Tag: ಪ್ರಶಾಂತ್ ಸಂಬರ್ಗಿ

  • ‘ಸೈಕ್’ ನವಾಜ್ ಬೆದರಿಕೆಗೆ ತತ್ತರಿಸಿ ಹೋದ ಬಿಗ್ ಬಾಸ್ ಮನೆಯ ಸದಸ್ಯರು

    ‘ಸೈಕ್’ ನವಾಜ್ ಬೆದರಿಕೆಗೆ ತತ್ತರಿಸಿ ಹೋದ ಬಿಗ್ ಬಾಸ್ ಮನೆಯ ಸದಸ್ಯರು

    ನಾನು ಸರಿಯಿಲ್ಲ, ಸರಿಯಿಲ್ಲ ಅಂತಾನೇ ನನ್ನ ರಾತ್ರಿ ಆಚೆ ಬಿಡುವುದಿಲ್ಲ ಎಂದು ಹೇಳುವ ಮೂಲಕ ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಆತಂಕ ಮೂಡಿಸಿದ್ದಾರೆ ಸೈಕ್ ನವಾಜ್. ನನ್ನ ತಂದೆ ತಾಯಿ ಒಂದು ರಾತ್ರಿಯೂ ನನ್ನನ್ನು ಬಿಟ್ಟು ಮಲಗುವುದಿಲ್ಲ. ರಾತ್ರಿ ಎಲ್ಲಿಯೂ ನನ್ನನ್ನು ಕಳುಹಿಸುವುದಿಲ್ಲ. ಅದಕ್ಕೆ ಕಾರಣ, ನನ್ನ ಮೇಲೆ ಅವರ ಪ್ರೀತಿ ಇದೆ ಅಂತಲ್ಲ, ರಾತ್ರಿ ವೇಳೆ ನಾನೇನಾದರೂ ಮಾಡಿಬಿಡ್ತೀನಿ ಅನ್ನೋ ಭಯ ಅವರಿಗೆ ಎನ್ನುತ್ತಾರೆ ನವಾಜ್. ನಾನು ಯಾರನ್ನಾದರೂ ಹೊಡೆದು, ಕಿರಿಕ್ ಮಾಡ್ತೀನಿ ಅನ್ನೋ ಕಾರಣಕ್ಕಾಗಿಯೇ ನನ್ನನ್ನು ಆಚೆಯೇ ಬಿಡುವುದಿಲ್ಲ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ.

    ಬಿಗ್ ಬಾಸ್ ಮನೆಯ ಟಾಸ್ಕ್ ಪ್ರಕಾರ ಅರುಣ್ ಸಾಗರ್ ಮತ್ತು ನವಾಜ್ ಒಟ್ಟೊಟ್ಟಿಗೆ ಓಡಾಡಬೇಕಿದೆ. ಹಾಗಾಗಿ ಈ ಎಲ್ಲ ವಿಷಯವನ್ನು ಅರುಣ್ ಸಾಗರ್ ಮುಂದೆ ನವಾಜ್ ಹೇಳಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೆಲವರನ್ನು ಕಂಡರೆ ಹೊಡೆಯಬೇಕು ಅನಿಸ್ತಿದೆ. ಜಗಳ ಆಗತ್ತೆ ಅಂತಾನೂ ಫೀಲ್ ಆಗುತ್ತಿದೆ. ಆರ್ಯವರ್ಧನ್, ದರ್ಶ್ ನೋಡಿ ಅವರನ್ನು ಹೊಡೆಯಬೇಕು ಅನಿಸ್ತು ಎನ್ನುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಆತಂಕ ಸೃಷ್ಟಿ ಮಾಡಿದ್ದಾರೆ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

    ನಾನು ಮರ್ಯಾದೆಗೆ ಅಂಜುವುದಿಲ್ಲ, ನನಗೆ ಬೇಗ ಕೋಪ ಬರುತ್ತದೆ ಎಂದೂ ಹೇಳಿರುವ ನವಾಜ್ (Nawaz), ಈತನ ಮಾತಿಗೆ ಸ್ವತಃ ಪ್ರಶಾಂತ್ ಸಂಬರ್ಗಿ (Prashant Sambargi) ಕೂಡ ಬೆಚ್ಚಿಬಿದ್ದಿದ್ದಾರೆ. ನವಾಜ್ ಹೇಳಿದ ಮಾತು ಭಯ ಹುಟ್ಟಿಸುತ್ತಿದೆ ಎಂದೂ ಮಾತನಾಡಿದ್ದಾರೆ. ಅಲ್ಲದೇ ಹೊಡಿತಿನಿ ಅನ್ನೋದು ಸರಿಯಿಲ್ಲ. ಪ್ರೌಢಿಮೆ ಇಲ್ಲದೇ ಅವನು ವರ್ತಿಸುತ್ತಿದ್ದಾನೆ. ಇದು ಸರಿಯಾದದ್ದು ಅಲ್ಲ ಎಂದಿದ್ದಾರೆ ರಾಕೇಶ್ ಅಡಿಗ (Rakesh Adiga). ವಿನೋದ್ ಕೂಡ ಈ ಮಾತಿಗೆ ಧ್ವನಿಗೂಡಿಸಿ, ನವಾಜ್ ಜಗಳ ಆಡಬೇಕು, ಹೊಡೆಯಬೇಕು ಎಂದು ಕಾಯುತ್ತಿದ್ದಾನೆ ಎಂದು ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕಾರಣಕ್ಕೂ ದೈಹಿಕ ಮತ್ತು ಮಾನಸಿಕವಾಗಿ ಹಲ್ಲೆ ಮಾಡುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲ, ಅವರನ್ನು ಮನೆಯಿಂದ ಆಚೆ ಹಾಕಲಾಗುತ್ತದೆ. ಈ ಹಿಂದೆ ಹುಚ್ಚ ವೆಂಕಟ್ (Huchcha Venkat) ಇದೇ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ನವಾಜ್ ಕೂಡ ಮಾತೆತ್ತಿದರೆ ಹೊಡೀತೀನಿ, ಜಗಳ ಮಾಡ್ತೀನಿ ಎನ್ನುತ್ತಿದ್ದಾರೆ. ಒಂದು ವೇಳೆ ಹಾಗೆ ಮಾಡಿದರೆ, ಅವರನ್ನು ಮನೆಯಿಂದಲೇ ಹೊರ ದಬ್ಬಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಶಾಂತ್ ಸಂಬರ್ಗಿಗೆ ‘ಕುತಂತ್ರಿ ಕಲಾವಿದ’ ಎಂದ ಸಾನ್ಯ ಅಯ್ಯರ್

    ಪ್ರಶಾಂತ್ ಸಂಬರ್ಗಿಗೆ ‘ಕುತಂತ್ರಿ ಕಲಾವಿದ’ ಎಂದ ಸಾನ್ಯ ಅಯ್ಯರ್

    ಬಿಗ್ ಬಾಸ್ ಓಟಿಟಿಯಲ್ಲಿ ನೋಡುಗರಿಗೆ ಸಖತ್ ಮೋಡಿ ಮಾಡಿದ್ದ ಸಾನ್ಯ ಅಯ್ಯರ್, ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Season 9) ಕೊಂಚ ಡಲ್ ಹೊಡೆದಂತೆ ಕಾಣ್ತಿದ್ದಾರೆ.  ಸದಾ ಲವಲವಿಕೆ, ಜಾಣ್ಮೆಯಿಂದ ಆಟ ಆಡುತ್ತಿದ್ದ,  ರೂಪೇಶ್ ಶೆಟ್ಟಿ ಜೊತೆಲಿ ಯಾವಾಗಲೂ ಅಂಟಿಕೊಂಡೇ ಇರುತ್ತಿದ್ದ ಈ ಪುಟ್ಟ ಗೌರಿ, ಇದೀಗ ಗುಂಪಿನಲ್ಲಿ ಗೋವಿಂದ ಆಗಿದ್ದಾರೆ. ಹೀಗಾಗಿಯೇ ಪ್ರಶಾಂತ್ ಸಂಬರ್ಗಿಗೆ ಸಾನ್ಯ ಕುತಂತ್ರಿ ಕಲೆ ಎನ್ನುವ ಬ್ಯಾಂಡ್ ಕಟ್ಟಿ ನಲಿದಿದ್ದಾರೆ.

    ಬಿಗ್ ಬಾಸ್ ಮನೆ ಒಳಗೆ ಬರುವ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್, ಒಂದೊಂದು ಬ್ಯಾಂಡ್ ಕೊಟ್ಟು ಕಳುಹಿಸಿದ್ದರು. ಆ ಬ್ಯಾಂಡ್ ಮೇಲೆ ಒಂದೊಂದು ಹೆಸರಿತ್ತು. ಅದನ್ನು ಮನೆಯಲ್ಲಿರುವ ತಮ್ಮಿಷ್ಟದ ವ್ಯಕ್ತಿಗೆ ಕಟ್ಟಲು ಸೂಚಿಸಿದ್ದರು. ಆ ಟಾಸ್ಕ್ ಈಗ ನಡೆದಿದೆ. ಸಾನ್ಯಗೆ ಸಿಕ್ಕ ಬ್ಯಾಂಡ್ ನಲ್ಲಿ ‘ಕಲಾವಿದ’ ಎಂದು ಬರೆಯಲಾಗಿತ್ತು. ಕಲಾವಿದ ಪದವನ್ನು ಕುತಂತ್ರಿ ಕಲೆ ಎಂದು ಬದಲಾಯಿಸಿ ಸಾನ್ಯ ಅಯ್ಯರ್ (Sanya Iyer), ಸಂಬರ್ಗಿಗೆ ಕಟ್ಟಿದರು. ಇದರಿಂದ ಸಾಂಬರ್ಗಿ ಶ್ಯಾನೇ ಬೇಜಾರು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಪ್ರಶಾಂತ್ ಸಂಬರ್ಗಿ (Prashant Sambargi) ದೊಡ್ಮನೆಲಿ ಒಂದು ರೀತಿ ಫೈಯರ್ ಬ್ರ್ಯಾಂಡ್. ನೇರವಾಗಿ ಮಾತಾಡೋ ಮೂಲಕ ಹಲವರ ವಿರೋಧ ಕೂಡ ಕಟ್ಟಿಕೊಂಡಿದ್ದಾರೆ. ಹಾಗಾಗಿ ಪ್ರಶಾಂತ್ ಕೈಲಿ ಈಗ ಕುತಂತ್ರಿ ಕಲಾವಿದ ಬ್ಯಾಂಡ್ ರಾರಾಜಿಸುತ್ತಿದೆ. ಇಂಥದೊಂದು ಬ್ಯಾಂಡ್ ಕಟ್ಟಿರೋ ಸಾನ್ಯಗೆ ಮುಂದಿನ ದಿನಗಳಲ್ಲಿ ಪ್ರಶಾಂತ್ ಅದ್ಯಾವ ರೀತಿಯಲ್ಲಿ ನೆಡೆಸ್ಕೋತಾರೋ ಬಿಗ್ ಬಾಸ್ ನೇ ಬಲ್ಲ.

    ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಎಲ್ಲರ ಗಮನ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದ್ದರೆ, ಸಾನ್ಯ ಮಾತ್ರ ಆಗಾಗ್ಗೆ ಮೌನಕ್ಕೆ ಜಾರಿ ಬಿಡ್ತಾರೆ. ರೂಪೇಶ್ ಶೆಟ್ಟಿ (Rupesh Shetty) ಕೂಡ ಆಕೆಯಿಂದ  ಅಂತರ ಕಾಪಾಡಿಕೊಳ್ತಿರೊದ್ರಿಂದ ತಾಯಿಯನ್ನು ಕಳೆದುಕೊಂಡ ಕರುವಿನಂತಾಗಿದ್ದಾರೆ ಸಾನ್ಯ. ಆದರೂ, ಒಂದೊಂದು ಸಲ ಚಾರ್ಜ್ ಆಗಿ ಅಚ್ಚರಿ ಮೂಡಿಸುವಷ್ಟು ಚಟುವಟಿಕೆಯಲ್ಲಿ ಇರ್ತಾರೆ ಮುದ್ದು ಮುಖದ ಹುಡುಗಿ. ಮುಂದಿನ ದಿನಗಳಲ್ಲಿ ಸಾನ್ಯ ಅದು ಹೇಗೆ ಆಟ ಆಡ್ತಾರೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಲ್ಲಿ ಭಯಾನಕ ಸೌಂಡ್ : ದಿಕ್ಕೆಟ್ಟು ಓಡಿದ ಸ್ಪರ್ಧಿಗಳು

    ‘ಬಿಗ್ ಬಾಸ್’ ಮನೆಯಲ್ಲಿ ಭಯಾನಕ ಸೌಂಡ್ : ದಿಕ್ಕೆಟ್ಟು ಓಡಿದ ಸ್ಪರ್ಧಿಗಳು

    ಬಿಗ್ ಬಾಸ್ (Bigg Boss Season 9) ಮನೆಯ ಅಷ್ಟೂ ಸದಸ್ಯರು ಬೆಚ್ಚಿ ಬಿದ್ದಿದ್ದಾರೆ. ಸವಿ ನಿದ್ರೆಯಲ್ಲಿ ಮೈ ಮರೆತು ಮಲಗಿದ್ದವರು, ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂದ ಭಯಾನಕ ಸೌಂಡ್‍ಗೆ ದಿಕ್ಕೆಟ್ಟು ಗಾರ್ಡನ್ ಏರಿಯಾದತ್ತ ಓಡಿದ ಪ್ರಸಂಗ ನಡೆದಿದೆ. ಶಬ್ದ ಕೇಳುತ್ತಿದ್ದಂತೆಯೇ ಜೀವವೇ ಬಾಯಿಗೆ ಬಂದಂತಾಗಿ, ಪ್ರಾಣ ರಕ್ಷಣೆಗಾಗಿ ಅತ್ತಿತ್ತ ಓಡಿದ ಘಟನೆ ನಡೆದಿದೆ. ಭಯಾನಕ ಹಾಗೂ ವಿಚಿತ್ರ ಸೌಂಡ್ ಜೊತೆಗೆ ಮನೆಯ ಲೈಟ್ ಕೂಡ ವಿಚಿತ್ರವಾಗಿ ಕುಣಿದು ಆತಂಕದ ವಾತಾವರಣ ಸೃಷ್ಟಿಯಾಗಿದೆ.

    ಒಬ್ಬರಿಗೊಬ್ಬರು ಕಾಲೆಳೆದುಕೊಂಡು, ಕಚಗುಳಿ ಇಡ್ತಾ, ಆಗೊಮ್ಮೆ ಈಗೊಮ್ಮೆ ರೊಮ್ಯಾಂಟಿಕ್ ಆಗಿ ಮಾತಾಡ್ತಾ, ಸವಿ ನಿದ್ದೆಗೆ ಜಾರೋದು ಬಿಗ್ ಬಾಸ್ ಮನೆಯಲ್ಲಿದ್ದವರ ದಿನಚರಿ. ರಾತ್ರಿ ಹಾಯಾಗಿ ಮಲಗಿ, ಬೆಳಗ್ಗೆ ‘ಎದ್ದೇಳು ಮಂಜುನಾಥ’ ಹಾಡಿಗೆ ಕುಣಿಯುತ್ತಾ ಹೊಸ ದಿನ ಶುರು ಮಾಡೋ ಹೊತ್ತಲ್ಲಿ ಈ ಭಾರೀ ಕೆಲ ಹೊತ್ತು ಆತಂಕ ಸೃಷ್ಟಿ ಮಾಡಿತ್ತು. ಕೆಲವರು ನಿಂತಲ್ಲಿಯೇ ಬೆಚ್ಚಿದರೆ, ಕೆಲವರು ಬಿಗ್ ಬಾಸ್ ಮನೆಯಿಂದ ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರು ಗಾರ್ಡನ್ ಏರಿಯಾಗೆ ಬಂದು ಸುಧಾರಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ

    ಅಷ್ಟಕ್ಕೂ ಆ ಶಬ್ದ ಬಂದಿದ್ದು ಎಲ್ಲಿಂದ ಎನ್ನುವುದೇ ಇಂಟ್ರಸ್ಟಿಂಗ್ ವಿಷ್ಯ. ಸಾಮಾನ್ಯವಾಗಿ ಬೆಳಗ್ಗೆ ಸ್ಪರ್ಧಿಗಳನ್ನು ಎಬ್ಬಿಸೋಕೆ ‘ಎದ್ದೇಳು ಮಂಜುನಾಥ’ ಹಾಡು ಹಾಕಲಾಗತ್ತೆ. ಅದರ ಬಲು ಭಾರೀ ಶಬ್ದ ಮಾಡಿ ಎಬ್ಬಿಸುವ ಪ್ರಯತ್ನ ನೆನ್ನೆ ನಡೆದಿದೆ. ಶಬ್ದ ಕೇಳಿ ಭಯಗೊಂಡು ಗಾರ್ಡನ್ ಏರಿಯಾಗೆ ಬಂದವರಿಗೆ ಅಲ್ಲೊಂದು ಸರ್ ಪ್ರೈಸ್ ಕಾದಿತ್ತು. ಗಾರ್ಡನ್ ಏರಿಯಾದಲ್ಲಿ ಮೆದುಳಿನ ಮಾದರಿಯನ್ನು ಇಡಲಾಗಿತ್ತು. ಈ ಮೆದುಳಿಗೆ ಲೈಟ್ ಕೂಡ ಹಾಕಿ ಡೆಕಾರೇಟ್ ಮಾಡಲಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂದ, ಭಯಾನಕ ಶಬ್ದಕ್ಕೂ ಈ ಮೆದುಳಿನಾಕೃತಿಗೂ ಏನಾದರೂ ಸಂಬಂಧ ಇದೆಯಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಹೌದು, ಈ ವಾರದಲ್ಲಿ ಮೆದುಳಿಗೆ ಸಂಬಂಧಿಸಿದ ಟಾಸ್ಟ್ ಇರಲಿದೆ ಎಂದು ಹೇಳಲಾಗುತ್ತಿದೆ. ಶಕ್ತಿ ಮತ್ತು ಯುಕ್ತಿಗಳ ಸಮ್ಮಿಲನವೇ ಈ ವಾರದ ಟಾಸ್ಕ್ ಎಂದು ಹೇಳಲಾಗುತ್ತಿದೆ. ಅದನ್ನು ತಿಳಿಸುವುದಕ್ಕಾಗಿಯೇ ಬಿಗ್ ಬಾಸ್ ಈ ರೀತಿ ಆಟವಾಡಿದ್ದಾರೆ ಎನ್ನುವುದು ಮನೆ ಒಳಗಿದ್ದವರು ಲೆಕ್ಕಾಚಾರ. ಆದರೆ, ಬಿಗ್ ಬಾಸ್ ಲೆಕ್ಕಾಚಾರ ಅದೇನಿದೆಯೋ, ಅವನೇ ಬಲ್ಲ.

    Live Tv
    [brid partner=56869869 player=32851 video=960834 autoplay=true]

  • ‘ನಾನು ಸೈಲೆಂಟ್ ಅಲ್ಲ ವೈಲೆಂಟ್’ ಎಂದು ಖಡಕ್ ಎಚ್ಚರಿಕೆ ಕೊಟ್ಟ ಆರ್ಯವರ್ಧನ್ ಗುರೂಜಿ

    ‘ನಾನು ಸೈಲೆಂಟ್ ಅಲ್ಲ ವೈಲೆಂಟ್’ ಎಂದು ಖಡಕ್ ಎಚ್ಚರಿಕೆ ಕೊಟ್ಟ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ 9ನೇ (Bigg Boss Season 9) ಸೀಸನ್ ಶುರುವಾಗಿದೆ. ಪ್ರವೀಣರ ಜೊತೆ ನವೀನರ ಜುಗಲ್ ಬಂದಿ ಕೂಡ ಜೋರಾಗಿದೆ. ಇದೀಗ ದೊಡ್ಮನೆಯಲ್ಲಿ ಮೊದಲ ದಿನವೇ ಜಗಳ ಶುರುವಾಗಿದ್ದು,  ಕೆಣಕಲು ಬಂದ ಪ್ರಶಾಂತ್ ಸಂಬರ್ಗಿಗೆ ಆರ್ಯವಧನ್ ಗುರೂಜಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    ದೊಡ್ಮನೆಯಲ್ಲಿ 18 ಜನ ಭಿನ್ನ ವ್ಯಕ್ತಿಗಳಿದ್ದಾರೆ. ಮನೆಯ ರಂಗು ಮತ್ತಷ್ಟು ಜೋರಾಗಿದೆ. ಇನ್ನೂ ಈ ವೇಳೆ ಗುರೂಜಿ ಪ್ರಶಾಂತ್ ಸಂಬರ್ಗಿ (Prashant Sambargi) ಅವರನ್ನು ಸಂಪಂಗಿ ಅಂದಿದ್ದಾರೆ. ಈ ಮಾತು ಜಗಳಕ್ಕೆ ಎಡೆ ಮಾಡಿ ಕೊಟ್ಟಿದೆ. ರೀ ಅದು ಸಂಬರ್ಗಿ ಊರಿನ ಹೆಸರು ಎಂದು ಪ್ರಶಾಂತ್ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಬಳಿಕ ನೀವು ಆರ್ಯವರ್ಧನ್ ಅಂತಾ ಯಾಕೆ  ಇಟ್ಟುಕೊಂಡ್ರಿ ನಾನು ಹೇಳಲಾ ನಿಮ್ಮ ನಿಜವಾದ ಹೆಸರು ಎಂದು ಪ್ರಶಾಂತ್, ಗುರೂಜಿಗೆ ಟಾಂಗ್ ಕೊಟ್ಟಿದ್ದಾರೆ.

    ಆರ್ಯವರ್ಧನ್ (Aryavardhan Guruji) ಉರುಫ್ ಏನು ಎಂದು ಪ್ರಶಾಂತ್ ಮತ್ತೆ ಕೇಳಿದ್ದಾರೆ. ಈ ಮಾತಿನ ಚಕಮಕಿ ಉರ್ಫಿಯಿಂದ ಉರಿಸೋದರವೆಗೆ ಚರ್ಚೆ ಆಗಿದೆ. ಈ ಜಗಳದ ನಡುವೆ ಇತ್ತ ಅರುಣ್ ಸಾಗರ್ (Arun Sagar) ಉರ್ಫಿಗೆ ಉರವಿದ್ದಾರೆ ಎಂದು ನಗೆಚಟಾಕಿ ಹಾರಿಸಿದ್ದಾರೆ. ಇವರು ಇನ್ಮೇಲೆ ಆರ್ಯವರ್ಧನ್ ಉರಸು ಎಂದು ಅರಣ್ ಸಾಗರ್ ಮನೆ ಮಂದಿ ಮುಂದೆ ಹೇಳಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಚರ್ಚೆ ಕಡೆಗೆ ಗುರೂಜಿ ಸಂಬರ್ಗಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ನನಗೆ ಏನೇ ಹೇಳಬೇಕಿದ್ದರೂ ನೇರವಾಗಿ ಹೇಳಿ ಎಂದು ನಾನು ಸೈಲೆಂಟ್ (Silent) ಅಲ್ಲ ವೈಲೆಂಟ್.. ಫೈಯರ್ ನಾನು‌ ಎಂದು ಸಂಬರ್ಗಿಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ. ಉರಿಸಲು ಬಂದ ಪ್ರಶಾಂತ್ ಗೆ ಪಂಚಿಂಗ್ ಡೈಲಾಗ್ ಗಳ ಮೂಲಕ ಗುರೂಜಿ ಬೆವರಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡೋರಿಗೆ ಹೋಗುತ್ತೆ: ಪ್ರಶಾಂತ್ ಸಂಬರ್ಗಿ

    ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡೋರಿಗೆ ಹೋಗುತ್ತೆ: ಪ್ರಶಾಂತ್ ಸಂಬರ್ಗಿ

    ಬೆಂಗಳೂರು: ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡುವವರಿಗೆ ಹೋಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಭಯೋತ್ಪಾದಕರ ಚಟುವಟಿಕೆಗೆ ಈ ಹಲಾಲ್ ಹಣ ಹೋಗುತ್ತದೆ. ಹಲಾಲ್ ನಮ್ಮ ಆಹಾರವಲ್ಲ. ಜೊತೆಗೆ ಹಲಾಲ್ ನಡೆಸಲು ಸರ್ಕಾರಿ ಸರ್ಟಿಫಿಕೇಟ್ ಇಲ್ಲ ಎಂದು ಕಿಡಿಕಾರಿದರು.

    ಹಲಾಲ್ ಎನ್ನುವುದು ದೇಶಕ್ಕೆ ಮಾರಕವಾಗಿದೆ. ಇದು ಮುಸ್ಲಿಂ ಸಂಸ್ಕೃತಿಯಾಗಿದೆ. ಇದನ್ನು 15 ವರ್ಷಗಳಿಂದ ನಮ್ಮ ಮೇಲೆ ಹೇರಿಕೆ ಮಾಡಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲಾಲ್ ಬಾಯ್ಕಾಟ್ ವಿಚಾರವಾಗಿ ನಾವು ಎರಡು ವರ್ಷ ಹಿಂದೆಯೇ ಈ ಅಭಿಯಾನದ ಆರಂಭ ಮಾಡಿದ್ದೇವೆ. ಹಲಾಲ್ ಎಲ್ಲಿ ಹೋಗುತ್ತದೆ ಎನ್ನುವುದರ ಕುರಿತು ಜಾಗೃತಿ ಕೆಲಸ ಮಾಡುತ್ತಿದ್ದೇವೆ. ಒಬ್ಬ ಮುಲ್ಲಾ ಹಲಾಲ್ ಮಾಡಿದರೆ ಮೆಕ್ಕಾ ಕಡೆ ಮುಖ ಮಾಡಿ ಕೋಳಿ ಕತ್ತರಿಸುತ್ತಾನೆ ಎಂದರು. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

    300 ಹಲಾಲ್ ಸರ್ಟಿಫಿಕೇಟ್ ಇರುವ ಕಂಪನಿಗಳಿವೆ. ಇವೆಲ್ಲ ಕಾನೂನು ಬಾಹಿರ ಸರ್ಟಿಫಿಕೇಟ್‍ಗಳಾಗಿವೆ. ಅನೇಕ ಮುಸ್ಲಿಂ ಯುವಕರಿಗೆ ಇದೊಂದು ಉದ್ಯಮವಾಗಿದೆ. ಅವರ ದೇವರಿಗೆ ಪ್ರಾರ್ಥನೆ ಮಾಡಿ ಆಮೇಲೆ ಹಿಂದೂಗಳಿಗೆ ಅರ್ಪಣೆ ಮಾಡುತ್ತಾರೆ. ಇದು ಒಳ್ಳೆದಲ್ಲ. ಹಿಂದೂ ಜಟ್ಕಾಮೀಟ್ ಆರಂಭ ಆಗಬೇಕು. ಗ್ರಾಹಕರ ಹಕ್ಕುಗಳ ಕುರಿತು ಮುಂದಿನ ಮೂರು ತಿಂಗಳ ಒಳಗೆ ಅಭಿಯಾನ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹಲಾಲ್ ಮಾಂಸ ಎಂದರೇನು? ಹಲಾಲ್ ಕಟ್ ಏನು?

  • ಡಿಕೆಶಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಪ್ರಶಾಂತ್ ಸಂಬರ್ಗಿ ವಿರುದ್ಧ FIR ದಾಖಲು

    ಡಿಕೆಶಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಪ್ರಶಾಂತ್ ಸಂಬರ್ಗಿ ವಿರುದ್ಧ FIR ದಾಖಲು

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಹೋದರ ಡಿ.ಕೆ ಸುರೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಪ್ರಶಾಂತ್ ಸಂಬರ್ಗಿ ಮತಾಂತರ ಬಿಲ್ ಹರಿದು ಹಾಕಿದ್ದ ಡಿ.ಕೆ ಶಿವಕುಮಾರ್‌ರನ್ನು ವಿರೋಧಿಸುವ ಭರದಲ್ಲಿ ಕೋಮು ಪ್ರಚೋದನೆ ನೀಡುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ಸಂಬರ್ಗಿ ಪೋಸ್ಟ್ ಹಾಕಿರುವುದನ್ನು ಗಮನಿಸಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಎಂಬ ಆರೋಪದಡಿ ನಾರಾಯಣ್ ಸ್ವಾಮಿ ಸೌತ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರ್ಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ನಡುವೆ ಈ ಹಿಂದೆ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ ಬಗ್ಗೆ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆದಿತ್ತು. ಇದನ್ನೂ ಓದಿ: ಜನತೆಯ ಹಿತದೃಷ್ಟಿಯಿಂದ ಕಠಿಣ ಕ್ರಮ: ಸುಧಾಕರ್ ಸಮರ್ಥನೆ

  • ನಾನು ಚರ್ಚೆಗೆ ಬರಲು ಸಿದ್ಧ- ಸಂಬರ್ಗಿಗೆ ಸವಾಲೆಸೆದ ಚಂದ್ರಚೂಡ್

    ನಾನು ಚರ್ಚೆಗೆ ಬರಲು ಸಿದ್ಧ- ಸಂಬರ್ಗಿಗೆ ಸವಾಲೆಸೆದ ಚಂದ್ರಚೂಡ್

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಕಿಡಿಕಾರಿರುವ ಚಕ್ರವರ್ತಿ ಚಂದ್ರಚೂಡ್ ಸವಾಲೆಸೆದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸಂಬರ್ಗಿಗೆ ಪ್ರಶ್ನೆಗಳ ಸುರಿಮಳೆಗೈದ ಚಂದ್ರಚೂಡ್, ಅವರು ಬಂದರೆ ನಿಮ್ಮ ವಾಹಿನಿಗೆ ನಾನು ಚರ್ಚೆಗೆ ಬರಲು ಸಿದ್ಧನಿದ್ದೇನೆ ಎಂದು ನೇರವಾಗಿ ಚಾಲೆಂಜ್ ಮಾಡಿದರು.

    ಮುಖವಾಡ ಕಳಚಲೆಂದೇ ನಾನು ಬಂದಿದ್ದೀನಿ. ಕಳೆದ 19 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಸುಮಾರು ಜನರ ಮುಖವಾಡಗಳನ್ನು ಕಳಚಿದ್ದೀನಿ. ಸುಮಾರು 60ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆಗಳನ್ನು ನೋಡಿದ್ದೀನಿ. ಅಲ್ಲದೆ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ. ಸಂಬರ್ಗಿಗೆ ಪ್ರಚಾರ ಕೊಡುತ್ತಿರುವ ಮಾಧ್ಯಮಗಳು ದುರ್ಬಳಕೆ ಆಗುತ್ತಿವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಅವರಿಗೆ ನೆಟ್ಟಗೆ 4 ಕನ್ನಡ ವಾಕ್ಯ ಮಾತಾಡೋಕೆ ಬರುತ್ತಾ ಕೇಳಿ. ಎರಡು ಚಲಚಿತ್ರ ಮಂಡಳಿಗಳಿವೆ. ಈ ಎರಡರಲ್ಲೂ ಇವರ ಬ್ಯಾನರ್ ಇಲ್ಲ. ಒಂದು ಗೀತೆ ರಚನೆಕಾರ, ಹಾಡು ಬರೆದಿದ್ದಾರೋ ಅಥವಾ ನಟಿಸಿದ್ದಾರೋ ಏನೂ ಗೊತ್ತಿಲ್ಲ. ಎಲ್ಲೋ ಸಣ್ಣಪುಟ್ಟ ಕಡೆಗಳಲ್ಲಿ ಕಾಣಿಸಿಕೊಂಡಿದ್ದಾರೆ. 24 ಥಿಯೇಟರ್ ಗಳನ್ನು ಕೊಡಬೇಕು, ಪರಭಾಷಾ ಚಿತ್ರಗಳಿಂದ ಕನ್ನಡವನ್ನು ಕಾಪಾಡಿಕೊಳ್ಳಬೇಕು ಅನ್ನೋದು ಅಣ್ಣಾವ್ರ ಕಾಲದಿಂದಲೂ ಹೋರಾಟ ನಡೆದಿದೆ ಎಂದರು. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಯಾರೋ ಏನೋ ಮಾಡಿರುವುದನ್ನು ಫೇಸ್ ಬುಕ್ ಜ್ಯೋತಿಷಿ, ಭಯೋತ್ಪಾದಕನ ರೀತಿ ಕುಳಿತುಕೊಂಡು ಮಾತಾಡೋದು ಸರಿಯಲ್ಲ. ರಾಗಿಣಿ ಮತ್ತು ಸಂಜನಾಗೆ ಶಿಕ್ಷೆಯಾಗಿದ್ದಕ್ಕೆ ನಾನು ಕಾರಣ ಎಂದು ಹೇಳುತ್ತಿದ್ದಾರೆ. ಅಲ್ಲದೆ ಅನುಶ್ರೀಯವರನ್ನು ಜೈಲಿಗೆ ಕಳುಹಿಸುತ್ತೇನೆ ಎಂಬ ಹೇಳಿಕೆ ನೀಡುವುದೆಲ್ಲ ಸಮಂಜಸವಲ್ಲ. ಕನ್ನಡದ ಹೆಣ್ಣು ಮಗಳು, ಆಕೆ ತಪ್ಪು ಮಾಡಿದ್ದರೆ ಕಾನೂನು, ಸಂವಿಧಾವಿದೆ. ಸಂಬಂಧ ಪಟ್ಟ ಇಲಾಖೆಗಳಿವೆ. ಈ ರೀತಿಯ ಕುತಂತ್ರಗಳನ್ನು ನೀವು ಬೆಳೆಸಬೇಡಿ. ದಾಖಲೆ ಒದಗಿಸಲು 2 ತಿಂಗಳು ಯಾಕೆ ಬೇಕು ಎಂದು ಪ್ರಶ್ನಿಸುವ ಮೂಲಕ ಸಂಬರ್ಗಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

  • ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ, ಗೆಳೆಯ ಪ್ರಶಾಂತ್ ಸಂಬರ್ಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ರೊಚ್ಚಿಗೆದ್ದಿದ್ದಾರೆ. ಸಂಬರ್ಗಿಯವರು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅಂತ ಹೇಳಿಕೊಳ್ಳಲು ಪ್ರೂಫ್ ಏನಿದೆ ಎಂದು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದ್ರಚೂಡ್, ಐತಿಹಾಸಿಕ ಪುರುಷರು, ಸಾಧಕರು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊಡ್ಡ ದೊಡ್ಡ ಹೆಸರು ತಂದುಕೊಟ್ಟವರು ಹಾಗೂ ಮಾಡೆಲ್ ಗಳ ಹೆಸರುಗಳನ್ನು ಹೇಳಿಕೊಂಡು, ಅವರ ಮೊಮ್ಮಗ ಅಂತ ಹೇಳಿಕೊಂಡು ಇವರು ಮಾಡುತ್ತಿರುವ ಕುತಂತ್ರ ಏನು ಎಂದು ಪ್ರಶ್ನಿಸುವ ಮೂಲಕ ಸಂಬರ್ಗಿ ವಿರುದ್ಧ ಗುಡುಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿರುವ ಸಂದರ್ಭದಲ್ಲಿ ಅವರು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಎಮದು ಹೇಳಿದಾಗ ಮೊದಲು ನಾನು ವಿರೋಧಿಸಿದೆ. ನಂತರ ಅದೊಂದು ಶೋ ಎಂದು ಸುಮ್ಮನಾದೆ. ಆದರೆ ಹೊರಗಡೆ ಬಂದ ಬಳಿಕ ಐತಿಹಾಸಿಕ ಪುರುಷರ, ಸಾಧಕರ ಹೆಸರನ್ನು ಹೇಳಬಾರದು. ಐತಿಹಾಸಿಕವಾಗಿ ರಾಣಿ ಚೆನ್ನಮ್ಮಗೆ ಮೊಮ್ಮಗ ಇರಲು ಸಾಧ್ಯವಿಲ್ಲ. ಇದನ್ನು ಕೇಳಿದ್ರೆ ಜನ ನಕ್ಕು ಬಿಡ್ತಾರೆ. ಈ ವಿಚಾರ ದುರುಪಯೋಗವಾಗುತ್ತೆ. ಈ ರೀತಿ ದುರ್ಬಳಕೆ ಮಾಡಿಕೊಳ್ಳಬೇಡ ಎಂದು ಅವರಿಗೆ ನಾನು ಬುದ್ಧಿವಾದ ಹೇಳಿದ್ದೆ ಎಂದರು. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ಈ ಹಿಂದೆ ನಾನು ಭೂತಾಯಿಯನ್ನು ಮಾರುವುದಾಗಿ ಸಂಬರ್ಗಿ ಹೇಳಿಕೆ ನೀಡಿದ್ದರು. ಇವರು ಒಬ್ಬ ನೆಲೆಹಿಡುಕ, ದಲ್ಲಾಳಿ. ಕಳೆದ ಮೂರು ದಿನಗಳ ಹಿಂದೆ ನಿರೂಪಕಿ ಅನುಶ್ರೀ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಮಂಗಳೂರಲ್ಲಿ 12 ಕೋಟಿ ಹಾಗೂ ಬೆಂಗಳೂರಿನಲ್ಲಿ 4 ಕೋಟಿ ರೂ. ನ ಮನೆ ಕಟ್ಟಿದ್ದಾರೆ, ಐಷಾರಾಮಿ ಕಾರಿದೆ. ಇದು ಡ್ರಗ್ಸ್ ನಿಂದ ಬಂತು ಎಂದು ಹೇಳಿಕೆ ನೀಡಿದ್ದರು. ಆದರೆ ಇವುಗಳಿಗೆ ದಾಖಲೆಗಳನ್ನು ನೀಡಬೇಕಲ್ವ ಎಂದು ಮರು ಪ್ರಶ್ನೆಗೈದ್ರು.

    ಶುಗರ್ ಡ್ಯಾಡಿ ಎಂಬುದು ದೇವರಾಜ ಅರಸು, ಗುಂಡೂರಾವ್ ಹಾಗೂ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಮಗೆ ಗೊತ್ತಿರುವ ಪದ. ಇದಕ್ಕೆ ಸಂಬಂಧಪಟ್ಟ ಏನಾದರೂ ದಾಖಲೆಗಳು ಸಂಬರ್ಗಿ ಬಳಿ ಇದೆಯಾ ಎಂದು ಕೇಳಿದರು. ಒಬ್ಬರು ಮಾಜಿ ಮುಖ್ಯಮಂತ್ರಿಯವರು ಇನ್ನೊಬ್ಬ ನಟಿಗೆ ಶುಗರ್ ಡ್ಯಾಡಿ ಆಗಿದ್ದಾರೆ. ಲಕ್ಷಾಂತರ ರೂ. ಹಣ ಕೊಡ್ತಾರೆ. ಡ್ರಗ್ಸ್ ಪೆಡ್ಲಿಂಗ್ ಮಾಡ್ತಾರೆ. ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಡಿಸೆಂಬರ್ ನಲ್ಲಿ ಕೊಡುತ್ತೇನೆ ಅಂತ ನಾನು ಹೇಳಿಕೆ ನೀಡಿದರೆ ನೀವು ಪ್ರಚಾರ ಮಾಡ್ತೀರಾ..?, ಅದೇ ರೀತಿ ದಾಖಲೆಗಳೇ ಇಲ್ಲದೆ ಅನುಶ್ರೀ ಬಗ್ಗೆ ಸಂಬರ್ಗಿ ಹೇಗೆ ಆರೋಪ ಮಾಡಿದ್ರು ಎಂದು ಚಂದ್ರಚೂಡ್ ಪ್ರಶ್ನೆಗಳ ಸುರಿಮಳೆಗೈದ್ರು.

    ಸುಖಾಸುಮ್ಮನೆ ಮಾತನಾಡುತ್ತಿರುವ ಸಂಬರ್ಗಿಯವರು ಒಂದು ಶೀಟ್ ಆದರೂ ದಾಖಲೆ ಕೊಡಲಿ. ಸುಮ್ಮನೆ ಪ್ರಚಾರ ತೆಗೆದುಕೊಂಡು ಬಿಜೆಪಿ ಪಕ್ಷ ಸೇರಿಕೊಳ್ಳಲು ಹವಣಿಸುತ್ತಿದ್ದಾರೆ. ಕುತಂತ್ರಗಾರಿಕೆ ಮಾಡುತ್ತಿದ್ದಾರೆ. ದಾಖಲೆಗಳನ್ನು ಬಿಡುಗಡೆ ಮಾಡಲು ಯಾಕೆ ಇಷ್ಟೊಂದು ಸಮಯ ಬೇಕು..?, ಶೃತಿ ಹರಿಹರನ್ ಅವರ ಮೀಟೂ ವಿಚಾರಕ್ಕೆ ಮೂರು ವರ್ಷವೇ ಆಗೋಯ್ತು. ಇದೀಗ ಕರ್ನಾಟಕದಲ್ಲಿ ಡ್ರಗ್ಸ್ ವಿಚಾರ ಬಂದು ಸುಮಾರು ಎರಡೂವರೆ ವರ್ಷ ಆಗೋಯ್ತು. ಎಲ್ಲಿದೆ ದಾಖಲೆಗಳು..?. ಈ ಪ್ರಕರಣಗಳು ನಾಳೆ ಯಾವ ರೀತಿಯ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತೆ ಗೊತ್ತಿಲ್ಲ. ಆದರೆ ಸಮಾಜಕ್ಕೆ, ಯುವಕರಿಗೆ ಒಳ್ಳೆಯದಾಗಬೇಕು. ಆದರೆ ಈ ರೀತಿ ಆರೋಪಗಳನ್ನು ಮಾಡಿಕೊಂಡು ಕಾಲಹರಣ ಮಾಡಿ ಪ್ರಚಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸಂಬರ್ಗಿ ವಿರುದ್ಧ ಕಿಡಿಕಾರುವ ಮೂಲಕ ದಾಖಲೆಗಳನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಚಂದ್ರಚೂಡ್ ಆಗ್ರಹಿಸಿದರು.

  • ನಿವೃತ್ತ ಐಪಿಎಸ್ ಅಧಿಕಾರಿಯ ಮಧ್ಯಸ್ಥಿಕೆಯಿಂದ ಇಡೀ ಕೇಸ್ ಹಳ್ಳ ಹಿಡಿದಿದೆ: ಸಂಬರ್ಗಿ ಆರೋಪ

    ನಿವೃತ್ತ ಐಪಿಎಸ್ ಅಧಿಕಾರಿಯ ಮಧ್ಯಸ್ಥಿಕೆಯಿಂದ ಇಡೀ ಕೇಸ್ ಹಳ್ಳ ಹಿಡಿದಿದೆ: ಸಂಬರ್ಗಿ ಆರೋಪ

    ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಪ್ರಭಾವದಿಂದ ಇಡೀ ಡ್ರಗ್ಸ್ ಪ್ರಕರಣ ಹಳ್ಳ ಹಿಡಿದಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರುಣ್ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಚಾರ್ಜ್ ಶೀಟ್ ನಲ್ಲಿ ತರುಣ್ ಹೆಸರು ಯಾಕೆ ಉಲ್ಲೇಖ ಆಗಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬರೀ ಯೂರಿನ್, ರಕ್ತ ಪರೀಕ್ಷೆ ಮಾಡಿದ್ರೆ ಸಾಲದು -ಹೇರ್ ಫೋಲಿಕಲ್ ಟೆಸ್ಟ್‌ಗೆ ಇಂದ್ರಜಿತ್ ಆಗ್ರಹ

    ನಿವೃತ್ತ ಐಪಿಎಸ್ ಆಫೀಸ್ ಅವರ ಮಧ್ಯಸ್ಥಿಕೆಯಿಂದ ಇಡೀ ಕೇಸ್ ಹಳ್ಳ ಹಿಡಿದಿದೆ. ಇಲ್ಲಿ ಅನುಶ್ರೀ ಡ್ರಗ್ಸ್ ಸೇವನೆ ಮಾಡಿಲ್ಲ. ಬೆಂಗಳೂರಿಗಿಂತ ಮಂಗಳೂರಿನಲ್ಲಿ ಡ್ರಗ್ಸ್ ಮಾತ್ರೆಗಳು ಹೆಚ್ಚಾಗಿ ಸಿಗುತ್ತಿದೆ ಎಂಬುದು ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಅಲ್ಲಿಗೆ ಗೋವಾ ಹಾಗೂ ಕೇರಳದಿಂದ ಡ್ರಗ್ಸ್ ಮಾತ್ರೆಗಳು ರವಾನೆಯಾಗುತ್ತಿವೆ ಎಂದು  ಆರೋಪಿಸಿದರು. ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅನುಶ್ರೀ: ಕಿಶೋರ್ ಅಮನ್ ಶೆಟ್ಟಿ

    ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ್ದ ಇಂದ್ರಜಿತ್, ಯೂರಿನ್ ರಕ್ತ ಪರೀಕ್ಷೆಯ ಬದಲು ಹೇರ್ ಫೋಲಿಕಲ್ ಟೆಸ್ಟ್ ಮಾಡಿ ಎಂದು ಆಗ್ರಹಿಸಿದ್ದರು. ಈ ಹಿಂದೆ ಪ್ರಕರಣ ಸಂಬಂಧ ಯಾರನ್ನು ವಿಚಾರಣೆಗೆ ಕರೆದಿದ್ದಾರೋ ಅವರಿಗೆ ಯಾವುದೇ ರೀತಿಯ ಭಯ ಹುಟ್ಟಿಲ್ಲ. ಕೊರೊನಾ ಎರಡನೇ ಅಲೆಯ ಬಳಿಕ ಅವರು ಮತ್ತೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

