Tag: ಪ್ರಶಾಂತ್ ರೆಡ್ಡಿ

  • ನಟ ಅನೀಶ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಅಭಿಷೇಕ್ ಶೆಟ್ಟಿ

    ನಟ ಅನೀಶ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಅಭಿಷೇಕ್ ಶೆಟ್ಟಿ

    ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ನಿರ್ದೇಶಕ ಅಭಿಷೇಕ್ ಶೆಟ್ಟಿ. ಗಜಾನನ ಅಂಡ್ ಗ್ಯಾಂಗ್ ನಂತರ ಸದ್ದಿಲ್ಲದೆ ಹೊಸ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದು ಅದರ ಲೇಟೆಸ್ಟ್ ಸುದ್ದಿ ಹೊರಬಿದ್ದಿದೆ.

    ‘ಅಕಿರಾ’, ‘ವಾಸು ನಾನ್ ಪಕ್ಕಾ ಕಮರ್ಶಿಯಲ್’, ಸಿನಿಮಾ ಖ್ಯಾತಿಯ ನಟ ಅನೀಶ್  ಮುಂದಿನ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ ಕೆಲಸ ನೋಡಿ ಇಂಪ್ರೆಸ್ ಆಗಿರುವ ಅನೀಶ್ ಅಭಿಷೇಕ್ ಶೆಟ್ಟಿ ಜೊತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಭಿಷೇಕ್ ಶೆಟ್ಟಿ ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ‘ಅಕಿರಾ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಅಭಿಷೇಕ್ ಶೆಟ್ಟಿ ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಅನೀಶ್ ಹೊಸ ಅವತಾರದಲ್ಲಿ ಕಾಣಸಿಗಲಿದ್ದಾರೆ. ಈವರೆಗೆ ಅನೀಶ್ ಮಾಡಿರುವ ಸಿನಿಮಾಗಳಿಗಿಂತ ಈ ಸಿನಿಮಾ ಖಂಡಿತ ಭಿನ್ನವಾಗಿರುತ್ತೆ. ಸದ್ಯ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳೋದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಸ್ತ್ ಮನರಂಜನೆ ಪಡೆಯಲು ಸುವರ್ಣಾವಕಾಶ!

    ಮಸ್ತ್ ಮನರಂಜನೆ ಪಡೆಯಲು ಸುವರ್ಣಾವಕಾಶ!

    ಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದ ಪ್ರತಿಭಾವಂತ ನಟ ರಿಷಿ. ಅದೊಂದೇ ಒಂದು ಚಿತ್ರದ ಪಾತ್ರ ಮತ್ತು ಅದರಲ್ಲಿ ನಟಿಸಿದ ರೀತಿಯಿಂದಲೇ ಆ ನಂತರದಲ್ಲಿ ಓರ್ವ ನಟನಾಗಿ ಸುವರ್ಣಾವಕಾಶಗಳನ್ನೇ ಪಡೆದುಕೊಳ್ಳುತ್ತಾ ಸಾಗಿ ಬಂದಿರುವ ಅವರೀಗ ಸಾರ್ವಜನಿಕರಿಗೆ ಸುವರ್ಣಾವಕಾಶ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಮುಹೂರ್ತ ಕಂಡ ದಿನದಿಂದಲೇ ಪರಿಚಿತವಾದ, ವಿಶೇಷವಾದ ಈ ಟೈಟಲ್ಲಿನ ಕಾರಣದಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.

    ಇದು ಅನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಇದನ್ನು ನಿರ್ಮಾಣ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ವರ್ಗಗಳಿಗೆ ಸೀಮಿತವಾದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲು ಏದುಸಿರು ಬಿಡಬೇಕಾಗುತ್ತದೆ. ಪ್ರೇಕ್ಷಕರು ಯಾವ ಕಾರಣಕ್ಕಾಗಿ ಸಿನಿಮಾ ನೋಡಲು ಬರುತ್ತಾರೆಂಬ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಇಟ್ಟುಕೊಂಡು ಎಲ್ಲ ವರ್ಗದವರಿಗೂ ಸಲ್ಲುವಂತೆ ನಿರ್ಮಾಣಗೊಂಡ ಚಿತ್ರಗಳ ಪಾಲಿಗೆ ಗೆಲುವೆಂಬುದು ಸಲೀಸಾಗುತ್ತದೆ. ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವೂ ಸಹ ಅಂಥಾದ್ದೇ ಬಗೆಯಲ್ಲಿ ರೂಪುಗೊಂಡಿದೆ.

    ಪ್ರತೀ ಪ್ರೇಕ್ಷಕರ ಅಭಿರುಚಿಗಳು ಏನೇ ಇದ್ದರೂ ಅವರೆಲ್ಲರ ಪ್ರಧಾನ ಆಸಕ್ತಿ ಮನೋರಂಜನೆಯೇ ಆಗಿರುತ್ತದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಚಿತ್ರದಲ್ಲಿ ಭರಪೂರವಾದ ಮನೋರಂಜನಾತ್ಮಕ ಅಂಶಗಳಿವೆ. ಇಲ್ಲಿ ಬಹುತೇಕ ಭಾಗವನ್ನು ಕಾಮಿಡಿ ಕಚಗುಳಿ ಇಡುವಂತೆ ರೂಪಿಸಲಾಗಿದೆಯಂತೆ. ಯಾವುದೇ ಪಾತ್ರಗಳಿಗಾದರೂ ಒಗ್ಗಿಕೊಳ್ಳುವ ಛಾತಿಯ ರಿಷಿ ಇಲ್ಲಿ ನಾನಾ ಶೇಡುಗಳ ಪಾತ್ರದ ಮೂಲಕ ಪ್ರೇಕ್ಷಕರನ್ನು ಮೋಡಿಗೀಡು ಮಾಡಲಿದ್ದಾರೆ. ಧನ್ಯಾ ಬಾಲಕೃಷ್ಣ ಕೂಡಾ ನಾಯಕಿಯಾಗಿ ಅಂಥಾದ್ದೇ ವಿಶೇಷತೆ ಹೊಂದಿರುವ ಪಾತ್ರದಲ್ಲಿ ನಟಿಸಿದ್ದಾರಂತೆ. ದತ್ತಣ್ಣ, ರಂಗಾಯಣ ರಘು, ಮಿತ್ರಾ ಮುಂತಾದವರು ಇಷ್ಟೇ ವಿಶೇಷವಾದ ಪಾತ್ರಗಳಲ್ಲಿ ನೋಡುಗರನ್ನು ತಾಕಲು ತಯಾರಾಗಿದ್ದಾರೆ.

  • ಈ ವಾರ ವಿಶಿಷ್ಟ ಪಾತ್ರಗಳನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ!

    ಈ ವಾರ ವಿಶಿಷ್ಟ ಪಾತ್ರಗಳನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ!

    ನ್ನಡ ಚಿತ್ರರಣಂಗದಲ್ಲೀಗ ಯಾವ ಸಿನಿಮಾ ರೂಪುಗೊಂಡರೂ ಅದರ ಮೂಲ ಮಂತ್ರ ಹೊಸತನವೇ ಆಗಿರುತ್ತದೆಯೆಂಬಂಥಾ ವಾತಾವರಣವಿದೆ. ಶೀರ್ಷಿಕೆಯಲ್ಲಿಯೇ ಆರಂಭಿಕವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡುವಂಥಾ ಪೈಪೋಟಿಯೂ ಚಾಲ್ತಿಯಲ್ಲಿದೆ. ಇದೇ ಹಾದಿಯಲ್ಲಿ ಹೊಸ ಬಗೆಯ ನಿರೂಪಣೆ, ತೀರಾ ಹೊಸತಾದ ಕಥೆಯೊಂದಿಗೆ ಈ ವಾರ ತೆರೆಗಾಣಲು ರೆಡಿಯಾಗಿರುವ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಅನೂಪ್ ರಾಮಸ್ವಾಮಿ ನಿರ್ದೇಶನದ ಈ ಸಿನಿಮಾ ಅದೆಷ್ಟು ಸೊಗಸಾಗಿ ಮೂಡಿ ಬಂದಿದೆಯೆಂಬ ವಿಚಾರ ಈಗಾಗಲೇ ಟ್ರೇಲರ್‌ನೊಂದಿಗೆ ಅನಾವರಣವಾಗಿದೆ. ಅದರಲ್ಲಿ ಈ ಸಿನಿಮಾದಲ್ಲಿರೋ ಪಾತ್ರಗಳ ಪರಿಚಯವಾಗಿದ್ದರಿಂದಲೇ ಪ್ರೇಕ್ಷಕರು ಮತ್ತಷ್ಟು ತೀವ್ರವಾದ ಕುತೂಹಲದೊಂದಿಗೆ ಈ ಚಿತ್ರ ತೆರೆಗಾಣೋದನ್ನು ಎದುರು ನೋಡುವಂತಾಗಿದೆ.

    ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಬಲು ಮಹತ್ವಾಕಾಂಕ್ಷೆಯಿಂದ ನಿರ್ಮಾಣ ಮಾಡಿರುವ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ನಿರ್ದೇಶಕ ಅನೂಪ್ ರಾಮಸ್ವಾಮಿ ಇಲ್ಲಿ ಪ್ರತಿಯೊಂದು ಪಾತ್ರಗಳನ್ನೂ ಕೂಡಾ ಪ್ರೇಕ್ಷಕರು ಸಿನಿಮಾ ಮಂದಿರಗಳಿದ ಹೊರ ಬಂದಾದ ಮೇಲು ಮನಸಲ್ಲೇ ಕೂತು ಕಾಡುವಂತೆ ರೂಪಿಸಿದ್ದಾರಂತೆ. ನಾಯಕ ರಿಷಿಯಂತೂ ಈವರೆಗಿನ ಎಲ್ಲ ಪಾತ್ರಗಳಿಗಿಂತಲೂ ಬೇರೆಯದ್ದೇ ಸ್ವರೂಪದ ಪಾತ್ರದ ಮೂಲಕ ಪ್ರೇಕ್ಷಕರನ್ನು ತಲುಪಿಕೊಳ್ಳಲಿದ್ದಾರೆ. ನಾಯಕಿ ಧನ್ಯಾ ಪಾತ್ರವೂ ಅದೇ ಹಾದಿಯಲ್ಲಿದೆ. ಇತರೆ ಪಾತ್ರಗಳೂ ಕೂಡಾ ಅಂಥಾದ್ದೇ ಗುಣ ಲಕ್ಷಣಗಳನ್ನು ಹೊಂದಿವೆಯಂತೆ.

    ಈ ಚಿತ್ರದಲ್ಲಿ ರಿಷಿ ಮತ್ತು ಧನ್ಯಾ ಬಾಲಕೃಷ್ಣಗೆ ಹಿರಿಯ ನಟ ದತ್ತಣ್ಣ, ರಂಗಾಯಣ ರಘು ಮತ್ತು ಮಿತ್ರಾ ಮುಖ್ಯವಾದ ಪಾತ್ರಗಳ ಮೂಲಕ ಸಾಥ್ ನೀಡಿದ್ದಾರೆ. ಅವರ ಪಾತ್ರಗಳ ಸ್ಪಷ್ಟ ಚಹರೆಗಳನ್ನು ಟ್ರೇಲರ್‍ನಲ್ಲಿ ಕಾಣಿಸಿರುವ ಚಿತ್ರತಂಡ ಅವುಗಳ ಮೂಲಕವೇ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಮೂಡಿಕೊಳ್ಳುವಂತೆ ಮಾಡಿದ್ದಾರೆ. ಈ ಮೂವರೂ ನಟರನ್ನು ಪ್ರೇಕ್ಷಕರು ಇದುವರೆಗೂ ಹತ್ತಾರು ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈ ಹಿಂದೆ ಎಲ್ಲಿಯೂ ನಿರ್ವಹಿಸದಂಥಾ ಪಾತ್ರಗಳು ಅವರಿಗಾಗಿ ಸೃಷ್ಟಿಯಾಗಿವೆಯಂತೆ. ದತ್ತಣ್ಣನ ಪಾತ್ರವಂತೂ ನಗಿಸುತ್ತಲೇ ಪ್ರೇಕ್ಷಕರ ಕಣ್ಣಾಲಿಗಳು ತುಂಬಿ ಬರುವಂತೆಯೂ ಮಾಡಲಿವೆಯಂತೆ. ಇದೆಲ್ಲದರ ಅಸಲಿ ಮೋದ ಈ ವಾರವೇ ನಿಮ್ಮೆದುರು ಅನಾವರಣಗೊಳ್ಳಲಿದೆ.