Tag: ಪ್ರಶಾಂತ್ ಸಂಬರ್ಗಿ

  • ಮತ್ತೆ ಸಂಬರ್ಗಿಗೆ ಕಳಪೆ ಹಣೆಪಟ್ಟಿ, ತಪ್ಪು ಮಾಡುವವರಿಗೆ ಆತ್ಮಸಾಕ್ಷಿ ಇಲ್ವಾ ಎಂದ ಪ್ರಶಾಂತ್

    ಮತ್ತೆ ಸಂಬರ್ಗಿಗೆ ಕಳಪೆ ಹಣೆಪಟ್ಟಿ, ತಪ್ಪು ಮಾಡುವವರಿಗೆ ಆತ್ಮಸಾಕ್ಷಿ ಇಲ್ವಾ ಎಂದ ಪ್ರಶಾಂತ್

    ದೊಡ್ಮನೆಯ ಆಟಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ. ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿರುವ ಮನೆಯಲ್ಲಿ ಮತ್ತೆ ಕಳಪೆ ಹಣೆಪಟ್ಟಿಯ ವಿಚಾರವಾಗಿ ಮನಸ್ತಾಪ ಶುರುವಾಗಿದೆ. ಮತ್ತೆ ಸಂಬರ್ಗಿಗೆ ಕಳಪೆ ಬೋರ್ಡ್ ಕೊಟ್ಟು ಜೈಲಿಗೆ ಮನೆಮಂದಿ ಅಟ್ಟಿದ್ದಾರೆ. ಅದಕ್ಕೆ ಸಂಬರ್ಗಿ ಕೂಡ ನಿಮಗೆ ಆತ್ಮಸಾಕ್ಷಿ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ (Bigg Boss House)  ಇನ್ನೇನು 10 ವಾರಗಳು ಕಂಪ್ಲೀಟ್ ಆಗಲಿದೆ. ಇದೀಗ ವಾರಾಂತ್ಯದಲ್ಲಿ ಯಾರು ಉತ್ತಮ, ಕಳಪೆ ಎಂಬ ವಿಚಾರಕ್ಕೆ ಜಗಳ ಶುರುವಾಗಿದೆ. ಮನೆಯಲ್ಲಿ ಗ್ರೂಪಿಸಂ ಇದೆ. ಒಬ್ಬರು ಒಂದು ಹೆಸರನ್ನ ತೆಗೆದುಕೊಂಡರೆ, ಗುಂಪಿನ ಸದಸ್ಯರು ಅದೇ ಹೆಸರು, ಕಾರಣಗಳನ್ನ ಕಾಪಿ, ಪೇಸ್ಟ್ ಮಾಡ್ತಾರೆ ಎಂದು ಪ್ರಶಾಂತ್ ಸಂಬರ್ಗಿ ಆರೋಪ ಮಾಡಿದ್ದರು. ಇದೇ ವಿಚಾರದ ಕುರಿತಾಗಿ ಕಳೆದ ವಾರ ಕಿಚ್ಚ ಸುದೀಪ್ ಮುಂದೆಯೇ ಚರ್ಚೆ ನಡೆಯಿತು. ಈ ವಾರ ಮತ್ತೆ ಪ್ರಶಾಂತ್ ಸಂಬರ್ಗಿ ಕಳಪೆ ಪಟ್ಟ ಪಡೆದಿದ್ದಾರೆ. ರಾಕೇಶ್ ಅಡಿಗ (Rakesh Adiga) ಗ್ರೂಪ್ ಮತ್ತೆ ನನ್ನನ್ನ ಟಾರ್ಗೆಟ್ ಮಾಡಿದೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ. ಜೊತೆಗೆ ತಪ್ಪು ಮಾಡಿರೋರಿಗೆ ಆತ್ಮಸಾಕ್ಷಿ ಇಲ್ವಾ ಎಂದು ಸಂಬರ್ಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ಕವಿತಾ ಗೌಡ -ಚಂದನ್ ಹೊಸ ಹೋಟೆಲ್ ಓಪನಿಂಗ್

    ಸಂಬರ್ಗಿ ಎರಡು ಬಾರಿ ತಪ್ಪು ಮಾಡಿದ್ದರು. ಅದರಿಂದ 20% ಬ್ಯಾಟರಿ ಮೈನಸ್ ಆಗಿತ್ತು. ಅಲ್ಲದೆ ಮನೆಯವರೊಂದಿಗೆ ಕಾಲ ಕಳೆಯಲು ಹೆಚ್ಚು ಬ್ಯಾಟರಿ ಯೂಸೇಜ್ ಮಾಡಿದ್ದರು ಎಂಬ ಕಾರಣಗಳನ್ನ ಕೊಟ್ಟು ಅಮೂಲ್ಯ, ರಾಕೇಶ್ ಅಡಿಗ, ಅನುಪಮಾ ಗೌಡ, ದಿವ್ಯಾ, ರೂಪೇಶ್ ಶೆಟ್ಟಿ ಹಾಗೂ ಅರುಣ್ ಸಾಗರ್, ಪ್ರಶಾಂತ್ ಅವರನ್ನ ಕಳಪೆ ಎಂದರು.

    10% ಬ್ಯಾಟರ್ ಡೌನ್ ಪ್ರಶಾಂತ್ ಅವರೇ ಮಾಡಿದ್ದಾರೆ ಅಂತ ಬಿಂಬಿಸುವ ದೃಷ್ಟಿಕೋನವೇ ದೊಡ್ಡ ಕಳಪೆ. ಅದಕ್ಕಿಂತಲೂ ಮುಂಚೆ ದಿವ್ಯಾ, ರಾಕೇಶ್, ಅರುಣ್ ಸಾಗರ್ ಟೈಮ್ ಮ್ಯಾನೇಜ್‌ಮೆಂಟ್ ಮಾಡದೆ ಬಿಗ್ ಬಾಸ್ ನಿಯಮವನ್ನ ಉಲ್ಲಂಘಿಸಿದ್ದರು. ಅದನ್ನ ಪ್ರಸ್ತಾಪ ಮಾಡದೆ ಕೇವಲ ಪರ್ಸನಲ್ ಆಗಿ ಅಟ್ಯಾಕ್ ಮಾಡುತ್ತಾರೆ ಅಮೂಲ್ಯ. ನಮ್ಮ ಮನಸ್ಥಿತಿಯನ್ನ ಎತ್ತಿ ಹಿಡಿಯೋದು ಅವರ ಜನ್ಮಸಿದ್ಧ ಹಕ್ಕು. ಪ್ರಶಾಂತ್ ಅಂದ್ರೆ ಕಳಪೆ ಎನ್ನುವ ಹಠಮಾರಿ ಧೋರಣೆಯನ್ನ ನಾವಿಲ್ಲಿ ಖಂಡಿಸಬೇಕು ಎಂದರು ಪ್ರಶಾಂತ್ ಸಂಬರ್ಗಿ ಕೊನೆಗೆ ಅತಿ ಹೆಚ್ಚು ಮತಗಳನ್ನ ಪಡೆದ ಅರುಣ್ ಸಾಗರ್ ಅತ್ಯುತ್ತಮ ಎನಿಸಿಕೊಂಡು ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಪಡೆದರು. ಇನ್ನೂ, ಕಳಪೆ ಪಟ್ಟ ಪಡೆದ ಪ್ರಶಾಂತ್ ಸಂಬರಗಿ ಜೈಲಿಗೆ ತೆರಳಿದರು. ಈ ಕಳಪೆ ವಿಚಾರವೇ ಇದೀಗ ಮನೆಯ ಕಲಹಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ರಾಜಣ್ಣ – ಗುರೂಜಿ ಜಟಾಪಟಿ: ಸಂಬರ್ಗಿ ಗಪ್‌ಚುಪ್

    ರೂಪೇಶ್ ರಾಜಣ್ಣ – ಗುರೂಜಿ ಜಟಾಪಟಿ: ಸಂಬರ್ಗಿ ಗಪ್‌ಚುಪ್

    ಬಿಗ್ ಬಾಸ್ ಮನೆಯ(Bigg Boss House) ಆಟ ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಈಗಾಗಲೇ 2 ತಿಂಗಳು ಪೂರೈಸಿರುವ ದೊಡ್ಮನೆಯ ಆಟದಲ್ಲಿ ಅಳಿವು ಉಳಿವಿನ ಪ್ರಶ್ನೆ ಶುರುವಾಗಿದೆ. ಯಾರು ಯಾರನ್ನು ಉಳಿಸಿದ್ದು ಎಂದು ವಾದ ಪ್ರತಿವಾದ ನಡೆದಿದೆ. ಈ ವೇಳೆ ಗುರೂಜಿ ಮೇಲೆ ರೂಪೇಶ್ ರಾಜಣ್ಣ (Roopesh Rajanna) ರಾಂಗ್ ಆಗಿದ್ದಾರೆ.

    ವಿನೋದ್ ಗೊಬ್ಬರಗಾಲ (Vinod Gobbaragala) ಎಲಿಮಿನೇಷನ್ ನಂತರ ಈ ವಾರ ಮತ್ತೊಬ್ಬ ಸ್ಪರ್ಧಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗಲಿದೆ. ಈ ಬೆನ್ನಲ್ಲೇ ಯಾರಿಂದ ಯಾರು ಉಳಿದರು ಎಂಬ ಈ ಚರ್ಚೆಯೇ ಮನೆಯ ಜಗಳಕ್ಕೆ ಕಾರಣವಾಗಿದೆ. ರೂಪೇಶ್ ರಾಜಣ್ಣಗೆ ಉಳುವಿಗೆ ಯಾರು ಕಾರಣ ಎಂದು ಗುರೂಜಿ ಚರ್ಚೆ ಮಾಡಿದ್ದಾರೆ. ಈ ವೇಳೆ ನಿಮಗೆ ತಲೆಯಲ್ಲಿ ಕೂದಲು ಇಲ್ಲಾ ಅಂತಾ ಗೊತ್ತಿತ್ತು ಬುದ್ಧಿನು ಇಲ್ಲಾ ಎಂದು ಗುರೂಜಿ(Aryavardhan Guruji) ವಿರುದ್ಧ ರಾಜಣ್ಣ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟಿಯರಿಗೆ ಸೆಡ್ಡು ಹೊಡೆದು ತೆಲುಗಿನ 7 ಚಿತ್ರಗಳಿಗೆ ಸಹಿ ಹಾಕಿದ ಶ್ರೀಲೀಲಾ

    ರೂಪೇಶ್ ರಾಜಣ್ಣ ಉಳಿಯಲು ತಾನೇ ಕಾರಣ ಎಂಬ ಅರ್ಥದಲ್ಲಿ ಗುರೂಜಿ ರಾಜಣ್ಣಗೆ ಟಾಂಗ್ ಕೊಟ್ಟಿದ್ದಾರೆ. ಒಬ್ಬರಿಂದ ಒಬ್ಬರು ಉಳಿದರು ಎಂಬ ಮಾತನ್ನ ನೀವು ಮೊದಲು ವಾಪಸ್ ತೆಗೆದುಕೊಳ್ಳಿ ಎಂದು ರಾಜಣ್ಣ, ಗುರೂಜಿಗೆ ಹೇಳಿದ್ದಾರೆ. ನೀವು ಹೇಳಿದನ್ನ ನಾನ್ಯಾಕೆ ಒಪ್ಪಿಕೊಳ್ಳಬೇಕು. ತಲೆಯಲ್ಲಿ ಗೊಬ್ಬರ ಇದ್ದರೆ ಯೋಚನೆ ಮಾಡಿ ಎಂದು ಗುರೂಜಿ ಟಾಂಗ್ ಕೊಟ್ಟಿದ್ದಾರೆ. ಇಲ್ಲಿ 12 ಜನ ಸಮಾನರು ಯಾರಿಂದ ಯಾರು ಉಳಿದಿಲ್ಲ ಎಂದು ರಾಜಣ್ಣ ವಾದ ಮಾಡಿದ್ದಾರೆ. ನಿಮ್ಮ ತಲೆಯಲ್ಲಿ ಕೂದಲು ಇಲ್ಲಾ ಅಂದುಕೊಂಡಿದ್ವಿ, ಈಗ ಬುದ್ಧಿನೂ ಇಲ್ಲಾ ಅಂತಾ ಗೊತ್ತಾಯ್ತು ಎಂದು ಗುರೂಜಿಗೆ ರಾಜಣ್ಣ ಟಾಂಗ್ ಕೊಟ್ಟಿದ್ದಾರೆ.

    ಸ್ಪರ್ಧಿಗಳಿಗೆ ತನ್ನ ಮನೆಯವರು ಬಂದು ಸರ್ಪ್ರೈಸ್ ಕೊಟ್ಟಿರುವ ಬೆನ್ನಲ್ಲೇ ರಾಜಣ್ಣ, ಗುರೂಜಿ ಅವರ ಅಳಿವು ಉಳಿವಿನ ವಾದ ವಿವಾದ ಮನೆಮಂದಿಗೆ ತಲೆನೋವು ತಂದಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಬರ್ಗಿ ಖತರ್ನಾಕ್ ಆಟಕ್ಕೆ ಶಿಕ್ಷೆ ಕೊಟ್ಟ ಮನೆಮಂದಿ

    ಸಂಬರ್ಗಿ ಖತರ್ನಾಕ್ ಆಟಕ್ಕೆ ಶಿಕ್ಷೆ ಕೊಟ್ಟ ಮನೆಮಂದಿ

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಸದಾ ಒಂದಲ್ಲಾ ಒಂದು ವಿಷಯಕ್ಕೆ ಪ್ರಶಾಂತ್ ಸಂಬರ್ಗಿ ಕಿರಿಕ್ ಮಾಡುತ್ತಲೇ ಇರುತ್ತಾರೆ. ಈ ವಾರ ರೂಪೇಶ್ ಶೆಟ್ಟಿ (Roopesh Shetty) ಶರ್ಟ್ ಹರಿದು, ಮನೆಯಲ್ಲಿ ರಣರಂಗವೇ ಮಾಡಿದ್ದರು. ಈ ಎಲ್ಲದರ ಪರಿಣಾಮ ಸಂಬರ್ಗಿಗೆ ಮನೆಮಂದಿ ಶಿಕ್ಷೆ ನೀಡಿದ್ದಾರೆ.

    ದೊಡ್ಮನೆಯ ಸೀಸನ್ 8ರಲ್ಲಿ ಕೂಡ ಪ್ರಶಾಂತ್ ಸಂಬರ್ಗಿ ಸ್ಪರ್ಧಿಯಾಗಿದ್ದರು. ಕಳೆದ ಸೀಸನ್‌ನಿಂದಲೂ ಅಗ್ರೇಸಿವ್ ಆಗಿ ಆಡುತ್ತಲೇ ಬಂದಿದ್ದರು. ಈಗ ಈಗೀನ ಬಿಗ್ ಬಾಸ್‌ನಲ್ಲಿಯೂ ಕೂಡ ಅದೇ ಚಾಳಿ ಮುಂದುವರೆಸಿದ್ದಾರೆ. ದೊಡ್ಮನೆ ಆಟ 55 ದಿನಗಳನ್ನ ಪೂರೈಸಿದೆ. ಬಂದ ದಿನದಿಂದಲೂ ಕಿರಿಕ್ ಮೇಲೆ ಕಿರಿಕ್ ಮಾಡುತ್ತಲೇ ಬಂದಿದ್ದಾರೆ. ಕಳೆದ ಬಾರಿ ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದು ಇದೆ. ಬಳಿಕ ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದು ಮನೆಯಲ್ಲಿ ರಣರಂಗವೇ ಸೃಷ್ಟಿಯಾಗಿತ್ತು. ಈಗ ಸಂಬರ್ಗಿ ಆಟಕ್ಕೆ ಮನೆಮಂದಿ ಕಳಪೆ ಎಂದಿದ್ದಾರೆ. ಇದನ್ನೂ ಓದಿ:ನಾವು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತೇವೆ: ಪ್ರಿಯಾಂಕಾ ಚೋಪ್ರಾ

    ಎಲ್ಲೂ ಕೂಡ ಸಂಬರ್ಗಿ ಮಾಸ್ಟರ್ ಪ್ಲ್ಯಾನ್ ವರ್ಕ್‌ ಔಟ್‌ ಆಗತ್ತಾಯಿಲ್ಲ. ಕಿರಿಕ್ ಮಾಡಿದ್ರೆನೇ ಇಲ್ಲಿ ಬದಕಲು ಸಾಧ್ಯ ಎಂಬಂತೆ ಆಗಾಗ ಮನೆಯ ವಾತಾವರಣವನ್ನ ವಿಕೋಪಕ್ಕೆ ತಂದಿದ್ದಾರೆ. ಈ ಎಲ್ಲದರ ಪರಿಣಾಮ ಪ್ರಶಾಂತ್‌ಗೆ ಕಳಪೆ ಹಣೆಪಟ್ಟಿ ಕೊಟ್ಟು ಜೈಲಿಗೆ ಓಡಿಸಿದ್ದಾರೆ. ಮಾಡಿದ ತಪ್ಪಿಗೆ ಶಿಕ್ಷೆ ಕೊಟ್ರು ಕೂಡ ಅದನ್ನ ಒಪ್ಪಿಕೊಳ್ಳದೇ ಜೈಲಿನಲ್ಲಿಯೂ ಸಂಬರ್ಗಿ ಜಗಳ ಆಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್‌ಗೆ ಆಪರೇಷನ್

    ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್‌ಗೆ ಆಪರೇಷನ್

    ಬಿಗ್ ಬಾಸ್ ಮನೆಯಲ್ಲಿ(Bigg Boss)  ಸದಾ ಒಂದಲ್ಲಾ ಒಂದು ವಿಚಾರಕ್ಕೆ ಕಿತ್ತಾಟ ಆಗುತ್ತಲೇ ಇರುತ್ತದೆ. ಗೊಂಬೆ ತಯಾರಿಸುವ ಟಾಸ್ಕ್‌ನಲ್ಲಿ ಅರುಣ್ ಸಾಗರ್ ಕೈ ಬೆರಳಿಗೆ ಪೆಟ್ಟಾಗಿದೆ. ಇದರ ಪರಿಣಾಮ, ಆಪರೇಷನ್ ಕೂಡ ಮಾಡಲಾಗಿದೆ.

    ದೊಡ್ಮನೆ ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ಟ್ವಿಸ್ಟ್ ಮತ್ತು ತಿರುವುಗಳೊಂದಿಗೆ ಮುನ್ನಗ್ಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇದೀಗ ಟಾಸ್ಕ್ ವೇಳೆ ಅರುಣ್ ಸಾಗರ್‌ಗೆ ಪೆಟ್ಟಾಗಿದೆ. ಟಾಯ್ ಫ್ಯಾಕ್ಟರಿ ಎಂಬ ಟಾಸ್ಕ್ ಕೊಟ್ಟಿದ್ದರು ಬಿಗ್ ಬಾಸ್. ಈ ಟಾಸ್ಕ್‌ನಲ್ಲಿ ಗೊಂಬೆಗಳನ್ನ ತಯಾರಿಸಲು ಕನ್ವೇಯರ್ ಬೆಲ್ಟ್‌ನಿಂದ ಸಾಮಾಗ್ರಿಗಳನ್ನ ಪಡೆಯಬೇಕಿತ್ತು.

    ಹೀಗಾಗಿ, ಸಾಮಾಗ್ರಿಗಳನ್ನ ಪಡೆಯಲು ಎರಡೂ ತಂಡಗಳು ಜಿದ್ದಾಜಿದ್ದಿಗೆ ಬಿದ್ದವು. ಸಾಮಾಗ್ರಿಗಳಿಗಾಗಿ ಎರಡೂ ತಂಡದ ಸದಸ್ಯರ ಮಧ್ಯೆ ಕಿತ್ತಾಟ, ನೂಕಾಟ, ತಳ್ಳಾಟ್ಟ ನಡೆಯಿತು. ಒಮ್ಮೆ ಪ್ರಶಾಂತ್ ಸಂಬರ್ಗಿ ಅವರಿಂದಾಗಿ ಅರುಣ್ ಸಾಗರ್ ಕೆಳಗೆ ಬಿದ್ದರು. ಮತ್ತೊಮ್ಮೆ ಅವರ ಕೈಗೆ ಪೆಟ್ಟು ಬಿತ್ತು. ಬಲಗೈ ಕಿರುಬೆರಳಿಗೆ ಪೆಟ್ಟು ಬಿದ್ದಿದ್ದ ಕಾರಣ ಅರುಣ್ ಸಾಗರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ:ವಿಜಯ್ ದೇವರಕೊಂಡ ನಂತರ ಅವರ ತಾಯಿಯೂ ಅಂಗಾಂಗ ದಾನಕ್ಕೆ ನೋಂದಣಿ

    ಚಿಕಿತ್ಸೆ ಅವಶ್ಯವಿದ್ದ ಕಾರಣ ಒಂದು ದಿನ ಆಸ್ಪತ್ರೆಯಲ್ಲೇ ಅರುಣ್ ಸಾಗರ್ ಇದ್ದರು. ಪರಿಣಾಮ, ಕೊನೆಯ ದಿನದ ಟಾಸ್ಕ್‌ನಲ್ಲಿ ಅವರು ಭಾಗವಹಿಸಲಿಲ್ಲ. ಸದ್ಯ ಬಿಗ್ ಬಾಸ್ ಮನೆಗೆ ಅರುಣ್ ಸಾಗರ್ ವಾಪಸ್ ಆಗಿದ್ದಾರೆ. ತಮ್ಮ ಕೈಗೆ ಆಪರೇಷನ್ ಮಾಡಲಾಗಿದೆ ಎಂದು ಅರುಣ್ ಸಾಗರ್ ಮನೆಮಂದಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಟಾಸ್ಕ್‌ನಿಂದ ದೂರವಿದ್ದು, ದೊಡ್ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಮನೆ ರಣರಂಗ: ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದ ಪ್ರಶಾಂತ್ ಸಂಬರ್ಗಿ

    ದೊಡ್ಮನೆ ರಣರಂಗ: ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ಮನೆ(Bigg Boss House) ಇದೀಗ ಹೊತ್ತಿ ಉರಿಯುತ್ತಿದೆ. ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ಟಾಸ್ಕ್‌ವೊಂದರಲ್ಲಿ ರೂಪೇಶ್ ಶೆಟ್ಟಿ ಅವರ ಶರ್ಟ್‌ನ ಪ್ರಶಾಂತ್‌ ಸಂಬರ್ಗಿ ಕಿತ್ತೆಸಿದಿದ್ದಾರೆ. ಸಂಬರ್ಗಿ ವೈಲೆಂಟ್ ಆಟಕ್ಕೆ ಮನೆಮಂದಿ ಫುಲ್ ಗರಂ ಆಗಿದ್ದಾರೆ.

    ದಿನದಿಂದ ದಿನಕ್ಕೆ ಮನೆಯ ವಾತಾವರಣ ಹದಗೆಡುತ್ತಿದೆ. ಮಾಸ್ಟರ್ ಮೈಂಡ್ ಸಂಬರ್ಗಿಯ ಆಟ ಲಿಮಿಟ್ ಮೀರಿ ಅಡ್ಡ ದಾರಿಹಿಡಿಯುತ್ತಿದೆ. ಮನೆಮಂದಿಗೆ ಗೊಂಬೆ ತಯಾರಿಸುವ ಟಾಸ್ಕ್ ನೀಡಲಾಗಿತ್ತು. ಗೊಂಬೆ ತಯಾರಿಸಲು ಕಚ್ಚಾ ವಸ್ತುಗಳು ಬರುತ್ತವೆ. ಅದನ್ನು ಪಡೆಯಲು ಮನೆ ಮಂದಿ ಮಧ್ಯೆ ಜಗಳ ಏರ್ಪಟ್ಟಿದೆ. ಪ್ರಶಾಂತ್ ಸಂಬರ್ಗಿ(Prashnath Sambargi) ಎಲ್ಲರಿಂದಲೂ ವಸ್ತುಗಳನ್ನು ಕಿತ್ತುಕೊಂಡರು ಎನ್ನುವ ಆರೋಪವನ್ನು ಮಾಡಿದರು. ಇದಕ್ಕೆ ಅರುಣ್ ಸಾಗರ್(Arun Sagar) ಕೂಡ ಸಂಬರ್ಗಿ ವಿರುದ್ಧ ಕಿಡಿಕಾರಿದ್ದರು. ಇದನ್ನೂ ಓದಿ:‘ಕಾಂತಾರ’ ಸಿನಿಮಾಗೆ ಕೇರಳದಲ್ಲೂ ಹರಿದು ಬಂತು ಭಾರೀ ಕಲೆಕ್ಷನ್

    ಪ್ರಶಾಂತ್ ಸಂಬರ್ಗಿ ಅವರೇ ನೀವು ನಡೆದುಕೊಂಡ ರೀತಿ ಸರಿ ಇಲ್ಲ. ನಾನು ಈಗ ಸಂಬರ್ಗಿ ಆಡಿದ ರೀತಿಯೇ ಆಡುತ್ತೇನೆ ಎಂದು ಚಾಲೆಂಜ್ ಮಾಡಿದರು. ಅದೇ ರೀತಿ ನಡೆದುಕೊಂಡರು. ಅವರು ಕೂಡ ವೈಲೆಂಟ್ ಆಗಿ ಆಟ ಆಡಿದರು. ಬಳಿಕ ರೂಪೇಶ್ ಶೆಟ್ಟಿ ಅವರಿಂದ ಪ್ರಶಾಂತ್ ಸಂಬರ್ಗಿ ವಸ್ತುಗಳನ್ನು ಕದಿಯಲು ಪ್ರಯತ್ನಿಸಿದರು. ಈ ವೇಳೆ ಸಂಬರ್ಗಿ ಮತ್ತು ರೂಪೇಶ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ರೂಪೇಶ್ ಶೆಟ್ಟಿಯ(Roopesh Shetty) ಅಂಗಿಯನ್ನು ಹಿಡಿದು ಪ್ರಶಾಂತ್ ಸಂಬರ್ಗಿ ಎಳೆದಾಡಿದರು. ರೂಪೇಶ್ ಶೆಟ್ಟಿಯ ಅಂಗಿ ಕಳಚಿತು. ಮಾತಿನ ದಾಟಿ ಬದಲಾಗಿ ಕೈ ಕೈ ಮಿಲಾಯಿಸಿದ್ದಾರೆ.

    ಬಳಿಕ ನಾನೇನೂ ಮಾಡೇ ಇಲ್ಲಾ ಎಂದು ವಾದ ಮಾಡಿದ್ದಾರೆ. ಪ್ರಶಾಂತ್ ಸಂಬರ್ಗಿ ಆಟಕ್ಕೆ ಮನೆ ಮಂದಿ ಕೂಡ ರಾಂಗ್ ಆಗಿದ್ದಾರೆ. ತನ್ನ ತಂಡವನ್ನ ಗೆಲ್ಲಿಸುವ ನಿಟ್ಟಿನಲ್ಲಿ ಸಂಬರ್ಗಿ ಇಟ್ಟ ಹೆಜ್ಜೆ ಹಲವರ ಮನಸ್ತಾಪಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ

    ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ

    ಬಿಗ್ ಬಾಸ್ ಮನೆಯ(Bigg Boss House) ವಾತಾವರಣ ಇದೀಗ ಬದಲಾಗಿದೆ. ಮೊದಲಿದ್ದ ಶಾಂತ ವಾತಾವರಣ ಈಗಿಲ್ಲ. ಇದೀಗ ಬಿಗ್ ಬಾಸ್ ಎಂದಿನಂತೆ ಒಂದು ಟಾಸ್ಕ್‌ ಕೊಟ್ಟಿದ್ದಾರೆ. ಈ ವೇಳೆ ಗೊಬ್ಬರಗಾಲ ವಿರುದ್ಧ ಕೈ ಕೈ ಮಿಲಾಯಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮತ್ತೆ ಜಗಳ ಏರ್ಪಟ್ಟಿದೆ.

    50 ದಿನ ಪೂರೈಸಿರುವ ದೊಡ್ಮನೆಯ ಆಟ, ಈಗ ಸಾಕಷ್ಟು ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಈ ವಾರ ಕಾವ್ಯಶ್ರೀ ಕ್ಯಾಪ್ಟನ್ ಆಗಿದ್ದಾರೆ. ಕಾವ್ಯ ನೇತೃತ್ವದಲ್ಲಿ ಬಿಗ್ ಬಾಸ್ ಅಣತಿಯಂತೆ ಟಾಸ್ಕ್ಗಳು ನಡೆಯುತ್ತಿದೆ. ಇದೀಗ ಎಂದಿನಂತೆ ಬಿಗ್ ಬಾಸ್ ಖಡಕ್ ಟಾಸ್ಕ್‌ವೊಂದನ್ನ ಕೊಟ್ಟಿದ್ದಾರೆ. ಗೊಂಬೆ ತಯಾರಿಕೆಯ ಟಾಸ್ಕ್ ನೀಡಲಾಗಿದೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ಸಿನಿಮಾದ ಶೂಟಿಂಗ್ ಮುಕ್ತಾಯ

    ಈಗಾಗಲೇ ಎರಡು ತಂಡಗಳನ್ನಾಗಿ ಮಾಡಿ, ಟಾಸ್ಕ್ ಮಾಡಿಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗೊಬ್ಬರಗಾಲ ವಿರುದ್ಧ ಸಂಬರ್ಗಿ ಸಿಡಿದೆದ್ದಿದ್ದಾರೆ. ಟಾಸ್ಕ್ ನಂತರ ಕೆಲ ರೂಲ್ಸ್‌ ಮನೆಮಂದಿ ಬ್ರೇಕ್ ಮಾತನಾಡಿದ್ದಾರೆ. 2 ತಂಡದಿಂದ ಒಬ್ಬ ಸ್ಪರ್ಧಿಯನ್ನು ಹೊರ ಉಳಿಯುವಂತೆ ಬಿಗ್ ಬಾಸ್ ಆದೇಶ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡಿಗರ ಬಗ್ಗೆ ಮಾತನಾಡಿದ್ದ ಸಂಬರ್ಗಿ ವಿರುದ್ಧ ಸಿಡಿದೆದ್ದ ಕಿಚ್ಚ

    ಕನ್ನಡಿಗರ ಬಗ್ಗೆ ಮಾತನಾಡಿದ್ದ ಸಂಬರ್ಗಿ ವಿರುದ್ಧ ಸಿಡಿದೆದ್ದ ಕಿಚ್ಚ

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ನಲ್ಲಿ(Bigg Boss House) ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ (Roopesh Rajanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಜಗಳ ಆಡುತ್ತಲೇ ಇರುತ್ತಾರೆ. ಈ ಕಿರಿಕ್ ದೊಡ್ಮನೆಯಲ್ಲಿ ತಾರಕಕ್ಕೇರಿದ್ದು ಇದೆ. ಈ ಮಾತಿನ ಚಕಮಕಿಯಲ್ಲಿ ಕನ್ನಡ ಪರ ಹೋರಾಟಗಾರರಿಗೆ ಸಂಬರ್ಗಿ ಅವಮಾನ ಮಾಡಿದ್ದಾರೆ. ಈ ವಿಷ್ಯವಾಗಿ ಸಂಬರ್ಗಿಗೆ ಕಿಚ್ಚ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬಿಗ್ ಬಾಸ್‌ನಲ್ಲಿ ಕಿರಿಕ್ ಜೋಡಿ ಎಂದೇ ರೂಪೇಶ್ ರಾಜಣ್ಣ ಮತ್ತು ಸಂಬರ್ಗಿ ಹೈಲೈಟ್ ಆಗಿದ್ದಾರೆ. ರೂಪೇಶ್ ರಾಜಣ್ಣನ ಮೇಲೆ ಮಾತಿನ ಭರದಲ್ಲಿ ಪ್ರಶಾಂತ್ ಸಂಬರ್ಗಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ರಾಜಣ್ಣ ಅವರನ್ನು ರೋಲ್ ಕಾಲ್ ಗಿರಾಕಿ, ಈ ಮನೆಯಲ್ಲಿ ಕನ್ನಡ ಹೋರಾಟಗಾರನ್ನು ಬಾಯಿ ಮುಚ್ಚಿಸಿದ್ದೇನೆ ಎಂದು ಪ್ರಶಾಂತ್(Prashanth Sambargi) ರಾಂಗ್ ಆಗಿದ್ದರು. ಸಂಬರ್ಗಿ ಈ ನಡೆಗೆ ಬಿಗ್ ಬಾಸ್(Bigg Boss) ಮನೆಯಿಂದ ಹೊರ ಹಾಕಿ ಎಂದು ಕನ್ನಡ ಪರ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ:ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

    ಬಳಿಕ ಬಿಗ್ ಬಾಸ್ ಆದೇಶದ ನಂತರ ಕನ್ನಡ ಹೋರಾಟಗಾರರಿಗೆ ನೋವಾಗಿದ್ರೆ ಕ್ಷಮಿಸಿ. ನನ್ನ, ರಾಜಣ್ಣನ ಮೈಂಡ್ ಗೇಮ್ ಅದು. ನನ್ನ ಪ್ರೀತಿಯ ಕನ್ನಡಿಗರಿಗೆ ನೋವಾಗಿದ್ರೆ, ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ರಭಸದಿಂದ ಬಂದ ಮಾತು, ವಿರುದ್ಧವಾಗಿರಬಹುದು. ದಯವಿಟ್ಟು ಕನ್ನಡ ಹೋರಾಟಗಾರರೇ ಕ್ಷಮೆ ಇರಲಿ, ನನ್ನಿಂದ ತಪ್ಪಾಗಿದೆ ಎಂದು ಕಣ್ಣೀರು ಹಾಕಿದ್ದರು. ಇದಾದ ಬಳಿಕ ವಾರದ ಪಂಚಾಯಿತಿಯಲ್ಲಿ ಸಂಬರ್ಗಿಗೆ ಸುದೀಪ್(Kiccha sudeep) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮಾತನಾಡುವ ಬರದಲ್ಲಿ ಕನ್ನಡ ಪರ ಹೋರಾಟಗಾರಿಗೆ ಅವಮಾನ ಮಾಡಿದ್ದೀರಿ. ನೀವು, ರಾಜಣ್ಣ ವೈಯಕ್ತಿಕವಾಗಿ ಎಷ್ಟಾದ್ರೂ ಜಗಳ ಮಾಡಿ. ಅದು ತಪ್ಪಲ್ಲ. ಯಾರೂ ಬೇಡ ಅನ್ನಲ್ಲ. ಆದ್ರೆ ಮಿತಿ ಮೀರಿ ಅದು ಕನ್ನಡ ಪರ ಹೋರಾಡುವವರಿಗೆ ನೋವಾಗಿದೆ. ಕನ್ನಡಕ್ಕಾಗಿ ಹೋರಾಟ ಮಾಡೋ ಎಷ್ಟೋ ಪ್ರಮಾಣಿಕರು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ನಿಮ್ಮ ಮಾತು ಬೇಸರ ತಂದಿದೆ. ಇನ್ನೊಮ್ಮೆ ಆ ರೀತಿ ಮಾತನಾಡಬೇಡಿ ಎಂದು ವಾರ್ನಿಂಗ್ ಸುದೀಪ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡಪರ ಹೋರಾಟಗಾರರಿಗೆ ಕ್ಷಮೆ ಕೇಳಿ ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ

    ಕನ್ನಡಪರ ಹೋರಾಟಗಾರರಿಗೆ ಕ್ಷಮೆ ಕೇಳಿ ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ (Big Boss) ಮನೆಗೆ ಹೋದಾಗಿನಿಂದ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಒಂದೊಂದು ಸಾರಿ ಈ ಗುದ್ದಾಟ ಅತಿರೇಕಕ್ಕೂ ಹೋಗಿದ್ದು ಇದೆ. ಇಬ್ಬರೂ ಒಬ್ಬರಿಗೊಬ್ಬರಿಗೆ ಬಾಯಿಗೆ ಬಂದಂತೆ ಮಾತನಾಡುವುದನ್ನು ರೂಢಿ ಮಾಡಿಕೊಂಡಿದ್ದರು. ಹಾಗಾಗಿ ಮನೆಯಲ್ಲಿ ವೈಯಕ್ತಿಕವಾಗಿ ಜಗಳ ಆಗುತ್ತಲೇ ಇತ್ತು. ಈ ಜಗಳವು ಕನ್ನಡಪರ (Kannada) ಸಂಘಟನೆಯ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿತ್ತು.

    ರೂಪೇಶ್ ರಾಜಣ್ಣ (Rupesh Rajanna) ಅವರ ಕನ್ನಡಪರ ಹೋರಾಟಗಳನ್ನು ಟೀಕಿಸುತ್ತಲೇ ಬಂದಿದ್ದ ಪ್ರಶಾಂತ್ ಸಂಬರ್ಗಿ (Prashant Sambargi), ಏಕಾಏಕಿ ಇತರ ಹೋರಾಟಗಾರರನ್ನು ನಿಂದಿಸಿದ್ದರು. ಯಾವ ಹೋರಾಟಗಾರರನ್ನು ಹೇಗೆ ಹತ್ತಿಕ್ಕಬೇಕು, ನೋಡಿಕೊಳ್ಳಬೇಕು ಎಂದು ನನಗೆ ಗೊತ್ತಿದೆ. ಎಷ್ಟೋ ಜನರನ್ನು ಮೂಲೆಗುಂಪು ಮಾಡಿದ್ದೇನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಸಂಬರ್ಗಿ ಅವರ ಈ ಮಾತು ಕನ್ನಡಪರ ಹೋರಾಟಗಾರರನ್ನು ಕೆರಳಿಸಿತ್ತು. ಹೀಗಾಗಿಯೇ ಅನೇಕರು ವಾಹಿನಿಯ ಮುಂದೆ ಮತ್ತು ಬಿಗ್ ಬಾಸ್ ಶೂಟಿಂಗ್ ನಡೆಯುವ ಸ್ಥಳಕ್ಕೂ ಹೋಗಿ ಪ್ರತಿಭಟನೆ ಮಾಡಿದ್ದರು. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ಹೋರಾಟಗಾರರ ಪ್ರತಿಭಟನೆ ತಾರಕಕ್ಕೇ ಏರುತ್ತಿದ್ದಂತೆಯೇ ವಾಹಿನಿ ಕೂಡ ಎಚ್ಚೆತ್ತುಕೊಂಡಿದೆ. ಬಿಗ್ ಬಾಸ್ ಮನೆಯಿಂದ ಸಂಬರ್ಗಿಯನ್ನು ಆಚೆ ಕರೆತರದಿದ್ದರೆ, ಅವರನ್ನು ಹೇಗೆ ಆಚೆ ಕರೆದುಕೊಂಡು ಬರಬೇಕು ಎನ್ನುವುದು ನಮಗೂ ಗೊತ್ತಿದೆ ಎಂದು ಹೋರಾಟಗಾರರು ಎಚ್ಚರಿಕೆಯನ್ನು ಕೊಟ್ಟಿದ್ದರು. ಈ ವಿಷಯವನ್ನು ಬಿಗ್ ಬಾಸ್ ಮನೆಯಲ್ಲಿರುವ ಸಂಬರ್ಗಿಗೆ ಮುಟ್ಟಿಸಲಾಗಿದೆ. ಹೀಗಾಗಿಯೇ ಸಂಬರ್ಗಿ ಕ್ಷಮೆ ಕೇಳಿದ್ದಾರೆ.

    ಬಿಗ್ ಬಾಸ್ ಕನ್ಪೆಷನ್ ರೂಂಗೆ ಸಂಬರ್ಗಿ ಕರೆಯಿಸಿಕೊಂಡು ಅಸಲಿ ವಿಚಾರವನ್ನು ಮುಂದಿಟ್ಟರು. ಅದನ್ನು ಕೇಳುತ್ತಿದ್ದಂತೆಯೇ ನಾನು ಆ ರೀತಿಯಲ್ಲಿ ಮಾತನಾಡಿಲ್ಲ, ಯಾರಿಗೂ ಅವಮಾನಿಸಿಲ್ಲ. ಹಾಗೆನಿಸಿದ್ದರೆ ಕ್ಷಮಿಸಿ ಎಂದು ಕಣ್ಣಿರಿಡುತ್ತಾ ಹೇಳಿದರು. ಆಡಿದ ಅಷ್ಟೂ ಮಾತುಗಳನ್ನು ನಾನು ಹಿಂಪಡೆಯುತ್ತೇನೆ. ಯಾವುದೇ ಕಾರಣಕ್ಕೂ ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಬರ್ಗಿಯನ್ನು ಮನೆಗೆ ಕಳುಹಿಸಿ- ಕನ್ನಡಪರ ಹೋರಾಟಗಾರರ ಪಟ್ಟು

    ಸಂಬರ್ಗಿಯನ್ನು ಮನೆಗೆ ಕಳುಹಿಸಿ- ಕನ್ನಡಪರ ಹೋರಾಟಗಾರರ ಪಟ್ಟು

    ಬಿಗ್ ಬಾಸ್ ಮನೆಯ(Bigg Boss House) ಕಿಡಿ ಇದೀಗ ಮನೆಯ ಹೊರಗೂ ಹತ್ತಿಕೊಂಡಿದೆ. ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಜಗಳ ದೊಡ್ಡ ಮಟ್ಟ ಸ್ಪರೂಪ ಪಡೆದುಕೊಂಡಿದೆ. ರೂಪೇಶ್ ರಾಜಣ್ಣ ಜೊತೆ ಜಗಳ ಮಾಡುವಾಗ ಕನ್ನಡ ಪರ ಹೋರಾಟಗಾರರನ್ನ ಅವಹೇಳನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಸಂಬರ್ಗಿಯನ್ನು ಹೊರಗೆ ಕಳುಹಿಸಿ ಎಂದು ಕನ್ನಡ ಪರ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಸಹಜ ಆದರೆ ಹೊರಗಿನ ವ್ಯಕ್ತಿ, ಸಂಸ್ಥೆಯ ಬಗ್ಗೆ ಸ್ಪರ್ಧಿಗಳು ಆಕ್ಷೇಪಾರ್ಹವಾಗಿ ಮಾತನಾಡಿದಾಗ ಮನೆಯ ಆಚೆಗೂ ವಿವಾದದ ಕಿಡಿ ಹೊತ್ತಿಕೊಳ್ಳುತ್ತದೆ. ಕನ್ನಡಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ರಾಜಣ್ಣ ಅವರು ಈ ಬಾರಿಯ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಸಂಬರ್ಗಿ ಟಾರ್ಗೆಟ್ ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಯಾರೂ ಕಿರಿಕ್ ಮಾಡುತ್ತಿರಲಿಲ್ಲ. ಆದರೆ ಎಲ್ಲ ಕನ್ನಡಪರ ಹೋರಾಟಗಾರರ ಕುರಿತು ಮಾತನಾಡುವಾಗ ಸಂಬರ್ಗಿ ಅವಮಾನ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ.

    ಪ್ರಶಾಂತ್ ಸಂಬರ್ಗಿ(Prashanth Sambargi) ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಹೊರಗೆ ಕಳಿಸದೇ ಇದ್ದರೆ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಬಿಗ್ ಬಾಸ್ ಸಿಬ್ಬಂದಿ ಜೊತೆಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಾತನಾಡಿದ್ದಾರೆ. ಈ ಹೋರಾಟದ ಪರವಾಗಿ ಟಿ.ರಮೇಶಗೌಡ ರಾಜ್ಯಾಧ್ಯಕ್ಷರು ಕರಸೇ ಕೂಡ ಸಾಥ್ ನೀಡಿದ್ದಾರೆ. ಈ ಕುರಿತು ತಮ್ಮ ಖಾತೆಯಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಚಿಲ್ಲರೆ, ಮಾನಗೆಟ್ಟವನೇ ಎಂದು ರೂಪೇಶ್ ರಾಜಣ್ಣಗೆ ಸಂಬರ್ಗಿ ಕ್ಲಾಸ್

    ಸಂಬರಗಿ ವಿರುದ್ಧ ಸಿಡಿದೆದ್ದಿರುವ ಕನ್ನಡ ಪರ ಹೋರಾಟಗಾರರು ಬಿಗ್ ಬಾಸ್ ಮನೆಯಿರುವ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಮುಂದೆ ಜಮಾಯಿಸಿದ್ದಾರೆ. ಪ್ರಶಾಂತ್ ಸಂಬರಗಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. `ಬಿಗ್ ಬಾಸ್’ ಮನೆಯಿಂದ ಪ್ರಶಾಂತ್ ಸಂಬರಗಿ ಔಟ್ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿಲ್ಲರೆ, ಮಾನಗೆಟ್ಟವನೇ ಎಂದು ರೂಪೇಶ್ ರಾಜಣ್ಣಗೆ ಸಂಬರ್ಗಿ ಕ್ಲಾಸ್

    ಚಿಲ್ಲರೆ, ಮಾನಗೆಟ್ಟವನೇ ಎಂದು ರೂಪೇಶ್ ರಾಜಣ್ಣಗೆ ಸಂಬರ್ಗಿ ಕ್ಲಾಸ್

    ಬಿಗ್ ಬಾಸ್ ಮನೆ(Bigg Boss House) ಇದೀಗ ರಣರಂಗವಾಗಿದೆ. ದಿನದಿಂದ ದಿನಕ್ಕೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಮಧ್ಯೆ ಜಟಾಪಟಿ ಜೋರಾಗಿದೆ. ಎಲ್ಲಿಯವರೆಗೆ ಅಂದ್ರೆ ಒಬ್ಬರನೊಬ್ಬರು ಹೀಯಾಳಿಸುವ ಮಟ್ಟಕ್ಕೆ ಬಂದು ನಿಂತಿದೆ. ಇದೀಗ ನೀನೆಂತ ಮಾನಗೆಟ್ಟವನು ಎಂದು ಆಚೆ ನೋಡಿದ್ದೀನಿ ಎಂದು ರಾಜಣ್ಣ ವಿರುದ್ಧ ಸಂಬರ್ಗಿ(Prashanth Sambargi) ಕಿಡಿಕಾರಿದ್ದಾರೆ.

    ದೊಡ್ಮನೆಯಲ್ಲಿ ರೂಪೇಶ್ ರಾಜಣ್ಣ(Roopesh Rajanna) ಮತ್ತು ಸಂಬರ್ಗಿ ನಡುವಿನ ಜಗಳಕ್ಕೆ ಬ್ರೇಕ್ ಬೀಳುವ ಯಾವುದೇ ಸೂಚನೆ ಸಿಗದೇ ಮನೆಮಂದಿಯೇ ಕಂಗಲಾಗಿದ್ದಾರೆ. ಟಾಸ್ಕ್‌ವೊಂದರಲ್ಲಿ ಬಝರ್ ವಿಷ್ಯವಾಗಿ ಸಂಬರ್ಗಿಗೂ ಮುನ್ನ ನಾನೇ ಒತ್ತಿದ್ದು ಎಂದು ಶುರುವಾದ ಈ ಜಗಳ ಮಾರನೇ ದಿನಕ್ಕೂ ಮುಂದುವರೆದಿದೆ. ಕ್ಯಾಪ್ಟನ್ ಅನುಪಮಾ ಅವರಿಂದ ಮೋಸ ಆಗಿದೆ ಎಂದು ಸೂಟ್‌ಕೇಸ್ ಹಿಡಿದು ಹೊರಟ ರಾಜಣ್ಣ ವಿರುದ್ಧ ಸಂಬರ್ಗಿ ಗರಂ ಆಗಿದ್ದಾರೆ.

    ಬೇರೆಯವರ ಬಳಿ ನನ್ನನ್ನು ನೆಗೆಟಿವ್ ಆಗಿ ಬಿಂಬಿಸೋದನ್ನು ಬಿಡಿ. ಇದನ್ನು ಚಿಲ್ಲರೆ ಬುದ್ಧಿ ಅಂತ ಕರೆಯುತ್ತಾರೆ. ನಾನು ಮನೆಯಿಂದ ಹೋಗೋದು, ಬಿಡೋದು ನನ್ನ ಮತ್ತು ಬಿಗ್ ಬಾಸ್‌ಗೆ ಬಿಟ್ಟಿದ್ದು. ನನಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಿ, ನನ್ನ ವಿಚಾರವನ್ನು ನೀವು ಬೇರೆಯವರ ಬಳಿ ಮಾತನಾಡೋದು ಇಷ್ಟ ಇಲ್ಲ. ನೀವೆಂತ ಮಾನಗೆಟ್ಟವರು ಅಂತ ನನಗೆ ಗೊತ್ತಿದೆ. ನಿಮ್ಮ ವಿಚಾರವನ್ನು ನಾನು ಯಾರ ಬಳಿಯೂ ಮಾತನಾಡಿಲ್ಲ, ನೀವು ನನ್ನ ಬಗ್ಗೆ ಮಾತನಾಡಬೇಡಿ ಎಂದು ರಾಜಣ್ಣ ಅವರು ಸಂಬರ್ಗಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:‘ಹಾಸ್ಟೆಲ್ ಹುಡುಗರ’ ಜೊತೆಯಲ್ಲಿ ಮೋಹಕ ತಾರೆ ರಮ್ಯಾ: ಟೀಸರ್ ರಿಲೀಸ್

    ಹೋಗ್ತೀನಿ ಹೋಗ್ತೀನಿ ಅಂತಾ ಮಾತನಾಡುತ್ತೀರಾ, ನೀವು ಮನೆಯಿಂದ ಹೋಗಬೇಕಿತ್ತು. ಬೇಕು ಅಂದಾಗ ಬರ್ತಿನಿ, ಬೇಡ ಅಂದಾಗ ಹೋಗ್ತೀನಿ ಅನ್ನೋಕೆ ಇದು ಆಟ, ಮನೆಯಲ್ಲ. ನಾನು ಸಾವಿರ ಜನರ ಹತ್ರ ನಾನು ಮಾತನಾಡ್ತೀನಿ, ಅದು ನನ್ನ ಅಭಿಪ್ರಾಯ. ನೀನೆಂತ ಚಿಲ್ಲರೆ ಅಂತ ನಂಗೊತ್ತು. ನಿಮ್ಮ ಮಾನಗೆಟ್ಟ ಕೆಲಸವನ್ನು ನಾನು ಆಚೆ ನೋಡಿದ್ದೇನೆ ಎಂದು ಸಂಬರ್ಗಿ ರೂಪೇಶ್ ರಾಜಣ್ಣಗೆ ಟಾಂಗ್ ಕೊಟ್ಟಿದ್ದಾರೆ. ಒಟ್ನಲ್ಲಿ ಇವರಿಬ್ಬರ ಜಗಳ ನಿಲ್ಲಿಸಲು ಮನೆಮಂದಿ ಕೂಡ ಹರಸಾಹಸಪಡಬೇಕಾಯಿತು. ಇನ್ನೂ ದಿನಗಳಲ್ಲಿ ಇವರಿಬ್ಬರ ಜಗಳ ಯಾವ ಹಂತಕ್ಕೆ ಹೋಗುತ್ತೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]