    ನಾನು ಈ ಹಿಂದೆ ಹೇಳಿದಂತೆ ಇದೊಂದು ಇಡೀ ಕರ್ನಾಟಕದ ಇತಿಹಾಸದಲ್ಲಿಯೇ ದೊಡ್ಡ ಸ್ಕ್ಯಾಮ್ ಆಗಿದೆ. ರಾಜಕೀಯ, ಸಮಾಜ, ಯುವಕ ಹಾಗೂ ಚಿತ್ರರಂಗದ ಆ್ಯಂಗಲ್ ಗಳಿವೆ. ಹೀಗಾಗಿ ನೀವು ಕಳಿಸಿರುವ ಸಂದೇಶದಿಂದ ಯಾರಿಗೂ ಭಯ ಇಲ್ಲ. ಇಂದಿಗೂ ಕೋಟ್ಯಂತರ ರೂ. ಡ್ರಗ್ಸ್ ಕರ್ನಾಟಕ ಮಾತ್ರವಲ್ಲದೇ ಅದರಲ್ಲೂ ಬೆಂಗಳೂರಿನಲ್ಲಿ ಡಂಪ್ ಆಗುತ್ತಿದೆ ಎಂದು ಇಂದ್ರಜಿತ್ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಡ್ರಗ್ಸ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು

  • ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

    ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

    ಪ್ರತಿವಾರ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಯೆಸ್ ಆರ್ ನೋ ಪ್ರಶ್ನೆಗಳನ್ನು ಮನೆಯ ಸ್ಪರ್ಧಿಗಳನ್ನು ಕೇಳುತ್ತಾರೆ. ಹಾಗೆಯೇ ಈ ವಾರ ಸುದೀಪ್, ಮೊದಲ ಪ್ರಶ್ನೆಯಲ್ಲಿಯೇ ಸ್ನಾನಕ್ಕೆ ಹೋದ ಮೇಲೆ ಇನ್ಮುಂದೆ ಯಾವುದೇ ಕಾರಣಕ್ಕೂ ರಘುರವರು ಬಾಗಿಲು ತೆಗೆಯುವುದಿಲ್ಲ ಎಂದು ಹೇಳುತ್ತಾರೆ.

    ಈ ವೇಳೆ ಮನೆಮಂದಿ ಯೆಸ್ ಎಂದು ಉತ್ತರಿಸಿದ್ದಾರೆ. ಆಗ ಸುದೀಪ್‍ರವರು ಯೆಸ್ ಯಾಕೆ ಎಂದು ಪ್ರಶಾಂತ್ ಸಂಬರ್ಗಿಯವರನ್ನು ಕೇಳಿದಾಗ, ರಘು ಈಗ ಹೆದರಿಕೊಂಡು ಬಿಟ್ಟಿದ್ದಾರೆ. ಸೋಪ್ ಬೇಕು, ಟವೆಲ್ ಬೇಕು ಎಂದು ಏನೂ ಕೇಳುವುದಿಲ್ಲ. ಬಟ್ಟೆ ಹಾಕಿಕೊಂಡು ಆಚೆ ಬರುತ್ತಾರೆ ಎನ್ನುತ್ತಾರೆ. ನಂತರ ಶಮಂತ್ ಇನ್ನು ಏನೂ ಉಳಿದಿಲ್ಲ ಎಂದು ಹೇಳುತ್ತಾರೆ.

    ಆದರೆ ನೋ ಎಂದಿದ್ದ ಚಕ್ರವರ್ತಿಯವರು, ಶೋ ಮುಗಿದ ನಂತರ ಎಲ್ಲಾ ಗೊತ್ತಾಗಿರುತ್ತದೆ. ಏನು ಭಯವಿರುವುದಿಲ್ಲ. ಒಂದು ಸಾರಿ ಆ ರೀತಿ ಆಗುವ ತನಕ ಅಷ್ಟೇ. ರಘು ಈಗ ಯಾವ ಕಾನ್ಫಿಡೆಂಟ್ಸ್ ಲೆವರ್‍ನಲ್ಲಿದ್ದಾರೆ ಎಂದರೆ ರೊಚ್ಚು ರಘು ಆಗಿದ್ದಾರೆ ಎಂದಿದ್ದಾರೆ.

    ಕೊನೆಗೆ ರಘುರವರು ನಾನು ಆ ಆಘಾತದಿಂದ ಆಚೆ ಬರುವುದಕ್ಕೆ ಆಗುತ್ತಿಲ್ಲ ಎಂದಾಗ, ಸುದೀಪ್‍ರವರು ಪ್ರಶಾಂತ್‍ರವರಿಗೂ ಬರಲು ಆಗುತ್ತಿಲ್ಲ ಎನ್ನುತ್ತಾರೆ. ಈ ವೇಳೆ ರಘು ಪ್ರಶಾಂತ್‍ರವರಿಗೆ ಆಘಾತವಾಗಿರುವಂತೆ ನನಗೆ ಒಂದು ಪರ್ಸೆಂಟ್ ಕೂಡ ಕಾಣಿಸುತ್ತಿಲ್ಲ. ಸ್ನಾನಕ್ಕೆ ಹೋಗುವುದಕ್ಕೂ ಮುನ್ನ ಸೋಪ್, ಶ್ಯಾಂಪೂ ಎಲ್ಲ ಇದ್ಯಾ ಎಂದು ಚೆಕ್ ಮಾಡುತ್ತೇನೆ. ಆದರೆ ಅವತ್ತು ಜಗ್‍ನನ್ನು ಮರೆತು ಹೋಗಿದ್ದೆ ಅಷ್ಟೇ ಸರ್. ಬಾಗಿಲು ತೆರೆದು ಸ್ವಲ್ಪ ಕೈ ಆಚೆ ಹಾಕಿದ್ದೆ ಅಷ್ಟೋತ್ತಿಗೆ ಇವರು ಬಂದು ಬಿಟ್ಟರು. ಅದರಲ್ಲೂ ಅಂದು ನನ್ನನ್ನು ಎಳೆದು ಈಚೆ ಎಲ್ಲಿ ಹಾಕಿಬಿಡುತ್ತಾರೋ ಎಂದು ಭಯವಾಗಿತ್ತು ಎಂದು ಹೇಳುತ್ತಾರೆ. ಈ ವೇಳೆ ರಘು ಮಾತು ಕೇಳಿ ಮನೆಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ.