Tag: ಪ್ರಶಾಂತ್ ಸಂಬರ್ಗಿ

  • ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

    ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

    ಬಿಗ್ ಬಾಸ್ ಮನೆಯ(Bigg Boss House) ಆಟ ಇದೀಗ ಹೈವೋಲ್ಟೇಜ್‌ನಿಂದ ಕೂಡಿದೆ. ದಿನಕಳೆದಂತೆ ಸ್ಪರ್ಧಿಗಳ ಜಟಾಪಟಿ ಜೋರಾಗಿದೆ. ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ವಿಚಾರವಾಗಿ ರೂಪೇಶ್ ರಾಜಣ್ಣ ಮತ್ತು ಅನುಪಮಾ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಅನುಪಮಾ ನಡೆಗೆ ಸೂಟ್ ಕೇಸ್ ಹಿಡಿದು ಹೊರಗೆ ಹೋಗಲು ರೂಪೇಶ್ ರಾಜಣ್ಣ(Roopesh Rajanna) ಮುಂದಾಗಿದ್ದಾರೆ.

    ದೊಡ್ಮನೆ ಈಗ ಮುಂಚೆ ಇದ್ದ ಹಾಗೆ ಶಾಂತ ವಾತಾವರಣವಿಲ್ಲ. ಸಾಕಷ್ಟು ರೋಚಕ ತಿರುವು ಪಡೆದು ಮುನ್ನಗ್ಗುತ್ತಿದೆ. ಕ್ಯಾಪ್ಟೆನ್ಸಿ ಪಟ್ಟ ಏರಲು ಬಿಗ್ ಬಾಸ್ ಕೊಟ್ಟಿದ್ದ ಟಾಸ್ಕ್‌ನಿಂದ ಈಗ ಮನೆಯಲ್ಲಿನ ಕಲಹಕ್ಕೆ ಕಾರಣವಾಗಿದೆ.. ಟಾಸ್ಕ್‌ವೊಂದರಲ್ಲಿ ಮೊದಲು ಬಝರ್ ಒತ್ತಿದ್ದು ನಾನು ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದಿದ್ದಾರೆ. ಬಿಗ್ ಬಾಸ್ ಬಳಿ ಅನುಪಮಾ ಅಪೀಲ್ ಮಾಡಲಿಲ್ಲ ಎಂಬ ಕಾರಣಕ್ಕೆ ರೂಪೇಶ್ ರಾಜಣ್ಣ ಗರಂ ಆಗಿದ್ದಾರೆ. ಇದೇ ಕಾರಣಕ್ಕೆ ಸೂಟ್ ಕೇಸ್‌ಗಳನ್ನ ಹಿಡಿದು ಹೊರಗೆ ಹೋಗಲು ರೂಪೇಶ್ ರಾಜಣ್ಣ ಮುಂದಾಗಿದ್ದಾರೆ. ಕೊನೆಗೆ ನನ್ನ ತಪ್ಪಿದ್ದರೆ ನಾನೇ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ ಎಂದು ರಾಜಣ್ಣ ಅವರಿಗೆ ಅನುಪಮಾ(Anupama Gowda) ಕೇಳಿಕೊಂಡಿದ್ದಾರೆ. ಇದನ್ನೂ ಓದಿ:ಸಚಿವ ವಿ.ಸೋಮಣ್ಣ ಪುತ್ರ ಮತ್ತು ನಟ ಸೃಜನ್ ಲೋಕೇಶ್ ಮಧ್ಯ ಡಿಶುಂ ಡಿಶುಂ?

    ಮುಂದಿನ ವಾರ ಕ್ಯಾಪ್ಟನ್ ಆಗಲು ನಡೆದ ಜಟಾಪಟಿಯಲ್ಲಿ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಒಂದೇ ಸಮಯಕ್ಕೆ ಬಝರ್ ಒತ್ತಿದರು. ಸಂಬರ್ಗಿ ಮೊದಲು ಬಝರ್ ಒತ್ತಿದರು ಅಂತ ಅನುಪಮಾ ಹೇಳಿದ್ದರು. ಆಗ ನಾನು ಮೊದಲು ಒತ್ತಿದ್ದು ಅನ್ನೋದು ರೂಪೇಶ್ ರಾಜಣ್ಣ ಅವರ ವಾದವಾಗಿತ್ತು. 100% ನಾನು ಮುಟ್ಟಿದ್ಮೇಲೆ ಪ್ರಶಾಂತ್ ಸಂಬರ್ಗಿ ಮುಟ್ಟಿದ್ದು. ದೇವರಿದ್ದಾನೆ ಎಂದು ರಾಜಣ್ಣ ಹೇಳಿದರು. ಇದರಿಂದ ಕೋಪಗೊಂಡ ಅನುಪಮಾ, ಆ ಲೈನ್ ಹೇಳಬೇಡಿ. ನಾನಿಲ್ಲಿ ಯಾರಿಗೂ ಫೇವರ್ ಮಾಡ್ತಿಲ್ಲ. ಎಕ್ಸ್ಟ್ರಾಲೈನ್ ಹೇಳಬೇಡಿ ಎಂದರು.

    ನಾನು ಬಿಗ್ ಬಾಸ್ ಮನೆಯ ರಸ್ತೆ ಮೇಲೆ ಮಲಗುತ್ತೇನೆ. ನ್ಯಾಯಕ್ಕಾಗಿ ಹೋರಾಡುತ್ತೇನೆ. ಗೊಂದಲ ಇದ್ದರೆ ಕೇಳಿಕೊಳ್ಳಿ ಅಂತ ಮೊದಲೇ ಹೇಳಿದ್ದೆ. ಆದರೆ, ಕೇಳದೆ ನೇರವಾಗಿ ಘೋಷಣೆ ಮಾಡಿದರು ಎಂದು ಕ್ಯಾಮರಾ ಮುಂದೆ ರಾಜಣ್ಣ ಹೋರಾಟಕ್ಕಿಳಿದರು. ಆಟ ಆಡುವುದಿಲ್ಲ ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದರು.  ಈ ವೇಳೆ, ನಾನು ತಪ್ಪು ಮಾಡಿದ್ರೆ ಬಿಗ್ ಬಾಸ್ ಶಿಕ್ಷೆ ಕೊಡಲಿ. ಬೇಕಿದ್ದರೆ, ನಾನೇ ಹೊರಗೆ ಹೋಗುತ್ತೇನೆ ಎಂದರು ಅನುಪಮಾ. ಆದರೂ ರಾಜಣ್ಣ ಅವರ ಮನವೊಲಿಸಲು ಅನುಪಮಾ ಕಡೆಗೂ ಸೋಲಲೇ ಬೇಕಾಯಿತು.

    Live Tv
    [brid partner=56869869 player=32851 video=960834 autoplay=true]

  • ಗರ್ಲ್‌ಫ್ರೆಂಡ್ಸ್‌ ಬಗ್ಗೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಗರಂ

    ಗರ್ಲ್‌ಫ್ರೆಂಡ್ಸ್‌ ಬಗ್ಗೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಗರಂ

    ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಸಾನ್ಯ ಅಯ್ಯರ್ ಅವರ ನಡೆ, ನುಡಿ ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದೀಗ ಮತ್ತೆ ಸಾನ್ಯ ಮಾತು ಪ್ರಶಾಂತ್ ಸಂಬರ್ಗಿ ಅವರ ಬೇಸರಕ್ಕೆ ಕಾರಣವಾಗಿದೆ. ಗರ್ಲ್‌ಫ್ರೆಂಡ್ಸ್‌ ಬಗ್ಗೆ ಕಿಚ್ಚನ ಮುಂದೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಕಿಡಿಕಾರಿದ್ದಾರೆ.

    ದೊಡ್ಮನೆಯಲ್ಲಿ ಸಾನ್ಯ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಮೊದಲಿನಿಂದಲೂ ಒಳ್ಳೆಯ ಸ್ನೇಹವಿತ್ತು. ಇಬ್ಬರೂ ಸೇರಿ ರೂಪೇಶ್ ರಾಜಣ್ಣಗೆ ಬಕ್ರಾ ಮಾಡಿದ್ದರು. ಇದೀಗ ಸಾನ್ಯ ಮತ್ತು ಸಂಬರ್ಗಿ ನಡುವೆ ಕಿಡಿ ಹೊತ್ತಿಕೊಂಡಿದೆ. ನನ್ನ ಇಮೇಜ್ ಡ್ಯಾಮೇಜ್ ಮಾಡಬೇಡ ಎಂದು ಸಾನ್ಯಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಸಂಬರ್ಗಿ

    ಕಿಚ್ಚನ ವಾರ ಪಂಚಾಯಿತಿಯಲ್ಲಿ ಯಾರಿಗೆ ಉಡುಗೊರೆ ಕೊಡಲು ಬಯಸುತ್ತೀರಿ ಎಂದು ಸಾನ್ಯಗೆ ಕಿಚ್ಚ ಸುದೀಪ್ ಪ್ರಶ್ನಿಸಿದ್ದರು. ಆಗ,ಪ್ರಶಾಂತ್ ಸಂಬರ್ಗಿಗೆ ಅವರಿಗೆ ಅವರ ಹೆಂಡತಿ ಫೋಟೋ ಬೇಕೋ, ಗರ್ಲ್‌ಫ್ರೆಂಡ್ಸ್ ಫೋಟೋ ಬೇಕೋ, ಯಾವುದು ಬೇಕೋ ಅದು ಪಾಲಾಗುತ್ತೆ ಸರ್ ಎಂದರು ಸಾನ್ಯ. ಗರ್ಲ್‌ಫ್ರೆಂಡ್ಸ್ ವಿಚಾರ ಯಾಕೆ ಎಂದು ಕಿಚ್ಚ ಸುದೀಪ್ ಕೇಳಿದಾಗ, ಅವರು ಜಮಾನದಲ್ಲಿ ಇರಬೇಕಾದರೆ ಅವರಿಗೆ ಸಿಕ್ಕಾಪಟ್ಟೆ ಗರ್ಲ್‌ಫ್ರೆಂಡ್ಸ್ ಇದ್ದರು. ಹಳೇ ನೆನಪುಗಳನ್ನ ಮೆಲುಕು ಹಾಕಿ ಇನ್ನೂ ಯಂಗ್ ಆಗಲಿ ಅಂತ ಎಂದು ಸಾನ್ಯ ಅಯ್ಯರ್ ಉತ್ತರಿಸಿದರು. ಇದಾದ ಬಳಿಕ ಇದು ಡ್ಯಾಮೇಜಿಂಗ್ ಆಗಿದೆ ಎಂದು ಸಂಬರ್ಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆ

    ಕ್ಯಾಮೆರಾ ಮುಂದೆ ಹೇಳೋದಕ್ಕೂ, ಸ್ಟೇಜ್ ಮೇಲೆ ಮಾತನಾಡೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ ನನ್ನ ಇಮೇಜ್ ಡ್ಯಾಮೇಜ್ ಮಾಡಬೇಡ ಎಂದು ಪ್ರಶಾಂತ್ ಸಂಬರ್ಗಿ ಸಾನ್ಯಗೆ ವಾರ್ನಿಂಗ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯೋತ್ಸವ ದಿನವೇ ಕೋಪ: ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ

    ರಾಜ್ಯೋತ್ಸವ ದಿನವೇ ಕೋಪ: ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ

    ನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna) ಕೋಪ ಮಾಡಿಕೊಳ್ಳುವುದು, ಕಿತ್ತಾಡಿಕೊಳ್ಳುವುದು, ಜೋರು ಧ್ವನಿಯಲ್ಲಿ ಮಾತನಾಡುವುದು ಹೊಸದೇನೂ ಅಲ್ಲ. ಬಿಗ್ ಬಾಸ್ ಮನೆಯಲ್ಲಿರುವ ಹಲವಾರು ಜನರ ಜೊತೆ ಅವರು ಹೀಗೆ ಕೋಪ ಮಾಡಿಕೊಂಡಿದ್ದಾರೆ. ಜಗಳವನ್ನೂ ಆಡಿದ್ದಾರೆ. ಆದರೆ, ಪ್ರಶಾಂತ್ ಸಂಬರ್ಗಿ ವಿಷಯದಲ್ಲಿ ಅವರು ಪದೇ ಪದೇ ರೊಚ್ಚಿಗೇಳುತ್ತಲೇ ಇರುತ್ತಾರೆ.

    ಇವತ್ತು ಕೂಡ ಬಿಗ್ ಬಾಸ್ ಮನೆಯಲ್ಲಿ ಜೋರಾಗಿಯೇ ಗಲಾಟೆ ಆಗಿದ್ದು, ರೂಪೇಶ್ ರಾಜಣ್ಣ ತಮ್ಮ ಬ್ಯಾಗ್ ತಗೆದುಕೊಂಡು ದೊಡ್ಮನೆಯಿಂದ ಹೊರ ಹೋಗುವುದಾಗಿ ಅಬ್ಬರಿಸಿದ್ದಾರೆ. ಬ್ಯಾಗ್ ಎತ್ತಿಕೊಂಡು ಮನೆಯಿಂದ ತಮ್ಮನ್ನು ಕಳುಹಿಸುವಂತೆ ಮನೆಯ ಮುಖ್ಯ ಬಾಗಿಲಿನವರೆಗೂ ಬಂದಿದ್ದಾರೆ. ಅವರು ಇಂಥದ್ದೊಂದು ನಿರ್ಧಾರ ತಗೆದುಕೊಳ್ಳುವುದಕ್ಕೆ ಕಾರಣವಾಗಿದ್ದು ಕ್ಯಾಪ್ಟನ್ಸಿ ಟಾಸ್ಕ್. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಇದೀಗ ಬಿಗ್ ಬಾಸ್ (Bigg Boss Season 9) ಮನೆಯ ಕ್ಯಾಪ್ಟನ್ ಆಗಿ ಅನುಪಮಾ ಗೌಡ ಆಯ್ಕೆಯಾಗಿದ್ದಾರೆ. ಅವರ ಮುಂದಾಳತ್ವದಲ್ಲಿ ಕ್ಯಾಪ್ಟನ್ಸಿ ಆಯ್ಕೆಯ ಟೆಸ್ಟ್ ನಡೆದಿತ್ತು. ಗಾರ್ಡನ್ ಏರಿಯಾದಲ್ಲಿ ಬಜರ್ ಒಂದನ್ನು ಇಟ್ಟಿದ್ದು, ಮೊದಲು ಈ ಬಜರ್ ಯಾರು ಒತ್ತುತ್ತಾರೋ, ಅವರು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಆಗಲಿದ್ದಾರೆ ಎನ್ನುವುದು ನಿಯಮವಾಗಿತ್ತು. ಅದರಂತೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಓಡುತ್ತಾ ಬಂದು ಇಬ್ಬರೂ ಒಂದೇ ವೇಳೆಗೆ ಬಜರ್ ಮುಟ್ಟಿದರು. ಅದರಂತೆ ಯಾರು ಮೊದಲು ಮುಟ್ಟಿದ್ದು ಎಂಬ ಗೊಂದಲ ಎದುರಾಯಿತು.

    ಮೊದಲು ಬಜರ್ ಮುಟ್ಟಿದ್ದು ನಾನೇ ಎಂದು ಸಂಬರ್ಗಿ (Prashant Sambargi) ಕೈ ಎತ್ತಿದರೆ, ನಾನು ಮುಟ್ಟಿದ್ದು ಎಂದು ರೂಪೇಶ್ ರಾಜಣ್ಣ ಹೇಳಿದರೆ. ಸಂಬರ್ಗಿಯೇ ಮೊದಲು ಮುಟ್ಟಿದ್ದು ಎಂದು ಅನುಪಮಾ ಗೌಡ (Anupama Gowda) ಹೇಳಿದ್ದು ಜಗಳಕ್ಕೆ ಕಾರಣವಾಯಿತು. ಸಂಬರ್ಗಿಯ ಬೆನ್ನಿಗೆ ನಿಂತು ಅವರಿಗೆ ಕ್ಯಾಪ್ಟನ್ ಅನುಪಮಾ ಗೌಡ ಸಪೋರ್ಟ್ ಮಾಡಿದ್ದು ರೂಪೇಶ್ ರಾಜಣ್ಣಗೆ ಸರಿಬರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು. ಈ ರೀತಿಯಾದರೆ ನಾನು ಮನೆಯಲ್ಲಿ ಇರಲಾರೆ ಎಂದು ಬ್ಯಾಗ್ ಸಮೇತ ಹೊರಟು ನಿಂತರು.

    ತಾನು ಮನೆಯಿಂದ ಹೊರ ಹೋಗಬೇಕು, ದಯವಿಟ್ಟು ಬಾಗಿಲು ತೆಗೆಯಿರಿ ಎಂದು ಬಿಗ್ ಬಾಸ್ ಅವರನ್ನು ಕೇಳಿಕೊಂಡರು ರೂಪೇಶ್ ರಾಜಣ್ಣ. ಕೋಪಗೊಂಡಿದ್ದ ರೂಪೇಶ್ ಅವರನ್ನು ರೂಪೇಶ್ ಶೆಟ್ಟಿ ಮತ್ತು ಸಾನ್ಯ ಸಮಾಧಾನಿಸಿದರು. ಆದರೆ, ಅನುಪಮಾ ಗೌಡ ಮಾತ್ರ ತಾವೇನೂ ತಪ್ಪು ಮಾಡಿಲ್ಲ, ಸುಖಾಸುಮ್ಮನೆ ರೂಪೇಶ್ ಕೂಗಾಡಿದ್ರು ಎಂದು ನೊಂದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಬರ್ಗಿಗೆ ಬೌ ಬೌ ಸ್ಟಾರ್ ಬಿರುದು ಕೊಟ್ಟ ಅರುಣ್ ಸಾಗರ್

    ಸಂಬರ್ಗಿಗೆ ಬೌ ಬೌ ಸ್ಟಾರ್ ಬಿರುದು ಕೊಟ್ಟ ಅರುಣ್ ಸಾಗರ್

    ಬಿಗ್ ಬಾಸ್(Bigg Boss Kannada) ಮನೆ ಇದೀಗ 6ನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ವಿಷ್ಯವಾಗಿ ದೊಡ್ಮನೆ ಹೈಲೈಟ್ ಆಗುತ್ತಿದೆ. ಇದೀಗ ಸಂಬರ್ಗಿಗೆ ಅರುಣ್ ಸಾಗರ್ ಭಿನ್ನವಾಗಿರುವ ಸ್ಟಾರ್ ಪಟ್ಟವನ್ನ ಕೊಟ್ಟಿದ್ದಾರೆ. ಪ್ರಶಾಂತ್‌ಗೆ ಬೌ ಬೌ ಸ್ಟಾರ್ ಎಂದು ಕರೆಯುವ ಮೂಲಕ ಅರುಣ್ ಸಾಗರ್(Arun Sagar) ಗಮನ ಸೆಳೆದಿದ್ದಾರೆ.

    ದೊಡ್ಮನೆಯ ಆಟ ಇದೀಗ ಮೊದಲ ದಿನ ಇದ್ದಂತೆ ಇಲ್ಲ. ಶಾಂತವಾಗಿದ್ದ ಮನೆ ಈಗ ರಣರಂಗವಾಗಿದೆ. ಇನ್ನೂ ಕಿಚ್ಚನ ವೀಕೆಂಡ್ ಪಂಚಾಯಿತಿಯಲ್ಲಿ ಸಿನಿಮಾ ಸ್ಟಾರ್‌ಗಳಂತೆ ಮನೆಯ ಸ್ಪರ್ಧಿಗಳಿಗೆ ಯಾರಿಗೆ ಯಾವ ಸ್ಟಾರ್ ಪಟ್ಟ ಕೊಡುತ್ತೀರಾ ಎಂದು ಸುದೀಪ್ ಕೇಳಿದ್ದಾರೆ. ಆಗ ಒಬ್ಬಬ್ಬರು ಒಂದೊಂದು ರೀತಿಯ ಭಿನ್ನ ಉತ್ತರವನ್ನ ಕೊಟ್ಟಿದ್ದರೆ, ಅರುಣ್ ಸಾಗರ್ ಅವರ ಉತ್ತರ ಮನೆಮಂದಿಯ ನಗುವಿಗೆ ಕಾರಣವಾಗಿದೆ. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

    ಪ್ರಶಾಂತ್ ಸಂಬರ್ಗಿ(Prashanth Sambargi) ಅವರಿಗೆ ನಾನು ಬೌ ಬೌ ಸ್ಟಾರ್ ಪಟ್ಟ ಕೊಡುತ್ತೀನಿ ಎಂದು ಅರುಣ್ ಸಾಗರ್ ಹೇಳಿದ್ದಾರೆ. ಅವರು ಯಾವಾಗಲೂ ನಾನ್ ಸ್ಟಾಪ್ ಆಗಿ ಮಾತನಾಡುತ್ತಾರೆ, ಜಗಳ ಆಡುತ್ತಾರೆ ಅವರಿಗೆ ಬೌ ಬೌ ಸ್ಟಾರ್ ಎಂಬ ಬಿರುದು ಕೊಡುತ್ತೀನಿ ಎಂದಿದ್ದಾರೆ. ಅರುಣ್ ಮಾತಿಗೆ ಸುದೀಪ್ ಸೇರಿದಂತೆ ಮನೆಮಂದಿಯ ಜೊತೆ ಸಂಬರ್ಗಿ ಕೂಡ ಇದನ್ನ ಪಾಸಿಟಿವ್ ಆಗಿ ತೆಗೆದುಕೊಂಡು ನಕ್ಕಿದ್ದಾರೆ.

    ಇನ್ನೂ ರೂಪೇಶ್ ರಾಜಣ್ಣ(Roopesh Rajanna) ಅವರಿಗೆ ರೂಪೇಶ್ ಶೆಟ್ಟಿ, ಕಂಟಿನಿಟಿ ಸ್ಟಾರ್ ಬಿರುದು ಕೊಟ್ಟಿದ್ದಾರೆ. ಅವರು ಯಾವಾಗಲೂ ಹೇಳಿದ್ದನ್ನೇ ಹೇಳುತ್ತಾರೆ ಎಂದು ಮಾತನಾಡಿದ್ದಾರೆ. ಇದಕ್ಕೆ ಮನೆಮಂದಿ ಕೂಡ ನಿಜ ಎಂದು ಬಿದ್ದು ಬಿದ್ದು ನಕ್ಕಿದ್ದಾರೆ. ಅದರಲ್ಲೂ ಬೌ ಬೌ ಸ್ಟಾರ್ ಬಿರುದು ಎಲ್ಲರನ್ನೂ ನಗಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ರಾಜಣ್ಣ- ಪ್ರಶಾಂತ್ ಸಂಬರ್ಗಿ ‘ಲೇ..’ ಜಗಳ: ರಣರಂಗವಾಯ್ತು ಬಿಗ್ ಬಾಸ್ ಮನೆ

    ರೂಪೇಶ್ ರಾಜಣ್ಣ- ಪ್ರಶಾಂತ್ ಸಂಬರ್ಗಿ ‘ಲೇ..’ ಜಗಳ: ರಣರಂಗವಾಯ್ತು ಬಿಗ್ ಬಾಸ್ ಮನೆ

    ಬಿಗ್ ಬಾಸ್ ಮನೆಯಲ್ಲಿ ಹಾವು ಮುಂಗಸಿಯಂತಿದ್ದ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ (Prashant Sambargi) ಕಳೆದೊಂದು ವಾರದಿಂದ ತೀರಾ ಹತ್ತಿರವಾಗಿದ್ದರು. ಒಡಹುಟ್ಟಿದವರಂತೆ ಅನ್ಯೋನ್ಯವಾಗಿದ್ದರು. ಸ್ವತಃ ಬಿಗ್ ಬಾಸ್ಸೇ ಅಚ್ಚರಿ ಪಡುವಷ್ಟು ಒಬ್ಬರಿಗೊಬ್ಬರು ಗೌರವ ಕೊಟ್ಟುಕೊಂಡು ದಿನಗಳನ್ನು ದುಡುತ್ತಿದ್ದರು. ಆದರೆ, ದೀಪಾವಳಿ ದಿನದಂದು ಲಕ್ಷ್ಮಿ ಪಟಾಕಿ ಸಿಡಿಯುವಂತೆ ಇಬ್ಬರೂ ಸಿಡಿದುಕೊಂಡಿದ್ದಾರೆ. ಇವರಿಬ್ಬರ ಮಾತಿಗೆ ಬಿಗ್ ಬಾಸ್ ಮನೆ ರಣರಂಗವಾಗಿ ಮಾರ್ಪಟಿದೆ.

    ಕಳೆದ ನಾಲ್ಕೈದು ದಿನಗಳಿಂದ ರೂಪೇಶ್ ರಾಜಣ್ಣ (Rupesh Rajanna)ನನ್ನು ಪ್ರ್ಯಾಂಕ್ ಮಾಡುತ್ತಾ, ಮಜಾ ತಗೆದುಕೊಳ್ಳುತ್ತಿದ್ದರು ಪ್ರಶಾಂತ್ ಸಂಬರ್ಗಿ. ದೆವ್ವದ ವಿಚಾರವಾಗಿ ಕಾವ್ಯಶ್ರೀ ಗೌಡ ಮತ್ತು ಪ್ರಶಾಂತ್ ಸಂಬರ್ಗಿ ಹೂಡಿದ್ದ ಆಟಕ್ಕೆ ರೂಪೇಶ್ ರಾಜಣ್ಣ ಕ್ಲೀನ್ ಬೋಲ್ಡ್ ಆಗಿದ್ದರು. ಹೀಗಾಗಿ ರೂಪೇಶ್ ಮತ್ತು ಪ್ರಶಾಂತ್ ನಡುವೆ ಸ್ನೇಹ ಗಟ್ಟಿಯಾಗುತ್ತಿತ್ತು. ಆದರೆ, ದೀಪಾವಳಿ ದಿನದಂದು ಆಡಿದ ಆಟ ಮಾತ್ರ ಇಬ್ಬರನ್ನೂ ಕೆರಳಿಸಿತ್ತು. ದೀಪಾವಳಿ ಸಂಭ್ರಮವನ್ನು ನುಂಗಿತ್ತು. ಇಬ್ಬರ ಕಿತ್ತಾಟದಲ್ಲಿ ಬಿಗ್ ಬಾಸ್ ಮನೆಯ ಉಳಿದ ಸದಸ್ಯರು ಕೂಡ ಆತಂಕಗೊಂಡರು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ‘ಉಡುಗೊರೆ ಬೇಕಾ, ಕ್ಯಾಪ್ಟನ್ಸಿ ಪಾಯಿಂಟ್ಸ್ ಬೇಕಾ’ ವಿಚಾರವು ಅರುಣ್ ಸಾಗರ್ (Arun Sagar) ಸೇರಿದಂತೆ ಹಲವು ಸದಸ್ಯರನ್ನು ಚರ್ಚೆಗೀಡು ಮಾಡಿತ್ತು. ಮೊದಲ ಹಂತದ ಚರ್ಚೆಯಲ್ಲಿ ಅರುಣ್ ಸಾಗರ್ ಮತ್ತು ರೂಪೇಶ್ ರಾಜಣ್ಣ ಸಣ್ಣದಾಗಿ ಕಿತ್ತಾಡಿಕೊಂಡರು. ರೂಪೇಶ್ ಅವರಿಗೆ ದುರಾಸೆ ಎಂದು ಅರುಣ್ ಆಡಿದ ಮಾತು ರೂಪೇಶ್ ರಾಜಣ್ಣರನ್ನು ಕೆರಳಿಸಿತ್ತು. ಇವರಿಬ್ಬರ ನಡುವಿನ ಕಿತ್ತಾಟದಲ್ಲಿ ಪ್ರಶಾಂತ್ ಸಂಬರ್ಗಿ ಮೂಗು ತೂರಿಸಿದರು. ಪ್ರಶಾಂತ್ ಎಂಟ್ರಿ ಕೊಡುತ್ತಿದ್ದಂತೆಯೇ ಜಗಳ ಬೇರೆ ಹಂತ ತಲುಪಿತು.

    ಅರುಣ್ ಮತ್ತು ರೂಪೇಶ್ ನಡುವಿನ ಗಲಾಟೆಗೆ  ಉರಿವ ಬೆಂಕಿಗೆ ತುಪ್ಪ ಸುರಿದಂತೆ ಅರುಣ್ ಪರ ಬ್ಯಾಟ್ ಬೀಸಿದರು ಪ್ರಶಾಂತ್. ಅದರಿಂದ ಮತ್ತಷ್ಟು ಕುಪಿತಗೊಂಡ ರೂಪೇಶ್ ರಾಜಣ್ಣ ಸಿಡಿದೆದ್ದು ಬಿಟ್ಟರು. ಮಾತಿನ ಭರಾಟೆಯಲ್ಲಿ ರೂಪೇಶ್ ಅವರನ್ನು ‘ಲೇ..’ ಎಂದು ಕರೆದುಬಿಟ್ಟರು ಪ್ರಶಾಂತ್ ಸಂಬರ್ಗಿ. ರೂಪೇಶ್ ರಾಜಣ್ಣ ಮತ್ತಷ್ಟು ಸಿಟ್ಟಾಗಿ ಹೊಡೆಯಲೆಂದು ಹೊರಟರು. ಇಬ್ಬರೂ ಕೈ ಕೈ ಮಿಲಾಯಿಸಿದರು. ದೀಪಾವಳಿ ಸಂಭ್ರಮದಲ್ಲಿದ್ದ ಬಿಗ್ ಬಾಸ್ ಮನೆ ರಣರಂಗವಾಯಿತು. ರೂಪೇಶ್ ಶೆಟ್ಟಿ (Rupesh Shetty) ಇವರನ್ನು ಸಮಾಧಾನ ಪಡಿಸದೇ ಇದ್ದರೆ, ಬಿಗ್ ಬಾಸ್ ಮನೆ ಇನ್ನೇನಾಗುತ್ತಿತ್ತೋ. ಈ ಗಲಾಟೆ ಕಿಚ್ಚನ ಪಂಚಾಯತಿಯಲ್ಲಿ ಯಾವೆಲ್ಲ ಚರ್ಚೆಯನ್ನು ಹುಟ್ಟು ಹಾಕತ್ತೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ದೆವ್ವ: ಲಿಂಬೆಹಣ್ಣು ಇಟ್ಕೊಂಡಿದ್ದಾರಂತೆ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ಮನೆಯಲ್ಲಿ ದೆವ್ವ: ಲಿಂಬೆಹಣ್ಣು ಇಟ್ಕೊಂಡಿದ್ದಾರಂತೆ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ (Bigg Boss Season 9 ) ಮನೆಯಲ್ಲಿ ಇದೀಗ ದೆವ್ವದ್ದೇ ಸದ್ದು. ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಗೌಡ ಮಧ್ಯೆ ದೆವ್ವಗಳ ಬಗ್ಗೆ ರಸವತ್ತಾದ ಚರ್ಚೆ ನಡೆಯುತ್ತಿದೆ. ರೂಪೇಶ್ ಕೊಂಚ ಭಯಗೊಂಡಂತೆ ಕಂಡರೆ, ಇವರನ್ನು ಭಯಕ್ಕೆ ಬೀಳಿಸಿದ್ದಾರೆ ಕಾವ್ಯಶ್ರೀ ಗೌಡ. ಈ ಕಥೆಗೆ ಸ್ಕ್ರಿಪ್ಟ್ ಬರೆದು, ನಿರ್ದೇಶನ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ದೆವ್ವಗಳ ಕಾರುಬಾರು ಶುರುವಾಗಿದೆ. ಪ್ರಶಾಂತ್ ಸಂಬರ್ಗಿ ತನ್ನ ಜೇಬಿನಲ್ಲಿ ಲಿಂಬೆಹಣ್ಣು ಇಟ್ಟುಕೊಂಡು ದೆವ್ವಗಳಿಂದ ರಕ್ಷಣೆ ಪಡೆದುಕೊಂಡಿದ್ದಾರಂತೆ.

    ರೂಪೇಶ್ ಶೆಟ್ಟಿ ಬಳಿ ಬರುವ ಕಾವ್ಯಶ್ರೀ ಗೌಡ (Kavyashree Gowda), ದೆವ್ವಗಳ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ‘ಪ್ರಶಾಂತ್ ಸಂಬರ್ಗಿ ಸಖತ್ ಪುಕ್ಕಲು. ಯಾವುದೋ ಒಂದು ಶಬ್ದಕ್ಕೆ ಹೆದರಿಕೊಂಡಿದ್ದಾರೆ. ದೆವ್ವಗಳು ಇರುವುದು ಅನುಭವಕ್ಕೆ ಬಂದರೆ, ಮಂಚದ ಕೆಳಗೆ ಈರುಳ್ಳಿ ಇಟ್ಟುಕೊಳ್ಳಲು ಅವರ ತಾಯಿ ಹೇಳಿದ್ದಾರಂತೆ. ಹಾಗಾಗಿ ಅವರು ಈರುಳ್ಳಿ ಇಟ್ಟುಕೊಂಡಿದ್ದಾರೆ. ರಾತ್ರಿ ಒಬ್ಬರೇ ಬಾತ್ ರೂಮ್ ಗೆ ಹೋಗುವುದಕ್ಕೂ ಹೆದರಿಕೊಳ್ಳುತ್ತಾರೆ. ಸಡನ್ನಾಗಿ ಮಧ್ಯರಾತ್ರಿ ಎದ್ದು ಕೂರುತ್ತಾರೆ’ ಎಂದೆಲ್ಲ ರೂಪೇಶ್ ಬಳಿ ಕಥೆ ಕಟ್ಟಿದ್ದಾರೆ.

    ಅಷ್ಟಕ್ಕೂ ರೂಪೇಶ್ ಬಳಿಯೇ ಕಾವ್ಯಶ್ರೀ ಗೌಡ ಈ ಕಥೆ ಹೇಳುವುದಕ್ಕೆ ಕಾರಣವಿದೆ. ರೂಪೇಶ್ ಗೆ ಭಯ ಪಡಿಸುವುದಕ್ಕಾಗಿ ಪ್ರಶಾಂತ್ ಸಂಬರ್ಗಿ (Prashant Sambargi), ಕಾವ್ಯಶ್ರೀ ಗೌಡ ಅವರನ್ನು ಬಳಸಿಕೊಂಡಿದ್ದಾರೆ. ದೆವ್ವ (Devil), ಲಿಂಬೆಹಣ್ಣಿನ ಕಥೆಯನ್ನು ಕಾವ್ಯಶ್ರೀ ಗೌಡರಿಂದ ರೂಪೇಶ್ ಶೆಟ್ಟಿಗೆ ಹೇಳಿಸಿದ್ದಾರೆ. ಕೊಂಚ ಭಯದಲ್ಲಿಯೇ ಇರುವ ರೂಪೇಶ್, ತನ್ನ ಅನುಭವಕ್ಕೆ ಬಂದರೆ ಮಾತ್ರ ದೆವ್ವವನ್ನು ನಂಬುತ್ತೇನೆ ಎಂದು ಮಾತನಾಡಿದ್ದಾರೆ. ಅಲ್ಲದೇ, ತಮಗೆ ಇವರಿಬ್ಬರೂ ಫ್ರಾಂಕ್ ಮಾಡುತ್ತಿರಬಹುದಾ? ಎಂದು ಅನುಮಾನವನ್ನೂ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ಶೆಟ್ಟಿ (Rupesh Shetty) ಮತ್ತೆ ಮತ್ತೆ ದೆವ್ವಗಳ ವಿಚಾರವನ್ನು ಚರ್ಚೆ ಮಾಡುತ್ತಾ, ಮನೆಯ ಇತರ ಸದಸ್ಯರಿಗೂ ಭಯ ಹುಟ್ಟಿಸುತ್ತಿದ್ದಾರೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಹೂಡಿರುವ ಈ ನಾಟಕಕ್ಕೆ ರೂಪೇಶ್ ಶೆಟ್ಟಿ ಬಕ್ರಾ ಆಗ್ತಾರಾ? ಅಥವಾ ಇವರು ತಮಾಷೆ ಮಾಡುತ್ತಿರುವ ವಿಚಾರವನ್ನು ಅರಿತುಕೊಳ್ಳುತ್ತಾರಾ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ದೆವ್ವದ ಕಥೆ ಸದ್ಯಕ್ಕೆ ರೋಚಕತೆ ಹುಟ್ಟು ಹಾಕಿದೆ. ದೆವ್ವ ಯಾರನ್ನು ಎಷ್ಟು ಕಾಡುತ್ತದೆ ಎಂದು ಕಾದು ನೋಡೋಣ.

    Live Tv
    [brid partner=56869869 player=32851 video=960834 autoplay=true]

  • ದೇವರು ಮೆಚ್ಚೋದಿಲ್ಲ ಎಂದು ಸಾನ್ಯ ವಿರುದ್ಧ ರಾಂಗ್ ಆದ ಸಂಬರ್ಗಿ

    ದೇವರು ಮೆಚ್ಚೋದಿಲ್ಲ ಎಂದು ಸಾನ್ಯ ವಿರುದ್ಧ ರಾಂಗ್ ಆದ ಸಂಬರ್ಗಿ

    ದೊಡ್ಮನೆ ನಾಲ್ಕನೇ ವಾರದಲ್ಲಿ ಸಂಬರ್ಗಿ(Prashanth Sambargi) ಹಾಗೂ ಸಾನ್ಯ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಇಬ್ಬರೂ ಸೇರಿಕೊಂಡು ರೂಪೇಶ್ ರಾಜಣ್ಣ ಅವರನ್ನ ಪ್ರ್ಯಾಂಕ್ ಮಾಡುತ್ತಿದ್ದರು. ಹೀಗಿರುವಾಗಲೇ, ಇಬ್ಬರ ಮಧ್ಯೆ ಬೇಸರ ಮೂಡಿದೆ. ಸಾನ್ಯ(Sanya Iyer) ಅವರ ನಡೆಯಿಂದ ಪ್ರಶಾಂತ್ ಸಂಬರಗಿ ಗರಂ ಆಗಿದ್ದಾರೆ. ನಿನ್ನನ್ನ ದೇವರು ಮೆಚ್ಚೋದಿಲ್ಲ. ನಿನಗೆ ಒಳ್ಳೆಯದಾಗಲ್ಲ ಎಂದು ಸಾನ್ಯಗೆ ಪ್ರಶಾಂತ್ ಸಂಬರ್ಗಿ ಹಿಡಿ ಶಾಪ ಹಾಕಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ(Bigg Boss House) ನಾಲ್ಕನೇ ವಾರ ದೀಪಿಕಾ ದಾಸ್ (Deepika Das) ಕ್ಯಾಪ್ಟನ್ ಆಗಿದ್ದರು. ವಾರಾಂತ್ಯದಲ್ಲಿ ಉತ್ತಮ ಮತ್ತು ಕಳಪೆ ಕೊಡುವ ಸಂದರ್ಭದಲ್ಲಿ ಸಾನ್ಯ, ಸಂಬರ್ಗಿಗೆ ಕಳಪೆ ಕೊಟ್ಟಿದ್ದಕ್ಕೆ ಫುಲ್ ರಾಂಗ್ ಆಗಿದ್ದಾರೆ.

    ತುಂಬಾ ಎಕ್ಸ್ಪೆಕ್ಟ್ ಮಾಡಿದ್ದೆ. ಆದರೆ, ಸ್ಟ್ರಾಟೆಜಿಗಳು ಅನುಪಮಾ, ರಾಕೇಶ್ ಬಾಯಿಂದ ಬರುತ್ತಿತ್ತು. ಯಾವ ಟಾಸ್ಕ್‌ ನಾವು ಗೆದ್ದಿದ್ದೀವಿ, ಯಾವ ಟಾಸ್ಕ್ನ ನಾವು ಸೋತಿದ್ದೀವಿ ಅನ್ನೋ ಕ್ಲಾರಿಟಿ ನಮ್ಮ ಟೀಮ್ ಕ್ಯಾಪ್ಟನ್ ಪ್ರಶಾಂತ್ ಸಂಬರ್ಗಿಗೆ ಅರಿವಿಲ್ಲ ಅಂದ್ರೆ ಪ್ರಯೋಜನ ಏನು ಎಂದು ಹೇಳಿ ಸಂಬರ್ಗಿ ಅವರ ಹೆಸರನ್ನ ಕಳಪೆಗೆ ಸಾನ್ಯ ಸೂಚಿಸಿದರು. ಬಳಿಕ ಅನುಪಮಾ ಕೂಡ ಕಳಪೆ ಬೋರ್ಡ್ ಕೊಟ್ರು. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ಅನುಪಮಾ ನಿರ್ಧಾರ ತೆಗೆದುಕೊಳ್ತಿದ್ದಾರೆ ಅಂತ ನೀನು ಹೇಳಿದ್ಯಾ ಇಲ್ವಾ ಈ ವಿಷಯ ನಿನ್ನ ಬಾಯಿಂದ ಬಂದಿದ್ದಕ್ಕೆ ಹೇಳಿದೆ ಹೊರತು ಇನ್ನೇನೂ ಅಲ್ಲ. ನಾನು ಅನುಪಮಾ ಕಣ್ಣಲ್ಲಿ ಬೀಳೋಕೆ ನನಗೆ ಇಷ್ಟವಿಲ್ಲ. ಯಾಕಂದ್ರೆ, ನಾನು ಅವರ ಮೇಲೆ ತುಂಬಾ ಅಭಿಮಾನ ಇಟ್ಟಿದ್ದೇನೆ. ಅವರೂ ನನ್ನ ಮೇಲೆ ತುಂಬಾ ಅಭಿಮಾನ ಇಟ್ಟಿದ್ದಾರೆ. ಆ ಅಭಿಮಾನ ಹೋಗಬಾರದು. ವಯಸ್ಸಿನಲ್ಲಿ ನಾನು ದೊಡ್ಡವನು ಇದ್ದೇನೆ. ಈ ಚಿಲ್ಲರೆ ಕೆಲಸ ಮಾಡಿ, ಹೆಣ್ಮಕ್ಕಳ ನಡುವೆ ಜಗಳ ಮಾಡಿಸೋವಷ್ಟು ಕೀಳು ಮನಸ್ಥಿತಿ ನನಗೆ ಇಲ್ಲ. ಅನುಪಮಾ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಲೈನ್‌ನ ನೀನು ಹೇಳಿದ್ಯಾ ಇಲ್ವಾ ಅಂತಾ ಸಾನ್ಯಗೆ ಸಂಬರ್ಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಬರ್ಗಿ ಪ್ರಶ್ನೆಗೆ ಸಾನ್ಯ ನೋ ಅಂದಿದ್ದಾರೆ.

    ನನ್ನ ಮಾತನ್ನ ಟ್ವಿಸ್ಟ್ ಮಾಡಿ, ಬೇರೆ ಹೇಳಿ. ಅನುಪಮಾ ಕಣ್ಣಲ್ಲಿ ನನ್ನನ್ನ ಬೀಳಿಸಿದ್ಯಾ. ಅದನ್ನ ದೇವರು ಮೆಚ್ಚೋದಿಲ್ಲ. ನಿನಗೆ ಒಳ್ಳೆಯದೂ ಆಗೋದಿಲ್ಲ. ನೀನು ಬೆಳೆಯುವ ಹುಡುಗಿ. ನಿನಗೆ ಒಳ್ಳೆಯದಾಗಲ್ಲ. ಗುಡ್ ಲಕ್ ಎಂದು ಸಂಬರ್ಗಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿಂತಲ್ಲೇ ಮೂತ್ರ ಮಾಡಿದ್ರೂ ಗೇಮ್ ಬಿಟ್ಟು ಕೊಡದ ಗುರೂಜಿ

    ನಿಂತಲ್ಲೇ ಮೂತ್ರ ಮಾಡಿದ್ರೂ ಗೇಮ್ ಬಿಟ್ಟು ಕೊಡದ ಗುರೂಜಿ

    ಬಿಗ್ ಬಾಸ್ ಮನೆಯ(Bigg Boss House) ಆಟ ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ತಿರುವುಗಳನ್ನು ಪಡೆದು ದೊಡ್ಮನೆಯ ಆಟ ಮುನ್ನುಗ್ಗುತ್ತಿದೆ. ಇದೀಗ ಗುರೂಜಿ ಮಾಡಿರುವ ಕೆಲಸವೊಂದು ಮನೆಯ ನಗುವಿಗೆ ಕಾರಣವಾಗಿದೆ. ಟಾಸ್ಕ್ ಆಡುವಾಗ ನಿಂತಲ್ಲೇ ಮೂತ್ರ ಮಾಡಿದ್ರೂ ಕೂಡ ಎಲ್ಲೂ ಗೇಮ್ ಬಿಟ್ಟು ಕೊಡದೇ ಆರ್ಯವರ್ಧನ್ ಗುರೂಜಿ(Aryavardhan Guruji) ಎದುರಾಳಿ ತಂಡಕ್ಕೆ  ಟಫ್ ಪೈಪೋಟಿ ನೀಡಿದ್ದಾರೆ.

    ದೊಡ್ಮನೆಯಲ್ಲಿ ಬಿಗ್ ಬಾಸ್, ಸ್ಪಧಿಗಳಿಗೆ ಸಾಲು ಸಾಲು ಟಾಸ್ಕ್ ನೀಡುತ್ತಿದ್ದಾರೆ. ದೀಪಿಕಾ ದಾಸ್ (Deepika Das) ಕ್ಯಾಪ್ಟನ್ಸಿಯಲ್ಲಿ ಒಂದರ ಹಿಂದೆ ಒಂದು ರೋಚಕ ಟಾಸ್ಕ್‌ಗಳು ಮೂಡಿ ಬರುತ್ತಿದೆ. ರಾತ್ರಿ ಇಡೀ ಲೈಟ್‌ನ್ನ ಒತ್ತಿ ಹಿಡಿಯುವ ಟಾಸ್ಕ್ ಅನ್ನು ಎರಡು ತಂಡಗಳಾದ `ಧಮ್ ಪವರ್’ ಮತ್ತು `ಕಾಮನಬಿಲ್ಲು’ ತಂಡಕ್ಕೆ ನೀಡಲಾಗಿತ್ತು. ಮೊದಲಿಗೆ ರಾಕೇಶ್(Rakesh Adiga), ಅರುಣ್ ಸಾಗರ್ (Arun Sagar) ಗೇಮ್‌ನಿಂದ ಔಟ್ ಆದರು. ಆ ನಂತರ ಒಬ್ಬಬ್ಬರಾಗಿ ಔಟ್ ಆಗುತ್ತಾ ಬಂದರು.

    ಈ ವೇಳೆ ಕಂಬವನ್ನು ಒತ್ತಿ ಹಿಡಿದ ಗುರೂಜಿಗೆ ವಾಶ್‌ರೂಮ್‌ಗೆ ಹೋಗಬೇಕಾಗಿರುತ್ತದೆ. ಕೈಬಿಟ್ಟರೇ ಔಟ್ ಆಗಬೇಕಾಗುತ್ತದೆ. ಅವರ ತಂಡದವರು ಬೇಕಾದ್ರೆ ಬಿಟ್ಟು ಹೋಗಿ ಎನ್ನುತ್ತಾರೆ. ಆದ್ರೂ ಪಟ್ಟು ಬಿಡದೇ ನಿಲ್ಲುತ್ತಾರೆ. ಕೊನೆಗೆ ವಾಶ್‌ರೂಮ್‌ಗೆ ಹೋದರೆ ಗೇಮ್ ಸೋಲುತ್ತೆ ಅಂತಾ ನಿಂತಲ್ಲೇ ಮೂತ್ರ ಮಾಡಿಕೊಂಡಿದ್ದಾರೆ. ಈ ವಿಷ್ಯಕ್ಕೆ ಮೊದಲು ಮನೆಯವರೆಲ್ಲರೂ ರೇಗಿಸಿದ್ದರು. ಆದರೂ ಗುರೂಜಿ ಛಲ ನೋಡಿ ಮನೆಮಂದಿ ಭೇಷ್ ಎಂದಿದ್ದಾರೆ. ನಂತರ 5 ಜನ ಕಡೆಯವರೆಗೂ ನಿಂತು ತಂಡವನ್ನು ಗೆಲ್ಲಿಸಿದ್ದಾರೆ. `ಕಾಮನಬಿಲ್ಲು’ ತಂಡದ ಗೆಲುವಿಗೆ ಗುರೂಜಿ ಶ್ರಮ ಕೂಡ ಕಾರಣವಾಗಿದೆ. ಇದನ್ನೂ ಓದಿ:ವಿಯೆಟ್ನಾಂನಲ್ಲೂ ಕಾಂತಾರ ಕಂಪು – ಮೊದಲ ಬಾರಿಗೆ ಕನ್ನಡ ಚಿತ್ರ ಬಿಡುಗಡೆ

    ಬಳಿಕ ಮಯೂರಿ ಡ್ರೆಸಿಂಗ್ ರೂಮ್‌ನಲ್ಲಿ ಈ ಬಗ್ಗೆ ಅನುಪಮಾ ಗೌಡ ಜೊತೆ ಚರ್ಚೆ ಮಾಡಿದ್ದಾರೆ. ಆರ್ಯವರ್ಧನ್ ಗುರೂಜಿ ನಿಂತಲ್ಲೇ ಮೂತ್ರ ಮಾಡಿದ್ದ ದೃಶ್ಯ ಕಂಡು ಜೋರಾಗಿ ನಕ್ಕಿದ್ದಾರೆ. ಒಟ್ನಲ್ಲಿ ಗುರೂಜಿ ಆಟ, ಛಲ ಮನೆಮಂದಿಗೆ ಮೆಚ್ಚುಗೆ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ದೀಪಿಕಾ ದಾಸ್ ಖಡಕ್ ಮಾತಿಗೆ ರೂಪೇಶ್ ರಾಜಣ್ಣ ವಾಕ್‌ ಔಟ್

    ದೀಪಿಕಾ ದಾಸ್ ಖಡಕ್ ಮಾತಿಗೆ ರೂಪೇಶ್ ರಾಜಣ್ಣ ವಾಕ್‌ ಔಟ್

    ಬಿಗ್ ಬಾಸ್ ಮನೆಯ(Bigg Boss House) ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಕಷ್ಟು ರೋಚಕ ತಿರುವುಗಳನ್ನ ಪಡೆಯುವುದರ ಮೂಲಕ ದೊಡ್ಮನೆ ಸೌಂಡ್ ಮಾಡುತ್ತಿದೆ. ಇದೀಗ ನಾಲ್ಕನೇ ವಾರದ ಕ್ಯಾಪ್ಟನ್ ಆಗಿರುವ ದೀಪಿಕಾ ದಾಸ್ (Deepika Das) ಮೇಲೆ ರೂಪೇಶ್ ರಾಜಣ್ಣ (Roopesh Rajanna) ಕಿಡಿಕಾರಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ(Bigg Boss) ಪ್ರತಿದಿನವೂ ಭಿನ್ನ ಶೈಲಿಯ ಟಾಸ್ಕ್‌ಗಳನ್ನ ಕೊಡಲಾಗುತ್ತದೆ. ಅದರಂತೆಯೇ ಗುಂಪಿಗೆ ಸೇರದ ಪದವನ್ನ ಗ್ರಹಿಸುವ ಟಾಸ್ಕ್ ಅನ್ನು ಎರಡು ತಂಡಗಳಾದ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ (Roopesh Rajanna) ಟೀಮ್‌ಗೆ ನೀಡಲಾಗಿತ್ತು. ಈ ವೇಳೆ ಗುಂಪಿಗೆ ಸೇರದ ಪದ ಯಾವುದು ಎಂಬುದನ್ನ ಎರಡು ತಂಡಗಳು ತಿಳಿಸಬೇಕು. ಇದನ್ನ ದೀಪಿಕಾ ದಾಸ್ ಸರಿ ಉತ್ತರಕ್ಕೆ ಸಮ್ಮತಿ ಸೂಚಿಸಬೇಕು. ಈ ವೇಳೆ ದೀಪಿಕಾ ದಾಸ್ ನಿರ್ಧಾರಕ್ಕೆ ರೂಪೇಶ್ ರಾಜಣ್ಣ ಸಿಡಿದೆದಿದ್ದಾರೆ. ಇದನ್ನೂ ಓದಿ:ತೆಲುಗಿನ ನಟ ಕಲ್ಯಾಣ್ ರಾಮ್ ಜೊತೆ ಆಶಿಕಾ ರಂಗನಾಥ್ ರೊಮ್ಯಾನ್ಸ್

    ರೂಪೇಶ್ ರಾಜಣ್ಣ ಟೀಮ್ ಆಡುವಾಗ ಕೆಲವೊಂದು ಪ್ರಶ್ನೆಗಳಿಗೆ ದೀಪಿಕಾ ಅಂಕಗಳನ್ನ ಕೊಟ್ಟಿರಲಿಲ್ಲ. ಸಂಬರ್ಗಿ ತಂಡಕ್ಕೆ ಅಂಕಗಳನ್ನ ನೀಡಿರುವುದು ರೂಪೇಶ್ ರಾಜಣ್ಣ ಅವರ ಬೇಸರಕ್ಕೆ ಕಾರಣವಾಗಿದೆ. ಎದುರಾಳಿ ತಂಡಕ್ಕೆ ದೀಪಿಕಾ ದಾಸ್ ಬೆಂಬಲಿಸುತ್ತಿದ್ದಾರೆ ಎಂದು ರಾಜಣ್ಣ ಆರೋಪ ಮಾಡಿದ್ದಾರೆ. ದೀಪಿಕಾ ದಾಸ್ ನಡೆಗೆ ರೂಪೇಶ್ ರಾಜಣ್ಣ ತಂಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೂಪೇಶ್ ರಾಜಣ್ಣ, ದೀಪಿಕಾ ಮಾತಿಗೆ ವಾಕ್ ಔಟ್ ಆಗಿದ್ದಾರೆ.

    ಅಷ್ಟಕ್ಕೂ ಪ್ರಶ್ನೆ ತಪ್ಪಾ, ಅಥವಾ ತಂಡಗಳ ಉತ್ತರ ಸರೀನಾ, ಈ ವಿಚಾರದಲ್ಲಿ ದೀಪಿಕಾ ದಾಸ್ ನಿರ್ಧಾರ ಅದೆಷ್ಟರ ಮಟ್ಟಿಗೆ ಸರಿ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ರೂಪೇಶ್ ರಾಜಣ್ಣಗೆ ನಿಯತ್ತಿದೆ ಎಂದು ಒಪ್ಪಿಕೊಂಡ ಸಂಬರ್ಗಿ

    ಕೊನೆಗೂ ರೂಪೇಶ್ ರಾಜಣ್ಣಗೆ ನಿಯತ್ತಿದೆ ಎಂದು ಒಪ್ಪಿಕೊಂಡ ಸಂಬರ್ಗಿ

    ಬಿಗ್ ಬಾಸ್ ಮನೆಯ(Bigg Boss House) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದೊಡ್ಮನೆಯಲ್ಲಿ ರೂಪೇಶ್ ರಾಜಣ್ಣ(Roopesh Rajanna) ಮತ್ತು ಸಂಬರ್ಗಿ, ಕಿರಿಕ್ ಮಾತಿನ ಮೂಲಕ ಹೈಲೆಟ್ ಆಗಿದ್ದರು. ಇದೀಗ ಎಲ್ಲಾ ಬದಲಾಗಿದೆ. ಇವರಿಬ್ಬರ ಕಾಂಬಿನೇಷನ್ ಜೊತೆ ಸಾನ್ಯ ಬಕ್ರಾ ಐಡಿಯಾ ಇದೀಗ ಕಮಾಲ್ ಮಾಡುತ್ತಿದೆ. ರೂಪೇಶ್ ರಾಜಣ್ಣಗೆ ಪ್ರ‍್ಯಾಂಕ್ ಮಾಡಲು ಸಾನ್ಯಗೆ(Sanya Iyer) ಸಾಥ್ ಕೊಟ್ಟಿದ್ದ ಸಂಬರ್ಗಿಗೆ ಇದೀಗ ರಾಜಣ್ಣ ಅವರ ನಿಯತ್ತು ನೋಡಿ ಭೇಷ್ ಎಂದಿದ್ದಾರೆ.

    ಸಂಬರ್ಗಿ ಮತ್ತು ಸಾನ್ಯ ಇಬ್ಬರೂ ಸೇರಿ ಯಾರನ್ನಾದರೂ ಬಕ್ರಾ ಮಾಡಬೇಕು ಎಂದು ನಿರ್ಧರಿಸಿದರು. ಆಗ ನೆನಪಾಗಿದ್ದು ರೂಪೇಶ್ ರಾಜಣ್ಣ. ಸಾನ್ಯಗೆ ದಿವ್ಯಶಕ್ತಿ ಇದೆ ಎಂದು ಪ್ರಶಾಂತ್ ಸಂಬರ್ಗಿ ನಂಬಿಸುತ್ತಾ ಬಂದರು. ಇದಕ್ಕೆ ಸರಿಹೊಂದುವ ಘಟನೆಗಳನ್ನು ಸಾನ್ಯ ಹಾಗೂ ಪ್ರಶಾಂತ್ ಸಂಬರ್ಗಿ(Prashanth Sambargi) ಕ್ರಿಯೆಟ್ ಮಾಡಿದರು.

    ರೂಪೇಶ್ ರಾಜಣ್ಣ(Roopesh Rajanna) ಅವರ ನೀರು ಕುಡಿಯುವ ಬಾಟಲ್ 10 ದಿನಗಳ ಹಿಂದೆ ಕಳುವಾಗಿತ್ತು. ಇದನ್ನು ಕಳ್ಳತನ ಮಾಡಿದ್ದು ಪ್ರಶಾಂತ್ ಸಂಬರ್ಗಿ. ಇದನ್ನು ದಿವ್ಯಾ ಉರುಡುಗ(Divya Uruduga) ಬೆಡ್ ಪಕ್ಕ ಅಡಗಿಸಿ ಇಟ್ಟಿದ್ದರು ಪ್ರಶಾಂತ್. ಸಾನ್ಯ ಅಯ್ಯರ್ ಅವರ ಬಳಿ ಬಾಟಲ್ ಎಲ್ಲಿದೆ ಎಂಬುದನ್ನು ಪ್ರಶಾಂತ್ ಹೇಳಿದ್ದರು. ನಂತರ ಸಾನ್ಯ ಅವರು ಬಂದು ರೂಪೇಶ್ ರಾಜಣ್ಣ ಬಳಿ ಬಾಟಲ್ ಎಲ್ಲಿದೆ ಎಂಬುದನ್ನು ಹೇಳಿದರು. ಹೋಗಿ ನೋಡಿದಾಗ ಬಾಟಲ್ ಸಿಕ್ಕಿತು. ಆ ಒಂದು ಕ್ಷಣ ರೂಪೇಶ್ ರಾಜಣ್ಣ ದಂಗಾದರು. ಸಾನ್ಯ ಟ್ಯಾಲೆಂಟ್‌ಗೆ ರಾಜಣ್ಣ ಶಾಕ್ ಆದರು.

    ನಂತರ ಬಾಳೆ ಹಣ್ಣಿನ ವಿಚಾರ ಬಂತು. ದೇವರ ಪಕ್ಕದಲ್ಲಿ ಒಂದು ಬಾಳೆ ಹಣ್ಣಿದೆ. ಆ ಬಾಳೆ ಹಣ್ಣು ಒಳಗಿನಿಂದ ಐದು ಕಡೆಗಳಲ್ಲಿ ಕಟ್ ಆಗಿರುತ್ತದೆ. ಅದನ್ನು ನಿಮಗಾಗದ ಐದು ಜನರಿಗೆ ನೀಡಿ. ಅವರು ಸೋಲುತ್ತಾರೆ ಎಂದರು ಪುಟ್ಟಗೌರಿ ಸಾನ್ಯ . ಈ ಪ್ರಕಾರ ಈ ಬಾಳೆ ಹಣ್ಣನ್ನು ರೂಪೇಶ್ ಅವರು ಮೊದಲು ಸಂಬರ್ಗಿಗೆ ನೀಡುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಸುಳ್ಳಾಗಿದೆ. ನಾನು ಇದನ್ನು ಯಾರಿಗೂ ಕೊಡಲ್ಲ. ಆ ರೀತಿ ಮೋಸ ಮಾಡಿ ವಿನ್ ಆಗೋಕೆ ನನಗೆ ಇಷ್ಟ ಇಲ್ಲ ಎಂದಿದ್ದಾರೆ. ರೂಪೇಶ್ ಮಾತನ್ನ ಕೇಳಿ ಪ್ರಶಾಂತ್ ಸಂಬರ್ಗಿಗೆ ಖಷಿಯಾಗಿದೆ. ಅವರ ನಡೆ, ನುಡಿಗೆ ಫಿದಾ ಆಗಿದ್ದಾರೆ. ಇದನ್ನೂ ಓದಿ:ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್

    ಈ ಘಟನೆಯ ಬಳಿಕ ರೂಪೇಶ್ ರಾಜಣ್ಣ ಮೇಲಿದ್ದ ಅಭಿಪ್ರಾಯ ಬದಲಾಗಿದೆ. ಇನ್ನೂ ಐಶ್ವರ್ಯ, ನವಾಜ್ , ದರ್ಶ್ ಮನೆಯಿಂದ ಹೊರಬಂದಿದ್ದಾರೆ. ನಾಲ್ಕನೇ ವಾರ ಯಾವ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ ಎಂಬುದರ ಬಗ್ಗೆ ಪ್ರೇಕ್ಷಕರಿಗೆ ಕುತೂಹಲವಿದೆ.

    Live Tv
    [brid partner=56869869 player=32851 video=960834 autoplay=true]