕು ಎಂದು ಬಿಗ್‍ಬಾಸ್ ಹೇಳಿದಾಗ ನಿರ್ಮಲಾ ಅವರು ನನಗೆ ಮನೆಯಿಂದ ಹೊರ ಹೋಗುವಾಗ ಒಬ್ಬರನ್ನು ಉಳಿಸುವ ಅವಕಾಶವನ್ನು ಕೊಡಿಸಿ. ನನಗೆ ನಾಮಿನೇಟ್ ಮಾಡಲು ಇಷ್ಟವಿಲ್ಲ ಎಂದು ಬೇರೆಯದ್ದೇ ಮಾತನ್ನು ಪ್ರಾರಂಭಿಸಿದರು. ಕೊಂಚ ಸಮಯ ಬಿಗ್‍ಬಾಸ್ ನಿರ್ಮಲಾ ನಾಮಿನೇಟ್ ಹೆಸರನ್ನು ಸೂಚಿಸಲು ಕಾದಿದ್ದಾರೆ. ಆದರೆ ನಿರ್ಮಲಾ ಬಿಗ್‍ಬಾಸ್ ಹೇಳಿರುವ ವಿಚಾರವನ್ನು ಬಿಟ್ಟು ಬೇರೆಯದ್ದೇ ಮಾತನಾಡಲು ಪ್ರಾಂಭಿಸಿದಾಗ ಬೇಸರಗೊಂಡ ಬಿಗ್‍ಬಾಸ್, ನೀವು ಯಾರ ಹೆಸರನ್ನು ಸೂಚಿಸಿದ ಕಾರಣ ಪ್ರಶಾಂತ್ ಅವರನ್ನು ನೇರವಾಗಿ ನಾಮಿನೇಟ್ ಮಾಡುತ್ತೇವೆ ಎಂದು ಹೇಳಿ ಡೋರ್ ತೆರೆದು ಕಳುಹಿಸಿ ಕೊಟ್ಟಿದ್ದಾರೆ.

    ಸೇಫ್ ಎಂದು ನಿಟ್ಟುಸಿರು ಬಿಟ್ಟ ಸಂಬರ್ಗಿಗೆ ಶಾಕ್!

    2 ನೇವಾರ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಶಾಂತ್ ನಾನು ಸೇಫ್ ಎಂದು ಸಂತೋಷ ಪಡುವ ಹೊತ್ತಲ್ಲೇ ಮತ್ತೆ ನಾಮೆನೇಟ್ ಆಗಿದ್ದಾರೆ. ನಾಮಿನೇಟ್ ಆಗಲು ನಿರ್ಮಲಾ ಅವರೆ ಕಾರಣವಾಗಿದ್ದಾರೆ.

    ನಿರ್ಮಲಾ ನಡವಳಿಕೆಯಿಂದ ಬೇಸರ!

    ಮನೆಯಲ್ಲಿರುವ ಸದಸ್ಯರು ಒಂದೆ ಕಡೆ ಇದ್ದರೆ ನಿರ್ಮಲಾ ಅವರೆ ಬೇರೆ ಕಡೆ ಇರುತ್ತಿದ್ದರು. ನಿರ್ಮಲಾ ಅವರ ಹಾದಿಯೆ ಬೇರೆ ಆಗಿರುತ್ತಿತ್ತು. ಹೀಗೆ ನಿರ್ಮಲಾ ಬಿಗ್‍ಬಾಸ್ ಆದೇಶವನ್ನು ಪಾಲಿಸದ ಕಾರಣ ಪ್ರಶಾಂತ್ ಸಂಬರ್ಗಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ.

    ಮನೆಯಿಂದ ಹೊರಹೋಗುವ ಮುನ್ನ ಒಬ್ಬರ ಹೆಸರನ್ನು ನೇರವಾಗಿ ನಾಮಿನೇಟ್‍ಗೆ ಸೂಚಿಸಿ ಎಂದು ಬಿಗ್‍ಬಾಸ್ ಹೇಳಿದ್ದರು. ನಿರ್ಮಲಾ ನನಗೆ ನಾಮಿನೇಟ್ ಮಾಡಲು ಇಷ್ಟವಿಲ್ಲ ಎಂದು ಸುಮ್ಮನೇ ನಿಂತಿದ್ದರು. ಹೀಗಾಗಿ ಯಾರು ಫೇಕ್ ಮತ್ತು ಯಾರು ಒಳ್ಳಯವರು ಎನ್ನುವ ಟಾಸ್ಕ್‍ನಲ್ಲಿ ನಿರ್ಮಲಾ, ಪ್ರಶಾಂತ್ ಅವರನ್ನು ಫೇಕ್ ಎಂದು ಸೂಚಿಸಿದ್ದರು. ಇದರ ಅನ್ವಯವಾಗಿ ಬಿಗ್‍ಬಾಸ್ ಪ್ರಶಾಂತ್ ಸಂಬರ್ಗಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

  • ಪ್ರಶಾಂತ್ ಸಂಬರ್ಗಿ ಭೂಮಿ ತಾಯಿ ಮೇಲೆ ಆಣೆ ಹಾಕಿದ್ದೇಕೆ?

    ಪ್ರಶಾಂತ್ ಸಂಬರ್ಗಿ ಭೂಮಿ ತಾಯಿ ಮೇಲೆ ಆಣೆ ಹಾಕಿದ್ದೇಕೆ?

    ಬೆಂಗಳೂರು: ಬಿಗ್ ಮನೆಯಲ್ಲಿ ವೈರಸ್ ವರ್ಸಸ್ ಮನುಷ್ಯರ ನಡುವಿನ ಟಾಸ್ಕ್ ಬಹಳ ರೋಚಕತೆಯನ್ನು ಪಡೆದುಕೊಳ್ಳುತ್ತಿದ್ದಂತೆ, ಸ್ಪರ್ಧಿಗಳ ನಡುವೆ ಕಿರಿಕ್ ಹೆಚ್ಚಾಗತೊಡಗಿದೆ. ಎರಡು ತಂಡಗಳ ಸದಸ್ಯರ ನಡುವೆ ನಡೆಯುತ್ತಿರುವ ಕಿರಿಕ್ ಬಿಗ್ ಮನೆಯ ಕೂತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

    ವೈರಸ್ ವರ್ಸಸ್ ಮನುಷ್ಯರ ನಡುವಿನ ಟಾಸ್ಕ್‍ನಲ್ಲಿ ವೈರಸ್ ತಂಡದ ಸಂಬರ್ಗಿ ಮತ್ತು ಮನುಷ್ಯ ತಂಡದ ಲ್ಯಾಗ್ ಮಂಜು ನಡುವೆ ಮಾತಿನ ಚಕಮಕಿ ಜೋರಾಗಿ, ಆಣೆ ಪ್ರಮಾಣ ಮಾಡುವ ಹಂತದ ವರೆಗೆ ಇಬ್ಬರು ಮಾತುಕತೆ ಮುಂದುವರಿಸಿದ್ದಾರೆ. ಮಂಜು ಟಾಸ್ಕ್ ಪ್ರಕಾರ ನಾವು ಮಾಡಿರುವುದು ಸರಿಯಾಗಿದೆ ಎಂದರೆ, ಸಂಬರ್ಗಿ ಇಲ್ಲ ನಾನು ಮಾಡಿರುವುದೇ ಸರಿಯಾಗಿದೆ ಎಂದು ಭೂಮಿ ತಾಯಿ ಮತ್ತು ನಾನು ಮಾಡುವ ವ್ಯಾಪಾರದ ಮೇಲೆ ಆಣೆ ಮಾಡುತ್ತೇನೆಂದು ಮಂಜು ವಿರುದ್ಧ ತೊಡೆ ತಟ್ಟಿದ್ದಾರೆ.

    ಸಂಬರ್ಗಿ ಆಟದ ನಿಯಮವನ್ನು ಮಂಜು ಅವರಿಗೆ ಅರ್ಥ ಮಾಡಿಸುತ್ತಾ ಇದು ರಗ್ಬಿ ಆಟದ ತರ ಈ ಆಟದಲ್ಲಿ ಯಾವ ತಂಡಕ್ಕೂ ಗೆಲುವು ಸೋಲು ಇಲ್ಲ ಎಂದು ಹೇಳುತ್ತಿದ್ದಂತೆ ಸಂಬರ್ಗಿ ಮಾತಿಗೆ ಮನುಷ್ಯ ತಂಡದ ಸದಸ್ಯರು ಚಪ್ಪಾಳೆ ತಟ್ಟಿ ವ್ಯಂಗ್ಯಮಾಡಿದ್ದಾರೆ. ಇದರಿಂದ ಮತ್ತೆ ಕೆರಳಿದ ಸಂಬರ್ಗಿ, ಮಂಜು ಜೊತೆ ಮತ್ತೆ ಮಾತಿನ ಸಮರಕ್ಕೆ ಮುಂದಾಗಿ ನಿನು ಬಿಗ್‍ಬಾಸ್ ಮನೆಯಲ್ಲಿ ತಲೆ ಕೆಟ್ಟೊಗಿದೆ ಎಂದು 1 ಲಕ್ಷ ಬಾರಿ ಹೇಳಿದ್ದೀಯ ಅದನ್ನು ಹೊರತು ಪಡಿಸಿ ಬೇರೆ ಡೈಲಾಗ್ ಹೇಳು ಆಗ ನಿನ್ನ ಕಾಮಿಡಿಯನ್ ಹೆಸರನ್ನು ಒಪ್ಪಿಕೊಳ್ಳುತ್ತೆನೆ ಎಂದು ಟಕ್ಕರ್ ಕೊಟ್ಟರು. ನಂತರ ಮಂಜು ಸಂಬರ್ಗಿ ಅವರಿಗೆ ನೀವು ಆಟವಾಡಿದ ನಿಯಮ ಸರಿಯಿದೆ ಎಂದು ಹೇಳಿ ಆಗ ನಾನು ಒಪ್ಪಿಕೊಳ್ಳುತ್ತೇನೆಂದು ತಿರುಗೇಟು ನೀಡಿದ್ದಾರೆ.

    ಮಂಜು ಅವರ ಮಾತನ್ನು ಕೇಳುತ್ತಿದ್ದಂತೆ ಸಂಬರ್ಗಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದಾರೆ, ಮಂಜು ಸಂಬರ್ಗಿ ಮೇಲೆ ಆಣೆ ಹಾಕುದಾಗಿ ಹೇಳಿದ್ದಾರೆ ಈ ನಡುವೆ ಎರಡು ತಂಡದ ಸದಸ್ಯರು ಮಧ್ಯಪ್ರವೇಶಿಸುವ ಮೂಲಕ ಮಾತಿನ ಜಗಳಕ್ಕೆ ಬ್ರೇಕ್ ಬಿದ್ದಿದೆ.

  • ಪ್ರಶಾಂತ್ ಸಂಬರ್ಗಿ ಮೆಚ್ಚಿದ ಧನುಶ್ರಿ

    ಪ್ರಶಾಂತ್ ಸಂಬರ್ಗಿ ಮೆಚ್ಚಿದ ಧನುಶ್ರಿ

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಾಲ್ಕು ದಿನಗಳು ಕಳೆದಿವೆ. ಕೆಲವರು ಮೊದಲ ನೋಟ, ಭೇಟಿಯಲ್ಲೇ ಬೆರೆತುಕೊಂಡಿದ್ದಾರೆ. ಅಂತೆಯೇ ಯಾರನ್ನು ನೀವು ಎಷ್ಟು ಅರಿತುಕೊಂಡಿದ್ದಾರೆ ಎನ್ನುವುದಕ್ಕೆ ಸೂಕ್ತ ಕಾರಣವನ್ನು ಕೊಟ್ಟು ಲೈಕ್ ಮತ್ತು ಡಿಸ್‍ಲೈಕ್‍ಗಳನ್ನು ಮನೆಯ ಸದಸ್ಯರಿಗೆ ನೀಡಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು.

    ಮನೆಯಲ್ಲಿರುವ ಸದಸ್ಯರಲ್ಲಿ ಪ್ರಶಾಂತ್ ಸಂಬರ್ಗಿ ಕೊಂಚ ಡಿಫ್ರೆಂಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಶಾಂತ್ ನಡವಳಿಕೆ ಕುರಿತಾಗಿ ಮನೆಯ ಸದಸ್ಯರಲ್ಲಿ ಭಿನ್ನವಾದ ಅಭಿಪ್ರಾಯಗಳಿವೆ. ಮನೆಯ ಸದಸ್ಯರು ಯಾರು ಮೆಚ್ಚಿಕೊಳ್ಳಲ್ಲ ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೆ ಮನೆಯ ಒಳಗೆ ಇರುವ ಒಬ್ಬ ಸದಸ್ಯೆ ಮಾತ್ರ ಸಂಬರ್ಗಿಗೆ ಲೈಕ್ ಒತ್ತಿದ್ದಾರೆ.

    ಬಿಗ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ನೇರ ವ್ಯಕ್ತಿತ್ವ, ಖಡಕ್ ಆಗಿ ಮಾತನಾಡುವುದು, ಕೆಲವಷ್ಟು ವಿಚಾರಗಳಿಗೆ ಮನೆಯಲ್ಲಿರುವ ಸದಸ್ಯರ ವಿರುದ್ಧವಾಗಿ ನಡೆದುಕೊಳ್ಳುವ ನಡುವಳಿಕೆ ಸ್ಪರ್ಧಿಗಳಿಗೆ ಮಾತ್ರವಲ್ಲದೆ ವೀಕ್ಷಕರಿಗೂ ಅಚ್ಚರಿಯನ್ನು ಮೂಡಿಸಿರುವುದಂತೂ ಸತ್ಯ.

    ಆದರೆ ಬಿಗ್ ಬಾಸ್ ನೀಡಿದ ಟಾಸ್ಕ್ ಅನ್ವಯ ಪ್ರಶಾಂತ್ ಅವರಿಗೆ ಲೈಕ್ ಬರುವುದೆ ಇಲ್ಲ ಎಂದುಕೊಂಡಿದ್ದ ವೇಳೆ ಅವರಿಗೂ ಒಂದು ಲೈಕ್ ಬಂದಿದೆ. ಹೌದು ಧನುಶ್ರೀ ಅವರು ಪ್ರಶಾಂತ್ ಸಂಬರ್ಗಿ ಅವರನ್ನು ಮೆಚ್ಚಿ ಲೈಕ್ ಕೊಟ್ಟಿದ್ದಾರೆ. ಈ ವೇಳೆ ಮಂಜು ಪಾವಗಡ ಬದಲಾಗ್ಬೇಡ ಮಾವ ನೀನು ಎಂದು ಜೋರಾಗಿ ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲಾ ನಕ್ಕು ಸಂತೋಷಪಟ್ಟಿದ್ದಾರೆ.

    ತನಗೆ ಲೈಕ್ ನೀಡಿದ ಧನುಶ್ರೀಯನ್ನು ಪ್ರಶಾಂತ್ ಸಂಬರ್ಗಿ ಎತ್ತಿಕೊಂಡು ಸಂತೋಷಪಟ್ಟಿದ್ದಾರೆ. ಈ ಮನೆಯಲ್ಲಿ ಕೃತಜ್ಞತೆಗೆ ಅವಕಾಶ ಇಲ್ಲ ಎಂಬುದು ತಿಳಿಯಿತ್ತು ಎಂದು ಮನೆಯ ಸದಸ್ಯರೊಂದಿಗೆ ಪ್ರಶಾಂತ್ ಹೇಳಿಕೊಂಡಿದ್ದಾರೆ. ಯಾಕಂದ್ರೆ ಈ ಹಿಂದೆ ನಿರ್ಮಲಾ ಅವರಿಗೆ ಬ್ಯಾಗ್ ನೀಡುವ ಮೂಲಕ ಹೆಲ್ಪ್ ಮಾಡಿದ್ದರು. ಆದರೆ ಇದೀಗ ನಿರ್ಮಲಾ, ಪ್ರಶಾಂತ್ ಅವರಿಗೆ ಡಿಸ್‍ಲೈಕ್ ನೀಡಿರುವುದು ಬೇಸರ ತರಿಸಿದೆ.

  • ‘ಬಿಗ್’ ಮನೆಯಲ್ಲಿ ಸಂಬರ್ಗಿ, ಮಂಜು ನಡುವೆ ಮಾವ-ಅಳಿಯ ಆಟ..!

    ‘ಬಿಗ್’ ಮನೆಯಲ್ಲಿ ಸಂಬರ್ಗಿ, ಮಂಜು ನಡುವೆ ಮಾವ-ಅಳಿಯ ಆಟ..!

    ಬೆಂಗಳೂರು: ಬಿಗ್ ಬಾಸ್ ಸೀಸನ್-8 ದಿನದಿಂದ ದಿನಕ್ಕೆ ಸಖತ್ ಕಲರ್ ಫುಲ್ ಆಗ್ತಿದೆ. ಟಾಸ್ಕ್, ಜಗಳ, ಮಜಾ, ನಗು ಎಲ್ಲದರ ಹೂರಣ ಕಿರುತೆರೆ ಪ್ರೇಕ್ಷಕರಿಗೆ ಸಿಕ್ತಿದೆ. ಅದ್ರಲ್ಲೂ ಲ್ಯಾಗ್ ಮಂಜು ಮನೆಮಂದಿಯನ್ನು ಸಿಕ್ಕಾಪಟ್ಟೆ ನಗಿಸ್ತಿದ್ದಾರೆ. ಮೈಕ್ ಹಾಕಿ ದಿವ್ಯಾ ಜೊತೆ ಮದುವೆಯಾಗಿದ್ದ ಮಂಜು ಅಂದಿನಿಂದ ಪ್ರಶಾಂತ್ ಸಂಬರ್ಗಿಯನ್ನು ಮಾವ ಮಾವ ಅಂತಾ ರೇಗಿಸಿ ಹಾಸ್ಯ ಮಾಡ್ತಿದ್ರು. ಇದೀಗ ಮಂಜು ಒಂಟಿ ಮನೆಯಿಂದ ಹೊರಗಡೆ ಹೋದ್ಮೇಲೆ ಪ್ರಶಾಂತ್ ಸಂಬರ್ಗಿಯನ್ನು ಮಾವ ಅಂತಾ ಕರೆಯುತ್ತಾರಂತೆ.

    ನಾಲ್ಕನೇ ದಿನ ದೊಡ್ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡಿದ್ರು. ಈ ವೇಳೆ ಮಂಜು ಪಾವಗಡ ನಾನು ಎಲ್ಲೇ ಹೋದ್ರೂ ನನ್ನ ಮಾವನನ್ನು ಕರೆದುಕೊಂಡು ಹೋಗ್ತೀನಿ. ಯಾರೂ ಏನೂ ಹೇಳಲ್ಲ. ಅವ್ರ ಹೆಸ್ರು ಕೇಳಿದ್ರೆ ಎಲ್ರೂ ಭಯ ಬೀಳ್ತಾರೆ. ನಾನು ಬಿಗ್ ಬಾಸ್ ಮುಗಿದ್ಮೇಲೆ ಯಾರಾದ್ರೂ ನನಗೆ ಏನಾದ್ರೂ ಹೇಳಿದ್ರೆ ನನ್ನ ಮಾವ ಸಂಬರ್ಗಿ ಅಂತ ಹೇಳ್ತೀನಿ, ಏನೇ ಹೇಳಿದ್ರೂ ನನ್ನ ಮಾವನ ಹೆಸ್ರು ಹೇಳ್ತೀನಿ. ನನಗೆ ಸಮಸ್ಯೆಯೇ ಆಗೋದಿಲ್ಲ ಅಂತ ಮಂಜು ಪಾವಗಡ ಹೇಳಿದ್ರು. ಲ್ಯಾಗ್ ಮಂಜು ಹೀಗೆ ಹೇಳ್ತಿದ್ದಂತೆ ಮನೆ ಮಂದಿಯಲ್ಲ ಬಿದ್ದು ಬಿದ್ದು ನಕ್ಕಿದ್ರು.

    ಅಷ್ಟಕ್ಕೂ ಮಂಜು ಪ್ರಶಾಂತ್ ಸಂಬರ್ಗಿಯಿಂದ ಬಯಸುತ್ತಿರುವುದೇನು…? ಸಂಬರ್ಗಿಯ ನೇರ ನುಡಿ ಮಾತುಗಳನ್ನಾ…? ಇಲ್ಲ ಬೇರೆ ವಿಚಾರನಾ…? ಎಲ್ಲದಕ್ಕೂ ಉತ್ತರ ಸಿಗಬೇಕು ಅಂದ್ರೆ ಜಸ್ಟ್ ವೇಟ್ ಅಂಡ್ ವಾಚ್.

  • ಮೂರನೆ ದಿನವೇ ಬಿಗ್‍ಬಾಸ್ ಮುಂದೆ ಬೇಡಿಕೆಯಿಟ್ಟ ನಿಧಿ.!

    ಮೂರನೆ ದಿನವೇ ಬಿಗ್‍ಬಾಸ್ ಮುಂದೆ ಬೇಡಿಕೆಯಿಟ್ಟ ನಿಧಿ.!

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕ್ಯಾಮೆರಾ ಮುಂದೆ ಬಂದು ಮನಸ್ಸು ಬಿಚ್ಚಿ ಮಾತನಾಡಿರುವ ಎಷ್ಟೋ ಉದಾಹರಣೆಗಳಿವೆ. ಹಾಗೆಯೇ ಇದೀಗ ನಿಧಿ ಸುಬ್ಬಯ್ಯ 3ನೇ ದಿನವೇ ಬಿಗ್‍ಬಾಸ್ ಬಳಿ ಒಂದು ಬೇಡಿಕೆ ಇಟ್ಟಿದ್ದಾರೆ.

    ಪ್ರಶಾಂತ್ ಸಂಬರ್ಗಿ ಅವರು ಕಾಫಿ ಪೌಡರ್ ಖಾಲಿ ಮಾಡಿದ್ದಾರೆ. ಅವರನ್ನು ಜೈಲಿಗೆ ಹಾಕಿ ಕಾಫಿ ಪೌಡರ್ ಕಳಿಸಿ ಬಿಗ್ ಬಾಸ್. ಸ್ವಿಮ್ಮಿಂಗ್ ಪೂಲ್ ಟಾಸ್ಕ್ ನಿಂದ ನನ್ನ ಮೂಗು, ತಲೆಯಲ್ಲಿ ನೀರು ಸೇರಿಕೊಂಡು ಬಿಟ್ಟಿದೆ ದಯವಿಟ್ಟು ಕಳಿಸಿಕೊಡಿ, ನನಗೆ ಕಾಫಿ ಇಲ್ಲದೇ ಆಗುತ್ತಿಲ್ಲ, ಬೇಕಾದರೆ ಪ್ರಶಾಂತ್ ಅವರನ್ನು ಜೈಲಿಗೆ ಹಾಕಿ ಎಂದು ನಿಧಿ ಮನವಿ ಮಾಡಿದ್ದಾರೆ. ಈ ವೇಳೆ ಜೊತೆಗೆ ಇದ್ದ ರಾಜೀವ್ ಕೂಡ ಹೌದು ಬಿಗ್ ಬಾಸ್ ನನ್ನ ಗಂಟಲು ಕೆಟ್ಟುಹೋಗಿದೆ.. ದಯವಿಟ್ಟು ಸ್ವಲ್ಪ ಕಾಫಿ ಪೌಡರ್ ಕಳಿಸಿಕೊಡಿ ಎಂದು ಕ್ಯಾಮೆರಾ ಮುಂದೆ ಕೇಳಿಕೊಂಡಿದ್ದಾರೆ.

    ಮನೆಯ ಸದಸ್ಯರೊಂದಿಗೆ ಹೇಳಿಕೊಳ್ಳಲಾಗದ ಎಷ್ಟೋ ವಿಷಯವನ್ನು ಮನೆ ಸದಸ್ಯರು ಕ್ಯಾಮೆರಾ ಮುಂದೆ ಹೇಳಿಕೊಳ್ಳುತ್ತಾರೆ. ಇದೀಗ ಬಿಗ್‍ಬಾಸ್ ಇವರ ಕೋರಿಕೆಯನ್ನು ನೇರವೇರಿಸುತ್ತಾರಾ ಎಂದು ಕಾದು ನೋಡಬೇಕಿದೆ. ಒಂದು ಕಾಫಿಗಾಗಿ ಪ್ರಶಾಂತ್ ಅವರನ್ನು ಜೈಲಿಗೆ ಹಾಕಿ ನಮಗೆ ಕಾಫಿ ಕಳಿಸಿಕೊಡಿ ಎಂದು ಕೇಳಿರುವ ನಿಧಿ ಸುಬ್ಬಯ್ಯ ಅವರ ಆಟದ ವೈಖರಿ ಮತ್ತು ಬುದ್ದಿವಂತಿಕೆ ಕುರಿತಾಗಿ ನೆಟ್ಟಿಗರು ಮೆಚ್ಚಿದ್ದಾರೆ. ಮನೆಯಲ್ಲಿ ಆಟದ ರಂಗು ಏರಿದೆ. ಅಭಿಮಾನಿಗಳಲ್ಲಿ ಬಿಗ್‍ಬಾಸ್ ಕುರಿತಾದ ನೀರಿಕ್ಷೆ ಅಧಿಕವಾಗುತ್ತಿದೆ.