Tag: ಪ್ರಶಾಂತ್ ರಾಜೇಶ್

  • ನೀನಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ- ಕ್ರಿಕೆಟರ್ ನಿಧನಕ್ಕೆ ಅಶ್ವಿನ್ ಸಂತಾಪ

    ನೀನಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ- ಕ್ರಿಕೆಟರ್ ನಿಧನಕ್ಕೆ ಅಶ್ವಿನ್ ಸಂತಾಪ

    ಚೆನ್ನೈ: ತಮಿಳುನಾಡು ಕ್ರಿಕೆಟಿಗ, ಸ್ಪಿನ್ನರ್ ಪ್ರಶಾಂತ್ ರಾಜೇಶ್ (35) ಹೃದಯಾಘಾತದಿಂದ ಸೋಮವಾರ ಸಾವನ್ನಪ್ಪಿದ್ದಾರೆ. ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ ರಾಜೇಶ್ ಅತ್ಯುತ್ತಮ ಪ್ರದರ್ಶನ ನೀಡಿ ಗಮನಸೆಳೆದಿದ್ದರು.

    ರಾಜೇಶ್ ಅವರ ಅಕಾಲಿಕ ಸಾವಿಗೆ ತಮಿಳುನಾಡು ಕ್ರಿಕೆಟ್ ಸಂಸ್ಥೆ ಸಂತಾಪ ಸೂಚಿಸಿದೆ. 2018ರಲ್ಲಿ ಟಿಎನ್‍ಪಿಎಲ್ ಲೀಗ್‍ನಲ್ಲಿ ಪಾದಾರ್ಪಣೆ ಮಾಡಿದ್ದ ಪ್ರಶಾಂತ್ ರಾಜೇಶ್, ಕೋವಾಯ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಸದ್ಯ ಐಪಿಎಲ್ ನಲ್ಲಿ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ನಟರಾಜನ್ ಅವರೊಂದಿಗೆ ಪ್ರಶಾಂತ್ ಆಡುತ್ತಿದ್ದರು. ಅಲ್ಲದೇ ತಮಿಳುನಾಡು ಅಂಡರ್ 19 ಸೇರಿದಂತೆ, ರಣಜಿ ತಂಡದಲ್ಲಿ ಆಡಿದ್ದರು.

    ರಾಜೇಶ್ ಅವರ ಸಾವಿಗೆ ದಿಗ್ಬ್ರಾಂತಿ ವ್ಯಕ್ತಪಡಿಸಿದ್ದು, ರಾಜೇಶ್ ನೀನು ಇಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಟಿಎನ್‍ಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಮುಗಿದ ಬಳಿಕ ನಿನ್ನೊಂದಿಗೆ ಮಾತನಾಡುತ್ತಿದ್ದ ಮಾತುಗಳು ಎಂದಿಗೂ ಮರೆಯಲು ಆಗುವುದಿಲ್ಲ ಎಂದು ಟ್ವೀಟ್ ಮಾಡಿ ಅಶ್ವಿನ್ ಸಂತಾಪ ಸೂಚಿಸಿದ್ದಾರೆ. ಐಪಿಎಲ್ 2020ರ ಆವೃತ್ತಿಯ ಭಾಗವಾಗಿ ಅಶ್ವಿನ್, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ.